ಈಗ್ಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾವು ವಾಸ್ತುಶಾಸ್ತ್ರದ ಹೆಸರನ್ನು ಕೇಳಿರಲಿಲ್ಲವಾದರೂ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ಕಟ್ಟಿಸುವುದು ಸಾಮಾನ್ಯವಾಗಿದ್ದಿತು. ೧೯೯೦ ರ ನಂತರ ಧುತ್ತೆಂದು ಎಲ್ಲಿಂದಲೋ ವಾಸ್ತು ‘ಪ್ರಾಚೀನ ಭಾರತೀಯರ ನಿರ್ಮಾಣ ವಿಜ್ಞಾನ’ ಎಂಬ ಹೆಸರಿನಲ್ಲಿ ಅಡಿ ಇಟ್ಟಿತು. ಹಲವಾರು ನೂರು ವರ್ಷಗಳ ಹಿಂದೆಯೇ ನಾವು ಈ ವಿದ್ಯೆಯನ್ನು ಕೈಬಿಟ್ಟು ಮರೆತಿದ್ದೆವು. ಆದರೂ ಜಗತ್ತಿನ ಇತರ ಜನರಂತೆ ಕಾಲಕ್ಕನುಗುಣವಾಗಿ ಮುಂದುವರೆದೆವು. ವಾಸ್ತುಶಾಸ್ತ್ರವನ್ನು ನಾವು ತ್ಯಜಿಸಿದ ಕಾಲದಲ್ಲೇ ಜಾಗತಿಕ ಮನ್ನಣೆ ಗಳಿಸಿ ದೇಶ , ಭಾಷೆ , ಧರ್ಮಗಳ ಹಂಗಿಲ್ಲದೆ ಬೆಳೆಯತೊಡಗಿದ ವಿಜ್ಞಾನದ ಯಾತ್ರೆಯಲ್ಲಿ ಭಾಗಿಗಳಾದೆವು. ಇದರಿಂದ ನಮಗೆ ವ್ಯಕ್ತಿ ಮತ್ತು ಸಮಾಜ ಎರಡರ ದೃಷ್ಟಿಯಲ್ಲಿ ಒಳ್ಳೆಯದೇ ಆಯಿತು.
ಈಗಲೂ ವಾಸ್ತುಶಾಸ್ತ್ರದ ಹಂಗಿಲ್ಲದೆ ನಾವು ಮುಂದುವರೆಯುತ್ತಿದ್ದೇವೆ. ಆದರೆ ಇತ್ತೀಚೆಗೆ ವಾಸ್ತುಶಾಸ್ತ್ರವನ್ನು ನಮ್ಮ ಮಹಾನ್ ಪರಂಪರೆ , ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬೆಳೆದುಬಂದ ನಿರ್ಮಾಣ ತಂತ್ರಜ್ಞಾನ, ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕಾಗಿ ಸಮೂಹ ಮಾಧ್ಯಮ , ಅಂತರ್ಜಾಲ ಸೇರಿದಂತೆ ವಿಜ್ಞಾನದ ಎಲ್ಲ ಸವಲತ್ತುಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ವಾಸ್ತುಶಾಸ್ತ್ರ ಸರ್ವಾಂಗ ವೈಜ್ಞಾನಿಕ ಅದನ್ನು ಅಳವಡಿಸಿಕೊಳ್ಳುವ ಎಲ್ಲರಿಗೂ ಆರೋಗ್ಯ, ನೆಮ್ಮದಿ , ಸಮೃದ್ಧಿಯ ಫಲಗಳು ಲಭ್ಯ ಎಂದು ಘಂಟಾಘೋಷವಾಗಿ ಸಾರಲಾಗುತ್ತಿದೆ. ಇದಕ್ಕೆ ನಾವು ಊಹಿಸುವುದಕ್ಕಿಂತ ತ್ವರಿತ ಮತ್ತು ವ್ಯಾಪಕ ಪ್ರಚಾರ ,ಮನ್ನಣೆ ದಕ್ಕುತ್ತಿದೆ. ವೈಜ್ಞಾನಿಕವಾಗಿದೆಯೆಂದು ಸಾರಲಾಗುತ್ತಿರುವ ವಾಸ್ತುಶಾಸ್ತ್ರವನ್ನು ವಿಜ್ಞಾನ ಒಪ್ಪಿದ ಮಾರ್ಗಗಳಿಂದ ಪರಿಶೀಲಿಸಲು ಯಾವುದೇ ಅಡ್ಡಿ ಆತಂಕಗಳಿರಬಾರದು. ವಿಜ್ಞಾನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸತಾರ್ಕಿಕ ಆಧಾರದ ಮೇಲೆ ಪಂಚೇಂದ್ರಿಯಗಳ ಮೂಲಕ ದಕ್ಕಿದ ಜ್ಞಾನ ಮಾತ್ರ ನಿಜವೆಂದು ಭಾವಿಸುತ್ತದೆ. . ಇದೇ ಆಧಾರದ ಮೇಲೆ ವೀಕ್ಷಣೆ-ತನಿಖೆ-ಪ್ರಯೋಗ-ದತ್ತಾಂಶ ಸಂಗ್ರಹ-ವಾದ–ಪರಿಶೀಲನೆ-ಪರಿಷ್ಕರಣೆಗಳನ್ನು ಅಳವಡಿಸಿಕೊಳ್ಳುತ್ತ ವಿಜ್ಞಾನ ಇಂದು ಈ ಸ್ಥಿತಿಗೆ ಬಂದು ನಿಂತಿದೆ. ಈ ವಿಧಾನ ನಮಗೆ ಪ್ರಮಾಣೀಕೃತ ಸತ್ಯವನ್ನು ನೀಡಿದೆ.
ವಾಸ್ತುಶಾಸ್ತ್ರ ‘ನಿಸರ್ಗದ ವಿಜ್ಞಾನ’ ಎಂದು ಮೇಲಿಂದ ಮೇಲೆ ಕೊಚ್ಚಿಕೊಳ್ಳಲಾಗುತ್ತಿದೆ. ನಿಸರ್ಗದ ಘಟನೆಗಳನ್ನು ಅರ್ಥೈಸಿಕೊಳ್ಳಳು ಯತ್ನಿಸಿದ ಫಲವಾಗಿ ವಿಜ್ಞಾನ ಬೆಳೆದು ಬಂದಿರುವುದು ಸ್ವಯಂ ವೇದ್ಯ. ವಾಸ್ತುಶಾಸ್ತ್ರ ಪಂಚಭೂತಗಳನ್ನು ಆಧರಿಸಿದೆ . ಅವುಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಕೂಗಿದ ಮಾತ್ರಕ್ಕೆ ಅದು ವೈಜ್ಞಾನಿಕ ಎಂದು ಒಪ್ಪಲಾಗದು. ಅದು ವಿಜ್ಞಾನದ ಪರಿಶೀಲನೆಯ ಮೂಸೆಯಲ್ಲಿ ತಾಳಿ ಬಾಳುವುದೇ ಎನ್ನುವುದು ಮುಖ್ಯವಾಗುತ್ತದೆ. ವಿಜ್ಞಾನದ ವಿಧಾನದಿಂದ ಎಲ್ಲ ಪ್ರಗತಿ ಸಾಧ್ಯವಾಗಿರುವುದರಿಂದ ವಾಸ್ತುಶಾಸ್ತ್ರ ವಿಜ್ಞಾನ ಎಂದು ಹೇಳಲಾಗುತ್ತಿರುವುದರಿಂದ ಅದನ್ನು ಕೂಡ ಇದೇ ವಿಧಾನಗಳಿಂದ ಪರೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾರ್ಯ-ಕಾರಣಗಳನ್ನು ಬೆಸೆಯುವ ಸಂಬಂಧಗಳ ಸಾಧ್ಯತೆಯನ್ನು ಹುಡುಕಬೇಕು. ಈ ಮಾರ್ಗವನ್ನು ವಾಸ್ತುಶಾಸ್ತ್ರದ ಮೇಲೆ ಬಳಸದೆ ಅದು ವೈಜ್ಞಾನಿಕ ಎಂದು ಬೊಬ್ಬೆ ಹೊಡೆಯುವುದು ಅಸಂಬದ್ಧ , ಅಪ್ರಾಮಾಣಿಕತೆಯ ತುತ್ತ ತುದಿಯಾಗುತ್ತದೆ. ಇದನ್ನು ಒಪ್ಪದಿದ್ದರೆ ವಿಜ್ಞಾನ ನೀಡಿದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತ ವೈಜ್ಞಾನಿಕ ದೃಷ್ಟಿಕೊನವನ್ನು ಉದ್ದಟತನದಿಂದ ತಿರಸ್ಕರಿಸದಂತಾಗುತ್ತದೆ.
ವಾಸ್ತುಶಾಸ್ತ್ರವನ್ನು ಒಪ್ಪುವುದು ಬಿಡುವುದು ಒಬ್ಬರ ವೈಯುಕ್ತಿಕ ನಂಬಿಕೆ ಎಂದರೆ ಅದರ ಬಗ್ಗೆ ತಕರಾರನ್ನು ಎತ್ತುವುದು ಸ್ವಲ್ಪ ಕಷ್ಟ. ಇಲ್ಲಿ ವಿಚಾರಕ್ಕಿಂತಲೂ ವೈಯುಕ್ತಿಕತೆಗೆ ಹೆಚ್ಚು ಮನ್ನಣೆ ದಕ್ಕಿರುತ್ತದೆ. ಮಡೆ ಸ್ನಾನ , ಮಾಟ-ಮಂತ್ರಗಳು ಕೂಡಾ ಇದೇ ಬಗೆಯ ನಂಬಿಕೆಯ ವ್ಯಾಪ್ತಿಗೆ ಸೇರುತ್ತವೆ ವಾಸ್ತು ವೈಜ್ಞಾನಿಕ ಎಂದಾಕ್ಷಣ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಹಕ್ಕು ಪ್ರತಿಯೊಬ್ಬರಿಗೂ ತಾನಾಗಿಯೇ ದತ್ತವಾಗುತ್ತದೆ. ಇಂದು ಯಾರಿಂದಲೂ ವಿಜ್ಞಾನದ ವಿಶ್ವಾಸಾರ್ಹತೆ ಅಥವಾ ಪ್ರಭಾವಗಳನ್ನು ನಿರಾಕರಿಸಲು ಸಾದ್ಯವಿಲ್ಲ. , ವಿಜ್ಞಾನ ಯಾವಾಗಲೂ ಸಂಶಯಿಸುವವರಿಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಸದಾ ಸಿದ್ಧವಾಗಿರುತ್ತದೆ. ಇದೇ ನಿಕಷಕ್ಕೆ ವಾಸ್ತುಶಾಸ್ತ್ರ ಒಳಗಾಗಬೇಕು. ವಾಸ್ತುಶಾಸ್ತ್ರದಂತಹ ವಿಷಯಗಳಿಗೆ ವಿಜ್ಞಾನದ ಪರಿಶೀಲನೆಯ ಮಾರ್ಗವನ್ನು ಬಳಸುವಾಗ ಎಚ್ಚರದಿಂದಿರಬೇಕು. ವೇದ , ಉಪನಿಷತ್ತು ,ವಾಸ್ತುಶಾಸ್ತ್ರದಂತಹ ವಿಷಯಗಳ ಬಗ್ಗೆ ಅಪಾರ ನಂಬಿಕೆ ಇರುವವರು ಅದರ ಫಲಿತಾಂಶ ಸರಿ ಎಂದು ತೋರುವಂತೆ ದಾಖಲಿಸಬಹುದು. ವಾಸ್ತುವಿಗೆ ಅನುಗುಣವಾಗಿ ಮನೆಯನ್ನು ಮಾರ್ಪಡಿಸಿದ ನಂತರ ಒಳ್ಳೆಯದಾಯಿತೆಂದು ಹೇಳುವವರ ಸಾಮಾಜಿಕ ಹಿನ್ನೆಲೆ , ಜೀವಿಸುತ್ತಿರುವ ಪರಿಸರ , ಜೀವನ ವಿಧಾನ , ಪಾರಂಪರಿಕ ವಿಚಾರಗಳ ಬಗೆಗೆ ತಳೆಯುವ ನಿಲುವು , ಅವರ ಹೇಳಿಕೆಗಳ ಹಿಂದಿರುವ ಮಾನಸಿಕ ಸ್ಥಿತಿ ಗತಿ ಮುಂತಾದ ಅವರನ್ನು ಪ್ರಭಾವಿಸುವ ಅಂಶಗಳನ್ನು ಬೇರ್ಪಡಿಸಿ ನೋಡಬೇಕು.
ಕೆಳೆದ ಕೆಲ ದಶಕಗಳಿಂದ ನಗರ ಪ್ರದೇಶಗಳಲ್ಲಿ ಪುನರುಜ್ಜೀವನಗೊಳ್ಳುತ್ತಿರುವ , ನಿಧಾನ ಗತಿಯಲ್ಲಿ ಹಳ್ಳಿಗಳತ್ತಲೂ ಹಬ್ಬುತ್ತಿರುವ ವಾಸ್ತುಶಾಸ್ತ್ರ ಪ್ರಮಾಣಿತ ಜ್ಞಾನವೇ ಅಥವಾ ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ನಿಂತಿರುವ ಜ್ಞಾನವೇ ? ವಾಸ್ತುಶಾಸ್ತ್ರದ ಇತಿಮಿತಿಗಳೇನು ? ವಾಸ್ತುಶಾಸ್ತ್ರಕ್ಕೆ ನಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವಿದೆಯೇ ಅಥವಾ ನಮ್ಮ ಪಾರಂಪರಿಕ ನಂಬಿಕೆಯೊಂದೆ ಅದನ್ನು ಉಸಿರಾಡುವ ಸ್ಥಿತಿಯಲ್ಲಿಟ್ಟಿದೆಯೇ ? ವಾಸ್ತುಶಾಸ್ತ್ರ ವಸ್ತುನಿಷ್ಠ ವಿಚಾರಣೆಯ ಎದುರು ನಿಲ್ಲಬಲ್ಲುದೇ ? ವಾಸ್ತುಶಾಸ್ತ್ರದ ಪುನರುಜ್ಜೀವನ ಸಾಧ್ಯವೇ ? ಜ್ಞಾನದ ಶಾಖೆಯಾಗಿ ಭಾರತೀಯರಲ್ಲದವರು ವಾಸ್ತುಶಾಸ್ತ್ರವನ್ನು ಹೇಗೆ ಪರಿಗಣಿಸುತ್ತಾರೆ ? ಯಾವುದೇ ಶ್ರೇಷ್ಟ ಜ್ಞಾನ ದೇಶ-ಧರ್ಮ-ನಂಬಿಕೆಗಳ ಹಂಗನ್ನು ತೊರೆದಿರಬೇಕಲ್ಲವೇ ? ಎನ್ನುವ ಪ್ರಶ್ನೆಗಳಿಗೆ ಉತ್ತರದ ಹುಡುಕಾಟವೇ ‘ವಾಸ್ತುಶಾಸ್ತ್ರದ ತಪಾಸಣೆ’.
ನಮ್ಮ ಜೀವನ ಪಾಶ್ಚಾತ್ಯ ಪ್ರಭಾವಗಳಿಂದ ತುಂಬಿ ತುಳುಕುತ್ತಿದೆ. ಹೀಗಿರುವಾಗ ನಮ್ಮದೇ ಆದ ವಾಸ್ತುಶಾಸ್ತ್ರಕ್ಕೆ ನಾವು ಮೊರೆ ಹೋಗಬಾರದೇಕೆ ಎನ್ನುವ ಕೂಗುಗಳು ಎದ್ದಿವೆ. ನಮ್ಮ ಎಲ್ಲ ದೇಶೀಯ ಜ್ಞಾನವನ್ನು ಬ್ರಿಟಿಷರ ಆಳ್ವಿಕೆ ಮೂಲೆಗುಂಪಾಗಿಸಿತು ಎನ್ನುವ ವಾದವೂ ಚಾಲ್ತಿಯಲ್ಲಿದೆ. ವಾಸ್ತುಶಾಸ್ತ್ರವನ್ನು ಅನುಸರಿಸುವ ಜನಸಂಖ್ಯೆ ಕಳೆದೆರಡು ದಶಕಳಿಂದ ಹೆಚ್ಚುತ್ತಿರುವಂತೆ ಭಾಸವಾಗುತ್ತದೆ. ಅಂತರ್ಜಾಲದಲ್ಲಿರುವ ನೂರಾರು ತಾಣಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ವಾಸ್ತುಶಾಸ್ತ್ರವನ್ನು ಈ ಹಿಂದೆ ಹಲವಾರು ಬಾರಿ ಭಾರತೀಯೇತರರು ಕುತೂಹಲದಿಂದ ಗಮನಿಸಿದ್ದಾರೆ. ಈಗ ಅಂತರ್ಜಾಲ ದೇಶದ ಗಡಿಗಳನ್ನೇ ಇಲ್ಲದಂತೆ ಮಾಡಿರುವುದರಿಂದ ‘ವಾಸ್ತುಶಾಸ್ತ್ರ’ ಎಂಬ ಭಾರತೀಯದ್ದೇ ಆದ ನಿರ್ಮಾಣ ತಂತ್ರಜ್ಞಾನವೊಂದು ಅಸ್ತಿತ್ವದಲ್ಲಿದೆಯೆಂದು ಬೇರೆಯವರಿಗೂ ತಿಳಿದು ಬರುತ್ತಿದೆ. ಇಂತಹ ನಾವಲ್ಲದ ಹೊರಗಿನವರು ವಾಸ್ತುಶಾಸ್ತ್ರ ಕುರಿತಾಗಿ ಎತ್ತುವ ಪ್ರಶ್ನೆಗಳನ್ನು ಹಾಗೂ ಸವಾಲುಗಳನ್ನು ನಾವು ಎದುರಿಸಬಲ್ಲೆವೇ ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪುರಾಣಮಿತ್ಯೇವ ನ ಸಾಧು ಸರ್ವಂ (ಹಳೆಯದಾದ ಮಾತ್ರಕ್ಕೆ ಎಲ್ಲವೂ ಸರಿಯಲ್ಲ) ಎಂದು ಕವಿರತ್ನ ಕಾಳಿದಾಸ ಹೇಳಿದ್ದಾನೆ. ಆದ್ದರಿಂದ ನಾವು ಒಂದು ವಿಚಾರವನ್ನು ಅದರ ನೈಜ ಸ್ವರೂಪದಲ್ಲಿ ಗ್ರಹಿಸುವ ಮೊದಲು ಅದು ಪುರಾತನವಾದುದರಿಂದ ಶ್ರೇಷ್ಟವಾದುದೆಂಬ ಮನೋಭಾವದಿಂದ ಹೊರಬರಬೇಕಾಗುತ್ತದೆ. ಇದಾದ ಹೊರತು ನಾವು ತೆರೆದ ಮನಸ್ಸನು ಹೊಂದಲಾರೆವು. ತೆರೆದ ಮನಸ್ಸಿಲ್ಲದೆ ಬೌದ್ಧಿಕ , ಭೌತಿಕ ಪ್ರಗತಿಯಿಲ್ಲ. ಪುರಾತನವಾದುದರಲ್ಲಿ ಇದ್ದ ಅಸಂಗತತೆಗಳನ್ನು ಪ್ರಶ್ನಿಸಿ ನಿರ್ದಿಷ್ಟ ಘಟನಾವಳಿಗಳ ಬಗೆಗೆ ಆವರೆಗೆ ನೀಡಿದ್ದ ವಿವರಣೆಗಳು ಸಮಾಧಾನಕರವಾಗಿಲ್ಲವೆಂದು ಮನಗಂಡು ಅದರ ಸತ್ಯಾನ್ವೇಷಣೆಗೆ ಹೊರಟ ಕಾರಣದಿಂದಲೇ ನಾವು ಇಂದು ಈ ಸ್ಥಿತಿಯಲ್ಲಿದ್ದೇವೆ. ಇದಕ್ಕಿಂತಲೂ ಉನ್ನತತರವಾದ ಅರಿವಿನ ಮಟ್ಟಕ್ಕೆ ಸಾಗಲು ಸದಾ ಹೆಣಗುತ್ತಿದ್ದೇವೆ. ಸೂರ್ಯ , ಚಂದ್ರ ದೇವರು, ಮುಗಿಲು ಮಿಂಚುಗಳು ವರುಣನ ಕರುಣೆ , ಕೋಪಗಳು , ಇಳೆ ಆತನ ದಾನ , ಬೆಳೆ ಆತನ ದಾನ ಎಂದು ನಂಬುತ್ತ ಇದ್ದರೆ ನಾವು ಇಂದಿಗೂ ಶಿಲಾಯುಗದಲ್ಲಿರುತ್ತಿದ್ದೆವು. ಯಾಗ-ಹೋಮಗಳನ್ನು ನೆರವೇರಿಸುತ್ತ ಅಗ್ನಿಯೇ ಸ್ವಾಹ-ವರುಣನೇ ಸ್ವಾಹ ಎಂದ ಬಡಬಡಿಸುತ್ತಿದ್ದರೆ ಮುಚ್ಚಿದ ಇಂಜಿನ್ ಕೋಠಿಯೊಳಗೆ ಬೇಕಾದಾಗ ಬೇಕಾದಷ್ಟು ಪ್ರಮಾಣದ ಕಿಡಿ ಸಿಡಿಸಿ ಅಂತರ್ದಹನ ಇಂಜಿನ್ ನಡೆಸಬಲ್ಲ –ಅಗ್ನಿ ದೇವನನ್ನೇ ನಿಯಂತ್ರಿಸಬಲ್ಲ ಕಿಡಿಬೆಣೆ (Spark Plug)) ತಯಾರಿಸುತ್ತಿರಲಿಲ್ಲ. ನೀವು ಕಾರಿನಲ್ಲಿ ಸಂಚರಿಸುತ್ತಿರಲಿಲ್ಲ. ಪ್ರಾಣಿಗಳಿಂದ ಎಳೆಯುವ ವಾಹನಗಳ ಹೊರತು ಬೇರೇನೂ ಇರುತ್ತಿರಲಿಲ್ಲ. ಆದ್ದರಿಂದ ಹಿಂದಿನ ನಂಬಿಕೆಗಳು-ಆಚರಣೆಗಳು ಎಷ್ಟು ನಿಜ ಎಷ್ಟು ಸಾರ್ವತ್ರಿಕ ಎಂದು ನೋಡದ ಹೊರತು ನಮಗೆ ಸತ್ಯದರ್ಶನವಾಗದು. ವೈಚಾರಿಕತೆಯ ಬಗ್ಗೆ ನಾನು ಇಷ್ಟು ದೀರ್ಘವಾಗಿ ಏಕೆ ಬರೆಯುತ್ತಿದ್ದೇನೆಂದರೆ ವಾಸ್ತು ಮತ್ತು ಅದರೊಂದಿಗೆ ತಳುಕು ಹಾಕಿಕೊಂಡಿರುವ ಧಾರ್ಮಿಕ ಪರವಾದ ಎಲ್ಲ ವಾದಗಳು ಪ್ರಾಚೀನ ಸರ್ವಶ್ರೇಷ್ಟವೆಂಬ ಅಡಿಪಾಯದ ಮೇಲಿವೆ. ಉದಾಹರಣೆಗಾಗಿ ಕೆಲವನ್ನು ಮುಂದೆ ನೀಡಿದ್ದೇನೆ.
# ವೇದಗಳಲ್ಲಿ ಈ ವಿಶ್ವದ ಎಲ್ಲ ನಿಯಮಗಳು ನಿರೂಪಿತವಾಗಿವೆ. ಪ್ರಾಚೀನ ಋಷಿ-ಮುನಿಗಳು ತ್ರಿಕಾಲ ಜ್ಞಾನಿಗಳು. ಅವರಿಗೆ ತಿಳಿಯದಿದ್ದ ವಿದ್ಯಾಮಾನವೇ ಇರಲಿಲ್ಲ. ಆಧುನಿಕ ವಿಜ್ಞಾನದ ಸಾಪೇಕ್ಷವಾದ (ಥಿಯರಿ ಆಫ್ ರಿಲೆಟಿವಿಟಿ) , ಕ್ವಾಂಟಂ ಸಿದ್ಧಾಂತಗಳು ಸಹ ಅವರಿಗೆ ತಿಳಿದಿದ್ದವು. ಈವರೆಗೆ ತಿಳಿದಿರುವ ಮುಂದೆ ತಿಳಿಯಲಿರುವ ಎಲ್ಲ ವೈಜ್ಞಾನಿಕ ಸತ್ಯಗಳು ಅವರಿಗೆ ಗೊತ್ತಿದ್ದವು.
# ವೇದ, ಉಪನಿಷತ್, ಪುರಾಣಗಳಲ್ಲಿರುವ ವಿಷಯಗಳು ಅಂತಿಮ ಸತ್ಯ. ಅವುಗಳಿಗೆ ಅವುಗಳೇ ಪ್ರಮಾಣ. ಅವುಗಳನ್ನು ಪ್ರಶ್ನಿಸುವಂತಿಲ್ಲ.
# ಪ್ರಾಚೀನ ಮೂಲಗ್ರಂಥಗಳ ಋಷಿ-ಮುನಿಗಳು ಹೇಳಿದ ವಿವರಗಳನ್ನು ಸರಿಯಾಗಿ ಗ್ರಹಿಸದೇ ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಆದ್ದರಿಂದಲೇ ನಮಗೆ ಗೋಜಲುಗಳುಂಟಾಗುತ್ತಿವೆ. ಮೂಲ ಗ್ರಂಥಗಳಲ್ಲಿರುವುದು ಸಾರ್ವಕಾಲಿಕ ಸತ್ಯ.
# ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳ ಮಾರ್ಗದಲ್ಲಿದ್ದ ಜನಜೀವನವೇ ಶ್ರೇಷ್ಟ . ಅದರ ಮುಂದೆ ಈಗಿನದು ಅತ್ಯಂತ ಕೀಳುಮಟ್ಟದ್ದು. ಇದಕ್ಕೆ ಕಾರಣ ಅವರು ಹೇಳಿದ ಜೀವನ ವಿಧಾನವನ್ನು ನಾವು ಕಡೆಗಣಿಸಿರುವುದು.
# ಪ್ರಾಚೀನ ಋಷಿಗಳು ಪಿಂಡಾಂಡ ಹಾಗೂ ಬ್ರಹ್ಮಾಂಡಗಳ ನಡುವೆ ಸಾಮ್ಯತೆಯನ್ನು ಕಂಡಿದ್ದರು. ವಾಸ್ತುಶಾಸ್ತ್ರವನ್ನು ಕೇವಲ ನಿರ್ಮಾಣಕ್ಕೆ ಸಂಬಂಧಿಸಿದುದೆಂದು ತಿಳಿದಾಗ ಗೋಜಲುಗಳುಂಟಾಗುತ್ತವೆ. ಇದು ನಿಜವಾಗಿಯೂ ವಿಶ್ವದ ಘಟನೆಗಳನ್ನು ಮಾನವನ ವ್ಯಕ್ತಿಗತ ಜೀವನದೊಂದಿಗೆ ಸಮೀಕರಿಸುವ ಮಾರ್ಗ. ಇಲ್ಲಿ ಲೌಕಿಕ ಮತ್ತು ಅಲೌಕಿಕ ಸಂಗತಿಗಳ ನಡುವೆ ಬೆಸುಗೆಯಿದೆ. ಇದನ್ನು ಅಲ್ಪಮತಿಗಳು ಅರಿಯುವುದು ಅಸಾಧ್ಯ. ದೀರ್ಘ ತಪಸ್ಸಿನಿಂದ ತ್ರಿಕಾಲ ಜ್ಞಾನಿಗಳಾದ ಋಷಿ-ಮುನಿಗಳು ಇದನ್ನು ಅರಿತು ತಿಳಿಸಿದರು. ವಾಸ್ತು ದೇಶ , ಕಾಲ ಧರ್ಮಾತಿತ. ಅದು ಮಾನವ ಜನಾಂಗದ ಒಳಿತಿಗಾಗಿ ಸುಖಿ ಜೀವನಕ್ಕಾಗಿ ದಿವ್ಯ ದರ್ಶನದಿಂದ ಮುಡಿ ಬಂದ ವಿದ್ಯೆ.
# ಐನ್‍ಸ್ಟೀನ್ ಸಿದ್ಧಾಂತ E = mc2 ಸೂತ್ರದ ಮೂಲಕ ದ್ರವ್ಯ ಹಾಗೂ ಚೈತನ್ಯದ ನಡುವಿನ ಸಂಬಂಧ ತಿಳಿಸುತ್ತದೆ. ವಾಸ್ತುಶಾಸ್ತ್ರ ವಿಶ್ವಸ್ತ ಚೈತನ್ಯವನ್ನು ನಮ್ಮತ್ತ ಸೆಳೆಯುವ ದಾರಿಯನ್ನು ತೋರಿಸುತ್ತದೆ. ವಾಸ್ತುಶಾಸ್ತ್ರವನ್ನು ಅಳವಡಿಸಿಕೊಂಡರೆ ವಿಶ್ವಸ್ತ ಚೈತನ್ಯಗಳು ಆ ಮನೆಯಲ್ಲಿ ವಾಸಿಸುತ್ತಿರುವವನ ಒಳಿತಿಗಾಗಿ ಬಳಕೆಯಾಗುತ್ತವೆ. ವಾಸ್ತುಶಾಸ್ತ್ರ ಪ್ರಕೃತಿಯೊಂದಿಗೆ ನಾವು ಸಾಮರಸ್ಯದಿಂದಿದ್ದು ಅದರ ಧನಾತ್ಮಕ ಶಕ್ತಿಯನ್ನು ಹೀರಿಕೊಂಡು ನಮ್ಮ ಲೌಕಿಕ, ಮಾನಸಿಕ , ಆಧ್ಯಾತ್ಮಿಕ ಜೀವನ ಸರಾಗವಾಗುವಂತೆ ಕಟ್ಟಡದ 'ಕಂಪನ' ಚೈತನ್ಯಗಳನ್ನು ಸಂತುಲಿತಗೊಳಿಸುತ್ತದೆ.
# ವಾಸ್ತು ಸೂರ್ಯನ ಚಲನೆಯನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಅದಕ್ಕಾಗಿ ಉತ್ತರ ಮತ್ತು ಪೂರ್ವದಲ್ಲಿ ತೆರೆದ ಜಾಗ , ಕಿಟಕಿ , ಬಾಗಿಲುಗಳು ಇರಬೇಕೆಂದು ಹೇಳುತ್ತದೆ. ಇದರಿಂದ ಅತಿ ಹೆಚ್ಚಿನ ಸೌರ ಚೈತನ್ಯ ನಮಗೆ ದಕ್ಕುತ್ತದೆ. ವಾಸ್ತುಶಾಸ್ತ್ರ ಮನೆಯ ಆಯಾದಿ ವರ್ಗಗಳ ಮೂಲಕ ಮನೆಯ ಉದ್ದ , ಅಗಲ , ಎತ್ತರ ಇತ್ಯಾದಿಗಳನ್ನು ನಿರ್ಧರಿಸಲು ನೆರವಾಗಿ ಪಂಚಭೂತಗಳನ್ನು ನಿಯಂತ್ರಿಸುತ್ತದೆ. ಇದು ಸ್ಥೂಲ (ವಿಶ್ವ)-ಸೂಕ್ಷ್ಮ(ವ್ಯಕ್ತಿ) ಗಳ ನಡುವೆ ಸಾಮರಸ್ಯ ತಂದು ಲೌಕಿಕ-ಆಧ್ಯಾತ್ಮಿಕ ಸಮೃದ್ಧಿಯನ್ನು ತರುತ್ತದೆ.
# ಭೂಮಿ ಒಂದು ಬೃಹತ್ ಕಾಂತದಂತೆ ವರ್ತಿಸುತ್ತದೆ. ಇದು ಋಷಿ-ಮುನಿಗಳಿಗೆ ತಿಳಿದಿದ್ದಿತು. ಮನುಷ್ಯನ ರಕ್ತದಲ್ಲಿ ಕಬ್ಬಿಣದ ಅಂಶವಿದೆ. ಭೂಕಾಂತತ್ವ ಈ ಕಬ್ಬಿಣದ ಅಂಶದ ಮೇಲೆ ಪ್ರಭಾವ ಬೀರುತ್ತದೆ. ಕಾಲು ಸದಾ ನೆಲಕ್ಕೆ ತಾಗಿಕೊಂಡಿರುತ್ತದೆ. ಆದ್ದರಿಂದ ಅದು ಭೂಕಾಂತದ ಉತ್ತರ ಧೃವವಾಗಿದ್ದರೆ , ತಲೆ ದಕ್ಷಿಣ ಧೃವ . ಇವು ತಿಳಿದಿದ್ದರಿಂದಲೇ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕೆಂದು ವಾಸ್ತುಶಾಸ್ತ್ರ ಹೇಳುತ್ತದೆ. ಪ್ರತಿಯೊಬ್ಬ ಮನುಷ್ಯನ ಸುತ್ತ ಸೂಕ್ಷ್ಮ ಅಗೋಚರ ಪ್ರಭಾವಲಯವಿರುತ್ತದೆ. ವ್ಯಕ್ತಿಯ ಕರ್ಮ ಮತ್ತು ಸಂಸ್ಕಾರಗಳಿಗನುಗುಣವಾಗಿ ಕ್ಷೀಣ ಅಥವಾ ಪ್ರಬಲವಾಗಿರುವ ಈ ಪ್ರಭಾ ಚೈತನ್ಯವನ್ನು ವಾಸ್ತುಶಾಸ್ತ್ರ ಸ್ಥಿರತೆಯಲ್ಲಿಡಲು ನೆರವಾಗುತ್ತದೆ.
# ಸೂರ್ಯ ಮತ್ತು ಇತರ ಗ್ರಹಗಳು ಕಾಂತ , ದ್ಯುತಿ , ಶಾಖ , ಗುರುತ್ವದಂತಹ ಹಲವಾರು ನಮಗೆ ಈಗ ತಿಳಿದಿರುವ ಹಾಗೂ ತಿಳಿಯದಿರುವ ಚೈತನ್ಯವನ್ನು ಬಿಡುಗಡೆಗೊಳಿಸುತ್ತವೆ. ಜೀವಿಸಲು ಬೇಕಾದ 'ಪ್ರಾಣ ಚೈತನ್ಯ' ಸೂರ್ಯನಿಂದ ಬರುತ್ತದೆ. ಇವೆಲ್ಲ ಚೈತನ್ಯಗಳು ಭೂಮಿಗೆ ತಲುಪಿ ದೇಹಕ್ಕೆ ಘಟ್ಟಿಸಿ ನಾನಾ ಬಗೆಯ ಪರಿಣಾಮಗಳನ್ನುಂಟು ಮಾಡುತ್ತವೆ. ವಿಜ್ಞಾನಿಗಳು ಮಾನವನ ಮೆದುಳಿನಲ್ಲಿ ಕಬ್ಬಿಣ ಆಕ್ಸೈಡ್ ಅಂಶವಿದೆಯೆಂದು ಹೇಳುತ್ತಿದ್ದಾರೆ. ಇವು ಭೂಕಾಂತತ್ವದಿಂದ ಪ್ರಭಾವಿಸಲ್ಪಡುತ್ತವೆ. ಇವನ್ನು ಧನಾತ್ಮಕಗೊಳಿಸಲು ವಾಸ್ತುಶಾಸ್ತ್ರ ನೆರವಾಗುತ್ತದೆ. ಪ್ರಾಣ ಚೈತನ್ಯ ಪೂರ್ವದಿಂದ ಪ್ರವೇಶಿಸುತ್ತದೆ. ಆದ್ದರಿಂದ ಪೂರ್ವಕ್ಕೆ ಬಾಗಿಲನ್ನು ಇರಿಸಿದಾಗ ಈ ಚೈತನ್ಯ ಅಸ್ತವ್ಯಸ್ತಗೊಳ್ಳದೆ ನೇರವಾಗಿ ಒಳ ಬರುತ್ತದೆ. ಆದ್ದರಿಂದಲೆ ವಾಸ್ತುಶಾಸ್ತ್ರ ಪೂರ್ವ ದಿಕ್ಕಿಗೆ ಪ್ರಾಶಸ್ತ್ಯ ನೀಡಿದೆ.
ಪಂಚಭೂತಗಳು , ಕಾಂತತ್ವ , ಉತ್ತರ ದಕ್ಷಿಣ ಧೃವಗಳು , ಧನಾತ್ಮಕ-ಋಣಾತ್ಮಕ ಚೈತನ್ಯ , ಪ್ರಾಣ , ವಿಶ್ವ ಸಮನ್ವಯತೆ ಹೀಗೆ ನಾನಾ ಬಗೆಯಲ್ಲಿ ವಿಜ್ಞಾನದ ಪರಿಕಲ್ಪನೆಗಳನ್ನು ಎಳೆದು ತಂದು ವಾಸ್ತುಶಾಸ್ತ್ರವನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಇವನ್ನು ಕುರಿತಾಗಿ ವಾಸ್ತು-ಸುಶಿಕ್ಷಿತರು-ಕಪಟಿಗಳು ಮತ್ತು ಹುಸಿ ವಿಜ್ಞಾನ ತಲೆಬರಹದಡಿ ವಿಶದವಾಗಿ ಚರ್ಚಿಸಲಾಗಿದೆ. ಇದನ್ನು ಮತ್ತೊಮ್ಮೆ ತಾವು ಅವಲೋಕಿಸಿದಾಗ ಇವುಗಳ ಹುರುಳು ಬಯಲಾಗುತ್ತದೆ.
ಸಾವಿರಾರು ವರ್ಷಗಳಿಂದ ಪ್ರಾಚೀನ ಗ್ರಂಥಗಳು ಹಾಗೂ ಅವುಗಳ ಮೇಲಿರುವ ಪೂಜ್ಯ ಭಾವನೆಗಳು ಬಹುತೇಕ ವೇಳೆ ವಾಸ್ತವ ಸಂಗತಿಗಳಿಗಿಂತ ಕುರುಡು ನಂಬಿಕೆಗಳ ಮೇಲಿರುತ್ತವೆ. ಆದ್ದರಿಂದ ವಾಸ್ತುಶಾಸ್ತ್ರ ಜ್ಞಾನದ ಶಾಖೆಯಲ್ಲ ಎಂದು ಹೇಳುವ ಮೊದಲು ನಿಜವಾದ ಪ್ರಮಾಣೀಕೃತ ಜ್ಞಾನ ಎಂದರೇನೆಂದು ಅಂತಹ ಜ್ಞಾನವನ್ನು ಗಳಿಸುವ ಮಾರ್ಗ ಯಾವುದೆಂದು ನಾವು ತಿಳಿಯುವುದು ಅವಶ್ಯಕ. ಇದರ ತಿಳುವಳಿಕೆಯಿಂದ ನಾನು ಮುಂದೆ ಮಂಡಿಸಲಿರುವ ವಾಸ್ತುವಿರೋಧಿ ವಾದಸರಣಿ ಸ್ಪಷ್ಟವಾಗುತ್ತದೆ.
ಪ್ರಮಾಣಿತ ಜ್ಞಾನ
ಪರೀಕ್ಷಿಸಬಹುದಾದ , ಪರಿಶೀಲಿಸಿ ಸ್ಥಾಪಿತ ಒರೆಗಲ್ಲುಗಳಿಗೊಡ್ಡಿ ವಿಶ್ವದ ಯಾವುದೇ ವಿಷಯ , ವಸ್ತು , ತತ್ವಗಳ ಬಗೆಗೆ ನಿರ್ದಿಷ್ಟ ತೀರ್ಮಾನಗಳನ್ನು ನೀಡಬಲ್ಲ ತಿಳುವಳಿಕೆಯನ್ನು ನಾವು ಪ್ರಮಾಣಗಳಿಂದ ಆಧರಿಸಲ್ಪಟ್ಟ ಜ್ಞಾನವೆನ್ನಬಹುದು. ಸಧ್ಯಕ್ಕೆ ಮಾನವ ಜನಾಂಗದ ಬಳಿ ಇರುವ ಅಂತಹ ತಿಳುವಳಿಕೆ ಎಂದರೆ ವಿಜ್ಞಾನ. ಪ್ರಮಾಣಿತ ಜ್ಞಾನದ ಸ್ವರೂಪಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.
(೧) ಯಾವುದೇ ಬಗೆಯ ಧಾರ್ಮಿಕ , ಐತಿಹಾಸಿಕ , ಮಾನಸಿಕ ಅಥವಾ ಭಾವುಕ ನೆಲೆಯಲ್ಲಿನ ನಂಬುಗೆಗಳನ್ನು ನಿರಾಕರಿಸುತ್ತದೆ.
(೨) ವಸ್ತುನಿಷ್ತವೇ ಹೊರತು ವಿಷಯ ನಿಷ್ಠವಲ್ಲ.
(೩) ವ್ಯಕ್ತಿ ನಿಷ್ಠ ಮತ್ತು ಸೀಮಿತ ಅರಿವಿನಿಂದ ವಿಮುಖ-ಧರ್ಮದಲ್ಲಿರುವಂತೆ ಶ್ರದ್ಧೆಗೆ ಜಾಗವಿಲ್ಲ.
(೪) ಯಾವುದೇ ಘಟನೆಯ ಬಗೆಗೆ ವಿವರಣೆ ನೀಡಲು ಅಸಮರ್ಥವಾದಾಗ ಅದನ್ನು ಮುಕ್ತವಾಗಿ ಒಪ್ಪಿಕೊಳ್ಳುವುದರೊಂದಿಗೆ ಅಂತಹ ವಿವರಣೆಗೆ ಬೇಕಾದ ಮೂಲ ಜ್ಞಾನದ ಸಂಪಾದನೆಗೆ ಶ್ರಮಿಸುತ್ತದೆ.
(೫) ಅರಿಯದ್ದನ್ನು ಅರಿಯನೆಂದು ಒಪ್ಪಿ ಅದನ್ನು ಅರಿಯಲು ಈಗಾಗಲೇ ಬಳಕೆಯಲ್ಲಿರುವ ಸ್ಥಾಪಿತ ಪರಿಶೀಲಿತ ಮೂಲತತ್ವಗಳ ಗಟ್ಟಿ ನೆಲೆಯಿಂದ ಹೊರಡುತ್ತದೆ. ಆದರೆ ನಂಬಿಕೆ ತನಗೆ ತೋಚದ್ದನ್ನು ತಾನು ಕಾಣದ ಮತ್ತೊಂದು ಶಕ್ತಿಯ ಮೇಲೆ ಆರೋಪಿಸುತ್ತದೆ.
(೬) ಪರಿಶೀಲಿಸಿ ಸಂಸ್ಥಾಪಿತವಾದ ಮೂಲತತ್ವದ ಆಧಾರದ ಮೇಲೆ ಸಮಾನ ಸನ್ನಿವೇಶಗಳಿಗೆ ಸಮರ್ಥ ವಿವರಣೆ ನೀಡುತ್ತದೆ.
(೭) ದೇಶ , ಕಾಲಾತೀತವಾದ ವಿಶ್ವಸ್ತ ನಿಯಮಗಳನ್ನು ಅರಿಯಲು ಯತ್ನಿಸುತ್ತದೆ. ಆ ಮೂಲಕ ಸಾಮಾನ್ಯ ನಿಯಮದಡಿ ಪರಸ್ಪರ ವೈರುಧ್ಯವಿಲ್ಲದಂತೆ ವಿಭಿನ್ನವೆನಿಸುವ ಆದರೆ ಹಿನ್ನೆಲೆಯಲ್ಲಿ ಒಂದೇ ಆಗಿರುವ ತತ್ವವನ್ನು ಹೊರಗೆಡಹುತ್ತದೆ. ಇದೇ ಆಧಾರದ ಮೇಲೆ ನಿರ್ದಿಷ್ಟವಾದ ಘಟನೆಗಳನ್ನು ಮುನ್ನುಡಿಯುತ್ತದೆ.
(೮) ಸತ್ಯವೆಂದು ಒಪ್ಪಲಾಗಿರುವ ಜ್ಞಾನವನ್ನು ಯಾರಾದರೂ, ಎಂದಾದರೂ , ಹೇಗಾದರೂ ಪರಿಶೀಲಿಸಿ ನೋಡಲು ಮುಕ್ತವಾಗಿರುತ್ತದೆ.
(೯) ಬಡವ-ಬಲ್ಲಿದ , ನೈತಿಕ-ಅನೈತಿಕ , ನಿಷ್ಠ-ವಿರೋಧಿ ಮುಂತಾದ ಎಲ್ಲ ವ್ಯಕ್ತಿಗತ ಗುಣಗಳಿಗೆ ಅತೀತವಾಗಿ ವ್ಯಕ್ತವಾಗುತ್ತದೆ.
(೧೦) ಹೊಸ ಜ್ಞಾನದ ಸಂಪಾದನೆಗೆ ನಿರ್ದಿಷ್ಟ ಮಾರ್ಗವನ್ನು ಅನುಸರಿಸುತ್ತದೆ. ಆದರ ಮೂಲಕ ದಕ್ಕಿದ ಜ್ಞಾನ ಸತ್ಯವೆಂಬ ಭರವಸೆ ನೀಡುತ್ತದೆ.
(೧೧) ತನ್ನ ವಲಯದಲ್ಲಿರುವ ಒಂದು ಶಾಖೆಯ ಜ್ಞಾನ ಇತರ ಕಡೆಯಲ್ಲೂ ಸತ್ಯವಾಗಿರುವ ಭರವಸೆ ನೀಡುತ್ತದೆ. ಅದರಿಂದ ದಕ್ಕುವ ಫಲಗಳು ಸಾರ್ವತ್ರಿಕ ಮತ್ತು ಸಾರ್ವಜನಿಕ.
(೧೨) ಅವಿಚ್ಛಿನ್ನರೂಪದಲ್ಲಿರುತ್ತದೆ.ಅದು ಪ್ರತಿಪಾದಿಸುವ ಸತ್ಯ ಎಲ್ಲ ಕಡೆಯೂ ಒಂದೇ ಆಗಿರುತ್ತದೆ.
(೧೩) ವಿಶದವಾಗಿ ಪರೀಕ್ಷಿಸಲಾದ ಎಂದಿಗೂ ಅಲ್ಲಗಳೆಯಲಾಗದ ನಿಯಮಗಳನ್ನು ಹೊಂದಿರುತ್ತದೆ. ಆ ಮೂಲಕ ಕಪಟ , ವಂಚನೆಗಳನ್ನು ಜಾಲಾಡುವ ಹೊರಹಾಕುವ ಆಂತರಿಕ ಸ್ವರೂಪವನ್ನು ಹೊಂದಿರುತ್ತದೆ.
(೧೪) ಸತ್ಯದ ಅರಿವಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾದ ಅನುಭವಗಳ ಆಧಾರ ಹೊಂದಿರುತ್ತದೆ. ಇವುಗಳಲ್ಲಿ ಕೆಲವು ನೇರವಾಗಿ ಮಾನವನ ಇಂದ್ರಿಯ ಗ್ರಾಹ್ಯವಾಗಿರಬಹುದು ಉಳಿದವು ಕಾರ್ಯು-ಕಾರಣಗಳ ಸಂಬಂಧಗಳಿಂದ ಪರೋಕ್ಷವಾಗಿ ಇಂದ್ರಿಯ ಗ್ರಾಹ್ಯವಾಗಿರಬಹುದು.
(೧೫) ಪರಿಶೀಲಿಸಿ-ಪರಿಷ್ಕರಿಸಲು ಸಾದ್ಯವಾಗುವಂತಹ ಸತ್ಯಗಳನ್ನು ಮಾತ್ರ ಹೇಳುತ್ತದೆ.
(೧೬) ಸತಾರ್ಕಿಕ ಮಾರ್ಗಾನುಯಾಯಿ. ಸತಾರ್ಕಿಕವಾದುದನ್ನು ಗ್ರಾಹ್ಯ ಅನುಭವದಿಂದ ಪರೀಕ್ಷಿಸುತ್ತದೆ. ಇಂದ್ರಿಯ ಅನುಭವಕ್ಕೆ ದಕ್ಕಿದರೂ ಸತಾರ್ಕಿಕವಲ್ಲದ ಘಟನೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ (ಭೂಮಿಯ ಸುತ್ತ ಸೂರ್ಯ ಸುತ್ತುವುದು ಅನುಭವವಾದರೂ ಅದು ತಪ್ಪೆಂದು ಸತಾರ್ಕಿಕವಾಗಿ ಅಲ್ಲಗಳೆದಿರುವುದು ಒಂದು ಉದಾಹರಣೆ)
ಪ್ರಮಾಣಿತ ಜ್ಞಾನ ಗಳಿಕೆಯ ಮಾರ್ಗ
ಪ್ರಮಾಣಿತ ಜ್ಞಾನ ಹೇಗೆ ದಕ್ಕುತ್ತದೆ ಎಂದು ತಿಳಿಯುವುದಕ್ಕಾಗಿ ನಾವು ಮಾನವ ಜನಾಂಗದ ಜ್ಞಾನದ ಸ್ವರೂಪ ಮತ್ತು ಅದು ದಕ್ಕಿದ ಬಗೆಯನ್ನು ತಿಳಿಯಬೇಕಾಗುತ್ತದೆ. ಮಾನವ ಜನಾಂಗದ ಚಿಂತನಾ ಪದ್ದತಿ ಎರಡು ಕವಲುಗಳಲ್ಲಿ ಮೂಡಿಬಂದಿದೆ. ಇದರಲ್ಲಿ ಮೊದಲನೆಯದು ನಂಬಿಕೆಯ ದಾರಿಯಾದರೆ ಎರಡನೆಯದು ವಿಚಾರಣೆಯ ಸತಾರ್ಕಿಕವಾದ ಮಾರ್ಗ-ಇದೇ ಪ್ರಮಾಣಿತ ಜ್ಞಾನವನ್ನು ಈವರೆಗೆ ನೀಡಿರುವ ಮುಂದೆಯೂ ನೀಡುವುದೆಂಬ ಭರವಸೆಯ ವಿಜ್ಞಾನದ ಮಾರ್ಗ. ವಿಜ್ಞಾನ ಈಗಾಗಲೇ ಗಟ್ಟಿಯಾದ ನೆಲೆಯ ಮೇಲಿರುವ ಬಹುತೇಕರಿಂದ ಒಪ್ಪಿಗೆಯಾಗಿರುವ ತನ್ನ ಸಾಮರ್ಥ್ಯವನ್ನು ಪ್ರತಿಕ್ಷಣ ಸಾಬೀತು ಪಡಿಸುತ್ತಿರುವ ಸಂಸ್ಥಾಪಿತವಾದ ವಿಚಾರಣೆಯ ಮಾರ್ಗವನ್ನು ತುಳಿದಿದೆ. ಆದ್ದರಿಂದ ಅದರಿಂದ ಪ್ರಮಾಣಿತ ಜ್ಞಾನ ದಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ ವಾಸ್ತುಶಾಸ್ತ್ರವನ್ನು ನಾವು ಪರಿಶೀಲಿಸಬೇಕಾಗಿದೆ. ನಂಬಿಕೆ ಮತ್ತು ವಿಚಾರಣೆ ಮಾರ್ಗಗಳಿಗಿರುವ ವ್ಯತ್ಯಾಸವನ್ನು ಮುಂದಿನ ಸಾಲುಗಳಲ್ಲಿ ನೋಡಬಹುದು.
(೧) ಜ್ಞಾನದ ಆಕರ
ನಂಬಿಕೆಯ ಮಾರ್ಗ : ಆರಂಭದಲ್ಲಿ ನಿರ್ದಿಷ್ಟ ಜ್ಞಾನ ದೇವರಿಂದ ಋಷಿ-ಮುನಿಗಳ ಮೂಲಕ ಹರಿದುಬಂದಿತೆಂದು ಭಾವಿಸುತ್ತದೆ. ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲಿ ಈ ದೃಷ್ಟಿಗೆ ಮನ್ನಣೆ ದಕ್ಕಿದೆ. ಜ್ಞಾನದ ಮೂಲ ಮಾನವಾತೀತ daivada ದೈವದ ನೆಲೆಯಲ್ಲಿದೆ.
ವಿಚಾರಣೆಯ ಮಾರ್ಗ : ಜಗತ್ತಿನ ಆಗು-ಹೋಗುಗಳೇ ಜ್ಞಾನದ ಆಕರಗಳು. ಬಾಹ್ಯ ವಿಶ್ವವನ್ನು ಅರಿಯಲು ಮಾಡುವ ಮೊದಲ ಪ್ರಯತ್ನಗಳೇ ತಿಳುವಳಿಕೆಯ ಮೂಲ ಬೀಜಗಳು.
(೨) ಸಾಕ್ಷ್ಯಾಧಾರಗಳು
ನಂಬಿಕೆಯ ಮಾರ್ಗ : ನಿರ್ದಿಷ್ಟ ಜ್ಞಾನಕ್ಕೆ ದೇವರು , ಧರ್ಮಗ್ರಂಥಗಳೇ ಅಂತಿಮ ಸಾಕ್ಷ್ಯಾಧಾರಗಳು. ಇವು ಹೇಳುವುದೇ ಅಂತಿಮ ಹಾಗೂ ಇವೇ ಪ್ರಮಾಣಗಳು. ಇದರಾಚೆಗೆ ವಿಚಾರಣೆಗೆ ಆಸ್ಪದವಿಲ್ಲ. ಇದು ಅತ್ಯಂತ ಕಟ್ಟುನಿಟ್ಟಿನ ಸಡಿಲಿಸಲಾಗದ ವ್ಯವಸ್ಥೆ.
ವಿಚಾರಣೆಯ ಮಾರ್ಗ : ವೀಕ್ಷಣೆ , ಪರಿಶೀಲನೆ , ಪ್ರಯೋಗ , ಪರಿಷ್ಕರಣೆಗಳಿಂದ ಜ್ಞಾನದ ಮೌಲ್ಯಮಾಪನ. ಸಕಾರಣವಿಲ್ಲದೆ ಸಂಗತಿಗಳು ಅದೆಷ್ಟೇ ಪೂಜ್ಯ ಮೂಲದಿಂದ ಬಂದಿದ್ದರೂ ಪರಿಗಣನೆಯಿಂದ ಹೊರಗೆ. ಪರಿಶೀಲಿಸಲಾಗದ ಯಾವುದೂ ಜ್ಞಾನದ ಪರಿಧಿಯಲ್ಲಿ ಇರಲಾರದು.
(೩) ಸ್ವೀಕಾರಾರ್ಹತೆ
ನಂಬಿಕೆಯ ಮಾರ್ಗ : ದೈವ/ಋಷಿ ಮೂಲದಿಂದ ಪರಂಪರಾನುಗತವಾಗಿ ಹರಿದು ಬಂದಿರುವುದನ್ನು ಯಾವುದೇ ವಿಚಾರಣೆ ಅಥವಾ ತನಿಖೆ ಇಲ್ಲದೆ ಒಪ್ಪಲಾಗುತ್ತದೆ. ಪರಂಪರೆಯಲ್ಲಿ ಒಮ್ಮೆ ದಾಖಲಾದ ಹೇಳಿಕೆಗಳೇ ಅಂತಿಮವಾಗಿರುತ್ತವೆ. ಇಲ್ಲಿ ಎಲ್ಲವೂ ನಂಬಿಕೆಯ ಮೇಲಿದ್ದು , ಹೇಳಲ್ಪಟ್ಟ ಸಂಗತಿಗಳು ಪ್ರಶ್ನಾತೀತವಾಗಿರುತ್ತವೆ. ಯಾವುದೇ ಬದಲಾವಣೆ , ಹೊಸ ವಿಚಾರಗಳಿಗೆ ತೀವ್ರ ವಿರೋಧವಿರುತ್ತದೆ.
ವಿಚಾರಣೆಯ ಮಾರ್ಗ : ಯಾವುದೇ ಹೇಳಿಕೆ ಜ್ಞಾನವೆಂದು ಅಂಗೀಕೃತವಾಗಲು ತನಿಖೆ , ಪರಿಶೀಲನೆಗಳ ನಿಕಷದಿಂದ ಹೊರಬರಬೇಕು. ಹೊಸ ಹೇಳಿಕೆಗಳು ಈ ಹಿಂದೆ ಪ್ರಮಾಣಿತವಾದ ಸತ್ಯಗಳನ್ನು ಆಧಾರವಾಗಿರಿಸಿಕೊಂಡಿರಬೇಕು. ಜ್ಞಾನ ಹೊಸ ವೀಕ್ಷಣೆ , ಪರಿಶೀಲನೆಗಳಿಂದ ಪರಿಷ್ಕರಣೆಗೊಳ್ಳುತ್ತ ಹೋಗುತ್ತದೆ. ಭದ್ರ ತಳಹದಿಯ ಮೇಲೆ ಇರದ ಹೇಳಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುತ್ತದೆ. ಕೊರತೆ ಇರುವ ಜ್ಞಾನವನ್ನು ಸರಿಪಡಿಸಲು ಸದಾ ಹೆಣಗುತ್ತದೆ. ಪರಿಷ್ಕರಣೆ ಇದರ ಉಸಿರು.
(೪) ವಿಧಾನ
ನಂಬಿಕೆಯ ಮಾರ್ಗ : ಯಾವುದೇ ಜ್ಞಾನವನ್ನು ಗಳಿಸಲು ಹಾಗೂ ಅದರ ಸತ್ಯಾಸತ್ಯತೆಯನ್ನು ಪರಿಕ್ಷಿಸಲು ಯಾವುದೇ ನಿರ್ದಿಷ್ಟ , ಖಚಿತ ತರ್ಕಬದ್ಧ ಮಾರ್ಗಗಳಿಲ್ಲ. ವಿಷಯಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಸುತ್ತದೆ.
ವಿಚಾರಣೆಯ ಮಾರ್ಗ : ಯಾವುದೇ ಜ್ಞಾನವನ್ನು ನಿರ್ದಿಷ್ಟ , ಖಚಿತ ಮಾರ್ಗಗಳನ್ನು ನಿರ್ದೇಶಿಸುತ್ತದೆ. ಇದರಿಂದ ಗಳಿಸಿದ ಜ್ಞಾನದ ಸತ್ಯಾಸತ್ಯತೆಯನ್ನು ತಿಳಿಯಲು ಆಂತರಿಕವಾಗಿ ಸುಸಜ್ಜಿತವಾದ ತಂತ್ರ ಮತ್ತು ವಿಧಾನಗಳನ್ನು ಅಳವಡಿಸಿಕೊಂಡುತ್ತದೆ. ಜ್ಞಾನ ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗಾಯಿಸಲ್ಪಡುವಾಗಲೇ ಅದನ್ನು ಪರಿಶೀಲಿಸುವ , ಪರಿಷ್ಕರಿಸುವ ಆವಕಾಶಗಳನ್ನು ಒಳಗೊಂಡಿರುತ್ತದೆ.
ಮನುಷ್ಯ ಹೊಂದಿರುವ ಕೆಲ ತಿಳುವಳಿಕೆಗಳು ಮೇಲಿನ ಕೆಲವು ಅಂಶಗಳಿಗೆ ತಾಳೆಯಾದರೆ ಇನ್ನುಳಿದ ಅಂಶಗಳಿಗೆ ತಾಳೆಯಾಗದಿರಬಹುದು. ಆಗ ಅದು ವಿಶ್ವಸ್ತ ಪ್ರಮಾಣೀಕೃತ ಜ್ಞಾನವಾಗಿರುವುದಿಲ್ಲ. ವಿಜ್ಞಾನ ಮಾತ್ರ ಮೇಲಿನ ಎಲ್ಲ ಅಂಶಗಳನ್ನು ಪರಿಪಾಲಿಸುತ್ತಿರುತ್ತದೆ. ಆದ್ದರಿಂದ ಅದು ಪ್ರಮಾಣೀಕೃತ ಜ್ಞಾನ. ಆದ್ದರಿಂದ ಮುಂದಿನ ಲೇಖನಗಳಲ್ಲಿ ಈ ಪ್ರಮಾಣೀಕೃತ ಜ್ಞಾನ-ವಿಜ್ಞಾನದ ಒರೆಗಲ್ಲಿನ ಮೇಲೆ ವಾಸ್ತುಶಾಸ್ತ್ರವನ್ನು ತಿಕ್ಕಿ ನೋಡಲಾಗಿದೆ.
ವಾಸ್ತುಶಾಸ್ತ್ರ - ಯಾವ ಮಾರ್ಗವನ್ನು ಅನುಸರಿಸುತ್ತದೆ ?
ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿಯೇ ವಾಸ್ತುಶಾಸ್ತ್ರ ನಂಬಿಕೆಯ ಪದ್ದತಿಯೇ ಅಥವಾ ವಿಚಾರಣೆಯ ಮಾರ್ಗದ ಜ್ಞಾನಶಾಖೆಯೆ ಎಂಬ ಪ್ರಶ್ನೆ ಎದುರಾಗುತ್ತದೆ. ವಾಸ್ತುಶಾಸ್ತ್ರದ ನಂಬಿಕೆಯ ಮಾರ್ಗದಿಂದಲೇ ಪ್ರಾಂಭವಾಗುತ್ತದೆ. ಇದು ಹೇಗೆಂದು ನೋಡೋಣ.
(೧) ವಾಸ್ತುಶಾಸ್ತ್ರದ ಮೂಲವನ್ನು ಅಥರ್ವವೇದದ ಅಂಗವಾದ ಸ್ಥಾಪತ್ಯ ವೇದದಲ್ಲಿ ಗುರುತಿಸಲಾಗಿದೆ. ವೇದಗಳು ಅಪೌರುಷೇಯವೆಂದು (ಮನುಷ್ಯರನ್ನು ಮೀರಿdduದ್ದು) ಭಾರತೀಯ ಪರಂಪರೆ ಪರಿಗಣಿಸುತ್ತದೆ. ವಾಸ್ತುಶಾಸ್ತ್ರದ ಉಗಮವನ್ನು ಹಲವಾರು ಗ್ರಂಥಗಳು ಮಾನವಾತೀತ ನೆಲೆಗಳಿಗೆ ಒಯ್ದು ತಲುಪಿಸುತ್ತವೆ. ಆರಂಭದಲ್ಲಿಯೇ ಕಟ್ಟಡ ನಿರ್ಮಾಣದಂತಹ ಭೌತಿಕ ಚಟುವಟಿಕೆಯನ್ನು ಇವುಗಳಲ್ಲಿ ಹುಡುಕತೊಡಗುವುದರಿಂದ ಪುರಾಣ ಹಾಸುಹೊಕ್ಕಾಗಿದೆ. ವಾಸ್ತುಶಾಸ್ತ್ರದ ಮೂಲ ಗುರುಗಳಾದ ವಿಶ್ವಕರ್ಮ ಮತ್ತು ಮಯ ಅನುಕ್ರಮವಾಗಿ ದೇವತೆ ಮತ್ತು ದಾನವರ ವಾಸ್ತುತಜ್ಞರಾಗುತ್ತಾರೆ.
(೨) ವಾಸ್ತುಪುರುಷ ಮತ್ತು ವಾಸ್ತುಮಂಡಲ ಹೇಗೆ ಅಸ್ತಿತ್ವಕ್ಕೆ ಬಂದವೆಂದು ತಿಳಿಸಲು ಯಾವ ಭೌತಿಕ , ಲೌಕಿಕ ತತ್ವಗಳು ಬಳಕೆಯಾಗಿಲ್ಲ. ಬೃಹತ್ ಸಂಹಿತೆ ಬಹು ಹಿಂದೆ ಹೆಸರಿಲ್ಲದ ಒಂದು ಜೀವಿ(ಅಸುರ) ಅಸ್ತಿತ್ವದಲ್ಲಿದ್ದಿತು. ಇದು ಭೂಮಿ ಅಂತರಿಕ್ಷಗಳನ್ನು ಕವಿಯಿತು. ಇದನ್ನು ಕಂಡ ದೇವತೆಗಳು ಅದನ್ನು ಮುಖ ಕೆಳಗಾಗಿಸಿ ನೆಲಕ್ಕೊತ್ತಿ ಅದು ಮತ್ತೊಮ್ಮೆ ಮೇಲೇಳದಂತೆ ಅದರ ಮೇಲೆ ನೆಲೆಸಿದರು. ಇದನ್ನು ಬ್ರಹ್ಮ ವಾಸ್ತು ಮತ್ತು ಪುರುಷ ಎರಡರ ಕೂಟವಾಗಿ ಪರಿಗಣಿಸಿದನು ಎಂಬ ವಿವರಣೆ ನೀಡುತ್ತದೆ. (ಬೃ.ಸಂ. LII೫೨/2-3) ಇದೇ ಕಥೆಯನ್ನೂ ಮತ್ಸ್ಯ ಪುರಾಣ ಇನ್ನಷ್ಟು ಒಗ್ಗರಣೆ ಹಾಕಿ ಆ ಜೀವಿ ಶಿವನ ಬೆವರ ಹನಿಯಿಂದ ಹುಟ್ಟಿತೆಂದು ಹೇಳುತ್ತದೆ. ಇತರ ವಾಸ್ತುಗ್ರಂಥಗಳು ಈ ಜೀವಿಯನ್ನು ಬೇರೆ ಬೇರೆಯಾಗಿ ರಂಜಕ ಶೈಲಿಯಲ್ಲಿ ವರ್ಣಿಸಿವೆ. ಈಶಾನ ಶಿವಗುರುದೇವ ಪದ್ಧತಿ ಇದನ್ನು ಹಿಗ್ಗಿಸಿ ದೊಡ್ಡ ಪುರಾಣದ ಕಥೆಯನ್ನಾಗಿಸಿದೆ. ಸ್ಕಂದ ಪುರಾಣ ಈ ಅಸುರ ನೆಲದಿಂದ ಮೇಲೆದ್ದನೆಂದು ತಿಳಿಸುತ್ತದೆ. ಕೆಲ ವಾಸ್ತುಗ್ರಂಥಗಳು ವಾಸ್ತುಪುರುಷನನ್ನು ದೇವತೆಗಳು ಮುಖ ಅಡಿಯಾಗಿ ಒತ್ತಿ ಹಿಡಿದರು ಎಂದರೆ ಇನ್ನು ಕೆಲವು ಆತನೇ ನೆಲದೊಳಕ್ಕೆ ಸೇರಿದನು ಎನ್ನುತ್ತವೆ.. ಕಾಶ್ಯಪ ಶಿಲ್ಪದಲ್ಲಿ (ಕಾ.ಶಿ I೨/12-.24) ವಾಸ್ತುಪುರುಷನನ್ನು ವಿಷ್ಣು ನಾರಾಯಣ , ಮಹಾಜಲ ಎಂದು ಪರಿಗಣಿಸಲಾಗಿದೆ. ಬೃಹತ್ ಸಂಹಿತೆ ಮುಖ ಅಡಿಯಾಗಿ ಬಿದ್ದಿದ್ದ ವಾಸ್ತುಪುರುಷ ಪೂಜೆಯ ಸಮಯದಲ್ಲಿ ಮುಖ ಮೇಲೆ ಮಾಡಿರುತ್ತಾನೆಂದು ಹೇಳುತ್ತದೆ. ಶಾರದಾ ತಿಲಕ ಇದನ್ನು ಅನುಮೋದಿಸುತ್ತದೆ. ಆದ್ದರಿಂದ ನೀವು ನೋಡಿರುವ ವಾಸ್ತುಪುರುಷನ ಚಿತ್ರಗಳಲ್ಲಿ ಕೆಳವೆಡೆ ಆತ ಮುಖ ಕೆಳಗಾಗಿ ಇದ್ದರೆ , ಮತ್ತೆ ಕೆಲವು ಕಡೆ ಮುಖ ಮೇಲಾಗಿ ಬಿದ್ದಿರುತ್ತಾನೆ.
ಸಮರಾಂಗಣ ಸೂತ್ರಧಾರ ನಿರ್ಮಾಣ ಕಾರ್ಯದ ಆರಂಭವನ್ನು ಕಥೆಯೊಂದಿಗೆ ಪ್ರಾರಂಭಿಸುತ್ತದೆ. ಈ ಕಥೆ ಹೀಗಿದೆ. ಬಹು ಹಿಂದೆ ಮನುಷ್ಯರು ಸ್ವರ್ಗಕ್ಕೆ ಹೋದರು. ಆಲ್ಲಿದ್ದ ಸಕಲ ಸುಖಗಳನ್ನು ಅನುಭವಿಸಿ , ತಾಳ ತಪ್ಪಿ ಉನ್ಮತ್ತರಾದರು. ಇದನ್ನು ಗಮನಿಸಿದ ದೇವತೆಗಳು ಮಾನವರನ್ನು ಸ್ವರ್ಗದಿಂದ ಉಚ್ಚಾಟಿಸಿದಾಗ ಅವರು ಭೂಮಿಗೆ ಶಾಲಿ ತಾಂಡುಲ ಎನ್ನುವ ಮರವನ್ನು ತಂದು ನೆಟ್ಟರು. ಈ ಮರದ ಹಣ್ಣುಗಳನ್ನು ತಿಂದು ಕಾಮ-ಕ್ರೋಧ-ಲೋಭ-ಮೋಹ–ಮದ-ಮತ್ಸರಗಳಿಂದ ಆವರಿಸಲ್ಪಟ್ಟು ಉನ್ಮತ್ತರಾಗಿ ದುರ್ಬಲರಾದಾಗ ಅವರಿಗೆ ಆಶ್ರಯ ಅಗತ್ಯವಾಯಿತು. ಆಗ ಶಾಲಿ ತಾಂಡುಲ ಮರದ ಕೊಂಬೆಗಳನ್ನು ಬಳಸಿ ಆಸರೆಯನ್ನು ಮಾಡಿಕೊಂಡರು. ಇದೇ ಮೊಟ್ಟ ಮೊದಲ ಮನೆಯಾಯಿತು. ಸಮರಾಂಗಣ ಸುತ್ರಾಧಾರದ ಪ್ರಕಾರ ಮನೆ ನಿರ್ಮಾಣ ಮತ್ತು ವಾಸ್ತುಶಾಸ್ತ್ರ ಇಲ್ಲಿಂದ ಅಸ್ತಿತ್ವಕ್ಕೆ ಬಂದವು.
(೩) ವಾಸ್ತುಶಾಸ್ತ್ರ ಶಿವ-ಬ್ರಹ್ಮ-ವಿಷ್ಣು-ಇಂದ್ರ-ಬೃಹಸ್ಪತಿ-ನಾರದ-ಮಾನಸಾರ ಎಂಬ ಋಷಿ ಗಣಗಳ ಮೂಲಕ ಹರಿದು ಬಂದಿತೆಂದು ತಿಳಿದು ಬರುತ್ತದೆ.
(೪) ವಾಸ್ತುಶಾಸ್ತ್ರದ ಮೂಲ ಗ್ರಂಥಗಳನ್ನು ನಾವು ಸೂಕ್ಷ್ಮವಾಗಿ ನೋಡಿದಾಗ ಪರಸ್ಪರ ವೈರುಧ್ಯದ ಸಂಗತಿಗಳು ನಮಗೆ ಎದುರಾಗುತ್ತವೆ. ಇಂದು ವಾಸ್ತುಶಾಸ್ತ್ರದ ಗ್ರಂಥ ಹೇಳುವ ಮೂಲ ಪರಿಕಲ್ಪನೆಯ ವಿವರಣೆಗಳು ಮತ್ತೊಂದರೊಂದಿಗೆ ತಾಳೆಯಾಗುವುದಿಲ್ಲ.
ಆಕರ- ಸಾಕ್ಷ್ಯಾಧಾರ - ಸ್ವೀಕಾರಾರ್ಹತೆ –ವಿಧಾನ ಇವುಗಳಲ್ಲಿ ಯಾವುದನ್ನೇ ಪರಿಗಣಿಸಲಿ ವಾಸ್ತುಶಾಸ್ತ್ರ ನಂಬಿಕೆಯ ಮಾರ್ಗವನ್ನು ಅನುಸರಿಸುತ್ತದೆ. ಆದ್ದರಿಂದ ಅದು ತಾರ್ಕಿಕ , ವೈಜ್ಞಾನಿಕ ಮಾರ್ಗವಲ್ಲ.

ವಾಸ್ತುಗ್ರಂಥಗಳು
ವಾಸ್ತುಪಂಡಿತರು ಮಾತಿಗೆ ಮೊದಲು ಸ್ಥಾಪತ್ಯ ವೇದ , ಮಾನಸಾರ , ಮಯಮತ ಇತ್ಯಾದಿ ಗ್ರಂಥಗಳ ಹೆಸರುಗಳನ್ನು ಉಲ್ಲೇಖಿಸುತ್ತಾರೆ. ಹೆಚ್ಚಿನ ವಾಸ್ತುಪಂಡಿತರಿಗೆ ಇವುಗಳಲ್ಲಿ ಏನಿದೆಯೆಂದು ತಿಳಿದಿರುವುದಿಲ್ಲ-ತಿಳಿಯುವ ಯೋಗ್ಯತೆಯೂ ಇರುವುದಿಲ್ಲ. . ಮೂಲದಲ್ಲಿ ಓದಿ ತಿಳಿಯುವ ಸಾಮರ್ಥ್ಯ ಇರುವವರು ತಾಂತ್ರಿಕ ಜ್ಞಾನ ಹೊಂದಿರುವುದಿಲ್ಲ. ಆದ್ದರಿಂದ ವಾಸ್ತುಗ್ರಂಥಗಳು ವಿಸ್ಮಯದ ಮೂಲಗಳಾಗಿವೆ. ಅವುಗಳ ಒಳಹೊಕ್ಕು ನೋಡುವುದೊಂದೇ ಇದಕ್ಕಿರುವ ಪರಿಹಾರ.
ಆಧುನಿಕ ಕಾಲದಲ್ಲಿ ಪ್ರತಿಯೊಬ್ಬ ಸಿವಿಲ್ ಇಂಜಿನಿಯರ್-ವಾಸ್ತುತಂತ್ರಜ್ಞ ಕಾಲಬದ್ಧ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಸಮಯದ ಕೊರತೆ ಮತ್ತು ವಾಸ್ತುಶಾಸ್ತ್ರಗಳ ಮೂಲ ಆಕರಗಳು ಸಂಸ್ಕೃತದಲ್ಲಿರುವ ಅನಾನುಕೂಲದಿಂದಾಗಿ ವಾಸ್ತುಶಾಸ್ತ್ರ ಇಂಜಿನಿಯರ್^ಗಳ ವೈಜ್ಞಾನಿಕ ವಿಶ್ಲೇಷಣೆಯ ಪರಿಧಿಯಿಂದ ಹೊರಗುಳಿಯಲು ಕಾರಣವಾಗಿದೆ. ಈ ಕಾರಣದಿಂದಾಗಿಯೇ ಸಿವಿಲ್ ಇಂಜಿನಿಯರಿಂಗ್^ನಲ್ಲಿ ಮಾಸ್ಟರ್ ಪದವಿ ಪಡೆದಿರುವ ನನ್ನ ಸ್ನೇಹಿತರೊಬ್ಬರು ವಾಸ್ತುಶಾಸ್ತ್ರದಲ್ಲಿ ಭೂಪರೀಕ್ಷೆ ಮತ್ತಿತರ ನಿರ್ಮಾಣ ತಂತ್ರಗಳು ಉಲ್ಲೇಖವಾಗಿವೆಯಂತೆ ಆದ್ದರಿಂದ ಅದರಲ್ಲೂ ಸಾಕಷ್ಟು ವೈಜ್ಞಾನಿಕ ಸಂಗತಿಗಳು ಸೇರಿರಬಹುದು ಎಂದು ಹೇಳಿದರು. ವಾಸ್ತುಶಾಸ್ತ್ರದ ಗ್ರಂಥಗಳಲ್ಲಿರುವ ಭೂಪರೀಕ್ಷಣ ವಿಧಾನಗಳನ್ನು ನಾನು ಅವರಿಗೆ ತಿಳಿಸಿದಾಗ ವಿಚಲಿತರಾದ ಅವರು ಅಲ್ಲಿರುವುದು ತಂತ್ರಜ್ಞಾನವೇ ಅಲ್ಲ ಕೇವಲ ಆಚರಣೆಗಳು ಮಾತ್ರ ಎಂದು ಉದ್ಗಾರ ತೆಗೆದರು. ಆದ್ದರಿಂದ ವಾಸ್ತುಗ್ರಂಥಗಳಲ್ಲಿ ಮುಖ್ಯವಾಗಿ ಏನಿದೆಯೆಂದು ತಿಳಿಯುವುದರ ಮೂಲಕ ನಾವು ಅದರಲ್ಲಿನ ಸತ್ಯಾಸತ್ಯತೆಗಳನ್ನು ವಿವೇಚಿಸಬಹುದು. ಇದರಿಂದ ನಿರ್ಮಾಣ ಕುರಿತಾದ ನಮ್ಮ ಪ್ರಾಚೀನ ಗ್ರಂಥಗಳ ಸಮರ್ಪಕತೆ , ಜ್ಞಾನವನ್ನು ಒರೆಗೆ ಹಚ್ಚಿ ನೋಡಬಹುದು.
ವಾಸ್ತುಶಾಸ್ತ್ರದ ಗ್ರಂಥಗಳು ಕಟ್ಟಡ ನಿರ್ಮಾಣ ಕುರಿತಾಗಿ (೧) ಸಲಹೆ-ಮಾರ್ಗದರ್ಶನ ನೀಡುತ್ತವೆಯೋ ಅಥವಾ (೨) ನಿರ್ದಿಷ್ಟ ಬಗೆಯ ಕಟ್ಟಡಗಳ ವಿವರಣೆ ನೀಡುತ್ತವೆಯೋ ಎನ್ನುವುದು ಸ್ಪಷ್ಟವಾಗುವುದಿಲ್ಲ. ಈ ಗ್ರಂಥಗಳು ಕಟ್ಟಡ ನಿರ್ಮಾಣದಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ನಿಜವಾಗಿಯೂ ಹೇಳುತ್ತವೆಯೇ ಎನ್ನುವ ಗೊಂದಲ ಕೊನಯವರೆಗೂ ಉಳಿಯುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅವು ವಿನ್ಯಾಸ, ನಿರ್ಮಾಣ ಎರಡೂ ಹಂತಗಳಲ್ಲೂ ವಾಸ್ತವ ಸ್ಥಿತಿಗಳಿಗಿಂತ ದೂರ ಸರಿದಿರುವಂತೆ ಭಾಸವಾಗುತ್ತದೆ. ಅದು ಹೇಳುವ ನಿವೇಶನದ ಅಳತೆ , ಮನೆಯ ಪರಿಮಾಣ , ನಿರ್ಮಾಣದ ಚಟುವಟಿಕೆ ಒಮ್ದು ಬಗೆಯ ಆದರ್ಶಮಯ ಆಚರಣೆಗಳಂತೆ ಭಾಸವಾಗುತ್ತವೆ. ಸ್ಥಪತಿಗಳ ಶ್ರಮದಿಂದ ವಿಕಸಿಸಿದ ನಿರ್ಮಾಣ ಜ್ಞಾನವನ್ನು ಬ್ರಾಹ್ಮಣರು ತಮ್ಮ ಶಾಸ್ತ್ರಗಳ ಶೈಲಿಗೆ ತಿರುಗಿಸಿ , ಆಚರಣೆಗಳಿಂಡ ತುಂಬಿರುವಂತೆ ಕಾಣುತ್ತದೆ. ಭಾರತದಾದ್ಯಂತ ಹರಡಿರುವ ಮನೆ,ದೇವಾಲಯ , ಊರು ,ನಗರಗಳು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿವೆಯೆಂದು ತೋರಿಸುವುದು ಅಸಾಧ್ಯ ಕಾರ್ಯವೆನಿಸುತ್ತದೆ. ನಿರ್ದಿಷ್ಟ ಊರು ಅಥವಾ ನಗರ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಕಟ್ಟಲಾಗಿದೆಯೆಂದು ತೋರಿಸಲು ಶ್ರಮವಹಿಸಿ ತಿಣುಕಬೇಕಾಗುತ್ತದೆ. ಆಗಲೂ ಅದರಲ್ಲಿ ಯಶಸ್ಸು ದಕ್ಕುವ ಭರವಸೆಯಿಲ್ಲ. ಕೆಲವು ನಗರ , ಊರುಗಳ ನಿರ್ಮಾಣ ವಾಸ್ತುಶಾಸ್ತ್ರ ಅನುಸರಿಸಿವೆ ಎಂದು ತೋರಿಸುವ ಯತ್ನಗಳಾಗಿದೆ.
ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ಮಾನಸಾರ ಮತ್ತು ಮಯಮತ ಗ್ರಂಥಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಮಾನಸಾರ ಮತ್ತು ಮಯಮತ ಭಾರತೀಯ ವಾಸ್ತುಶಾಸ್ತ್ರದ ಅಧಿಕೃತ ಆಕರಗಳೆಂದರೂ ತಪ್ಪಿಲ್ಲ. ಮಾನಸಾರ ಉತ್ತರ ಭಾರತಕ್ಕೆ ಸೇರಿದ ಗ್ರಂಥವಾದರೆ ಮಯಮತ ದಕ್ಷಿಣ ಭಾರತಕ್ಕೆ ಸೇರಿದ ಗ್ರಂಥವೆಂದು ವಿದ್ವಾಂಸರು ತೀರ್ಮಾನಿಸಿದ್ದಾರೆ. ಇವೆರಡರಲ್ಲಿರುವ ಬಹುತೇಕ ವಿಷಯಗಳಲ್ಲಿ ಸಾಮ್ಯತೆಯಿದೆ. ಪುರ (ಊರು), ದುರ್ಗ (ಕೋಟೆ) ,ಭವನ (ಮನೆ), ಪ್ರಾಸಾದ (ದೇವಾಲಯ), ಪ್ರತಿಮಾ (ಮೂರ್ತಿ) , ಚಿತ್ರ (ಚಿತ್ರ) , ಯಂತ್ರ (ಸಲಕರಣೆ) , ಆಸನ (ಆಸನ) ಎಂಬ ಎಂಟು ಅಂಗಗಳು ಸೇರಿ ವಾಸ್ತುಶಾಸ್ತ್ರವಾಗುತ್ತದೆ. ಮಾನಸಾರ , ಮಯಮತ ವಾಸ್ತುಶಾಸ್ತ್ರದ ಮೂಲ ಆಕರಗಳೆಂದು ಪ್ರಸಿದ್ಧವಾಗಿದ್ದರೂ ಅವು ಚಿತ್ರಗಳ ಬಗ್ಗೆ ಯಾವ ವಿವರಗಳನ್ನೂ ನೀಡವುದಿಲ್ಲ. ದೇವಾಲಯದ ಮುಖ್ಯ ಗುರಿ ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಪ್ರತಿಷ್ಟಾಪನೆ. ಇದಕ್ಕಾಗಿ ದೇವಾಲಯ (ಕಟ್ಟಡ) ಮತ್ತು ಮೂರ್ತಿ ಅತ್ಯವಶ್ಯಕ. ಮೂರ್ತಿ ಕೆತ್ತಲು ಮತ್ತು ದೇವಾಲಯ ತಳ ಮತ್ತು ಲಂಬ ವಿನ್ಯಾಸ ನಿರ್ಧರಿಸಲು ಚಿತ್ರಕಲೆ ಬಹು ಮುಖ್ಯ. ಇದು ನಿರ್ಮಾಣದ ಮೊದಲ ಅಗತ್ಯ. ಸಮರಾಂಗಣ ಸೂತ್ರಧಾರ ಮಾತ್ರ ವಾಸ್ತುಶಾಸ್ತ್ರದ ಈ ಎಲ್ಲ ಅಂಶಗಳನ್ನು ವಿವರಿಸುತ್ತದೆ. ( ೩೪/೩೭೯-೪೦೫)
ಅಗ್ನಿಪುರಾಣ , ಗರುಡ ಪುರಾಣ , ಮತ್ಸ್ಯಪುರಾಣ , ಭವಿಷ್ಯತ್ ಪುರಾಣ , ಬೃಹತ್ಸಂಹಿತ , ಕಾಮಿಕಾಗಮ , ಸುಪ್ರಭೇದಾಗಮ, ಶಿಲ್ಪಿ ರತ್ನ , ಈಶಾನಶಿವ ಗುರುದೇವ ಪದ್ಧತಿ , ಮುಂತಾದ ಮಿಶ್ರವಿಷಯ ಗ್ರಂಥಗಳು ಮತ್ತು ವಾಸ್ತುಶಾಸ್ತ್ರವನ್ನೇ ಗುರಿಯಾಗಿರಿಸಿಕೊಂಡು ಬರೆಯಲಾಗಿರುವ ವಾಸ್ತುಮಂಡನ , ಮನುಷ್ಯಾಲಯ ಚಂದ್ರಿಕೆ ಇತರ ಗ್ರಂಥಗಳು ವಾಸ್ತುಶಾಸ್ತ್ರ ಅದರಲ್ಲೂ ನಿರ್ಮಾಣ ಕುರಿತಾದ ವಿಷಯಗಳಲ್ಲಿ ಬಹುತೇಕವಾಗಿ ಮಾನಸಾರ-ಮಯಮತಗಳನ್ನು ಅನುಕರಿಸಿವೆ. ಆದ್ದರಿಂದ ವಾಸ್ತುಶಾಸ್ತ್ರ ಕುರಿತಾಗಿ ಮಾನಸಾರ ಜೊತೆಜೊತೆಗೆ ಮಯಮತವನ್ನು ಗಮನಿಸಿದರೆ ಭಾರತಿಯ ನಿರ್ಮಾಣ ಪರಿಕಲ್ಪನೆಯ ಬಹುತೇಕ ಅಂಶಗಳನ್ನು ಮನಗಂಡಂತಾಗುತ್ತದೆ. ಬಹುತೇಕ ವೇಳೆ ಈ ಗ್ರಂಥಗಳಲ್ಲಿರುವ ಜ್ಞಾನ ಯಾವ ರೀತಿಯದಾಗಿರುತ್ತದೆ ಮತ್ತು ಅದರಲ್ಲಿ ಯಾವುದು ಎಷ್ಟು ವೈಜ್ಞಾನಿಕ ಎನ್ನುವುದು ಸುಲಭವಾಗಿ ತಿಳಿಯುವುದಿಲ್ಲ. ಆದ್ದರಿಂದ ಹಲವಾರು ವೇಳೆ ಇವುಗಳಲ್ಲಿರುವುದನ್ನು ನಾನಾ ಬಗೆಯಲ್ಲಿ ಅರ್ಥೈಸಲಾಗುತ್ತದೆ. ಭೂಕಂಪಕ್ಕೆ ತುತ್ತಾಗಿ ಕಟ್ಟಡಗಳು ಉರುಳಿದಾಗ ಭಾರತೀಯ ವಾಸ್ತುಶಾಸ್ತ್ರದಲ್ಲಿ ನಿರೂಪಿತವಾಗಿರುವ ತಂತ್ರಜ್ಞಾನದಿಂದ ಭೂಕಂಪವನ್ನು ತಾಳಿಕೊಳ್ಳುವ ಕಟ್ಟಡಗಳನ್ನು ನಿರ್ಮಿಸಬಹುದೆಂದು ಅಂತರ್ಜಾಲದಲ್ಲಿ , ಪತ್ರಿಕೆಗಳಲ್ಲಿ ಹಲವರು ಬರೆದಿದ್ದಾರೆ. ಭೂಕಂಪದ ಸ್ವರೂಪ , ಅದು ಕಟ್ಟಡಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಆಧುನಿಕ ಮಾರ್ಗಗಳಲ್ಲಿ ಅಧ್ಯಯನ ನಡೆಸುವ ಸಿವಿಲ್ ಇಂಜಿನಿಯರ್ ಸಮೂಹ ಈ ಬಗ್ಗೆ ಏನನ್ನೂ ಹೇಳದೆ ಮೌನವಾಗಿದೆ. ಏಕೆಂದರೆ ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ಏನಿದೆಯೆಂದು ಈ ಸಮೂಹ ಕೂಲಂಕಷವಾಗಿ ನೋಡಿಲ್ಲ.
ಮಾನಸಾರ , ಮಯಮತಗಳ ಕಾಲವನ್ನೂ ನಿರ್ಣಯಿಸಲು ಯಾವ ಬಾಹ್ಯ ಆಧಾರಗಳು ಇಲ್ಲ. ವಾಸ್ತುಗ್ರಂಥವೂ ಗುಹಾಲಯ, ಸ್ಮಾರಕ ಸ್ತಂಭಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ೧೦-೧೧ ನೇ ಶತಮಾನಕ್ಕೆ ಸೇರಿದ ಸಮರಾಂಗಣ ಸೂತ್ರಧಾರ ಮಾತ್ರ ಗುಹಾ ದೇವಾಲಯಗಳ ಬಗ್ಗೆ ಸ್ವಲ್ಪ ಹೇಳಿದೆ. ಮಾನಸಾರ-ಮಯಮತಗಳಲ್ಲಿ ವಿವರಿಸಲಾಗಿರುವ ಕಟ್ಟಡಗಳ ಸ್ವರೂಪದ ಮೇಲೆ ಇವುಗಳ ಕಾಲವನ್ನು ಪ್ರ.ಶ. ೧೦-೧೧ ಶತಮಾನದ ಅವಧಿಗೆ ನಿಗದಿಪಡಿಸಬಹುದು.
ಮಾನಸಾರ ವಾಸ್ತುಶಾಸ್ತ್ರದ ಗ್ರಂಥವೆಂದು ಖ್ಯಾತವಾಗಿದ್ದರೂ ಅದರಲ್ಲಿನ ೭೦ ಅಧ್ಯಾಯಗಳಲ್ಲಿ ಅರ್ಧದಷ್ಟು ಮಾತ್ರ ಕಟ್ಟಡ ನಿರ್ಮಾಣಕ್ಕೆ ಸಂಬಧಿಸಿವೆ,. ಉಳಿದ ಅರ್ಧಭಾಗದಲ್ಲಿ ಮಾನವನಿಂದ ನಿರ್ಮಿತವಾಗಬಲ್ಲ ಬಹುತೇಕ ಚಟುವಟಿಕೆಗಳು ಸೇರಿವೆ. ಒಡವೆ , ವಸ್ತ್ರ, ಆಭರಣ , ಪೀಠೋಪಕರಣ , ಆಡಳಿತದ ಹಂತಗಳು , ರಾಜ ವರ್ಗಗಳು , ಯಾವ ವರ್ಣಗಳು ಯಾವ ವಸ್ತುಗಳನ್ನು ಬಳಸಬೇಕೆಂಬ ನಿರ್ದೇಶನಗಳಿಂದ ತುಂಬಿದೆ. ಮಾನಸಾರ ವಸ್ತುಗಳ ಒಡೆತನ ಮತ್ತು ಬಳಕೆಯನ್ನು ಸಹ ವರ್ಣಗಳ ಮೇಲೆ ನಿರ್ಧರಿಸಿ ಶ್ರೇಣೇಕರಣಗೊಳಿಸಿದೆ. ಆದ್ದರಿಂದ ಮಾನಸಾರ ಅಥವಾ ಇತರ ವಾಸ್ತುಶಾಸ್ತ್ರದ ಗ್ರಂಥಗಳು ಕೇವಲ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದವೆಂದು ಪರಿಗಣಿಸಲಾಗದು. ಮಾನಸಾರದ ೫೦ನೇ ಅಧ್ಯಾಯದಲ್ಲಿ ಯಾವ ವರ್ಣದವರು ಏನನ್ನು ಹೊಂದಿರಬಹುದು , ಅದು ಎಂತಹುದಿರಬಹುದೆಂದು ತಿಳಿಸಲಾಗಿದೆ. ಇದರ ಪ್ರಕಾರ ಗಿಳಿಯನ್ನು ನೀವು ಸಾಕಬೇಕೆಂದಿದ್ದರೆ ಅದಕ್ಕೂ ನಿರ್ಬಂಧಗಳಿವೆ. ಗಿಳಿಯ ಪಂಜರ ದ್ವಾರ , ಕಂಬ , ಗುಮ್ಮಟ ಹೀಗೆ ಎತ್ತರದಲ್ಲಿ ೮ ಹಂತಗಳನ್ನು ಹೊಂದಿದ್ದು ವಿವಿಧ ಆಭರಣಗಳಿಂದ ಅಲಂಕೃತವಾಗಿರಬೇಕು. ಇದಕ್ಕೆ ಅನುಗುಣವಾಗಿಲ್ಲದ ಪಂಜರ ಹೊಂದಿದ್ದರೆ ಮನೆಯ ಒಡೆಯನಿಗೆ ಅಮಂಗಳವಾಗುತ್ತದೆ ಎಂದು ಹೇಳುತ್ತದೆ. ಇದರ ಒಟ್ಟಾರೆ ಆಶಯವೆಂದರೆ ಜನ ಸಾಮಾನ್ಯರು ಮನೆಯಲ್ಲಿ ಗಿಳಿಯನ್ನು ಸಾಕುವ ತೆವಲಿನಿಂದ ದೂರವಿರಬೇಕು. ಅದೇನಿದ್ದರು ಶ್ರೀಮಂತರಿಗೆ ಮೀಸಲಾಗಿರಬೇಕು ಮತ್ತು ಗಿಳಿ ಸಾಕುವುದು ಪ್ರತಿಷ್ಟೆಯ ಸಂಕೇತವಾಗಿರಬೇಕು.
ವಾಸ್ತುಗ್ರಂಥಗಳು ನಿರ್ಮಾಣ ತಂತ್ರಜ್ಞಾನವನ್ನು ವಿವರಿಸುತ್ತವೆ ಎಂದು ಭಾವಿಸಲಾಗುತ್ತಿದೆಯಾರೂ ಅವುಗಳಲ್ಲಿ ನಿರ್ಮಾಣಕ್ಕೆ ಯಾವ ರೀತಿಯಲ್ಲೂ ಸಂಬಂಧ ಪಡದ ವಿಧಿ ಆಚರಣೆ , ಪೂಜಾ ವಿಧಾನ , ಬಲಿ ಕರ್ಮಾಚರಣೆ , ಮಂತ್ರ , ತಂತ್ರ , ಜ್ಯೋತಿಷ್ಯ ಬಿಡಿಸಲು ಬರದಂತೆ ಬೆರೆತಿವೆ. ಉದಾಹರಣೆಗೆ ಹೇಳುವುದಾದರೆ ಚಲುಕ್ಯರ ದೇವಾಲಯಗಳ ನಿರ್ಮಾಣಕ್ಕೆ ಬೇಕಾದ ಕಲ್ಲುಗಳನ್ನು ಪಟ್ಟದಕಲ್ಲಿನಿಂದ ೫ ಕಿ,ಮೀ ದೂರದಲ್ಲಿರುವ ಶಂಕರಗುಂಡಿ ಮತ್ತು ಮೋಟಾರ್ ಮರಡಿ ಪ್ರದೇಶಗಳಿಂದ ತಂದಿರುವುದು ತಿಳಿದುಬಂದಿದೆ. ಬಂಡೆಯಿಂದ ದೇವಾಲಯ , ಮೂರ್ತಿ ಕೆತ್ತನೆಗೆ ಬೇಕಾದ ಕಲ್ಲನ್ನು ಬಿಡಿಸಿಕೊಳ್ಳುತ್ತಿದ್ದ ತಂತ್ರಗಳು ಅವುಗಳನ್ನು ಸಾಗಿಸಲು ಅನುಸರಿಸಿರಬಹುದಾದ ವಿಧಾನಗಳ ಕುರುಹುಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿ ಸಿಕ್ಕಿರುವ ಕೆಲ ಶಿಲಾಶಾಸನಗಳಿಂದ ವಾಸ್ತುಶಿಲ್ಪಶಾಸ್ತ್ರಜ್ಞ , ಶಿಲ್ಪಿಶ್ರೇಣಿ ಮತ್ತು ಕರಕುಶಲಕಾರರ ಹೆಸರುಗಳು ತಿಳಿದುಬರುತ್ತವೆ. ವಾಸ್ತುಶಾಸ್ತ್ರದ ಗ್ರಂಥಗಳು ಕಟ್ಟಡ ನಿರ್ಮಾಣದ ತಳಹದಿಯಾದ ಭೌತಿಕ ಚಟುವಟಿಕೆ , ಸಾಮಗ್ರಿಗಳ ಸಂಗ್ರಹಣೆ, ಸಾಗಿಸುವ ,ಕೆತ್ತುವ , ಜೋಡಿಸುವ ವಿಧಾನಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದ್ದರಿಂದ ನಮಗೆ ಎತ್ತರದ ಗೋಪುರದ ಮೇಲಿರುವ ಕಳಶದ ಕೆಳಗಿನ ಹತ್ತಾರು ಟನ್ ತೂಕದ ಕಲ್ಲನ್ನು ಅಲ್ಲಿಗೆ ಯಾವ ತಂತ್ರದಿಂದ ಸಾಗಿಸಿದರೆಂದು ತಿಳಿಯುವುದಿಲ್ಲ. ವಾಸ್ತುಗ್ರಂಥಗಳಲ್ಲಿ ಮೊದಲಿಂದ ಕೊನೆಯವರೆಗೆ ನಿರ್ಮಾಣದ ಪ್ರತಿಹಂತದಲ್ಲೂ ಆಚರಣೆಗಳಿಗೆ ಅನನ್ಯ ಪ್ರಾಶಸ್ತ್ಯ ನೀಡಿ ಪುರೋಹಿತ ವರ್ಗ ನಿರ್ಮಾಣದ ಭೌತಿಕ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಮಾಡಲಾಗಿದೆ. ಪುರೋಹಿತನ ನೆರವಿಲ್ಲದೆ ನಿರ್ಮಾಣ ಸಾಧ್ಯವಾಗದಂತೆ ಮಾಡಲಾಗಿದೆ. ಹಾಗೆ ಮಾಡಿದರೆ ನಾನಾ ಬಗೆಯ ಗಂಡಾಂತರಗಳ ಬೆದರಿಕೆ ಒಡ್ಡಲಾಗಿದೆ. ಈ ಗ್ರಂಥಗಳನ್ನು ಒಟ್ಟಾರೆಯಾಗಿ ನೋಡಿದಾಗ ಅವುಗಳಲ್ಲಿ ಕಟ್ಟುವ ಚಟುವಟಿಕೆಗಿಂತ ಆಚರಣೆ , ವಿಧಿ-ವಿಧಾನಗಳೇ ಮೇಲುಗೈ ಸಾಧಿಸಿದಂತಿವೆ.. ಪುರೋಹಿತ ವರ್ಗ ಕಟ್ಟುವ ಕೆಲಸವನ್ನು ಅಗೋಚರ ಕಾರಣಗಳೊಂದಿಗೆ ಬೆಸೆದು ಅಧಿಪತ್ಯ ಸ್ಥಾಪಿಸುವಲ್ಲಿ ವಾಸ್ತುಗ್ರಂಥಗಳು ಯಶಸ್ವಿಯಾಗಿ ನಿರ್ವಹಿಸಿವೆ.
ವಾಸ್ತುಗ್ರಂಥಗಳು ಯಾವುದೇ ನಿರ್ದಿಷ್ಟ ಕಟ್ಟಡವನ್ನು/ದೇವಸ್ಥಾನವನ್ನು ಎಲ್ಲಿಯೂ ಹೆಸರಿಸುವುದಿಲ್ಲ.ವಾಸ್ತುಗ್ರಂಥಗಳು ದ್ರಾವಿಡ , ನಾಗರ ಮುಂತಾದ ಶೈಲಿಗಳ ಬಗ್ಗೆ ನೀಡುವ ವಿವರಗಳು ಸ್ಪಷ್ಟವಾಗಿಲ್ಲ. ಇವು ನೀಡುವ ವಿವರಗಳು ಅಗಾಧ ಸಂಖ್ಯೆಯಲ್ಲಿ ನಿರ್ಮಿತವಾಗಿರುವ ದೇವಾಲಯಗಳ ಸ್ವರೂಪಕ್ಕೆ ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲ. ಇನ್ನು ಮನೆಗಳನ್ನು ಕುರಿತಾಗಿ ಅವು ನೀಡುವ ಮಾಹಿತಿಯನ್ನು ಅನುಸರಿಸಿ ಕಟ್ಟಿದ ಮನೆಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಭಾರತೀಯ ವಾಸ್ತುಶಾಸ್ತ್ರದ ಪ್ರಯೋಗಶಾಲೆ ಎನಿಸಿರುವ ಐಹೊಳೆ , ಪಟ್ಟದಕಲ್ಲಿನ ದೇವಾಲಯಗಳ ನಿರ್ಮಾಣದ ಹಿಂದಿದ್ದ ಸ್ಥಪತಿಗಳ ವಿವರಗಳು ಶಿಲಾಸಾನಗಳ ಮೂಲಕ ದಕ್ಕುತ್ತವೆ. ಕರ್ನಾಟಕ ದ್ರಾವಿಡ ವಾಸ್ತುಶಿಲ್ಪದ ಮುಕುಟವೆನಿಸಿದ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಶಿಲಾಶಾಸನ (ಪ್ರ.ಶ ೭೦೦) ಆ ದೇವಾಲಯವನ್ನು ಕಟ್ಟಿದ ಅನಿವಾರಿತಾಚಾರಿ ಮತ್ತು ಸರ್ವಸಿದ್ದಿ ಆಚಾರಿ ಎಂಬ ಸೂತ್ರಧಾರಿಗಳನ್ನು ಹೊಗಳಿ ಅವರ ಅದ್ಭುತ ಸಾಧನೆಗೆ ಮೆಚ್ಚಿ ಮೂರು ಬಾರಿ ಅವರಿಗೆ ‘ಪೆರ್ಜೆರಪು’ ಸನ್ಮಾನ ಮಾಡಿ ‘ತ್ರಿಭುವನಾಚಾರಿ ಎಂಬ ಬಿರುದುಗಳನ್ನು ನೀಡಿದ ವಿವರಗಳನ್ನು ದಾಖಲಿಸುತ್ತದೆ.
ಐಹೊಳೆಯ ಹುಚ್ಚಪ್ಪಯ್ಯ ಗುಡಿಯ (ಪ್ರ.ಶ ೮) ಮುಖಮಂಟಪದ ಕಂಬದ ಮೇಲಿರುವ ಶಾಸನ ‘ಜಂಬೂದ್ವೀಪದಲ್ಲಿ ವಾಸ್ತುಪ್ರಾಸಾದ ನಿರ್ಮಾಣ ಕಲೆಯಲ್ಲಿ ನರಸನನ್ನು ಮೀರಿಸುವ ಸ್ಥಪತಿ ಹಿಂದೆ ಹುಟ್ಟಿಲ್ಲ. ಮುಂದೆ ಹುಟ್ಟುವುದಿಲ್ಲ. ಎಂದು ಸಾರುತ್ತದೆ. ಈತನೊಂದಿಗೆ ಗನಸೊಬ್ಬ ಹೆಸರಿನ ಸ್ಥಪತಿಯನ್ನು ಸಹ ಹೆಸರಿಸುತ್ತದೆ. ಪಟ್ಟದಕಲ್ಲಿನ ಪಾಪನಾಥ ದೇವಾಲಯದ ಸರ್ವಸಿದ್ಧಿ ಅಚಾರಿಯ ಶಿಷ್ಯ ರೇವಡಿ ಓವಜನ ಮುಂದಾಳುತನದಲ್ಲಿ ನಿರ್ಮಾಣವಾಗಿರುವುದು ತಿಳಿದುಬರುತ್ತದೆ. ಐಹೊಳೆಯ ದುರ್ಗದ ದೇವಾಲಯದಲ್ಲಿ ಜಿನಾಲಯ ಮತ್ತು ಸುರೇಂದ್ರನಾಥ ಎಂಬ ಸ್ಥಪತಿಗಳ ಹೆಸರುಗಳು ಕಾಣಿಸಿಕೊಂಡಿವೆ. ಹೊಳಲು ಮತ್ತು ಕುಪಟೂರಿನ ಶಾಸನಗಳು ನಾನಾ ಶೈಲಿಯ ದೇವಾಲಯಗಳನ್ನು ಕಟ್ಟುವ ಸ್ಥಪತಿಯನ್ನು ಹೊಗಳಿವೆ. ಕುಪಟೂರಿನ ಶಾಸನ ನಾಗರ-ದ್ರಾವಿಡ-ವೇಸರ-ಕಳಿಂಗ ಶೈಲಿಗಳ ನಿರ್ಮಾಣದಲ್ಲಿ ಸಿದ್ಧಹಸ್ತನಾದ ವಿಶ್ವಕರ್ಮ ಜನಾಂಗದ ಪಾದೋಜನ ಶಿಷ್ಯನಾದ ಬಮ್ಮೋಜನನ್ನು ಹೊಗಳುತ್ತದೆ. ಕೆಲ ದೇವಸ್ಥಾನಗಳ ಶಿಲಾಶಾಸನಗಳು ಅದರ ಮುಖ್ಯ ಸ್ಥಪತಿಯನ್ನು ಹೆಸರಿಸಿವೆ. ಹೊಯ್ಸಳ ದೇವಾಲಯಗಳ ಸುಂದರ ಕಲಾಕೃತಿಗಳ ಮೇಲೆ ಅದರ ಶಿಲ್ಪಿಯ ಹೆಸರುಗಳಿವೆ. ಆದರೆ ಯಾವುದೇ ನಿರ್ದಿಷ್ಟ ವಾಸ್ತುಗ್ರಂಥವನ್ನು ಕುರಿತಾಗಿ ಅವು ಏನನ್ನೂ ಹೇಳುವುದಿಲ್ಲ. ಆದರೆ ವಾಸ್ತುಗ್ರಂಥಗಳು ಅದನ್ನು ಪೌರಾಣಿಕ ಋಷಿ-ಮುನಿ ಮೂಲಕ್ಕೆ ಒಯ್ದು ವಿಸ್ಮಯ , ರಹಸ್ಯ ವಿದ್ಯೆಯೆಂಬಂತೆ ಬಿಂಬಿಸುತ್ತವೆ. ಶಾಸನಗಳು ನಿರ್ಮಾಣಕ್ಕೆ ಕಾರಣನಾದ ಸ್ಥಪತಿಗೆ ಸಹಜವಾಗಿ ಪ್ರಾಮುಖ್ಯತೆ ನೀಡಿದರೆ ವಾಸ್ತುಗ್ರಂಥಗಳು ಅದರಿಂದ ದೂರ ಸರಿಯುತ್ತವೆ.
ಶಿಲಾಶಾಸನಗಳಿಂದ ಪ್ರಾಚೀನ ಭಾರತದಲ್ಲಿ ಬಣಂಜು ಸಂಘಗಳು ಅತ್ಯಂತ ಪ್ರಬಲವಾಗಿದ್ದು ಹಲವಾರು ದೇವಾಲಯಗಳನ್ನು ಕಟ್ಟಿಸಿರುವುದು ತಿಳಿದುಬಂದಿದೆ. ವಾಸ್ತುಗ್ರಂಥಗಳು ಇಂತಹ ಯಾವ ಸಾಮುದಾಯಿಕ ವಿವರಗಳನ್ನು ಸಹ ನೀಡುವುದಿಲ್ಲ. ಆದ್ದರಿಂದ ವಾಸ್ತುಗ್ರಂಥಗಳು ಪ್ರಾಯೋಗಿಕವಾಗಿ ಯಾವ ಮಟ್ಟಿಗೆ ನಿಜವಾದ ನಿರ್ಮಾಣಕ್ಕೆ ಸಹಾಯಕವಾಗಿದ್ದವು , ಇವುಗಳನ್ನು ಸ್ಥಪತಿಗಳು ಅರಿತಿದ್ದರೆ ಎನ್ನುವ ಸಂಶಯ ಹಾಗೆಯೇ ಉಳಿಯುತ್ತದೆ. ಯಾವುದೇ ಕಟ್ಟಡವನ್ನು ನಿರ್ಮಿಸುವಾಗ ಸಿದ್ಧಾಂತ ತಿಳಿಸದ ಹಲವಾರು ಸಮಸ್ಯೆಗಳು ಅನುಷ್ಠಾನದ ಹಂತದಲ್ಲಿ ಎದುರಾಗುತ್ತವ. ಅಂತಹ ಯಾವುದೊಂದು ಸಮಸ್ಯೆಯನ್ನು ಸಹ ವಾಸ್ತುಗ್ರಂಥಗಳು ಹೇಳುವುದಿಲ್ಲ.. ನಿರ್ಮಾಣಕ್ಕೆ ಬೇಕಾದ ಯಾವುದೊಂದು ಉಪಕರಣ ಅಥವಾ ತಂತ್ರದ ವಿವರಣೆಗಳೂ ಸಹ ವಾಸ್ತುಗ್ರಂಥಗಳಲ್ಲಿ ಲಭ್ಯವಿಲ್ಲ. (ಚರಕ ಸಂಹಿತೆ ನಾನಾ ಬಗೆಯ ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ಹೇಳುವುದನ್ನು ಇಲ್ಲಿ ಹೊಲಿಸಿ ನೋಡಬಹುದು.) . ಇದರಿಂದ ವಾಸ್ತುಗ್ರಂಥ ಬರೆದವರು ನಿರ್ಮಾಣವನ್ನು ಅರಿತವರಾಗಿರದೆ ವಿಧ-ವಿಧಾನಗಳನ್ನು ಪ್ರತಿಪಾದಿಸುವ ಪುರೋಹಿತ ವರ್ಗವಾಗಿದ್ದಿತೆಂದು ಊಹಿಸಬಹುದು. ಕಟ್ಟಡ ನಿರ್ಮಾಣದ ನೇರ ಚಟುವಟಿಕೆಗಳಲ್ಲಿ ಬಹುತೇಕ ಶೂದ್ರವರ್ಗ ಕ್ರಿಯಾಶೀಲವಾಗಿದ್ದಿತು. ಇವರಿಗೆ ಅಕ್ಷರ ಜ್ಞಾನವಿರಲಿಲ್ಲ. ಆದ್ದರಿಂದ ಕಟ್ಟುವವರಿಗೆ ಅಕ್ಷರ ಎಷ್ಟು ಅಪರಿಚಿತವಾಗಿದ್ದಿತೋ , ವಾಸ್ತುಗ್ರಂಥ ಬರೆದವರಿಗೆ ಪ್ರಾಯೋಗಿಕವಾದ ನಿರ್ಮಾಣ ಚಟುವಟಿಕೆ ಅಷ್ಟೇ ಅಪರಿಚತವಾಗಿದ್ದಿತು. ಈಜು ಬಾರದವನು ಈಜುವವನ ವಿವರಣೆ ಕೇಳಿ ಈಜುವ ಬಗ್ಗೆ ಪುಸ್ತಕ ಬರೆದಂತಾಗಿದೆ. ಆದ್ದರಿಂದ ಕಟ್ಟಡ ಕಟ್ಟುವ ಗಾರೆ ಮಾಡುವುದ ಹೇಗೆ ? ಕಂಬವನ್ನು ಎತ್ತಿ ನಿಲಿಸುವುದು ಹೇಗೆ ಎನ್ನುವುದಕ್ಕಿಂತ ಅಂತಹ ಕೆಲಸ ಮಾಡಬೇಕಾದಾಗ ಅನುಸರಿಸಬೇಕಾದ ಆಚರಣೆಗಳು ಯಾವುವು , ಯಾವ ಜಾತಿಯವರಿಗೆ ಎಂತಹ ನಿವೇಶನ , ಮನೆಗಳು ಇರಬೇಕು ಎನ್ನುವ ಸಂಗತಿಗಳು ಮುಂಚೂಣಿಯಲ್ಲಿವೆ.
ಮಾನಸಾರ , ಮಯಮತದಂತಹ ಗ್ರಂಥಗಳಿಂದ ಕಂಬಗಳ , ಪೀಥಗಳ ಸುದೀರ್ಘ ವಿವರಣೆಗಳು ಸಿಗುವುವಾದರೂ ಜನಸಾಮಾನ್ಯರ ಮನೆಗಳು ನಿಜವಾಗಿಯೂ ಹೇಗಿದ್ದವು, ನಿಜವಾಗಿಯೂ ಅವರು ವಾಸ್ತುಗ್ರಂಥಗಳಿಗೆ ಮಾನ್ಯತೆ ನೀಡಿದ್ದರೆ ಎಂದು ತಿಳಿಯುವುದಿಲ್ಲ. ಆದರೆ ಲೋಕೋಪಕಾರ ;ಚಂದ್ರನುದಯದಲ್ಲಿ ಕಂಬ ನಿಲ್ಲಿಸಿ , ಬುಧನುದಯದಲ್ಲಿ ಜಂತೆ ಹೇರಿ , ಶುಕ್ರನುದುಯದಲಿ ಕೆಸರನ್ನಿಡಬೇಕು ಎಂದು ಹೇಳುತ್ತದೆ. ಇದರಿಂದ ವಾಸ್ತುಶಾಸ್ತ್ರದ ಮನೆಗಳು ಈಗಿನ ಉತ್ತರ ಕರ್ನಾಟಕದಲ್ಲಿರುವ ಪ್ರ,ಶ ೨೦೦ರ ಮಳೆಗಾಲದಲ್ಲಿ ಕುಸಿದ ಬುನಾದಿ-ಗೋಡೆ+ಕಂಬ-ತೊಲೆ-ಜಂತೆ-ಬಿದಿರಿ ತಡಿಕೆ-ಮೇಲುಮುದ್ದೆಯಿಂದ (ಮಣ್ಣು/ಕೆಸರು) ನಿರ್ಮಾಣವಾಗುವ ಮನೆಗಳನ್ನು ಹೋಲುತ್ತಿದ್ದವು ಎಂಬ ಸೂಚನೆ ಸಿಗುತ್ತದೆ.
ನಮ್ಮ ದೇಶದ ಬಹುತೇಕ ಮನೆಗಳನ್ನು ಪ್ರವೇಶಿಸುವ ಮೊದಲು ಮನೆಯ ತಲೆಬಾಗಿಲಿನ ಎಡ-ಬಲಕ್ಕೆ ಕಟ್ಟೆಗಳಿರುತ್ತವೆ. ಈ ಕಟ್ಟೆಗಳು ಜನಜೀವನದ ಅವಿಭಾಜ್ಯ ಅಂಗಗಳಾಗಿರುತ್ತವೆ. ಸಾಯಂಕಾಲದ ಚಟುವಟಿಕೆ , ರಾತ್ರಿಯಲ್ಲಿ ಗಾಳಿಗೆ ಮಲಗುವ ನೆಲೆಗಳಾಗಿ , ಒಕ್ಕಲುತನದ ಉತ್ಪನ್ನಗಳನ್ನು ಒಟ್ಟುವ ಸುರಕ್ಷಿತ ತಾಣಗಳಾಗಿ ಬಳಕೆಯಾಗುತ್ತವೆ. ದಕ್ಷಿಣ ಕರ್ನಾಟಕದಲ್ಲಿ ದನಗಳು ಮನೆಯ ಹಿತ್ತಲಿನಲ್ಲಿದ್ದರೆ ಉತ್ತರ ಕರ್ನಾಟಕದ ಹಳ್ಳಿಗಳ ಮನೆಗಳಲ್ಲಿ ತಲೆಬಾಗಿಲು ದಾಟಿದ ತಕ್ಷಣ ಎಡ-ಬಲದ ಬದಿಗಳಲ್ಲಿ ಗೋದಲಿಗಳು , ದನಗಳನ್ನು ಕಟ್ಟುವ ಜಾಗ ಇರುತ್ತವೆ. ಇದನ್ನು ದಾಟಿದ ತಕ್ಷಣ ಎತ್ತರಿಸಿದ ಜಗಲಿಯ ಮೇಲೆ ಮನುಷ್ಯರ ವಾಸದ ಭಾಗವಿರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ತೊಟ್ಟಿಯ ಮನೆಗಳಿದ್ದು ಇವು ಸ್ವಲ್ಪ ಮಟ್ಟಿಗೆ ವಾಸ್ತುಗ್ರಂಥದ ವಿವರಣೆಗಳನ್ನ ಹೋಲುತ್ತವೆ. ಆದರೆ ಇಲ್ಲಿಯೂ ಸಹ ನಾಡಹೆಂಚುಗಳ ಬಳಕೆ ಹೆಚ್ಚು. ಸುಟ್ಟ ಮಣ್ಣಿನ ಹೆಂಚುಗಳ ಬಳಕೆ ಸುಟ್ಟ ಇಟ್ಟಿಗೆಗಳ ಬಳಕೆಯಷ್ಟೇ ಪ್ರಾಚೀನ. ವಾಸ್ತುಗ್ರಂಥಗಳು ಇಂತಹ ಯಾವ ಸ್ಥಳೀಯ ಸಂಗತಿಗಳನ್ನಾಗಲಿ , ನಿರ್ಮಾಣದ ನೈಜ ವೈವಿಧ್ಯಗಳನ್ನಾಗಲಿ ತಿಳಿಸುವುದಿಲ್ಲ. ಕರ್ನಾಟಕದ ಬಹುಭಾಗವನ್ನು ಕಂಡಿದ್ದ ಚಾವುಂಡರಾಯ ಲೋಕೋಪಕಾರದಲ್ಲಿ ಇಂತಹ ಯಾವ ವಿವರಗಳನ್ನು ಸಹ ಕೊಡದೆ ನಮಗೆ ಭಾರಿ ನಿರಾಶೆಯನ್ನುಂಟು ಮಾಡುತ್ತಾನೆ.
ವಾಸ್ತುಗ್ರಂಥಗಳಲ್ಲಿ ಪ್ರತಿಯೊಂದು ಭೌತಿಕ ಚಟುವಟಿಕೆಯನ್ನು ಬ್ರಾಹ್ಮಣ ಮೇಲಾಗಿ ಶೂದ್ರ ಅಡಿಯಾಗಿ ಇರುವ ವ್ಯವಸ್ಥೆಯಂತೆ ಕಾಣಲಾಗಿದೆ. ಇದು ಯಾವ ಮಟ್ಟಕ್ಕೆ ಸಾಗಿದೆಯೆಂದರೆ ಅಳೆಯಲು ಬಳಸಬೇಕಾದ ನೂಲನ್ನು ಸಹ ಚಾತುರ್ವರ್ಣಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ದೇವ, ಬ್ರಾಹ್ಮಣ , ಕ್ಷತ್ರಿಯರಿಗೆ , ಮೂರು ಎಳೆಯ ನೂಲನ್ನು , ವೈಶ್ಯ ,ಶೂದ್ರರಿಗೆ ಎರಡು ಎಳೆಯ ನೂಲನ್ನು ಅಳೆಯಲು ಬಳಸುವಂತೆ ಹೇಳಲಾಗಿದೆ.
ಆದ್ದರಿಂದ ವಾಸ್ತುಶಾಸ್ತ್ರದ ಗ್ರಂಥಗಳಲ್ಲಿರುವ ಇತರ ಅಂಶಗಳನ್ನು ತೆಗೆದು ಕೇವಲ ಕಟ್ಟಡ ನಿರ್ಮಾಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಏನಿವೆಯೆಂದು ನೋಡೋಣ. ಮುಂದಿನ ಭಾಗದಲ್ಲಿ ವಿವಿಧ ವಾಸ್ತುಗ್ರಂಥಗಳ ಕಟ್ಟಡ ನಿರ್ಮಾಣದ ನಾನಾ ವಿಷಯಗಳ ಬಗ್ಗೆ ಸಹ ತೌಲನಿಕವಾಗಿ ನೋಡಲಾಗಿದೆ . ಇದರಿಂದ ವಾಸ್ತುತತ್ವಗಳಲ್ಲಿನ ವೈರುಧ್ಯಗಳು , ಇತಿಮಿತಿಗಳು ಕಾಣುತ್ತವೆ. ವಾಸ್ತುಗ್ರಂಥಗಳಲ್ಲಿರುವ ವಿವರಗಳೊಂದಿಗೆ ಅವುಗಳ ವಿಮರ್ಶೆಯನ್ನು ದಪ್ಪಕ್ಷರಗಳಲ್ಲಿ ಕೊಡಲಾಗಿದೆ. ಇದರಿಂದ ಆಧುನಿಕ ತಿಳುವಳಿಕೆಯೊಂದಿಗೆ ವಾಸ್ತುಶಾಸ್ತ್ರದ ಸಮರ್ಪಕತೆ ಇತಿಮಿತಿಗಳನ್ನು ಗುರುತಿಸಲಾಗಿದೆ. ನಿರ್ಮಾಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ನಾನು ಮುಂದೆ ಪರಿಗಣಿಸಿದ್ದೇನೆ. ಇವುಗಳನ್ನು ಪರಿಶೀಲಿಸುತ್ತಾ ಹೋದಂತೆ ಅವುಗಳಲ್ಲಿರುವ ನಿರ್ಮಾಣ ತಂತ್ರಜ್ಞಾನದ ಕಾಳು ಮತ್ತು ಜೊಳ್ಳುಗಳು ಹೊರಬರುತ್ತವೆ. ಪ್ರಾಚೀನ ವಾಸ್ತುಶಾಸ್ತ್ರದಲ್ಲಿ ಯಾವುದು ಎಷ್ಟು ಪ್ರಸ್ತುತ , ಯಾವುದು ಎಷ್ಟು ಹಳಸಲು , ಯಾವುದು ತಕ್ಷಣವೇ ಹೊರಗೆಸೆಯಬೇಕಾದ ತ್ಯಾಜ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಭೌತಿಕ ಚಟುವಟಿಕೆ , ಅವುಗಳ ಹಿಂದಿರುವ ತತ್ತ್ವಗಳ ಪರಿಗಣನೆಯಲ್ಲಿ ಮುಂದಿನ ಭಾಗ ಸಿದ್ಧಗೊಂಡು ವಿಮರ್ಶಾತ್ಮಕವಾಗಿಯು ಸಹ ನೋಡಲಾಗಿದೆ.
ಅಳತೆಗಳು : ಮಾನಸಾರದ ಮೊದಲ ಅಧ್ಯಾಯದಲ್ಲಿ ಅಳತೆ ಮತ್ತು ಪರಿಮಾಣಗಳ ವಿವರಗಳಿವೆ. ಈ ದೃಷ್ಟಿಯಲ್ಲಿ ಇದು ಭೌತಿಕ ಸಂಗತಿಗಳ ಆಧಾರದ ಮೇಲೆ ಬೆಳೆದುಬಂದ ಶಾಸ್ತ್ರವೆನ್ನಬಹುದು. ಅತ್ಯಂತ ಸಣ್ಣ ಅಳತೆ ಪರಮಾಣು. ಇದು ಯೋಗಿಗಳಿಗೆ ಮಾತ್ರ ಕಾಣುವ ಕಣ. ಇದನ್ನು ಕೆಲವರು ಸೂರ್ಯನ ಬೆಳಕಿನಲ್ಲಿ ಗಾಳಿಯಲ್ಲಿ ತೇಲುವ ಕಣವೆಂತಲೂ ಪರಿಗಣಿಸಿದ್ದಾರೆ.
೮ ಪರಮಾಣು = ೧ ರಥ ರೇಣು (ರಥ ಸಾಗುವಾಗ ಎದ್ದ ಧೂಳಿನ ಅತಿ ಸಣ್ಣ ಕಣ) /೮ ರಥ ರೇಣು = ೧ ವಲಾಗ್ರ (ಕೂದಲಿನ ದಪ್ಪ)/೮ ವಲಾಗ್ರ = ೧ ಕೀಟ/೮ ಕೀಟ = ೧ ಕಾಳು/೪ ಕಾಳು = ೧ ಅಂಗುಲ (ಬೆರಳಿನ ಮೂರು ಭಾಗಳಲ್ಲಿ ಒಂದು-ಮೇಲಿನದು)/೧೨ ಅಂಗುಲ = ೧ ವಿತಸ್ತಿ /೨ ವಿತಸ್ತಿ = ೧ ಹಸ್ತ (೨೪ ಅಂಗುಲ=ಕಿಷ್ಕು ಹಸ್ತ )/ ೨೫ ಅಂಗುಲ = ಪ್ರಾಜಾಪತ್ಯ ಹಸ್ತ /೨೬ ಅಂಗುಲ=ಧನುರ್ಮುಷ್ಟಿ/೨೭ ಅಂಗುಲ=ಧನುರ್ಗ್ರಹ/ ೪ ಹಸ್ತ = ೧ ದಂಡ (ಏಷ್ಟಿ , ಧನುಸ್) / ೮ ದಂಡ = ೧ ರಜ್ಜು. (ಮ.ಮ- ೨-೯)
ಹಸ್ತಗಳಲ್ಲಿ ೪ ವಿಧ . ಕಿಷ್ಕು ಹಸ್ತವನ್ನು ವಾಹನ , ಪೀಠ ಇತ್ಯಾದಿಗಳ ಅಳತೆಗೆ , ಪ್ರಾಜಾಪತ್ಯವನ್ನು ದೇವಾಲಯ , ಗೋಪುರಗಳ ಅಳತೆಗೆ , ಧನುರ್ಮುಷ್ಟಿಯನ್ನೂ ಮನೆಗಳ ಅಳತೆಗೆ , ಧನುರ್ಗ್ರಹವನ್ನು ನಗರಗಳ ಅಳತೆಗೆ ಬಳಸಬೇಕೆಂದು ಭಾವಿಸಲಾಗಿದೆ. (ಮ.ಮ- ೫-೬) ಆದರೆ ಕೆಲವು ಕಡೆ ಎಲ್ಲದಕ್ಕೂ ಕಿಷ್ಕುಹಸ್ತವನ್ನು ಬಳಸಬಹುದೆಂದು ಭಾವಿಸಲಾಗಿದೆ. ಯಜ್ಞ-ಯಾಗಾದಿಗಳ ವೇದಿಕೆಯನ್ನು ನಿರ್ಮಿಸಲು ಅದರ ಯಜಮಾನನ ನಡುಬೆರಳಿನ , ಮಧ್ಯ ಗೆಣಿಕೆಯನ್ನು ಅಂಗುಲವೆಂದು (ಮಾತರಾಂಗುಲ) ಪರಿಗಣಿಸಬೇಕೆಂದು ಹೇಳಲಾಗಿದೆ.
ವಾಸ್ತುಶಾಸ್ತ್ರದ ಈ ಅಳತೆಗಳು ಆ ಕಾಲದ ಪರಿಸರಕ್ಕೆ ಮತ್ತು ಬಳಕೆಗೆ ತಕ್ಕದಾಗಿದ್ದವೇ ಹೊರತು ಇವು ಈಗಿನ ಸಂದರ್ಭದಲ್ಲಿ ಅಪ್ರಸ್ತುತವಾಗಿವೆ. ಇಂದು ನಿಖರವಾದ ಬೆಳಕಿನ ಅಲೆಗಳ ತರಂಗಾಂತರ ಲೆಕ್ಕದಲ್ಲಿ ನ್ಯಾನೋಮೀಟರ^ನಿಂದ ಪ್ರಾರಂಭಿಸಿ. ಜ್ಯೋತಿರ್ವರ್ಷಗಳವರೆಗೆ ಅಳತೆಯ ಹಲವು ಮಜಲುಗಳು ನಿಖರವಾಗಿ , ನಿರ್ದಿಷ್ಟವಾಗಿ ಅಸ್ತಿತ್ವದಲ್ಲಿವೆ. ಸಿವಿಲ್ ಇಂಜಿನಿಯರ್^ಗಳು ಈಗ ತಮ್ಮ ನಿಖರತೆಯ ಅಗತ್ಯಕ್ಕೆ ಬೇಕಾದಂತೆ ನಾನಾ ಬಗೆಯ ಅಳತೆಯ ಸಾಧನಗಳನ್ನು ಬಳಸುತ್ತಾರೆ. ಮನೆ , ವಾಣಿಜ್ಯ ಕಟ್ಟಡ ಕಟ್ಟಲು ಅಳತೆ ಪಟ್ಟಿ , ಮೂಲೆ ಮಟ್ಟ, ಥಿಯೋಡೋಲೈಟ್^ಗಳಿಗೆ ತೃಪ್ತರಾದರೆ , ನೀರಾವರಿ , ಸುರಂಗ ನಿರ್ಮಾಣಗಳಲ್ಲಿ ಕೃತಕ ಉಪಗ್ರಹಗಳಿಂದ ನಿರ್ದೇಶಿಸಲ್ಪಟ್ಟ ಸುಕ್ಲಿಷ್ಟ ಸಾಧನಗಳಿಗೆ ಮೊರೆ ಹೋಗುತ್ತಾರೆ.
ವಾಸ್ತುಶಾಸ್ತ್ರದಲ್ಲಿ ಆಯಾದಿ ವರ್ಗಗಳ ಆಧಾರದ ಮೇಲೆ ನಿವೇಶನದ ಮತ್ತು ಅದರ ಯಜಮಾನನ ಜೀವಿತದ ಆಗುಹೋಗುಗಳನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿ ನಿವೇಶನದ ಉದ್ದ , ಅಗಲ , ಕ್ಷೇತ್ರಫಲಗಳನ್ನು ಅಸ್ಪಷ್ಟವಾದ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಹಸ್ತಗಳ ಅಳತೆಗಳಿಂದ ನಿರ್ಧರಿಸಲಾಗುತ್ತದೆ. ನೀವು ಖರೀದಿಸಿರುವ ೩೦/೪೦ ಅಳತೆಯ ನಿವೇಶನವನ್ನು ವಾಸ್ತುಪಂಡಿತ ಯಾವ ಮಾನಗಳಲ್ಲಿ , ಅಳೆಯುತ್ತಿದ್ದಾನೆ ಒಮ್ಮೆ ವಿಚಾರಿಸಿರಿ. ಏಕೆಂದರೆ ಆತ ಬಳಸುವ ‘ಹಸ್ತ’ ನಿಮ್ಮ ಜೀವನ ಗತಿಯನ್ನೇ ಬದಲಾಯಿಸಬಹುದು!
ಸ್ಥಪತಿ ಗುಣಲಕ್ಷಣ ಇದರಲ್ಲಿ ವಿಶ್ವಕರ್ಮ ಆತನ ಮೂಲಕ ಹರಿದು ಬಂದ ವಿದ್ಯೆಯ ವಿವರಗಳಿವೆ. , ವಾಸ್ತುಶಿಲ್ಪಿಗೆ ಇರಬೇಕಾದ ಗುಣಲಕ್ಷಣಗಳು , ಸ್ಥಪತಿ (ಮುಖ್ಯ ವಾಸ್ತುಶಾಸ್ತ್ರಜ್ಞ) , ಸೂತ್ರಗ್ರಾಹಿ (ಅಳತೆಗಾರ) , ವರ್ಧಕಿ (ಜೋಡಣೆಗಾರ) , ತಕ್ಷಕ (ಬಡಗಿ) ಇವರ ಕರ್ತವ್ಯಗಳು , ಅವರಿಗಿರಬೇಕಾದ ಜಾಣ್ಮೆ , ಶಾಸ್ತ್ರ ಪರಿಚಯ , ಸಾಗಿಸಬೇಕಾದ ಋಜು ಜೀವನ ಇತ್ಯಾದಿಗಳು ಇವೆ. (ಮ.ಮ- ೧೫-೨೨) ನಿರ್ಮಾಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಇದರಲ್ಲಿಲ್ಲ.
ಸ್ಥಪತಿ ಎಲ್ಲ ವಿದ್ಯೆಗಳಲ್ಲಿ ಪರಿಣಿತನಾಗಿರಬೇಕು. ಆತ ವಿಶ್ವಕರ್ಮನಿಂದ ಬಂದವನು. ಆತ ಆಚಾರ್ಯ. ಆತ ಬ್ರಾಹ್ಮಣನನ್ನು ಹೋಲುತ್ತಾನೆ. ಈತನ ಕೆಳಗೆ ,ಮಯವಂಶಜನಾದ ಸೂತ್ರಗ್ರಾಹಿ ಇದ್ದರೆ ಈತನನ್ನು ಅನುಸರಿಸಿ ವರ್ಧಕಿ , ತಕ್ಷಕ ಬರುತ್ತಾರೆ ಎಂದು ಹೇಳಲಾಗಿದೆಯಾದರೂ ವಾಸ್ತುಗ್ರಂಥಗಳಲ್ಲಿ ಮತ್ತೆಲ್ಲಿಯೂ ಸ್ಥಪತಿಗೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಜಾಗರೂಕತೆಯಿಂದ ಆತನನ್ನು ಬ್ರಾಹ್ಮಣರ ಮಟ್ಟದಿಂದ ದೂರ ಇರಿಸಲಾಗಿದೆ. ಇವರನ್ನು ಹೊರತು ಕಟ್ಟುವ ಕೆಲಸದಲ್ಲಿ ನೇರವಾಗಿ ಭಾಗಿಯಾಗುವ ಬೇರೆ ಯಾವ ಜಾತಿಯೂ ಪರಿಗಣನೆಗೆ ಬಂದಿಲ್ಲ.
ನಿವೇಶನ-ಭೂಪರೀಕ್ಷೆ ವಾಸ್ತುಶಾಸ್ತ್ರದಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಕಟ್ಟಡದ ನಿವೇಶನ ಆರಿಸುವ ಮಾರ್ಗಗಳು ,ಭೂ ಪರೀಕ್ಷೆ , ದಿಕ್ಕುಗಳ ನಿರ್ಧಾರ , ಮಣ್ಣಿನ ಪರೀಕ್ಷೆ ಇದರಲ್ಲಿ ಸೇರಿವೆ.ಮಣ್ಣಿನ ಗುಣವನ್ನು (1) ಬಣ್ಣ (2) ವಾಸನೆ (3) ರುಚಿ (4) ರೂಪ ಮತ್ತು ( 5) ಸ್ಪರ್ಶದ ಮೂಲಕ ಐದು ಹಂತಗಳಲ್ಲಿ ವರ್ಗೀಕರಿಸಲಾಗಿದೆ. ಬ್ರಾಹಣ-ಕ್ಷತ್ರಿಯ-ವೈಶ್ಯ-ಶೂದ್ರ ವರ್ಗಗಳಿಗೆ ಬೇರೆಯದೇ ಆದ ಭೂಗುಣಗಳಿರುವ ನಿವೇಶನಗಳನ್ನು ಶಿಫಾರಸ್ಸು ಮಾಡಲಾಗಿದೆ.
ಮಾನಸಾರದ ಪ್ರಕಾರ ಹಾಲಿನಂತಹ ರಸ ಒಸರುವ , ಹಣ್ಣು ತುಂಬಿದ ಮರಗಳಿರುವ , ಖದಿರ , ಬಾಳೆ , ನಿಂಬೆ , ಸಂಪಿಗೆ , ಪುನ್ನಾಗ , ನೆಲ್ಲಿಕಾಯಿ ಮರಗಳಿರುವ ನಿವೇಶನ ಶ್ರೇಷ್ಠ . ನೆಲ ಮಟ್ಟಸ ಹಾಗು ನಯವಾಗಿರಬೇಕು. ಈಶಾನ್ಯದತ್ತ ಇಳಿಜಾರಿರಬೇಕು. ತಟ್ಟಿದಾಗ ಗಟ್ಟಿ ಶಬ್ದ ಬರಬೇಕು. ಉತ್ತಮ ವಾಸನೆ ಹೊಂದಿರಬೇಕು. ಮನುಷ್ಯ ಕೈಯೆತ್ತಿ ನಿಂತಾಗ ಸಿಗುವ ನಿಲುವಿನಷ್ಟು ಆಳಕ್ಕೆ ಭೂಮಿಯನ್ನು ಅಗೆದಾಗ ನೀರು ದಕ್ಕಬೇಕು. ಸುಖೋಷ್ಣ ವಲಯದಲ್ಲಿರಬೇಕು. ಮಯಮತದಂತೆ ವೃತ್ತ , ಅರೆವೃತ್ತ , ೩ , ೫, ೭ ಮೂಲೆಗಳಿರುವ , ತ್ರಿಶೂಲ , ಮೀನಿನ ಬಾಲ , ಆನೆ/ಆಮೆಯ ಡುಬ್ಬ , ಆಕಳು ಮುಖದ ಆಕಾರ ಹೊಂದಿರುವ , ಮುಖ್ಯ ದಿಕ್ಕುಗಳಿಗೆ ಸಮಾಂತರದಲ್ಲಿರದ ನಿವೇಶನಗಳು ವರ್ಜ್ಯ. ಮೂಳೆ , ಕಲ್ಲು , ಹುತ್ತ , ಕೊಳೆತ ಮರ , ಇದ್ದಿಲು , ಒಣಗಿದ ಬಾವಿ , ಕುಳಿ-ತಗ್ಗು , ದಿಣ್ಣೆ , ಬೋಕಿ ಚೂರು , ಸುಣ್ಣದ ಕಲ್ಲು ಮುಂತಾದುವುಗಳಿರುವ ನಿವೇಶನ ವರ್ಜ್ಯ, (ಮ.ಮ. ೩/೮, ೪/೧೨ , ಮಾ.ಸಾ. ೪/೬-೮,೧೩) . ವಿಷ್ಣು ಧರ್ಮೋತ್ತರ ಪುರಾಣ (ವಿ.ಧ.ಪು ೯೩/೩೨-೩೩) , ಮತ್ಸ್ಯ ಪುರಾಣ (ಮ.ಪು: ೨೫೩/೧೨-೧೩) , ಅಗ್ನಿಪುರಾಣ (ಅ.ಪು :೨೪೭/೧-೨) , ಭವಿಷ್ಯ ಪುರಾಣ (೧-೧೩೦/೪೪) ವಿವಿಧ ಜಾತಿಗಳಿಗೆ ಪ್ರಶಸ್ತವಾದ ನಿವೇಶನದ ಮಣ್ಣಿನ ಗುಣವನ್ನು ಹೇಳುತ್ತವೆ.
ಮಯಮತ ತಿಳಿಸುವಂತೆ ಬಿಲ್ವ , ನಿಂಬೆ , ನೀರ್ಗುಂಡಿ , ಪಿಂಡಿತ , ಸಪ್ತಪರ್ಣ , ಮಾವು ಮರಗಳಿರುವ ನಿವೇಶನ ಒಳ್ಳೆಯದು. ನಿವೇಶನ ದಕ್ಷಿಣ ಪಶ್ಚಿಮದತ್ತ ಕ್ರಮೇಣ ಎತ್ತರಕ್ಕಿರಬೇಕು. ಎಲ್ಲ ಬಗೆಯ ಧಾನ್ಯಗಳನ್ನು ಬೆಳೆಯುವಷ್ಟು ಫಲವತ್ತಾಗಿರಬೇಕು. ಕೆಂಪು , ಬಿಳಿ ಹಳದಿ ಕಪ್ಪು ಬಣ್ಣ ಅಥವಾ ಇವೆಲ್ಲ ಬಣ್ಣಗಳ ಮಿಶ್ರಣವಾಗಿದ್ದು ಎಲ್ಲ ಬಗೆಯ ಉತ್ತಮ ವಾಸನೆಗಳನ್ನು ಹೊಂದಿರಬೇಕು.ನಾಲ್ಕು ಮೂಲೆಗಳಲ್ಲಿ ದೊಡ್ಡ ಮರಗಳಿರುವ ನಿವೇಶನ ಬರಡುತನದ ಗುರುತು. ಆದರಿಂದ ಸಮೃದ್ಧಿಯಿಲ್ಲ. ಕುಣಿಗಳಿಂದ ತುಂಬಿದ ಅಥವಾ ಕುಣಿಗಳೆ ಇರದ ನಿವೇಶನಗಳು ವರ್ಜ್ಯ. (ಮ.ಮ – ೨/೧೦-೧೫)
ಸಮರಾಂಗಣ ಸೂತ್ರಧಾರದ ಶಿಫಾರಸ್ಸಿನಂತೆ ನಿವೇಶನ ಮಧ್ಯದಲ್ಲಿ ಎತ್ತರವಿದ್ದು ಪೂರ್ವ ಹಾಗು ಈಶಾನ್ಯಕ್ಕೆ ಇಳಿಜಾರಿರಬೇಕು. ದಕ್ಷಿಣಕ್ಕೆ ಇಳಿಜಾರಿದ್ದರೆ ರೋಗಕ್ಕೆ ಕಾರಣ. ಉತ್ತರಕ್ಕೆ ಇಳಿಜಾರಿದ್ದರೆ ಸಂಪತ್ತಿನ ಸಂಗ್ರಹ. ಪಶ್ಚಿಮಕ್ಕೆ ಇಳಿಜಾರಿದ್ದರೆ ಶಾಂತಿ ಮತ್ತು ಸಮೃದ್ಧಿ ಭಂಗ. ಮಧ್ಯದಲ್ಲಿ ತಗ್ಗಿದ್ದರೆ ದಾರಿದ್ರ್ಯ. ಮೇರೆಗಳಲ್ಲಿ ತಗ್ಗಿದ್ದರೆ ಸುಖ ಶಾಂತಿ.(ಸ.ಸೂ ೧೫೬-೧೫೭). ಆದರೆ ಉಳಿದ ವಾಸ್ತುಗ್ರಂಥಗಳು ಮಧ್ಯದಲ್ಲಿ ಎತ್ತರವಿರುವ ನಿವೇಶನದಲ್ಲಿ ಮನೆಯನ್ನು ಕಟ್ಟಲೇಬಾರದು ಎನ್ನುತ್ತವೆ.
(೧) ಚೌಕಾಕಾರದ ,ಬಿಳಿಮಣ್ಣಿನ ಸಿಹಿರುಚಿಯ , ಸುವಾಸನೆ ಹೊಂದಿರುವ ಅತ್ತಿ ಹಣ್ಣಿನ ಮರವಿರುವ ಉತ್ತರಕ್ಕೆ ಇಳಿಜಾರಿರುವ ನಿವೇಶನ ಬ್ರಾಹ್ಮಣರಿಗೆ, (೨) ಕೆಂಪು ಮಣ್ಣಿನ ಕಹಿ ರುಚಿಯ , ಕಟುಕು ವಾಸನೆಯ , ಅರಳಿ ಮರವಿರುವ ಉದ್ದ ಅಗಲಕ್ಕಿಂತ ೧/೮ ರಷ್ಟು ಹೆಚ್ಚಿರುವ ಪೂರ್ವಕ್ಕೆ ಇಲಿಜಾರಿರುವ ನಿವೇಶನ ಕ್ಷತ್ರಿಯರಿಗೆ. (೩) ಹಳದಿ ಬಣ್ಣದ , ಹುಳಿರುಚಿಯ , ಪ್ಲಾಕ್ಷ ಮರವಿರುವ ಉದ್ದ ಅಗಲಕ್ಕಿಂತ ೧/೬ ರಷ್ಟು ಹೆಚ್ಚಿರುವ , ಪಶ್ಚಿಮಕ್ಕೆ ಇಳಿಜಾರಿರುವ ನಿವೇಶನ ವೈಶ್ಯರಿಗೆ (೪) ಕಪ್ಪು ಬಣ್ಣದ ಅಸಮ ವಾಸನೆಯ ಉದ್ದ ಅಗಲಕ್ಕಿಂತ ೧/೪ ರಷ್ಟು ಹೆಚ್ಚಿರುವ ದಕ್ಷಿಣಕ್ಕೆ ಇಳಿಜಾರಿರುವ ನಿವೇಶನ ಶೂದ್ರರಿಗೆ ಅನ್ವಯಿಸುತ್ತವೆ. (ಮ.ಮ ೨/೧೦-೧೫, ಮಾ.ಸಾ ೩/೮-೧೦) ಇದರಂತೆಯೇ ಸೂತ್ರಧಾರ ಮಂಡನ (ರಾಜವಲ್ಲಭ ) ಬಿಳಿಬಣ್ಣದ ತುಪ್ಪದ ವಾಸನೆ ಹೊಡೆಯುತ್ತಿರುವ ಮಣ್ಣಿರುವ ನಿವೇಶನ ಬ್ರಾಹ್ಮಣರಿಗೆ , ಕೆಂಪು ಬಣ್ಣದ ಘಾಟು ಘಾಟಿನ ವಾಸನೆಯ ನಿವೇಶನ ಕ್ಷತ್ರಿಯರಿಗೆ , ಹಳದಿ ಬಣ್ಣದ ಸಾಸಿವೆ ಎಣ್ಣೆ ವಾಸನೆಯ ನಿವೇಶನ ವೈಶ್ಯರಿಗೆ , ಕಪ್ಪು ಬಣ್ಣದ ಮೀನಿನ ವಾಸನೆಯ ನಿವೇಶನಗಳು ಶೂದ್ರರಿಗೆ ಸೂಕ್ತ. ಎನ್ನುತ್ತದೆ. ಮತ್ಸ್ಯಪುರಾಣ ನಿವೇಶನ ಕೇವಲ ನೀರಿಗೆ ಮಳೆ ಆಧಾರಿತವಾಗಿರಬಾರದು. ಅದರ ಸನಿಹ ನೈಸರ್ಗಿಕ ನೀರಿನ ಮೂಲಗಳಿರಬೇಕು. ಹಾವು , ಚೇಳು ಲೂಟಿಕೊರರಿಂದ ಮುಕ್ತವಾಗಿರಬೇಕುಎಂದು ಎಚ್ಚರಿಸುತ್ತದೆ. ನಿವೇಶನದಲ್ಲಿ ಯಾವ ಮರಗಳು ಇರಬೇಕು ಎನ್ನುವುದು ವಾಸ್ತುಗ್ರಂಥಗಳಲ್ಲಿ ಚರ್ಚೆಯ ವಸ್ತುವಾಗಿದೆ. ವಾಸ್ತುಮಂಡನದ ಪ್ರಕಾರ ಹಗಲಿನಲ್ಲಿ ಮೂರುಗಂಟೆಗಳಿಗೂ ಅಧಿಕ ಕಾಲ ನೆರಳು ನೀಡುವ ಮರಗಳಿರಬಾರದು. (ವಾ.ಮಂ ೧/೮೪., ೮೫)
ಮತ್ಸ್ಯ ಪುರಾಣ ಯಾವ ಜಾತಿಯವರಿಗೆ ಯಾವ ನಿವೇಶನ ಸೂಕ್ತ ಎಂದು ನಿರ್ಧರಿಸಲು ಒಂದು ಅಧ್ಬುತವಾದ (!) ಪರೀಕ್ಷೆ ನೀಡಿದೆ. ನಿವೇಶನದಲ್ಲಿ ಒಂದು ಆಳದ ಗುಂಡಿ ತೆಗೆದು ಅದರಲ್ಲಿ ನಾಲ್ಕು ದಿಕ್ಕುಗಳಲ್ಲಿ ಬತ್ತಿಗಳಿರುವ ಎಣ್ಣೆ ದೀಪ ಉರಿಸಬೇಕು. ಪೂರ್ವದ ಬತ್ತಿ ಹೆಚ್ಚು ಬೆಳಗಿದರೆ ಬ್ರಾಹ್ಮಣರಿಗೆ , ಉತ್ತರದ ಬತ್ತಿ ಬೆಳಗಿದರೆ ಕ್ಷತ್ರಿಯರಿಗೆ , ಪಶ್ಚಿಮದ ಬತ್ತಿ ಬೆಳಗಿದರೆ ವೈಶ್ಯರಿಗೆ , ದಕ್ಷಿಣದ ಬತ್ತಿ ಬೆಳಗಿದರೆ ಶೂದ್ರರಿಗೆ ನಿವೇಶನ ಸೂಕ್ತವೆಂದು ಪರಿಗಣಿಸಬೇಕು. ಎಲ್ಲ ಬತ್ತಿಗಳು ಬೆಳಗಿದರೆ ಅಂತಹ ನಿವೇಶನ ಎಲ್ಲ ವರ್ಣದವರಿಗೆ ಸರಿಹೊಂದುತ್ತದೆ.
ಮನೆಕಟ್ಟುವ ಮೊದಲು ನಿವೇಶನವನ್ನು ಉತ್ತು ವಿವಿಧ ಬಗೆಯ ಬೀಜಗಳಿಂದ ಬಿತ್ತಬೇಕು. ಮೂರು , ಐದು , ಏಳು ದಿನಗಳಲ್ಲಿ ಬರುವ ಮೊಳಕೆಯನ್ನು ನೋಡಿ ಮನೆ ಕಟ್ಟಲು ಅದರ ಸಮರ್ಪಕತೆಯನ್ನು ನಿಶ್ಚಯಿಸಬೇಕೆಂದು ಸಹ ತಿಳಿಸಲಾಗಿದೆ. (ಮ.ಪು ೨೫೩/೧೮) ವೈಖಾನಸಾಗಮ ನಿವೇಶನದಲ್ಲಿ ಬೀಜ ಬಿತ್ತಿದ ನಂತರ ಮೊಳಕೆ ಬರದಿದ್ದರೆ ಉಳಿದೆಲ್ಲ ಆಚರಣೆಗಳು ವ್ಯರ್ಥ ಎನ್ನುವ ಅಪ್ಪಣೆ ಕೊಡುತ್ತದೆ. ಅಗ್ನಿಪುರಾಣ ಹಸುಗಳಿಂದ ಮಾತ್ರ ನಿವೇಶನವನ್ನು ಊಳಬೇಕು ಎಂದು ತಾಕೀತು ಮಾಡುತ್ತದೆ. (ಅ.ಪು ೩೯/೧೮)
ಕೆಲವು ವಾಸ್ತುಗ್ರಂಥಗಳಲ್ಲಿ ಮೇಲ್ವರ್ಗದವರಿಗೆ ಹೊಂದುವ ಮಣ್ಣಿನ ಪ್ರದೇಶದಲ್ಲಿ ಕೆಳವರ್ಗದವರು ಮನೆಕಟ್ಟಬಾರದು ಮತ್ತು ವಾಸಿಸಬಾರದೆಂಬ ನಿರ್ಬಂಧ ಹೇರಲಾಗಿದೆ.(ಮಾ.ಸಾ. ೧೮-೨೯) . ಹೀಗೆ ಮಾಡಿದ್ದೇ ಆದರೆ ದೇವರ ಅವಕೃಪೆಗೆ ಒಳಗಾಗುವುದು ತಪ್ಪದೆಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಬ್ರಾಹ್ಮಣರು ನಿವೇಶನದ ಆಕಾರ ಚೌಕ,ಆಯತ, ವೃತ್ತ , ದೀರ್ಘ ಹೇಗೆ ಇರಲಿ , ಅಲ್ಲಿನ ಮಣ್ಣು ಬಿಳಿ , ಕರಿ ಕೆಂಪು ಎಂತಹುದೇ ಇರಲಿ , ಹುಳಿ-ಸಿಹಿ ಯಾವುದೇ ಆಗಿರಲಿ ಅವರಿಗೆ ಅನುಕೂಲಕರವಾಗಿದ್ದರೆ , ಬುನಾದಿಗೆ ಗಟ್ಟಿ ನೆಲ ಸಿಕ್ಕರೆ ಸಾಕು ಮನೆಯನ್ನು ಕಟ್ಟಬಹುದೆಂಬ ವಿನಾಯಿತಿ ನೀಡಲಾಗಿದೆ. ಪ್ರತಿಯೊಂದು ವರ್ಣದವರಿಗೂ ನಿಗದಿಪಡಿಸಲಾದ ಮಣ್ಣಿನ ಗುಣಗಳು ಸಿಗುವುದು ಕಠಿಣವಾದುದರಿಂದ ಮಣ್ಣಿನಲ್ಲಿ ಇನ್ನು ಮೂರೂ ಹೆಚ್ಚುವರಿ ವರ್ಗಗಳನ್ನು ಮಾಡಿ ಇವುಗಳಲ್ಲಿ ಮೊದಲೆರಡು ಮಣ್ಣಿರುವ ನಿವೇಶನಗಳು ಎಲ್ಲ ವರ್ಣಗಳಿಗೂ ಸೂಕ್ತವೆಂದು ಪರಿಗಣಿಸಲಾಗಿದೆ.
ಸಿಂಹಳ ಮಯಮತಯದ ಪ್ರಕಾರ ಹುತ್ತವಿರುವ ನಿವೇಶನ ಶ್ರೇಷ್ಟವಾದುದುದು. ಅದು ಅಧೋಲೋಕದ ಮಾರ್ಗ. ಆದರೆ ಮಾನಸಾರ , ಮಯಮತ ಸೇರಿದಂತೆ ಉಳಿದೆಲ್ಲ ವಾಸ್ತುಗ್ರಂಥಗಳು ನಿವೇಶನದಲ್ಲಿ ಹುತ್ತವಿದ್ದರೆ ಅಮಂಗಳ , ಮನೆಯಲ್ಲಿ ನೆಲೆಸುವ ಹೆಣ್ಣುಮಕ್ಕಳಿಗೆ ಪೀಡಕಾರಕ ಎನ್ನುತ್ತವೆ. ಇನ್ನು ಕೆಲವು ಗ್ರಂಥಗಳ ಪ್ರಕಾರ ಪೂರ್ವ, ನೈರುತ್ಯ , ವಾಯುವ್ಯ , ಈಶಾನ್ಯದತ್ತ ಮುಖ ಮಾಡಿರುವ ಮನೆಗಳಿಗೆ ಹುತ್ತಗಳಿದ್ದರೆ ಒಳ್ಳೆಯದು. ಒಮ್ಮೆ ಪಶ್ಚಿಮದತ್ತ ಇಳಿಜಾರಿರುವ ನಿವೇಶನ ಶೂದ್ರರಿಗೆ ಮಾತ್ರ. ಉಳಿದಂತೆ ಅದು ಅಮಂಗಳಕರ ಎನ್ನುವ ಗ್ರಂಥಗಳು ಬಾವಿ ಈ ದಿಕ್ಕಿನಲ್ಲಿದ್ದರೆ ಶುಭಕರ ಎಂತಲೂ ಹೇಳುತ್ತವೆ.
ವಾಸ್ತುಗ್ರಂಥಗಳು ನಿವೇಶನಗಳ ಲಕ್ಷಣ ಅವುಗಳ ಸಮರ್ಪಕತೆಯನ್ನು ತಿಳಿಸಿದ ನಂತರ ಭೂಪರೀಕ್ಷೆಯತ್ತ ಹೊರಳುತ್ತವೆ.
ಮಾನಸಾರ ನಿವೇಶನದಲ್ಲಿ ಒಂದು ಅಡಿ ಆಳ ಗುಂಡಿ ತೆಗೆದು ಅದರಲ್ಲಿ ನೀರು ತುಂಬಿಸಬೇಕು. ಅಲ್ಲಿಂದ ನೂರು ಹೆಜ್ಜೆ ಸಾಗಿ ಹಿಂದಕ್ಕೆ ಬರಬೇಕು. ನೀರು ಸ್ವಲ್ಪವೇ ಇಳಿದಿದ್ದರೆ ಉತ್ತಮ , ಕಾಲು ಭಾಗ ಇಳಿದಿದ್ದರೆ ಮಧ್ಯಮ , ಅರ್ಧಕ್ಕಿಂತ ಹೆಚ್ಚು ನೀರು ಇಳಿದಿದ್ದರೆ ತಿರಸ್ಕರಿಸಬೇಕು ಎಂದರೆ ಇದೇ ಪರೀಕ್ಷೆಯನ್ನು ಕಾಶ್ಯಪ ಮತ , ಮತ್ಸ್ಯ ಪುರಾಣ , ರಾಜವಲ್ಲಭ ಸಹ ಕೊಡುತ್ತವೆ. ಮಯಮತ ಇವುಗಳಿಗಿಂತ ಸ್ವಲ್ಪ ಭಿನ್ನವಾಗಿ ಗುಂಡಿಯಲ್ಲಿ ನೀರು ತುಂಬುವ ಪರೀಕ್ಷೆ ಹೇಳುತ್ತದೆ. ಆದರ ಪ್ರಕಾರ ನಿವೇಶನದ ಕೇಂದ್ರದಲ್ಲಿ ಚೌಕಾಕಾರದ ಒಂದು ಮೊಳ ಆಳದ ಗುಂಡಿ ತೆಗೆದು ಮುತ್ತು , ರತ್ನಗಳನ್ನು ತೊಳೆದ ನೀರಿಗೆ ಗಂಧ ಮತ್ತು ಅಕ್ಷತೆಯನ್ನು ಸೇರಿಸಿ ಸಾಯಂಕಾಲ ಗುಂಡಿಯಲ್ಲಿ ಆ ನೀರನ್ನು ತುಂಬಿಸಿ ಮರುದಿನ ಬೆಳಿಗ್ಗೆ ಅದರ ಮಟ್ಟವನ್ನು ನೋಡಬೇಕು. ನೀರಿನ ಮಟ್ಟ ಸ್ವಲ್ಪ ಇಳಿದಿದ್ದರೆ ನಿವೇಶನ ಮನೆ ಕಟ್ಟಲು ಉತ್ತಮ , ಅರ್ಧ ಇಳಿದಿದ್ದರೆರೆ ಮಧ್ಯಮ ನೀರು ಇಂಗಿ ಕೆಸರು ಉಳಿದಿದ್ದರೆ ವಿನಾಶ , ನೀರು ಇಂಗಿ ಸಂಪೂರ್ಣ ಒಣಗಿದ್ದರೆ ಅಂತಹ ನಿವೇಶನದಲ್ಲಿ ಮನೆಕಟ್ಟುವುದು ಸುಖ , ಸಮೃದ್ಧಿಯ ನಾಶ ಎಂದು ತಿಳಿಸುತ್ತದೆ. (ಮ.ಮ ೪/೧೦-೧೫)
ನಿವೇಶನದ ಮಧ್ಯದಲ್ಲಿ ಮೊಳಕೈ ಆಳದ ಗುಂಡಿಯನ್ನು ತೆಗೆದು ಅದರಿಂದ ಬಂದ ಮಣ್ಣನ್ನು ಮತ್ತೊಮ್ಮೆ ಹಿಂದಕ್ಕೆ ತುಂಬಬೇಕು. ಹಾಗೆ ತುಂಬಿದಾಗ ಮಣ್ಣು ಮಿಕ್ಕಿದರೆ ಉತ್ತಮ , ಸರಿಯಾದರೆ ಮಧ್ಯಮ , ಕೊರತೆಯಾದರೆ ಅಧಮವೆಂದು ಮಣ್ಣಿನ ಗುಣವನ್ನು ನಿರ್ಧರಿಸಬೇಕೆಂದು ಕಾಶ್ಯಪ ,ಮಯಮತ, ವಾಸ್ತುಮಂಡನ ಮತ್ತು ಮಯಮತಗಳು ಹೇಳುತ್ತವೆ.(ಮ.ಮ ೪/೫-೮)
ಮಾನಸಾರ , ಮಯಮತ ಎರಡರ ಪ್ರಕಾರ ಕಟ್ಟಡ ನಿರ್ಮಾಣದ ಮುಖ್ಯಸ್ಥ ಸ್ಥಪತಿ. ನಿವೇಶನ ಮತ್ತು ಅಲ್ಲಿನ ಮಣ್ಣಿನ ಪರೀಕ್ಷೆಯಾದ ನಂತರ ಸ್ಥಪತಿ ಶುಚಿಯಾದ ಹೂಮಾಲೆಗಳನ್ನು ಧರಿಸಿ ನಿವೇಶನದಲ್ಲಿ ಬಲಿ ಅರ್ಪಿಸಿ ,ಪವಿತ್ರ ನೀರು ಚಿಮುಕಿಸಿ ದುಷ್ಟ ಶಕ್ತಿಗಳನ್ನು ಉಚ್ಛಾಟಿಸಬೇಕು. ಅಲ್ಲಿ ಪೂಜೆಯ ವಿಧಿ ವಿಧಾನಗಳನ್ನು ಪೂರೈಸಿ , ಪವಿತ್ರ ಜಲವನ್ನು ನಿವೇಶನದ ನಾಲ್ಕು ಮೂಲೆಗಳಿಗೆ ಸಿಂಪಡಿಸಿ ನೆಲವನ್ನು ಶುದ್ಧೀಕರಿಸಿ ಶುಭಮುಹೂರ್ತದಲ್ಲಿ ನಿವೇಶನದ ಉಳುಮೆಯನ್ನು ಪ್ರಾರಂಭಿಸಬೇಕು. ವಾಸ್ತುಶಾಸ್ತದ ಪ್ರಕಾರ ಉಳುಮೆ ಕಟ್ಟಡ ನಿರ್ಮಾಣದ ಪ್ರಮುಖ ಅಂಗ. ಉಳಲು ಬಳಸುವ ನೇಗಿಲು ಖದಿರ , ನಿಂಬೆ ಅಥವಾ ಯಾವುದಾದರು ಹಾಲೊಸರುವ ಮರದ್ದಾಗಿರಬೇಕು , ಒಂದೂವರೆ ಮೊಳ ಉದ್ದವಾಗಿರಬೇಕು , ಅದರ ಮುಂದಿನ ಆರು ಅಂಗಲ ಚೂಪಾಗಿರಬೇಕು, ನೊಗ ಮೂರು ಗಜ ಉದ್ದವಿರಬೇಕು , ಅದಕ್ಕೆ ಹಿಡಿದ ಎತ್ತುಗಳು ಸಮಗಾತ್ರ , ಒಂದೇ ಬಣ್ಣವಿದ್ದು ಅವುಗಳ ಗೊರಸು , ಕಿವಿಗಳಿಗೆ ಬೆಳ್ಳಿಯ ಗೆಜ್ಜೆ , ವಾಲೆ ಹಾಕಿರಬೇಕು. ಕೊಂಬಿಗೆ ಬೆಳ್ಳಿಯ ಕೋಡೆಣಸು ಹಾಕಿರಬೇಕು ಎತ್ತಿನ ಗುಣ ಲಕ್ಷಣಗಳು ಹೇಗಿರಬೇಕೆಂಬ ಸುದೀರ್ಘ ವಿವರಣೆಗಳಿವೆ. ಸ್ಥಪತಿ ಮೊದಲ ಮೂರು ಸುತ್ತು ಸುತ್ತಿ ಊಳಿದ ನಂತರ ಉಳಿದದ್ದನ್ನು ಶೂದ್ರರು ಊಳಬೇಕು. ನಂತರ ನೇಗಿಲು ಮತ್ತು ಅಲಂಕರಿಸಿದ ಎತ್ತುಗಳನ್ನು ಸ್ಥಪತಿಗೆ ಕೊಡಬೇಕು.
ಮನೆ ಊರು ಯಾವುದರ ನಿರ್ಮಾಣವೇ ಇರಲಿ ಈ ಆಚರಣೆ ಸಾಗಬೇಕು. ನೆಲವನ್ನು ಉತ್ತ ನಂತರ ಎಳ್ಳು , ಹುರುಳಿ ಮುಂತಾದ ಧಾನ್ಯಗಳನ್ನು ಬಿತ್ತಿ ಬೆಳೆಸಬೇಕು. ಬೆಳೆದುನಿಂತ ಬೆಳೆಯನ್ನು ಹಸುಗಳ ಮೇಯಲು ಬಿಡಬೇಕು. ಅವುಗಳ ಕಟಬಾಯಿ ಜೊಲ್ಲು, ಸೆಗಣಿ ಮತ್ತು ಗಂಜಲದಿಂದ ನೆಲ ಶುದ್ಧಿಯಾಗಿ ನಿರ್ಮಾಣ ಚಟುವಟಿಕೆಗಳಿಗೆ ಮುಕ್ತವಾಗುತ್ತದೆ. ಇದಾದ ಮೇಲೆ ಭೂದೇವತೆಗಳನ್ನು ಪೂಜಿಸಿ ನಿವೇಶನದ ಕೆಂದ್ರ ಭಾಗದಲ್ಲಿ ನಿರ್ಮಾಣವನ್ನು ಪ್ರಾರಂಭಿಸಬೇಕು. ಅಧ್ಯಾಯ ೫ ರಲ್ಲಿ ಭೂದೇವತೆಗಳನ್ನು ತೃಪ್ತಿ ಪಡಿಸುವ ಹಲವಾರು ಪೂಜೆ, ವಿಧಿ ವಿಧಾನಗಳನ್ನು ನೀಡಲಾಗಿದೆ. (ಮಾ.ಸಾ ೪/೨೬-೪೦) ವಿಷ್ಣು ಧರ್ಮೋತ್ತರ ಪುರಾಣ ನಿರ್ಮಾಣಕ್ಕೆ ಮೊದಲು ನಿವೇಶನವನ್ನು ಕಾಸ , ಸಾರ , ಕುಶ , ದೂರ್ವಗಳನ್ನು ಹರಡಿ ಮುಚ್ಚಿಬೇಕೆಂದು ತಿಳಿಸುತ್ತದೆ. (ವಿ.ಧ. ಪು ೯೩/೩೨) ಮಯಮತ ಪ್ರತಿಯೊಂದು ವಿಧಿ-ಆಚರಣೆ ನಡೆದಾಅಗಲೂ ಬ್ರಾಹ್ಮಣರಿಗೆ ಬಟ್ಟೆ , ದವಸ , ಧಾನ್ಯ , ಬಂಗಾರ , ನಾಲ್ಕು ವರ್ಷದ ಹಸುವನ್ನು ದಕ್ಷಿಣೆಯಾಗಿ ನೀಡಬೇಕೆಂದು ತಿಳಿಸುತ್ತದೆ.
ವಾಸದ ಮನೆಗಳನ್ನು ಪ್ರಾರಂಭಿಸುವಾಗ ಪೂರ್ವದ ಮೊದಲ ಇಟ್ಟಿಗೆಯ ಮೇಲೆ ‘ಶ’ ದಕ್ಷಿಣದ ಮೊದಲ ಇಟ್ಟಿಗೆಯ ಮೇಲೆ ‘ಷ’ , ಪಶ್ಚಿಮದ ಮೊದಲ ಇಟ್ಟಿಗೆಯ ಮೇಲೆ ‘ಸ’ ಉತ್ತರದ ಮೊದಲ ಇಟ್ಟಿಗೆಯ ಮೇಲೆ ‘ಹ’ ಹಾಗು ಕೇಂದ್ರದಲ್ಲಿ ‘ಓಂ’ ಅಕ್ಷರಗಳನ್ನು ಬರೆದ ಇಟ್ಟಿಗೆಗಳ ಮೇಲೆ ಬರೆಯಬೇಕು. ಪೂರ್ವದ ಇಟ್ಟಿಗೆ ದಕ್ಷಿಣಕ್ಕೆ , ದಕ್ಷಿಣದ ಇಟ್ಟಿಗೆ ಪಶ್ಚಿಮಕ್ಕೆ , ಪಶ್ಚಿಮದ ಇಟ್ಟಿಗೆ ಉತ್ತರಕ್ಕೆ , ಉತ್ತರದ ಇಟ್ಟಿಗೆ ಪೂರ್ವಕ್ಕೆ ತಿರುಗಿರಬೇಕು. ಮನೆಯ ಕೇಂದ್ರ ಸ್ಥಾನದಲ್ಲಿ ಗಿಡ ಮೂಲಿಕೆಗಳನ್ನು ಮನೆಯ ಯಜಮಾನ ಮತ್ತು ಮುಖ್ಯಶಿಲ್ಪಿ ಒಬ್ಬರಾದ ನಂತರ ಒಬ್ಬರಂತೆ ಇಡಬೇಕು .(ಮಾ.ಸಾ ೧೨/೯೫-೧೦೫) ಎನ್ನುವಂಥ ಶಿಫಾರಸ್ಸುಗಳನ್ನು ಸಹ ವಾಸ್ತುಗ್ರಂಥಗಳು ನೀಡುತ್ತವೆ.
ಸಂಸ್ಕೃತದಲ್ಲಿ ವರ್ಣ ಎಂದರೆ ಬಣ್ಣ ಎಂತಲೂ ಮತ್ತು ಜಾತಿಯೆಂದು ಸಹ ಅರ್ಥವಿದೆ. ಮೇಲಿನ ಹೇಳಿಕೆಗಳು ಚಾತುರ್ವರ್ಣ ಎಂಬ ಅರ್ಥವನ್ನು ಸಹ ತಳೆಯುತ್ತವೆ. ಇಲ್ಲಿ ಬಿಳಿ ಬ್ರಾಹ್ಮಣರ ಶುದ್ಧತೆ , ಕೆಂಪು ಕ್ಷತ್ರಿಯರ ಹೋರಾಟ ಪ್ರಿಯತೆ , ಹಳದಿ ವೈಶ್ಯರ ಬಂಗಾರ ಪ್ರಿಯತೆ , ಕಪ್ಪು ಅರ್ಯೇತರ ಶೂದ್ರರ ಬಣ್ಣವಾಗಿದೆ. ನಿವೇಶನಗಳಲ್ಲಿ ಇರಬೇಕಾದ ಮರಗಳನ್ನೂ ಸಹ ಇದೆ ಆಧಾರದ ಮೇಲೆ ಶಿಫಾರಸ್ಸು ಮಾಡಲಾಗಿದೆ. ಒಂದೊಂದು ವರ್ಣದವರ ನಿವೇಶನ ಒಂದೊಂದು ದಿಕ್ಕಿನಲ್ಲಿ ಇಳಿಜಾರಿರಬೇಕು ಎಂದು ಹೇಳಲಾಗಿದೆ.
ನೆಲವೊಂದೆ ಹೊಲಗೇರಿ ಶಿವಾಲಯಕೆ. ಜಲವೊಂದೆ ಶೌಚಾಚಮನಕೆ-ಎಂದು ಹನ್ನೆರಡನೆ ಶತಮಾನದ ವಚನಕಾರರು ಸಾರಿದ್ದಾರೆ. ಇದರ ಅರ್ಥವೆಂದರೆ ನಿಸರ್ಗದಲ್ಲಿ ಮೇಲು ಕೀಳುಗಳಿಲ್ಲ , ವರ್ಣ , ಜಾತಿ ಭೇದಗಳಿಲ್ಲ , ದೇಶ , ಭಾಷೆಗಳಿಲ್ಲ ಎಂದಷ್ಟೇ. ಆದರೆ ವಾಸ್ತುಶಾಸ್ತ್ರ ಒಂದೊಂದು ವರ್ಣದವರಿಗೆ ಒಂದೊಂದು ಬಗೆಯ ನಿವೇಶನ ,ಒಂದೊಂದು ಇಳಿಜಾರು, ಮಣ್ಣಿನ ಗುಣಗಳನ್ನು ಶಿಫಾರಸ್ಸು ಮಾಡುವುದರ ಮೂಲಕ ನಿಸರ್ಗ ತತ್ವಕ್ಕೆ ವಿರುದ್ಧವಾಗಿದೆ. ಊರು ಇರಬಹುದಾದ ಒಂದು ವಿಶಾಲ ಭೂ ಪ್ರದೇಶದಲ್ಲಿ ಜಾತಿವಾರು ಮಣ್ಣಿನ ಗುಣ , ಇಳಿಜಾರುಗಳನ್ನು ಹೇಳುವುದು ಇಂತಹ ನಿವೇಶನಗಳಲ್ಲಿ ಇಂತಹ ಜಾತಿಯವರು ಮನೆಕಟ್ಟಬೇಕೆಂದು ಹೇಳುವುದು ಹಾಸ್ಯಾಸ್ಪದವಾಗಿದ್ದು , ವಾಸ್ತವಿಕ ಸಂಗತಿಗಳಿಂದ ದೂರ ಸರಿದಿದೆ. ವಾಸ್ತುಶಾಸ್ತ್ರದ ಗ್ರಂಥಗಳು ಹೇಳುವಂತಹ ಗುಣಗಳಿರುವ ನಿವೇಶನಗಳು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಆದ್ದರಿಂದ ವಾಸ್ತುಶಾಸ್ತ್ರದ ಋಷಿ–ಮುನಿಗಳು ತಮಗೆ ಅನುಕೂಲಕರವಾದ ಜಾಗದಲ್ಲಿ ಮಾತ್ರ ಮನೆ ಕಟ್ಟಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಅವರು ಬಿಸಿಲಿಗೆ ಬೆಂದು , ಮಳೆಗೆ ನೆಂದು , ಗಾಳಿಗೆ ಆರಿ ರೋಗಗ್ರಸ್ತರಾಗಬೇಕಾಗುತ್ತದೆ. ಬೆಟ್ಟ , ಗುಡ್ಡ, ಕಾಡು, ಕೃಷಿ ಭೂಮಿ , ನೀರಿನ ಮೂಲ , ತಣ್ಣನೆಯ ಗಾಳಿ , ಸಂಪದ್ಭರಿತ ಫಲಗಳನ್ನು ಹೊಂದಿರುವ ಮರಗಳು ತುಂಬಿರುವ ನಿವೇಶನವಾಗಲಿ , ಊರಿನ ಪ್ರದೇಶವಾಗಲಿ ಎಲ್ಲೂ ಇಲ್ಲ.
ವಾಸ್ತುಶಾಸ್ತ್ರಗಳಲ್ಲಿರುವ ಭೂ ಮತ್ತು ಮಣ್ಣಿನ ಪರೀಕ್ಷೆಯ ತತ್ವಗಳು ಆಧುನಿಕ ದೃಷ್ಟಿಯಲ್ಲಿ ಅಸಂಬದ್ಧವೆನಿಸುತ್ತವೆ. ಇದು ಆಶ್ಚರ್ಯಕರವೇನೂ ಅಲ್ಲ. ಏಕೆಂದರೆ ಜಗತ್ತಿನಾದ್ಯಂತ ಮಣ್ಣನ್ನು ನಿರ್ಮಾಣ ಸಾಮಗ್ರಿಯಾಗಿ ಸಾವಿರಾರು ವರ್ಷಗಳಿಂದ ಎಲ್ಲ ನಾಗರಿಕತೆಗಳು ಬಳಸುತ್ತಿದ್ದರೂ ಅದು ಎಂದಿಗೂ ವೈಜ್ಞಾನಿಕ ತತ್ವ , ಸಂಶೋಧನೆಗಳ ಮೇಲೆ ಬೆಳೆದುಬಂದಿರಲಿಲ್ಲ. ೨೦ ನೆ ಶತಮಾನದ ಮೊದಲ ದಶಕಗಳವರೆಗೆ ಕಲ್ಲು , ಮಣ್ಣು ಇತ್ಯಾದಿ ಸಾಮಗ್ರಿಗಳ ಗುಣ ಲಕ್ಷಣಗಳನ್ನು ಹೇಗೆ ಅರಿಯಬೇಕು, ಭೌತಶಾಸ್ತ್ರದ ಯಾವ ನಿಯಮಗಳನ್ನು ಅನ್ವಯಿಸಿ ಅಧ್ಯಯನ ನಡೆಸಬೇಕು ಎರಡು ಮಣ್ಣುಗಳ ನಡುವಿನ ವ್ಯತ್ಯಾಸಗಳನ್ನು ಹೇಗೆ ನಿರ್ದಿಷ್ಟವಾಗಿ ಹೇಳಬಹುದು , ಯಾವ ಮಣ್ಣಿನಲ್ಲಿ ಬುನಾದಿಯನ್ನು ಎಷ್ಟು ಆಳಕ್ಕೆ ಒಯ್ಯಬೇಕು ,ಮಣ್ಣು ಕಟ್ಟಡದ ಭಾರವನ್ನು ಹೇಗೆ ಹೊರುತ್ತದೆ , ಯಾವ ಮಣ್ಣು ಎಷ್ಟು ಹೊರೆಯನ್ನು ತಾಳಬಲ್ಲುದು , ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಇಪ್ಪತ್ತನೇ ಶತಮಾನಕ್ಕೂ ಮೊದಲು ನಿರ್ಮಿಸಿದ ಎಲ್ಲ ಕಟ್ಟಡಗಳ ಬುನಾದಿಗಳು ಅನುಭವ ಆಧಾರಿತವಾಗಿದ್ದವೇ ಹೊರತು ,ಭೌತಿಕ ಗುಣಧರ್ಮಗಳ ಮೇಲೆ ವೈಜ್ಞಾನಿಕ ನೆಲೆಯಲ್ಲಿ ಸ್ಥಾಪಿತವಾಗಿರಲಿಲ್ಲ. ಎಲ್ಲ ಪ್ರಾಚಿನ ಭವ್ಯ ಕಟ್ಟಡಗಳ ಬುನಾದಿಗಳು ಹಲವು ಹಂತದ ಕಟ್ಟೆಗಳ ರೂಪದಲ್ಲಿದ್ದವು. ಇದರಿಂದ ಎತ್ತರದ ಗೋಪುರದಿಂದ ನೆಲಕ್ಕೆ ಹೋಗುವ ಭಾರ ತೀವ್ರತೆ ಅದರ ಸಾಮರ್ಥ್ಯಕ್ಕಿಂತ ಹಲವಾರು ಪಟ್ಟು ಕಡಿಮೆ ಇರುತ್ತಿದ್ದಿತು. ಕಟ್ಟಡದ ಬುನಾದಿಗಳು ಸುರಕ್ಷಿತವಾಗಿರಲು ಇದಕ್ಕಿಂತ ಹೆಚ್ಚಿನ ಯಾವ ಕಾರಣಗಳು ಇರಲಿಲ್ಲ. (ಮುಂದೆ ಈ ಕುರಿತಾಗಿ ವಿವರಣೆ ಇದೆ.)
ಇಪ್ಪತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ ಸಿವಿಲ್ ಇಂಜಿನಿಯರಿಂಗ್^ನಲ್ಲಿ ಭೂತಂತ್ರಜ್ಞಾನ ಇಂಜಿನಿಯರಿಂಗ್ ಒಂದು ಪ್ರಮುಖ ಶಿಸ್ತಾಗಿ ಬೆಳೆಯಲಾರಂಭಿಸಿತು. ಆಸ್ಟ್ರಿಯಾ ಮೂಲದ ಅಮೆರಿಕಾ ಸಂಯುಕ್ತ ಸಂಸ್ಥಾನದ ಎಂ.ಐ.ಟಿಯಲ್ಲಿ ಇಪ್ಪತ್ತು-ಮೂವತ್ತರ ದಶಕದಲ್ಲಿ ಕಾರ್ಲ್ ಟೆರ್ಜಗಿ ಮತ್ತಿತತರರು ನಡೆಸಿದ ಸಂಶೋಧನೆಗಳಿಂದ ಭೂತಂತ್ರಜ್ಞಾನ ಚಿಗುರೊಡೆಯತೊಡಗಿತು. ಸಿವಿಲ್ ಇಂಜಿನಿಯರಿಂಗ್ ಸಮುದಾಯ ಕಾರ್ಲ್ ಟೆರ್ಜಗಿಯನ್ನು ಭೂತಂತ್ರಜ್ಞಾನದ ಪಿತನೆಂದು ಪರಿಗಣಿಸಿದೆ. ಇದಾದ ನಂತರ ಇಪ್ಪತ್ತನೆಯ ಶತಮಾನದಲ್ಲಿ ಹಿಂದೆ ಊಹಿಸಲು ಸಾಧ್ಯವಿಲ್ಲದಂತಹ ಜಟಿಲವಾದ , ವೈವಿಧ್ಯಮಯ ಬುನಾದಿಗಳು ಬಳಕೆಗೆ ಬಂದವು. ಹಿಂದೆ ಅಸಾಧ್ಯವೆಂದು ಭಾವಿಸಲಾಗಿದ್ದ ಮಣ್ಣಲ್ಲಿಯೂ ಸಹ ಬೃಹತ್ ಕಟ್ಟಡಗಳೆದ್ದವು. ಸಮುದ್ರದ ತಳದ ಕೆಳಗೆ ಬೃಹತ್ ಸುರಂಗಗಳು ದೇಶದಿಂದ ದೇಶಕ್ಕೆ ಸಾಗಿದವು , ಸೇತುವೆಗಳು ಸಮುದ್ರದಲ್ಲಿ ಹಾದು ಹೋದವು. ಕುಸಿಯುವ ಸಮುದ್ರ ದಡದ ಮರಳಿನಲ್ಲಿ , ಹೂಳು ನೆಲದಲ್ಲಿ ನೂರಾರು ಅಂತಸ್ತಿನ ಕಟ್ಟಡಗಳು ತಲೆ ಎತ್ತಿ ನಿಲ್ಲುವಂತೆ ಬುನಾದಿಗಳನ್ನು ಸಿದ್ಧಪಡಿಸಲಾಯಿತು. ಜಪಾನಿನಂತಹ ಭೂಕಂಪ ಪೀಡಿತ ದೇಶಗಳಲ್ಲಿ ಪಲ್ಲಟಗೊಂಡು ಭೂಕಂಪನದ ಪರಿಣಾಮಗಳನ್ನು ತಗ್ಗಿಸುವ ತಂತ್ರಜ್ಞಾನದ ಬುನಾದಿಗಳು ಸಹ ಅಸ್ತಿತ್ವಕ್ಕೆ ಬಂದವು. ಈಗ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಸಾಗುತ್ತಿರುವ ಬೃಹತ್ ನಿರ್ಮಾಣ ಚಟುವಟಿಕೆಗಳಲ್ಲಿ ಭೂ ತಂತ್ರಜ್ಞಾನ ಹಾಸುಹೊಕ್ಕಾಗಿದೆ.
ಈಗ ಸಿವಿಲ್ ಇಂಜಿನಿಯರಿಂಗ್^ನಲ್ಲಿ ಭೂ ತಂತ್ರಜ್ಞಾನ ವ್ಯಾಪಕವಾಗಿ ಬೆಳೆದು ಭೂಮಿಯಾಚೆಯ ನೆಲೆಗಳಲ್ಲೂ ಬೃಹತ್ ನಿರ್ಮಾಣಗಳನ್ನು ಕೈಗೊಳ್ಳಲು ನೆರವಾಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಭಾರತ ಮಾನಕ ಸಂಸ್ಥೆ (Bureau of Indian Standards) ಭೂ ತಂತ್ರಜ್ಞಾನ ಕುರಿತಾಗಿ ೨೦೦ ಕ್ಕೂ ಅಧಿಕ ಅನುಷ್ಠಾನ ಸಂಹಿತೆಗಳನ್ನು (Code of Practice) ಹೊರತಂದಿದೆ (ಈ ಬಗ್ಗೆ ನೀವು ಕುತೂಹಲಿಗಲಾಗಿದ್ದರೆ ಸಿವಿಲ್ ಇಂಜಿನಿಯರ್^ಗಳನ್ನು ಸಂಪರ್ಕಿಸಿರಿ. ಅವರು ಭೂತಂತ್ರ ಜ್ಞಾನದ ವಿಶ್ವರೂಪದ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ.) ಇವೆಲ್ಲವನ್ನು ತಿಳಿಯದವರು ‘ಕಟ್ಟಡದ ಬುನಾದಿ ಎರಡಾಳು ಆಳದಲ್ಲಿರಬೇಕು’ ಎನ್ನುವ ವಾಸ್ತುಶಾಸ್ತ್ರದ ಯಾವುದೋ ಶ್ಲೋಕವನ್ನು ಉದ್ದರಿಸಿ ಅದರಲ್ಲಿ ಭೂಕಂಪ ತಾಳಿಕೊಳ್ಳುವ ನಿರ್ಮಾಣದ ತಂತ್ರಗಳಿವೆ ಎಂದು ಹೇಳುವುದು ಅಜ್ಞಾನದ ಪರಮಾವಧಿಯಾಗುತ್ತದೆ. ಆಧುನಿಕ ನಿರ್ಮಾಣ ತಂತ್ರಜ್ಞಾನ , ಆಧುನಿಕ ನಿರ್ಮಾಣ ಯಂತ್ರ, ತಂತ್ರ , ಉಪಕರಣಗಳು ಬಂದು ವಾಸ್ತುಶಾಸ್ತ್ರ ಯಾವ ನಿವೇಶನ , ಯಾವ ಮಣ್ಣಿನಲ್ಲಿ ಕಟ್ಟಡವನ್ನು ಕಟ್ಟಬಾರದೆಂದು ಹೇಳಿದ್ದಿತೋ ಅಂತಹ ಕಡೆಗಳಲ್ಲಿ ಬೃಹತ್ ನಿರ್ಮಾಣಗಳನ್ನು ಸಾಧ್ಯವಾಗಿಸಿವೆ. ನೀವು ಕೆಲಸ ಮಾಡುತ್ತಿರುವ ಬೃಹತ್ ಕಛೇರಿ ಅಥವಾ ನೀವು ಸಾಗುತ್ತಿರುವ ಸೇತುವೆಯ ತಳಹದಿ ಅಂತಹುದೊಂದಿರಬಹುದು.
ನಿಮ್ಮ ಗಮನ ತಪ್ಪಿ ಹೋಗಿರುವ ಮತ್ತೊಂದು ಸಂಗತಿಯನ್ನು ಇಲ್ಲಿ ಹೇಳಬಯಸುತ್ತೇನೆ. ಕಟ್ಟಡ ಯಾವುದೇ ಇರಲಿ ಗುಡಿಸಿಲಿನಿಂದ ಅರಮನೆಯವರೆಗೆ , ರೈಲ್ವೆ –ವಿಮಾನ ನಿಲ್ದಾಣದಿಂದ ಪಂಚತಾರ ಹೋಟೆಲಿನವರೆಗೆ , ಸರ್ಕಾರ ಅಭಿವೃದ್ಧಿ ಪಡಿಸಲು ಯೋಜಿಸಿರುವ ಜ್ಞಾನನಗರ ಸೇರಿದಂತೆ ಇಡೀ ಭೂಮಿಯ ಮೇಲಿನ ಯಾವುದೇ ನಿರ್ಮಾಣವಿರಲಿ ವಾಸ್ತುಪಂಡಿತ ತಕ್ಷಣವೇ ಇದು ಈಶಾನ್ಯ ಮೂಲೆ , ಇದು ಕುಬೇರ ಮೂಲೆ , ಇದು ಇಲ್ಲಿರಬೇಕು , ಇದು ಅಲ್ಲಿರಬಾರದೆಂದು , ಇಲ್ಲಿ ನೀರು ಹರಿಯಬೇಕು , ಅಲ್ಲಿ ಭಾರವಿರಬಾರದು ಎಂದು ಘಂಟಾಘೋಷವಾಗಿ ಸಾರುತ್ತಾನೆ. ಅದನ್ನೇ ಭಯಭಕ್ತಿಯಿಂದ ಕೇಳುತ್ತೀರಿ. ಆದರೆ ನಿಮ್ಮ ಮನೆಯ ನಿವೇಶನದ ಮಣ್ಣಿನ ಅರ್ಹತೆಯ ಆಧಾರದ ಮೇಲೆ ವಾಸ್ತುಪಂಡಿತ ಎಂದಾದರೂ ಬುನಾದಿಯನ್ನು ನಿರ್ಧರಿಸಿದ್ದಾನೆಯೇ ? ಅಥವಾ ನೀವು ನಿಮ್ಮ ಮನೆಯ ಬುನಾದಿ ಇಂಜಿನಿಯರ್ ಹೇಳಿದಂತೆ ಹಾಕುವಿರೋ ಅಥವಾ ವಾಸ್ತುಶಾಸ್ತ್ರ ಹೇಳುವಂತೆಯೇ ಸ್ವಲ್ಪ ಯೋಚಿಸಿ-ನೀವೇ ನಿರ್ಧರಿಸಿ. ಇದರ ಅರ್ಥವೆಂದರೆ ವಾಸ್ತುಶಾಸ್ತ್ರ ‘ಅಷ್ಟ ದಿಕ್ಪಾಲಕಾರಿಗೆ ನಿಮ್ಮ ನೀವೇಶನವನ್ನು ಹಂಚುವುದಕ್ಕೆ ಮಾತ್ರ ಸೀಮಿತ. ಬೇರೆಯದಕ್ಕಲ್ಲ. ತಾಂತ್ರಿಕವಾಗಿ ಬಳಸಲು ಬಾರದಂತೆ ಹಳಸಿದ , ತಾತ್ವಿಕವಾಗಿ ನಿಸರ್ಗದ ನಿಯಮಗಳನ್ನು ಕಡೆಗಣಿಸಿ ಮನುಷ್ಯರಲ್ಲಿ ತಾರತಮ್ಯ ಎತ್ತಿ ಹಿಡಿಯುತ್ತಿರುವ ವಾಸ್ತುಶಾಸ್ತ್ರ ಇಂದಿಗೆ ಪ್ರಸ್ತುತವಲ್ಲ.

ಮೊದಲ ಮಾತು -ವಾಸ್ತು ಎಂಬ ವ್ಯಾಧಿ
ಸುವರ್ಣ ೨೪/೭ ಕನ್ನಡ ವಾಹಿನಿಯಲ್ಲಿ ವಾಸ್ತು ಹಾಗೂ ದೋಷ ಪರಿಹಾರ ಕುರಿತಾಗಿ ಏರ್ಪಡಿಸಿದ್ದ ಚರ್ಚೆಯ ನೇರ ಪ್ರಸಾರ ೨೯/೦೪/೨೦೧೧ ರಂದು ಸಂಜೆ ೬.೦ ರಿಂದ ೭.೦ ಗಂಟೆಯ ನಡುವೆ ಪ್ರಸಾರವಾಯಿತು. ಇದರಲ್ಲಿ ಭಾಗವಹಿಸಿದ್ದ ನಾನು ವೈಜ್ಞಾನಿಕ ತಳಹದಿಯ ಮೇಲಿರದ ವಾಸ್ತುಶಾಸ್ತ್ರ ಸ್ವಲ್ಪವೇ ಅಲುಗಿಸಿದರೂ ಸಾಕು ಕುಸಿದು ಬೀಳುವ ಮರಳಿನ ಗೋಪುರವೆಂದು ಹೇಳಿದೆನು. ದೂರದರ್ಶನ ವಾಹಿನಿಯ ಚರ್ಚೆಗಳು ತಮ್ಮ ಸೀಮಿತಾವಧಿಯಲ್ಲಿ ಕೆಲವು ಪ್ರಮುಖ ಸಂಗತಿಗಳ ಬಗ್ಗೆ ಸ್ಥೂಲವಾಗಿ ಶೀರ್ಷಿಕೆಯ ರೂಪದಲ್ಲಿ ಮಾತ್ರ ಚರ್ಚಿಸಲು ಅವಕಾಶ ನೀಡಬಲ್ಲವು. ಅಲ್ಲದೆ ಇದರೊಂದಿಗೆ ಚರ್ಚೆಯಲ್ಲಿ ಭಾಗವಹಿಸುವ ಪರ-ವಿರೋಧ ಬಣಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದೇ ಪ್ರಮುಖ ಗುರಿಯಾಗಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ಜನಜನಿತವಾಗಿರುವ , ಮೇಲ್ನೋಟಕ್ಕೆ ಕಾಣುವಂತಹ ತೆಳುವಾದ ವಾದಗಳಿಗೆ ಆದ್ಯತೆ ದಕ್ಕಿ ಅವು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ವಾಸ್ತು ಪರವಾಗಿ ವಾದಿಸಲು ಬಂದವರಲ್ಲಿ ಹೆಚ್ಚನವರ ಶಿಕ್ಷಣ ಸೀಮಿತವಾಗಿದ್ದು ಆಧುನಿಕತೆ ಮತ್ತು ಜಗತ್ತಿನ ಮೂಲತತ್ವಗಳ ಬಗೆಗೆ ಈವರೆಗೆ ಸ್ಪಷ್ಟವಾಗಿ ತಿಳಿದಿರುವ ಸಂಗತಿಗಳು ಇವರಿಗೆ ಗೊತ್ತಿರುವುದಿಲ್ಲ. ಇವರಲ್ಲಿ ಕೆಲವರು ಹೆಚ್ಚಿನ ಶಿಕ್ಷಣ ಪಡೆದಿದ್ದರೂ ವಿಜ್ಞಾನ-ಧರ್ಮ-ಪುರಾಣಗಳನ್ನು ಎಗ್ಗಿಲ್ಲದೆ ಕಲಬೆರೆಕೆ ಮಾಡುತ್ತ ತಾವು ವಾಸ್ತುಶಾಸ್ತ್ರವನ್ನು ಆಧುನಿಕ ವೈಜ್ಞಾನಿಕ ಅಡಿಗಟ್ಟಿನ ಮೇಲಿರಿಸಿದೆವೆಂದು ಬೀಗುತ್ತಾರೆ. ಅತ್ಯಲ್ಪ ಸಂಖ್ಯೆಯ ಈ ಬಣದವರಿಗೆ ವಾಸ್ತುಶಾಸ್ತ್ರ ವೈಜ್ಞಾನಿಕ ಅಡಿಗಟ್ಟಿನ ಮೇಲಿಲ್ಲವೆಂದು ತಿಳಿದಿರುತ್ತದಾದರೂ ಅದರಿಂದ ಅವರಿಗೇನೂ ಲಾಭವಿಲ್ಲ, ಆದ್ದರಿಂದ ಇವರು ತಮ್ಮ ವೈಜ್ಣಾನಿಕ ಅರಿವನ್ನು ಹಿಂದಕ್ಕಿಟ್ಟು ಸತ್ಯ ಗೊತ್ತಿದ್ದರೂ ಮುಚ್ಚಿಟ್ಟು ಲಾಭಕರವಾದುದನ್ನು ಆರಿಸಿಕೊಳ್ಳುತ್ತಾರೆ. ವಾಸ್ತುಪರರಾದ ಈ ಮೂರು ಬಗೆಯವರಲ್ಲೂ ಲಾಭದಾಸೆಯೇ ಹಿನ್ನೆಲೆಯಲ್ಲಿರುತ್ತದೆ. ವಾಸ್ತುವನ್ನು ವಿರೋಧಿಸುವವರಲ್ಲಿ ಬಹುತೇಕರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತರದಾಯಿತ್ವ ಹೊಂದಿದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ವಾಸ್ತುಪರ ವಾದಿಗಳಿಗೆ ತಾವು ಮಾಡುವ ಯಾವ ಕೆಲಸಕ್ಕೂ ಉತ್ತರ ನೀಡುವ ಅಗತ್ಯತೆ ಇಲ್ಲವೆನ್ನುವುದು ಸತ್ಯ. ವಾಸ್ತು ಸಲಹೆಯಿಂದ ಯಾವ ಫಲಿತಾಂಶಗಳೂ ದಕ್ಕದಿದ್ದರೂ ಅವರು ಗ್ರಾಹಕರಿಗೆ ನೀಡಿದ ಸೇವೆಗಳಲ್ಲಿ ಸೇವಾ ವೈಫಲ್ಯಗಳಿದ್ದರೂ ಗ್ರಾಹಕ ಅವುಗಳ ಮೇಲೆ ವಾಸ್ತುಶಾಸ್ತ್ರಜ್ಞರನ್ನು ಉತ್ತರದಾಯಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಬೇಕು. ವಾಸ್ತು ವಿರೋಧಿ ಬಣದವರಿಗೆ ಸತ್ಯವನ್ನು ಜನರ ಮುಂದಿಡುವುದೇ ಮುಖ್ಯವಾಗಿದ್ದು ಯಾವುದೇ ಲಾಭಗಳಿಲ್ಲ. ಇಂತಹ ಅಸಮತೋಲನದ ಬಣಗಳ ನಡುವಿನ ಚರ್ಚೆ ನಿಜವಾಗಿಯೂ ಅತ್ಯಂತ ತೆಳುವಾಗಿರುತ್ತದೆ. ಸಂಕ್ಷಿಪ್ತ ಸಮಯದಲ್ಲಿ-ಜಾಹಿರಾತುಗಳಿಂದ ಕಿಕ್ಕಿರುವ ಕಾರ್ಯಕ್ರಮಗಳಲ್ಲಿ-ಆಳ ಚರ್ಚೆ ಬಹು ಕಷ್ಟ ಸಾಧ್ಯ. ಆದ್ದರಿಂದಲೇ ಇಂತಹ ಚರ್ಚೆಗಳಿಗೆ ಮುದ್ರಣ/ಲಿಖಿತ ಮಾಧ್ಯಮವೇ ಸರಿಯಾದುದು. ಆದ್ದರಿಂದವಾಸ್ತು ಎಂಬ ವ್ಯಾಧಿ ಎಂಬ ಕೃತಿಯಲ್ಲಿ ಪ್ರಸ್ತುತ ಪಡಿಸಿದ್ದೇನೆ. ಈ ಕೃತಿಯ ಕೆಲ ಆಯ್ದ ಭಾಗಗಳನ್ನು ಈ ಜಾಲತಾಣದಲ್ಲಿ ಓದುಗರಿಗಾಗಿ ನೀಡಲಾಗಿದೆ.
೧.ವಾಸ್ತುಶಾಸ್ತ್ರ-ವಾಸ್ತುತಂತ್ರಜ್ಞಾನ (Architecture)
೨. ವಾಸ್ತುಶಾಸ್ತ್ರದ ವಿಚಾರಣೆಗೆ ಮೊದಲು
೩. ವಾಸ್ತುಶಾಸ್ತ್ರದ ಪ್ರಾಚೀನತೆ-ಇತಿಮಿತಿಗಳು ೪. ಸುಶಿಕ್ಷಿತರು-ಕಪಟಿಗಳು -ವಾಸ್ತು ಎಂಬ ಹುಸಿ ವಿಜ್ಞಾನ
೫. ವಾಸ್ತುಪುರುಷನ ತಪಾಸಣೆ
೬. ವಾಸ್ತುಗ್ರಂಥಗಳು
೭. ವಾಸ್ತುದೋಷಗಳು ಯಾರಿಗೆ ?
೮. ವಾಸ್ತು ಎಂಬ ಹಳಸಲು
೯. ದೇವಾಲಯಗಳ ವಿಕಾಸ-ಕಾಣದ ವಾಸ್ತು ಪುರುಷ
೧೦. ಪ್ರಾಚೀನ ನಿರ್ಮಾಣ ತಂತ್ರಗಳು
ಗ್ರಹ-ವಿಗ್ರಹ : ವಾಸ್ತುಶಾಸ್ತ್ರ ಎಷ್ಟು ಪ್ರಾಚೀನ ?
ವಾಸ್ತುಶಾಸ್ತ್ರ ಬಹು ಪ್ರಾಚೀನವಾದುದೆಂಬ ನಂಬಿಕೆಯಿದೆ. ಇದರ ಮೂಲಕಲ್ಪನೆಗಳು ಋಗ್ವೇದದಲ್ಲಿವೆ ಎಂದು ವಾದಿಸಲಾಗಿದೆ. ಇತಿಹಾಸಕಾರರು ಸಧ್ಯಕ್ಕೆ ಋಗ್ವೇದದ ಕಾಲವನ್ನು ಪ್ರ.ಶ.ಪೂ ೧೫೦೦-೧೩೦೦ ಅವಧಿಯೆಂದು ನಿರ್ಧರಿಸಿದ್ದಾರೆ.. ವಾಸ್ತುಶಾಸ್ತ್ರದ ಪರವಾಗಿ ವಾದಿಸುವವರು ಅದರ ಮೂಲ ವೇದಗಳಲ್ಲಿದ್ದು ಯಜ್ಞವೇದಿಕೆಗಳ ನಿರ್ಮಾಣದಿಂದ ಪ್ರಾರಂಭವಾಗುತ್ತದೆ ಎನ್ನುತ್ತಾರೆ. ವೇದಗಳಲ್ಲಿ ನಗರ ಜೀವನದ ಕುರುಹುಗಳಿಲ್ಲ. ಸುಸಜ್ಜಿತ ಮನೆ , ರಸ್ತೆ , ಚರಂಡಿ ವ್ಯವಸ್ಥೆ , ಕಾಲುವೆ ಮೂಲಕ ನೀರಾವರಿ ಮುಂತಾದ ಮುಂದುವರೆದ ನಾಗರಿಕ ಜನಜೀವನದ ಲಕ್ಷಣಗಳು ಋಗ್ವೇದದಲ್ಲಿಲ್ಲ. ಅಲ್ಲಿರುವುದು ಪಶುಪಾಲನೆ ಮತ್ತು ಸೀಮಿತ ಕೃಷಿ. ಋಗ್ವೇದದಲ್ಲಿ ಇರದ ಇವೆಲ್ಲವೂ ಸಿಂಧೂ ನಾಗರಿಕತೆಯಲ್ಲಿವೆ. ಇಲ್ಲಿ ವರ್ಣಾಧಾರಿತ ವ್ಯವಸ್ಥೆ ಇರುವಂತೆ ಕಾಣುವುದಿಲ್ಲ. ಭಾರತದ ವಾಸ್ತುಶಾಸ್ತ್ರ ನಿಜವಾಗಿಯೂ ಆರ್ಯರ ಆಗಮನ , ಸಿಂಧೂ ನಾಗರಿಕತೆಯ ನಿರ್ನಾಮದಂತೆ ಭಾಸವಾಗುತ್ತದೆ. ಸಿಂಧೂನಾಗರಿಕತೆಯಂತೆಯೇ ಇತರ ಮುಂದುವರಿದ ನಾಗರಿಕತೆಗಳು ಆಕ್ರಮಣಶೀಲರಿಂದ ನಿರ್ನಾಮವಾಗಿರುವುದಕ್ಕೆ ಚರಿತ್ರೆಯಲ್ಲಿ ದಾಖಲಾತಿಗಳಿವೆ. ಋಗ್ವೇದ ಮತ್ತು ಅದರ ಮುಂದುವರೆದ ಸಂಸ್ಕೃತಿ ಹಂತ ಹಂತವಾಗಿ ಚಾತುರ್ವರ್ಣ ವ್ಯವಸ್ಥೆಯನ್ನು ಬಿಗಿಗೊಳಿಸುತ್ತ ಹೋಗಿವೆ. ಇದು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಎದ್ದು ಕಾಣುತ್ತದೆ. ವಾಸ್ತುಶಾಸ್ತ್ರದ ಗ್ರಂಥಗಳು ಕಟ್ಟಡ ನಿರ್ಮಾಣದಂತಹ ಭೌತಿಕ ಚಟುವಟಿಕೆಗಳನ್ನು ವಾಸ್ತುಪುರುಷ , ವಾಸ್ತುಮಂಡಲ , ಬ್ರಹ್ಮ, ಈಶ್ವರ, ಮಂಗಳ-ಅಮಂಗಳ, ಅಷ್ಟದಿಕ್ಪಾಲಕರು ಎನ್ನುವಂತಹ ಒಳಗೆ ಹುರುಳಿಲ್ಲದ ಆದರೆ ಹೊರಗೆ ರಹಸ್ಯಮಯವೆಂದು ತೋರುವ ಪಾರಲೌಕಿಕ ಸಂಗತಿಗಳಿಂದ ಮುಚ್ಚಿ ಇಡೀ ವ್ಯವಸ್ಥೆಯನ್ನು ಕೈಹಿಡಿತದಲ್ಲಿರಿಸಿಕೊಂಡಿವೆ. ಆದ್ದರಿಂದಲೇ ವಾಸ್ತುಶಾಸ್ತ್ರದಲ್ಲಿ ಆಚರಣೆಗಳಿಗೆ ಮಹತ್ವದ ಸ್ಥಾನ ದಕ್ಕಿದೆ. ಜಾತಿ ಆಧಾರದ ಮೇಲೆ ಮನೆ , ಊರುಗಳ ನಿರ್ಮಾಣ ನಿರ್ದೇಶನಗಳು ಮೂಡಿಬಂದಿವೆ. ವಾಸ್ತುಶಾಸ್ತ್ರದ ಮೂಲಕ ವರ್ಣ ವ್ಯವಸ್ಥೆಯ ಮೇಲೆ ಬಿಗಿ ಹಿಡಿತ ಬಂದಿದೆ.
ವಾಸ್ತುಶಾಸ್ತ್ರ ಮೊದಲ ಸಲ ಅಥರ್ವವೇದ , ವೇದಾಂಗಗಳಲ್ಲಿ ಕಾಣಿಸಿಕೊಂಡಿದೆ ಎಂದು ಕೆಲವರು ಗುರುತಿಸಿದ್ದಾರೆ, ಆದರೆ ನಾವು ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ನಮ್ಮಷ್ಟೇ ಏಕೆ ನಮಗಿಂತಲೂ ಪ್ರಾಚೀನವಾದ ಈಜಿಪ್ತ್ , ಸುಮೇರಿಯನ್ , ಚೀನಾ ,ಗ್ರೀಕ್ ಸಂಸ್ಕೃತಿಗಳಿವೆ. ಇವೆಲ್ಲ ನಾಗರಿಕತೆಗಳು ಋಗ್ವೇದ ಕಾಲಕ್ಕಿಂತಲೂ ಹಿಂದೆ ನಿರ್ಮಿಸಿದ ನಿರ್ಮಾಣಗಳು ನೂರಾರು ಸಂಖ್ಯೆಯಲ್ಲಿ ಇಂದಿಗೂ ಕಾಣಬರುತ್ತವೆ. ಆದರೆ ಋಗ್ವೇದ ಕಾಲದ್ದಿರಲಿ ಪ್ರ.ಶ.ಪೂ ೫೦೦-೬೦೦ ಕ್ಕಿಂತಲೂ ಹಿಂದಿನದೆಂದು ಖಚಿತವಾಗಿ ಹೇಳಬಲ್ಲ ನಿರ್ಮಾಣಗಳು ನಮ್ಮಲ್ಲಿಲ್ಲ. ಈಜಿಪ್ತ್^ನಲ್ಲಿ ಕೈರೋದಿಂದ ಪ್ರಾರಂಭಿಸಿ ಆಸ್ವಾನ್ ವರೆಗೆ ೮೦೦ ಕಿ.ಮೀ ಉದ್ದಕ್ಕೆ ನೈಲ್ ನದಿಯ ಎಡ-ಬಲ ದಂಡೆಗಳಲ್ಲಿ ಪ್ರ.ಶ.ಪೂ ೨೫೦೦-೧೦೦೦ ಅವಧಿಯ ಹತ್ತಾರು ದೇವಾಲಯಗಳು ಹರಡಿಕೊಂಡಿವೆ. ಟೈಗ್ರಿಸ್-ಯುಫ್ರೈಟಿಸ್ ನದಿ ದಡದ ದಿಬ್ಬಗಳಲ್ಲಿ ಪ್ರಾಚೀನರ ಸಾಧನೆಯನ್ನು ಸಾರುವ ಹಲವಾರು ತಾಣಗಳಿವೆ. ಗ್ರೀಸ್ ದೇಶ ಮತ್ತು ಅದರ ಸನಿಹದ ಕ್ರೆಟೆ ದ್ವೀಪದಲ್ಲಿ ಪ್ರ.ಶ.ಪೂ ೧೦೦೦-೧೨೦೦ ಅವಧಿಯ ಮಿನೋವನ್ , ಮೈನೇಸಿಯನ್ ನಾಗರಿಕತೆಯನ್ನು ಅದರ ಸಾಧೆನೆಗಳನ್ನು ಎತ್ತಿ ತೋರಿಸುವ ಅರಮನೆಗಳಿವೆ. ಅಷ್ಟೇ ಏಕೆ ಗ್ರೀಕ್ ನಂಬಿಕೆಗಳಿಗೆ ಅಧಾರವಾದ ಭಿತ್ತಿಚಿತ್ರಗಳಿವೆ. ಅದಕ್ಕೆ ಆಧಾರವಾದ ದಾಖಲಾತಿಗಳಿವೆ. ಚೀನಾ ಮತ್ತು ಮಾಯಾ ಸಂಸ್ಕೃತಿಯ ನಿರ್ಮಾಣಗಳು ಸಹ ಇದೇ ರೀತಿಯಲ್ಲಿ ಇಂದಿಗೂ ತಮ್ಮ ಹಿಂದಿನ ವೈಭವವನ್ನು ಸಾರುತ್ತಿವೆ.
ಈ ಎಲ್ಲ ಪ್ರಾಚೀನ ಸಂಸ್ಕೃತಿಗಳು ಭಾರತದ ನಿರ್ಮಾಣ ತಂತ್ರಜ್ಞಾನಕ್ಕೆ ಮೊರೆಹೋಗಿದ್ದವೆಂದು ಸಾರುವ ಹೊಸಗುಂಪೊಂದು ಇತ್ತೀಚಿನ ದಿನಗಳಲ್ಲಿ ಬಹು ಸಕ್ರಿಯವಾಗಿದೆ. ಆದರೆ ಅದಕ್ಕೆ ಪೂರಕವಾದ ಯಾವ ಸಾಕ್ಶ್ಯಾಧಾರಗಳು ಭಾರತದಲ್ಲಿ ಇಲ್ಲ ಎನ್ನುವುದು ಅವರಿಗೂ ಗೊತ್ತಿದೆಯಾದರೂ ಜಾಣ ಮರೆವಿನಿಂದ ಅದನ್ನು ಹಿಂದಕ್ಕೆ ಸರಿಸುತ್ತಾರೆ. ಸಿಂಧೂ ನಾಗರಿಕತೆಯ ನಗರಗಳನ್ನು ವೇದೋಪನಿಷತ್ತುಗಳೊಂದಿಗೆ , ವಾಸ್ತುಶಾಸ್ತ್ರದೊಂದಿಗೆ ತಳುಕು ಹಾಕಲು ಇವರು ಹಿಂಜರಿಯುವುದಿಲ್ಲ. ಇದು ಸಾಕಷ್ಟು ವಾದ ವಿವಾದಗಳಿಗೆ ಕಾರಣವಾಗಿದೆ. ಈ ವಿವರಗಳು ಈ ಪುಸ್ತಕದ ವ್ಯಾಪ್ತಿಯ ಹೊರಗಿವೆ. ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ಜಗತ್ತಿನ ಇತರ ಪ್ರಾಚೀನ ನಾಗರಿಕತೆಗಳಿಗೆ ಹೋಲಿಸಿದಂತೆ ನಮ್ಮ ನಿರ್ಮಾಣ ತಂತ್ರಜ್ಞಾನ ಪ್ರಥಮವೂ ಅಲ್ಲ ವೈಶಿಷ್ಟ್ಯವಾದುದೂ ಅಲ್ಲ. ಎಲ್ಲಿಯವರೆಗೆ ನಾವು ಬಾಹ್ಯ ಜಗತ್ತಿನತ್ತ ಕಣ್ದೆರೆದು ನೋಡುವುದಿಲ್ಲವೋ ಆವರೆಗೆ ನಾವು ಲೋಟದೊಳಗಿನ (ಬಾವಿಯಲ್ಲ !) ಕಪ್ಪೆಯಾಗಿರುತ್ತೇವೆ. ಇದರಿಂದ ವಾಸ್ತುಶಾಸ್ತ್ರ ಅತ್ಯಂತ ಪ್ರಾಚೀನ , ಅನನ್ಯ , ವೈಜ್ಞಾನಿಕ ಎನ್ನುವ ನಂಬಿಕೆಗಳಿಗೆ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ದೇವಾಲಯಗಳು ಪ್ರ.ಶ ೩೦೦-೭೦೦ ರ ಅವಧಿಯಲ್ಲಿ ಗುಪ್ತ/ಪಲ್ಲವ/ಚಾಲುಕ್ಯರ ಕಾಲದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡವೆನ್ನುವುದನ್ನು ಗಮನಿಸಬೇಕು. ಭಾರತದಲ್ಲಿ ಈಗ ಗುರುತಿಸಬಹುದಾದ ಅತ್ಯಂತ ಹಳೆಯ ನಿರ್ಮಾಣಗಳು ಸಾಂಚಿ,ತಿಗ್ವಾರ (ಮಧ್ಯಪ್ರದೇಶ) , ನಾಚ್ನಾ (ರಾಜಸ್ಥಾನ) , ದೇವಘಡ (ಉತ್ತರಪ್ರದೇಶ), ಐಹೊಳೆಗಳಲ್ಲಿವೆ.
ಗ್ರೀಕ್ ಭಾಷೆಯಲ್ಲಿ ವಾಸ್ತುಶಾಸ್ತ್ರ ಕುರಿತಾದ ಗ್ರಂಥವೊಂದನ್ನು ವಿಟ್ರುವಿಯಸ್ ಎಂಬಾತ ಬರೆದಿದ್ದಾನೆ. ಆಗಸ್ಟಸ್ ಬಿರುದು ತಾಳಿದ ಸಿ.ಜೂಲಿಯಸ್ ಈತನ ಪೋಷಕನಾಗಿದ್ದನೆಂದು ಆಂತರಿಕ ಸಾಕ್ಷ್ಯಗಳಿಂದ ತಿಳಿದುಬರುತ್ತದೆ. ಇದರ ಆಧಾರದ ಮೇಲೆ ವಿಟ್ರುವಿಯಸ್^ನ ವಾಸ್ತುಶಾಸ್ತ್ರದ ಗ್ರಂಥದ ಕಾಲವನ್ನು ಪ್ರ.ಶ.ಪೂ ೨೫ ಎಂದು ಸಾಕಷ್ಟು ಖಚಿತ ಆಧಾರಗಳ ಮೇಲೆ ವಿದ್ವಾಂಸರು ನಿರ್ಧರಿಸಿದ್ದಾರೆ, ವಿಟ್ರುವಿಯಸ್^ನ ವಾಸ್ತುಗ್ರಂಥ ಹಾಗೂ ಮಾನಸಾರಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಗುರುತಿಸಲಾಗಿದೆ. ಆದರೆ ಮಾನಸಾರ ವಿಟ್ರುವಿಯಸ್^ ಗ್ರಂಥದಿಂದ ಪ್ರಭಾವಿತವಾಗಿದೆಯೇ ಇಲ್ಲವೇ ಎಂದು ಖಚಿತವಾಗಿ ಹೇಳಲಾಗುತ್ತಿಲ್ಲ. ಭಾರತದಲ್ಲಿ ದೇವಾಲಯಗಳ ನಿರ್ಮಾಣ ಗುಪ್ತರ ಕಾಲದ ನಂತರ ವಿಕಸಿಸಿರುವುದು ಚಾರಿತ್ರಿಕವಾಗಿ ಖಚಿತವಾಗಿದೆ. ಮಾನಸಾರ ವಿವರಿಸುವಂತಹ ದೇವಾಲಯಗಳ ನಿರ್ಮಾಣ ೯ನೇ ಶತಮಾನದ ನಂತರವೇ ಕಂಡುಬರುತ್ತವೆ. ಆದ್ದರಿಂದ ವಿಟ್ರುವಿಯಸ್ ವಾಸ್ತುಗ್ರಂಥ ಬಂದ ಹಲವಾರು ಶತಮಾನಗಳ ನಂತರ-ಸಹಸ್ರ ಮಾನದ ನಂತರ-ಮಾನಸಾರ ರಚಿವಾಗಿರುವ ಸಾಧ್ಯತೆಗಳೇ ಅಧಿಕವಾಗಿವೆ. ಪ್ರ.ಶ ೧೦ ನೇ ಶತಮಾನದಿಂದ ನಿರ್ಮಾಣ ಮತ್ತು ವಾಸ್ತುತತ್ತ್ವಗಳನ್ನು ಕುರಿತಾಗಿ ಭಾರತದಾದ್ಯಂತ ಹಲವಾರು ಸ್ವತಂತ್ರ ಕೃತಿಗಳು ಹೊರಬಂದವು. ಇದು ದೇವಾಲಯಗಳ ನಿರ್ಮಾಣ ಉತ್ತುಂಗದಲ್ಲಿದ್ದ ಕಾಲ. ಇವೆಲ್ಲವನ್ನು ಸಮನ್ವಯಗೊಳಿಸಿ , ಮೂಲ ತತ್ವಗಳನ್ನು ಕ್ರೋಢೀಕರಿಸಿ ಸೂತ್ರರೂಪದಲ್ಲಿ ನೀಡುವ ಪ್ರಯತ್ನದ ಫಲಗಳಾಗಿ 'ಮಯಸಾರ' 'ಮಯಮತ'ಗಳು ಹೊರಬಂದು ಅಧಿಕೃತ ಸ್ಥಾನಪಡೆದವೆಂದು ಈಗ ನಿರ್ಧರಿಸಲಾಗಿದೆ. ಮಯಸಾರದಲ್ಲಿ ವಾಸ್ತುಶಿಲ್ಪ ಮತ್ತು ಜೈನ, ಬೌದ್ಧ, ಹಿಂದೂ ವಿಗ್ರಹಶಾಸ್ತ್ರಗಳು ಸಮ್ಮಿಳಿತಗೊಂಡಿವೆ. ಮಯಮತ ದಕ್ಷಿಣ ಭಾರದಲ್ಲಿ ಬೃಹತ್ ದೇವಾಲಯಗಳನ್ನು ಕಟ್ಟುತ್ತಿರುವಾಗ ರಚಿಸಲ್ಪಟ್ಟಿರಬಹುದೆಂದು ಭಾವಿಸಲಾಗಿದೆ. ಇದನ್ನು ಶೈವ ಸಾಹಿತ್ಯದ ಅಂಗವೆಂದು ಸಹ ಪರಿಗಣಿಸಲಾಗಿದೆ.
ಭಾರತದ ಎಲ್ಲ ವಿದ್ಯೆಗಳು ದೇವರಿಂದ ಋಷಿಗಳಿಗೆ ಹರಿದುಬಂದ ವಿವರಗಳು ದಕ್ಕುತ್ತವೆ. ಇದು ಪ್ರತಿ ವಿದ್ಯೆಗೂ ಒಂದು ಪರಂಪರೆಯನ್ನು ಮತ್ತು ರಹಸ್ಯತೆಯನ್ನು ತಂದಿತ್ತಿದೆ. ಇದಕ್ಕೆ ವಾಸ್ತುಶಾಸ್ತ್ರವೂ ಹೊರತಲ್ಲ. ಈ ಪರಂಪರೆಯಲ್ಲಿ ಪೌರಾಣಿಕ , ಐತಿಹಾಸಿಕ ಸಂಗತಿಗಳು ಮಿಶ್ರಣಗೊಂಡಿವೆ. ಆದ್ದರಿಂದ ವಾಸ್ತುಶಾಸ್ತ್ರ ವೇದಗಳ ಕಾಲದಲ್ಲೇ ಅಸ್ತಿತ್ವದಲ್ಲಿದ್ದವೆಂದು ವಾದಿಸಲು ಸಾಧ್ಯವಾಗಿದೆ. ವಾಸ್ತುಶಾಸ್ತ್ರ-ವಾಸ್ತು ಪುರುಷ ಮತ್ತು ವಾಸ್ತು ಮಂಡಲದ ಪರಿಕಲ್ಪನೆಗಳ ಮೇಲೆ ಬೆಳೆದು ಬಂದಿದೆ. ಧಾರ್ಮಿಕ ನಂಬಿಕೆ , ಆಚರಣೆಗಳು , ಯಮ-ನಿಯಮಗಳು , ಜಾನಪದ ನಂಬಿಕೆಗಳು ಇದರೊಂದಿಗೆ ಬೆರೆತು ಇಡೀ ವಾಸ್ತುಶಾಸ್ತ್ರವೇ ಕಾಣುವ-ಕಾಣದಿರುವ ,ಭೌತ-ಅಭೌತ ವಿಷಯಗಳ ಕಲಸು ಮೇಲೋಗರವಾಗಿದೆ. ನಿರ್ಮಾಣದಂತಹ ಲೌಕಿಕ ವಿದ್ಯೆಯಲ್ಲಿ ರಹಸ್ಯವೆನಿಸುವ ಧಾರ್ಮಿಕ ಆಚರಣೆಗಳನ್ನು ಬೆರೆತಿರುವುದರಿಂದ ಪುರೋಹಿತ ವರ್ಗ ನಿರ್ಮಾಣದ ನೇರ ಭಾಗಿದಾರರಾದ ಕುಶಲ ಕರ್ಮಿಗಳ ಮೇಲೆ ಅಧಿಪತ್ಯ ಸಾಧಿಸಲು ನೆರವಾಗಿದೆ. ಈ ಹಿಡಿತ ಎಷ್ಟು ಬಿಗಿಯಾಗಿದೆಯೆಂದರೆ ಇಂದಿಗೂ ಸಹ ನಿರ್ಮಾಣದ ಯಾವ ಚಟುವಟಿಕೆಯನ್ನೂ ಅರಿಯದ ವಾಸ್ತುಪಂಡಿತರು ಈಶಾನ್ಯ, ಕುಬೇರ ಮೂಲೆಗಳನ್ನು ಹಿಡಿದು ಆಧುನಿಕ ವಾಸ್ತುತಂತ್ರಜ್ಞರಿಗೆ ಸವಾಲೆಸೆಯುವಂತಾಗಿದ್ದಾರೆ. ವೈದ್ಯರಿಗೆ ಯಾವ ದಿಕ್ಕಿಗೆ ಮುಖ ಮಾಡಿ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಲು ಸಹ ಹಿಂಜರಿಯುವುದಿಲ್ಲ. ಬಹುತೇಕ ವಾಸ್ತುಪಂಡಿತರಿಗೆ ವಾಸ್ತುಗ್ರಂಥಗಳಲ್ಲಿ ನಿಜವಾಗಿಯೂ ಏನಿದೆಯೆಂದು ಗೊತ್ತಿಲ್ಲ. ಅಷ್ಟ ದಿಕ್ಪಾಲಕರಾಚೆಗೆ ಇವರ ಜ್ಞಾನ ಸಾಗುವುದಿಲ್ಲ. ಆದ್ದರಿಂದಲೇ ಮುಂದಿನ ಅಧ್ಯಾಯಗಳಲ್ಲಿ ವಾಸ್ತುಗ್ರಂಥಗಳಲ್ಲಿರುವ ಮುಖ್ಯ ವಿಷಯಗಳ ಪರಿಚಯ ಮಾಡಿಕೊಡಲಾಗಿದೆ.
ವಾಸ್ತುಶಾಸ್ತ್ರ ಗ್ರಂಥಗಳು ನಿರ್ಮಾಣದ ಪ್ರತಿಹಂತದಲ್ಲೂ ವಿಪುಲವಾದ ಧಾರ್ಮಿಕ ಆಚರಣೆಗಳನ್ನು , ಬಲಿಗಳನ್ನು ಹೇಳುತ್ತವೆ. ಈ ಎಲ್ಲ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ಸಂಸ್ಕೃತ ಭಾಷೆಯಿದೆ. ಈ ಭಾಷೆಯ ಮಂತ್ರಗಳನ್ನು ಅರ್ಥವಾಗದಿದ್ದರೂ ಕಂಠಪಾಠ ಮಾಡಿಕೊಂಡು ಗತ್ತಿನಿಂದ ಆಚರಿಸುವಲ್ಲಿ ಪುರೋಹಿತ ವರ್ಗ ಸಹಸ್ರಾರು ವರ್ಷಗಳಿಂದ ಪಳಗಿದೆ. ಆಧುನಿಕ ಕಾಲದಲ್ಲೂ ಸಹ ಜನರನ್ನು ಹಿಡಿತದಲ್ಲಿರಿಸಿಕೊಳ್ಳಲು ರಹಸ್ಯಮಯವಾದ ಈ ಧಾರ್ಮಿಕ ಆಚರಣೆಗಳು ಅಪಾರವಾಗಿ ನೆರವಾಗುತ್ತಿವೆ. ಇದರೊಂದಿಗೆ ವಾಸ್ತುದೋಷ , ವಾಸ್ತುಶಾಂತಿಯಂತಹ ಹೊಟ್ಟೆ ಹೊರೆಯುವ ಅವಕಾಶಗಳು ಸಹ ಸೇರಿವೆ. ಆದ್ದರಿಂದ ವಾಸ್ತುಶಾಸ್ತ್ರದ ಪೊಳ್ಳುತನವನ್ನು ಬಯಲಿಗೆಳೆಯಲು ಹೊರಟಾಗಲೆಲ್ಲ ಈ ಪುರೋಹಿತ ವರ್ಗ ಸುತ್ತುಬಳಸಿನ ಸಮರ್ಥನೆಯ ಮಾರ್ಗವನ್ನು ಆಯ್ದುಕೊಳ್ಳುತ್ತದೆ . ಅದಕ್ಕಾಗಿ ವಾಸ್ತುವನ್ನು ವೈಭವೀಕರಿಸುವ , ಸಮರ್ಥಿಸುವ , ಸಮಜಾಯಿಷಿ ನೀಡುವ ತಂತ್ರಗಳಿಗೆ ಮೊರೆಹೊಕ್ಕು ಹಲವಾರು ಪ್ರಶ್ನೆಗಳನ್ನು ಮುಂದೊಡ್ಡಲಾಗುತ್ತದೆ. ಅವುಗಳು ಮುಂದಿನಂತಿವೆ.
(೧) ಪ್ರಾಚೀನ ಋಷಿ-ಮುನಿಗಳ ಜ್ಞಾನ ಮತ್ತು ದಿವ್ಯ ದೃಷ್ಟಿ ಸಹಜ ಜೀವನಕ್ಕೆ ಹತ್ತಿರವಾಗಿದ್ದು ಆಧುನಿಕ ಚಿಂತನೆಗಳಿಂದ ಭಿನ್ನವಾಗಿದ್ದಿತು.ಭಾರತೀಯ ವಾಸ್ತುಶಾಸ್ತ್ರ ಅತ್ಯಂತ ವೈಜ್ಞಾನಿಕವಾಗಿದ್ದು ಆಧ್ಯಾತ್ಮವನ್ನು ಅಂತರ್ಗತಗೊಳಿಸಿಕೊಂಡಿದ್ದಿತು. ಆಂಗ್ಲ ಪ್ರೇರಿತ ಶಿಕ್ಷಣದಿಂದಾಗಿ ಭಾರತೀಯರು ತಮ್ಮ ಅಮೂಲ್ಯ ಪಾರಂಪರಿಕ ಜ್ಞಾನವನ್ನು ಅರಿಯದೆ ಉಪೇಕ್ಷಿಸುತ್ತಿದ್ದಾರೆ. ಅವರಿಗೆ ಪಾಶ್ಚಾತ್ಯ ವೈಜ್ಞಾನಿಕ ಮಾರ್ಗದ ಹೊರತು ಸತ್ಯವನ್ನು ಕಾಣುವ ನಮ್ಮ ಸನಾತನ ಮಾರ್ಗಗಳ ಬಗ್ಗೆ ಅರಿವು ಹಾಗು ಗೌರವವಿಲ್ಲ. ಋಷಿಗಳು ಅನುಸರಿಸಿದ ಮಾರ್ಗ ಸರ್ವಾಂಗ ಸಂಪೂರ್ಣ , ಅಖಂಡ ಮತ್ತು ಆಧ್ಯಾತ್ಮಿಕದ ಶಾಶ್ವತ ನೆಲೆಯಲ್ಲಿದ್ದರೆ ಆಧುನಿಕ ವಿಜ್ಞಾನದ ಮಾರ್ಗ ಅಂಶಿಕ , ತಾತ್ಕಾಲಿಕ ಮತ್ತು ಯಾಂತ್ರಿಕ ಪರಿಮಿತಿಯಲ್ಲಿದೆ.
(೨) ಭಾರತ ಭವ್ಯ ದೇವಾಯಲಗಳ ಬೀಡು. ಇಂತಹ ಅಮೋಘ ನಿರ್ಮಾಣಗಳಿಗೆ ವಾಸ್ತುಶಾಸ್ತ್ರವೇ ತಳಹದಿ. ಪ್ರಾಚೀನ ದೇವಾಲಯಗಳ ಭವ್ಯತೆ , ಕಲಾ ಸೌಂದರ್ಯದ ಮುಂದೆ ಆಧುನಿಕ ನಿರ್ಮಾಣಗಳು ಸಪ್ಪೆಯಾಗಿ ಕಾಣುತ್ತವೆ. ಉನ್ನತ ತಾಂತ್ರಿಕ ಜ್ಞಾನವಿಲ್ಲದೆ ಅಂತಹ ಮಹೋನ್ನತ ನಿರ್ಮಾಣಗಳು ಸಾಧ್ಯವಿಲ್ಲ. ಆದ್ದರಿಂದ ವಾಸ್ತುಶಾಸ್ತ್ರವನ್ನು ಸರಿಯಾಗಿ ತಿಳಿದು ಅನುಷ್ಠಾನಕ್ಕೆ ತರಬೇಕಾದ ಅವಶ್ಯಕತೆಯಿದೆಯೇ ಹೊರತು ಅದನ್ನು ಹಳಿಯುವ/ವಿಮರ್ಶಿಸುವ ಅಗತ್ಯ/ಅಧಿಕಾರವಿಲ್ಲ.
(೩) ಋತುಮಾನಗಳ ಬದಲಾವಣೆ , ಗಾಳಿ-ಬೆಳಕು , ಪರಿಸರದ ಭೌತಿಕ ಸ್ವರೂಪಗಳ ವೈಜ್ಞಾನಿಕ ಬಳಕೆ , ವಿಶ್ವಸ್ತ ಚೈತನ್ಯವನ್ನು ವಾಸಿಸುವ ನೆಲೆಯತ್ತ ಆವಾಹಿಸುವುದೇ ವಾಸ್ತುಶಾಸ್ತ್ರದ ಗುರಿ. ಆಧುನಿಕ ವಾಸ್ತುತಂತ್ರಜ್ಞಾನ (Architecture)ವೂ ಸಹ ಇಂತಹುದೇ ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ನಮ್ಮದೇ ಆದ ಪ್ರಾಚೀನ ವಿದ್ಯೆಯನ್ನು ಏಕೆ ಬಳಸಬಾರದು.
ಈ ಪ್ರಶ್ನೆಗಳಲ್ಲಿ ಎರಡನೆಯದಕ್ಕೆ (೨) ಈಗ ಸಂಕ್ಷಿಪ್ತವಾಗಿ ಕೃತಿಯ ಅಂತಿಮದಲ್ಲಿ ಸುದೀರ್ಘವಾಗಿ ಉತ್ತರ ನೀಡಲಿದ್ದೇನೆ. (೧) ಮತ್ತು (೩) ಕ್ಕೆ ಸುಶಿಕ್ಷಿತರು-ಕಪಟಿಗಳು ಮತ್ತು ಹುಸಿ ವಿಜ್ಞಾನದಲ್ಲಿ ಉತ್ತರ ನೀಡಲಾಗಿದೆ. ಸ್ಥೂಲವಾಗಿ ಕೆಲವು ಅಂಶಗಳನ್ನು ಗಮನಿಸಬಹುದು.
(೧) ದೇವಾಲಯಗಳ ನಿರ್ಮಾಣದ ಭೌತಿಕ/ಇಂಜಿನಿಯರಿಂಗ್ ತತ್ವಗಳು ಧಾರ್ಮಿಕವಾದ ವಾಸ್ತುತತ್ವಗಳಿಗಿಂತ ಬೇರೆಯಾಗಿದ್ದವು. ವಾಸ್ತುಪುರುಷನ ಹಿನ್ನೆಲೆಯಲ್ಲಿರುವ ಯೋಜನೆ ಮತ್ತು ನಿರ್ಮಾಣದ ನಡುವೆ ಯಾವುದೇ ಭೌತಿಕ ಸಂಬಂಧಗಳಿರಲಿಲ್ಲ. ಆರಂಭಿಕ ಹಂತದ ದೇವಾಲಯಗಳ ನಿರ್ಮಾಣದಲ್ಲಿ ವಾಸ್ತುಪುರುಷನ ಕಲ್ಪನೆಯೇ ಇರಲಿಲ್ಲ. ಗರ್ಭಗುಡಿ , ಪ್ರಾಕಾರ , ಗೋಪುರ , ಸುಕನಾಸಿ ಮುಂತಾದುವುಗಳ ಯೋಜನೆಗೆ ಬಳಸುತ್ತಿದ್ದ ವಾಸ್ತುತತ್ವಗಳು ಅವುಗಳ ಭೌತಿಕ ನಿರ್ಮಾಣದ ಹಿಂದಿರಲಿಲ್ಲ. ಆದ್ದರಿಂದ ವಾಸ್ತುಶಾಸ್ತ್ರವನ್ನು ಕಟ್ಟಡ ನಿರ್ಮಾಣ ತಂತ್ರದಿಂದ ಬೇರ್ಪಡಿಸಿ ನೋಡಬೇಕು. ಎಲ್ಲ ಹಿಂದೂ ದೇವಾಲಯಗಳನ್ನು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಯೋಜಿಸಿ ಕಟ್ಟಲಾಗಿದೆಯೆಂದು ನಂಬಿಸಲಾಗುತ್ತಿದೆ. ಬಹುತೇಕ ವೇಳೆ ಭಾರತದಲ್ಲಿ ದೇವಾಲಯಗಳು ವಾಸ್ತುಶಾಸ್ತ್ರಕ್ಕಿಂತಲೂ ಅನುಕರಣೆಯ ಮೇಲೆ ಕಟ್ಟಲ್ಪಟ್ಟವು. ಒಂದು ತಲೆಮಾರಿನವರು ತಮ್ಮ ಹಿಂದಿನ ತಲೆಮಾರಿನ , ಒಂದು ಪ್ರದೇಶದವರು ಇನ್ನೊಂದು ಪ್ರದೇಶದ ತತ್ವಗಳನ್ನು ಅನುಕರಿಸಿದರು. ಯಾವುದೇ ರಾಜ ಹೊಸ ಬಗೆಯಲ್ಲಿ ದೇವಾಲಯವನ್ನು ಕಟ್ಟಿಸಿ ಹೆಸರುವಾಸಿಯಾಗಬೇಕೆಂದು ಬಯಸಿದಾಗ ಸ್ಥಪತಿಗಳು ಹಿಂದಿದ್ದ ಪದ್ದತಿಗಳನ್ನು ಮಾರ್ಪಡಿಸಿ ಹೊಸತನವನ್ನು ತಂದರು. ವಾಸ್ತುಶಾಸ್ತ್ರದ ಗ್ರಂಥ ಹಾಗು ತತ್ವಗಳಿಗಿಂತ ಇಂತಹ ಪ್ರಯೋಗಗಳೇ ವೈವಿಧ್ಯತೆ , ಭವ್ಯತೆಯನ್ನು ತಂದವು.
(೨) ವಾಸ್ತುಶಾಸ್ತ್ರದಲ್ಲಿ ನಿರೂಪಿಸಲ್ಪಟ್ಟಿರುವ ಭೂಪರೀಕ್ಷೆ , ಶಿಲಾಪರೀಕ್ಷೆ , ಕರ್ಷಣ , ವಾಸ್ತುಪೂಜೆ, ಸಾಲ್ಯೋಧರ , ಅಧ್ಯೇಷ್ಟಕ ,ನಿರ್ಮಾಣ , ಮುರ್ದೇಷ್ಟಕ ಸ್ಥಪನ , ಗರ್ಭಾನ್ಯಾಸ , ಸ್ಥಪನ , ಪ್ರತಿಷ್ಟ ಹಂತಗಳು ಯಾವುದೇ ವೈಜ್ಞಾನಿಕ ಸಂಗತಿಗಳಿಗಿಂತಲೂ ಕಲ್ಪಿತಗೊಂಡ ಅಂಶಗಳ ಮೇಲಿವೆ.
(೩) ವಾಸ್ತುಶಾಸ್ತ್ರ ದೇವಾಲಯ , ಮನೆಯಂತಹ ಕಟ್ಟಡದ ವಿವಿಧ ಅಂಗಗಳ ನಡುವೆ ಸಾಮರಸ್ಯ ತರಲು ವಿವಿಧ ಗಾತ್ರಗಳನ್ನು ನಿರ್ದೇಶಿಸುತ್ತದೆ. ಈ ನಿರ್ದೇಶನ ತತ್ತ್ವಗಳು ವೈಜ್ಞಾನಿಕವಾಗಿದ್ದು ರಚನೆಯಲ್ಲಿ ಸುಸಂಬದ್ಧತೆಯನ್ನು ತರುತ್ತವೆ ಎನ್ನುವುದು ಕೆಲಮಟ್ಟಿಗೆ ನಿಜ. ದೇವಾಲಯದ ಗರ್ಭಗುಡಿ, ಗೋಪುರಗಳ ಎತ್ತರ , ಗೋಪುರಗಳ ವಿವಿಧ ಅಂತಸ್ತುಗಳ ಪರಿಮಾಣ , ಜೋಡಣೆ ಇತ್ಯಾದಿಗಳಲ್ಲಿ ನಿರ್ದಿಷ್ಟ ಜ್ಞಾನವಿರುವುದು ನಿಜ. ಆದರೆ ವಿಸ್ತುಶಾಸ್ತ್ರದಲ್ಲಿ Aು ದೇವಾಲಯಗಳ ಕಲಾತ್ಮಕತೆಗೂ ವಾಸ್ತುಶಾಸ್ತ್ರಕ್ಕೂ ನಂಟು ಬೆಸೆಯುವುದು ತಪ್ಪು. ಏಕೆಂದರೆ ಕಲೆ ವಾಸ್ತುಶಾಸ್ತ್ರದ ಎಲ್ಲ ವಿವರಣೆಗಳಿಗಿಂತಲು ವಿಭಿನ್ನವಾದುದು. ಅದು ಕುಶಲಕರ್ಮಿಯ ಸಿದ್ಧಿ. ಆದ್ದರಿಂದ ಬೇಲೂರು-ಹಳೇಬೀಡು ದೇವಾಲಯಗಳನ್ನು ಅಳತೆಯ ತತ್ತ್ವಗಳ ಮೇಲೆ ನಾವು ವಿವರಿಸಬಹುದು ಆದರೆ ಅದರ ಕಲೆಗೆ ಬೇರೆಯದೇ ಆದ ಮಾನದಂಡ ಬೇಕು.. ವಾಸ್ತುಶಾಸ್ತ್ರದ ನಿಯಮಗಳು ನಿಜವಾಗಿಯೂ ಮೌಲಿಕವೇ ಎಂದು ವಿಚಾರಿಸ ಹೊರಟಾಗ ಆದು ನಿರ್ದೇಶಿಸುತ್ತಿರುವ ವಾಸ್ತುಮಂಡಲ , ವಾಸ್ತುಪುರುಷ , ನಿರ್ಮಾಣ ತಂತ್ರಗಳು ಎಷ್ಟು ಸರಿ ಎನ್ನುವುದು ಪ್ರಶ್ನೆಯೇ ಹೊರತು ದೇವಾಲಯಗಳ ಭವ್ಯತೆ , ಕಲಾ ಮಹೋನ್ನತೆಗಳು ಪರಿಗಣನೆಗೆ ಬರುವುದಿಲ್ಲ. ಅರ್ಥರಹಿತ ನಂಬಿಕೆಗಳೇ ಆಧಾರವಾಗಿದ್ದರೂ ಕೆಲವೊಮ್ಮೆ ಬೇರೆ ಕಾರಣಗಳಿಂದ ಅದ್ಭುತ ಕಾರ್ಯಗಳು ಸಿದ್ಧಿಸುವುದು ಸಾಧ್ಯ.
(೪) ವಾಸ್ತುಶಾಸ್ತ್ರವನ್ನು ಅನುಸರಿಸಿ ನಿರ್ಮಿಸಿದ ದೇವಾಲಯಗಳು , ಕೋಟೆಗಳು ಕೆಲವೊಮ್ಮೆ ನಿರ್ಮಾಣದ ಹಂತದಲ್ಲೇ ಉರುಳುತ್ತಿದ್ದವು , ಕೆರೆ ಏರಿಗಳು ಜರುಗುತ್ತಿದ್ದವು. ಇವುಗಳ ನಿಜವಾದ ಕಾರಣ ತಿಳಿಯದೆ ವಾಸ್ತುದೋಷವೆಂದು ಪರಿಗಣಿಸಿ ಪುರೋಹಿತರು ವಾಸ್ತುದೋಷ ಪರಿಹಾರ ವಾಸ್ತುಶಾಂತಿಗಾಗಿ ವಿವಿಧ ಬಗೆಯ ಆಚರಣೆ , ಬಲಿಗಳನ್ನು ಹೇಳುತ್ತಿದ್ದರು. ದೇವಾಲಯದ ಗೋಪುರ ನಿರ್ಮಾಣದ ಕಾಲದಲ್ಲಿ ನೀಡಿದ ಬಸುರಿಯ ಬಲಿ , ಕೆರೆಗೆ ಹಾರಗಳು ಜೊತೆಜೊತೆಯಲ್ಲೇ ಸಾಗುತ್ತಿದ್ದವು.
(೫) ಈಗ ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಈಗಿರುವ ಸಿವಿಲ್ ಇಂಜಿನಿಯರಿಂಗ್ ಜ್ಞಾನದ ಮುಂದೆ ವಾಸ್ತುಶಾಸ್ತ್ರದಲ್ಲಿ 'ವೈಜ್ಞಾನಿಕ'ವೆಂದು ಭಾಸವಾಗುವ ಭೂಪರೀಕ್ಷೆ , ಶಿಲಾಪರೀಕ್ಶೆ ಇತ್ಯಾದಿಗಳು ಬಾಲಿಶವೆನಿಸುತ್ತವೆ. ಈ ಪರೀಕ್ಷೆಗಳು ಸ್ಥಪತಿ/ವಾಸ್ತು ಆಚಾರ್ಯನ ಸೀಮಿತ ಅನುಭವಗಳಾಗಿದ್ದವೇ ಹೊರತು ಸಂಸ್ಥಾಪಿತ ಪ್ರಮಾಣೀಕೃತ ಜ್ಞಾನವಾಗಿರಲಿಲ್ಲ. ಇದಕ್ಕಾಗಿ ನಾವು ಅವರನ್ನು ದೂರುವುದು ಸರಿಯಲ್ಲ. ಅವರವರ ಕಾಲದಲ್ಲಿ ಲಭ್ಯವಿದ್ದ ಜ್ಞಾನ ಅವರಿಗೆ ಮಾರ್ಗದರ್ಶಿಯಾಗಿದ್ದಿತು. ಅದೇ ಜ್ಞಾನ ಅದೇ ವಾಸ್ತುಶಾಸ್ತ್ರ ಇಂದಿಗೂ ಪ್ರಸ್ತುತ ಎನ್ನುವ , ಆಧುನಿಕ ತಂತ್ರಜ್ಞಾನದ ಎಲ್ಲ ಸವಿಗಳನ್ನುಣ್ಣುತ್ತ ಹಳಸಲಾದ ವಾಸ್ತುವನ್ನು ಒಪ್ಪುವ ಇಬ್ಬಂದಿತನ/ಆತ್ಮವಂಚಕತೆ ಮತ್ತೊಂದಿಲ್ಲ.
(೬) ಗಾಳಿ,ಬೆಳಕು , ಋತುಮಾನ ಇತ್ಯಾದಿಗಳ ಜ್ಞಾನ ಈಗ ಅನೂಹ್ಯವಾಗಿ ವಿಕಸಿಸಿದೆ. ಇಡೀ ವಾಸ್ತುಶಾಸ್ತ್ರದಲ್ಲಿರುವ ಗಾಳಿ, ಬೆಳಕುಗಳ ಜ್ಞಾನವನ್ನು ಐದಾರು ವಾಕ್ಯಗಳಿಗೆ ಸೀಮಿತಗೊಳಿಸಬಹುದು. ಇಂದಿನ ಸಿವಿಲ್ ಇಂಜಿನಿಯರಿಂಗ್ ಗಾಳಿ , ಬೆಳಕು , ನೀರನ್ನು ಕುರಿತಾಗಿ ಅಗಾಧ ತಿಳುವಳಿಕೆಯನ್ನು ಹೊಂದಿದೆ. ಇವುಗಳನ್ನು ನಿಯಂತ್ರಿಸಲು ಅತ್ಯಾಧುನಿಕ ಯಂತ್ರ-ತಂತ್ರಗಳು ಲಭ್ಯವಿವೆ. ವಾಸ್ತುಶಾಸ್ತ್ರವನ್ನು ಮೂಲದಲ್ಲಿ ಬರೆದವರೇ ಇಂದೇನಾದರೂ ಬಂದರೆ ತಮ್ಮ ಹಿಂದಿದ್ದ ಎಲ್ಲ ತಿಳುವಳಿಕೆಗಳನ್ನು ಬದಿಗಿರಿಸಿ ಆಧುನಿಕ ಸಿವಿಲ್ ಇಂಜಿನಿಯರ್ ಅಥವಾ ವಾಸ್ತುತಂತ್ರಜ್ಞರಾಗುತ್ತಿದ್ದರು.
(೭) ಸೂರ್ಯ ಪೂರ್ವದಲ್ಲಿ ಮೂಡುವುದರಿಂದ ಬಾಗಿಲು ಪೂರ್ವಕ್ಕಿರಬೇಕು ಎನ್ನುವುದು ಎಂತಹ ವೈಜ್ಞಾನಿಕ ತತ್ವದ ಮೇಲಿದೆ ನೋಡಿರಿ. ಬೆಳಗಿನ ಕಿರಣಗಳಿಂದ ವಿಟಮಿನ್-ಇ ದಕ್ಕುತ್ತದೆ ಎಂದು ವಾಸ್ತುಪರ ವಾದಿಗಳು ಹೆಮ್ಮಯಿಂದ ಹೇಳುತ್ತಾರೆ. ಬೆಳಕು, ಗಾಳಿಗಳ ಬಗ್ಗೆ ಆಧುನಿಕ ತಿಳುವಳಿಕೆಗಳು ಏನನ್ನು ಹೇಳುತ್ತವೆ ಎಂದು ತಿಳಿಯುವ ಗೋಜಿಗೆ ನಾವು ಹೋಗದೆ ಇದನ್ನು ನಿಜವೆಂದು ನಂಬುತ್ತೇವೆ. ವಾಸ್ತುಶಾಸ್ತ್ರದ ಗ್ರಂಥಗಳು ಪೂರ್ವಕ್ಕೆ ಬಾಗಿಲಿರಬೇಕೆಂದು ಹೇಳುವಾಗ ಈ ಹಿನ್ನೆಲೆಯನ್ನು ಹೇಳುವುದಿಲ್ಲ. ಪೂರ್ವ ಅಗ್ನಿ/ಆದಿತ್ಯನ ದಿಕ್ಕು. ಆದ್ದರಿಂದ ಆ ಕಡೆ ಬಾಗಿಲು ಇರಬೇಕೆಂದು ಸೂಚಿಸುತ್ತವೆ. ಸೂರ್ಯನ ಬೆಳಕು ಭೂಮಿಯ ವಾತಾವರಣ ತಲುಪಿದ ತಕ್ಷಣ ಎಲ್ಲ ದಿಕ್ಕುಗಳಿಗೆ ಸಮಾನವಾಗಿ ಚದುರಿಸಲ್ಪಡುತ್ತದೆ. ಆದ್ದರಿಂದ ಸೂರ್ಯೋದಯವಾದಾಗ ಎಲ್ಲ ಕಡೆಯೂ ಒಂದೇ ಪ್ರಮಾಣದ ಬೆಳಕು ಸಿಗುತ್ತದೆ. ವಾಸ್ತುಶಾಸ್ತ್ರವನ್ನು ಒಪ್ಪುವ ಭರದಲ್ಲಿ ನಾವು ಇಂತಹ ನಮ್ಮ ಅನುಭವದ ಸಂಗತಿಗಳನ್ನೇ ಗಮನಿಸದಂತಾಗುತ್ತೇವೆ. ವಾಸ್ತುಶಾಸ್ತ್ರಕ್ಕೂ ಆಧುನಿಕ ವಾಸ್ತು ಪಂಡಿತರು ಈಗ ಲಭ್ಯವಿರುವ ವೈಜ್ಞಾನಿಕ ಅರಿವನ್ನು ಬಳಸಿಕೊಂಡು ನೀಡುತ್ತಿರುವ ವಿವರಣೆಗಳಿಗೂ ಯಾವ ಸಂಬಂಧವೂ ಇಲ್ಲ.
(೮) ಎಲ್ಲ ವಾಸ್ತುಶಾಸ್ತ್ರಗಳು ಗ್ರಹ-ವಿಗ್ರಹಗಳೊಂದಿಗೆ (ಅಂತರಿಕ್ಷ-ವಾಸದ ನೆಲೆ) ನಡುವೆ ಸಂಪರ್ಕ ಕಲ್ಪಿಸುತ್ತವೆ. ಇದರಿಂದಾಗಿ ಭೂಮಿಗೆ ಸೀಮಿತವಾದ ನಿರ್ಮಾಣ ಚಟುವಟಿಕೆಯನ್ನು ಅಂತರಿಕ್ಷದ ಗ್ರಹಗತಿಗಳೊಂದಿಗೆ , ಜಾತಕ ಫಲಗಳೊಂದಿಗೆ ಸಮನ್ವಯಗೊಳಿಸಲಾಗಿದೆ. ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳು ತತ್ಸಂಬಂಧಿ ಗ್ರಹಗಳೊಂದಿಗೆ ಚೈತನ್ಯ ಸ್ವೀಕರಿಸಿ ಬಿಡುಗಡೆಗೊಳಿಸುತ್ತವೆಯೆಂದು ಪರಿಗಣಿಸಲಾಗಿದೆ. ಈ ಪರಿಕಲ್ಪನೆಯೊಂದಿಗೆ ವಾಸ್ತುಪುರುಷ , ವಾಸ್ತುಮಂಡಲಗಳನ್ನು ರಹಸ್ಯಮಯಗೊಳಿಸಲಾಗಿದೆ. ನಿವೇಶನದ ಒಂದೊಂದು ಜಾಗವೂ ಒಬ್ಬೊಬ್ಬ/ಒಂದೊಂದು ಗ್ರಹ/ದೇವತೆಗೆ ಮೀಸಲಾಯಿತು. ಭೌಗೊಳಿಕ ಸನ್ನಿವೇಶ , ನಿವೇಶನದ ವಾಸ್ತವಿಕ ಸ್ಥಿತಿಗತಿಗಳಿಗಿಂತಲೂ ಇವೇ ಪ್ರಾಧಾನ್ಯತೆ ಗಳಿಸಿದವು. ನಿವೇಶನದ ಒಂದೊಂದು ಮೂಲೆಯನ್ನು ಒಂದೊಂದು ಗ್ರಹ/ದೇವತೆ ಆಕ್ರಮಿಸಿ ಎಲ್ಲೆಲ್ಲಿ ಏನೇನಿರಬೇಕು ಎಂದು ನಿರ್ಧರಿಸತೊಡಗಿದವು. ಮತ್ಸ್ಯ ಪುರಾಣ ಹಾಗೂ ಕೆಲವು ವಾಸ್ತುಗ್ರಂಥಗಳು , ವಾಸ್ತುಮಂಡಲ ರಚಿಸಿ ಕಟ್ಟಡದ ಕೆಲಸ ಪ್ರಾರಂಭಿಸಿದ ನಂತರ ನಿವೇಶನದ ಯಜಮಾನನಿಗೆ ಯಾವ ಅಂಗಗಳಲ್ಲಾದರೂ ತುರಿಕೆ , ನೋವು ಉಂಟಾದರೆ , ನಿವೇಶನದಲ್ಲಿ ವಾಸ್ತುಪುರುಷನ ಅದರ ಅಂಗವಿರುವ ಜಾಗವನ್ನು ಅಗೆದು ಅಲ್ಲಿರುವ ಮುಳ್ಳು/ಮೊಳೆಗಳನ್ನು ತೆಗೆದು ಪರಿಹಾರ ಪಡೆಯಬೇಕು. ಎಂದು ಸೂಚಿಸುವಲ್ಲಿ ಗ್ರಹ-ವಿಗ್ರಹಗಳ , ಲೌಕಿಕ-ಪಾರಲೌಕಿಕಗಳ ನಡುವಿನ ಸಂಬಂಧಗಳ ನಡುವಿನ ಗಂಟು ಮತ್ತಷ್ಟು ಬಿಗಿಯಾಯಿತು. ಈ ಮೂಲಕ ನಿರ್ಮಾಣದಂತಹ ಭೌತಿಕ ಚಟುವಟಿಕೆಗಳಿಗೆ ಅಗೋಚರ ಕಾರಣಗಳು ಪ್ರಭಾವ ಬೀರಲಾರಂಭಿಸಿದವು. ಇಲ್ಲಿಂದ ವಾಸ್ತುಶಾಸ್ತ್ರ ಜ್ಯೋತಿಷ್ಯ , ನಂಬಿಕೆ , ರಾಶಿ,ಕುಂಡಲಿಗಳ ಕೊಚ್ಚೆಯಲ್ಲ್ಕಿ ಜಾರಿಬಿದ್ದಿತು.

ವಾಸ್ತುಶಾಸ್ತ್ರ-ವಾಸ್ತುತಂತ್ರಜ್ಞಾನ
ನೀವು ಮನೆಕಟ್ಟಬೇಕೆಂದಿರುವಿರಾ ? ನಿಮ್ಮ ವ್ಯಾಪಾದಲ್ಲಿ ಏಳಿಗೆಯಿಲ್ಲವೇ ? ಮಗಳ ಮದುವೆಗೆ ಮುಹೂರ್ತ ಒದಗಿ ಬಂದಿಲ್ಲವೇ ? ಮಗ ದಾರಿ ತಪ್ಪುತ್ತಿದ್ದಾನೆಯೇ? ತಾಯಿಯ ಆರೋಗ್ಯ ಸರಿ ಇಲ್ಲವೇ ? ಮನೆಯಲ್ಲಿ ಸುಖ, ಸಮೃದ್ಧಿಗಳು ನೆಲೆಸಬೇಕೆ ? ಸಂತಾನವಿಲ್ಲವೇ ?ಚಿಂತೆ ಬೇಡ ಬನ್ನಿ-ನಿಮ್ಮ ಎಲ್ಲ ಸಮಸ್ಯೆಗಳಿಗೆ ವಾಸ್ತುಶಾಸ್ತ್ರವೆಂಬ ಏಕ ಗವಾಕ್ಷಿಯಡಿಯಲ್ಲಿ ಪರಿಹಾರಗಳು ದಕ್ಕುತ್ತವೆ.
ಮನೆ ಬಾಗಿಲು ಪೂರ್ವಕ್ಕೆ ಅಥವಾ ಉತ್ತರಕ್ಕಿದ್ದರೆ ಮನೆ ಯಜಮಾನನಿಗೆ ಸಮೃದ್ಧಿ. ಪೂರ್ವ ಅಥವಾ ಪಶ್ಚಿಮದ ಬಾಗಿಲಿದ್ದರೆ ಬಹುಸಂತಾನವು ಲಭ್ಯ. ನೀವು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿರುವಿರಾ ? ಇರಲಿ ಬಿಡಿ. ವಾಸ್ತುಶಾಸ್ತ್ರದ ನಿಯಮಗಳ ಮುಂದೆ ನಿಮ್ಮ ವೈದ್ಯಕೀಯ ನಿಲ್ಲಲಾರದು.
ನಿಮ್ಮ ಬಚ್ಚಲು ನೈರುತ್ಯದಲ್ಲಿರಬೇಕು. ಬಚ್ಚಲಿನಲ್ಲಿರುವ ಬಾಯ್ಲರ್ ಪಶ್ಚಿಮದಲ್ಲಿದ್ದು ಅದರ ಸ್ವಿಚ್ ಆಗ್ನೇಯಯದಲ್ಲಿರಬೇಕು. ಏಕೆಂದರೆ ಆಗ್ನೇಯ ಅಗ್ನಿ ಇರುವ ದಿಕ್ಕು. ಬಾಯ್ಲರ್ ನಲ್ಲಿರುವ ನೀರನ್ನು ಕಾಯಿಸುವುದು ಅಗ್ನಿಯಲ್ಲವೇ ? ವಾಸ್ತುಶಾಸ್ತ್ರದ ಪ್ರಕಾರ ಅಗ್ನಿ ಇರುವ ಕಡೆ ನೀರು ಇರಬಾರದಲ್ಲವೇ ? ಛುಪ್ ! ಪ್ರಶ್ನೆಗಳನ್ನು ಎತ್ತಬಾರದು ವಾಸ್ತುಶಾಸ್ತ್ರ ಪ್ರಾಚೀನ ಋಷಿ ಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ಕಂಡುಕೊಂಡ ಸತ್ಯಗಳನ್ನು ಪ್ರಶ್ನಿಸಬಹುದೇ?
ನೀವು ಶಸ್ತ್ರಚಿಕಿತ್ಸೆ ಮಾಡುವ ವೈದ್ಯರೇ? ಹಾಗಾದರೆ ನಿಮ್ಮ ಚಿಕಿತ್ಸೆಯ ಕೊಠಡಿ ಪೂರ್ವ ಅಥವಾ ಈಶಾನ್ಯದಲ್ಲಿರಬೇಕು. ನೀವು ಇವೆರಡು ದಿಕ್ಕಿಗೆ ಮಖ ಮಾಡಿ ಶಸ್ತ್ರ ಚಿಕಿತ್ಸೆ ಮಾಡಬೇಕು. ರೋಗಿಯ ಯಾವ ಅಂಗವಾಗಿರಲಿ ಅಥವಾ ವೈದ್ಯಕೀಯ ಉಪಕರಣಗಳು ಎಲ್ಲೇ ಇರಲಿ ಲೆಕ್ಕಕ್ಕಿಲ್ಲ. ಏಕೆಂದರೆ ಋಷಿ-ಮುನಿ ಪ್ರಣೀತ ವಾಸ್ತುಶಾಸ್ತ್ರ ಹಾಗೆ ಹೇಳುತ್ತದೆ
ನಿಮ್ಮ ನಿವೇಶನ ಚೌಕ ಅಥವಾ ಆಯತಾಕಾರದಲ್ಲಿರದೆ ಬೇರೆ ರೀತಿಯಲ್ಲಿದೆಯೇ ? ನಿಮಗೆ ಹೆಣ್ಣು ಸಂತಾನ ಮಾತ್ರ ಪ್ರಾಪ್ತಿ. ಏಕೆಂದರೆ ನಿಮ್ಮ ನಿವೇಶನದ ಆಕಾರ ನಿಮ್ಮ X-ವರ್ಣಕಾಯದ Xxಮೇಲೆ ಪ್ರಭಾವ ಬೀರುತ್ತದೆ.
ವಾಸ್ತುಪಂಡಿತರು ಯಾವ ಕಾರಣಕ್ಕಾಗಿ ನಿಮಗೆ ತಮ್ಮ ಅಮೂಲ್ಯ , ಸನಾತನ ವಾಸ್ತುಜ್ಞಾನದ ಸಲಹೆಯನ್ನೂ ನೀಡುತ್ತಾರೆಂದು ಮೇಲಿನಂತಹ ಕಟ್ಟಪ್ಪಣೆಗಳನ್ನು ನೀಡುತ್ತಾರೆಂದು ನಿಮಗೆ ಗೊತ್ತೇ ? ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ .ಸಮೃದ್ಧಿ ಮತ್ತು ಒಳಿತಿಗಾಗಿ. ಆಧುನಿಕ ಜಗತ್ತಿಗೆ ಮೈಯೊಡ್ಡಿಕೊಂಡಿರುವ ನೀವು ಸ್ವಲ್ಪವೇ ಸ್ವಲ್ಪ ಆಲೋಚಿಸಿದರು ಸಾಕು ಇದು ಎಷ್ಟೊಂದು ಹಾಸ್ಯಾಸ್ಪದವೆಂದು ತಕ್ಷಣವೇ ಮನದಟ್ಟಾಗುತ್ತದೆ. ಮನುಷ್ಯ ತನ್ನ ಜೀವನವನ್ನು ಉತ್ತಮಗೊಳಿಸಲು , ಕನಸುಗಳನ್ನೂ ಸಾಕಾರಗೊಳಿಸಿಕೊಳ್ಳಲು ಪಟ್ಟ ಪರಿಶ್ರಮ ಮತ್ತು ಅದರಲ್ಲಿ ಗಳಿಸಿದ ಯಶಸ್ಸು ನಮ್ಮ ಕಣ್ಣಿಗೆ ನಿರಂತರ ರಾಚುತ್ತಲೇ ಇದೆ. ಕೆಲದಶಕಗಳ ಹಿಂದೆ ಅನೂಹ್ಯವೆಂದು ಭಾವಿಸಲಾಗಿದ್ದ ಸಂಗತಿಗಳು ಇಂದು ಜನಸಾಮಾನ್ಯನ ಒಡನಾಡಿಗಳಾಗಿವೆ. ಮನುಷ್ಯ ಯಂತ್ರ ಮತ್ತು ತಾಂತ್ರಿಕ ಸಿದ್ಧಿಗಳ ಮೂಲಕ ಹೆಚ್ಚು ಪ್ರಬಲನಾಗಿದ್ದಾನೆ. ವೈದ್ಯಕೀಯ , ಜೀವವೈದ್ಯಕಿಯ , ಸಂಪರ್ಕ , ಸಾರಿಗೆ , ನಿರ್ಮಾಣ ಹೀಗೆ ನೂರಾರು ರಂಗಗಳಲ್ಲಾಗಿರುವ ಕ್ರಾಂತಿಗಳಿಂದ ನಮ್ಮ ಜೀವನ ಹಿಂದೆಂದಿಗಿಂತಲೂ ಹೆಚ್ಚು ಆರಾಮ ಮತ್ತು ಆರೋಗ್ಯಕರವಾಗಿದೆ.
ಯಾವ ವಾಸ್ತುಶಾಸ್ತ್ರವು ತಪ್ಪಿಸದ ಬರಗಳನ್ನು ಆಧುನಿಕ ಆಣೆಕಟ್ಟುಗಳು ತಪ್ಪಿಸಿವೆ. ಕರಾಳ ದೈವ ಸ್ವರೂಪ ತಾಳಿದ್ದ ಪ್ಲೇಗ್ , ಸಿಡುಬು ರೋಗಗಳು ಮರೆಯಾಗಿ ಹೋಗಿವೆ. ಎಂತಹ ವಾಸ್ತು ಅನುಗುಣವಾದ ಮನೆಯಲ್ಲಿದ್ದರೂ ತಡೆಯಲಾಗದ ಪೋಲಿಯೋ ರೋಗ ವಿಜ್ಞಾನದ ದೆಸೆಯಿಂದ ಭೂಮಿಯಿಂದ ಮರೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಷ್ಟೇ ಅಲ್ಲ ಯಾವುದಾದರು ವಾಸ್ತುಪಂಡಿತ ತಾನು ಹಾಗು ತನ್ನ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಆಧುನಿಕ ವೈದ್ಯಕೀಯ ವಿಧಾನಗಳಿಗೆ ಮೊರೆ ಹೋಗುತ್ತಾನೆಯೋ ಅಥವಾ ತನ್ನ ಮನೆಯ ವಾಸ್ತುವನ್ನು ಬದಲಿಸಿಕೊಳ್ಳುವನೋ ವಿಚಾರಿಸಿರಿ. ಖಂಡಿತವಾಗಿಯೂ ಸುಖ , ಸಮೃದ್ಧಿಗಾಗಿ ಆತ ಎಡತಾಕುವುದು ಆಧುನಿಕ ವೈದ್ಯಕೀಯ ಕೇಂದ್ರಗಳಿಗೆ. ಅಷ್ಟೇ ಅಲ್ಲ ವಾಸ್ತುಶಾಸ್ತ್ರದ ವೈಜ್ಞಾನಿಕತೆಯ ಬಗ್ಗೆ ಹುಯಿಲೆಬ್ಬಿಸುವವರು ತಮ್ಮ ಮನೆ, ಕಛೇರಿಗಳನ್ನು ಯಾವ ವಿಧಾನಗಳಿಂದ ಕಟ್ಟಿರುವರೆಂದು ಒಮ್ಮೆ ಕುತೂಹಲಕ್ಕೆ ಗಮನಿಸಿರಿ. ನಿಮ್ಮ ಅಂಜಿಕೆಯನ್ನೇ ಬಂಡವಾಳವಾಗಿಸಿಕೊಂಡು ನಿಮ್ಮ ನಿವೆಶನವನ್ನು ವಾಸ್ತುಪುರುಷನಿಗೆ ಒಪ್ಪಿಸುವುದರಲ್ಲೇ ಅವರ ಹಿತಾಸಕ್ತಿ ಅಡಗಿದೆ. ವಾಸ್ತುಪಂಡಿತರು ತಮ್ಮ ಸುಖಕ್ಕಾಗಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ. ತಮ್ಮ ಧನ ಸಮೃದ್ಧಿಗಾಗಿ ನಿಮ್ಮ ಮೇಲೆ ವಾಸ್ತು ಬಳಸುತ್ತಾರೆ.
ನಮಗೆ ವಾಸ್ತುಶಾಸ್ತ್ರ ಅಥವಾ ವಾಸ್ತು ಎಂದರೆ ಕುಬೇರ, ಆಗ್ನೇಯ , ಆಯ, ವ್ಯಯ ಇತ್ಯಾದಿಗಳೇ ನೆನಪಿಗೆ ಬರುತ್ತವೆ. ಆಧುನಿಕ ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದೊರೆಯುವ ಐದು ವರ್ಷಗಳ ಈಗ ಆರ್ಕಿಟೆಕ್ಚರ್ ಎನ್ನಲಾಗುವ ತಂತ್ರಜ್ಞಾನವನ್ನು ಸಹ ನಾವು ವಾಸ್ತುಶಿಲ್ಪ ಎಂದೆ ಕರೆಯುತ್ತಿದ್ದೇವೆ. ಇದರಿಂದ ಪ್ರಾಚೀನ ಪಾರಂಪರಿಕ ವಾಸ್ತುಶಿಲ್ಪ ಮತ್ತು ಈಗಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿಸುವ ಆಧುನಿಕ ವಿದ್ಯೆ ಒಂದೇ ಎಂಬ ತಪ್ಪು ತಿಳುವಳಿಕೆ ಮೂಡುತ್ತಲಿದೆ. ಆದ್ದರಿಂದ ಪಾರಂಪರಿಕವಾದುದನ್ನು ವಾಸ್ತುಶಾಸ್ತ್ರ ಎಂತಲೂ ಆಧುನಿಕ ವಿದ್ಯೆಯನ್ನು ವಾಸ್ತುಶಿಲ್ಪ ಎನ್ನುವ ಬದಲು ವಾಸ್ತುತಂತ್ರಜ್ಞಾನ ಎಂದು ಕರೆದಿದ್ದೇನೆ. ವಾಸ್ತುಶಾಸ್ತ್ರದ ಹಾವಳಿಯ ಈ ದಿನಗಳಲ್ಲಿ ಈ ವ್ಯತ್ಯಾಸವನ್ನು ಸೂಚಿಸುವ ಪರ್ಯಾಯ ಶಬ್ದಗಳು ಸಾರ್ವತ್ರಿಕವಾಗುವ ಅನಿವಾರ್ಯವಾತೆ ಇದೆ.
ಇಂಜಿನಿಯರ್ ಗಳು , ವಾಸ್ತುತಂತ್ರಜ್ಞರು ಮತ್ತು ವಿಜ್ಞಾನಿಗಳು ಭಾರತದ ಪ್ರಾಚೀನ ವಾಸ್ತುಶಾಸ್ತ್ರದ ಅಧ್ಯಯನ ನಡೆಸಿಲ್ಲ. ಹಾಗೇನಾದರು ನಡೆಸಿದರೆ ಅದರ ಮಹತ್ವ ಗೊತ್ತಾಗುತ್ತಿತ್ತು ಎಂದು ಆಗಾಗ್ಗೆ ಪತ್ರಿಕೆಗಳಲ್ಲಿ , ದೂರದರ್ಶನ ಕಾರ್ಯಕ್ರಮಗಳಲ್ಲಿ ಹೇಳಿಕೆಗಳು ಕಾಣಿಸಿಕೊಳ್ಳುತ್ತವೆ. ವಾಸ್ತುಶಾಸ್ತ್ರ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ಎಲ್ಲ ವಾಸ್ತುಗ್ರಂಥಗಳ ಎಲ್ಲ ಶ್ಲೋಕಗಳನ್ನು ಓದಬೇಕಾದ ಅಗತ್ಯವಿಲ್ಲ. ಅನ್ನ ಬೆಂದಿದೆಯೋ ಇಲ್ಲವೋ ಎಂದು ಅರಿಯಲು ಒಂದು ಅಗುಳು ಸಾಕು. ಅದರಂತೆ ವಾಸ್ತುಶಾಸ್ತ್ರದ ಹುರುಳನ್ನು ಅರಿಯಲು ಒಬ್ಬ ಸಿವಿಲ್ ಇಂಜಿನಿಯರ್ ಗೆ ಅದರಲ್ಲಿ ಮೂಲ ಪರಿಕಲ್ಪನೆಗಳ ಪರಿಚಯವಿದ್ದರೆ ಸಾಕು. ವಾಸ್ತುಶಾಸ್ತ್ರದ ಮೂಲ ಪರಿಕಲ್ಪನೆ ನಿವೇಶನವನ್ನು ಮತ್ತು ಅದರಲ್ಲಿ ಕಟ್ಟಬೇಕಾಗಿರುವ ಮನೆಯ ಸ್ವರೂಪವನ್ನು ಅಲೌಕಿಕವಾದ ಕಾರಣಗಳೊಂದಿಗೆ ಬೆಸೆಯುತ್ತದೆ. ವಾಸ್ತುಶಾಸ್ತ್ರ ದಿಕ್ಕುಗಳು , ಗ್ರಹ , ನಕ್ಷತ್ರಗಳು , ಜಾತಿ-ವರ್ಣಗಳು ಭೂಮಿಯ ಮೇಲೆ ಜೀವಿಸುತ್ತಿರುವ ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆಯೆಂದು ನಂಬುತ್ತದೆ. ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಸಂಬಂಧವನ್ನು ಸ್ಥಾಪಿಸಲು ಮೌಢ್ಯ ನಂಬಿಕೆಗಳ ಹೊರತಾಗಿ ಬೇರೆ ಯಾವುದೇ ಆಧಾರಗಳಿಲ್ಲ. ಮನುಷ್ಯರ ಜೀವನದಲ್ಲಿ ಕಾಣಿಸಿಕೊಳ್ಳುವ ನೋವು-ನಲಿವು , ಸೋಲು-ಗೆಲುವುಗಳಿಗೆ ಅವರ ಜೀವನದ ಆಗು ಹೋಗುಗಳಾಚೆ ಬೇರೇನೋ ಇದೆಯೆಂದು ತೋರಿಸಲು ಆಗಿಲ್ಲ. ಭೂಕಂಪ, ನೆರೆ , ಬಿರುಗಾಳಿ ಮುಂತಾದ ನೈಸರ್ಗಿಕ ವಿದ್ಯಾಮಾನ ಹಾಗೂ ಗ್ರಹ , ನಕ್ಷತ್ರಗಳ ನಡುವೆ ಯಾವುದೇ ಕ್ರಮಬದ್ಧ ಸಂಬಂಧ ಇರುವುದು ಸಹ ಈವರೆಗೆ ಸಾಬೀತಾಗಿಲ್ಲ. ಯಾವೊಬ್ಬ ವಾಸ್ತುಪಂಡಿತ , ಜ್ಯೋತಿಷಿ ಇವುಗಳ ಬಗ್ಗೆ ನಂಬಲರ್ಹವಾದ ವೈಜ್ಞಾನಿಕ ವಿಧಾನದಲ್ಲಿ ದತ್ತಾಂಶ ಸಂಗ್ರಹಿಸಿ , ವಿಶ್ಲೇಷಿಸಿ ಮಂಡಿಸಿಲ್ಲ. ಆದರೆ ಈ ಎಲ್ಲ ನೈಸರ್ಗಿಕ ವಿದ್ಯಾಮಾನಗಳನ್ನು ವಿಜ್ಞಾನ ಸಾಕಷ್ಟು ಖಚಿತವಾಗಿ ತನ್ನ ವಿವಿಧ ಶಾಖೆಗಳ ಮೂಲಕ ವಿವರಿಸುವಲ್ಲಿ ಯಶಸ್ವಿಯಾಗಿದೆ. ಅಮೂರ್ತವೆನಿಸುವ ಮನಶ್ಶಾಸ್ತ್ರ , ದೈವ ನಿಯಂತ್ರಿತವೆಂದು ಪರಿಗಣಿಸಲಾಗಿದ್ದ ಜೀವವಿಜ್ಞಾನದಲ್ಲೂ ಸಹ ಸಂಶೋಧನೆಯ ದಾಪುಗಾಲಿಕ್ಕುತ್ತಿದೆ..
ಕೆಲವೊಮ್ಮೆ ವ್ಯಕಿಗಳ ವೈಯುಕ್ತಿಕ ಜೀವನ ಮತ್ತು ಅಂತರಿಕ್ಷದ ಕಾಯಗಳ ಸ್ಥಾನ , ನಿವೇಶನದಲ್ಲಿ ಕಟ್ಟಿದ ಮನೆಯ ಯೋಜನೆ ಮುಂತಾದವುಗಳ ನಡುವೆ ಏನೋ ಸಂಬಂಧ ಇರುವಂತೆ ಭಾಸವಾಗುವ ಘಟನೆಗಳು ನಡೆದಿರುವಂತೆ ಭಾಸವಾಗುತ್ತದೆ. ಆದರೆ ಇಂತಹ ಘಟನೆಗಳಿಗೆ ವಾಸ್ತು, ಜ್ಯೋತಿಷ್ಯಗಳೇ ಕಾರಣಗಳೆಂದು ಹೇಳಲು ಸಾಧ್ಯವಿಲ್ಲ. ಅಂತಹ ಘಟನೆಗಳ ಸಾಧ್ಯಸಾಧ್ಯತೆಯನ್ನು ಹುಡುಕುವ ಮೊದಲು ಅದನ್ನು ಕುರಿತಾಗಿ ಹೇಳುವ ಸಂಗತಿಗಳ ಮೂಲ ಪರಿಕಲ್ಪನೆಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕು. ವಾಸ್ತುಶಾಸ್ತ್ರ ಯಾವುದೇ ನಿರ್ದಿಷ್ಟ ಭೌತಿಕ , ಪರಿಶೀಲನೆಗೆ ಒಳಪಡುವ ಪರಿಕಲ್ಪನೆಗಳ ಮೇಲೆ ರೂಪುಗೊಂಡಿಲ್ಲವಾದ್ದರಿಂದ ಅದರ ಹೇಳಿಕೆಗಳನ್ನು ಪರೀಕ್ಷಿಸಲು ಹೊರಡುವುದು ಕಾಲ ವ್ಯರ್ಥವಲ್ಲದೆ ಮತ್ತೇನಿಲ್ಲ. ಯಾಕೆಂದರೆ ನಿರ್ದಿಷ್ಟ ತಳಹದಿ ಇಲ್ಲದ ಯಾವುದನ್ನು ಹುಡುಕಿದರೂ ಅದರಲ್ಲಿ ಕೊನೆಗೆ ಸಿಗುವುದು ಜೊಳ್ಳು ಮಾತ್ರ .
ಕಳೆದ ಐದು ಶತಮಾನಗಳಿಂದ ನಮಗೆ ದಕ್ಕಿರುವ ವೈಜ್ಞಾನಿಕ ಅರಿವಿನಿಂದ ನಾವು ವ್ಯಕ್ತಿಯೊಬ್ಬನ ಮೇಲೆ ಪ್ರಭಾವ ಬೀರಬಲ್ಲ ಅಂತರಿಕ್ಷದ ಬಲಗಳಾಗಲಿ , ಇಂದ್ರ , ಕುಬೇರ , ಇತ್ಯಾದಿ ಅಗೋಚರ ಶಕ್ತಿಗಳಾಗಲಿ (ಪುರಾಣದಲ್ಲಿ ಖಂಡಿತ ಇವೆ) ,ಇಲ್ಲವೆಂದು ವಿಶ್ವಾಸದಿಂದ ಹೇಳಬಹುದು. ಮುಂದಿನ ದಿನಗಳಲ್ಲಿ ವಿಜ್ಞಾನ ಇಂತಹ ಯಾವುದಾದರೂ ಬಲಗಳನ್ನು ಅನಾವರಣಗೊಳಿಸಬಹುದು ಎಂಬ ಆಶೆಯನ್ನು ಸಹ ತಾಳುವಂತಿಲ್ಲ. ಏಕೆಂದರೆ ಅಸ್ತಿತ್ವದಲ್ಲಿರುವ ನೈಸರ್ಗಿಕ ಬಲಗಳ ಸ್ವರೂಪವನ್ನು ಸುದೀರ್ಘ ಕಾಲದಿಂದ ಕೂಲಂಕಷವಾಗಿ ಪ್ರಯೋಗ , ಸಿದ್ಧಾಂತಗಳ ಮೂಲಕ ಪರೀಕ್ಷಿಸಿಲಾಗಿದೆ ತಪ್ಪೆಂದು ಕಂಡುಬಂದಲ್ಲಿ ಪರಿಷ್ಕರಿಸಲಾಗಿದೆ. ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ ಯಾವ ನೈಸರ್ಗಿಕ ಬಲದ ಸ್ವರೂಪವೂ ವಾಸ್ತು ಅಥವಾ ಜ್ಯೋತಿಷ್ಯ ಶಾಸ್ತ್ರದ ಯಾವ ಪರಿಕಲ್ಪನೆಗಳಿಗೂ ಆಧಾರ ಒದಗಿಸುವ ಅತ್ಯಂತ ಕ್ಷೀಣ ಸಾದ್ಯತೆಗಳು ಸಹ ಇಲ್ಲ. ಈ ನೈಸರ್ಗಿಕ ಬಲಗಳನ್ನು ಬೇರೆ ರೀತಿಯಲ್ಲಿ ಪರೀಕ್ಷಿಸಿ ನೋಡಬೇಕಾದ ಸಂಗತಿಗಳನ್ನು ವಾಸ್ತು/ಜ್ಯೋತಿಷ್ಯಗಳು ಮುಂದಿರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಪುಸ್ತಕದಲ್ಲಿ ವಾಸ್ತುಶಾಸ್ತ್ರದ ಅಸಂಬದ್ಧ ಪರಿಕಲ್ಪನೆಗಳನ್ನು ಮಾತ್ರ ವಿಚಾರಣೆ ಕೈಗೆತ್ತಿಕೊಂಡು ಉಳಿದವುಗಲನ್ನು ಓದುಗರ ವೈಚಾರಿಕ ಚಿಂತನೆಗೆ ಒಪ್ಪಿಸಲಾಗಿದೆ.
ವಾಸ್ತುಶಾಸ್ತ್ರ ಅದರ ಸಿದ್ಧಾಂತದ ಮೂಲದಲ್ಲಿಯೇ ಪರಸ್ಪರ ವಿರುದ್ಧವಾದ ಅಸಂಗತಗಳ ಗೂಡು. ಆದ್ದರಿಂದ ವಾಸ್ತುಶಾಸ್ತ್ರದ ಹೇಳಿಕೆಗಳನ್ನು ಯಾರು ಬೇಕಾದರೂ ತಮ್ಮ ಮೂಗಿನ ನೇರಕ್ಕೆ ಅರ್ಥೈಸಬಹುದು-ಫಲ ಜ್ಯೋತಿಷ್ಯದಂತೆ. ಆಧುನಿಕ ವಾಸ್ತುತಂತ್ರಜ್ಞಾನ , ಸಿವಿಲ್ ಇಂಜಿನಿಯರಿಂಗ್ ಶಿಸ್ತುಗಳನ್ನು ಅವುಗಳ ಮೂಲ ತತ್ವಗಳನ್ನು ವಾಸ್ತುಶಾಸ್ತ್ರದೊಂದಿಗೆ ಯಾವುದೇ ರೀತಿಯಲ್ಲಿ ಹೋಲಿಸಲು ಸಾಧ್ಯವಿಲ್ಲ. ಹಾಗೂ ಹೋಲಿಕೆಗೆ ಸಾಮಾನ್ಯವೆನಿಸುವ ಅಂಶಗಳೇ ಇಲ್ಲ. ವಾಸ್ತುಶಾಸ್ತ್ರದ ಬೆನ್ನು ಹಿಂದೆ ಬಿದ್ದಿರುವ ಜನರನ್ನು ಆಧುನಿಕತೆಯತ್ತ ತರುವ ಪ್ರಯತ್ನಗಳು ಸಫಲವಾಗದೆ ತಮ್ಮ ವೃತ್ತಿಯನ್ನು ಬಿಡಲಾಗದೆ ವಾಸ್ತುತಂತ್ರಜ್ಞರು ಅನುಭವಿಸುತ್ತಿರುವ ವೇದನೆ ಅಷ್ಟಿಷ್ಟಲ್ಲ. ಕಿಂಚಿತ್ ವೈಜ್ಞಾನಿಕ ಜ್ಞಾನವಿಲ್ಲದ , ಯಾವುದೇ ತಾಂತ್ರಿಕ ಅರಿವಿಲ್ಲದ ಪುರಾಣ , ಪುಣ್ಯಕಥೆಗಳನ್ನು ಬಡಬಡಿಸುವ ವಾಸ್ತುಪಂಡಿತನೊಂದಿಗೆ ವಾಸ್ತುತಂತ್ರಜ್ಞ ಸ್ಪರ್ಧಿಸಬೇಕಾದ , ಚರ್ಚಿಸಬೇಕಾದ ಸಂಗತಿಯೇ ಕಳವಳಕಾರಿಯಾಗಿದೆ.
ಆಧುನಿಕ ವಾಸ್ತುತಂತ್ರಜ್ಞಾನದ ಮೂಲ ಸಿದ್ಧಾಂತಗಳು ವೈಜ್ಞಾನಿಕ ಅಡಿಗಲ್ಲಿನ ಮೇಲಿದ್ದು ಪುರೋಗಾಮಿಯಾಗಿವೆ. ವಾಸ್ತುತಂತ್ರಜ್ಞಾನ ಬಳಕೆ , ಸುರಕ್ಷೆ , ಭದ್ರತೆ , ನೈರ್ಮಲ್ಯ , ತಾಳಿಕೆ , ಪ್ರಸ್ತುತತೆ, ಚೆಲುವು , ಆರ್ಥಿಕ ಸಮರ್ಥನೆ , ಉತ್ತಮತರ ನಿರ್ಮಾಣ ಸಾಮಗ್ರಿಗಳ ಸಮರ್ಪಕ ಬಳಕೆಯನ್ನು ಪ್ರತಿಪಾದಿಸುತ್ತದೆ. ತನ್ನೊಂದಿಗೆ ಖಚಿತ ,ವೈಜ್ನಾನಿಕ ನೆಲೆಯ ಮೇಲೆ ಸುಭದ್ರವಾಗಿ ಸ್ಥಾಪಿತವಾಗಿರುವ ಸಿವಿಲ್ ಇಂಜಿನಿಯರಿಂಗ್ ನೊಂದಿಗೆ ಸದಾ ಜೊತೆಯಲ್ಲಿದ್ದು ಆ ಮೂಲಕ ತಂತ್ರಜ್ಞಾನ , ವಿಜ್ಞಾನದೊಂದಿಗೆ ಬೆಸೆದುಕೊಂಡಿದೆ. ವಾಸ್ತುಶಾಸ್ತ್ರ ಇದಕ್ಕೆ ತದ್ವಿರುದ್ಧವಾಗಿ ಋಷಿ , ಮುನಿಗಳ , ವೇದ , ಪುರಾಣಗಳ ಅಡಿಯಾಳಾಗಿದೆ. ವಾಸ್ತುಶಾಸ್ತ್ರದ ಎಲ್ಲ ಚಿಂತನೆಗಳು ೧೦ ನೇ ಶತಮಾನ ದಾಟಿ ಮುಂದೆ ಸಾಗದೆ , ನಿಂತ ನೀರಾಗಿವೆ.
ವಾಸ್ತುಶಾಸ್ತ್ರ ಮತ್ತು ವಾಸ್ತುತಂತ್ರಜ್ಞಾನಗಳ ಮಾರ್ಗಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ವಾಸ್ತುತಂತ್ರಜ್ಞಾನ ನಿಮಗೆ ಅನುಕೂಲಕರವಾದ , ಸುಭದ್ರವಾದ ಆಸರೆಯನ್ನು ಒದಗಿಸುವ ಭರವಸೆ ನೀಡುತ್ತದೆ. ಆದರೆ ತನ್ನ ಪರಿಮಿತಿಯಾಚೆಗಿರುವ ಅದರಲ್ಲಿ ವಾಸಿಸುವ ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಹೇಳುವುದಿಲ್ಲ. ನಿಮಗೆ ಸಂತಾನ ಭಾಗ್ಯ ಇರುವುದೋ ಇಲ್ಲವೋ ಎನ್ನುವುದನ್ನು ಎಂದಿಗೂ ಉಹಿಸಲು ಹೋಗುವುದಿಲ್ಲ. ಅಂತಹ ಊಹೆಗಳಿಗೆ ಆಸ್ಪದವನ್ನು ಕಲ್ಪಿಸುವುದಿಲ್ಲ. ವಾಸ್ತುತಂತ್ರಜ್ಞಾನ ಬೆಂಕಿಯಿಂದ ಸುರಕ್ಷಿತವಾದ ಮನೆಯನ್ನೂ ಕಟ್ಟಿಕೊಡಲು ಸಮರ್ಥ . ಆದರೆ ನಿಮ್ಮ ನಿರ್ಲಕ್ಷ್ಯ ಅಥವಾ ಉದ್ಧೇಶಿತವಾಗಿ ಬೆಂಕಿ ಇಡುವ ಶತ್ರುಗಳನ್ನು ತಡೆಹಿಡಿಯುವ ಭರವಸೆ ನೀಡುವುದಿಲ್ಲ. ಆದರೆ ವಾಸ್ತುಶಾಸ್ತ್ರ ಭೌತಿಕ ವಲಯನ್ನು ಮೀರಿ ಆಧ್ಯಾತ್ಮ ವಲಯದಲ್ಲಿ ನಿಮ್ಮನ್ನು ಪ್ರಭಾವಗೊಳಿಸಬಲ್ಲುದಾಗಿ ಕೊಚ್ಚಿಕೊಳ್ಳುತ್ತದೆ. ಇಂತಹ ಸಂಗತಿಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಪ್ರಶಿಸಿದಂತೆಲ್ಲ ವಾಸ್ತುಪಂಡಿತರು ಹುಸಿ ವೈಜ್ಞಾನಿಕ ವಿವರಣೆಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಆಧುನಿಕ ತತ್ವಜ್ಞಾನಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾರ್ಲ್ ಪೋಪ್ಪರ್ ಯಾವುದೇ ಜ್ಞಾನ ಸತ್ಯವೆಂದು ಸಾಧಿಸಲು ಅಥವಾ ಪರಿಷ್ಕರಿಸಲು ಅದು ‘ಹುಸಿಕರಣ’ಗೊಳಿಸಲು (Falsification) ಮುಕ್ತವಾಗಿರಬೇಕೆಂಬ ಸಿದ್ಧಾಂತವನ್ನು ಮಂಡಿಸಿದ್ದಾನೆ. ಇದು ಬಹುತೇಕ ವಿಜ್ನಾನಿಗಳ ಮನ್ನಣೆ ಗಳಿಸಿದೆ. ವಿಜ್ಞಾನ ಹುಸಿಕರಣಗೊಳಿಸಲು ಸದಾ ತೆರೆದು ಕೊಂಡಿರುತ್ತದೆ. ಆದರೆ ವಾಸ್ತುಶಾಸ್ತ್ರ ಅಂತಹ ಅವಕಾಶಗಳನ್ನೇ ಹೊಂದಿಲ್ಲ. ನಿಮಗೆ ಯಾವುದೇ ಸಂಕಷ್ಟ ಎದುರಾಯಿತೆಂದು ಭಾವಿಸೋಣ . ನೀವು ವಾಸ್ತುಪಂಡಿತನನ್ನು ಸಂಪರ್ಕಿಸುತ್ತಿರಿ. ಆತ ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಾನೆ. ಅಂತಹ ಸಲಹೆಗಳ ಫಲಿತಾಂಶ ಭಾರಿ ಸಂಭಾವ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ನಿಮಗೆ ಒಳ್ಳೆಯದಾದರೆ ವಾಸ್ತುಶಾಸ್ತ್ರ ಅದು ತನ್ನಿಂದ ಘಟಿಸಿದಂತೆ ಘೋಷಿಸುತ್ತದೆ. ಒಂದು ವೇಳೆ ಆಗದಿದ್ದರೆ ಅದಕ್ಕೆ ಬೇರೊಂದು ಕಾರಣವನ್ನು ಹುಡುಕುತ್ತದೆ. ನಿಮ್ಮ ಕಾರ್ಖಾನೆ ಸರಿಯಾಗಿ ನಡೆಯದಿದ್ದರೆ ದಕ್ಷಿಣ ಬಾಗಿಲನ್ನು ಮುಚ್ಚುವಂತೆ ಹೇಳಲಾಗುತ್ತದೆ. ಅದರ ನಂತರವು ನಿಮಗೆ ಇನ್ನು ಹೆಚ್ಚಿನ ನಷ್ಟವುಂಟಾದರೆ ನಿಮ್ಮ ಹಣೆಯ ಬರಹ , ಜನ್ಮ ಕುಂಡಲಿ ಅಥವಾ ಬೇರೆಯ ಪರಿಹಾರಕ್ಕೆ ಮೊರೆ ಹೋಗಲು ಹೇಳಲಾಗುತ್ತದೆ. ಆದ್ದರಿಂದ ವಾಸ್ತುಶಾಸ್ತ್ರ ಯಾವುದೇ ಖಚಿತ , ಪರಿಶೀಲನಾರ್ಹ ಜ್ನಾನವನ್ನು ನೀಡುವುದಿಲ್ಲ.
ವಾಸ್ತುಶಾಸ್ತ್ರ ಬದಲಾಗುತ್ತಿರುವ ಜೀವನ ಪದ್ದತಿಯನ್ನು ಪರಿಗಣಿಸುವುದೇ ಇಲ್ಲ. ಆಧುನಿಕ ಉಪಕರಣಗಳು , ವಸ್ತು ವೈವಿಧ್ಯತೆಗಳು ವಾಸ್ತುಶಾಸ್ತ್ರವನ್ನು ಹೊಕ್ಕಿರಿಯುತ್ತಿವೆ. ಗಣಕಗಳನ್ನು ಎಲ್ಲಿರಿಸಬೇಕು ? ಕಾರ್ಖಾನೆಯಲ್ಲಿ ಕುಲುಮೆ ಎಲ್ಲಿರಬೇಕು ? ಎನ್ನುವಂತಹ ಪ್ರಶ್ನೆಗಳು ಎದುರಾದಾಗ ಹಳಸಲು ವಾಸ್ತುಶಾಸ್ತ್ರದಲ್ಲಿ ಅಗ್ನಿ , ಕುಬೇರ , ವರುಣ ಇತ್ಯಾದಿ ದೈವಗಳು ನೆರವಿಗೆ ಬರಬಹುದಲ್ಲದೆ ಹೊಸ ಅರಿವಿಗೆ ಅಲ್ಲಿ ಸ್ಥಾನವಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಪಾರ್ಟ್^ಮೆಂಟ್ ಸಂಸ್ಕೃತಿ ತೀವ್ರ ಗತಿಯಲ್ಲಿ ಹರಡುತ್ತಿದೆ. ಇಲ್ಲಿ ವಿವಿಧ ನಂಬಿಕೆಯ ಜಾತಿ , ವರ್ಗದ ಜನ ಒಂದೇ ಕಡೆ ನೆಲೆಸುವ ಅನಿವಾರ್ಯತೆ ಎದುರಾಗಿದೆ. ನಾನು , ನನ್ನ ನಿವೇಶನ ಎನ್ನುವಂಥ ಹೇಳಿಕೆಗಳು ಅಪ್ರಸ್ತುತವಾಗಿವೆ. ಇಂತಹ ಸನ್ನಿವೇಶದಲ್ಲೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ವಾಸ್ತುಪಂಡಿತರು ತಮ್ಮ ‘ಅಪಾರವಾದ ಜ್ನಾನವನ್ನು ಮನೆಗಳನ್ನು ಬಿಡಿಬಿಡಿಯಾಗಿ ಪರಿಗಣಿಸಿ ವಾಸ್ತುದೈವಗಳನ್ನು ಪ್ರತಿಷ್ಠಾಪಿಸುತ್ತಾರೆ. ಎಲ್ಲ ಮನೆಗಳು ಒಂದು ವ್ಯವಸ್ಥೆಯಾಗಿ ಹೇಗಿರಬೇಕೆಂದು ನಿರ್ಧರಿಸುವಲ್ಲಿ ವಿಫಲರಾಗುತ್ತಾರೆ. ಇವರಿಗೆ ಆಧುನಿಕ ನಗರ ನಿರ್ಮಾಣ , ನಿರ್ಮಾಣ ಕುರಿತಾದ ಕಾನೂನುಗಳು ಅವುಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿದಿಲ್ಲ.
ಹಾಗಾದರೆ ವಾಸ್ತುಶಾಸ್ತ್ರದ ಅಂತಿಮ ಫಲಿತಾಂಶ ಅಥವಾ ಗುರಿ ಏನೆಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ. ಜೀವನುದುದ್ದಕ್ಕೂ ಸಾವಿರಾರು ಧಾರ್ಮಿಕ , ಸಾಂಪ್ರದಾಯಿಕ ನಂಬಿಕೆ , ಆಚರಣೆಗಳಿಂದ ತುಂಬಿತುಳುಕುತ್ತಿರುವ ಇವುಗಳ ಮೂಲಕ ತಾತ್ಕಾಲಿಕ ಭಾವುಕ ತೃಪ್ತಿ ಪಡೆಯುತ್ತಿರುವ ನಮ್ಮ ಸಮಾಜದಲ್ಲಿ ‘ನನ್ನ ಮನೆ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿದೆ’ ಎನ್ನುವ ಸಾಂದರ್ಭಿಕ ನೆಮ್ಮದಿಯನ್ನು ವಾಸ್ತುಶಾಸ್ತ್ರ ತರುತ್ತದೆ. ಆದರೆ ವಾಸ್ತವ ಜೀವನದ ಆಗು-ಹೋಗುಗಳೆದುರು ಇದು ಸಹ ದೀರ್ಘ ಕಾಲ ನಿಲ್ಲದು. ವಾಸ್ತುಶಾಸ್ತ್ರ ಜನರನ್ನು ಕಾಲದಲ್ಲಿ ಹಿಂದಕ್ಕೆಳೆದೊಯ್ದು ಭೌತಿಕ ಜಗತ್ತಿನ ವಸ್ತುನಿಷ್ಠತೆಯಿಂದ ಭ್ರಮಾತ್ಮಕ ಜಗತ್ತಿನತ್ತ ಸೆಳೆಯುತ್ತದೆ. ಯಾರದೇ ಜೀವನದಲ್ಲಿ ಸಹಜವಾಗಿ ಮೂಡಿಬರುವ ಏಳು-ಬೀಳುಗಳನ್ನು ಎಂದಿಗೂ ಕಾಣದ ಕಾರಣಗಳಿಗೆ ಒಪ್ಪಿಸುತ್ತದೆ. ಗೊತ್ತಿರುವ ಸಂಗತಿಗಳನ್ನೂ ಗೊತ್ತಿರದ , ಎಂದಿಗೂ ಗೊತ್ತಾಗದ ಸಂಪೂರ್ಣ ಅಜ್ಞಾತ ಸಂಗತಿಗಳಿಂದ ಮುಚ್ಚಿಡುತ್ತದೆ. ಕಾರ್ಖಾನೆ ನಷ್ಟದಲ್ಲಿ ನಡೆಯುತ್ತಿರುವ ಕಾರಣಗಳು ಕಣ್ಣೆದುರಿಗಿರುವಾಗ ಅವುಗಳಿಗೆ ಕುಬೇರ , ಈಶಾನ್ಯರ ಮೂಲಕ ಪರಿಹಾರ ಪಡೆಯುವಲ್ಲಿ ನಸು ಬೆಳಕಿನಿಂದ ಕಗ್ಗತ್ತಲ ಕಡೆ ಸಾಗುವುದರ ಹೊರತು ಬೇರೆ ಯಾವ ಉದ್ದೇಶವು ಸಾಧನೆಯಾಗುವುದಿಲ್ಲ.. ಎಂದರೆ ಅಂತಿಮವಾಗಿ ವಾಸ್ತುಶಾಸ್ತ್ರ ನಂಬಿಕೆಯ ಮೇಲಿರುವ ಪೊಳ್ಳು ವಿದ್ಯೆಯಲ್ಲದೆ ಬೇರೆ ಆಗಿರಲು ಸಾಧ್ಯವಿಲ್ಲ. ಆದರೆ ಅದು ವಾಸ್ತುಪಂಡಿತನಿಗೆ ಜೀವನೋಪಾಯವನ್ನು ಒದಗಿಸಿ ಅವನನ್ನು ಬೆಳಕಿನತ್ತ ಒಯ್ಯುವುದಂತು ಖಂಡಿತ.
ವಾಸ್ತುಶಾಸ್ತ್ರದ ವಿಮರ್ಶೆಯೊಂದಿಗೆ ವಾಸ್ತುಪಂಡಿತರ ಇತಿಮಿತಿಗಳನ್ನು ನಾವು ನೋಡದೆ ಹೋದರೆ ಅಪಚಾರವೆಸಗಿದಂತಾಗುತ್ತದೆ. ನಿರ್ಮಾಣ ಸಾಮಗ್ರಿ , ನಿರ್ಮಾಣ ತಂತ್ರಜ್ಞಾನ , ನಿರ್ಮಾಣದ ಹಂತಗಳು , ನಿರ್ಮಾಣದ ಸಾಮಾನ್ಯ ರೂಪು-ರೇಷೆಗಳನ್ನು ಎಳ್ಳುಕಾಳು ಮುಳ್ಳುಮೊನೆಯಷ್ಟು ಅರಿಯದ ಇವರು ಭಾರ ಇಲ್ಲಿ ಹೆಚ್ಚಿರಬೇಕು , ಅಲ್ಲಿ ಕಡಿಮೆ ಇರಬೇಕು ಎಂದು ಬಡಬಡಿಸುವುದನ್ನು ಕಂಡರೆ ಕನಿಕರ ಉಂಟಾಗುತ್ತದೆ. ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ಪರಿಗಣಿಸಿ ಸಿವಿಲ್ ಇಂಜಿನಿಯರ್ ಕಟ್ಟದ ರಚನೆಯ ವ್ಯವಸ್ಥೆ ,ಅದರ ಕಂಬ , ತೊಲೆಗಳ ಜಾಲ , ಬಳಕೆಯ ಆಧಾರದ ಮೇಲೆ ಲೆಕ್ಕಾಚಾರಗಳಿಂದ ಯಾವ ಕಂಬಗಳಲ್ಲಿ ಎಷ್ಟು ಹೊರೆ ಬರುತ್ತದೆಯೆಂದು ನಿರ್ಧರಿಸುತ್ತಾನೆ. ಹೊರಗೆ ಕಾಣುವಂತೆ ಕಂಬಗಳಲ್ಲಿ ಭಾರಗಳು ಇರುವುದಿಲ್ಲ. ಅಷ್ಟೇ ಅಲ್ಲ ಕಟ್ಟಡಡ ರಚನೆಯ ವಿನ್ಯಾಸಗಳಲ್ಲಿ ಕಂಬಗಳ ಮೇಲೆ ಬರುವ ಹೊರೆಗಳಿಗಿಂತಲೂ ಅವುಗಳಲ್ಲಿರುವ ಭ್ರಾಮ್ಯತೆ (MomentMoments) , ಕೃಶತೆ (SlendernessSlenderness) ಇತ್ಯಾದಿ ಅಂಶಗಳು ಹೆಚ್ಚು ಪ್ರಭಾವಶಾಲಿಗಳಾಗಿರುತ್ತವೆ. ಇಳಿಜಾರಿನ ಛಾವಣಿಯ ಪರಿಕಲ್ಪನೆ ವಾಸ್ತುಶಾಸ್ತ್ರದಲ್ಲಿಲ್ಲ. ಇಂತಹ ರಚನೆಗಳನ್ನು ಆಧರಿಸಿರುವ ಕಂಬಗಳಲ್ಲಿ ನೇರ ಹೊರೆ ಹೆಚ್ಚಿಗಿರದಿದ್ದರು , ಬೇರೆ ರೀತಿಯಲ್ಲಿ ಮೇಳೈಸುವ ಬಲ ಮತ್ತು ಭ್ರಾಮ್ಯತೆಗಳು ನಿರ್ಧಾರಾತ್ಮಕವಾಗಿರುತ್ತವೆ.
ವಾಸ್ತುಪಂಡಿತ ಏನೇ ಹೇಳಲಿ ಎಂತಹುದೇ ಪರಿಹಾರ ಸೂಚಿಸಲಿ-ಸಣ್ಣ ಮನೆಯ ಹೊರತು-ನಿಮ್ಮ ಮನೆಯನ್ನು ಮಾರ್ಪಡಿಸಲು ನೀವು ಇಂಜಿನಿಯರ್ ಮೊರೆ ಹೋಗುತ್ತಿರಿ. ಇದರ ಅರ್ಥವೆಂದರೆ ವಾಸ್ತುಪಂಡಿತನನ್ನು ನೀವು ನಿಮ್ಮ ಭ್ರಮಾತ್ಮಕ ನಂಬಿಕೆಯ ಮೂಲದ ಅಗತ್ಯಗಳಿಗೆ ಬಳಸಿಕೊಂಡು ನೈಜ ವಾಸ್ತವ ಸಂಗತಿಗಳಿಗೆ ವಸ್ತುನಿಷ್ಠ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ಆಧಾರವಿಲ್ಲದ ವಾಸ್ತುಶಾಸ್ತ್ರಡ ಮೊದಲ ಹಂತ ಅನಗತ್ಯ. ವಾಸ್ತುಶಾಸ್ತ್ರ ಮತ್ತು ವಾಸ್ತುಪಂಡಿತರು ಎಷ್ಟು ಅಪ್ರಸ್ತುತ ಎನ್ನುವುದನ್ನು ಸಣ್ಣ ಉದಾಹರಣೆಯ ಮೂಲಕ ನೋಡಬಹುದು. ಸಾಮಾನ್ಯವಾಗಿ ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ವಾಸ್ತುಪಂಡಿತರಿಗೆ ತೋರಿಸುವ ಪರಿಪಾಠ ಇತ್ತೀಚಿಗೆ ವಿಕೃತ ಮಟ್ಟಕ್ಕೆ ಬೆಳೆದಿದೆ. ವಾಸ್ತುಪಂಡಿತರ ಜ್ಞಾನ ಎಂಟು ದಿಕ್ಕುಗಳಿಗೆ ಸೀಮಿತ . ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ನೋಡಿ ಇದು ಅಲ್ಲಿರಬೇಕು , ಈ ಬಾಗಿಲು ಆ ಕಡೆ ತಿರುಗಿರಬೇಕು ಎನ್ನುವಂತಹ ಹೇಳಿಕೆಗಳನ್ನೇ ತಿರುಗಿಸಿ ತಿರುಗಿಸಿ ಹೇಳಬಲ್ಲನಷ್ಟೇ. ತಾನಾಗಿಯೇ ನಿಮಗೆ ಅನುಕೂಲಕರವಾದ , ಆಧುನಿಕ ಅಗತ್ಯಗಳನ್ನೂ ಪೂರೈಸಬಲ್ಲ ಒಂದು ಯೋಜನೆಯನ್ನು ಸ್ವಯಂ ನೀಡಲಾರ. ನಿರ್ಮಿಸಬೇಕೆಂದಿರುವ ಕಟ್ಟಡ ವಿಭಿನ್ನವಾದಷ್ಟು , ಅದರ ಬಳಕೆ ಹೊಸತಾದಷ್ಟು , ಅದರ ಅಗತ್ಯತೆ ನಿರ್ದಿಷ್ಟವಾದಷ್ಟು ವಾಸ್ತುಪಂಡಿತ ಕಂಗಾಲಾಗುತ್ತಾನೆ. ಆದರೆ ವಾಸ್ತುತಂತ್ರಜ್ಞ ಅದನ್ನು ಕ್ರಮಬದ್ಧ ಮಾರ್ಗಗಳಿಂದ ಎದುರಿಸುತ್ತಾನೆ.ಕೆಲವರ್ಷಗಳ ಹಿಂದೆ ಸರ್ಕಾರ ನಿರ್ಮಿಸಲಿರುವ ಜ್ಞಾನ ನಗರ (Knowledge City) ಹೇಗಿರಬೇಕೆಂದು ವಾಸ್ತುಪಂಡಿತರೊಬ್ಬರು ಲೇಖನವನ್ನೂ ಬರೆದಿದ್ದಾರೆ. ಅಲ್ಲಿಯೂ ಸಹ ಅವರ ‘‘ಅಪಾರ ಜ್ಞಾನ’’ ಎಂಟು ದಿಕ್ಕುಗಳನ್ನು , ದೈವಗಳನ್ನು ಮೀರಿ ಹೋಗಲಾಗಿಲ್ಲ. ಇದು ವಾಸ್ತುಶಾಸ್ತ್ರದ ಕೊರತೆ.
ಪ್ರತಿಯೊಬ್ಬ ಗ್ರಾಹಕನಿಗೂ ತಾನು ಖರೀದಿಸುವ ಉತ್ಪನ್ನ , ಪಡೆಯುವ ಸೇವೆಗೆ ಖಚಿತ ಫಲಿತಾಂಶ , ನಿರ್ದಿಷ್ಟ ಪರಿಣಾಮಗಳು ದಕ್ಕಬೇಕು. ಹಾಗಾದಾಗ ಮಾತ್ರ ಗ್ರಾಹಕ ತಾನು ಮಾಡಿದ ವೆಚ್ಚ , ಪಟ್ಟ ಪರಿಶ್ರಮ ಸಾರ್ಥಕವೇ ಅಲ್ಲವೇ ಎಂದು ನಿರ್ಧರಿಸಬಲ್ಲ. ವಾಸ್ತು ಮತ್ತು , ಜ್ಯೋತಿಷ್ಯಗಳಿಗೆ ಈ ಹಂಗುಗಳಿಲ್ಲ. ಯಾವುದೇ ಹೊಣೆಗಾರಿಕೆಯಿಲ್ಲ. ಲೌಕಿಕ ಸಮಸ್ಯೆಗಳನ್ನು ಅಲೌಕಿಕಗೊಳಿಸಿ , ಫಲಿತಾಂಶಗಳನ್ನು ವ್ಯಕ್ತಿಗತಗೊಳಿಸಿ, ಹೊಣೆಗಾರಿಕೆಯನ್ನು ಹಣೆಬರಹ , ತಾರಾ-ಗ್ರಹಗಳಲ್ಲಿರಿಸಿ , ಭವಿಷ್ಯದ ನೆಮ್ಮದಿಯನ್ನು ಅತಾರ್ಕಿಕವಾಗಿ ಬಿಂಬಿಸುವ ವಾಸ್ತುಶಾಸ್ತ್ರ ಜೀವನದ ಸಹಜವಾದ ಏಳು-ಬೀಳುಗಳನ್ನು ಮುಖಾಮುಖಿಯಾಗಿ ಎದುರಿಸದೆ ಮಾನಸಿಕ ದುರ್ಬಲರನ್ನಾಗಿ ಮಾಡುತ್ತದೆ.
ವಾಸ್ತುಶಾಸ್ತ್ರಗಳಲ್ಲಿರುವ ಮನೆಯನ್ನು ಯೋಜಿಸುವ ವಿಧಾನ ಮತ್ತು ಇತರ ಬಹುತೇಕ ಮಾರ್ಗದರ್ಶಿ ಸೂತ್ರಗಳು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇವೆಯೆಂದು ವಾಸ್ತುಪಂಡಿತರು ಯಾವ ಸಂಕೋಚವೂ ಇಲ್ಲದೆ ಘಂಟಾಘೋಷವಾಗಿ ಸಾರುತ್ತಾರೆ. ಆದರೆ ವಾಸ್ತುಶಾಸ್ತ್ರದಲ್ಲಿರುವ ಯಾವ ತತ್ವವನ್ನು ಇಲ್ಲಿಯವರೆಗೂ ಯಾವ ಪಂಡಿತನೂ ವೈಜ್ಞಾನಿಕ ಮಾರ್ಗಗಳಾದ ಪ್ರಯೋಗ-ದತ್ತಾಂಶ ಸಂಗ್ರಹ-ವಿಶ್ಲೇಷಣೆ –ಪರಿಷ್ಕರಣೆ-ವಾದ–ಸಿದ್ಧಾಂತಗಳ ಮಾರ್ಗಗಳಿಂದ ಸಾಧಿಸಿ ತೋರಿಸಿಲ್ಲ. ಪ್ರತಿಸಲ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸಿದಾಗ ವೇದೋಪನಿಷತ್ತುಗಳಲ್ಲಿ ,ಪುರಾಣದ ಕಥೆಗಳಲ್ಲಿ ಮರೆಯಾಗುತ್ತಾರೆ. ಮುಂದಿನ ಪುಟಗಳಲ್ಲಿ ವಾಸ್ತುಶಾಸ್ತ್ರದಲ್ಲಿ ಏನಿದೆ , ಅದು ವೈಜ್ನಾನಿಕವೇ , ಈ ಕಾಲಕ್ಕೆ ಅದು ಪ್ರಸ್ತುತವೆ ಎನ್ನುವುದನ್ನು ವಾಸ್ತುಶಾಸ್ತ್ರವನ್ನು ಪರಿಚಯಿಸುತ್ತಲೇ ಅನಾವರಣಗೊಳಿಸುವ ಯತ್ನ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಸ್ತು ಹಾಗೂ ಅದರೊಂದಿಗೆ ತಳುಕು ಹಾಕಿಕೊಂಡಿರುವ ಜ್ಯೋತಿಷದ ಬಗ್ಗೆ ಮಾತನಾಡುತ್ತಿದ್ದಾರೆ. ಯಾವುದೇ ಮನೆ ಕಟ್ಟುವಲ್ಲಿ ಅಥವಾ ಮನೆ ಪ್ರವೇಶದ ಸಂಭ್ರಮದಲ್ಲಿ ವಾಸ್ತುವಿನದೇ ಮಾತು. ವಾಸ್ತುತಜ್ಞರಂತೆ ತೋರಿಪಡಿಸಿಕೊಳ್ಳುವ ನಾನೀಗಾಗಲೇ ತಿಳಿಸಿರುವ ಸುಶಿಕ್ಷಿತರು ಹೊಸ ಮನೆಯನ್ನೊಮ್ಮೆ ಸುತ್ತು ಹಾಕಿ ಬಂದು ವಾಸ್ತುಶಾಸ್ತ್ರದ ಪ್ರಕಾರ ಅದು ಅಲ್ಲಿರಬಾರದಿತ್ತು , ಇದು ಇಲ್ಲಿರಬೇಕಿತ್ತು ಎಂದು ಹೇಳುತ್ತಾರೆ. (ಈವರೆಗೆ ಬಡವರು , ಕೆಲಸಗಾರರು , ಕಟ್ಟಡ ಕಾರ್ಮಿಕರು ವಾಸ್ತು ಕುರಿತಾಗಿ ಮಾತನಾಡಿದ್ದನ್ನು ನಾನು ಕೇಳಿಲ್ಲ.. ಮೇಸ್ತ್ರಿ ಹಂತದಿಂದ ವಾಸ್ತುಜ್ಞಾನ ಚಿಗುರೊಡೆಯುವುದು ಗಮನಾರ್ಹವಾಗಿದೆ.) ಅವರ ಮಾತನ್ನು ಕೇಳಿದ ಇತರರು ಅವರ ವಾಸ್ತುಜ್ಞಾನವನ್ನು ಕಣ್ಣರಳಿಸಿ, ಕಿವಿ ತಿರುಗಿಸಿ ಕೇಳುತ್ತಾರೆ. ಹಾಗಾದರೆ ಇವರ ವಾಸ್ತುಜ್ಞಾನವೆಲ್ಲ ಎಲ್ಲಿಂದ ಬಂದಿತು. ಇದರಲ್ಲಿ ಹುರುಳೆಷ್ಟು ಎಂದು ನಾವು ವಿಚಾರಿಸ ಹೊರಡುವುದಿಲ್ಲ. ನಾವು ತಿಳಿಯದ ಅಥವಾ ಒಳಹೊಕ್ಕು ನೋಡದ ವಾಸ್ತುಶಾಸ್ತ್ರದಂತಹ ವಿಚಾರದಲ್ಲಿ ನಂಬಿಕೆಯೇ ಪ್ರಧಾನವಾಗಿರುತ್ತದೆ. ಇಂತಹ ನಂಬಿಕೆ ಯಾವ ಮಟ್ಟಿಗೆ ಸರಿ ಎಂದು ತಿಳಿಯಲು ಆ ನಂಬಿಕೆಯ ಮೂಲಕ್ಕೆ ಸಾಗುವುದೊಂದೆ ದಾರಿ. ವಾಸ್ತುಶಾಸ್ತ್ರದಂತಹ ನಂಬಿಕೆಗಳ ಮೂಲವನ್ನು ಹುಡುಕಲು ಪರಿಶ್ರಮ ಮತ್ತು ಅದು ನಿಜವಾಗಿಯೂ ಏನಿರಬಹುದೆಂದು ವಿಚಾರಿಸುವ ಕುತೂಹಲ ಮಾತ್ರ ತುಂಬಿರಬೇಕು. ಆದ್ದರಿಂದ ನಿಮ್ಮ ಬಚ್ಚಲು ಮನೆ ಇಲ್ಲಿಯೇ ಇರಬೇಕು , ನೀವು ಇಲ್ಲಿಯೇ ಮಲಗಬೇಕು , ನೀವು ಇಂತಹ ಮೂಲೆಯಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಬೇಕು ಎಂದು ಹೇಳುವ ವಾಸ್ತುಶಾಸ್ತ್ರಿಯ ಜ್ಞಾನ ಎಲ್ಲಿಂದ ಬಂದಿತೆಂದು ನೋಡಲು ಈಗ ಹೊರಡೋಣ. ವಾಸ್ತುಶಾಸ್ತ್ರ ಪ್ರಾಚೀನವಾದ ಋಷಿ ಪ್ರಣೀತವಾದ ವೈಜ್ಞಾನಿಕ ನೆಲೆಗಟ್ಟಿನ ಮೇಲಿರುವ ಜ್ಞಾನವೆಂದು ಹೇಳುತ್ತಿರುವುದು ಯಾವ ಮಟ್ಟಿಗೆ ಸರಿ ಎಂದು ತಿಳಿಯಲು ಇದಕ್ಕಿಂತ ಒಳ್ಳೆಯ ದಾರಿಯಿಲ್ಲ. ಆದ್ದರಿಂದವಾಸ್ತುಪುರುಷನ ತಪಾಸಣೆ ಮತ್ತು ವಾಸ್ತುಗ್ರಂಥಗಳು ಅಧ್ಯಾಯಗಳಲ್ಲಿ ವಾಸ್ತುಶಾಸ್ತ್ರದ ಮೂಲಕ್ಕೆ ಹೋಗಿ ವಾಸ್ತುಶಾಸ್ತ್ರದ ಮೌಲ್ಯ ನಿರ್ಣಯಕ್ಕೆ ಯತ್ನಿಸಲಾಗಿದೆ.
ಈಗ ಎಲ್ಲರೂ ಕನವರಿಸುತ್ತಿರುವ ವಾಸ್ತುಶಾಸ್ತ್ರದಲ್ಲಿ ವಾಸ್ತುಪುರುಷನದು ಪ್ರಮುಖವಾದ ಪರಿಕಲ್ಪನೆ. ವಾಸ್ತುಪುರುಷ ನಿಮ್ಮ ನಿವೇಶನದಲ್ಲಿ ಏಕೆ ನೆಲೆಸಿದ ಎನ್ನುವ ಕಥೆಯನ್ನು ನಾವು ಈಗಾಗಲೇ ತಿಳಿದಿದ್ದೇವೆ. ಈ ವಾಸ್ತುಪುರುಷ ಪ್ರತಿ ನಿವೇಶನದಲ್ಲಿ ಈಶಾನ್ಯದಲ್ಲಿ ತಲೆಯೂರಿ , ನೈರುತ್ಯದಲ್ಲಿ ಕಾಲುಗಳನ್ನಿರಿಸಿಕೊಂಡು ಮುಖ ಹಾಗೂ ಹೊಟ್ಟೆಗಳನ್ನು ನೆಲಕ್ಕ ತಾಗಿಸಿದಂತೆ ಅಡಿಮುಖನಾಗಿ ನಿವೇಶನವೊಂದರಲ್ಲಿ ಅಸ್ತಿತ್ವದಲ್ಲಿರುವನೆಂದು ನಂಬಲಾಗಿದೆ. ಈತನ ಕೈಗಳು ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನತ್ತ ಚಾಚಿ ಮೇಲಕ್ಕೆ ಬಗ್ಗಿದ್ದರೆ ಮೊಳಕಾಲುಗಳು ಮೊಳಕೈಗೆ ಸಮಾನಾಂತರದಲ್ಲಿದ್ದು ಮಂಡಿ ಮೊಳಕೈ ಗಂಟಿನ ಸನಿಹದಲ್ಲಿದೆ. ವಾಸ್ತುಪುರುಷನ ಈ ಭಂಗಿಯನ್ನು ನಿವೇಶನದೊಂದಿಗೆ ಸಮೀಕರಿಸಿ ವಾಸ್ತುಮಂಡಲ ರಚಿಸಲಾಗಿದೆ. ವಾಸ್ತುಮಂಡಲ ವಾಸ್ತುಪುರುಷನ ಅಂಗಾಂಗಳಿಗೆ ಹೊಂದಾಣಿಕೆಯಾಗುತ್ತದೆ. ಈ ವಾಸ್ತುಮಂಡಲವೇ ವಾಸ್ತುವಿನ್ಯಾಸದ ಮೂಲ. ನಂತರದ ದಿನಗಳಲ್ಲಿ ವಾಸ್ತುಪುರುಷನನ್ನು ಯೋಗಶಾಸ್ತ್ರದಲ್ಲಿ ಪರಿಗಣಿತವಾಗಿರುವ ಆರು ಚಕ್ರಗಳೊಂದಿಗೆ ಸಹ ಹೊಂದಾಣಿಕೆ ಮಾಡಲಾಗಿದೆ.. (ಚಿತ್ರ-೧: ಮುಖ ಅಡಿಯಾಗಿ ಮಲಗಿರುವ ವಾಸ್ತು ಪುರುಷ ಮತ್ತು ಪರಮಶಾಯಿಕ ಮಂಡಲ- ಪುರುಷನಲ್ಲಿ ಚಕ್ರಗಳು ಮತ್ತು ಅವುಗಳ ಸ್ಥಾನ ) ( ಯೋಗ ಶಾಸ್ತ್ರ ಚಿತ್ರ ವಿಚಿತ್ರ ಸಂಗತಿಗಳನ್ನು ಪರಿಗಣಿಸುತ್ತದೆ. ಇಡಾ-ಪಿಂಗಳ-ಸುಷ್ಮಾ ಎನ್ನುವ ನಾಡಿಗಳ ಮೂಲಕ ಆರು ಚಕ್ರಗಳನ್ನು ಪ್ರಜ್ಞೆ ದಾಟಿದಾಗ ಕೈವಲ್ಯ ಜ್ಞಾನ ಲಭ್ಯವೆಂದು ಹೇಳುತ್ತದೆ. ಈವರೆಗೆ ವಿಜ್ಞಾನಿಗಳು , ವೈದ್ಯರು ಅತ್ಯಾಧುನಿಕ ಉಪಕರಣಗಳನ್ನು ಬಳಸಿ , ಅಂಗರಚನೆಯನ್ನು ಅಭ್ಯಸಿಸಿದ್ದಾರೆ. ದೇಹವನ್ನು ತೆರೆದು ಅತ್ಯಂತ ಜಟಿಲವಾದ ಲಕ್ಷಾಂತರ ಶಸ್ತ್ರಕ್ರಿಯೆಗಳನ್ನು ನಡೆಸಿದ್ದಾರೆ. ಅವರಲ್ಲಿ ಯಾರಿಗೂ ಈ ಮೂರೂ ನಾಡಿಗಳು ಎಲ್ಲಿವೆ ಎಂದು ಗೊತ್ತಿಲ್ಲ. ಆದರೆ ಬಾಬಾ/ಶ್ರೀಶ್ರೀ/ಸದ್ಗುರುಗಳಿಗೆ ಮಾತ್ರ ಅವು ಖಚಿತವಾಗಿ ಗೊತ್ತು.-ಅದ್ಭುತ ಜ್ಞಾನ ! )
ಚಿತ್ರ-೧: ಮುಖ ಅಡಿಯಾಗಿ ಮಲಗಿರುವ ವಾಸ್ತು ಪುರುಷ ಮತ್ತು ಪರಮಶಾಯಿಕ ಮಂಡಲ- ಪುರುಷನಲ್ಲಿ ಚಕ್ರಗಳು ಮತ್ತು ಅವುಗಳ ಸ್ಥಾನ
(೧) ಮೂಲಾಧಾರ ಚಕ್ರ - ವಾಸ್ತುಪುರುಷನ ಕಾಲುಗಳು - ಭೂಮಿ ತತ್ವ : ಕಾಲುಗಳು ಮನುಷ್ಯನ ಭಾರವನ್ನು ಹೊರುತ್ತವೆ. ಆತನಿಗೆ ಅವೇ ಅಧಿಷ್ಠಾನ. ಆದ್ದರಿಂದ ಮೂಲಾಧಾರ ಭದ್ರವಾಗಿರಬೇಕು. ಆದ್ದರಿಂದ ಕಟ್ಟಡದ ನೈರುತ್ಯ ಭಾಗ ಬಲವಾಗಿದ್ದು ಕಟ್ಟಡದ ಹೆಚ್ಚಿನ ಭಾರವನ್ನು ಹೊರುವಂತಿರಬೇಕು. ಪಾದಗಳು ಬಿಸಿಯಾಗಿರುತ್ತವೆ. ಆದ್ದರಿಂದ ನೈರುತ್ಯ ದಿಕ್ಕು ಸಹ ಬೆಚ್ಚನೆಯ ನೆಲೆ.
(೨) ಸ್ವಾಧಿಷ್ಠಾನ ಚಕ್ರ - ವಾಸ್ತುಪುರುಷನ ಕೆಳಹೊಟ್ಟೆ ಹೊಕ್ಕಳು ಸನಿಹದ ಮೂತ್ರಪಿಂಡವಿರುವ ಜಾಗ - ನೀರಿನ ತತ್ವ . ವಾಸ್ತುಪುರುಷ ಮಂಡಲದಲ್ಲಿ ಇದು ದಕ್ಶಿಣ ಹಾಗೂ ಪಶ್ಚಿಮದಲ್ಲಿರುತ್ತದೆ. ಆದ್ದರಿಂದ ಬಚ್ಚಲು , ನೀರಿನ ಸಂಗ್ರಹ ಇತ್ಯಾದಿ ಸೌಕರ್ಯಗಳನ್ನು ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳಲ್ಲಿರಿಸಬೇಕು. ಬಳಸಿದ ನೀರನ್ನು ಹೊರಹಾಕುವ ದಿಕ್ಕುಗಳು ಸಹ ಇವೆ.
(೩) ಮಣಿಪುರ ಚಕ್ರ - ವಾಸ್ತುಪುರುಷನ ಹೊಕ್ಕಳು ಭಾಗ-ಅಗ್ನಿ ತತ್ವ. ಇದು ಅಗ್ನಿ ಮತ್ತು ತೇಜಸ್ಸಿಗೆ ಸಂಬಂಧಿಸಿದ ಜಾಗ-ಬ್ರಹ್ಮ ಸ್ಥಾನ. ಕಮಲಪೀಠದ ಮೇಲೆ ಬ್ರಹ್ಮ ರಾರಾಜಿಸಿರುವಂತೆ ಕಾಲಿನ ಮೇಲೆ (ಮೂಲಾಧಾರ ಚಕ್ರ) ಹೊಕ್ಕುಳು(ಮಣಿಪುರ ಚಕ್ರ) ವಿರಾಜಮಾನವಾಗಿದೆ. ಬಸಿರಿನಲ್ಲಿರುವ ಕೂಸು ಹೊಕ್ಕುಳ ಬಳ್ಳಿಯ ಮೂಲಕ ತಾಯಿಯಿಂದ ಪೋಷಣೆ ಪಡೆಯುತ್ತದ್ದೆ. ಹೊಕ್ಕುಳು (ಬ್ರಹ್ಮಸ್ಥಾನ) ಜೀವನನ್ನು ಬ್ರಹ್ಮನೊಂದಿಗೆ ಬೆಸೆಯುವ ಮಾರ್ಗ. ಈ ಕೇಂದ್ರದ (ಬ್ರಹ್ಮಸ್ಥಾನ) ಮೂಲಕ ವಾಸ್ತುಪುರುಷ ಉಸಿರಾಡುತ್ತಾನೆ. ಆದ್ದರಿಂದ ಕಟ್ಟಡದ ಈ ಭಾಗವನ್ನು ಮುಚ್ಚದೆ ತೆರೆದಿರಿಸಬೇಕು. ಇಲ್ಲಿ ಏನನ್ನೂ ಕಟ್ಟಬಾರದು.
(೪) ಅನಾಹತ ಚಕ್ರ - ವಾಸ್ತುಪುರುಷನ ಹೃದಯದ ಭಾಗ-ವಾಯು ತತ್ತ್ವ ಇದು ಉಸಿರಾಟಕ್ಕೆ ಆ ಮೂಲಕ ಶ್ವಾಸಕೋಶಗಳಿಗೆ ಸಂಬಂಧಿಸಿದ ವಾಯು ತತ್ತ್ವ . ಕಟ್ಟಡದ ಈ ಭಾಗ ಗಾಳಿಯಾಡುವಂತಿರಬೇಕು .
(೫) ವಿಶುದ್ಧ ಚಕ್ರ -ವಾಸ್ತುಪುರುಷನ ಗಂಟಲಿನ ಭಾಗ-ಆಕಾಶ ತತ್ವ. ಗಂಟಲಿನಿಂದ ಉಗಮವಾಗುವ ಓಂಕಾರ ಮೆದುಳಿನ ಪೆಟ್ಟಿಗೆಯಲ್ಲಿ ಪ್ರತಿಧ್ವನಿತವಾಗಿ ಅನುರಣಿಸುತ್ತದೆ
(೬) ಆಜ್ಞಾ ಚಕ್ರ - ವಾಸ್ತುಪುರುಷನ ಎರಡು ಹುಬ್ಬುಗಳ ನಡುವಿನ ಜಾಗ-ಆಕಾಶ ತತ್ವ. ಕಟ್ಟಡದ ಈ ಭಾಗದಲ್ಲಿ ತೆರೆದ ಜಾಗಗಳಿರಬೇಕು. ವಾಸ್ತುಪುರುಷನ ತಲೆ ಈಶಾನ್ಯಕ್ಕಿದೆ. ತಲೆ ಯಾವಾಗಲೂ ತಂಪಾಗಿರಬೇಕು. ಹವಾಮಾನ ಈಶಾನ್ಯ ದಿಕ್ಕಿನಲ್ಲಿ ಯಾವಾಗಲೂ ತಂಪಾಗಿರುತ್ತದೆ. ಇದು ದೇವರ ಕೋಣೆಗೆ ಪ್ರಶಸ್ತವಾದ ಜಾಗ
ವಾಸ್ತುಪುರುಷನ ದೇಹ ಮತ್ತು ಕಟ್ಟಡದ ನಡುವಿನ ಸಂಬಂಧ ಇಷ್ಟಕ್ಕೆ ನಿಲ್ಲದೆ ಉಳಿದ ಅಂಗಾಂಗಗಳಿಗೂ ವಿಸ್ತರಿಸಿದೆ. ಈತನ ಯಕೃತ್ ಆಗ್ನೇಯ ದಿಕ್ಕಿಗಿದೆ. ಈ ದಿಕ್ಕಿನ ಅಧಿದೇವತೆ ಅಗ್ನಿ. ಆದ್ದರಿಂದ ಇದು ಅಡುಗೆಗೆ ಮೀಸಲಿರಿಸಬೇಕಾದ ಜಾಗ. ವಾಸ್ತುಪುರುಷನ ಗುಲ್ಮ ಮತ್ತು ದೊಡ್ದ ಕರುಳಿನ ಕೊನೆಯ ಭಾಗ ವಾಯು ಅಧಿಪತ್ಯದ ವಾಯುವ್ಯ ದಿಕ್ಕಿನಲ್ಲಿವೆ . ಇವು ದೇಹದಲ್ಲಿ ಆಹಾರ ಸಂಗ್ರಹದ ನೆಲೆಗಳು. ಆದ್ದರಿಂದ ಸಾಮಾನಿನ ಕೋಣೆ , ಸಂಗ್ರಹಗಳ ಜಾಗ ಇದಾಗಿರಬೇಕು ಮೇಲೆ ತಿಳಿಸಿದ ಎಲ್ಲ ದಿಕ್ಕುಗಳು ವಿವಿಧ ಗ್ರಹಗಳು ಮತ್ತು ಅವುಗಳ ಸ್ಥಾನದೊಂದಿಗೆ ಸಂಬಂಧ ಹೊಂದಿವೆ. ಜಾತಕನಕ್ಷೆ ಮತ್ತು ವಾಸ್ತುಮಂಡಲ ಇವೆರಡೂ ಒಂಬತ್ತು ಚೌಕದ ಮನೆಗಳಿಂದಾಗಿವೆ. ಈ ಮೂಲಕ ವಾಸ್ತು ಮತ್ತು ಗ್ರಹಗತಿಗಳ ನಡುವಿನ ಸಂಬಂಧ ಪರಿಪೂರ್ಣಗೊಂಡಿದೆ. ಮುಖ ಅಡಿಯಾದ ಭಂಗಿಯಲ್ಲಿ ವಾಸ್ತುಪುರುಷನಿರುವುದರಿಂದ ಆತನ ಸೂಕ್ಷಾಂಗಗಳಿರುವ ಕಡೆ ಕಟ್ಟಡದ ಯಾವ ಭಾರಗಳೂ ಬರಬಾರದು. ಈ ಸೂಕ್ಷ ಅಂಗಗಳು ಒಳ-ಹೊರಗಿನ ಸಂಚಲನೆಯ ತಾಣಗಳು. ಇದರ ಆಧಾರದ ಮೇಲೆ ವಾಸ್ತುಪಂಡಿತರು ಹೇಳುವ ವಾಸ್ತುರಹಸ್ಯಗಳು ಒಡಮೂಡಿವೆ. ಇದರ ಒಟ್ಟು ಸಾರಾಂಶ ವಾಸ್ತುಮಂಡಲದಲ್ಲಿ ಸೂಚಿತವಾಗಿದೆ.
ವಾಸ್ತುಪುರುಷನ ಬಾಗಿರುವ ಭಂಗಿಯನ್ನನುಸರಿಸಿ ವಾಸ್ತುಮಂಡಲ ರಚಿಸಲ್ಪಟ್ಟಿದೆ. ಚೌಕಾಕಾರದಲ್ಲಿರುವ ಈ ಮಂಡಲವನ್ನು ಹಲವಾರು ಸಣ್ಣ ಚೌಕಗಳಾಗಿ ವಿಭಜಿಸಲಾಗಿದೆ. ಈ ವಿಭಜನೆ ಸನ್ನಿವೇಶಕ್ಕೆ , ಅನ್ವಯಿಸಬೇಕಾದ ರಚನೆಗೆ ತಕ್ಕಂತೆ ಬದಲಾಗುತ್ತದೆ. ಇದರ ಆಧಾರದ ಮೇಲೆ ೩೨ ಕ್ಕೂ ಅಧಿಕ ವಾಸ್ತುಮಂಡಲಗಳನ್ನು ಹೇಳಲಾಗಿದೆ. ಅತ್ಯಂತ ಸರಳವಾದುದು ಒಂದು ಚೌಕ(ಪಾದ) ಇದ್ದರೆ ೨೫೬ ಚೌಕ/ಪಾದದ ತ್ರಿಯುತ ಮಂಡಲ ಸಹ ಇದೆ. ಈ ಮಂಡಲಗಳ ಕೆಲ ಹೆಸರುಗಳು ಹೀಗಿವೆ.. ೧/೧=೧ (ಸಕಲ) , ೨/೨=೪ (ಪೇಚಕ) , ೩/೩=೯ (ಪೀಠ) , ೪/೪=೧೬ (ಮಹಾಪೀಠ) , ೫/೫=೨೫ (ಉಪಪೀಠ) , ೬/೬=೩೬ (ಉಗ್ರಪೀಠ) , ೭/೭=೪೯ (ಸ್ಥಾಂದಿಲ) , ೮/೮=೬೪ (ಮಂಡೂಕ) , ೯/೯=೮೧ (ಪರಮಸಾಯಿಕ) ಹೆಸರಿನ ಮಂಡಲಗಳಿವೆ. ವಿಭಜಿಸಲ್ಪಟ್ಟ ಪ್ರತಿಯೊಂದು ಸಣ್ಣ ಚೌಕವನ್ನು ೪೫ಕ್ಕೂ ಅಧಿಕ ದಿಕ್ಪಾಲಕ/ದೇವತೆ/ಯಕ್ಷ/ಅಸುರ ಇತ್ಯಾದಿಗಳಿಗೆ ನಿಗದಿಪಡಿಸಲ್ಪಟ್ಟಿದೆ. ಇದರಲ್ಲಿ ನೀವು ಎಂದೂ ಕೇಳರದ ರೋಗ , ಮುಖ್ಯ , ಭಲ್ಲಟ , ದಿತಿ , ಸಾತ್ಯಕಿ , ಪಾಪ , ಅಪ ,ಪರ್ಜನ್ಯ , ಶೇಷ , ಜಯ , ಅಸುರ , ಪುಷ್ಯ , ಸತ್ಯ , ಸುಗ್ರೀವ , ಭೃಷ್ , ನಂದಿ , ಆಕಾಶ , ಪಿತೃ , ಮೃಗ , ಭೃಂಗಿರಾಜ , ಗಂಧರ್ವ , ಗೃಹಸ್ವತ್ , ವಿತಾರಿ , ಪುಷ್ಪ , ಸವಿತಾ , ಸವಿತ್ರ, ವಿಬುಧ , ಮುಂತಾದ ದೇವ , ಯಕ್ಷ , ಕಿನ್ನರ , ಕಿಂಪುರುಷ , ಅಸುರರು ಸೇರಿದ್ದಾರೆ.
ಮನೆಯ ನಿರ್ಮಾಣದ ಆರಂಭ , ಮನೆಯ ಪ್ರವೇಶ ಸೇರಿದಂತೆ ನಿರ್ಮಾಣದ ವಿವಿಧ ಘಟ್ಟಗಳಲ್ಲಿ ಇವರಿಗೆ ನಾನಾ ಬಗೆಯ ಶಾಖಾ ಮತ್ತು ಮಾಂಸಾಹಾರದ ಬಲಿ/ನೈವೇದ್ಯ ಅರ್ಪಿಸಿ ಶಾಂತಗೊಳಿಸಬೇಕೆಂದು ವಾಸ್ತುಗ್ರಂಥಗಳು ತಿಳಿಸುತ್ತವೆ. ಭೃಂಗರಾಜನಿಗೆ ಸಮುದ್ರ ಮೀನು , ಮೃಗನಿಗೆ ಒಣಮಾಂಸ , ರುದ್ರಜಯನಿಗೆ ಮಾಂಸ , ರಕ್ತ ಮಿಶ್ರಿತ ಕುರಿಯ ಕೊಬ್ಬಿನ ಬಲಿಯನ್ನು (ಮ.ಮ ೮/೮, ೮/೧೨,೮/೧೪ , ಮಾ.ಸಾ ೮/೧೨ , ೮/೧೩ ) ಅರ್ಪಿಸಬೇಕೆಂದು ಹೇಳುತ್ತವೆ.ಆಧುನಿಕ ಕಾಲದಲ್ಲಿ ಶಾಖಾಹಾರಿಗಳಿರಲಿ ಕಟ್ಟಾ ಮಾಂಸಾಹಾರಿಗಳೇ ತಮ್ಮ ನಿವೇಶನದಲ್ಲಿ ಇಂತಹ ಬಲಿ ನೀಡುವ ಪೂಜೆಯನ್ನು ಒಪ್ಪುವುದಿಲ್ಲ. ಈ ವಿವರಗಳು ವಾಸ್ತುಗ್ರಂಥಗಳಲ್ಲಿ ಇದೆಯೆಂದು ಬಹುತೇಕ ವಾಸ್ತುಪಂಡಿತರಿಗೆ ಗೊತ್ತಿಲ್ಲ. ಅವರ ತಿಳುವಳಿಕೆಯೇನಿದ್ದರೂ ಕುಬೇರ , ವಾಯುವ್ಯ , ಈಶಾನ್ಯ ಇತ್ಯಾದಿಗಳಿಗೆ ಮಾತ್ರ ಸೀಮಿತ. ಇಂತಹ ವಿವರಗಳನ್ನು ಬಲ್ಲ ಶಾಸ್ತ್ರೋಕ್ತವಾಗಿ ಎಲ್ಲ ನಡೆಯಬೇಕು ಎಂದು ಹೇಳುವ ಅತ್ಯಲ್ಪ ಬೆರಳೆಣಿಕೆಯ ವಾಸ್ತುಪಂಡಿತರು ಆಗದ ಹೋಗದ ಇಂತಹುವುಗಳನ್ನು ಹೇಳಿ ಗಿರಾಕಿಗಳನ್ನು ಕಳೆದುಕೊಳ್ಳುವುದೇಕೆ ಎಂಬ ಜಾಣ ವ್ಯಾವಹಾರಿಕ ನಿಲುವು ತಾಳುತ್ತಾರೆ. ಬೇರೆಯವು ಮಾತ್ರ ಶಾಸ್ತ್ರೋಕ್ತವಾಗಿ ನಡೆಯಬೇಕೆಂದು ನಿಮ್ಮನ್ನು ಹೆದರಿಸುತ್ತಾರೆ.
ಅದೇನೇ ಇರಲಿ ನೀವು ಕಟ್ಟಿಸಬೇಕೆಂದಿರುವ ಮನೆಯ ಯಾವ ಭಾಗದಲ್ಲಿ ಯಾವ ದೇವತೆ ನೆಲೆಸಿರುವನೆಂದು ತಿಳಿಯುವ ಕುತೂಹಲ ನಿಮಗಿದೆಯೇ? ಕನಿಷ್ಟ ಅದಕ್ಕೆ ಅನುಗುಣವಾಗಿಯಾದರೂ ಮನೆಯಿರಬೇಕೆಂಬ ಬಯಕೆ ನಿಮ್ಮದೇ ? ತಾಳಿ ಹಿಗ್ಗದಿರಿ. ದಕ್ಷಿಣ ಭಾರತದ ಮಯಮತ ಮತ್ತು ಉತ್ತರ ಭಾರತದ ವಿಶ್ವಕರ್ಮ ಪ್ರಕಾಶ ಯಾವ ದಿಕ್ಕು ಯಾವ ದೈವದ ನೆಲೆ , ಯಾವ ದಿಕ್ಕಿನಲ್ಲಿ ಏನಿರಬೇಕೆಂಬ ಬಗ್ಗೆ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ತಿರುಗಿಸಿವೆ..
ಜಾತಕ ಮತ್ತು ವಾಸ್ತುಪುರುಷ ಮಂಡಲದ ನಡುವಿನ ಸಂಬಂಧ ಮಂಡೂಕ ಮತ್ತು ಪರಮಸಾಯಿಕಗಳಲ್ಲಿ ಹೆಚ್ಚು ಬಿಗಿಯಾಗಿದೆ. ೨೭ ಅಥವಾ ೨೮ ನಕ್ಷತ್ರಗಳನ್ನು ಪರಿಗಣಿಸಿ ೮/೮=೬೪ ಮನೆಗಳ ಮಂಡೂಕ ಮಂಡಲ ಬಂದಿದೆ. ಹಾಗಾಗಿ ಈ ಮಂಡಲದ ಪರಿಧಿಯ ೩೨ ಮನೆಗಳನ್ನು ನಕ್ಷತ್ರ ಹಾಗೂ ಅವುಗಳಿಗೆ ಸಂಬಂಧಿಸಿದ ಪೌರಾಣಿಕ ದೇವತೆಗಳೊಂದಿಗೆ ಗುರುತಿಸಲಾಗಿದೆ. ಇದರಂತೆಯೇ ೮೧ ಮನೆಗಳ ಪರಮಸಾಯಿಕ ಮಂಡಲ ರೂಪುಗೊಂಡಿದೆ. ಆದ್ದರಿಂದ ನೀವೆಂದೂ ಹೆಸರು ಕೇಳದ ಮೇಲೆ ತಿಳಿಸಿದ ನಾನಾ ದೈವಗಳ ಹೆಸರುಗಳು ಇಲ್ಲಿವೆ. ಮಾನಸಾರ , ಮಯಮತ , ವಾಸ್ತುವಿದ್ಯಾ ಸೇರಿದಂತೆ ವಾಸ್ತುಶಾಸ್ತ್ರದ ವಿವಿಧ ಗ್ರಂಥಗಳಲ್ಲಿ ಈ ಮಂಡಲಗಳ ಬಗ್ಗೆ ಸ್ವಲ್ಪ ವ್ಯತ್ಯಾಸಗಳಿವೆಯಾದರೂ ಅವೆಲ್ಲವುಗಳ ಹಿಂದಿರುವ ಪರಿಕಲ್ಪನೆ ಒಂದೇ. ಉದಾಹರಣೆಗೆ ಮಂಡೂಕ/ಪರಮಸಾಯಿಕ ಮಂಡಲಗಳಲ್ಲಿ ೪೫ ದೈವಗಳಿವೆ. ಬ್ರಹ್ಮ ಕೇಂದ್ರ ಭಾಗದಲ್ಲಿದ್ದರೆ ಆತನ ಸುತ್ತಲಿನ ೧೨ ಚೌಕಗಳು(=ಪಾದ) ಆದಿತ್ಯರನ್ನು , ಹೊರಗಿನ ೨೮ ಚೌಕಗಳು ನಕ್ಷತ್ರಗಳನ್ನು ಪ್ರತಿನಿಧಿಸುತ್ತವೆ. ವಾಸ್ತುಮಂಡಲದ ಪ್ರಕಾರ ಎಂಟು ದಿಕ್ಕುಗಳು ಹಾಗೂ ಒಂದು ಕೇಂದ್ರ ಸ್ಥಾನವಿದೆ. ಇವುಗಳಿಗೆ ಒಂಬತ್ತು ದೈವಗಳಿವೆ. ಫೂರ್ವ=ಇಂದ್ರ , ಪಶ್ಚಿಮ=ವರುಣ , ಉತ್ತರ=ಕುಬೇರ , ದಕ್ಷಿಣ=ಯಮ , ಆಗ್ನೇಯ=ಅಗ್ನಿ , ನೈರುತ್ಯ=ನಿರುತ್ , ವಾಯುವ್ಯ=ವಾಯು ಮತ್ತು ಈಶಾನ್ಯ=ಈಶರ ಅಧಿಷ್ಟಾನವಾದರೆ ಕೇಂದ್ರ ಬ್ರಹ್ಮನ ಸ್ಥಾನವಾಗಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ದಿಕ್ಕುಗಳು ಮನುಷ್ಯ ತನ್ನ ಅನುಕೂಲಕ್ಕಾಗಿ ಮಾಡಿಕೊಂಡಿರುವ ಪರಿಕಲ್ಪನೆಗಳು ಮಾತ್ರ.. ಭೂಮಿಗೆ ಆಗಲಿ , ಆಕಾಶಕ್ಕೆ ಆಗಲಿ ದಿಕ್ಕು ಎನ್ನುವುದಿಲ್ಲ. ಸೂರ್ಯ ಕಾಣಿಸಿಕೊಳ್ಳುವ ದಿಕ್ಕು ಎನ್ನುವುದು ಸಹ ತಾತ್ಕಾಲಿಕ. ಭೂಮಿಯ ಪರಿಭ್ರಮಣೆಯಿಂದಾಗಿ ಅದು ಕ್ಷಣ , ಕ್ಷಣಕ್ಕೂ ಬದಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧೃವಗಳ ಸನಿಹದಲ್ಲಿ ಸೂರ್ಯ ಮೂಡುವ ಮತ್ತು ಮುಳುಗುವ ದಿಕ್ಕುಗಳು ಎನ್ನುವುವು ಇಲ್ಲ. ಆದರೂ ಅಲ್ಲಿ ಜನವಸತಿಯಿದೆ. ಕರ್ಕಾಟಕ ಸಂಕ್ರಾತಿ ವೃತ್ತದಾಚೆಯ ಭಾಗಗಳಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯ ಗೋಚರಿಸತ್ತಾನೆ. ದಿಕ್ಕುಗಳನ್ನು ಅವುಗಳ ಅಧಿಪತಿಗಳಾದ ದೈವಗಳನ್ನು ಪರಿಗಣಿಸುವ ವಾಸ್ತುಶಾಸ್ತ್ರ ವೈಜ್ಞಾನಿಕ ಹಾಗೂ ಸಾರ್ವತ್ರಿಕ ಹೇಗೆ ಆಗಬಲ್ಲದು. ಅದು ಕೇವಲ ಹಿಂದೂಗಳ ಪೌರಾಣಿಕ ನಂಬಿಕೆಯ ಮೇಲೆ ಇರಬಹುದಾಗಿದೆ.
ವಾಸ್ತುಪುರುಷ ಮಂಡಲದ/ನಿವೇಶನದ ನಾಲ್ಕು ಮೂಲೆಗಳನ್ನು ಸೇರಿಸುವ ವಿಕರ್ಣಗಳು (Diagonals) ಹಾಗೂ ವಿಕರ್ಣಗಳಿಗೆ ಎಳೆದ ಸಮಾಂತರ ರೇಖೆಗಳು (ರಜ್ಜುಗಳು) ವಾಸ್ತುಪುರುಷ ಮಂಡಲದ ಪಾದ ವಿಭಜನೆಯ ರೇಖೆಗಳನ್ನು ಹಲವಾರು ಕಡೆ ಛೇದಿಸುತ್ತವೆ. ಈ ಛೇದಿತ ಬಿಂದುಗಳೇ ಮರ್ಮಸ್ಥಾನಗಳು. ಬ್ರಹ್ಮಸ್ಥಾನವನ್ನು ಛೇದಿಸುವ ಬಿಂದುಗಳು ಮುಖ್ಯ ಮರ್ಮಸ್ಥಾನಗಳು. ಮಯಮತದ ಪ್ರಕಾರ ವಾಸ್ತುಪುರುಷನಿಗೆ ಆರು ಮೂಳೆಗಳು , ಒಂದು ಹೃದಯ , ನಾಲ್ಕು ನಾಡಿ , ನಾಲ್ಕು ಮರ್ಮಸ್ಥಾನಗಳಿವೆ . ಈ. ಮರ್ಮಸ್ಥಾನಗಳು ಮಂಡಲ ಪಾದಗಳ ೧/೮ ಭಾಗದಷ್ಟಿದ್ದು ಅವುಗಳಿರುವಲ್ಲಿ ನಿಮಾರ್ಣ ಸಲ್ಲದೆಂದು ವಾಸ್ತುಗ್ರಂಥಗಳು ತಿಳಿಸುತ್ತವೆ. ಮರ್ಮಸ್ಥಾನದಲ್ಲಿ ಕಟ್ಟಲೇ ಬೇಕಾದ ಅನಿವಾರ್ಯತೆ ಎದುರಾದರೆ ಅವುಗಳ ಜಾಗದಲ್ಲಿ ಬಂಗಾರದಲ್ಲಿ ಮಾಡಿದ ಎತ್ತು , ಹಂದಿ ,ಆನೆ ಅಥವಾ ಆಮೆಯ ತಲೆಯನ್ನು ಇರಿಸಬೇಕೆಂದು ಮನುಷ್ಯಾಲಯ ಚಂದ್ರಿಕೆ ಶಿಫಾರಸ್ಸು ಮಾಡುತ್ತದೆ. ಮರ್ಮಸ್ಥಾನದಲ್ಲಿ ಮೊಳೆ , ಗೂಟ , ಇತ್ಯಾದಿ ಇದ್ದರೆ ಅಥವಾ ಆ ಜಾಗಕ್ಕೆ ಭಂಗ ಬಂದರೆ ಮನೆಯ ಯಜಮಾನನಿಗೆ ಅದಕ್ಕೆ ಸಂವಾದಿಯಾದ ಅಂಗದಲ್ಲಿ ತೊಂದರೆ ಉಂಟಾಗುತ್ತದೆಯೆಂದ ಬೃಹತ್ಸಂಹಿತಾ ತಿಳಿಸುತ್ತದೆ. ಮರ್ಮಸ್ಥಾನವನ್ನು ಮುಚ್ಚಿದರೆ ಮರಣ ಭಯವೆಂದು ಹೇಳಲಾಗಿದೆ. ಆದರೆ ಇನ್ನು ಕೆಲವು ವಾಸ್ತು ಶಾಸ್ತ್ರಗಳು ವಾಸ್ತುಪುರುಷ ತನ್ನ ನೆಲೆಯಿಂದ ಮೇಲೇಳದೆ ಸದಾ ಅದನ್ನು ಕಾಯುತ್ತ ಇರುವಂತೆ ಮಾಡಲು ಮರ್ಮಸ್ಥಾನದಲ್ಲಿ ಗೂಟ ಜಡಿಯಬೇಕೆಂದು ಸೂಚಿಸುತ್ತವೆ. .
ಮೇಲೆ ತಿಳಿಸಿರುವ ವಾಸ್ತುಪುರುಷ ಮತ್ತು ವಾಸ್ತುಮಂಡಲ ಆಧಾರದ ಮೇಲೆ ಈಗಿನ ಎಲ್ಲ ವಾಸ್ತುಪಂಡಿತರು ಹೇಳುವ ಸಲಹೆಗಳು ಅಡಕಗೊಂಡಿವೆ. ಪ್ರತಿ ಹೊಸ ಸಮಸ್ಯೆ ಎದುರಾದಾಗಲೂ ಈ ಕೆಲವು ಸಂಗತಿಗಳನ್ನೇ ವಿವಿಧ ರೀತಿಯಲ್ಲಿ ಅರ್ಥೈಸಿ ಬಳಸುತ್ತಾರೆ. ಇದರಾಚೆಗೆ ಯಾವ ಹೊಸ ಜ್ಞಾನವೂ ಇಲ್ಲ.
ಇದೇನಿದು ನಾವು ಕೇಳುತ್ತಿರುವು ನಿರ್ಮಾಣ ತಂತ್ರಜ್ಞಾನವನ್ನೇ ಅತವಾ ಪುರಾಣದ ಕಥೆಗಳನ್ನೇ ಎಂದು ಕೆಲ ಕಾಲ ತಬ್ಬಿಬ್ಬಾಗಿದ್ದರೆ ಸಾವರಿಸಿಕೊಳ್ಳಿರಿ. ಅಬ್ಬ ಯಾರು ಏನೇ ಹೇಳಲಿ , ಅದೇನೇ ಇರಲಿ ನಾನು ವಾಸ್ತುಪುರುಷ ಮಂಡಲದ ಪ್ರಕಾರ ಮನೆಯನ್ನು ಯೋಜಿಸಿ ನಿರ್ಮಿಸಿ ಸುಖವಾಗಿ ಇರಬಹುದೆಂದು ನೀವು ಭಾವಿಸಿರಬಹುದು ಅಥವಾ ನಿಮಗೆ ವಾಸ್ತುಪಂಡಿತರು ಭರವಸೆ ನೀಡಿರಬಹುದು. ಆದರೆ ಒಂದು ನಿಮಿಷ ತಾಳಿ! ಏಕೆಂದರೆ ನೀವು ಯಾವ ವಾಸ್ತುಗ್ರಂಥವನ್ನು ಅನುಸರಿಸಬೇಕೆಂದು ಮೊದಲೇ ನಿರ್ಧರಿಸಿಕೊಳ್ಳಿ. ಏಕೆಂದರೆ ಎಲ್ಲ ಸಮಯ, ಎಲ್ಲ ಕಡೆಗಳಲ್ಲಿ ಒಂದೇ ನಿಯಮವನ್ನು ಹೇಳಲು ವಾಸ್ತುಶಾಸ್ತ್ರ ವಿಜ್ಞಾನವೇನು ಅಲ್ಲ. ಅದನ್ನು ಮೀರಿದುದು ಅದು ! ವಾಸ್ತುಪುರುಷನ ತಲೆ ಈಶಾನ್ಯದಲ್ಲಿ ಇರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆಯಾದರೂ ಸಮರಂಗಣ ಸೂತ್ರಧಾರ (ಸ.ಸೂ ೨೫/೨ ) ೬೪ ಚೌಕಗಳ ಮಂಡಲದಲ್ಲಿ ಆತನ ತಲೆ ಪೂರ್ವಕ್ಕಿದ್ದು ,೮೧ ಚೌಕಗಳ ಮಂಡಲದಲ್ಲಿ ಈಶಾನ್ಯಕ್ಕಿರಬೇಕು. ಇದು ರಾಜರ ಮಂಡಲ ಎನ್ನುತ್ತದೆ. ಹಯಶೀರ್ಷ ಪಂಚರಾತ್ರ ೬೪ ಚೌಕಗಳ ಮಂಡಲ ದೇವಾಲಯ ನಿರ್ಮಾಣಕ್ಕೆ , ೮೧ ಚೌಕಗಳ ಮಂಡಲ ಬ್ರಾಹ್ಮಣರ ಮನೆಗಳ ಯೋಜನೆಗೆ ಪ್ರಶಸ್ತವೆಂದರೆ (ಹ.ಪಾಂ ೮-೧೫೦) ,ಈಶಾನ ಶಿವಗುರುದೇವ ಪದ್ಧತಿ ೬೪ ಚೌಕಗಳ ಮಂಡಲ ಬ್ರಾಹ್ಮಣರಿಗೆ, ೮೧ ಚೌಕಗಳ ಮಂಡಲ ಕ್ಷತ್ರಿಯರ ಮನೆಗಳಿಗೆ ಮೀಸಲಿರಿಸಿದೆ. ನೀವು ಬ್ರಾಹ್ಮಣ ಅಥವಾ ಕ್ಷತ್ರಿಯ ಅಗಿಲ್ಲದಿದ್ದರೆ ಯಾವ ಮಂಡಲವನ್ನು ಅನುಸರಿಸಬೇಕೆಂದು ಚಿಂತಿತರಾಗಿದ್ದೀರಾ? ಸಲ್ಲದು . ಏಕೆಂದರೆ ಅದನ್ನು ನಿಮಗೆ ತಿಳಿಸದೇ ವಾಸ್ತುಪಂಡಿತ ನಿರ್ಧರಿಸುತ್ತಾನೆ.
ಇಲ್ಲಿಗೆ ವಾಸ್ತುಮಂಡಲಕ್ಕೆ ಅನುಗುಣವಾಗಿ ಮನೆಕಟ್ಟಿಸಬೇಕೆಂಬ ನಿಮ್ಮ ಆಸೆ ಕೈಗೂಡುಬಹುದೆಂದು ನಿರಾಳವಾಗದಿರಿ. ವಾಸ್ತುಶಾಸ್ತ್ರಗಳು ವಾಸ್ತುಪುರುಷನ ಕಾಲು ಇರುವಲ್ಲಿ ಹೆಚ್ಚು ಭಾರ ಹಾಕುವಂತೆ ಹೇಳುತ್ತವೆ. ಆ ಸನಾತನ ಜ್ಞಾನವನ್ನೇ ವಾಸ್ತುಪಂಡಿತ ನಿಮಗೆ ಧಾರೆ ಎರೆದಿದ್ದಾನೆ. ಆದರೆ ನಿಲ್ಲಿ ! ನಿಮ್ಮ ವಾಸ್ತುಪುರುಷನ ಯಾವ ಕಡೆ ತಲೆ ಇರಿಸಿ ನೆಲೆಸಿದ್ದಾನೆ ಎನ್ನುವ ಬಗ್ಗೆ ವಾಸ್ತುಗ್ರಂಥಗಳಲ್ಲಿ ಒಮ್ಮತವಿಲ್ಲ. ಬೃಹತ್ ಸಂಹಿತ (LII . 51) , ಈಶಾನಶಿವ ಗುರುದೇವ ಪದ್ಧತಿ ( III Ch. XXVI) , ಮನುಷ್ಯಾಲಯ ಚಂದ್ರಿಕೆ (2/ 28) , ರಾಜ ವಲ್ಲಭ (2/. 18) , ಶಿಲ್ಪರತ್ನ ( 6/28) ಎಷ್ಟು ಚೌಕಗಳ ಮಂಡಲದಲ್ಲಿ ವಾಸ್ತುಪುರುಷ ಯಾವ ಕಡೆ ತಲೆ ಇರಿಸಿರುತ್ತಾನೆ ಎನ್ನುವ ಬಗ್ಗೆ ಪರಸ್ಪರ ವಿರುದ್ಧ ಅಭಿಪ್ರಾಯ ತಾಳಿವೆ. ಇವುಗಳಲ್ಲಿ ಕೆಲವು ಆತನ ತಲೆ ಪೂರ್ವಕ್ಕಿದೆ ಎಂದರೆ ಇನ್ನು ಕೆಲವು ಈಶಾನ್ಯ ಎನ್ನುತ್ತವೆ. ( ಚಿತ್ರ-: ವಾಸ್ತುಪುರುಷನ ಭಂಗಿ ಮಯಮತ ನಿರೂಪಿಸಿದಂತೆ)
ವಾಸ್ತುಪುರುಷ ಯಾವ ಕಡೆ ತಲೆಮಾಡಿ ಮಲಗಿರುವನೆಂಬ ಗೋಜಲು ಇಲ್ಲಿಗೆ ಮುಗಿಯಲಿಲ್ಲ. ಕೆಲ ಗ್ರಂಥಗಳು ಮುಖ ಅಡಿಯಾಗಿ ಬಿದ್ದಿರುವ ಅಲುಗದ ವಾಸ್ತು ಪುರುಷನನ್ನು ಪರಿಗಣಿಸುತ್ತವೆಯಾದರೂ ಇನ್ನು ಕೆಲವು ವಾಸ್ತುಗ್ರಂಥಗಳು ಇದನ್ನು ಒಪ್ಪುದೆ ಗಡಿಯಾರದ ಮುಳ್ಳಿನಂತೆ ತಿರುಗುವ ವಾಸ್ತು ಪುರುಷನನ್ನು ಗ್ರಹಿಸುತವೆ. ಅಲುಗದೆ ಹಾಗೆ ಬಿದ್ದಿರಲು ವಾಸ್ತುಪುರುಷನೇನು ಮರದ ಕೊರಡಲ್ಲ. .ಇವುಗಳ ಪ್ರಕಾರ ಸೂರ್ಯ ಯಾವ ರಾಶಿಯಲ್ಲಿರುವನೋ ಆ ರಾಶಿಯಲ್ಲಿ ಪುರುಷನ ಕಾಲುಗಳಿರುತ್ತವೆ. ಕೆಲ ಗ್ರಂಥಗಳು ಹೆಚ್ಚು ಶಾಶ್ವತವಾದ ಅರಮನೆ ದೇವಾಲಯಗಳಿಗ ಸ್ಥಿರ ಪುರುಷ, ಉಳಿದ ಕಡೆ ತಿರುಗುವ ಪುರುಷ ಪರಗಣಿಸಬೇಕೆನ್ನುತ್ತವೆ. ವಾಸ್ತುವಿದ್ಯಾ ಮತ್ತು ಜ್ಯೋತಿಷ ರತ್ನಮಾಲ ತಿರುಗುವ ಪುರುಷನನ್ನು ಎಲ್ಲ ಬಗೆಯ ನಿರ್ಮಾಣಕ್ಕೂ ಅನ್ವಯಿಸಬಹುದೆಂದು ಹೇಳುತ್ತವೆ.
ವಾಸ್ತುಪುರುಷ ಭಾದ್ರಪದ , ಆಶ್ವೀಜ , ಕಾರ್ತೀಕದಲ್ಲಿ ( ಆಗಸ್ಟ್-ಅಕ್ಟೋಬರ್) ಪೂರ್ವಕ್ಕೆ ತಲೆಮಾಡಿ , ಮಾರ್ಗಶಿರ, ಪುಷ್ಯ, ಮಾಘಗಳಲ್ಲಿ (ನವೆಂಬರ್-ಫೆಬ್ರವರಿ) ದಕ್ಷಿಣಕ್ಕೆ ತಲೆಮಾಡಿ , ಫಾಲ್ಗುಣ,ಚೈತ್ರ,ವೈಶಾಖದಲ್ಲಿ (ಮಾರ್ಚ್-ಮೇ) ಪಶ್ಚಿಮಕ್ಕೆ ತಲೆಮಾಡಿ, ಜ್ಯೇಷ್ಠ , ಆಷಾಢ , ಶ್ರಾವಣದಲ್ಲಿ (ಮೇ-ಆಗಸ್ಟ್) ಉತ್ತರಕ್ಕೆ ತಲೆಮಾಡಿ ಮಲಗಿರುತ್ತಾನೆ ಎನ್ನುತ್ತದೆ ಒಂದು ಗ್ರಂಥ.. ಹೀಗ ಸೂರ್ಯನನ್ನು ಅನುಸರಿಸಿ ಗಡಿಯಾರದ ಮುಳ್ಳಿನಂತೆ ತಿರುಗುವ ವಾಸ್ತು ಪುರುಷ ವರ್ಷದಲ್ಲಿ ೩ ತಿಂಗಳು ಮಲಗಿರುತ್ತಾನೆ.(೯೦ ಡಿಗ್ರಿ ತಿರುಗಿಕೆ ). ಚಳಿಗಾಲದಲ್ಲ ಮಲಗಿ ವಸಂತದಲ್ಲಿ ಏಳುವ ಈತ ಈ ಕಾಲದಲ್ಲಿ ಎಚ್ಚರವಿರದ ಕಾರಣ ನೀವು ನೆರವೇರಸುವ ಪೂಜೆ ಸ್ವೀಕರಿಸಲಾರನು. ಮತ್ತ ನಿಮ್ಮನ್ನ ರಕ್ಷಿಸಲಾರನು. ಆದ್ದರಿಂದ ಈ ಮೂರು ತಿಂಗಳಲ್ಲಿ ನೀವು ಕಟ್ಟಡ ಕಟ್ಟುವುದು ಅಥವಾ ಮನೆ ಪ್ರವೇಶ ಮಾಡುವುದು ತಪ್ಪೆಂದು ವಾಸ್ತು ಪಂಡಿತರು ತಿಳಿಸುತ್ತಾರೆ.
ಆದರೆ ವಾಸ್ತುಪುರುಷ ಮಲಗುವ ಈ ಕಾಲದಲ್ಲಿ ಒಮ್ಮತವಿಲ್ಲ. ಚಾವುಂಡರಾಯ ಕನ್ನಡದಲ್ಲಿ ಬರೆದಿರುವ ಲೋಕೋಪಕಾರದ ವಾಸ್ತುಪುರುಷನೂ (ಲೋಕ/ ೩/೨೪) ಸಹ ಗಡಿಯಾರದ ಮುಳ್ಳಿನಂತೆ ಸುತ್ತುವ ಚರಪುರುಷ. ಕೆಲವು ತಮಿಳು ವಾಸ್ತುಗ್ರಂಥಗಳ ಪ್ರಕಾರ ವಾಸ್ತುಪುರಷ ಪ್ರತಿ ಮೂರು ತಿಂಗಳಿಗೆ ಒಮ್ಮೆ ಒಂದು ತಿಂಗಳಿನ ಕಾಲ ಮಲಗಿರುತ್ತಾನೆ. ಅದೇನೇ ಇರಲಿ ಈ ನಿದ್ರೆಯ ಅವಧಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕ ಸಲ್ಲದು. ಇನ್ನು ಮುಂದುವರೆದು ಶ್ರೀ ಲಲಿತಾ ನವರತ್ನಂ ಮನೈ ಆದಿ ಸಾಸ್ತಿರಂ ಎನ್ನುವ ತಮಿಳು ವಾಸ್ತುಗ್ರಂಥ ವಾಸ್ತುಪುರುಷ ವರ್ಷದಲ್ಲಿ ಎಂಟು ಸಲ ಮಾತ್ರ ನಿರ್ದಿಷ್ಟ ಗಳಿಗೆಯಲ್ಲಿ ಎದ್ದು ೩ ಗಂಟೆ ೧೮ ನಿಮಿಷಗಳ ಕಾಲ ತನ್ನ ಕರ್ತವ್ಯ ಮುಗಿಸಿ ಮತ್ತೆ ನಿದ್ರೆಗೆ ಜಾರುತ್ತಾನೆ. ಆತ ಜಾಗ್ರತನಾಗಿರುವ ಅತ್ಯಲ್ಪಾವಧಿಯಲ್ಲ ನೀವು ಆತನನ್ನು ಒಲಿಸಿಕೊಳ್ಲಬೇಕು. ಹಾಗೆ ಒಲಿಸಿಕೊಳ್ಲಲು ಎಚ್ಚತ್ತಿರುವ ೩ ಗಂಟೆ ೧೮ ನಿಮಿಷಗಳನ್ನು ನರಮಾನವರಾದ ನಿಮಗೆ ಆತ ನೀಡಲಾರ ಎಂದು ನಿಮ್ಮನ್ನು ಎಚ್ಚರಿಸುತ್ತದೆ.. ವಾಸ್ತುಪುರುಷ ಎಚ್ಚರವಿರುವ ಕಾಲದಲ್ಲಿ ೫ ಅವಧಿಗಳು. ಮೊದಲನೆಯ ಅವಧಿ ಆತನ ಶೌಚ ಕರ್ಮಗಳಿಗೆ , ಎರಡನೇ ಅವಧಿ ಸ್ನಾನ , ಮೂರನೇ ಅವಧಿ ಪೂಜೆ , ನಾಲ್ಕನೇ ಅವಧಿ ಭೋಜನ , ಐದನೇ ಅವಧಿ ಕರ್ತವ್ಯ ನಿರ್ವಹಣೆ. ಆತನ ಮೊದಲನೇ ಅವಧಿಯಲ್ಲಿ ಮನೆಯ ನಿರ್ಮಾಣ ಪ್ರಾರಂಭಿಸಿದರೆ ರಾಜ ಭಯ , ಎರಡನೇ ಅವಧಿಯಲ್ಲಿ ಪ್ರಾರಂಭಿಸಿದರೆ ದುಃಖ , ಮೂರನೇ ಅವಧಿಯಲ್ಲಿ ಪ್ರಾರಂಭಿಸಿದರೆ ದಾರಿದ್ರ್ಯ , ನಾಲ್ಕನೇ ಅವಧಿಯಲ್ಲಿ ಪ್ರಾರಂಭಿಸಿದರೆ ಪುತ್ರ ಸಂತಾನ , ಐದನೇ ಅವಧಿಯಲ್ಲಿ ಪ್ರಾರಂಭಿಸಿದರೆ ಸಂಪತ್ತು ದಕ್ಕುತ್ತದೆಯೆಂದು ಹೇಳಲಾಗಿದೆ. ಆದ್ದರಿಂದ ನೀವು ಯಾವ ವಾಸ್ತುಗ್ರಂಥವನ್ನು ಅನುಸರಿಸಬೇಕೆಂದು ಮೊದಲೇ ನಿರ್ಧರಿಸಿಕೊಳ್ಳಿ. ಇಲ್ಲದಿದ್ದರೆ ವಾಸ್ತುಪುರುಷ ಎದ್ದಿರುವ ಕಾಲದ ಬಗ್ಗೆ ನಿಮಗೂ ನಿಮ್ಮ ವಾಸ್ತುಪಂಡಿತನಿಗೂ ಗೋಜಲುಂಟಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಸರ್ವ ವಿನಾಶವಾದೀತು ಜೋಕೆ.
ವಾಸ್ತುಪುರುಷನ ತಲೆ, ಬೆನ್ನು , ಕಾಲು ಮತ್ತು ಕೈಗಳಿರುವ ಜಾಗಗಳಲ್ಲಿ ಯಾವ ನಿರ್ಮಾಣವನ್ನು ಮಾಡಬಾರದು. ಹಾಗೆ ಮಾಡಿದರೆ ಮನೆಯಲ್ಲಿರುವವರಿಗೆ ನಾನಾ ಕಂಟಕಗಳು ಎದುರಾಗುತ್ತವೆ. ಕಳ್ಳಕಾಕರ ಭಯ ಸದಾ ಕಾಡುತ್ತದೆ. ವಾಸ್ತುಪುರುಷನ ಹೊಟ್ಟೆಯ ಜಾಗ ನಿರ್ಮಾಣಕ್ಕೆ ಅತ್ಯಂತ ಪ್ರಶಸ್ತವಾದುದು ವಾಸ್ತುಪುರುಷ ತನಗೆ ಬೇಸರವಾದಂತೆ ತಲೆಯೂರುವ ದಿಕ್ಕನ್ನು ಬದಲಿಸುತ್ತಾನೆ. ಆದ್ದರಿಂದ ನೀವು ಎಲ್ಲಿ . ಏನನ್ನು ಕಟ್ಟಿದರೂ ತಪ್ಪೇ. ಆತನ ಹೊಟ್ಟೆಯೊಂದೇ ನಿಮಗೆ ಉಳಿದುರುವುದು. ಅದರ ಮೇಲೆಯೇ ನಿಮ್ಮ ಸಮಸ್ತ ಅನುಕೂಲಗಳಿಗೆ ತಕ್ಕುದಾದ ಮನೆಕಟ್ಟಿ ಆನಂದದಿಂದಿರಬೇಕು. ಇಷ್ಟೆಲ್ಲಾ ತಿಳಿದ ನಂತರವೂ ನೀವು ವಾಸ್ತುಶಾಸ್ತ್ರವನ್ನು ಅನುಸರಿಸಿ ಮನೆಕಟ್ಟಬೇಕೆಂದಿದ್ದರೆ ಆತನ ಹೊಟ್ಟೆಯ ಭಾಗಕ್ಕೆ ಸರಿಹೊಂದುವಂತೆ ನಿಮಗೆ ಸರಿಯೆನಿಸುವ ಮನೆಯನ್ನು ಯೋಜಿಸುವ ಹೊಣೆ ವಾಸ್ತುಪಂಡಿತನಿಗಿರಲಿ. ಏಕೆಂದರೆ ವಾಸ್ತುತಂತ್ರಜ್ಞ ಅಲ್ಲಿ ಸಲ್ಲಲಾರ.
ವಾಸ್ತುಪಂಡಿತರು ಸೇರಿದಂತೆ ಬಹುತೇಕ ಜನಕ್ಕೆ ತಿಳಿಯದ ಮತ್ತೊಂದು ಪರಿಕಲ್ಪನೆ ರಾಜವಲ್ಲಭ,ವಾಸ್ತುವಿದ್ಯಾ , ಜೋತಿಷ ರತ್ನಮಾಲ ಮುಂತಾದ ಗ್ರಂಥಗಳು ವಾಸ್ತುಪುರುಷನಿಗೆ ಬದಲಾಗಿ ಸುತ್ತುತ್ತಿರುವ ಹಾವನ್ನು ಪರಿಗಣಿಸಿದರೆ ಇನ್ನು ಕೆಲವು ಹಾವು ಮತ್ತು ವಾಸ್ತುಪುರುಷ ಎರಡನ್ನೂ ಪರಿಗಣಿಸುತ್ತವೆ. ಹಾವು , ವಾಸ್ತುಪುರುಷ ಸುತ್ತುವುದು ನೂರಾರು ಬಗೆಯ ಗೋಜಲಿಗೆ ಕಾರಣವಾಗಿದೆ. ಒಂದರಲ್ಲಿರುವ ವಿಚಾರ ಇನ್ನೊಂದರಲ್ಲಿರುವ ವಿಚಾರಕ್ಕೆ ತದ್ವಿರುದ್ಧವಾಗಿರುತ್ತದೆ. . ಜೋತಿಷ ರತ್ನಮಾಲ ಮನೆ , ಅರಮನೆ, ದೇವಾಲಯ , ಕೊಳಗಳಿಗೆ ಸಂಬಂಧಿಸಿದಂತೆ ಹಾವು ಬೇರೆ ಬೇರೆ ಬಗೆಯಲ್ಲಿ ತಿರುಗುತ್ತದೆಯೆಂದು ಹೇಳುತ್ತದೆ, ರಾಜವಲ್ಲಭ ತಿಳಿಸುವ ಹಾವಿನ ಚಲನೆಯ ಚಿತ್ರವನ್ನು ಗಮನಿಸಿರಿ. ನಿಮಗೆ ಇದನ್ನು ನಿಮ್ಮ ವಾಸ್ತುಪಂಡಿತ ಹೇಳಿಲ್ಲವೇ ? ಹಾಗಾದರೆ ಆತನನ್ನು ಮರೆಯದೆ ಕೇಳಿ. ಏಕೆಂದರೆ ಯಾವ ಮಂಡಲದಲ್ಲಿ ಯಾವ ರಹಸ್ಯ ಹಾವು ಅಡಗಿದೆಯೋ ಅದರಿಂದ ನಿಮಗೆ ಏನು ಕಂಟಕ ಕಾದಿದೆಯೋ ಬಲ್ಲವರಾರು. ( ಚಿತ್ರ : ನಿವೇಶನ ಸುತ್ತುವ –ವಾಸ್ತುಪುರುಷನನ್ನು ಹೋಲುವ-ಹಾವು)
ಆಯಾದಿ ಪ್ರಕರಣ-ಓತಿಕ್ಯಾತನಿಗೆ ಬೇಲಿ ಸಾಕ್ಷಿ
ಓತಿಕ್ಯಾತನಿಗೆ ಬೇಲಿ ಸಾಕ್ಷಿ , ಕಳ್ಳ ದೇವರಿಗೆ ಕುಡುಕ ಪೂಜಾರಿ ಎನ್ನುವಂತಹ ಅದ್ಭುತವಾದ ಅನುಭವದ ನುಡಿಗಳನ್ನು ಜನ ಬಳಕೆಗೆ ತಂದಿದ್ದಾರೆ. ಬನ್ನಿ ಈಗ ಆಯಾದಿಗಳೆಂಬ ಎಂಬ ವಾಸ್ತುವಿನ ಪೂಜಾರಿಗಳ ಪರಿಚಯ ಮಾಡಿಕೊಳ್ಳೋಣ.
ನಾನು ಈ ಹಿಂದೆ ಹೇಳಿದಂತೆ ನಮ್ಮ ಬಹುತೇಕ ಚಿಂತನೆ ಇಹದ ಆಶೆ ಪರದ ಸೆಳೆತಗಳಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ಪ್ರಾಚೀನವಾದ ನಮ್ಮ ಯಾವ ಲೌಕಿಕ ಚಿಂತನೆಯೂ ಎಲ್ಲಿಯೂ ಎಂದಿಗೂ ಕಾಣದ ಆಧ್ಯಾತ್ಮ್ದದ , ಪರದ ಗುಂಗಿನಿಂದ ಹೊರಬರಲಾಗಿಲ್ಲ. ವಾಸ್ತುಶಾಸ್ತ್ರವೂ ಇದಕ್ಕೆ ಹೊರತಲ್ಲ. ಆದ್ದರಿಂದಲೇ ಅಷ್ಟದಿಕ್ಪಾಲಕರು ನಮ್ಮ ನಿವೇಶನ ಪ್ರವೇಶಿಸಿ , ನಮ್ಮ ಮನೆಗಳಲ್ಲಿ ನೆಲೆಸಿ ನಮ್ಮ ಲೌಕಿಕ ಜೀವನವನ್ನು ನಿಯಂತ್ರಿಸುವಂತಾಯಿತು. ನಿಮಗೆ ವ್ಯಾಪಾರದಲ್ಲಿ ನಷ್ಟವಾಯಿತೆ ಅದಕ್ಕೆ ನೀವು ಕುಬೇರ ಮೂಲೆಯಲ್ಲಿ ಪಾತ್ರೆಗಳನ್ನು ಇಟ್ಟಿದ್ದೇ ಕಾರಣ. ನಿಮ್ಮ ಮಗ ಪರೀಕ್ಷೆಯಲ್ಲಿ ಢುಮುಕಿ ಹೊಡೆದನೇ ಅಲ್ಲಿ ನೋಡಿ ನಿಮ್ಮ ಮನೆಯ ಈಶಾನ್ಯದಲ್ಲಿ ಏನಾಗಿದೆ ಎಂದು ವಾಸ್ತು ಪಂಡಿತರು ತೋರಿಸುತ್ತಾರೆ. ನಿವೇಶನವನ್ನು ಅಷ್ಟ ದಿಕ್ಪಾಲಕರಿಗೆ ಒಪ್ಪಿಸದ ಮೇಲೆ ಅವರಿರುವ ದಿಕ್ಕು, ರಾಶಿಗಳು ಸಹ ನಮ್ಮ ಮೇಲೆ ಸಹಜವಾಗಿ ತಮ್ಮ ಹಕ್ಕನ್ನು ಸ್ಥಾಪಿಸಿದವು. ವಾಸ್ತುಶಾಸ್ತದ ಸಮರ್ಥನೆಗೆ ಜ್ಯೋತಿಷ್ಯ ನಿಂತಿತು. ಗ್ರಹ-ವಿಗ್ರಹಗಳ ನಡುವೆ ಅವಿನಾವ ಸಂಬಂಧ ತಾನಾಗಿಯೇ ಸ್ಥಾಪಿತವಾಯಿತು.
ನಿಮ್ಮ ತಲೆ ತಿರುಗುವಂತಹ , ಯಾವ ತರ್ಕ , ಊಹೆ , ವಿವರಣೆಗಳಿಗೆ ಎಟುಕದಂತದ 'ತಾನಾಗಿಯೇ ಸಾಧಿತವಾದ' ಋಷಿ-ಮುನಿ ಪ್ರಣೀತವಾದ ವಾಸ್ತುಶಾಸ್ತ್ರದ ಆಯಾದಿ ವರ್ಗಗಳ ಪರಿಚಯ ಮಾಡಿಕೊಳ್ಳೋಣ. ಈಗ ನೀವು ಯಾವ ಪ್ರಶ್ನೆಯನ್ನು ಕೇಳುವಂತಿಲ್ಲ. ಹಾಗೆ ಕೇಳಿದರೆ ಪ್ರಾಚೀನ ವಾಸ್ತುಶಾಸ್ತ್ರವನ್ನು ನೀವು ಅನುಮಾನಿಸಿದಂತಾಗುತ್ತದೆ. ಇಲ್ಲಿ ನೀವು ಏನನ್ನೂ ಕೇಳಬಾರದು ಹೇಳಿದಂತೆ ಮಾಡಬೇಕು ಎನ್ನುವುದೊಂದೇ ಮಂತ್ರ. ಇದರಿಂದ ನಿಮಗೆ ಕಸಿವಿಸಿ ಎನಿಸುತ್ತದೆಯೇ-ಎನಿಸಲಿ. ಇದು ವಾಸ್ತುಶಾಸ್ತ್ರದ ಆಯ ಪ್ರಕರಣ.
ಆಯ ಎಂದರೆ ಆದಾಯ-ಬರುವುದು. ಮನೆಯ ವಿಸ್ತೀರ್ಣದ ಮೇಲೆ ಅದರ ಒಡೆಯನ ಜೀವನದ ಆಗುಹೋಗುಗಳು ನಿಂತಿವೆಯೆಂದು ಆಯಾದಿ ಪ್ರಕರಣ ತಿಳಿಸುತ್ತವೆ. ಮಾನವನ ಜೀವನದ ಮೇಲೆ ಪ್ರಭಾವ ಬೀರುವ ಇವನ್ನು ಕೆಲವು ಗ್ರಂಥಗಳು ಆರು (ಆಯಾದಿ ಷಡ್ವರ್ಗ-ಮನಸಾರ) ಎಂದರೆ ಇನ್ನು ಕೆಲವು ಒಂಬತ್ತು(ನವ ವರ್ಗ-ಸಮರಾಂಗಣ ಸೂತ್ರಧಾರ) ಎನ್ನುತ್ತವೆ. ಈ ವರ್ಗದ ಅಂಗಗಳು ಆಯ , ವ್ಯಯ , ನಕ್ಷತ್ರ , ಯೋನಿ , ವಾರ , ತಿಥಿ , ಅಂಶ , ಯುತಿ , ಆಯು ಇತ್ಯಾದಿ. ಇವು ಆರು , ಒಂಬತ್ತು ಅಥವಾ ಬೇರೆ ಯಾವುದೇ ಸಂಖ್ಯೆಯಿರಲಿ ಇವುಗಳ ಹೂರಣ ಒಂದೇ. ನಿಮ್ಮ ನಿವೇಶನ/ಮನೆಯ ವಿಸ್ತೀರ್ಣ, ಎತ್ತರ ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಜೀವನಗತಿಯನ್ನು ನಿರ್ಧರಿಸುವುದು. ಆಯಾದಿ ವರ್ಗಗಳು ಆರು /ಒಂಬತ್ತು/ಹದಿನಾರು ಎಷ್ಟಿರಬೇಕೆಂಬ ನಿರ್ಧಾರವನ್ನು ವಾಸ್ತುಪಂಡಿತರಿಗೆ ಬಿಡೋಣ. ನಾವು ಆಯಾದಿಗಳ ಪರಿಕಲ್ಪನೆಯನ್ನು ಮಾತ್ರ ನೋಡೋಣ.
ಕಟ್ಟಬೇಕೆಂದಿರುವ ಮನೆಯ ತಳಪಾಯದ ಉದ್ದ , ಅಗಲ , ಎತ್ತರ , ವಿಸ್ತೀರ್ಣಗಳನ್ನು ನಿರ್ಧರಿಸಿಕೊಳ್ಳಬೇಕು. ಇವುಗಳನ್ನು ವಾಸ್ತುಶಾಸ್ತ್ರದಲ್ಲಿರುವ ನಿರ್ದಿಷ್ಟ ಸಂಖ್ಯೆಗಳಿಂದ ಭಾಗಿಸಬೇಕು. ಹಾಗೆ ಭಾಗಿಸಿದಾಗ ಕೊನೆಯಲ್ಲಿ ದಕ್ಕುವ ಶೇಷಗಳು ಆಯ-ವ್ಯಯ-ನಕ್ಷ್ತತ್ರ-ಯೊನಿ-ವಾರ-ತಿಥಿ ಇತ್ಯಾದಿಗಳಗಳನ್ನು ನಿರ್ಧರಿಸುತ್ತವೆ. ಇದಲ್ಲದೆ ಯಾವ ಜಾತಿಯವರಿಗೆ ಯಾವ ಆಯದ ಮನೆಯಿರಬೇಕು ಎನ್ನುವುದ ಸಹ ನಿರ್ದೇಶಿಸಲ್ಪಟ್ಟಿದೆ. ಹಲವಾರು ವಾಸ್ತುಶಾಸ್ತ್ರದ ಗ್ರಂಥಗಳು ತಮ್ಮದೇ ಆದ ರೀತಿಯಲ್ಲಿ ಈ ಲೆಕ್ಕಾಚಾರಗಳನ್ನು ನೀಡಿವೆ. ಇವುಗಳಲ್ಲಿ ಒಮ್ಮತವೇನಿಲ್ಲ.
ನಿವೇಶನದ ಉದ್ದ , ಅಗಲಗಳನ್ನು ಅಳೆಯಲು ಕಿಸ್ಕು ಹಸ್ತವನ್ನು ಏಕಮಾನವಾಗಿ ಹೇಳಿದೆ. ಆದರೆ ಇದು ಎಷ್ಟಿರಬೇಕೆಂದು ಒಂದೊಂದು ಗ್ರಂಥ ಒಂದೊಂದು ನಿಲುವು ತಳೆದಿವೆ. ಒಂದು ಗ್ರಂಥ ಅಂಗುಲ = ೧ ೩/೮ ಇಂಚು ,ಒಂದು ಹಸ್ತ=೨೪ ಅಂಗುಲ (=೨ ಅಡಿ ೯ ಅಂಗುಲ) ಎಂದರೆ ಇನ್ನೊಂದು ಗ್ರಂಥ ಅಂಗುಲ=೧.೩ ಇಂಚು , ಹಸ್ತ = ೨೮ . ೩ ಅಂಗುಲ ಎನ್ನುತ್ತದೆ. ಮತ್ತೊಂದು ಗ್ರಂಥದಲ್ಲಿ ಅಂಗುಲ=೦.೭೫ ಇಂಚು , ಹಸ್ತ = ೧೮ ಅಂಗುಲ ಎಂದಾಗಿದೆ. ಆಡು ಭಾಷೆಯಲ್ಲಿ ಹೇಳಬೇಕೆಂದರೆ ಒಂದು ಹಸ್ತ ಒಂದು ಮೊಳ ಅಥವಾ ಒಂದು ಮಾರು ಯಾವುದಕ್ಕೆ ಸಮ ಎಂಬ ಗೋಜಲು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿದೆ. ಇತ್ತೀಚಿನ ಕೆಲವು ವಾಸ್ತು ಪಂಡಿತರು ಇದನ್ನು ಮನೆ ಕಟ್ಟಿಸುವ ಯಜಮಾನನ ಮೊಳಕ್ಕೆಗೆ ಸಮೀಕರಿಸದ್ದಾರೆ. ಏಕೆಂದರೆ ಬೆಂಗಳೂರಿನಂತಹ ನಗರಗಳಲ್ಲಿ ಬಹುತೇಕ ದಕ್ಕುವ ನಿವೇಶನಗಳು ಮಾರಿನ ಲೆಕ್ಕದಲ್ಲಿ ಸಣ್ಣವೆಂದು ಭಾಸವಾಗುತ್ತದೆ. ೩೦/೪೦ ಅಡಿ ನಿವೇಶನ ೯/೧೨ ಮಾರುಗಳಿಷ್ಟರುತ್ತದೆ. ನಿಮ್ಮ ಜೀವನದ ಆಗುಹೋಗುಗಳು ಆಯಾದಿ ವರ್ಗಗಳ ಮೇಲೆ ಅವಲಂಬಿತವಾಗಿರುವುದರಿಂದ ಮತ್ತು ಈ ವರ್ಗಗಳು ಅಳತೆಯ ಮೇಲೆ ನಿಂತಿರುವುದರಿಂದ ಇದನ್ನು ಒತ್ತಿ ಹೇಳಲಾಗಿದೆ.
ಆಯ : ಇದು ನೀವು ಕಟ್ಟ್ಟಬೇಕೆಂದಿರುವ ಮನೆಯ ಉದ್ದ,ಅಗಲ,ವಿಸ್ತೀರ್ಣದ ಮೇಲೆ ನೀವು ಆರ್ಥಿಕತೆಯ ಮಟ್ಟದಲ್ಲಿ ಏನಾಗಿರುವಿರಿ , ಏನಾಗಬೇಕೆಂದಿರುವಿರಿ ಎಂದು ನಿರ್ದರಿಸುವುದೇ ಇದು. ಉದಾಹರಣೆಗೆ ನೀವು ೪೦ ಉದ್ದ/೩೦ ಅಗಲ ಅಳತೆಯ ೧೨೦೦ ಚದರ ವಿಸ್ತೀರ್ಣದ ಮನೆಯನ್ನು ಕಟ್ಟಬೇಕೆಂದಿರುವಿರಿ (ಇದು ನಿವೇಶನದ ಅಳತೆಯಲ್ಲ-ಮನೆಯ ಬುನಾದಿ ಮಟ್ಟದ ಅಳತೆ). ವಿವಿಧ ವಾಸ್ತು ಶಾಸ್ತ್ರದ ಗ್ರಂಥಗಳು ಹೇಳುವಂತೆ ಇಂತಹ ಮನೆಯಲ್ಲಿರುವ ನಿಮ್ಮ ಆರ್ಥಿಕ ಸ್ಥಿತಿ ಹೇಗೆ ನಿರ್ಧರಿತವಾಗುವುದೆಂದು ತಿಳಿಯೋಣ. ಇಲ್ಲಿ ನೀವು ಒಂದು ಸಂಗತಿಯನ್ನು ಗಮನಿಸಿರಬಹುದು. ಮನೆಯ ಅಳತೆಯನ್ನು ೩೦/೪೦ ಎಂದು ನಾನು ನಮೂದಿಸರುವೆನೇ ಹೊರತು ಅದು ಮೊಳ,ಮಾರು , ಅಂಗುಲ ,ಅಡಿ. ಮೀಟರ್ ಯಾವ ಅಳತೆಯಲ್ಲಿರಬೇಕೆಂದು ಹೇಳಿಲ್ಲ .ಉದ್ದ , ಅಗಲಗಳನ್ನು ಯಾವ ಮಾನದಲ್ಲಿ ಅಳೆಯಬೇಕೆಂಬ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಇದು ಸೋಜಿಗದ ಸಂಗತಿಯೇನೂ ಅಲ್ಲ. ಯಾವುದೇ ನಿರ್ದಿಷ್ಟ ಭೌತಿಕ ಕಾರಣವಿಲ್ಲದೆ ಕೇವಲ ಕಾಲ್ಪನಿಕ ಅಂಶಗಳ ಮೇಲೆ ರೂಪುಗೊಂಡಿರುವ ಇಂತಹ ವಿಷಯಗಳಲ್ಲಿ ಇದು ಸಾಮಾನ್ಯ. (ಚಿತ್ರ : ಆಯಗಳು)
ವಿವಿಧ ವಾಸ್ತುಶಾಸ್ತ್ರದ ಗ್ರಂಥಗಳು ಆಯವನ್ನು ಹಲವಾರು ಬಗೆಯಲ್ಲಿ ಲೆಕ್ಕಹಾಕುತ್ತವೆಯಾದರೂ ಉದಾಹರಣೆಗಾಗಿ ಒಂದನ್ನು ಮಾತ್ರ ಇಲ್ಲಿ ನೀಡಿದ್ದೇನೆ.
(೧) ಆಯ = (ವಿಸ್ತಿರ್ಣ/೮) ರ ಶೇಷ = ೩೦x೪೦/೮ = ೧೨೦೦/೮ = ೧೫೦ ಶೇಷ =೦
ವಿಸ್ತೀರ್ಣವನ್ನು ೮ ರಿಂದ ಭಾಗಿಸಿದಾಗ ದಕ್ಕುವ ಶೇಷಕ್ಕೆ ಅನುಗುಣವಾಗಿ ಯಾವ ಆಯದಲ್ಲಿ ಮನೆಯಿದೆಯೆಂದು ತಿಳಿದುಬರುತ್ತದೆ.
ಶೇಷ =೧ , ಆಯ = ಧ್ವಜ , ಶೇಷ =೨ , ಆಯ = ಧೂಮ , ಶೇಷ =೩ , ಆಯ = ಸಿಂಹ , ಶೇಷ =೪ , ಆಯ = ಶ್ವಾನ , ಶೇಷ =೫ , ಆಯ = ವೃಷಭ , ಶೇಷ =೬ , ಆಯ = ಖರ , ಶೇಷ = ೭ , ಆಯ = ಗಜ , ಶೇಷ =೦ , ಆಯ = ಕಾಕ. ಈ ಆಯಗಳು ಯಾವ ದಿಕ್ಕಿನಲ್ಲಿರುತ್ತವೆ ಮತ್ತು ಯಾರಿಗೆ ಅನುಕೂಲವಾಗಿರುತ್ತವೆ ಎಂಬ ವಿವರಣೆ ಮುಂದಿದೆ..
ಆಯ ಹಾಗೂ ದಿಕ್ಕುಗಳು ( ೧=ಪೂರ್ವ ದಿಕ್ಕು )
ಆಯ - ದಿಕ್ಕು - ಅನ್ವಯ ವರ್ಣ/ಕಾರ್ಯ -ಅಧಿದೈವ-ಮನೆಯಬಾಗಿಲು-ಫಲಾಫಲ ಇವುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ
(೧) ಧ್ವಜ - ಪೂರ್ವ - ಬ್ರಾಹ್ಮಣ-ಹದ್ದು-ಪಶ್ಚಿಮ ಬಾಗಿಲು-ಧನ ಲಾಭ (೨) ಧೂಮ-ಆಗ್ನೇಯ-ಅಗ್ನಿ ಸಂಬಂಧಿ ಚಟುವಟಿಕೆಗಳಲ್ಲಿ ನಿರತರು-ಬೆಕ್ಕು-ಗೋಳಾಟ (೩) ಸಿಂಹ-ದಕ್ಷಿಣ-ಕ್ಷತ್ರಿಯ, ಆಯುಧಶಾಲೆ-ಸಿಂಹ-ಉತ್ತರದ ಬಾಗಿಲು-ಐಭೋಗ (೪) ಶ್ವಾನ-ನೈರುತ್ಯ-ಕೆಳಮಟ್ಟದ ಕೆಲಸ ಮಾಡುವ ಕೂಲಿಕಾರ,ಆಯುಧಶಾಲೆ-ನಾಯಿ-ಮಹಾಪಾಪ (೫) ವೃಷಭ-ಪಶ್ಚಿಮ-ವೈಶ್ಯ ,ವ್ಯಾಪಾರ , ಕುದುರೆ ಲಾಯ , ಅಡುಗೆಮನೆ -ಹಾವು-ಪೂರ್ವ ಬಾಗಿಲು-ಸಂಪತ್ತಿನ ವೃದ್ಧಿ (೬) ಖರ-ವಾಯುವ್ಯ-ಅಗಸ, ಗೋಶಾಲೆ ,ಸಂಗೀತ ಕೋಣೆ-ಇಲಿ-ಭಯ, ಪೀಡೆ (೭) ಗಜ-ಉತ್ತರ-ಶೂದ್ರ , ಆನೆಲಾಯ , ಮಲಗುವ ಕೋಣೆಗಳು , ಹೆಂಗಸರ ಖಜಾನೆ-ಆನೆ-ದಕ್ಷಿಣ ಬಾಗಿಲು-ಯಶಸ್ಸು (೮) ಕಾಕ-ಈಶಾನ್ಯ-ಆಯಗಾರರು, ಕುಶಲಕರ್ಮಿಗಳು,ಪೂಜಾಮಂದಿರ-ಹಂದಿ-ಸಾವು
ಮೇಲಿನವುಗಳಲ್ಲಿ ಹದ್ದು-ಹಾವು , ಬೆಕ್ಕು-ಇಲಿ , ಸಿಂಹ-ಆನೆ , ನಾಯಿ-ಹಂದಿ ಪರಸ್ಪರ ವಿರುದ್ಧ ವರ್ಗಗಳು ಇವುಗಳು ಒಂದಕ್ಕೊಂದು ಎದುರಾಗದಂತೆ ಎಚ್ಚರವಹಿಸಬೇಕು
(೨) ಆಯ = (ಉದ್ದ x ೮/೧೨) ರ ಶೇಷ. ಈ ಶೇಷಕ್ಕೆ ಅನುಗುಣವಾಗಿ ನಿಮಗೆ ದಕ್ಕುವ ಫಲಾಫಲಗಳು ಹೀಗಿವೆ.
ಶೇಷ =೧ = ದಾರಿದ್ರ್ಯ ಆವರಿಸುವುದು , ೨ = ಹೆಂಡತಿಗೆ ಅನಾರೋಗ್ಯ , ೩=ಐಶ್ವರ್ಯ ಪ್ರಾಪ್ತಿ , ೪=ಜಯಶಾಲಿ , ೫=ಅನಿರೀಕ್ಷಿತ ಆನಂದಮಯ ಜೀವನ ೬= ಆಶೆಗಳು ಕೈಗೂಡುತ್ತವೆ , ೭ = ಆಧ್ಯಾತ್ಮದತ್ತ ಒಲವು ಹೆಚ್ಚುತ್ತದೆ. ೮ =ಜೀವನದ ಸವಿಯಲ್ಲಿ ಹೆಚ್ಚಳ ೧೦=ಸಂಪತ್ತಿನಲ್ಲಿ ಹೆಚ್ಚಳ , ೧೧= ಖ್ಯಾತಿ
ಕುತೂಹಲಕ್ಕಾಗಿ ಆಯ ಲೆಕ್ಕ ಹಾಕಲು ನೀಡಿರುವ ಎರಡು ವಿಧಾನಗಳನ್ನು ಬಳಸಿಕೊಂಡು ನಿಮ್ಮ ಮನೆಯ ಆಯ ನಿರ್ಣಯ ಮಾಡಿರಿ. ಎರಡು ಒಂದಕ್ಕೊಂದು ತಾಳೆಯಾಗಲಿಲ್ಲವೇ? ಚಿಂತಿಸಬೇಡಿ. ಅವು ತಾಳೆಯಾಗುವ ಸಾಧ್ಯತೆಗಳಿಲ್ಲ. ಏಕೆಂದರೆ ಎರಡು ವಿಧಾನಗಳಿಗೂ ಯಾವುದೇ ತಳಹದಿ ಅಥವಾ ಸಂಬಂಧವಿಲ್ಲ. ಮೊದಲನೇ ವಿಧಾನದಲ್ಲಿ ನಿಮ್ಮ ಮನೆಯ ಆಯ ನಿರ್ಣಯಿಸಿದ ಒಬ್ಬ ವಾಸ್ತುಪಂಡಿತ ನಿಮಗೆ ಸುಖ , ಸಮೃದ್ಧಿಗಳ ಭರವಸೆ ನೀಡಿದರೆ ಎರಡನೇ ವಿಧಾನ ಬಳಸಿದಾತ ದಾರಿದ್ರ್ಯದ ಸೂಚನೆಯನ್ನು ಸಹ ನೀಡಲು ಸಾಧ್ಯ. ಹೀಗೆ ಆಯದ ಶಿಫಾರಸ್ಸುಗಳು ಬಗೆಬಗೆಯಾಗಿ ಸಾಗುತ್ತವೆ. ಇಲ್ಲಿ ನೀಡಿರುವ ಸಂಗತಿಗಳನ್ನು ವಾಸ್ತುಶಾಸ್ತ್ರದ ಗ್ರಂಥಗಳು ಬೇರೆಯಾಗಿ ಹೇಳುತ್ತಿರಬಹುದು. ಒಟ್ಟಾರೆಯಾಗಿ ಮನೆಯ ಆಯ ನಿಮ್ಮ ಜೀವನವನ್ನು ಆದಷ್ಟು ಸಂಕೀರ್ಣವಾಗಿ ಪ್ರಭಾವಿಸುತ್ತದೆ ಎಂದು ತಿಳಿದರೆ ಸಾಕು.
ನೀವು ಆಯವನ್ನು ಅರ್ಥೈಸಿಕೊಂಡು ಹೊರಬರುತ್ತಿದಂತೆಯೇ ವ್ಯಯ ಎದುರಾಗುತ್ತದೆ. ಇದೇನೆಂದು ನೋಡೋಣ.
ವ್ಯಯ : ಆಯದಂತೆಯೇ ವ್ಯಯವನ್ನು ಲೆಕ್ಕ ಹಾಕಲು ವಿವಿಧ ಗ್ರಂಥಗಳು ವಿವಿಧ ಶಿಫಾರಸ್ಸುಗಳನ್ನು ಮಾಡಿವೆ. ಅವುಗಳಲ್ಲಿ ಕೆಲವು ಹೀಗಿವೆ.
(೧) ವ್ಯಯ= (ವಿಸ್ತೀರ್ಣ x 3 /8) ರ ಶೇಷ. (೨) ವ್ಯಯ= (ಅಗಲ x ೯ /೧೦) ರ ಶೇಷ.
ಆಯದ ಶೇಷ ಯಾವಾಗಲೂ ವ್ಯಯದ ಶೇಷಕ್ಕಿಂತ ಅಧಿಕವಾಗಿರಬೇಕು.
(೧) ಆಯ=ವ್ಯಯ : ತೊಂದರೆಯಿಲ್ಲ (೨) ಆಯ > ವ್ಯಯ : ಸರ್ವತೋಮುಖ ಅಭಿವೃದ್ಧಿ (೩) ಆಯ < ವ್ಯಯ : ನಷ್ತ , ಅಮಂಗಳಕರ
ನಕ್ಷತ್ರ : ನೀವು ನಿಮ್ಮ ಕಟ್ಟಡದ ಉದ್ದ , ಅಗಲ , ವಿಸ್ತೀರ್ಣದ ಆಯ-ವ್ಯಯಗಳಲ್ಲಿ ಉತ್ತೀರ್ಣರಾದೆವೆಂಬ ಹಿಗ್ಗಿನಲ್ಲಿ ಹೊರಬರುತ್ತಿದ್ದಂತೆಯೇ ನಕ್ಷತ್ರ್ದ ಎದುರಾಗುತ್ತದೆ.
(೧) ನಕ್ಷತ್ರ = (ಉದ್ದ X 8 /27) ರ ಶೇಷ. ಶೇಷ = ಬೆಸ ಸಂಖ್ಯೆಯಾದರೆ ಮಂಗಳ. ಸಮಸಂಖ್ಯೆಯಾದರೆ ಅಮಂಗಳಕರ.
(೨) ನಕ್ಷತ್ರ = (ವಿಸ್ತೀರ್ಣ x 8/27) ರ ಶೇಷ. ಶೇಷ =೦
ಮನೆಯ ಮಾಲಿಕನ ಜನ್ಮ ರಾಶಿಯಿಂದ ಕಟ್ಟಡದ ರಾಶಿಯನ್ನು ನಿರ್ಧರಿಸಬೇಕು. ಇದನ್ನು ೯ ರಿಂದ ಭಾಗಿಸಬೇಕು. ಇದರ ಶೇಷ = ೨.೪.೬.೮.೯ ಬಂದರೆ ಕಟ್ಟಡ ಹಾಗೂ ಅದರ ಮಾಲಿಕನ ನಡುವೆ ಸಾಮರಸ್ಯವಿದೆಯೆಂದು ಅರ್ಥ.
ಯೋನಿ : ಆಯ , ವ್ಯಯಗಳಂತಹುದೇ ಮತ್ತೊಂದು 'ಅದ್ಭುತ' ಪರಿಕಲ್ಪನೆ ಯೋನಿಯದು. ನಿಮ್ಮ ಕಟ್ಟಡದ ಸ್ಥಿರತೆಗೆ ಇದು ಬಹು ಮುಖ್ಯವೆಂದು ವಾಸ್ತು ಪಂಡಿತರು ನಿಮಗೆ ತಪ್ಪದೇ ತಿಳಿಸುತ್ತಾರೆ.
(೧) ಯೋನಿ= (ಅಗಲ x 3 /8) ರ ಶೇಷ (೨) ಯೋನಿ =(ವಿಸ್ತೀರ್ಣ/೮) ರ ಶೇಷ
ಶೇಷ ಬೆಸ ಸಂಖ್ಯೆಯಾದರೆ ಮಂಗಳಕರ , ಸಮಸಂಖ್ಯೆಯಾದರೆ ಅಮಂಗಳಕರ , ಸೊನ್ನೆಯಾದರೆ ಕಟ್ಟಡದ ಅಗಲವನ್ನು ಬದಲಾಯಿಸಬೇಕು.
ವಾರ : (೧) ವಾರ = (ಕಟ್ಟಡದ ಸುತ್ತಳತೆ x 9 /7) ರ ಶೇಷ (2) ವಾರ = (ಕಟ್ಟಡದ ಎತ್ತರ x 9 /7) ರ ಶೇಷ
ಶೇಷ : ೧ = ಆದಿತ್ಯವಾರ, ೩= ಮಂಗಳವಾರ , ೮/೦= ಶನಿವಾರ ಈ ಮೂರು ಕಟ್ಟಡ ನಿರ್ಮಾಣ ಪ್ರಾರಂಭಿಸಲು ಒಳ್ಳೆಯ ದಿನಗಳಲ್ಲ. ೨=ಸೋಮವಾರ , ೪-ಬುಧವಾರ , ೫-ಗುರುವಾರ , ೬=ಶುಕ್ರವಾರ ಕಟ್ತಡ ನಿರ್ಮಾಣ ಪ್ರಾರಂಭಿಸಲು ಒಳ್ಳೆಯ ದಿನಗಳು.
ಈಗ ಜನರಲ್ಲಿ ಮಂಗಳವಾರ ಮತ್ತು ಶನಿವಾರ ಒಳ್ಳೆಯ ದಿನಗಳಲ್ಲ . ಈ ದಿನಗಳಂದು ಯಾವ ಕೆಲಸವನ್ನೂ ಪ್ರಾರಂಭಿಸಬಾರದು ಎನ್ನುವ ನಂಬಿಕೆಯ ಮೂಲ ಇಲ್ಲಿದೆ.
ತಿಥಿ : (೧) ತಿಥಿ = (ಕಟ್ತಡದ ಸುತ್ತಳತೆ x 9) / 30
ಶೇಷ = ೦ , ೧, ೪ ,೮ , ೯ , ೧೧ , ೧೪ ಮತ್ತು ೩೦ ಒಳ್ಳೆಯಯವಲ್ಲ. ೬ ಸಾಧಾರಣ . ೨ , ೧೨, ೩ , ೧೩, ೫, ೧೫, ೭ , ೧೦ ಉತ್ತಮ
ಈಗ ತಿಳಿಸಿರುವ ಆಯಾದಿ ಆರು ವರ್ಗಗಳಲ್ಲದೆ ಅಂಶ ಸಾಧನ , ರಾಶಿ ಸಾಧನ , ತಾರಾಬಲ , ಆಯುವು ಮುಂತಾದ ಬೇರೆ ಪ್ರಾಚಲಗಳು (Parameters) ಸಹ ವಿವಿಧ ವಾಸ್ತು ಗ್ರಂಥಗಳಲ್ಲಿವೆ.
ಇವುಗಳೆಲ್ಲವುಗಳ ಹಿಂದಿರುವ ಪರಿಕಲ್ಪನೆ ಒಂದೇ ರೀತಿಯಲ್ಲಿರುವುದನ್ನು ಗಮನಿಸಬಹುದು. ಈ ಸಂಗತಿಗಳಲ್ಲಿ ಇಂತಹ ವಿಚಾರಗಳೇ ತುಂಬಿ ತುಳುಕುತ್ತವೆ. ಆದ್ದರಿಂದ ಸಮ-ಬೆಸದಲ್ಲಿ ಯಾವುದು ಉತ್ತಮ , ತಿಥಿಗಳಲ್ಲಿ ಯಾವುದು ಮಂಗಳ ಯಾವುದು ಅಮಂಗಳ ಎಂದು ಬರೆಯುವಲ್ಲಿ ಹಿಂದೆ ಮುಂದಾದರೆ ಅಥವಾ ಒಂದು ಗುಂಪು ಇನ್ನೊಂದು ಗುಂಪಿನಲ್ಲಿ ಸೇರಿದರೆ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ವಾಸ್ತುಪಂಡಿತರ ದೃಷ್ಟಿಯಲ್ಲಿ ಮಾತ್ರ ಇವು ಸನಾತನ ಅವ್ಯಯ ಸತ್ಯಗಳು. ನಾನಾ ಗ್ರಂಥಗಳಲ್ಲಿರುವ ಇವುಗಳನ್ನು ನೋಡುತ್ತ ಹೋದರೆ ಕೊನೆ ಮೊದಲಿಲ್ಲದ ಕಗ್ಗತ್ತಲೆಯ ಕಾಡಿನಲ್ಲಿ ಅಲೆದಂತಾಗುತ್ತದೆ.
ವರಾಹಮಿಹಿರನ ಬೃಹತ್ಸಂಹಿತೆಯಲ್ಲಿ ಆಯಾದಿ ವರ್ಗಗಳ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಚಾವುಂಡರಾಯ ಲೋಕೊಪಕಾರದಲ್ಲಿ ಮನೆಯ ಕ್ಷೇತ್ರಫಲವನ್ನು ೩, ೯ , ೭ , ೮ , ೪ , ೯ ರಿಂದ ಗುಣಿಸಿ ೮ ,೮,೮ ,೨೭ ,೧೨ , ೩೦ , ೭ ರ ಕ್ರಮದಲ್ಲಿ ಭಾಗಿಸಿ ಇವುಗಳನ್ನು ಪಡೆಯಬೇಕೆನ್ನುತ್ತಾನೆ. (ಲೋಕ ೩/೨೦-೨೨), ಆದರೆ ಮುಹೂರ್ತ ಮಾಧವೀಯ ಎನ್ನುವ ಗ್ರಂಥ ಕ್ಷೇತ್ರಫಲವನ್ನು ೩ , ೮ ,೩ ,೮,೮,೫ ರಿಂದ ಗುಣಿಸಿ ೮ , ೧೨, ೧೪ , ೨೭ , ೨೭ , ೩೦ ರಿಂದ ಭಾಗಿಸಬೇಕೆನ್ನುತ್ತದೆ.
ಆಯ , ವ್ಯಯ ಇತ್ಯಾದಿ ಲೆಕ್ಕಾಚಾರ ಕುರಿತಾದಂತೆ ಒಂದು ವಾಸ್ತುಗ್ರಂಥದ ಹೇಳಿಕೆ ಇನ್ನೊಂದರೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಲೆಕ್ಕಾಚಾರಗಳ ಸೂತ್ರಗಳಂತೆಯೇ ಅವುಗಳ ಫಲಿತಾಂಶ ಯಾವ ಪರಿಣಾಮ ತರುತ್ತದೆ ಎನ್ನುವುದರಲ್ಲಿ ಸಹ ಒಮ್ಮತವಿಲ್ಲ. ಸೂತ್ರಗಳಲ್ಲಿರುವ ಸಂಖ್ಯೆಗಳು ೭ ದಿನ , ೮/೧೦ ದಿಕ್ಕುಗಳು ೨೭ ನಕ್ಷತ್ರ , ೩೦ ದಿನ ಗಳನ್ನು ಸೂಚಿಸುತ್ತವೆ. ಇವು ಮನೆಯ ನಿರ್ಮಾಣಕ್ಕೆ ಹೇಗೆ ಸಂಬಂಧಿಸಿವೆಯೆಂದು ಯಾರಿಗೂ ಗೊತ್ತಿಲ್ಲ. ಮಯಮತ , ಮಾನಸಾರದಂತಹ ವಾಸ್ತುಶಾಸ್ತ್ರದ ಆಕರ ಗ್ರಂಥಗಳು ಈ ಬಗ್ಗೆ ಏನನ್ನೂ ತಿಳಿಸುವುದಿಲ್ಲ. ವಾರ , ತಿಥಿ ಲೆಕ್ಕಾಚಾರದಲ್ಲಿ ಅಶುಭವೆಂದು ಮಾನಸಾರ ಹೇಳುವ ಫಲಿತಾಂಶಗಳನ್ನೇ ಕೆಲವು ಗ್ರಂಥಗಳು ಶುಭವೆಂದು ಪರಿಗಣಿಸುತ್ತವೆ. ಮಾನಸಾರ ಗ್ರಂಥದ ಅಧ್ಯಯನಕ್ಕೆ ಜೀವನವನ್ನೇ ಮೀಸಲಿಟ್ಟ ಪಿ.ಕೆ. ಆಚಾರ್ಯರಿಗೆ ಈ ಸೂತ್ರಗಳ ಹಿನ್ನೆಲೆ ಏನು ? ಇವು ಎಲ್ಲಿಂದ ಹೇಗೆ ಬಂದವೆಂದು ನಿರ್ಧರಿಸಲು ಆಗಲಿಲ್ಲ.
ಆಯಾದಿ ವರ್ಗಗಳನ್ನು ನಿರ್ಧರಿಸುವಲ್ಲಿ ಹಲವಾರು ಲೆಕ್ಕಾಚಾರಗಳನ್ನು ನೀಡಲಾಗಿದೆ. ವಿಸ್ತಿರ್ಣ , ಉದ್ದ , ಅಗಲಗಳನ್ನು ೩ , ೮ , ೯ ರಿಂದ ಗುಣಿಸಿ ೮ ,೯ , ೧೦ , ೧೨ ಸಂಖ್ಯೆಗಳಿಂದ ಭಾಗಿಸಲಾಗಿದೆ. ಒಂದು ಕಡೆ ಬೆಸ ಶುಭವಾದರೆ , ಇನ್ನೊಂದು ಕಡೆ ಸಮ ಮಂಗಳಕರ. ಕೆಲವು ವಾರ , ತಿಥಿಗಳು ಒಳ್ಳೆಯವಾದರೆ ಇನ್ನು ಕೆಲವು ಅಪಾಯಕಾರಿ. ಇವೆಲ್ಲ ಹೇಗೆ ಬಂದವು ? ಇವುಗಳಿಗೆ ಏನಾದರೂ ಆಧಾರವಿದೆಯೇ ? ಎಂದು ಯಾವುದೇ ವಾಸ್ತು/ಜ್ಯೋತಿಷ್ಯ ಪಂಡಿತನನ್ನು ನೀವು ಕೇಳಿರಿ. ಪುಂಖಾನುಪುಂಖವಾಗಿ 'ಮಯಸಾರ' ಮಯಮತ' 'ಸಮರಂಗ ಸೂತ್ರಧಾರ' 'ಗ್ರಹಗತಿ' ಪ್ರಾಚೀನ ಋಷಿ-ಮುನಿ ಪ್ರಣೀತ ಎಂದು ಬಡಬಡಿಸುತ್ತಾರೆಯೇ ಹೊರತು ಎಂದಿಗೂ ಸಮಾಧಾನಕಾರವಾದ ಭೌತಿಕ ವಿದ್ಯಾಮಾನ ಆಧಾರಿತ ವಿವರಣೆ ನೀಡುವುದಿಲ್ಲ.
ನಿಮ್ಮ ಜಾತಿಗೆ ಅನುಗುಣವಾಗಿ ನಿಮ್ಮ ಮನೆಯ ಆಯ ಇರಬೇಕೆಂದು ವಾಸ್ತುಶಾಸ್ತ್ರಗಳು ಹೇಳುತ್ತವೆ. ನೀವು ಶೂದ್ರರಾಗಿದ್ದರೆ (ಬಹುತೇಕ ಹಿಂದೂಗಳು ) ನಿಮಗೆ ಶ್ವಾನ ಆಯ ಪಾಪ ಫಲಗಳೇ ಖಚಿತ. ನೀವು ಎಡತಾಕುವ ಅಮೋಘ ಪ್ರಾಚೀನ ವಾಸ್ತುಶಾಸ್ತ್ರ ಹೇಳುವ ಪಂಡಿತ ಅಪ್ಪಿ ತಪ್ಪಿಯೂ ನೀವು ಶೂದ್ರರು , ಶಾಸ್ತ್ರದ ಪ್ರಕಾರ ನಿಮ್ಮದು ಶ್ವಾನ ಆಯ ಎಂದು ಹೇಳುವುದಿಲ್ಲ. ಏಕೆಂದರೆ ಅದರಿಂದ ನೀವು ಮುನಿಸಿಕೊಂಡರೆ ಆತನ ಆಯದಲ್ಲಿ ವ್ಯಯವಾಗುತ್ತದೆ. ಆದ್ದರಿಂದ ತನಗೆ ಅನುಕೂಲವಾಗುವ ವಾಸ್ತುವಿದ್ಯೆಯನ್ನು ನಿಮಗೆ ದಾಟಿಸಿ ತಾನು ಸುರಕ್ಷಿತವಾಗಿ ಸಮೃದ್ಧನಾಗಲು ಬಯಸುತ್ತಾನೆ. ಆಧುನಿಕ ಕಾಲದಲ್ಲಿ ವಾಸದ ನಿವೇಶನ ದಕ್ಕುವುದೇ ದುರ್ಲಭ , ವೆಚ್ಚದಾಯಕವಾಗಿರುವಾಗ ನೀವು ಯಾವ ಬಗೆಯ ಆಯದ ಮನೆಯನ್ನೂ ಕಟ್ಟಲು ಸಹ ಸಾಧ್ಯವಿಲ್ಲ. ಏಕೆಂದರೆ ಆಧುನಿಕ ಕಾನೂನು ವಿಧಿಸಿದ ತೆರವುಗಳನ್ನು ( Set Backs) ನೀವು ಮನೆಯ ಸುತ್ತಲೂ ಬಿಡಲೇಬೇಕು. ಇವೆಲ್ಲವು ವಾಸ್ತುಪಂಡಿತನಿಗೆ ಬೇಡ. ನಿಮ್ಮನ್ನು ವಶಪಡಿಸಿಕೊಳ್ಳಲು ಈಶಾನ್ಯ , ಅಗ್ನಿ ಮೂಲೆ , ಕುಬೇರ ಸ್ಥಾನಗಳೇ ಸಾಕು. ಕುರಿಯ ಬಲಿಗೇಕೆ ಹೆಚ್ಚಿನ ಮಂತ್ರಗಳು ಎನ್ನುವುದೇ ಅತನ ಧೋರಣೆ.
ಆಯಾದಿ ಆರು ವರ್ಗಗಳು ಕಟ್ಟಡದ ಅಳತೆಗಳನ್ನು ನಿರ್ಧರಿಸಿ ಆ ಮೂಲಕ ನಿರ್ಮಾಣ ತಂತ್ರಜ್ಞಾನಕ್ಕೆ ಮಹತ್ತರ ಕೊಡುಗೆ ನೀಡುತ್ತವೆಯೆಂದು ವಾಸ್ತುಶಾಸ್ತಗಳನ್ನು ಆಧರಿಸಿ ಹೇಳಲಾಗುತ್ತದೆ. ಆಯಾದಿ ಆರು ವರ್ಗಗಳ ಮೇಲೆ ಮನೆಗಳು ಬೀರುವ ಪರಿಣಾಮಗಳನ್ನು ಹೇಳಲಾಗಿದೆ. ಅವುಗಳು ಹೀಗಿವೆ. (ನಿಮ್ಮದು ೩೦/೪೦ ಅಳತೆಯ ಮನೆಯಾಗಿದ್ದರೆ ಅದು ಅಗಲ, ಎತ್ತರಗಳಲ್ಲಿ ಹೇಗಿರಬಹುದೆಂದು ಪಕ್ಕದಲ್ಲಿ ನೀಡಿದ್ದೇನೆ)
-ಶಾಂತಿಕ : (ಎತ್ತರ=ಅಗಲ) . ಸುಖ, ಶಾಂತಿ ತರುತ್ತದೆ. ( ೩೦ ,೩೦)
- ಪೌಷ್ಟಿಕ : (ಎತ್ತರ=ಅಗಲ/೪) . ಸಿರಿ , ಸಮೃದ್ಧಿಗಳನ್ನು ತರುತ್ತದೆ. ( ೭.೫ , ೩೦)
-ಜಯಾದಾ : (ಎತ್ತರ = ಅಗಲ/೨). ಜೀವನದಲ್ಲಿ ಯಶಸ್ಸನ್ನು ತರುತ್ತದೆ. (೧೫,೩೦)
-ಧನದಾ: (ಎತ್ತರ=೩/೪ ಅಗಲ) . ಸಂಪತ್ತನ್ನು ತರುತ್ತದೆ.(೨೨ , ೩೦)
-ಅದ್ಭುತ : (ಎತ್ತರ= ೨ ಅಗಲ) . ಆಕರ್ಷಕವಾಗಿರುತ್ತದೆ. ( ೬೦ ,೩೦)
ನೀವು ಈಗ ವಾಸಿಸುತ್ತಿರುವ ಅಥವಾ ಕಟ್ಟಿಸುತ್ತಿರುವ ಮನೆ ಮೇಲಿನ ಯಾವುದಕ್ಕೆ ಸೇರಿದೆಯೆಂದು ನಿರ್ಧರಿಸಬಲ್ಲಿರಾ ? ಅಥವಾ ಇಂತಹ ಅಳತೆಯ ಮನೆಗಳನ್ನು ಎಲ್ಲಾದರು ನೋಡಿರುವಿರಾ? ಅಥವಾ ಮುಂದೆ ಇಂತಹ ಮನೆ ಕಟ್ಟಿಸಬೇಕೆಂದಿರುವಿರಾ? ಸಾಧ್ಯವೇ ಇಲ್ಲ . ಏಕೆಂದರೆ ವಾಸ್ತುಶಾಸ್ತ್ರದ ಈ ಕಲ್ಪನೆಗಳು ಅವ್ಯಾವಹಾರಿಕ . ದಿಕ್ಪಾಲಕರಿಗೆ ನಿಮ್ಮ ಮನೆಯನ್ನೂ ಒಪ್ಪಿಸಿದ ವಾಸ್ತುಪಂಡಿತ ಇಂತಹ ವಿಚಾರಗಳನ್ನು ನಿಮಗೆ ತಿಳುಸುವುದಿಲ್ಲ. ಏಕೆಂದರೆ ವಾಸ್ತುಶಾಸ್ತ್ರದಲ್ಲಿ ಇಂತಹುವು ಇವೆಯೆಂದು ಆತನಿಗೆ ತಿಳಿದಿಲ್ಲ. ತಿಳಿದಿದ್ದರೂ ಇಂತಹ ಮನೆ ನಿಮ್ಮ ಆಧುನಿಕ ಜೀವನಕ್ಕೆ ಪ್ರಶಸ್ತವಾದುದಲ್ಲ. ನೀವು ಅದನ್ನು ತಕ್ಷಣವೇ ತಿರಸ್ಕರಿಸುತ್ತಿರಿ. ಆದ್ದರಿಂದಲೇ ತಮ್ಮ ಬೇಳೆ ಬೇಯುವಷ್ಟು ವಾಸ್ತುಶಾಸ್ತ್ರವನ್ನು ಮಾತ್ರ ವಾಸ್ತುಪಂಡಿತರು ಹೊರತೆಗೆಯುತ್ತಾರೆ
ಅಗ್ನಿಪುರಾಣ ನಿಮ್ಮ ಸೌಖ್ಯಕ್ಕೆ ನಿಮ್ಮ ಮನೆಯೊಂದೇ ವಾಸ್ತುವಿಗೆ ಅನುಗುಣವಾಗಿದ್ದರೆ ಸಾಲದು. ಅದಿರುವ ಊರು ಸಹ ವಾಸ್ತು ತತ್ವಗಳನ್ನು ಪಾಲಿಸಿರಬೇಕು ಎನ್ನುತ್ತದೆ.(ಅ,ಪು೧೦೧-೧) . ಮಾನಸಾರ ಮನೆಯಿರುವ ಜಾಗಕ್ಕೆ ಅನುಗುಣವಾಗಿ ಅದರ ನಿವಾಸಿಯ ಗುಣಗಳಿರುತ್ತವೆ ಎನ್ನುತ್ತದೆ. (ಮಾ.ಸಾ ೩೬.೧-೯೬) ಮನುಷ್ಯ ನಿರ್ಮಿಸಿದ್ದೆಲ್ಲವು ಎರಡನೆ ಹಂತದ ವಾಸ್ತು. ಮನೆಯ ನಿವೇಶನವೇ ಪ್ರಾಥಮಿಕ ವಾಸ್ತು ಎಂದು ಮಯಮತ ಸಾರುತ್ತದೆ. (ಮ.ಮ ೨.೬) ವಾಸ್ತುಶಾಸ್ತ್ರಗಳ ಈ ಹೇಳಿಕೆಗಳನ್ನು ಗಮನಿಸಿದರೆ ಭಾರತದಲ್ಲಿ ಬಹುತೇಕ ಊರುಗಳ ವಾಸ್ತುವಿನ್ಯಾಸವೇ ಸರಿಯಿಲ್ಲ. ಭೂಮಿಗೆ ಹೋಲಿಸಿದಂತೆ ಭಾರತದ ವಾಸ್ತು ಹೇಗಿದೆಯೆಂದು ವಾಸ್ತುಪಂಡಿತರು ಮಾತ್ರ ಹೇಳಬಲ್ಲರು. ಆದ್ದರಿಂದ ಯಾವುದೇ ಭೌತಿಕ ಪರಿಶೀಲನಾರ್ಹ ಸಂಗತಿಗಳನ್ನು ಪರಿಗಣಿಸದ ಕೇವಲ ಹಿಂದೂಗಳ ಪೌರಾಣಿಕ ದೈವ , ನಂಬಿಕೆಗಳ ಮೇಲಿರುವ ವಾಸ್ತುಶಾಸ್ತ್ರದ ಯೋಜನಾ ತತ್ವಗಳಿಗೆ ಯಾವುದೇ ಬೆಲೆಯಿಲ್ಲ.
ಸುಶಿಕ್ಷಿತರು-ಕಪಟಿಗಳು ಮತ್ತು ಹುಸಿ ವಿಜ್ಞಾನ
ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಭಾರತೀಯ ಸಮಾಜ ಭಾರಿ ದೊಡ್ಡಮಟ್ಟದಲ್ಲಿ ಆಧುನಿಕ ಶಿಕ್ಷಣ ಪದ್ದತಿಗೆ ಮೈಯೊಡ್ಡಿಕೊಂಡಿತು. ಇದರಿಂದಾಗಿ ಜಗತ್ತಿನ ಬಹುತೇಕ ಮುಂದುವರೆದ ಜನಾಂಗಗಳು ಒಪ್ಪಿರುವ ಶಿಕ್ಷಣವೇ ಭಾರತದಲ್ಲಿ ದಕ್ಕತೊಡಗಿತು. ಇದು ಜಾಗತಿಕ ತಿಳುವಳಿಕೆಯುಳ್ಳ , ಯಾವುದೇ ವಿಷಯಗಳನ್ನು ಪರಾಮರ್ಶಿಸಿ ನೋಡಬಲ್ಲ, ಪರಕೀಯ ಜನಾಂಗಗಳೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬಲ್ಲ , ಜಗತ್ತಿನ ಯಾವ ಮೂಲೆಗೂ ಹೋಗಿ ಬದುಕಬಲ್ಲ ಮಧ್ಯಮ ವರ್ಗವೆಂಬ ಹೊಸ ಪೀಳಿಗೆಯನ್ನೇ ಸೃಷ್ಟಿಸಿತು. ಈ ಹೊಸ ವರ್ಗ ತನ್ನ ಜೀವನ ಶೈಲಿಯನ್ನು ನವೀಕರಿಸಿಕೊಂಡು ಆಧುನಿಕವೆನಿಸಿದ ವೈಜ್ಝಾನಿಕ ಲಾಭಗಳನ್ನು ವ್ಯಾಪಕವಾಗಿ ಎಗ್ಗಿಲ್ಲದೆ ಬಳಸಿಕೊಳ್ಳತೊಡಗಿತು. ಇದೇ ಸಮಯದಲ್ಲಿ ಈ ವರ್ಗ ಹೊಸದನ್ನು ಮೀರಲಾರದ ಹಳೆಯದನ್ನು ಅಳೆಯಲಾರದ ಇಬ್ಬಂದಿತನಕ್ಕ ಸಿಲುಕತು. ಇದರ ಪರಿಣಾಮವಾಗಿ ಇಂದು ವೃತ್ತಿಯಲ್ಲಿ ಆಧುನಿಕ ವೈಜ್ಞಾನಿಕ ಸಂಶೋಧನೆಯಲ್ಲಿ ನಿರತರಾದ, ಇಂಜಿನಿಯರಿಂಗ್ , ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಿದಂತಹ ವಿದ್ಯಾವಂತರು ಸಹ ವೈಯುಕ್ತಿಕ ಜೀವನದಲ್ಲಿ ಜಾತಕ,ಜ್ಯೋತಿಷ್ಯ,ವಾಸ್ತು ,ನಾಡಿಬಲ, ಸುದರ್ಶನ ಕ್ರಿಯಾ ಯೋಗದಂತಹ ತಳಬುಡವಿಲ್ಲದ ನಂಬಿಕೆಗಳಿಗೆ ಶರಣಾಗಿ ಬದುಕುವಂತಹ ಸನ್ನಿವೇಶಗಳು ಸೃಷ್ಟಿಯಾದವು. ಪ್ರಾಚೀನ ಧರ್ಮ , ನಂಬಿಕೆ , ಆಚರಣೆ , ವೇದೋಪನಿಷತ್ತುಗಳಲ್ಲಿ ಯಾವುದರಲ್ಲಿ ಎಷ್ಟು ಹುರುಳಿದೆಯೆಂದು ಕೆದಕಿ ನೋಡುವ ಪರಿಶೀಲನೆಯ ದೃಷ್ಟಿಗಿಂತಲೂ ಅವುಗಳೆಲ್ಲವನ್ನೂ ಮತ್ತು ಅವುಗಳಲ್ಲಿ ಇರುವುದೆಲ್ಲವನ್ನೂ ಸತ್ಯಸ್ಯ ಸತ್ಯ ಎಂದು ಒಪ್ಪುವ ಮನಸ್ಥಿತಿ ನೆಲೆಗೊಂಡಿತು. ಆದ್ದರಿಂದ ಭಾರತೀಯ ಮಧ್ಯಮ ವರ್ಗ ತನ್ನ ನಂಬಿಕೆಗಳನ್ನು ಸಮರ್ಥಿಸಲು ತಾನು ಗಳಿಸದ ವೈಜ್ಞಾನಿಕ ಜ್ಞಾನಕ್ಕೆ ಮೊರೆಹೋಗತೊಡಗಿತು. ಆದ್ದರಿಂದ ಪ್ರಾಚೀನವಾದ ಎಲ್ಲ ತಿಳುವಳಿಕೆಗಳನ್ನು ಋಷಿ ಮುನಿಗಳ ದಿವ್ಯ ಜ್ಞಾನವೆಂದು ಅದನ್ನು ಪ್ರಶ್ನಿಸುವುದು ತರವಲ್ಲವೆಂದು , ಅದರಲ್ಲಿ ಆಳವಾದ ಆಧುನಿಕ ವೈಜ್ಞಾನಿಕ ಸತ್ಯಗಳು ನಿಗೂಢ ರೀತಿಯಲ್ಲಿ ಸೂತ್ರ ರೂಪದಲ್ಲಿ ವ್ಯಕ್ತಗೊಂಡಿರುವುದೆಂದು ವಾದಿಸತೊಡಗಿತು. ಇದರ ಒಟ್ಟು ಪರಿಣಾಮದ ಅಂಶಗಳನ್ನು ಕೆಳಗೆ ಪಟ್ಟಿ ಮಾಡಿದ್ದೇನೆ.
ಜನರಲ್ಲಿ ವಿದ್ಯಾಭ್ಯಾಸ ಹೆಚ್ಚಿದಂತೆ ವೈಚಾರಿಕತೆ ಮತ್ತು ಪ್ರಶ್ನಿಸುವ ಮನೋಭಾವಗಳು ಸಹಜವಾಗಿ ಜೊತೆಗೂಡುತ್ತವೆ. ಆಗ ಕೇವಲ ಪ್ರಾಚೀನತೆ , ವಾಸ್ತುಪುರುಷ ಮಂಡಲದಂತಹ ವಿವರಣೆಗಳು ಅವರಿಗೆ ತೃಪ್ತಿ ನೀಡುವುದಿಲ್ಲ. ವಾಸ್ತುಶಾಸ್ತ್ರದ ಗ್ರಂಥಗಳು ಮನೆ, ಊರು , ದೇಬಾಲಯದ ವಿವಿಧ ಭಾಗಗಳು ಎಲ್ಲಿರಬೇಕೆಂದು ಹೇಳುತ್ತವೆಯೇ ಹೊರತು ಏಕೆ ಹಾಗಿರಬೇಕೆಂದು ತಿಳಿಸುವುದಿಲ್ಲ ಮತ್ತು ಅಂತಹ ಪ್ರಶ್ನೆಗಳಿಗೆ ಆಸ್ಪದವನ್ನು ಕೂಡ ನೀಡುವುದಿಲ್ಲ. ಅವು ಎಲ್ಲವುದಕ್ಕೂ ಧಾರ್ಮಿಕ ನಂಬಿಕೆ , ಆಚರಣೆ , ವೇದ , ಪುರಾಣಗಳ ಐತಿಹ್ಯಗಳನ್ನು ಒದಗಿಸುತ್ತವೆ. ಆಧುನಿಕ ಜಗತ್ತಿಗೆ ಮೈಯೊಡ್ಡಿಕೊಂಡಿರುವ ಜನ ಇಂತಹ ಕಥೆಗಳನ್ನು ಒಪ್ಪುವುದು ಕಷ್ಟ . ಇದರಿಂದಾಗಿ ವಾಸ್ತುಪಂಡಿತರು ಹಿಂದೆಂದಿಗಿಂತಲೂ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೀವ್ರಗತಿಯಲ್ಲಿ ಏರುತ್ತಿರುವ ನಿರ್ಮಾಣ ಚಟುವಟಿಕೆ ಇನ್ನೊಂದೆಡೆ ವಾಸ್ತುಶಾಸ್ತ್ರದ ಪ್ರಸ್ತುತತೆಯನ್ನು ಪ್ರಶ್ನಿಸುತ್ತಿರುವ ವರ್ಗ. ಇವೆರಡರ ನಡುವೆ ಅಸ್ತಿತ್ವವನ್ನು ಕಂಡುಕೊಳ್ಳಲು ವಾಸ್ತುಶಾಸ್ತ್ರವನ್ನು ಧಾರ್ಮಿಕ,ನಂಬಿಕೆಯ ಚೌಕಟ್ಟಿನಿಂದ ಹೊರತೆಗೆದು ಆಧುನಿಕ ವಿದ್ಯಾಭ್ಯಾಸ ಪಡೆದಿರುವ ಜನ ಒಪ್ಪುವಂತಹ ವೈಜ್ಞಾನಿಕ ಚೌಕಟ್ಟಿನಲ್ಲಿರಿಸಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸಂಸ್ಥಾಪಿತವಾಗಿರುವ ವೈಜ್ಞಾನಿಕ ತಿಳುವಳಿಕೆಯನ್ನು ಬಳಸಿಕೊಂಡು ಹೊಸ ವೇಷದಲ್ಲಿ ‘ಹುಸಿ ವಿಜ್ಞಾನದ’ ಸೋಗಿನಲ್ಲಿ ಕಳ್ಳ ಮಾರ್ಗದ ಮೂಲಕ ವಾಸ್ತುಶಾಸ್ತ್ರ ನಿಮ್ಮ ಮನೆಯನ್ನೂ ಪ್ರವೇಶಿಸಲು ಯತ್ನಿಸುತ್ತಿದೆ. ವಾಸ್ತುಶಾಸ್ತ್ರ ವೈಜ್ಞಾನಿಕ ಎಂದು ಪ್ರತಿಪಾದಿಸಲು ಬಳಸುವ ತಂತ್ರಗಳು ಅವುಗಳ ಅಸಂಬದ್ಧತೆಯನ್ನು ವಿಚಾರಿಸುವ ಮುನ್ನ ‘ವಾಸ್ತುಶಾತ್ರದ ವೈಜ್ಞಾನಿಕ ತತ್ವಗಳನ್ನು ನೋಡೋಣ..
ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇರುವುದೆಂದು ಹೇಳಲಾಗುವ ಎಲ್ಲ ಕಪಟ ವಿದ್ಯೆಗಳ ಮೂಲ ಉದ್ದೇಶ ವಂಚನೆಯ ಹೊರತು ಬೇರೆ ಇರಲು ಸಾಧ್ಯವಿಲ್ಲ. ಜನ ಹೆಚ್ಚು ತಿಳುವಳಿಕೆ ಗಳಿಸಿದಂತೆ ಕಪಟಿಗಳು ಹೆಚ್ಚು ಚುರುಕಾಗುತ್ತಾರೆ. ಇದಕ್ಕಾಗಿ ಇವರು ವಿಜ್ಞಾನ ಈ ಹಿಂದೆ ಕಂಡುಕೊಂಡಿರುವ ಸತ್ಯಗಳೊಂದಿಗೆ ಅದು ಇತ್ತೀಚೆಗೆ ಹೊರಗೆಡವಿರುವ ಆದರೆ ಜನಸಾಮಾನ್ಯರನ್ನು ಇನ್ನೂ ವ್ಯಾಪಕವಾಗಿ ತಲುಪದ ವಿಷಯಗಳನ್ನು , ಅದರ ಪಾರಿಭಾಷಿಕ ಸಂಪತ್ತನ್ನು , ನವೀನ ಪರಿಕಲ್ಪನೆಗಳನ್ನು ತಕ್ಷಣವೇ ಬಳಸಿಕೊಂಡು ತಾವು ಪ್ರತಿಪಾದಿಸುತ್ತಿರುವುದು ನೈಜ ವಿಜ್ಞಾನವೆಂಬ ಭ್ರಮೆ ಮೂಡಿಸುವಲ್ಲಿ ಯಶಸ್ವಿಗಳಾಗುತ್ತಾರೆ. ಕೆಲವು ಧಾರ್ಮಿಕ ನಂಬಿಕೆಗಳು ಅಮೂರ್ತ ಸ್ವರೂಪದವಾಗಿದ್ದು ಅವುಗಳನ್ನು ಆಧುನಿಕ ವೈಜ್ಞಾನಿಕ ತತ್ವಗಳೊಂದಿಗೆ ಸಮೀಕರಿಸುವುದು ಸುಲಭ. ವಂಚಕರು ಈ ಬಗೆಯ ಆಧಾರಗಳಿಗೆ ಅತಿ ಹೆಚ್ಚು ಒತ್ತು ನೀಡುತ್ತಾರೆ. ಇಂತಹ ಹುಸಿ ಆಧಾರಗಳನ್ನು ವೈಜ್ಞಾನಿಕ ಒರೆಗಲ್ಲಿನ ಮೇಲೆ ತಿಕ್ಕಿ ನೋಡಲು ಸಾಕಷ್ಟು ಪರಿಶ್ರಮ ಮತ್ತು ಅಧ್ಯಯನ ಬೇಕು. ಸುಶಿಕ್ಷಿತ ಮಧ್ಯಮ ವರ್ಗ ಇದಕ್ಕೆ ಸಿದ್ದವಿಲ್ಲ. ಅದಲ್ಲದೆ ತಮ್ಮ ನಂಬಿಕೆ ಮತ್ತು ವೈಜ್ಞಾನಿಕ ತಿಳುವಳಿಕೆಗಳ ನಡುವೆ ಮಹಾನ್ ಕಂದಕವಿರುವುದನ್ನು ಒಪ್ಪುವುದು ಅಸಹನೀಯವೆನಿಸುತ್ತದೆ. ಇದರಿಂದ ಗ್ರಹಣದ ನೈಜ ಕಾರಣ ತಿಳಿದ ನಂತರವೂ ಪಂಚಾಂಗದಲ್ಲಿರುವ ಪರಿಹಾರಗಳಿಗೆ ಮೊರೆ ಹೋಗುತ್ತಾರೆ. ವಾಸ್ತು ಪರಿಣಿತರು ನೀಡುವ ವಿವರಣೆಗಳು ವೈಜ್ಞಾನಿಕ ನೆಲೆಗಟ್ಟಿನವೆಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಮೊದಲಿನಿಂದ ಪ್ರಚಲಿತವಿರುವ ನಂಬಿಕೆಗಳನ್ನು ಪ್ರಶ್ನಿಸುವುದೇಕೆ ? ಅವುಗಳಲ್ಲಿ ಏನಾದರೂ ಹುರುಳಿದ್ದರೆ ನಮ್ಮ ವೈಯುಕ್ತಿಕ , ಕೌಟುಂಬಿಕ ಜೀವನದಲ್ಲಿ ಯಾವುದಾದರೂ ಸಮಸ್ಯೆಗಳು ಎದುರಾಗಬಹುದು. ಅಂತಹ ಕುತ್ತನ್ನು ನಾವು ನಾವಾಗಿಯೇ ಮೈಮೇಲೆ ಎಳೆದುಕೊಳ್ಳುವುದೇಕೆ ? ಎಂಬ ನಿಲುವು ತಾಳುತ್ತಾರೆ. ಆದರೆ ಅವರು ಕಲಿತ ವೈಜ್ಞಾನಿಕ ಜ್ಞಾನ ಅವರ ಅಂತರಂಗದಲ್ಲಿ ಸದಾ ಜಾಗೃತವಾಗಿರುತ್ತದೆ. ಭಾರತದಲ್ಲಿ ನಂಬಿಕೆ ಮತ್ತು ಪ್ರಮಾಣಿತ ಜ್ಞಾನಗಳ ನಡುವಿನ ಸಂಘರ್ಷವೇ ಮಧ್ಯಮ ವರ್ಗದ ತುಮುಲ ಮತ್ತು ಜೀವನವಾಗಿದೆ. ಯಂತ್ರಗಳಿಗೆ ಪೂಜೆ ಮಾಡುವುದು , ಸೇತುವೆ , ಗಗನಚುಂಬಿ ಕಟ್ಟಡಗಳನ್ನು ಪ್ರಾರಂಬಿಸುವಾಗ ಯಾಗಗಳನ್ನು ನೆರವೇರಿಸುವುದು , ವಾಸ್ತು ಶಾಂತಿ ಮಾಡಿಸುವುದು , ವೇದ ಮಂತ್ರಗಳನ್ನು ಪಠಿಸುವುದು ಈ ತುಮುಲದ ಬಾಹ್ಯ ಆಚರಣೆಗಳು.
ಪ್ರತಿಯೊಬ್ಬ ಸುಶಿಕ್ಷಿತನೂ ತಾನು ಕುರುಡು ನಂಬಿಕೆಗೆ ಬಲಿಯಾಗಿಲ್ಲವೆಂದು ತೋರಿಸಿಕೊಳ್ಳಲು ಯತ್ನಿಸುತ್ತಾನೆ. ಇದರಿಂದ ವಾಸ್ತು-ಜಾತಕ-ಭವಿಷ್ಯಗಳನ್ನು ನಂಬುವವರು ಹೇಗಾದರೂ ಇವುಗಳನ್ನು ವೈಜ್ಞಾನಿಕಗೊಳಿಸಿ ಸಮಾಧಾನ ಪಟ್ಟುಕೊಳ್ಳುವ ಹವಣಿಕೆಯಲ್ಲಿರುತ್ತಾರೆ. ಕಪಟವಾದಿಗಳು ನೀಡುವ 'ವೈಜ್ಞಾನಿಕ' ವಿವರಗಳು ಇವರ ನೆರವಿಗೆ ಬರುತ್ತವೆ. ಈ ವಿವರಣೆಗಳನ್ನು ಪ್ರಶ್ನಿಸಿ , ಪರಿಶೀಲಿಸಿ ತಾವು ಒಪ್ಪಿದೆವೆಂದು ಭಾವಿಸುತ್ತಾರೆ. ಆದರೆ ನಿಜವಾಗಿಯೂ ಇವರು ಎಂದಿಗೂ ತಾವು ಕಲಿತ ವೈಜ್ಞಾನಿಕ ಅನುಮಾನ ವಿಧಾನಗಳನ್ನು ಈ ವಿವರಣೆಗಳ ಮೇಲೆ ಬಳಸಿರುವುದಿಲ್ಲ. ಗುರುತ್ವ , ಸಾಪೇಕ್ಷ ಸಿದ್ಧಾಂತ , ಕ್ವಾಂಟಂ ಬಲವಿಜ್ಞಾನಗಳು ಇವರಿಗೆ ದೂರದ ಯಾವುದೋ ಕನಸಿನ ಸಂಗತಿಗಳಾಗಿ ಗೋಚರಿಸುತ್ತ , ವಾಸ್ತುವಾದಿಗಳು ಹೇಳುವ ಅಗ್ನಿ-ವಾಯು-ಕುಬೇರರು , ಬಾಗಿಲು ಉತ್ತರಕ್ಕೆ ಏಕೆ ಇರಬೇಕೆಂಬ ವಿವರಣೆಗಳು ಹೆಚ್ಚು ಆಪ್ತವೆನಿಸುತ್ತವೆ. ಬೆಂಗಳೂರಿನಂತಹ ವಿದ್ಯಾವಂತರ ಮಹಾನಗರದಲ್ಲಿ ವಾಸ್ತು ಬೆಳೆ ಏಕೆ ಹುಲಸಾಗಿದಯೆನ್ನುವುದು ಇದರಿಂದ ಸ್ಪಷ್ತವಾಗುತ್ತದೆ. ವಿಜ್ಞಾನ ಒಂದು ಚಿಂತನಾ ವಿಧಾನವಾಗಿರದೆ ಹೊಟ್ಟೆ ಹೊರೆಯುವ ಮಾರ್ಗವಾಗಿರುವವರೆಗೆ ಈ ಪರಿಸ್ಥಿತಿ ಮುಂದುವರೆಯುತ್ತದೆ.
ವಾಸ್ತು-ಜಾತಕ-ಸಂಖ್ಯಾಶಾಸ್ತ್ರ ತಿರುಚಿದ ವೈಜ್ಞಾನಿಕ ಪರಿಕಲ್ಪನೆ, ಅರ್ಥಾಂತಗೊಳಿಸಲ್ಪಟ್ಟ ವೈಜ್ಞಾನಿಕ ಸಿದ್ಧಾಂತಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವನ್ನು ಈ ಹಿಂದೆಯೇ ತಿಳಿಸಲಾಗಿದೆ. ಅವೆಲ್ಲವೂ ಕೆಳಗಿನ ಮೂರೂ ಅಂಶಗಳ ಸುತ್ತ ತಿರುಗುತ್ತವೆ . ಆದ್ದರಿಂದ ಅವುಗಳತ್ತ ಒಮ್ಮೆ ಗಮನ ಹರಿಸೋಣ,.
(೧) ಆಧಾರರಹಿತ ಚಿಂತನೆಗಳ ಅವಲಂಬನೆ
'-ಈ ಭೂಮಿ ಪಂಚಭೂತಗಳಿಂದಾಗಿದೆ. ಬೆಂಕಿ-ಗಾಳಿ-ನೀರು-ನೆಲ-ಆಕಾಶ ಈ ಐದು ಭೂತಗಳ ಚೈತ್ಯನದ ಬಳಕೆಯೇ ವಾಸ್ತುಶಾಸ್ತ್ರದ ಗುರಿ
ಸಾವಿರಾರು ವರ್ಷಗಳ ಹಿಂದೆ ವಿಷಯ ನಿಷ್ಠರಾಗಿದ್ದ ಪಾಶ್ಚಾತ್ಯ ಮತ್ತು ಪೌರಾತ್ಯ ಚಿಂತಕರು ವಿಶ್ವ ಪಂಚಭೂತಗಳಿಂದಾಗಿದೆಯೆಂದು ಭಾವಿಸಿದ್ದರು. ಪಂಚಭೂತಗಳ ಪರಿಕಲ್ಪನೆಯ ಹಿಂದೆ ಯಾವುದೇ ವಸ್ತುನಿಷ್ಠ ಹುಡುಕಾಟಗಳಾಗಲಿ , ಸಾಕ್ಷ್ಯಾಧಾರಗಳಾಗಲಿ ಇರಲಿಲ್ಲ. ಆ ಕಾಲದಲ್ಲಿ ಅಂತಹುದನ್ನು ನಿರೀಕ್ಷಿಸುವುದು ಸಹ ತಪ್ಪು. ಭಾರತೀಯ ಚಿಂತನೆ ಮತ್ತು ತತ್ವಶಾಸ್ತ್ರದಲ್ಲಿ ಪಂಚಭೂತಗಳ ಪರಿಕಲ್ಪನೆಗೆ ಮಹತ್ತರವಾದ ಸ್ಥಾನವಿದೆ. ರಮ್ಯಾದ್ಭುತವಾಗಿ ಕಾಣುವ ಈ ಪರಿಕಲ್ಪನೆ ಭಾರತೀಯ ಜೀವನ ದೃಷ್ಟಿ , ಕಾವ್ಯ ,ಸಾಹಿತ್ಯಗಳ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟ. ಆದರೆ ಆಧುನಿಕ ವೈಜ್ಞಾನಿಕ ಯುಗದಲ್ಲಿ ಪಂಚಭೂತಗಳ ಕಲ್ಪನೆ ತೀರಾ ಬಾಲಿಶವೆನಿಸುತ್ತದೆ. ಪಂಚಭೂತಗಳಾದ ಗಾಳಿ-ನೀರು-ನೆಲ ದ್ರವ್ಯದ ವಿಭಿನ್ನ ರೂಪಗಳಲ್ಲದೆ ಬೇರಲ್ಲ. ಇನ್ನು ಅಗ್ನಿಯೆನ್ನುವ ತತ್ವ ದ್ರವ್ಯದ ವಿಭಿನ್ನ ಸ್ಥಿತಿಗಳ ರಾಸಾಯನಿಕ ಸಂಯೋಜನೆಯ ಪರಿಣಾಮ ಮಾತ್ರ. ಈಗ ದ್ರವ್ಯ(=ಚೈತನ್ಯ ) ಮತ್ತು ದ್ರವ್ಯದ ಅಸ್ತಿತ್ವಕ್ಕೆ ಅವಕಾಶ ನೀಡುವ ಆಕಾಶ ಎಂಬ ಎರಡೇ ತತ್ವಗಳು ಉಳಿದಿವೆ. ಈ ಎರಡೂ ತತ್ವಗಳನ್ನು ಐಕ್ಯಗೊಳಿಸಲು ವಿಜ್ಞಾನ ಹೆಣಗುತ್ತಿದೆ. ದೋಷಪೂರಿತವಾದ ಪಂಚಭೂತಗಳನ್ನು ವಾಸ್ತು ಶಾಸ್ತ್ರದ ತಳಹದಿಯಾಗಿ ಸಾರುತ್ತಿರುವುದು ವಾಸ್ತುವಾದಿಗಳ ಇತಿಮಿಗಳನ್ನು ಎತ್ತಿ ತೋರಿಸುತ್ತದೆ. ಸದಾ ಉರಿಯುತ್ತಿರುವ ಸೂರ್ಯ ಅಗ್ನಿಗಿಂತಲೂ ವಿಭಿನ್ನ ಎನ್ನುವ ತಿಳುವಳಿಕೆಯ ಮೇಲೆ ಕಟ್ಟಿದ ವಾಸ್ತುಶಾಸ್ತ್ರ ಅಸಂಬದ್ಧಗಳ ಕಂತೆ.
(೨) ವೈಜ್ಞಾನಿಕ ತತ್ವಗಳ ತಿರುಚಿಕೆ
'ವಾಸ್ತುಶಾಸ್ತ್ರ ಪ್ರಮುಖವಾಗಿ ಚೈತನ್ಯದ ಹರಿವನ್ನು ಅನುಕೂಲಕರವಾಗಿ ಮಾರ್ಪಡಿಸುತ್ತದೆ. ಭೂಮಿಯ ಕಾಂತತ್ವವನ್ನು ಅದರ ಮೂಲಕ ಹರಿಯುವ ಧನಾತ್ಮಕ ಚೈತನ್ಯವನ್ನು (ಪಾಸಿಟಿವ್ ಎನರ್ಜಿ) ನಿರ್ದಿಷ್ಟ ಸ್ಥಾನಕ್ಕೆ ನಿರ್ದೇಶಿಸಿ ಋಣಾತ್ಮಕ ಚೈತನ್ಯವನ್ನು (ನೆಗೆಟಿವ್ ಎನರ್ಜಿ) ದೂರಗೊಳಿಸಲು ನೆರವಾಗುತ್ತದೆ.
ವಾಸ್ತುಶಾಸ್ತ್ರ ಮೊದಲಿಗೆ ಬಳಕೆಗೆ ಬಂದಾಗ ಭೂಮಿ ದುಂಡಗಿದೆ, ಸೂರ್ಯನ ಸುತ್ತ ಸುತ್ತುತ್ತಿದೆ , ಭೂ ಕಾಂತತ್ವ ಎನ್ನುವ ಬಲವಿದೆ ಎನ್ನುವ ಯಾವ ಅರಿವೂ ಸಹ ಇರಲಿಲ್ಲ. ಇವೆಲ್ಲವೂ ಹದಿನೈದನೇ ಶತಮಾನದಿಂದ ಬೆಳೆದು ಬಂದ ಆಧುನಿಕ ವಿಜ್ಞಾನ ನೀಡಿದ ತಿಳುವಳಿಕೆಗಳು. ಕಪಟಿಗಳು ತಮ್ಮದಲ್ಲದ ಪರಿಕಲ್ಪನೆಯನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆಂದು ಕಾಣಬಹುದು. ಭೂಕಾಂತತ್ತ್ವ , ಚೈತನ್ಯ ಎಂದು ಬಡಬಡಿಸಿದ ತಕ್ಷಣ ಅದರಲ್ಲೇನೂ ವೈಜ್ಞಾನಿಕ ಸಂಬಂಧವಿದೆಯೆಂದು ವಿದ್ಯಾವಂತ ಮಧ್ಯಮ ವರ್ಗ ಭಾವಿಸುತ್ತದೆ. ನಿಜವಾಗಿಯೂ ಅದು ಸರಿಯೇ ಎಂದು ಪ್ರಶಿಸ ಹೊರಡುವುದಿಲ್ಲ. ವಾಸ್ತು ಪ್ರಕಾರ ಮನೆ ಕಟ್ಟಿಸುತ್ತಿರುವ ಯಾವ ವಿದ್ಯಾವಂತನನ್ನೇ ನೀವು ಕೇಳಿರಿ. ತಕ್ಷಣ'ಪಾಸಿಟಿವ್ ಎನರ್ಜಿ-ನೆಗಟಿವ್ ಎನರ್ಜಿ-ಕಾಸ್ಮಿಕ್ ರೇಯ್ಸ್ ' ಎನ್ನುವಂತಹ ವಿವರಣೆಗಳು ಅಡೆತಡೆಯಿಲ್ಲದೆ ಬರುತ್ತವೆ. ನಿಜವಾಗಿಯೂ ಚೈತನ್ಯ ಒಂದು ಅದಿಶ ಪರಿಮಾಣ (ಸ್ಕೇಲಾರ್ ಕಾಂಟಿಟಿ) . ಅದಕ್ಕೆ ನಿರ್ದಿಷ್ಜ್ಟ ದಿಶೆಯಿಲ್ಲ. ಚೈತನ್ಯದಲ್ಲಿ ಋಣ-ಧನ ಎನ್ನುವ ವರ್ಗೀಕರಣಗಳಿಲ್ಲ. ಈ ವಿಶ್ವದಲ್ಲಿರುವ ಎಲ್ಲ ಚೈತನ್ಯವೂ ಒಂದೇ. ಅದು ವಿಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತದೆ. ಆದ್ದರಿಂದಲೇ ಚೈತನ್ಯ ಸಂರಕ್ಷಣಾ ತತ್ವವಿದೆ. (ಪ್ರಿನ್ಸಿಪಲ್ ಆಫ಼್ ಕನ್ಸ್ರರ್ವೇಷನ್ ಆಫ಼್ ಎನರ್ಜಿ) ಈ ತತ್ವದ ಆಧಾರದ ಮೇಲೆ ಈ ವಿಶ್ವದ ಬಹುತೇಕ ವಿದ್ಯಾಮಾನಗಳನ್ನು ವಿಜ್ಞಾನದಿಂದ ವಿವರಿಸಲು ಸಾಧ್ಯವಾಗಿದೆ. ಇನ್ನು ಉಳಿದಂತೆ ಕಾಂತ ಬಲ ರೇಖೆಗಳು (ಮ್ಯಾಗ್ನೆಟಿಕ್ ಫೋರ್ಸ್ ಲೈನ್ಸ್) . ಯಾವುದೇ ಕಾಂತದ ಸುತ್ತ ಅದರ ಪ್ರಭಾವ ವಲಯವಿರುತ್ತದೆ. ನಾವು ಅದನ್ನು ವಿಶ್ಲೇಷಿಸಲು , ಅರ್ಥೈಸಲು , ಸುಲಭವಾಗಿ ಗ್ರಹಿಸಲು ಬಲದ ರೇಖೆಯಂತೆ , ಉತ್ತರದಿಂದ ದಕ್ಷಿಣ ಧೃವದತ್ತ ಹರಿಯುವಂತೆ ಪರಿಗಣಿಸಿದ್ದೇವೆ. ಈ ಪರಿಕಲ್ಪನೆಯನ್ನು ವಾಸ್ತುವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತ ವಾಸ್ತುಶಾಸ್ತ್ರ ವಿಜ್ಞಾನವೇನೋ ಎಂಬ ಭ್ರಮೆ ಮೂಡಿಸುತ್ತಾರೆ.
(೩) ನೈಸರ್ಗಿಕ ಘಟನಾವಳಿಗಳನ್ನು ವೈಯುಕ್ತಿಕ ಆಗುಹೋಗುಗಳಿಗೆ ಹೊಣೆಯಾಗಿಸುವುದು
'ವಾಸ್ತುಶಾಸ್ತ್ರವನ್ನು ಅನುಸರಿಸುವುದರಿಂದ ವ್ಯಕ್ತಿಯೊಬ್ಬನ ಮೇಲೆ ನೈಸರ್ಗಿಕ ವಿದ್ಯಾಮಾನಗಳು ಬೀರುವ ಪ್ರಭಾವಗಳನ್ನು ನಿಯಂತ್ರಿಸಬಹುದು. ಗ್ರಹಗತಿಗಳಿಂದಾಗುವ ದೋಷಗಳಿಗೆ ಪರಿಹಾರ ದಕ್ಕುತ್ತದೆ.
ಪ್ರಾಣಿಗಳಿಗೆ ಬದುಕುವುದೊಂದೇ ಗುರಿ. ಮನುಷ್ಯನಿಗೆ ಅದಕ್ಕೆ ಮಿಗಿಲಾದ ಬೌದ್ಧಿಕ-ಭಾವುಕ ಒತ್ತಡಗಳಿವೆ. ಇವುಗಳಿಂದ ದೈನಂದಿನ ಜೀವನ ಜಂಜಾಟದಲ್ಲಿ ಸೋಲು- ಗೆಲುವು ,ಉತ್ಶಾಹ-ಹತಾಶೆ, ಲಾಭ-ನಷ್ಟಗಳಂತಹ ಪರಿಣಾಮಗಳು ಸಹಜ.ಇವುಗಳಿಗೆ ಲೌಕಿಕ ಪರಿಹಾರ ಹುಡುಕುವುದೊಂದೇ ದಾರಿ. ಇದಕ್ಕಾಗಿ ವಾಸ್ತವ ಸಂಗತಿಗಳಿಗಿಂತಲೂ ಕಾಣದ ಪಾರಲೌಕಿಕ ಕಾರಣಗಳತ್ತ ತಿರುಗಿಸಲು ವಾಸ್ತುಶಾಸ್ತ್ರ ಯತ್ನಿಸುತ್ತದೆ. ವಾಸ್ತುಶಾಸ್ತ್ರದ ದೋಷ ಪರಿಹಾರಗಳೆಲ್ಲವೂ ಗುರುತಿಸಲಾಗದ , ಅಳೆಯಲಾಗದ ಸಂಗತಿಗಳ ಮೇಲಿರುತ್ತವೆ. ಇದಕ್ಕಾಗಿ ವಾಸ್ತುವಾದಿಗಳು ತಮಗೆ ಅನುಕೂಲರವೆನಿಸಿದ ವೈಜ್ಞಾನಿಕ/ಅರೆವೈಜ್ಞಾನಿಕ ಸಂಗತಿಗಳನ್ನು ಆಯ್ದುಕೊಳ್ಳುತ್ತಾರೆ. ಗ್ರಹಗತಿ, ಬಾಗಿಲಿನ ದಿಕ್ಕು ,ಕುಬೇರ ಮೂಲೆ ,ಬ್ರಹ್ಮಸ್ಥಾನ ಅವರ ಉಪಕರಣಗಳಾಗುತ್ತವೆ. ಆಗ ಭೂಮಿಯ ಗುರುತ್ವಕ್ಕಿಂತಲೂ ನೂರಾರು ಕೋಟಿ ಕಿ.ಮೀ ದೂರದಲ್ಲಿರುವ ಶನಿಯ ಪ್ರಭಾವ , ಪರಿಸರ ಮಾಲಿನ್ಯಕ್ಕಿಂತಲೂ ಕುಜದೋಷಗಳು ಮೇಲುಗೈ ಸಾಧಿಸುತ್ತವೆ. ೩೦/೪೦ ಅಳತೆಯ ನಿವೇಶನದ ಮೇಲೆ ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿಕೊಂಡು ಬೀರುವ ಬಹುದೂರದ ಪ್ರಭಾವಗಳಿಗೆ ಮಾನ್ಯತೆ ದಕ್ಕುವಂತೆ ಮಾಡುತ್ತಾರೆ. ಈ ವರೆಗೆ ಯಾವ ವಾಸ್ತುವಾದಿಯೂ ವಿದ್ಯುತ್ ವಿತರಣಾ ಕೇಂದ್ರದಿಂದ ಸಮೀಪವಿರುವ ಮನೆಗಳ ಮೇಲೆ ಅಲ್ಲಿನ ವೈದ್ಯುತ್ ಕ್ಷೇತ್ರದ ಪ್ರಭಾವ ಬಿದ್ದಿದೆಯೆಂದಾಗಲಿ , ವಿಕಿರಣಶೀಲತೆಯಿಂದ ಯಾರೊಬ್ಬರ ವೈಯುಕ್ತಿಕ ಜೀವನದಲ್ಲಿ ಏರುಪೇರಾಗಿದೆಯೆಂದಾಗಲಿ ಈವರೆಗೆ ಹೇಳಿಲ್ಲ ಮುಂದೆ ಹೇಳುವುದೂ ಇಲ್ಲ. ಏಕೆಂದರೆ ಹಾಗೆ ಹೇಳಿದ ತಕ್ಷಣ ವಿಜ್ಞಾನಿ/ಇಂಜಿನಿಯರ್ ತಂಡ ಅದನ್ನು ಪರೀಕ್ಷಿಸಲು ಬರುತ್ತದೆ. ಶನಿಗ್ರಹದ ಪ್ರಭಾವವನ್ನು ಯಾವುದೇ ಸೀಮಿತ ಸ್ಥಳ ಹಾಗೂ ವ್ಯಕ್ತಿಯ ಮೇಲೆ ಅಳೆಯಲು ಸಾಧ್ಯವಿಲ್ಲ. ವೈಜ್ಞಾನಿಕ ವಿಷಯಾಧಾರಿತವೆಂದು ಹೊರನೋಟಕ್ಕೆ ತೋರಬೇಕು ಆದರೆ ಪರಿಶೀಲಿಸಲು ಸಾಧ್ಯವಾಗಬಾರದು ಅಂತಹ ಸಂಗತಿಗಳ ಮೇಲೆ ವಾಸ್ತು-ಜಾತಕ ನಿಂತಿವೆ. ನೇರವಾಗಿ ಪ್ರಭಾವ ಬೀರುತ್ತಿರುವ ಸ್ಥಳೀಯ ಸಂಗತಿಗಳಿಗಿಂತ ಬಹುದೂರದ ಚುಕ್ಕಿ, ಗ್ರಹಗಳ ಪ್ರಭಾವಗಳ ಮೇಲೆ ಅವಲಂಬಿತವಾಗಿರುವುದರ ಹಿಂದೆ ಕೆಲವೊಮ್ಮೆ ಮೌಢ್ಯ ಮತ್ತು ಬಹುತೇಕ ವೇಳೆ ವ್ಯವಸ್ಥಿತ ಸಂಚಿದೆ.

ವಾಮಾಚಾರ ಸಮಾಚಾರ :-
ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸ್ಸು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು, ಹಣ ಸಂಪಾದಿಸಬೇಕು ಅಥವಾ ಕೀರ್ತಿಯನ್ನು ಪಡೆಯಬೇಕು ಎನ್ನುವಾಗ ಮನುಷ್ಯನಿಗೆ ಬಡಿದೆಬ್ಬಿಸಿ ನೆಲಕ್ಕುರುಳಿಸುವ ಅಪಾಯವೇ ವಾಮಾಚಾರ.
ಹೆಸರೇ ಸೂಚಿಸುವಂತೆ ಇದು ವಾಮಮಾರ್ಗ, ನಮ್ಮ ಮುಂದೆ ಬಂದು ನ್ಯಾಯ ಮಾರ್ಗದಲ್ಲಿ ನಮ್ಮನ್ನೆದುರಿಸಿ ಸಾಧಿಸಲಾಗದವರು ನಮಗೆ ತಿಳಿಯದಂತೆ ಕೆಟ್ಟ ಹಾಗೂ ದುಷ್ಟ ಶಕ್ತಿಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮ ಪತನಕ್ಕಾಗಿ ಕಾದು ಕೂರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ತರಹದ ವಾಮಾಚಾರವನ್ನು ನಾವು ನಂಬದೇ ಇರುವುದು ಹಾಗೂ ಈ ವಿಚಾರದಲ್ಲಿ ನಾವು ತೋರಿಸುವ ಅತೀ ಹುಂಬ ಧೈರ್ಯವೇ ಅವರ ಪಾಲಿಗೆ ವರವಾಗಿ ವಾಮಾಚಾರ ಮಾಡುವವರಿಗೆ ಕಾರ್ಯ ಸುಲಭ ಸಾಧ್ಯವಾಗುತ್ತದೆ. ದೇವರನ್ನು ನಂಬುವ ನಾವು ಕೃತ್ರಿಯ ಮಾಟ ಮಂತ್ರಗಳನ್ನು ನಂಬುವುದಿಲ್ಲ ಎಂದರೆ ನಾವು ಬೆಳಕನ್ನು ಮಾತ್ರ ನಂಬುತ್ತೇವೆ, ಕತ್ತಲನ್ನು ನಂಬುವುದಿಲ್ಲ. ಕತ್ತಲ ಅಸ್ತಿತ್ವ ಸುಳ್ಳು ಎಂಬಷ್ಟೇ ಹಾಸ್ಯಾಸ್ಪದವಾಗುತ್ತದೆ.
ಈ ವಾಮಾಚಾರದಲ್ಲಿ ಬಹಳ ವಿಧಗಳು ಇದ್ದರೂ ಪ್ರಮುಖವಾಗಿ ವಾಮಾಚಾರದ ಎರಡು ವಿಭಾಗಗಳನ್ನು ಶಾಸ್ತ್ರ ಹೇಳುತ್ತದೆ. ಒಂದು ಕ್ಷುದ್ರಾಭಿಚಾರ, ಇನ್ನೊಂದು ಮಹಾಭಿಚಾರ. ಪ್ರಶ್ನಮಾರ್ಗಂ ಎಂಬ ಪ್ರಶ್ನಶಾಸ್ತ್ರ ಗ್ರಂಥದಲ್ಲಿ ಇವುಗಳ ಬಗ್ಗೆ ಮಾಹಿತಿ ಸಿಗುತ್ತದೆ.
ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು. ಊಟ ಮಾಡುವಾಗ ಅಡುಗೆಯಲ್ಲಿ ಕೂದಲು ಸಿಗುವುದು, ಮನೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ದೊಡ್ಡ ಜಗಳವಾಗುವುದು, ವ್ಯಾಪಾರ- ಉದ್ಯೋಗದಲ್ಲಿ ತೊಂದರೆ ಆಗುವುದು, ಎಷ್ಟೇ ಹಣ ಸಂಪಾದಿಸಿದರೂ ಅದನ್ನು ಉಳಿಸಿಲಿಕ್ಕಾಗದೇ ಕಷ್ಟಪಡುವುದು, ನಿದ್ರಾಹೀನತೆ, ಕೆಟ್ಟ ಕನಸು ಬೀಳುವುದು, ಅನಾರೋಗ್ಯ ಇದ್ದರೂ, ವೈದ್ಯರ ಬಳಿ ಹೋದಾಗ ಅವರು ಪರೀಕ್ಷಿಸಿ ಏನೂ ಆಗಿಲ್ಲ ಎಂದು ಹೇಳುವುದು ಹೀಗೆ ಹತ್ತು ಹಲವು.
ಇಲ್ಲಿದೆ ಪರಿಹಾರ
ಇನ್ನು ಪರಿಹಾರ ವಿಚಾರಕ್ಕೆ ಬಂದಾಗ ನಮಗೆ ಸಹಾಯಕ್ಕೆ ಬರುವುದೇ ಪ್ರಶ್ನಶಾಸ್ತ್ರ. ಜಾತಕದಲ್ಲಿ ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಾಗದು. ಅಂಥ ಸಮಯದಲ್ಲಿ ಪ್ರಶ್ನಶಾಸ್ತ್ರ ಜ್ಯೋತಿಷಿಗಳ ಬಳಿ ಹೋದಾಗ ಕವಡೆ ಅಭಿಮಂತ್ರಿಸಿ ಭಚಕ್ರವಾಗಿ ವಿಭಾಗಿಸಿ ಆರೂಢಲಗ್ನ ಹಾಗೂ ತತ್ಕಾಲ ಲಗ್ನದ ಆಧಾರದ ಮೇಲೆ ವ್ಯಕ್ತಿಗೆ ವಾಮಾಚಾರ ಆಗಿದೆಯೇ ಇಲ್ಲವೇ ಅಥವಾ ಒಂದು ಪಕ್ಷ ಆಗಿದ್ದಲ್ಲಿ ಯಾವ ರೀತಿಯಲ್ಲಿ ಪರಿಹಾರ ಮಾಡಬೇಕು ಎಂದು ತಿಳಿಯಬಹುದು.
ಏನೇ ಆಗಲೀ ವಾಮಾಚಾರ ಆಗಿರುವ ಸಂಶಯ ಬಂದಲ್ಲಿ ಮೊದಲು ನಾವು ನಮ್ಮನ್ನು ಹಾಗೂ ನಮ್ಮ ಮನೆ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಗೋ ಮೂತ್ರವನ್ನು (ನಾಟಿ ಹಸುವಿನ ಗಂಜಲ) ತಂದು ದರ್ಬೆಯಲ್ಲಿ ಮನೆಯನ್ನೆಲ್ಲ ಪ್ರೋಕ್ಷಣೆ ಮಾಡಬೇಕು.
'ಟೈಗರ್ ಐ' ಎಂಬ ವಿಶೇಷ ಕಲ್ಲಿದೆ. ಅದನ್ನು ಬೆಳ್ಳಿಯಲ್ಲಿ ಜಪಮಾಲೆಯಂತೆ ಕಟ್ಟಿಸಿಕೊಂಡು ಈಶ್ವರನ ದೇಗುಲದಲ್ಲಿ ಲಿಂಗಕ್ಕೆ ಹಾಕಿ ರುದ್ರಾಭಿಷೇಕ ಮಾಡಿಸಿ ನಂತರ ಧರಿಸಬೇಕು. ತಾತ್ಕಾಲಿಕವಾಗಿ ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸುವುದು, ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ನದಿ ಸ್ನಾನಮಾಡಿ ನಂತರ ದೇವತಾ ದರ್ಶನ ಮಾಡುವುದು ಉತ್ತಮ.