KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ಜಾತಕ ಹೊಂದಾಣಿಕೆ

ಮದುವೆಯಲ್ಲಿ ಜಾತಕ ಹೊಂದಾಣಿಕೆಯ ಪದ್ಧತಿಯೂ ಇತ್ತೀಚೆಗಷ್ಟೇ ಬಳಕೆಗೆ ಬಂದದ್ದು. 

 

ಈ ಕೆಳಕಂಡ ಶ್ಲೋಕವನ್ನೂ ಗಮನಿಸಿ. 

    ಕುಲಂ ಚ ಶೀಲಂ ಚ ವಪುರ್ ವಯಶ್ಚ

   ವಿದ್ಯಾಂ ವಿತ್ತಂ ಚ ಸನಾಥತಾಂ ಚ

   ಏತಾನ್ ಗುಣಾನ್ ಸಪ್ತ ಸಮೀಕ್ಷ್ಯ ದೇ

   ಕನ್ಯಾ ವರೇ ಶೇಷಂ ಅಚಿಂತನೀಯಂ

 

 

(ವಿವಾಹ ಸಂದರ್ಭದಲ್ಲಿ ಕುಲ, ಶೀಲ, ವ್ಯಕ್ತಿತ್ವ ಅಥವಾ ರೂಪ , ವಯಸ್ಸು , ವಿದ್ಯೆ , ಸಂಪತ್ತು,  ಪೋಷಕರು- ಈ ಏಳು ಸಂಗತಿಗಳಲ್ಲದೆ ಬೇರೆ ಯಾವುದನ್ನೂ ವಿಚಾರ ಮಾಡತಕ್ಕದ್ದಲ್ಲ . ಈ ಪಟ್ಟಿಯಲ್ಲಿ ಜಾತಕ ಇಲ್ಲದಿರುವುದನ್ನು ಗಮನಿಸಿ)



 
ಜಾತಕ ಹೊಂದಾಣಿಕೆ ಶಬ್ದಾವಳಿ

ಜಾತಕ ತುಲನೆ ಎಂದರೆ ಏನು?ಗುಣ ಹೊಂದಾಣಿಕೆ ಹೇಗೆ ಆಗುತ್ತದೆ? ಇತ್ಯಾದಿ ಪ್ರಶ್ನೆಗಳ ಉತ್ತರವನ್ನು ತಾವು ಸ್ವತಃ ಕಂಡುಕೊಳ್ಳುವ ದೃಷ್ಟಿಯಿಂದ ಜಾತಕ ತುಲನೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಶಬ್ದಗಳ ಪಟ್ಟಿಯನ್ನು ಸಂಗ್ರಹಿಸಿ ಶಬ್ದಾವಳಿಯನ್ನು ತಯಾರಿಸಿದ್ದೇವೆ. ಇತರ ಶಬ್ದಗಳಿಗೆ ತಾವು ಜ್ಯೋತಿಷ್ಯ ಶಬ್ದಾವಳಿ ಲಿಂಕ್‌ನ್ನು ಕ್ಲಿಕ್ ಮಾಡಬೇಕಾಗುತ್ತದೆ.
 

ಗುಣ ಮಿಲನ- ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಭಾವ್ಯ ವಧು-ವರರ ಗುಣ ಹೊಂದಾಣಿಕೆಯನ್ನು ನಕ್ಷತ್ರ ಮತ್ತು ಅದರ ಚರಣದ ಆಧಾರವನ್ನು ಅವಲಂಬಿಸಿ ಮಾಡಲಾಗುತ್ತದೆ. ಈ ಮಾನದಂಡವನ್ನು ಗುಣವೆಂದು ಕರೆಯಲಾಗುತ್ತಿದ್ದು ಅದು 36 ಅಂಕಗಳದ್ದಾಗಿರುತ್ತದೆ, ಅದನ್ನು ಎಂಟು ವಿಭಿನ್ನ ಮಾನದಂಡವಾಗಿ ವಿಭಜನೆ ಮಾಡಲಾಗಿದೆ.ಇದರ ಕ್ರಮ ಈ ಪ್ರಕಾರವಾಗಿದೆ-

 ವರ್ಣ|ವಷ್ಯ|ತಾರಾ|ಯೋನಿ|ಗೃಹ ಮೈತ್ರಿ|ಗಣ|ಭಕೂಟ|ನಾಡಿ
 

ಯಾವ ಕ್ರಮದಲ್ಲಿ ಈ ಮಾನದಂಡವನ್ನು ಇಲ್ಲಿ ನೀಡಲಾಗಿದೆಯೋ, ಇದೇ ಕ್ರಮದಲ್ಲಿ ಉತ್ತರೋತ್ತರ ಇದರ ಅಂಕಗಳು ಹೊಂದಾಣಿಕೆಯಾಗುತ್ತದೆ. ಅರ್ಥಾತ್, ಎರಡು ವ್ಯಕ್ತಿಗಳಲ್ಲಿ ಪರಸ್ಪರ ವರ್ಣ ಹೊಂದಾಣಿಕೆಯಾಯಿತೆಂದರೆ ಕನಿಷ್ಟ 1 ಅಂಕ ದೊರೆಯುತ್ತದೆ ಮತ್ತು ಪರಸ್ಪರ ಹೊಂದಾಣಿಕೆಯಾಗದಿದ್ದರೆ ಅತ್ಯಧಿಕ 8 ಅಂಕಗಳು ದೊರೆಯುತ್ತದೆ. ಈ ಪ್ರಕಾರ ಉತ್ತರೋತ್ತರ ವರ್ಣದಲ್ಲಿ ವಷ್ಯ ಬಲಾಢ್ಯವಾಗಿದ್ದರೆ, ವಷ್ಯನಿಂದ ತಾರಾ,ತಾರಾನಿಂದ ಯೋನಿ, ಮತ್ತು ಅಂತಿಮ ರೂಪದಲ್ಲಿ ನಾಕೆ ಮಿಲನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

ವರ್ಣ- ವರ್ಣದ ನೇರ ಅರ್ಥ ಜಾತಿ ಎಂದಾಗುತ್ತದೆ. ಸಮಸ್ತ ವರ್ಣ ಜಾತಿಯನ್ನು 4 ವರ್ಣಗಳನ್ನಾಗಿ ವಿಭಜನೆ ಮಾಡಲಾಗಿದೆ

  1. ಬ್ರಾಹ್ಮಣ
  2. ಕ್ಷತ್ರಿಯ
  3. ವೈಶ್ಯ
  4. ಶೂದ್ರ
  5.  

ಈ ನಾಲ್ಕು ವರ್ಣ ಸತ,ರಜತ,ರಾಜಸತಾಮಸ ಮತ್ತು ತಾಮಸ ಎಂಬುದಾಗಿದೆ. ಪ್ರಾಚೀನ ಋಷಿ ಪರಂಪರೆಯಿಂದ ಹಿಡಿದು ಇಂದಿನವರೆಗೆ ಬ್ರಾಹ್ಮಣ ವೇದವಿದ್ಯೆ ಹಾಗು ಬುದ್ದಿಯ ಪ್ರತೀಕನಾಗಿದ್ದರೆ, ಕ್ಷತ್ರಿಯ ಶೂರ ಮತ್ತು ವೀರತೆಯ, ವೈಶ್ಯ ವ್ಯವಸಾಯದ ಮತ್ತು ಶೂದ್ರ ಕೃಷಿ ಮತ್ತು ಸೇವೆ ಮತ್ತಿತರ ಕಾರ್ಯಗಳ ಪ್ರತೀಕವೆಂದು ತಿಳಿಯಲಾಗಿದೆ.ಇದರ ಹೊಂದಾಣಿಕೆಯಿಂದ ಅತ್ಯಧಿಕ ಒಂದು ಅಂಕ ಪ್ರಾಪ್ತವಾಗುತ್ತದೆ.

ವಷ್ಯ ವಿಚಾರ- ಸಮಸ್ತ ಸಂಸಾರದ ಚರಾಚರ ಜೀವಗಳನ್ನು ಐದು ವಶ್ಯಗಳನ್ನಾಗಿ ವಿಭಜನೆ ಮಾಡಲಾಗಿದೆ-

  1. ಚತುಷ್ಪದ
  2. ನರ
  3. ಜಲಚರ
  4. ವನಚರ
  5. ಕೀಟ
  6.  

ಮೇಷ ರಾಶಿಯ ಪೂರ್ಣ, ಧನು ರಾಶಿಯ ಉತ್ತರಾರ್ಧ, ಮಕರದ ಪೂರ್ವಾರ್ಧ,ವೃಷಭ ರಾಶಿಯ ಪೂರ್ಣ ಇದನ್ನು ಒಂದು ಚತುಷ್ಪದದ ಸಂಜ್ಞೆ ಎಂದು ಹೇಳಲಾಗಿದೆ. ಪೂರ್ಣ ಸಿಂಹರಾಶಿಯನ್ನು ವನಚರ ಸಂಜ್ಞೆ ಹಾಗು ವೃಶ್ಚಿಕ ರಾಶಿ ಕೀಟ ಸಂಜ್ಞೆಯಾಗಿದೆ. ಧನುವಿನ ಪೂರ್ವಾರ್ಧ, ಮಿಥುನ,ಕನ್ಯಾ ಹಾಗು ತುಲಾ ನರ ಸಂಜ್ಞೆಯಾಗಿದೆ. ಕರ್ಕ,ಕುಂಭ,ಮೀನ ಮತ್ತು ಮಕರ ರಾಶಿಯ ಉತ್ತರಾರ್ಧ ಇವೆಲ್ಲಾ ಜಲಜರ ಸಂಜ್ಞೆಯಾಗಿದೆ. ಇವೆಲ್ಲವುಗಳ ಹೊಂದಾಣಿಕೆಯಿಂದ ಅತ್ಯಧಿಕ 2 ಅಂಕ ಪ್ರಾಪ್ತವಾಗುತ್ತದೆ.

ತಾರಾ ವಿಚಾರ- ತಾರಾ ಇದರ ನೇರ ಸಂಬಂಧ ವರ ಕನ್ಯೆಯ ಜನ್ಮಕಾಲೀನ ನಕ್ಷತ್ರದ ಜೊತೆ ಇದೆ. ಕನ್ಯೆಯ ಜನ್ಮ ನಕ್ಷತ್ರದಿಂದ ವರನ ನಕ್ಷತ್ರದವರೆಗೆ ಲೆಕ್ಕಿಸಿ, ಅದೇ ಪ್ರಕಾರ ವರನ ಜನ್ಮ ನಕ್ಷತ್ರದಿಂದ ಕನ್ಯೆಯ ನಕ್ಷತ್ರದವರೆಗೆ ಲೆಕ್ಕಿಸಿ, ಯಾವ ಸಂಖ್ಯೆ ಬಂದಿತೋ ಅದನ್ನು 9 ರಿಂದ ಬೇರೆ ಬೇರೆ ಭಾಗಿಸಿ. ಶೇಷ ಉಳಿದ ಸಂಖ್ಯೆಯನ್ನು ತಾರಾ ಎಂದು ಹೇಳಲಾಗುತ್ತದೆ. ಒಂದು ಪಕ್ಷ 3 ಅಥವಾ 7 ಅಂಕವೇನಾದರೂ ಶೇಷವಾಗಿದ್ದಲ್ಲಿ ತಾರೆಯನ್ನು ಅಶುಭ ಎಂದು ಭಾವಿಸಲಾಗುತ್ತದೆ. ಉಳಿದ ಶೇಷ ಸಂಖ್ಯೆಗಳಿದ್ದರೆ ಶುಭ ಎಂದು ಭಾವಿಸಲಾಗುತ್ತದೆ. ಸ್ತ್ರೀ ಮತ್ತು ಪುರುಷರಿಬ್ಬರ ತಾರೆ ಶುಭ ಮತ್ತು ಅಶುಭವಿದ್ದರೆ ಅವರ ಗುಣ 1, ಇಬ್ಬರ ತಾರೆ ಶುಭವಿದ್ದರೆ ಅವರ ಗುಣ 3, ಒರ್ವರ ಒಳ್ಳೆಯ ಹಾಗು ಒಬ್ಬರ ನಷ್ಟವಾಗಿದ್ದರೆ 2 ಗುಣ ಸಿಗುತ್ತದೆ. ಇಬ್ಬರ ತಾರೆಯೂ ಅಶುಭವಿದ್ದರೆ ಸೊನ್ನೆ ಗುಣವೆಂದು ಭಾವಿಸಬೇಕು. ಇದರ ಹೊಂದಾಣಿಕೆಯಿಂದ ಅತ್ಯಧಿಕ 3 ಅಂಕ ಪ್ರಾಪ್ತವಾಗುತ್ತದೆ.

ಯೋನಿ ವಿಚಾರ- ಮನುಷ್ಯ ಜಾತಿಯಲ್ಲಿ ಪುರುಷ,ಸ್ತ್ರೀ ಮತ್ತು ನಪುಂಸಕವೆಂಬ ಮೂರು ಯೋನಿಗಳನ್ನು ಭಾವಿಸಲಾಗಿದ್ದರೂ ಸಹ, ಭಾರತೀಯ ಪುರಾತಕರು ಸಮಗ್ರ ಮಾನವ ಜಾತಿಯನ್ನು 14 ಯೋನಿಗಳಾಗಿ ವಿಭಾಜಿಸಿದ್ದಾರೆ. ಈ ಯೋನಿಗಳು ಪ್ರಚ್ಚನ್ನವಾಗಿದೆ. ಈ ಯೋನಿಗಳು 27 ನಕ್ಷತ್ರದ ಆಧಾರದಲ್ಲಿ ಸ್ಥಾಪಿತವಾಗಿವೆ.ಇದರಲ್ಲಿ ಅಭಿಜಿತ್ ನಕ್ಷತ್ರವನ್ನೂ ಸಹ ಸೇರ್ಪಡೆಗೊಳಿಸಲಾಗಿದೆ. ಇವೆಲ್ಲರ ಹೊಂದಾಣಿಕೆಯಿಂದ ಅತ್ಯಧಿಕ 4 ಅಂಕಗಳು ಪ್ರಾಪ್ತವಾಗುತ್ತವೆ.

 

ಕನ್ಯಾವರರ ವಿವಾಹವನ್ನು ನಿಶ್ಚಯಮಾಡುವ ಮೊದಲು ಅವರ ಜಾತಕಗಳು ಹೊಂದಾಣಿಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಎಲ್ಲಾ ವರ್ಣದವರಲ್ಲಿಯೂ ಸರ್ವೇಸಾಮಾನ್ಯವಾಗಿದೆ.ಕನ್ಯಾವರರ ಜಾತಕಾನುಕೂಲವನ್ನು ದಶಕೂಟ[೧೦ ಕೂಟ]ಗಳನ್ನು ಪರಿಶೀಲಿಸಿ ನಿರ್ಧರಿಸುವುದು ಹೆಚ್ಚಿನ ಪ್ರದೇಶಗಳಲ್ಲಿ ರೂಡಿಯಲ್ಲಿದೆ.ಕೆಲವು ಪ್ರದೇಶಗಳಲ್ಲಿ ಅಷ್ಟ[೮] ಅಥವಾ ದ್ವಾದಶ[೧೨]ಕೂಟಗಳನ್ನು ಪರಿಶೀಲಿಸುವ ಕ್ರಮವಿದೆ.ಮತ್ತೆ ಕೆಲವು ಪ್ರದೇಶಗಳಲ್ಲಿ ೧೫ ಕೂಟಗಳನ್ನು ಪರಿಶೀಲಿಸುವುದೂ ಇದೆ.ಬಹುತೇಕ ದಶ ಕೂಟಗಳನ್ನು ಪರಿಶೀಲಿಸುವುದು ರೂಢಿಯಲ್ಲಿರುವ ಕಾರಣ ಇಲ್ಲಿ ಆ ದಶ ಕೂಟಗಳ ಪರಿಶೀಲನೆಯಲ್ಲಿ ಕಂಡು ಬರಬಹುದಾದ ದೋಷಗಳಿಗೆ ಶಾಸ್ತ್ರಕಾರರು ತಿಳಿಸಿದ ಅಪವಾದಗಳನ್ನು ದಾಖಲಿಸುವ ಬಯಕೆ ನನ್ನದು. ಇವುಗಳ ಆಧಾರದಿಂದ ಜಾತಕಗಳ ಹೊಂದಾಣಿಕೆ ಮಾಡುವುದು ಸತ್ಸಂಪ್ರದಾಯವಾಗಬಹುದು.

೧ ದಿನಕೂಟ:-
           ಸ್ತ್ರೀ ದೀರ್ಘಕೂಟ, ಗಣಕೂಟಗಳು ಶುಭವಾಗಿ ಹೊಂದಾಣಿಕೆಯಾಗುತ್ತಿದ್ದಲ್ಲಿ ದಿನಕೂಟ ಹೊಂದಾಣಿಕೆ ಅಶುಭವಾದರೂ ಭಾದಕವಲ್ಲ.

೨ ಗಣಕೂಟ:-
         [ಅ] ಗ್ರಹ ಮೈತ್ರಿ,ರಾಶಿಕೂಟಗಳು ಹೊಂದಾಣಿಕೆಯಾಗುವುದಾದಲ್ಲಿ ಗಣಕೂಟ ಅಶುಭವಾದರೂ ಭಾದಕವಲ್ಲ.

 ಜನ್ಮ ರಾಶಿಗಳ ಅಧಿಪತಿಗಳಾಗಲೀ,ಜನ್ಮ ರಾಶಿಗಳ ನವಾಂಶಾಧಿಪತಿಗಳಾಗಲೀ ಪರಸ್ಪರ ಮಿತ್ರರಾಗಿದ್ದಲ್ಲಿ ಗಣಕೂಟ ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

 [ಆ] ಗ್ರಹ ಮೈತ್ರಿ, ರಜ್ಜು, ನಾಡಿ ಕೂಟಗಳು ಶುಭವಾಗಿದ್ದಲ್ಲಿ ಕನ್ಯೆಯದು ರಾಕ್ಷಸ ಗಣವಾಗಿ ವರನದು ಮನುಷ್ಯಗಣವಾದರೂ ದೋಷವಲ್ಲ.

[ಇ] ಸ್ತ್ರೀ ದೀರ್ಘ ಕೂಟವಿದ್ದರೂ, ರಾಶ್ಯಧಿಪತಿ ಕೂಟವಿದ್ದರೂ ಗಣಕೂಟ  ಅಶುಭವಾದರೂ ದೋಷವಲ್ಲ.

[ಈ] ಕನ್ಯಾ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೪ ನಕ್ಷತ್ರಗಳ ನಂತರವಿದ್ದಲ್ಲಿ ಗಣಕೂಟವು ಅಶುಭವಾದರೂ ಭಾದಕವಿಲ್ಲ.

೩ ಮಾಹೇಂದ್ರ ಕೂಟ:-
                ಗ್ರಹ ಮೈತ್ರಿ. ರಜ್ಜು ಕೂಟಗಳಿದ್ದಲ್ಲಿ ಮಾಹೇಂದ್ರಕೂಟವು ಅಶುಭವಾಗಿದ್ದರೂ ದೋಷವಿಲ್ಲ.

೪ ಸ್ತ್ರೀದೀರ್ಘ ಕೂಟ:-
               ರಾಶಿ ಮತ್ತು ಗ್ರಹಮೈತ್ರಿ ಕೂಟಗಳು ಹೊಂದಾಣಿಕೆಯಾಗುತ್ತಿದ್ದರೆ ಅಥವಾ ರಾಶ್ಯಧಿಪತಿಗಳಿಗೆ ಮೈತ್ರಿಯಿದ್ದಲ್ಲಿ ಯಾ ಕನ್ಯೆಯ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೩ನೇ ನಕ್ಷತ್ರದ ನಂತರದ ನಕ್ಷತ್ರವಾಗಿದ್ದಲ್ಲಿ ಸ್ತ್ರೀದೀರ್ಘಕೂಟವು ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

೫ ಯೋನಿ ಕೂಟ:- ರಾಶಿ ಮತ್ತು ವಶ್ಯ ಕೂಟಗಳು ಶುಭವಾಗಿದ್ದಲ್ಲಿ ಯೋನಿಕೂಟವು ಹೊಂದಾಣಿಕೆಯಾಗದಿದ್ದರೂ ಬಾಧಕವಲ್ಲ.

೬ ರಾಶಿಕೂಟ:-
        [ಅ] ಕನ್ಯಾ ವರರ ಜನ್ಮ ನಕ್ಷತ್ರಗಳಿಗೆ ವೇಧೆಯಿಲ್ಲದೆ ಇದ್ದು ರಾಶ್ಯಧಿಪತಿಗಳಿಗೆ ಮೈತ್ರಿ ಯೋಗವಾಗಲೀ, ಏಕರಾಶ್ಯಧಿಪತಿತ್ವವಾಗಲೀ ಇದ್ದು ಆ ರಾಶಿಗಳು ವಶ್ಯವಾಗಿದ್ದಲ್ಲಿ ಷಷ್ಠಾಷ್ಟಕ ದೋಷದ ಭಾದಕವಿಲ್ಲ.

  [ಆ] ರಾಶಿಕೂಟವು ೨-೧೨; ೯-೫; ೬-೮ ಆದರೂ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾದರೂ,ಏಕ ರಾಶ್ಯಧಿಪತಿತ್ವವಿದ್ದಲ್ಲಿ ಅಥವಾ ಮೈತ್ರ್ಯಾಧಿಪತಿತ್ವವಿದ್ದಲ್ಲಿ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾಗಿದ್ದರೂ ಅಶುಭ ರಾಶಿ ಕೂಟದ ಭಾದಕವಿಲ್ಲ.

  [ಇ] ಮೇಷ-ಕನ್ಯಾ; ತುಲಾ-ಮೀನ;ಧನು-ವೃಷಭ; ಮಿಥುನ-ವೃಶ್ಚಿಕ;ಕುಂಭ-ಕರ್ಕಟಕ;ಸಿಂಹ-ಮಕರ ಇವುಗಳಲ್ಲಿ ವಿಷಮರಾಶಿಯು ಕನ್ಯೆಯದಾಗಿದ್ದರೆ ಷಷ್ಠಾಷ್ಟಕ ದೋಷದ ಭಾದಕವಿಲ್ಲ.ವಿಷಮ ರಾಶಿಯಲ್ಲವಾದರೆ ದೋಷವೆಂದು ಪರಿಗಣಿಸಬಹುದಾಗಿದೆ.

  [ಈ] ಮೀನ-ಮೇಷ;ಕರ್ಕಟಕ-ಸಿಂಹ;ಸಿಂಹ-ಕನ್ಯಾ;ಮಕರ-ಕುಂಭ;ತುಲಾ-ಕನ್ಯಾ;ಧನು-  ವೃಶ್ಚಿಕ;ವೃಷಭ-ಮಿಥುನ ಇವುಗಳು ದ್ವಿದ್ವಾದಶರಾಶಿಗಳಾದಲ್ಲಿ ಶುಭಕೂಟವೆಂದು ಪರಿಗಣಿಸಬೇಕು.

[ಉ]ಕುಂಭ-ಮೀನ;ಮೇಷ-ವೃಷಭ;ಮಿಥುನ-ಕರ್ಕಟಕ;ತುಲಾ-ವೃಶ್ಚಿಕ;ಧನು-ಮಕರ;ಇವುಗಳು ಅಶುಭ ದ್ವಿದ್ವಾದಷ ಕೂಟಗಳಾಗಿವೆ.

 [ಊ]ಮೇಷ-ಸಿಂಹ;ವೃಷಭ-ಕನ್ಯಾ;ಸಿಂಹ-ಧನು;ತುಲಾ-ಕುಂಭ;ವೃಶ್ಚಿಕ-ಮೀನ;ಧನು-ಮೇಷ;  ಮಕರ-ವೃಷಭ;ಇವುಗಳು ೯-೫ನೇ ರಾಶಿಗಳಾಗಿದ್ದರೆ ನವ ಪಂಚಮ ದೋಷವಿಲ್ಲ.

  [ಋ]ಸಿಂಹ-ಮೀನ;ತುಲಾ- ವೃಷಭ;ಕುಂಭ-ಕನ್ಯಾ;ಮೇಷ- ವೃಶ್ಚಿಕ;ಧನು-ಕರ್ಕಾಟಕ;ಇವುಗಳು ೬-೮ನೇ ರಾಶಿಗಳಾಗಿದ್ದಲ್ಲಿ ಶುಭ ಷಷ್ಠಾಷ್ಟ ಕೂಟವೆಂದು ಪರಿಗಣಿಸಬೇಕು.

  [ೠ]ರಾಶಿ,ಗಣ,ರಜ್ಜುಕೂಟಗಳು ಅಶುಭವಾದರೂ,ರಾಶಿಕೂಟವು ಷಷ್ಠಾಷ್ಟಕವಾದರೂ,ಕನ್ಯೆಯ ನಕ್ಷತ್ರಗಣವು ರಾಕ್ಷಸಗಣವಾದರೂ, ಕನ್ಯಾವರರ ರಾಶ್ಯಧಿಪತಿ ಒಬ್ಬನೇ ಆಗಿದ್ದರೆ ಅಥವಾ ರಾಶ್ಯಧಿಪತಿಗಳು ಪರಸ್ಪರ ಮಿತ್ರರಾಗಿದ್ದರೆ ರಾಶಿ ಕೂಟವನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಎ] ರಜ್ಜು; ಸ್ತ್ರೀ ದೀರ್ಘ ಕೂಟಗಳು ಶುಭವಾಗಿದ್ದರೂ ರಾಶಿಕೂಟವು ೨-೧೨[ದ್ವಿದ್ವಾದಶ] ;೯-೫[ನವ ಪಂಚಮ];೬-೮[ಷಷ್ಠ ಅಷ್ಟ] ಆಗಿದ್ದರೂ ಏಕರಾಶ್ಯಧಿಪತಿತ್ವ;ಅಥವಾ ಪರಸ್ಪರ ಮಿತ್ರತ್ವವಿದ್ದಲ್ಲಿ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಏ]ರಾಶಿ ಕೂಟವು ೨-೧೨[ದ್ವಿ ದ್ವಾದಶ] ಆಗಿದ್ದರೂ ಕನ್ಯೆಯ ರಾಶಿ ಮೀನಾದಿಯಾಗಿ {ಮೀನ ರಾಶಿಯಿಂದ ಎಣಿಸಲಾಗಿ}ಯುಗ್ಮ{ಸಮ} ರಾಶಿಯಾಗಿದ್ದರೆ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಐ] ವಶ್ಯ ಕೂಟ;ದಿನಕೂಟ; ಪರಸ್ಪರ ಮೈತ್ರಿ ಯಾ ಏಕಾಧಿಪತಿತ್ವವಿದ್ದಲ್ಲಿ ೨-೧೨[ದ್ವಿದ್ವಾದಶ];೬-೮[ಷಷ್ಠಾಷ್ಟಕ]೫-೯[ಪಂಚಮ ನವಮ] ರಾಶಿಕೂಟಗಳನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಒ] ವರನ ಜನ್ಮ ರಾಶಿಯು ಸಮರಾಶಿಯಾಗಿದ್ದಲ್ಲಿ ೬-೮[ಷಷ್ಠಾಷ್ಟಕ]ದೋಷವಿಲ್ಲವೆಂದು ಪರಿಗಣಿಸಬೇಕು.

 [ಓ] ಮೇಷ-ಸಿಂಹ;ಕರ್ಕಟಕ-ವೃಶ್ಚಿಕಗಳು ೫-೯[ಪಂಚಮ ನವಮ] ಆದರೂ ಶುಭವೆಂದು ಪರಿಗಣಿಸಬೇಕು.

 [ಔ] ಕನ್ಯಾವರರ ರಾಶಿಗಳು ಪರಸ್ಪರ ಚತುರ್ಥ ದಶಮ[೪-೧೦] ಅಥವಾ ತೃತೀಯ ಏಕಾದಶ[೩-೧೧]ಆದರೂ ಶುಭವೆಂದು ಕೆಲವು ಶಾಸ್ತ್ರಕಾರರ ಅಭಿಮತವಿದೆ.

 ೭ ಗ್ರಹ ಮೈತ್ರಿ ಕೂಟ:-
                 [ಅ] ಸ್ತ್ರೀ ದೀರ್ಘ; ನಾಡಿ; ರಜ್ಜು;ರಾಶಿ ಕೂಟಗಳು ಶುಭವಾಗಿದ್ದಲ್ಲಿ ಗ್ರಹ ಮೈತ್ರಿ ಇಲ್ಲದಿದ್ದರೂ ಭಾಧಕವಲ್ಲ.
 [ಆ]ಸ್ತ್ರೀ ದೀರ್ಘ ಕೂಟವಿದ್ದು, ಕನ್ಯಾವರರ ರಾಶಿಗಳು ಸಮ ಸಪ್ತಕ[೭-೭];ಮತ್ತು ೩-೧೧ ನೇ ರಾಶಿಗಳ ಅಧಿಪತಿಗಳ ಪೈಕಿ ಯಾರಾದರೂ ಒಬ್ಬರು ಮಿತ್ರರಾಗಿದ್ದಲ್ಲಿ, ಮಿತ್ರ-ಶತ್ರು ಸಮವಾಗಿಯೂ, ಸಮ-ಮಿತ್ರವು ಮಿತ್ರವಾಗಿಯೂ ಆಗುವುದರಿಂದ ಗ್ರಹಮೈತ್ರಿ ಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಇ]ಕನ್ಯಾವರರ ಜನ್ಮ ರಾಶ್ಯಧಿಪತಿಗಳು ಶತ್ರುಗಳಾಗಿದ್ದರೂ ಕನ್ಯಾವರರ ಚಂದ್ರ ನವಾಂಶಾಧಿಪತಿಗಳು ಬಲಯುಕ್ತರಾಗಿದ್ದು ಅವರಿಗೆ ಮಿತ್ರತ್ವವಿದ್ದಲ್ಲಿ ಗ್ರಹಮೈತ್ರಿಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಈ]ಕನ್ಯಾವರರ ಜನ್ಮ ರಾಶ್ಯಧಿಪತಿಗಳಿಗೆ ಮಿತ್ರತ್ವ,ಅಥವಾ ಕನ್ಯಾವರರ ಜನ್ಮ ನಕ್ಷತ್ರ ನವಾಂಶ ರಾಶ್ಯಧಿಪತಿಗಳು ಮಿತ್ರರಾಗಿದ್ದರೂ ಗ್ರಹಮೈತ್ರಿ ಕೂಟ ಶುಭವೆಂದು ಪರಿಗಣಿಸಬೇಕು.

 ೮ ರಜ್ಜು ಕೂಟ:-
               ದಿನಕೂಟ;ಮಾಹೇಂದ್ರಕೂಟ;ರಾಶಿಕೂಟ; ಗ್ರಹಮೈತ್ರಿಕೂಟಗಳು ಶುಭವಾಗಿದ್ದಲ್ಲಿ ಅಶುಭ ರಜ್ಜು ಕೂಟವನ್ನು ದೋಷವೆಂದು ಪರಿಗಣಿಸದೆ ಶುಭವೆಂದು ಪರಿಗಣಿಸಬೇಕು.

 ೯  ನಾಡಿ ಕೂಟ:-

     [ಅ]ಮಾಹೇಂದ್ರ ಕೂಟ, ದಿನ ಕೂಟ, ಯೋನಿಕೂಟ,ಗ್ರಹ ಮೈತ್ರಿ ಕೂಟಗಳು ಶುಭವಾಗಿದ್ದಲ್ಲಿ ಅಶುಭ ನಾಡಿ ಕೂಟವಾಗಿದ್ದರೂ ಶುಭವೆಂದು ಪರಿಗಣಿಸಬೇಕು.

   [ಆ]ಕನ್ಯಾವರರ ಜನ್ಮ ನಕ್ಷತ್ರವು ಏಕರಾಶಿಯಾಗಿ ಭಿನ್ನ ನಕ್ಷತ್ರವಾಗಿದ್ದರೂ,ಅಥವಾ ಒಂದೇ ನಕ್ಷತ್ರವಾವಾಗಿ ಭಿನ್ನರಾಶಿಯಾಗಿದ್ದರೂ ನಾಡಿ ಕೂಟ ದೋಷವಿಲ್ಲ.

 [ಇ] ಕನ್ಯಾವರರ ಜನ್ಮ ನಕ್ಷತ್ರವು ಆದಿ ನಾಡಿಯಾಗಿ ಅಶ್ವಿನಿ,ಆರ್ದ್ರೆ,ಪುನರ್ವಸು,ಉತ್ತರೆ,ಹಸ್ತ,ಜ್ಯೇಷ್ಠ,ಮೂಲ,ಶತಭಿಷೆ,ಪೂರ್ವಾಭದ್ರೆಯಾಗಿದ್ದರೆ;ಹಾಗೆಯೇ ಮಧ್ಯ ನಾಡಿಯ ಭರಣಿ,ಮೃಗಶಿರಾ,ಪುಷ್ಯಾ,ಹುಬ್ಬೆ[ಪೂರ್ವಾ ಪಲ್ಗುಣ],ಚಿತ್ರ, ಅನುರಾಧ,ಪೂರ್ವಾಷಾಢ,ಉತ್ತರಾಭದ್ರೆಯಾಗಿದ್ದರೆ;ಅದರಂತೆಯೇ ಅಂತ್ಯ ನಾಡಿಯ ಕೃತ್ತಿಕಾ,ಆಶ್ಲೇಷಾ,ಮಖಾ[ಮಘಾ],ಸ್ವಾತಿ,ವಿಶಾಖಾ,ಉತ್ತರಾಷಾಢ,ಶ್ರವಣ,ರೇವತಿಯಾಗಿದ್ದರೆ ಏಕನಾಡಿ ದೋಷವಿಲ್ಲ.

 [ಈ] ವಿಶಾಖಾ, ಅನುರಾಧಾ, ಧನಿಷ್ಟ, ರೇವತಿ,ಹಸ್ತ,ಸ್ವಾತಿ,ಆರ್ದ್ರಾ,ಪೂರ್ವಾಭದ್ರಾ -ಈ ಎಂಟು ನಕ್ಷತ್ರಗಳಲ್ಲಿ ಕನ್ಯೆಅಥವಾ ವರ ಈ ಇಬ್ಬರ ಪೈಕಿ ಒಬ್ಬರು ಜನಿಸಿದ್ದರೆ ನಾಡಿ ದೋಷವಿಲ್ಲ. ಇದು ಶುಭ ಫಲದಾಯಕವಾಗುವುದು.

[ಉ] ಉತ್ತರಾಭದ್ರಾ,ರೇವತಿ,ರೋಹಿಣಿ,ವಿಶಾಖಾ,ಶ್ರವಣ,ಆರ್ದ್ರಾ,ಪುಷ್ಯ,ಮಘಾ-ಈ ಎಂಟು ನಕ್ಷತ್ರಗಳಲ್ಲಿ ವರ ಅಥವಾ ಕನ್ಯೆಯ ಜನ್ಮ ನಕ್ಷತ್ರವಿದ್ದರೆ ನಾಡಿ ದೋಷ ಶಾಂತವಾಗುತ್ತದೆ ಎಂಬುದು ಕೆಲವು ಶಾಸ್ತ್ರಕಾರರ ಮತ.

[ಊ] ಭರಣಿ,ಮೃಗಶಿರಾ,ಶತಭಿಷ, ಹಸ್ತಾ ,ಪೂರ್ವಾಷಾಢ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿ ಜನಿಸಿದರೂ ನಾಡಿ ದೋಷವಿರುವುದಿಲ್ಲವೆಂಬುದು ಕಾಲಾಮೃತಕಾರರ ಮತ.

  ಟಿಪ್ಪಣಿ:-ಈ ರೀತಿಯಾಗಿ ನಕ್ಷ್ತ್ರಗಳ ಆಧಾರದಿಂದ ಏಕನಾಡಿ ದೋಷವಿಲ್ಲವೆಂದು ಪರಿಗಣಿಸಲಾಗಿರುವ ಅಪವಾದಗಳ ಆಧಾರದಲ್ಲಿ ನಾಡಿ ಕೂಟವನ್ನು ಶುಭವೆಂದು ನಿರ್ಧರಿಸುವುದು ರೂಢಿಯಲ್ಲಿರುವ ನಿಯಮಗಳಿಗೆ ವಿರುಧ್ಧವಾಗಿರುವುದರಿಂದ ರೂಢಿಯಲ್ಲಿರುವ ನಿಯಮಗಳನ್ನು ಅನುಸರಿಸುವುದು ಉತ್ತಮವೆಂದು ಕೆಅವು ಶಾಸ್ತ್ರಕಾರರ ಅಭಿಮತವಾಗಿದೆ.

                ಸ್ತ್ರೀಪೂರ್ವ ನಕ್ಷತ್ರ ದೋಷಗಳಿಗೆ ಅಪವಾದಗಳು

 ೧ ಅಶ್ವಿನಿ,ಕೃತ್ತಿಕಾ,ರೋಹಿಣಿ,ಮೃಗಶಿರಾ, ಆರ್ದ್ರಾ,
ಮಘಾ, ಹಸ್ತ,ಸ್ವಾತಿ,ವಿಶಾಖಾ,ಮೂಲಾ, ಪೂರ್ವಾಷಾಢ,ಉತ್ತರಾಷಾಢ, ಶತಭಿಷಾ ಈನಕ್ಷತ್ರಗಳಲ್ಲಿ ಕನ್ಯೆಯದು ಪೂರ್ವ ಪಾದವಾಗಿ ವರನದು ಮುಂದಿನ ಪಾದವಾಗಿ ಇದ್ದರೂ ,ಕನ್ಯಾವರರ ರಾಶಿಗಳು ಒಂದೇ ಆಗಿದ್ದಲ್ಲಿ ಸ್ತ್ರೀಪೂರ್ವ ನಕ್ಷತ್ರ ದೋಷವಿಲ್ಲ.

 ೨ ಅಶ್ವಿನಿ,ಕೃತ್ತಿಕಾ, ರೋಹಿಣಿ,ಮೃಗಶಿರಾ,ಪುನರ್ವಸು, ಹಸ್ತಾ,ವಿಶಾಖಾ, ಅನುರಾಧ,ಮೂಲಾ,ಪೂರ್ವಾಷಾಢ, ಶತಭಿಷಾ ಇವುಗಳು ವರನ ಜನ್ಮ ನಕ್ಷತ್ರವಾಗಿದ್ದು, ಇವುಗಳ ಹಿಂದಿನ ನಕ್ಷತ್ರವು ಕನ್ಯೆಯ ಜನ್ಮ ನಕ್ಷತ್ರವಾಗಿದ್ದಲ್ಲಿ ಸ್ತ್ರೀ ಪೂರ್ವ ನಕ್ಷತ್ರ ದೋಷವಿರುವುದಿಲ್ಲ.

 ವರ್ಜ್ಯ ನಕ್ಷತ್ರಗಳು:-ಸ್ತ್ರೀ ಪೂರ್ವ ನಕ್ಷತ್ರಗಳಲ್ಲಿ ಕನ್ಯಾವರರ ನಕ್ಷತ್ರಗಳು ಬೇರೆ ಬೇರೆ ರಾಶಿಯಲ್ಲಿದ್ದರೂ ಸಹಾ ಭರಣಿ,ಆಶ್ಲೇಷಾ,ಹುಬ್ಬಾ[ಪೂರ್ವಾ ಫಲ್ಗುಣ],ಜ್ಯೇಷ್ಠಾ,ಧನಿಷ್ಠಾ,ಪೂರ್ವಾಭದ್ರ,ಉತ್ತರಾಭದ್ರ,ರೇವತಿ ಈ ನಕ್ಷತ್ರಗಳು ಕನ್ಯೆಯ ಜನ್ಮ ನಕ್ಷತ್ರಗಳಾಗಿದ್ದಲ್ಲಿ ಸರ್ವಥಾ ನಿಷಿಧ್ಧ ಎಂಬುದು ಅನೇಕ ಋಷಿಗಳ ಅಭಿಮತವಿದೆ.

  ಟಿಪ್ಪಣಿ:-ಸ್ತ್ರೀ ಪೂರ್ವ ನಕ್ಷತ್ರ ವಿಚಾರವು ಕನ್ಯಾವರರ ಜನ್ಮ ನಕ್ಷತ್ರಕ್ಕೆ ಮಾತ್ರಾ ಅನ್ವಯಿಸುತ್ತದೆಯೇ ಹೊರತು ನಾಮ ನಕ್ಷತ್ರಗಳಿಗಲ್ಲ. 

ಮದುವೆ ಪ್ರಶ್ನೋತ್ತರಗಳು - ೧೬ ದಿನ ಮದುವೆ, ಸಗೋತ್ರ, ಬ್ಲಡ್‍ಗ್ರೂಪ್, ಜಾತಕ, ಋಣಾನುಬಂಧ, ಗಾಂಧರ್ವ ವಿವಾಹ 

ಮದುವೆಯನ್ನು ೧೬ ದಿನಗಳು ಮಾಡಲೇಬೇಕು ಎಂದಿರಿ. ಈಗ ಅದರಲ್ಲಿ ಎಷ್ಟು ಮುಖ್ಯವಾದ ಕಾರ್ಯಕ್ರಮಗಳನ್ನು ಮಾಡಿದರೆ ಸಾಕಾಗುತ್ತದೆ?
        ಈಗ ೧೬ ನಿಮಿಷ ಮದುವೆ ಮಾಡಿದರೂ ಭಟ್ಟರು ಇನ್ನೂ ನಿಧಾನ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತೀರಿ. ಹಾಗೆ ಇದರಲ್ಲಿ ಅತೀ ಕನಿಷ್ಠ ಅಥವಾ ಅತೀ ಮುಖ್ಯವಾದ ಕಾರ್ಯಕ್ರಮಗಳು ಎಂಬುದು ಇರುವುದಿಲ್ಲ. ಎಲ್ಲಾ ಕಾರ್ಯಕ್ರಮಗಳು ಒಂದಕ್ಕೊಂದು ಪೂರಕವೇ, ಪ್ರಧಾನವೇ, ಮಹತ್ವವೇ ಆಗಿದ್ದು ಬಿಡುವಂತಹಾ ಕಾರ್ಯಕ್ರಮಗಳಲ್ಲ. ಹಾಗಾಗಿ ಮಾಡುವುದನ್ನು ಸರಿಯಾಗಿ ಮಾಡಿದರೆ ಮಾತ್ರ ಪೂರ್ಣಫಲಪ್ರದ. ಇಲ್ಲದಿದ್ದರೆ ಇಲ್ಲ. ಆದರೆ ಸಾಧ್ಯತೆ ಇದೆ. ಏಕೆಂದರೆ ಮುಂದಿನ ತಲೆಮಾರಿಗಾದರೂ ತಿಳಿದಿರಲಿ ಎಂದು ಅಷ್ಟೂ ಆಚಾರಗಳನ್ನು ಆಚರಿಸಿಕೊಂಡು ಬರುವುದು ಮುಖ್ಯವಾಗಿರುತ್ತದೆ. ಅದರಿಂದ ಪೂರ್ಣಫಲ ಸಿಗುತ್ತದೆ ಎಂದು ಹೇಳುವುದಿಲ್ಲ. ಇಷ್ಟು ಆಚಾರಗಳು ಮದುವೆಯಲ್ಲಿ ಇದೆ ಎಂದು ತಿಳಿದರೆ ಮುಂದೊಂದು ದಿನ ಅಷ್ಟೂ ಆಚಾರಗಳನ್ನು ಕ್ರಮಬದ್ಧರೀತಿಯಲ್ಲಿ ಆಚರಿಸಿಕೊಂಡು ಬರೋಣ ಎಂದು ಯಾರಿಗಾದರೂ ಅನ್ನಿಸಿ ಮಾಡುವ ಕಾಲ ಬರಬಹುದು. ಅದಕ್ಕಾದರೂ ಇದನ್ನು ಉಳಿಸಿಕೊಂಡು ಬರಬೇಕು. ಪ್ರಸಕ್ತಕಾಲದಲ್ಲಿ ಅರಬ್ ರಾಷ್ಟ್ರದಿಂದ ತೈಲ ಬರುತ್ತಿದೆ, ಅದರಿಂದ ನಮಗೆ ತಿರುಗಾಡಲು ವೇಗ ಸಿಕ್ಕಿದೆ. ಒಂದು ವೇಳೆ ಅದು ನಿಂತುಹೋದರೆ ಆಗ ನಮಗೆ ಪುರುಸೊತ್ತು ಸಿಗಬಹುದೇನೋ, ಆಗ ೧೬ ದಿನ ಮದುವೆ ಮಾಡಬಹುದು! ಅದು ಕಷ್ಟವಾಗಲಿಕ್ಕಿಲ್ಲ. ಕಾರ್ಯಕ್ರಮಗಳನ್ನು ಅರ್ಧಂಬರ್ಧ ಮಾಡಿದರೆ ಏನೂ ಪ್ರಯೋಜನ ಸಿಗುವುದಿಲ್ಲ. ಪೂರ್ಣ ಮಾಡಿದರೆ ಮಾತ್ರ ಸಿಗುವಂತಹದ್ದು.
 
ದೊಡ್ಡವರು ಮದುವೆಗೆ ವಧೂವರರ ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಿ ಎಂದು ಹೇಳುತ್ತಾರಲ್ಲ ಏಕೆ? ಹಾಗೆ ದೊಡ್ಡವರು ಒಪ್ಪಿಗೆ ಕೊಟ್ಟರೆ ಮದುವೆ ಮಾಡಬಹುದೇ?
ಇದು ಮದುವೆಯ ಹಿಂದಿನ ದಿನ ಮಾಡುವ ಪ್ರಕ್ರಿಯೆಗಳಲ್ಲಿ ಬರುತ್ತದೆ. ವರನಿಗೆ ವಿವಾಹ ಆಗುವ ಅರ್ಹತೆಗಳು ಇವೆಯೇ? ಎಂದು ಚಿಂತನೆ ಮಾಡುವಂತಹ ಪ್ರವೃತ್ತಿಯದು. ಹಿಂದೆ ಸಮಾಜದಲ್ಲಿ ಎಲ್ಲರಿಗೂ ಮದುವೆಯ ಅರ್ಹತೆಯನ್ನು ಕೊಡುತ್ತಿರಲಿಲ್ಲ. ಸಮಾಜವು ವರನಿಗೆ ಒಂದಿಷ್ಟು ಪರೀಕ್ಷೆಗಳನ್ನು ಇಡುತ್ತಿತ್ತು. ಇದರಲ್ಲಿ ಅವನು ಉತ್ತೀರ್ಣನಾದರೆ ಅರ್ಹ. ಇಲ್ಲದಿದ್ದರೆ ಸ್ನಾತಕನಾಗಿ ದೇಶವನ್ನು ಸುತ್ತಬೇಕು, ದೇಶಸೇವೆಯನ್ನು ಮಾಡುತ್ತಾ ಬೋಧನೆಯನ್ನು ಮಾಡಬೇಕು. ಮದುವೆಗೆ ಅವನಿಗೆ ಅಧಿಕಾರವಿಲ್ಲ. ಮದುವೆಗೆ ಅರ್ಹತೆಯಿದೆಯೆ ಎಂದು ಪರೀಕ್ಷಿಸಲು ಸುಮಾರು ೨೪ ರೀತಿಯ ಬೇರೆ ಬೇರೆ ಪರೀಕ್ಷಾ ವಿಧಾನಗಳಿವೆ. ಕಾಲಾಂತರದಲ್ಲಿ ಮನೆಯಲ್ಲಿ ಒಬ್ಬನೇ ಮಗ, ಅವನಿಗೆ ಮದುವೆ ಅರ್ಹತೆ ಇಲ್ಲವೆಂದಾದಾಗ ಸಂತಾನ ಪಡೆಯುವುದು ಹೇಗೆ? ಆಗ ಆರಿಸಿದ ವಧುವಿನಲ್ಲಿ ವಿಶೇಷಾರ್ಹತೆಯು ಇದೆಯೇ? ಅವಳಿಗೆ ಅರ್ಹತೆಯಿದ್ದರೆ ಇವನು ಒಳ್ಳೆಯ ಸಂಸಾರಿಯಾಗಿರಬಹುದಲ್ಲ? ಎಂಬ ಚಿಂತನೆಯೊಂದಿಗೆ ವಧುವಿನ ಜಾತಕದಲ್ಲಿ ಏನಿದೆ ಎಂದು ಆಗ ವರ ವಧೂವಿನ ಜಾತಕ ನೋಡುವ ಮೇಳಾಮೇಳಿ ಬಂದಿತು. ಈ ರೀತಿಯಲ್ಲಿ ಜಾತಕ ನೋಡುವ ಪದ್ಧತಿ ಆಚರಣೆಗೆ ಬಂದಿತು. ಇದಕ್ಕೂ ಹಿಂದೆ ಈ ಪದ್ಧತಿ ಇರಲಿಲ್ಲ. ವರನಿಗೆ ಮಾತ್ರ ಅರ್ಹತೆಯ ಪರೀಕ್ಷೆ ಇರುತ್ತಿತ್ತು. ವರ ಅನರ್ಹನೆಂದು ಸಮಾಜದಿಂದ ಹೊರ ಹಾಕಿದರೆ ವಂಶ ಬೆಳೆಯುವುದಿಲ್ಲ ಎಂದು ಸಮಸ್ಯೆಯಾದಾಗ ಕೆಲವೇ ಗೃಹಸ್ಥರು ತಮ್ಮ ಹೆಚ್ಚಿನ ಆರ್ಥಿಕ ಬಲವೂ ಇನ್ಯಾವುದೋ ಅಧಿಕಾರ ಬಲವನ್ನು ಬಳಸಿ ಈ ರೀತಿಯ ಪದ್ಧತಿಯ ಬಳಕೆಯನ್ನು ತರಲು ಪ್ರಯತ್ನಿಸಿದರು. ಹಾಗಾಗಿ ಅದು ಬಂದಾಗ ಮೇಳಾಮೇಳಿ ಇವೆಲ್ಲಾ ಬಂದಿರುತ್ತದೆ. ಮೊದಲು ಇದ್ದದ್ದು ವರನಿಗೆ ಗೃಹಸ್ಥನಾಗಲಿಕ್ಕೆ ಸಂಪೂರ್ಣ ಅರ್ಹತೆ ಇರಬೇಕು ಎಂಬ ಸಿದ್ಧಾಂತ. ಗೃಹಸ್ಥನಾಗುವ ಪರೀಕ್ಷೆಯಲ್ಲಿ ಅವನು ಉತ್ತೀರ್ಣನಾಗಬೇಕು. ಆಗದೇ ಇದ್ದರೆ ಮಾತ್ರ ಅವನು ವಿವಾಹ ಆಗಲಿಕ್ಕೆ ಅನರ್ಹ. ಆ ವ್ಯವಸ್ಥೆಯಿಂದ ಸ್ವಲ್ಪ ಪರಿಮಾರ್ಜನೆ ತರುವ ಪ್ರಯತ್ನದಲ್ಲಿ ಜಾತಕ, ಮೇಳಾಮೇಳಿ, ಹಿರಿಯರ ಅನುಗ್ರಹ, ಬಂಧುಗಳ ಆಶೀರ್ವಾದ, ಈ ರೀತಿಯ ಬಲಗಳನ್ನು ಸೇರಿಸಿ ವಧೂವರರನ್ನು ಸ್ವಲ್ಪ ಎತ್ತರಕ್ಕೇರಿಸುವ ಪ್ರಯತ್ನವು ಇದಾಗಿರುತ್ತದೆ. ಆದರೆ ಇದು ಸೂಕ್ತವೆಂದು ಹೇಳಲಾಗುವುದಿಲ್ಲ. ಎಲ್ಲರೂ ಮದುವೆಯಾಗಬೇಕು ಅಥವಾ ಎಲ್ಲರೂ ಸಂತಾನ ವೃದ್ಧಿಯನ್ನು ಮಾಡಬೇಕು ಎಂಬ ನಿಯಮವಿಲ್ಲ. ಯಾರು ಶ್ರೇಷ್ಠರು, ಯಾರು ಅದಕ್ಕೆ ಅರ್ಹರಿದ್ದಾರೆ, ಅವರೇ ಪ್ರಜಾವೃದ್ಧಿ ಮಾಡಲಿ. ಉಳಿದವರು ದೇಶಸೇವೆ ಮಾಡಲಿ. ದೇಶಸೇವೆಯನ್ನು ಮಾಡಲು ಜನ ಬೇಕು. ಹಾಗಾಗಿ ಆ ಆದರ್ಶದೊಂದಿಗೆ ಹುಟ್ಟಿದ ಮದುವೆಯ ವಿಚಾರ ಬದಲಾವಣೆ ಆಗುತ್ತಾ ಬಂದು ಈ ಹಂತಕ್ಕೆ ಬಂದಿರುತ್ತದೆ.
 
ಮದುವೆ ಎಂಬುದು ಪೂರ್ವಜನ್ಮದ ಋಣಾನುಬಂಧವೆಂದು ಹೇಳುತ್ತಾರೆ. ಅದು ಸತ್ಯವೇ?
ಮದುವೆಗೆ ವರನಿಗೆ ಅಸಮರ್ಥತೆಯು ಬಂದಾಗ ಈ ರೀತಿಯ ಋಣಾನುಬಂಧವೆಂಬ ಹಲವು ಕಾರಣಗಳನ್ನು ಹುಟ್ಟಿಸಿ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದು ಮಾತ್ರವಷ್ಟೆ. ಮನಸ್ಸಿಗೆ ಒಂದು ಒಪ್ಪಂದದ ತೀರ್ಮಾನ. ಋಣಾನುಬಂಧ, ತಂಗಿಯ ಮಗ, ಸೋದರಿಕೆಯ ಸಂಬಂಧ ಹೀಗೆ ಕಾರಣಗಳನ್ನು ಹೇಳುವುದು ಸಂಪ್ರದಾಯವಾಗಿದೆ. ಇಂತಹದಕ್ಕೆ ಹಲವು ಸಾವಿರ ಕಾರಣಗಳನ್ನು ಕೊಡಬಹುದು. ಇದರ ಹಿನ್ನೆಲೆಯಲ್ಲಿ ವರನ ಅಸಮರ್ಥತೆಯನ್ನು ಮುಚ್ಚಿಡುವುದೇ ಆಗಿರುತ್ತದೆ. ಅದು ಬಿಟ್ಟರೆ ಬೇರೆ ಏನೂ ಇರುವುದಿಲ್ಲ. ಇದಕ್ಕೆ ಯಾವ ಶಾಸ್ತ್ರೀಯ ನಿಬಂಧನೆ ಇಲ್ಲ, ವೈಜ್ಞಾನಿಕ ಮಹತ್ವವೂ ಇಲ್ಲ, ಸತ್ಯವೂ ಅಲ್ಲ.
 
ಸಗೋತ್ರ ಮತ್ತು ಬ್ಲಡ್‍ಗ್ರೂಪ್ ಬಗ್ಗೆ ಸ್ವಲ್ಪ ಹೇಳಿರಿ.
       ಈ ಬ್ಲಡ್‍ಗ್ರೂಪ್ ಎಂಬ ಶಬ್ದವು ನಮ್ಮ ಧರ್ಮಶಾಸ್ತ್ರಕ್ಕೆ ಬಳಕೆಯಾಗುವುದಿಲ್ಲ. ಈಗ ಚಾಲ್ತಿಯಲ್ಲಿ ಹೇಳತಕ್ಕಂತಹ ರಕ್ತಸಂಬಂಧಿ ಎಂದು ಹೇಳತಕ್ಕಂತಹ ವಿಶಾಲತೆ ಬ್ಲಡ್‍ಗ್ರೂಪಿಗೆ ಇರುವುದಿಲ್ಲ. ಬ್ಲಡ್‍ಗ್ರೂಪ್ ಬೇರೆ, ರಕ್ತಸಂಬಂಧಿಯೇ ಬೇರೆ. ರಕ್ತವೆಂದರೆ ನಮ್ಮ ದೇಹದಲ್ಲಿ ಹರಿಯುವ ಕೆಂಪು ನೀರಲ್ಲ. ಹಾಗಾಗಿ ರಕ್ತಸಂಬಂಧಿ ಎಂದು ಹೇಳತಕ್ಕಂತಹದ್ದರಲ್ಲಿ ೧೨ ಪಿತೃವರ್ಗದ ೭ ತಲೆಮಾರಿನ ಒಂದು ಭಾವನಾತ್ಮಕ ಬಾಂಧವ್ಯ ಕೊಟ್ಟಿದೆ. ಅದನ್ನು ರಕ್ತಸಂಬಂಧವೆಂದು ಹೇಳುತ್ತಾರೆ. ಅಷ್ಟು ವಿಶಾಲತೆಗೆ ಬ್ಲಡ್‍ಗ್ರೂಪ್ ಬರುವುದಿಲ್ಲ. A, O, B, AB, +ve, -ve ಹೀಗೆ ಇಂಗ್ಲಿಷಿನಲ್ಲಿ ಪರಮಾವಧಿಯೆಂದರೆ ೨೬ ಅಕ್ಷರ ಹೇಳಿದರೆ ಮುಗಿಯಿತು, ಅದಕ್ಕಿಂತ ಮುಂದಿಲ್ಲ. ಒಂದೇ ತಾಯಿಯ ಮಕ್ಕಳಲ್ಲಿ ರಕ್ತದ ಗುಂಪು ಬೇರೆ ಬೇರೆ ಇರುತ್ತದೆ. ಹಾಗಂತ ಅವರು ರಕ್ತಸಂಬಂಧ ಅಲ್ಲವೆಂದು ಹೇಳುವುದು ತಪ್ಪಾಗುತ್ತದೆ. ಆ ಶಬ್ದವೇ ನಮ್ಮ ದೇಹಶಾಸ್ತ್ರಕ್ಕೆ ಬಳಕೆ ಆಗುವಂತಹದ್ದಲ್ಲ. ಇಲ್ಲಿ ೧೨ ಪಿತೃವರ್ಗಗಳು ಹೇಗೆಂದರೆ ಒಬ್ಬ ವ್ಯಕ್ತಿ, ಅವನ ತಂದೆ, ಅಜ್ಜ, ಮುತ್ತಜ್ಜ ಮತ್ತು ಅವರ ಪತ್ನಿಯರು. ಪತ್ನಿಯರ ತಂದೆ ಮತ್ತು ಅವರ ವಂಶದ ಭಾಗ, ಹಾಗೆ ವಿಶಾಲವಾಗುತ್ತಾ ಹೋಗುತ್ತದೆ. ಹಾಗೆ ಆ ವ್ಯಕ್ತಿ, ಅವನ ಹೆಂಡತಿ, ಅವನ ಹೆಂಡತಿಯ ತಂದೆತಾಯಿ, ಅವರ ತಂದೆತಾಯಿ, ಅವರ ತಂದೆತಾಯಿ ಎಂದು ಹೇಳತಕ್ಕಂತಹ ೧೨ ವಿಭಾಗಗಳು ಆಗುತ್ತಾ ಹೆಚ್ಚು ಕಡಿಮೆ ೧೮,೬೩೨ ಪ್ರಭೇದಗಳು ರೂಪುಗೊಳ್ಳುತ್ತವೆ. ಅಷ್ಟನ್ನೂ ಪಿತೃವರ್ಗ ಎಂದು ಹೇಳುತ್ತಾರೆ. ಅದು ಭಾವನಾತ್ಮಕವಾಗಿ ಬಳಕೆಯಾಗತಕ್ಕಂತಹ ಒಂದು ವರ್ಗ.
 
ಅವುಗಳಲ್ಲಿ ಗೋತ್ರ ವ್ಯವಸ್ಥೆಯನ್ನು ಬಳಸುತ್ತಾರೆ. ಅದರಲ್ಲಿ ಸಗೋತ್ರ ಒಂದು ಚಾಲ್ತಿಯಲ್ಲಿ ಯಾವುದೋ ಋಷಿಯ ಹೆಸರಿನಲ್ಲೋ, ಆಥವಾ ಅವರ ಪೂರ್ವೀಕರ ಹೆಸರಿನಲ್ಲೋ ಗೋತ್ರ ಎಂಬುದು ಪದ್ಧತಿಯಲ್ಲಿದೆ. ಅದು ಕೇವಲ ಆಲೋಢನೆಯಲ್ಲಿರಲಿ, ನೆನಪಿನಲ್ಲಿರಲಿ ಎಂಬ ದೃಷ್ಟಿಯಿಂದ ಮಾತ್ರ. ಆದರೆ ಅದರ ಹಿನ್ನೆಲೆಯಲ್ಲಿ ಹಾಗಿಲ್ಲ. ಅದೊಂದು ವಂಶವಾಹಿ ಜೀನುಗಳ ಪ್ರತ್ಯೇಕತೆಯ ವಿಭಾಗಿಸಲ್ಪಡುವುದನ್ನು ಸೂತ್ರವು ಹೇಳುತ್ತದೆ. ಉದಾಹರಣೆಗೆ ಒಬ್ಬ ಆಂಗೀರಸಗಣದ ಭರದ್ವಾಜ ಗೋತ್ರದವನು ಎಂದು. ಅಂದರೆ ಆಂಗೀರಸ, ಬೃಹಸ್ಪತಿ, ಭರದ್ವಾಜ ಎಂದು ೩ ಪ್ರವರಗಳನ್ನು ಹೊಂದಿದ ಭರದ್ವಾಜ ಗೋತ್ರಜನು ಎಂದು ಹೇಳಿಕೊಳ್ಳುತ್ತಾನೆ. ಅದರಲ್ಲಿ ಮೂಲತಃ ಆಂಗೀರಸಗಣ. ಒಟ್ಟು ಮಾನವಜೀವ ಪ್ರಭೇದಗಳಲ್ಲಿ ೭ ಪ್ರಭೇದವಿದೆ. ಈ ೭ ಪ್ರಭೇದಗಳನ್ನು ೭ ಋಷಿಗಳ ಹೆಸರಿನಲ್ಲಿ ವಿಭಾಗಿಸಿದರು. ಅಲ್ಲಿ ಪರಸ್ಪರ ಸಂಕರ ಕಾರಣದಿಂದ ವಿಭಿನ್ನವಾದ ಸ್ವರೂಪ ಬಂದದ್ದಿದ್ದರೆ ಅಂತಹವನ್ನು ನ್ಯೂನ ಗೋತ್ರಗಳು ಎಂದು ಮತ್ತೆರಡನ್ನು ವಿಭಾಗಿಸುತ್ತಾರೆ. ಹಾಗೆ ಒಟ್ಟು ೯ ಗೋತ್ರ ಪ್ರಭೇದಗಳು ಮೂಲ ಪ್ರಭೇದಗಳಾಗುತ್ತವೆ. ಅವನ್ನು ಆಧರಿಸಿ ಪ್ರವರಗಳನ್ನು ವಿಭಾಗಿಸುತ್ತಾರೆ. ಪ್ರವರ ರೀತ್ಯಾ ೨, ೩, ೫, ೭ ಹೀಗೆ ಋಷಿಗಳ ಹೆಸರು ಮಾತ್ರ. ಅದು ಹೇಳುವ ಸಂಕೇತಾಕ್ಷರ ಬೇರೆ. ಆ ರೀತಿಯಲ್ಲಿ ಪ್ರಭೇದವಾಗುತ್ತಾ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಂಶವಾಹಿ ಜೀನನ್ನು ಯಾವ ಕಲೆಯಲ್ಲಿ ಹರಿದು ಬಂದಿದೆ ಎಂದು ಅವನಿಗೆ ತಿಳಿದುಕೊಳ್ಳಲು ತೀರಾ ಸುಲಭವಾದ ಉಪಾಯವದು.
 
        ಈಗ ಅತ್ರಿಗೋತ್ರವನ್ನು ಹೊಂದಿದ ಆತ್ರೇಯನು ತ್ರಯಾ ಋಷಿಯಾಗಿರಬಹುದು, ಪಂಚಾರ್ಷಯವಾಗಿರಬಹುದು ಅದು ಯಾವುದೇ ಆಗಿರಲಿ, ಅತ್ರಿ ಎಂದರೇನು? ನಮಗೆ ಪೌರಾಣಿಕವಾಗಿ ಅವರು ಒಬ್ಬ ಋಷಿ. ಹೈಹಯ ವಂಶದ ಗುರುವಾಗಿದ್ದರು. ಪುರಾತನವಾದ ವಂಶ. ಹೈಹಯವಂಶವೆಂದರೇನು? ಲಕ್ಷ್ಮಿಯ ಮಕ್ಕಳು! ಅಂದರೆ ಕುದುರೆ ಸ್ವರೂಪದಲ್ಲಿ ಲಕ್ಷ್ಮಿಯು ತಪಸ್ಸು ಮಾಡುತ್ತಿರುವಾಗ ಮಹಾವಿಷ್ಣುವು ಕುದುರೆಯ ರೂಪದಲ್ಲಿ ಅವಳನ್ನು ಸಂಯೋಗಿಸಿದಾಗ ಕುದುರೆಯ ಮುಖವನ್ನೇ ಹೊಂದಿ ಹುಟ್ಟಿದಂತಹ ಒಬ್ಬ ಮೂಲಪುರುಷನಿಂದ ಹುಟ್ಟಿದ ವಂಶವು ಹೈಹಯವಂಶ. ಅತ್ರಿಗೋತ್ರವು ಹೈಹಯವಂಶದ ಗುರುವಾಗಿದೆ. ಚಂಚಲತೆಯ ಪ್ರತೀಕವಾದಂತಹ ಕುದುರೆ, ಅದರಿಂದ ಆದಂತಹ ಫಲಿತಭಾಗ ಏನಿದೆ, ಆ ಚಂಚಲತೆಯನ್ನು ಹಿಡಿದಿಡತಕ್ಕಂತಹ ಗುರುಸ್ವರೂಪ ಅತ್ರಿ. ಹಾಗಿದ್ದರೆ ಯಾವ ವಂಶವಾಹಿಯಲ್ಲಿ ಅತೀ ಚಂಚಲತೆ ಕಂಡುಬರುತ್ತದೆ, ಅದು ಅತ್ರಿಗೋತ್ರದ ಹಿನ್ನೆಲೆಯ ಆಧಾರದಲ್ಲಿ ವಿಶ್ಲೇಷಿಸಬೇಕು ಎಂದರ್ಥ. ಆಗ ಅಲ್ಲಿಂದ ಅತ್ರಿಯಿಂದ ಮುಂದೆ ಪ್ರವರಗಳು ಯಾವುದು, ಅದನ್ನು ನೋಡಿದಾಗ ಚಿಕಿತ್ಸಾ ಪ್ರಕ್ರಿಯೆ ಅಳವಡಿಸಲ್ಪಟ್ಟಿದೆ; ಚಂಚಲತೆಯು ಅತಿಯಾದರೆ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಅದಕ್ಕೆ ಹಿಡಿತವಾಗಿ ಯಾವುದೋ ಚಿಕಿತ್ಸಾರೂಪವಾಗಿ ಅಳವಡಿಸಲ್ಪಟ್ಟಿ ಎಂದು ಕಂಡುಬರುತ್ತದೆ. ಆರ್ಷ್ಣಿಷೇಣೋ ಅಥವಾಜಾಮದಗ್ನಿಯೋ ಅಳವಡಿಸಿದ್ದರೆ ಏನಾಗುತ್ತದೆ? ಜಾಮದಗ್ನಿಯು ಅಳವಡಿಸಿದ್ದರೆ ಉತ್ಕೃಷ್ಟವಾದ ನಿಯಮವನ್ನು ಇಟ್ಟು ನಿಷ್ಠೆಯಿಂದ ಪಾಲಿಸುವವರು ಎಂದರ್ಥ.
 
ಮನಸ್ಸನ್ನು ನಿರ್ಬಂಧಿಸಿಡುವ ವ್ಯವಸ್ಥೆಯಿದೆಯೇ? ಜೀವನವಿಧಾನಕ್ಕೆ ನಿರ್ಬಂಧವಿದೆಯೇ? ಚಂಚಲತೆಯನ್ನು ನಿರ್ಬಂಧಿಸಿಡುವ ಜೀವನ ವ್ಯವಸ್ಥೆಯಿದೆಯೇ? ಎಲ್ಲಿ ನಿರ್ಬಂಧವಿದೆಯೋ ಅಲ್ಲಿ ಚೆನ್ನಾಗಿ ಬಾಳಬಲ್ಲ. ಆರ್ಷ್ಣಿಷೇಣವಾದರೆ ಅವನ ಮನಸ್ಸಿನ ನಿರ್ಬಲತೆಯ ಕಾರಣದಿಂದಾಗಿ ಅವನಿಗೆ ಮನೋಚಿಕಿತ್ಸೆಯನ್ನು ಕೊಡಲ್ಪಟ್ಟಿದೆಯೇ? ಮನಸ್ಸಿಗೆ ಪರಿಷ್ಕರಣೆ ಮಾಡಲ್ಪಟ್ಟಿದೆಯೇ? ಅದು ಯಾವ ರೀತಿ ಪರಿಷ್ಕರಣೆ ಆಗಿದೆ? ಆ ಪರಿಷ್ಕರಣೆಯಂತೆಯೇ ಮುಂದೆ ಪರಿಷ್ಕರಣೆ ಕೊಟ್ಟರೆ ಆದರ್ಶವಾಗಿ ಬದುಕಬಲ್ಲ. ಇದು ಗೋತ್ರವಿವರಣೆಯ ಸೂತ್ರಗಳು. ಅದನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಋಷಿಮುನಿಗಳು ನಿಮಗೆ ಪೂಜಾರ್ಹರು. ಅವರ ಹೆಸರನ್ನು ಸೇರಿಸಲ್ಪಟ್ಟಿದೆ ಅಷ್ಟೆ, ಬೇರೇನೂ ಅಲ್ಲ ಎನ್ನದಿರಿ. ಅದು ಅವರ ವಂಶವಾಹಿಯನ್ನು ಹಂತಹಂತವಾಗಿ ಯಾವ ಚಿಕಿತ್ಸೆಗಳಿಂದ ಪಕ್ವತೆ ಪಡೆದು ಯಾವ ರೀತಿಯಲ್ಲಿ ಮುಂದೆ ಅಭಿವೃದ್ಧಿ ಹೊಂದಬಹುದು ಎಂಬುದರ ಕೈಗನ್ನಡಿಯಾಗಿದೆ. ಈಗ ತೀರಾ ನೀವೇ ಆರೋಗ್ಯದ ವಿಚಾರದಲ್ಲಿ ಆಸ್ಪತ್ರೆಗೆ ಹೋದಾಗ ನಿಮಗೆ ಒಂದು ಕಾರ್ಡ್ ಕೊಟ್ಟು ಫೈಲ್ ರೆಡಿ ಮಾಡುತ್ತಾರೆ. ಅದಕ್ಕೊಂದು ನಂಬರ್ ಕೊಡುತ್ತಾರೆ. ಒಂದು ಕಾಯಿಲೆಗೆ ಔಷಧವನ್ನು ತೆಗೆದುಕೊಂಡು ಮನೆಗೆ ಬಂದಿದ್ದರೆ, ಮತ್ತೊಂದು ಬಾರಿ ಅದೇ ಆಸ್ಪತ್ರೆಗೆ ಹೋದಾಗ ನಿಮ್ಮ ಕಾರ್ಡ್ ಕೊಡಿ ಎಂದು ಕೇಳುತ್ತಾರೆ. ನಿಮ್ಮ ಹತ್ತಿರ ಕಾರ್ಡ್ ಇದ್ದರೆ ಅದನ್ನು ನೋಡಿ ಅವರು ನಿಮ್ಮ ಫೈಲನ್ನು ನೋಡಿದಾಗ ನಿಮಗೆ ಹಿಂದೆ ಏನು ಚಿಕಿತ್ಸೆಯನ್ನು ಕೊಡಲ್ಪಟ್ಟಿತ್ತು ಎಂದು ತಿಳಿಯುತ್ತದೆ. ಅದರಂತೆ ಯಾವ ಆಸ್ಪತ್ರೆಯೂ ಇಲ್ಲದೇನೇ, ಯಾವ ಕಾರ್ಡ್ ಇಲ್ಲದೇನೇ ಈ ಗೋತ್ರಪ್ರವರಗಳಲ್ಲಿ ನಿಮ್ಮ ಸಂಪೂರ್ಣ ವಿವರವು ದಾಖಲಿಸಲ್ಪಟ್ಟಿರುತ್ತದೆ. ಇದರಲ್ಲಿ ನಿಮ್ಮದ್ದಲ್ಲದೇನೇ ನಿಮ್ಮ ಹಿಂದಿನ ಜನ್ಮಾಂತರ ಪೂರ್ವಜರುಗಳಲ್ಲಿ ಯಾರಿಗೊ ಎಂದೋ ಚಿಕಿತ್ಸೆಯನ್ನು ಕೊಟ್ಟಿರುವ ದಾಖಲೆಯನ್ನೂ ಸಹ ಇದು ಕೊಡುತ್ತದೆ. ಅಂತಹ ಫೈಲ್‍ಗಳನ್ನು ಇಡಲು ಈಗಿನ ವಿಜ್ಞಾನದಿಂದ ಸಾಧ್ಯವಿಲ್ಲ. ಅಷ್ಟು ಒಳ್ಳೆಯ ಫೈಲ್‍ಗಳನ್ನು ಇಡುವ ವ್ಯವಸ್ಥೆಯೇ ಈ ಗೋತ್ರಪ್ರವರಗಳ ವ್ಯವಸ್ಥೆ. ವಂಶವಾಹಿ ಜೀನುಗಳು ಹೇಗೆ ಹರಿದುಬರುತ್ತವೆ ಎಂದು ಗುರುತಿಸುವಂತಹ ವ್ಯವಸ್ಥೆಯಾಗಿರುತ್ತದೆ.

ಸಗೋತ್ರ ವಿವಾಹ ನಿಷೇಧ ಏಕೆ?

ಈ ವಿಚಾರಗಳೆಲ್ಲ ಮುಂದೆ ಆದಂತಹಾ ಉದಾಹರಣೆಗಳನ್ನು ಆಧರಿಸಿ ಹೇಳಿದಂತಹವು. ಉದಾ:- ನೀರಿಗೆ ಬಿದ್ದರೆ ಸಾಯುತ್ತಾನೆ. ಆದರೆ ಈಜು ಬಂದವ ಬದುಕುತ್ತಾನೆ. ಹಾಗೆಯೇ ಯಾವುದು ಆಯಾ ದೇಹ ಲಕ್ಷಣಕ್ಕೆ ಹೊಂದಿಕೆಯಾಗುವುದಿಲ್ಲ ಅಲ್ಲಿ ಅದು ಅಪವಾದ. ಅಷ್ಟು ಬಿಟ್ಟರೆ ಎಲ್ಲವೂ ಅಲ್ಲ. ಸಗೋತ್ರವಾಗಲಿ, ರಕ್ತ ಸಂಬಂಧದಲ್ಲಾಗಲಿ ವಿವಾಹವಾದರೆ ಮಾನಸಿಕ ಅಸ್ವಸ್ಥ, ಅಂಗವಿಕಲ, ರೋಗ ಬಾಧಿತ ಮಕ್ಕಳು ಹುಟ್ಟುತ್ತಾರೆ ಎಂಬ ಕಲ್ಪನೆ ಹಬ್ಬಿದೆ. ಅದು ಕೆಲವೊಂದು ಮತ್ರ ಸತ್ಯವಿದ್ದು, ಉಳಿದವನ್ನೆಲ್ಲ ಪ್ರಯತ್ನ ಪೂರ್ವಕವಾಗಿ ಸೇರಿಸುತ್ತಾ ಬರುತ್ತಿದ್ದಾರೆ. ಕ್ರಿ.ಶ. ೪೦೦-೬೫೦ ರವರೆಗೆ ಮಧ್ಯಭಾರತ ಪ್ರದೇಶದಲ್ಲಿ ಸೋದರಮಾವನಿಗೇ ಮಗಳನ್ನು ಕೊಡುವುದು ಹಕ್ಕಾಗಿತ್ತು. ಅದು ಬಿಟ್ಟು ಬೇರೆ ಯಾರಿಗೂ ಕೊಡುವ ಹಾಗೇ ಇರಲಿಲ್ಲ. ಎಷ್ಟೇ ಹೆಣ್ಣು ಮಕ್ಕಳಿದ್ದು ಒಬ್ಬನೇ ಸೋದರಮಾವನಿದ್ದರೆ, ಅವರೆಲ್ಲರನ್ನೂ ಆತನಿಗೇ ವಿವಾಹ ಮಾಡಿಕೊಡುವ ಪರಿಪಾಠವಿತ್ತು. ಸ್ತ್ರೀ ರಕ್ಷಣೆಯಲ್ಲಿ ಇದ್ದ ಅಭದ್ರತೆಯೇ ಈ ರೀತಿ ಸೋದರ ವಿವಾಹಕ್ಕೆ ಕಾರಣ. ಅವರೆಲ್ಲರಿಗೆ ಒಟ್ಟು ೧೫-೨೦ ಮಕ್ಕಳಿದ್ದಾಗ್ಯೂ ಯಾರೂ ಅಂಗವಿಕಲರಾಗುತ್ತಿರಲಿಲ್ಲ. ಈಗ ವಿಕೃತಿ ಆಗುತ್ತದೆ ಎಂದು ಹೇಳುತ್ತಿದ್ದಾರೆ ಎಂದರೆ ಹೇಗೆ ನಂಬುವುದು? ಸಾಧ್ಯವೇ ಇಲ್ಲ, ಸುಳ್ಳದು!
 
ಸಗೋತ್ರ ವಿವಾಹ ಬೇಡ ಎಂದಿರುವ ಓಘವೇ ಬೇರೆ. ನಮ್ಮಲ್ಲಿ ಜ್ಞಾನವು ವೃದ್ಧಿಯಾಗಬೇಕೆಂಬ ಕಾರಣಕ್ಕಾಗಿ ಬೇರೆ ಬೇರೆ ಗೋತ್ರಗಳ ಸಂಕರ ಮಾಡಿದರೆ ಎಲ್ಲ ಜ್ಞಾನವು ಎಲ್ಲರಲ್ಲೂ ವೃದ್ಧಿಯಾಗಲಿಕ್ಕೆ ಸಾಧ್ಯ ಎಂಬ ಉದ್ದೇಶದಿಂದ ತ್ರೇತಾಯುಗದಲ್ಲಿ ರಾವಣನ ಕಾಲದ ನಂತರ ಒಂದೇ ಜ್ಞಾನದಲ್ಲಿ ಮುಂದುವರೆಯುವ ಸಗೋತ್ರ ವಿವಾಹ ಬೇಡವೆಂಬ ಅಭಿಪ್ರಾಯ ಜನರಲ್ಲಿ ಬಂದಿತು. ಒಂದೇ ರೀತಿ ಚಿಂತನಾ ಶಕ್ತಿಯು ಮತ್ರ ಒಂದೇ ಜನಾಂಗದಲ್ಲಿ ಬೆಳೆದು ಬಂದರೆ ಉಳಿದ ಜ್ಞಾನ ಎಲ್ಲರಿಗೂ ಸಿಕ್ಕುವುದಿಲ್ಲ. ಈ ರೀತಿ ವಿವಿಧ ಗೋತ್ರದವರ ವಿವಾಹ ಮಾಡಿದರೆ ಎಲ್ಲ ಜ್ಞಾನವು ಎಲ್ಲರಲ್ಲೂ ಪ್ರಸಾರವಾಗುತ್ತದೆ.
 
ಹುಟ್ಟುವ ರಾಕ್ಷಸರೆಲ್ಲ ಬ್ರಹ್ಮನಲ್ಲಿ ಸಾಯುವ ವರವನ್ನೇ ಬೇಡಿ ಸಾವನ್ನೇ ವರವಾಗಿ ಪಡೆದರು. ಅದಕ್ಕಾಗಿ ರಾಕ್ಷಸರು ಚಿಂತನೆ ಆರಂಭಿಸುತ್ತಾರೆ. ಉತ್ತಮ ಬುದ್ಧಿಯಿದ್ದ ಆರ್ಯನಲ್ಲಿ ಉತ್ತಮ ಸಂತಾನವನ್ನು ಪಡೆದು, ಅವನನ್ನು ಬೆಳೆಸಿದರೆ ಈ ರೀತಿ ಮೋಸ ಹೋಗಲಿಕ್ಕಿಲ್ಲ ಎಂದು ರಾವಣನ ಸೃಷ್ಟಿಯಾಯಿತು. ಅದಕ್ಕಾಗಿಯೇ ಕೈಕಸೆಯನ್ನು ಆರ್ಯಾವರ್ತ ಪ್ರದೇಶದ ವಿಶ್ವಾವಸುವಿಗೆ ಕೊಟ್ಟು ವಿವಾಹ ಮಾಡಿದ್ದರು. ಅದನ್ನೇ ಕಡೆಗೆ ಸಾರ್ವತ್ರಿಕ ಬಳಕೆಗೆ ತಂದರು. ಇದರಿಂದ ಹೆಚ್ಚು ವಿಚಾರ ವೃದ್ಧಿಯಾಗುತ್ತದೆ. ಹೆಚ್ಚು ಚಿಕಿತ್ಸಕ ಬುದ್ಧಿಯನ್ನು ಬೆಳೆಸಲಿಕ್ಕೆ ಸಾಧ್ಯವೆಂಬ ಒಂದೇ ವಿಶಿಷ್ಟ ಚಿಂತನೆಯಿಂದ ಚಾಲನೆಯಾದದ್ದೇ ವಿವಿಧ ಗೋತ್ರರಲ್ಲಿ ವಿವಾಹವಾಗುವ ಸಾಂಪ್ರದಾಯಿಕ ಒಡಂಬಡಿಕೆ. ಆದರೆ ದೇಹ ಲಕ್ಷಣ ವ್ಯತ್ಯಾಸ, ದೇಹಕ್ಕೆ ತೊಂದರೆ, ಇತ್ಯಾದಿ ಏನೂ ಆಗುವುದಿಲ್ಲ. ವಿಶ್ವಬಂಧುತ್ವವನ್ನು ಸಾಧಿಸಬೇಕಾದರೆ ಹತ್ತಾರು ಕುಟುಂಬಗಳ ಸಂಬಂಧ ಬೆಸೆಯಬೇಕು. ಅವರವರಲ್ಲೆ ವಿವಾಹವಾಗುತ್ತಾ ಬಂದ ಒಂದೇ ಕಾರಣದಿಂದ ಪಾರ್ಸಿ ಇತ್ಯಾದಿ ಅಂದಾಜು ೩೦೦ ಜನಾಂಗಗಳು ನಾಶವಾಗಿವೆ! ಪ್ರತಿಯೊಬ್ಬ ಸಮಾಜ ಚಿಂತಕನಿಗೂ ನಿರಂತರತೆಯನ್ನು ಕಾಯ್ದುಕೊಂಡುಬರುವ ಜವಾಬ್ದಾರಿ ಇರುತ್ತದೆ. ಅದಕ್ಕೆ ಬೇಕಾಗಿ ಎಲ್ಲೆಲ್ಲಿ ಯಾವ ಸಂಕರ ಬೇಕು ಅದಕ್ಕೆ ತಕ್ಕಂತೆ ಚಿಂತಕರು ವಿವಾಹ ಸಂಯೋಜಿಸುತ್ತಾರೆ.
 
ಹಿಂದಿನ ಕಾಲದಲ್ಲಿ ಗಾಂಧರ್ವ ವಿವಾಹ ನಡೆಯುತ್ತಿತ್ತು, ಅದಕ್ಕೂ ಈ ಕಾಲದಲ್ಲಿ ಪರಸ್ಪರ ಮೆಚ್ಚಿ ಆಗುವ ಮದುವೆಗೂ ವ್ಯತ್ಯಾಸವಿದೆಯೇ?
ವಿವಾಹವಿಧಿಯಲ್ಲಿ ಗಾಂಧರ್ವ ವಿವಾಹವೂ ಒಂದು. ಮೂಲ ಮತ್ಸ್ವದಿಂದ ಚಾಲನೆಗೊಂಡ ಸೃಷ್ಟಿಯಲ್ಲಿ ಬ್ರಾಹ್ಮ, ದೈವ, ಪ್ರಾಜಾಪತ್ಯ, ಆರ್ಷ, ಗಾಂಧರ್ವ, ಆಸುರ, ಪೈಶಾಚ, ರಾಕ್ಷಸಗಳೆಂಬ ೮ ಸೃಷ್ಟಿ ಪ್ರಕ್ರಿಯೆಗಳಲ್ಲಿ ಯಾವುದೇ ರೀತಿಯಲ್ಲಿ ವಿವಾಹವಾದರೂ ಮೂಲತಃ ಯೋನಿಜ ಜೀವಪ್ರಭೇದಗಳಲ್ಲಿ ವೇದದಲ್ಲಿ ಗುರುತಿಸಲ್ಪಟ್ಟ ೮ ಮೂಲ ಮಾನಸಿಕ ಪ್ರವರ್ತನೆಗಳಲ್ಲಿ ಯಾವುದೇ ಪ್ರವರ್ತನೆ ಉಳ್ಳ ಫಲಿತ ಭಾಗವು ಪ್ರಾಪ್ತವಾಗುತ್ತದೆ. ಇತಿಹಾಸ-ಪುರಾಣಗಳಲ್ಲಿ ಕೆಲವರು ಗಾಂಧರ್ವವಿಧಿಯಲ್ಲಿ ವಿವಾಹವಾದರು ಎನ್ನಲಾಗಿದೆ. ಚಾಲ್ತಿಯಲ್ಲಿ ಕಥೆ ಹೇಳುವಾಗ ಮಾತ್ರ ಅವರು ಇಷ್ಟಪಟ್ಟರು, ಮದುವೆಯಾದರು, ಬೇರೆ ಯಾರೂ ಇರಲಿಲ್ಲ ಎಂಬಂತೆ ಹೇಳುತ್ತಾರೆ. ಆ ವಿಧಿಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವೆಂದಲ್ಲ. ಅವರೂ ೭ ರೀತಿಯ ಸಾಕ್ಷಿಗಳನ್ನಿಟ್ಟೇ ಮದುವೆಯಾಗುವುದು. ಅಲ್ಲಿ ಮದುವೆಯಾಗುವ ವಧೂವರರಿಗೆ ಅಷ್ಟು ಪ್ರೌಢತೆಯಿತ್ತು. ನೀವು ಅದನ್ನು ಅರ್ಥಮಾಡಿಕೊಳ್ಳಬೇಕು. ಗಾಂಧರ್ವ ವಿಧಿಯಲ್ಲಿ ಮದುವೆಯಾದವರು ಯಾರು? ಎಂದರೆ ದುಷ್ಯಂತನು ಶಕುಂತಲೆಯನ್ನು ಮದುವೆಯಾಗಿದ್ದ. ಶಕುಂತಲೆ ಕಣ್ವಾಶ್ರಮದಲ್ಲಿ ಬೆಳೆದವಳು. ಅವಳಿಗೆ ವೇದದ ಎಲ್ಲಾ ವಿಚಾರಗಳೂ ಅರ್ಥವಾದವುಗಳು; ಸಮರ್ಥಳು. ದುಷ್ಯಂತನು ಚಕ್ರವರ್ತಿ, ಅವನೂ ಚತುರ್ವೇದ ಪಾರಂಗತ, ಜ್ಞಾನಿ. ಹಾಗಾಗಿ ಅವರಿಗೆ ಪುರೋಹಿತರ ಅಗತ್ಯವಿರಲಿಲ್ಲ. ಸ್ವತಂತ್ರವಾಗಿ ವಿಧಿವತ್ತಾಗಿ ಮದುವೆಯಾಗಬಲ್ಲತು. ಹಾಗಾಗಿ ಅವರು ಮದುವೆಯಾದರು. ಈಗಿನ ಹುಡುಗರು ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗುವುದು, ಅಥವಾ ಯಾವುದೋ ಅರಳಿಮರದ ಕೆಳಗೆ ಹಾರ ಬದಲಾಯಿಸಿಕೊಳ್ಳುವುದೋ ಗಾಂಧರ್ವ ವಿವಾಹವಲ್ಲ. ಇವರಿಗೆ ವಿವಾಹ ಎಂದರೇನೆಂದೇ ಗೊತ್ತಿಲ್ಲ. ದುಷ್ಯಂತ ಶಕುಂತಲೆಯರಿಗೆ ವಿವಾಹವೆಂದರೇನು ಎಂಬುದು ತಿಳಿದಿತ್ತು. ಆದ್ದರಿಂದ ಅವರಿಗೆ ಗಾಂಧರ್ವ ವಿವಾಹ ಮಾನ್ಯವಾಗಿದೆ. ಅದಕ್ಕೆ ಇದನ್ನು ಹೋಲಿಸಬೇಡಿ. ಇದಕ್ಕೂ ಅದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗಾಂಧರ್ವ ವಿವಾಹದಲ್ಲೂ ವಿಧಿಯಿದೆ, ವಿಧಾನಗಳಿವೆ, ಬದ್ಧತೆಯಿದೆ. ೭ ಸಾಕ್ಷಿಗಳ ಆಧಾರದಲ್ಲಿ ವಿಧಿಬದ್ಧವಾಗಿ ವಿವಾಹ ಕಾರ್ಯವಿದೆ. ಇತರೆ ಮಾನುಷ ಸಾಕ್ಷಿ ಅಲ್ಲಿ ಅಗತ್ಯವಿಲ್ಲ. ಅಲ್ಲಿ ವೃಕ್ಷಸಾಕ್ಷಿ, ಸೂರ್ಯಚಂದ್ರಸಾಕ್ಷಿ, ದೇವಸಾಕ್ಷಿಗಳು. ನೀವು ಆ ಪ್ರಹಸನವನ್ನು ಓದಿದಾಗ ಅವರು ಈ ಸಾಕ್ಷಿಗಳನ್ನು ಹೇಗೆ ಪಡೆದರು ಎಂಬ ವಿವರವಿದೆ. ಕಾವ್ಯದಲ್ಲೊ, ಕಥಾನಕದಲ್ಲೊ ಅದು ಸಿಗಲಿಲ್ಲವೆಂದರೆ ಕವಿಗೂ ಗಾಂಧರ್ವ ವಿವಾಹದ ಕಲ್ಪನೆ ಇಲ್ಲದಿರಬಹುದು. ಹಾಗಾಗಿ ಅದನ್ನು ಹೆಚ್ಚು ವಿವರಿಸಿಲ್ಲ. ಆದರೆ ಗಾಂಧರ್ವ ವಿವಾಹಕ್ಕೆ ಅದರದ್ದೇ ಆದ ವಿಧಿವಿಧಾನ ಬದ್ಧತೆಗಳಿವೆ.
 
ಹಾಗೆ ರಾಕ್ಷಸ ವಿವಾಹ ಪದ್ಧತಿಯೆಂದರೆ ಜನ ಹೆದರುತ್ತಾರೆ. ಆದರೆ ಅದರಲ್ಲಿ ಅಂತಹಾ ಅನಾಗರೀಕ ಪದ್ಧತಿ ಏನೂ ಇಲ್ಲ. ಅಲ್ಲಿ ಕನ್ಯೆಯನ್ನು ಸ್ವೀಕರುಸುವ ವಿಧಾನ ಯಾವುದು? ಇಲ್ಲಿ ಬ್ರಾಹ್ಮ ವಿವಾಹದಲ್ಲಿ ಹೇಗೆ ಕನ್ಯೆಯನ್ನು ಆಧಾನವಾಗಿ (ಕನ್ಯಾಧಾನ) ಕೊಡಲ್ಪಟ್ಟಿತೋ ಹಾಗೆ ರಾಕ್ಷಸವಿವಾಹದಲ್ಲಿ ಕನ್ಯೆಯನ್ನು ಪ್ರಯತ್ನಪೂರ್ವಕವಾಗಿ ಪಡೆಯುತ್ತಾನೆ. ಅವನು ಕನ್ಯೆಯನ್ನು ಬಲ, ಶಕ್ತಿಯನ್ನು ಪ್ರಯೋಗ ಮಾಡಿ ಪಡೆಯುತ್ತಾನೆ. ಅವನಲ್ಲಿ ಅರ್ಹತೆಯಿದೆ ಎಂದು ತೋರಿಸಿಕೊಡುತ್ತಾನೆ. ಬ್ರಾಹ್ಮವಿವಾಹದಲ್ಲಿ ಅವನಿಗೆ ಅರ್ಹತೆಯಿದೆ ಎಂದು ಸಮಾಜವು ಅರ್ಹತಾ ಪತ್ರ ಕೊಡುತ್ತದೆ. ಅದೇ ರಾಕ್ಷಸವಿವಾಹದಲ್ಲಿ ವರನೇ ತನ್ನ ಅರ್ಹತೆಯನ್ನು ತೋರಿಸಿ ಪಡೆಯಬೇಕು. ಅದು ರಾಕ್ಷಸವಿವಾಹ ಪದ್ಧತಿ. ವರನು ಸಭೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿ ಶ್ರುತ ಪಡಿಸಿದ ಮೇಲೆ ಮದುವೆಯನ್ನು ಮಾಡುವುದು ಆ ಸಂಪ್ರದಾಯದ ವಿಶೇಷತೆ. ಬ್ರಾಹ್ಮ ವಿವಾಹದಲ್ಲಿಯಾದರೆ ಸಭೆಯಲ್ಲಿ ಸೇರಿದ ಬಂಧುಗಳು, ಇತರೆ ಸಭಾಸದರು ಈತನು ಸಮರ್ಥನೆಂದು ಹೇಳಿದ ಮೇಲೆ ಮದುವೆ ಮಾಡುವುದು ವಾಡಿಕೆಯಲ್ಲಿತ್ತು. ಇಲ್ಲಿ ಸಮರ್ಥತೆಯನ್ನು ಶ್ರುತ ಪಡಿಸುವ ಅಗತ್ಯವಿಲ್ಲ. ಹಾಗಾಗಿ ಯಾವ ವಿಚಾರವೂ ನಿಷೇಧವಲ್ಲ, ಅಲ್ಲಿ ಅದರದ್ದೇ ಆದ ವಿಧಿಗಳಿವೆ. ಇಲ್ಲಿ ಇದರದ್ದೇ ಆದ ವಿಧಿಗಳಿವೆಯಷ್ಟೆ! ಅದರಂತೆ ಗಾಂಧರ್ವ ವಿವಾಹಕ್ಕೂ ಅದರದ್ದೇ ಆದ ವಿಧಿವಿಧಾನಗಳಿವೆ. ಅದು ಖಂಡಿತಾ ಶಾಸ್ತ್ರೀಯವೆ! ಅಶಾಸ್ತ್ರೀಯವಲ್ಲ. ಅದನ್ನೇ ಆಧರಿಸಿ ಈಗ ಅದನ್ನು ಎಲ್ಲೋ ಓಡಿ ಹೋಗತಕ್ಕಂತಹ ಹುಡುಗ-ಹುಡುಗಿಯರಿಗೆ ಹೋಲಿಸಿದರೆ ಅರ್ಥವಿಲ್ಲ. ಇಬ್ಬರೂ ಮದುವೆಯನ್ನು ಅರ್ಥಮಾಡಿಕೊಂಡು ಹತ್ತು ಜನ ಎದುರಿಗೆ ನಾವು ಮದುವೆಯಾಗುತ್ತಿದ್ದೇವೆ ಎಂದು ಧೈರ್ಯವಾಗಿ ಘೋಷಿಸಿ ಮದುವೆಯಾದರೆ ಅದನ್ನು ಗಾಂಧರ್ವ ವಿವಾಹ ಪದ್ಧತಿಯಂತೆ ಅಂಗೀಕಾರ ಮಾಡಲಿಕ್ಕೆ ಬರುತ್ತದೆ.


 
This website was created for free with Own-Free-Website.com. Would you also like to have your own website?
Sign up for free