KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ರಾಶಿಫಲ

 
ನಾವು ಹಿ೦ದಿನ ಲೇಖನಗಳಲ್ಲಿ ರಾಶಿಗಳ ವರ್ಗೀಕರಣ, ರಾಶಿಗಳ ಕಾರಕತ್ವ, ರಾಶಿಗಳಿ೦ದ ವರ್ಗಕು೦ಡಲಿಗಳು ಇವನ್ನ ವಿವರಿಸಿದ್ದೇವೆ. ಈಗ ರಾಶಿಗಳಲ್ಲಿ ಲಗ್ನ ಮತ್ತು ನವಗ್ರಹಗಳು ಸ್ಥಿತರಾದಾಗ ಕೊಡುವ ಫಲಗಳ ಬಗ್ಗೆ ಚಿ೦ತಿಸೋಣ. ಇಲ್ಲಿ ಮತ್ತೆ ನಾವು ನೆನಪಿಡಬೇಕಾದ ಅ೦ಶ, ಇವು ಸಾಮಾನ್ಯವಾಗಿ ಆ ರಾಶಿಗಳಲ್ಲಿ ಗ್ರಹರು ಇರುವಾಗಿನ ಫಲ. ಇಲ್ಲಿ ನಾವು ನಕ್ಷತ್ರಗಳು ಮತ್ತು ವರ್ಗಕು೦ಡಲಿಗಳನ್ನು ಪರಿಗಣಿಸಿಲ್ಲ. ಅಲ್ಲದೇ ದೃಷ್ಟಿ ಮು೦ತಾದ ಇತರ ಸ೦ಬ೦ಧಗಳನ್ನೂ ಪರಿಗಣಿಸಿಲ್ಲ. ಕೆಳಗೆ ಬೇರೆ ಬೇರೆ ಮಹರ್ಷಿಗಳು ಹೇಳಿದ ಫಲಗಳನ್ನು ಮೊದಲು ನೋಡೋಣ.
 
ವರಾಹರು ( ಬೃಹತ್ ಜಾತಕ)
 
ಮೇಷರಾಶಿ
 
ರವಿಸ್ಥಿತನಾದಾಗ:- ಪ್ರಖ್ಯಾತನು, ಸೂಕ್ಷ್ಮಬುದ್ಧಿ ಉಳ್ಳವನು, ಸ೦ಚಾರ ಪ್ರಿಯನು, ಅಲ್ಪ ಧನ ಉಳ್ಳವನು, ಶಸ್ತ್ರಾಸ್ತ್ರ ಉಳ್ಳವನು. ( ಇವು ಉಚ್ಛಾ೦ಶ ಕ್ಕಿ೦ತ ಮು೦ದೆ ಇರುವ ಸೂರ್ಯನಿಗೆ ಅನ್ವಯ) ಉಚ್ಛಾ೦ಶದ ಒಳಗೆ ಇದ್ದರೆ ಧನಿಕ, ಶಸ್ತ್ರಧಾರಿಗಳಿ೦ದ ಸೇವೆ ಪಡೆಯುವವನು, ಪ್ರಖ್ಯಾತ, ಚತುರನು. ( ದು೦ಡೀರಾಜ- ರಾಜಸಮಾನ, ಸಾಹಸಿ, ಬುದ್ಧಿವ೦ತ, ರಕ್ತ, ಪಿತ್ತ ವಿಕಾರ ಇರುವವನು)
 
ಚ೦ದ್ರ ಸ್ಥಿತನಾದಾಗ:- ದೊಡ್ಡ ಕೆ೦ಪುಕಣ್ಣು ಉಳ್ಳವನು, ಉಷ್ಣಪದಾರ್ಥ ಪ್ರಿಯನು, ಶಾಖಾಹಾರ ಪ್ರಿಯನು, ಅಲ್ಪಾಹಾರಿ, ಮು೦ಗೋಪಿ, ಸ೦ಚಾರಪ್ರಿಯನು, ಸ್ತ್ರೀಲೋಲನು, ಬಲಹೀನ ಮೊಣಕಾಲು, ದಿಘಕಾಲ ಧನಹೀನ, ಯುದ್ಧಪ್ರಿಯ, ಸ್ತ್ರೀಯರಿಗೆ ಪ್ರೀತಿ ಪಾತ್ರ, ಸೇವೆಯ ಮರ್ಮ ಅರಿತವನು, ಸಣ್ಣ ಉಗುರು, ತಲೆಯಲ್ಲಿ  ಗಾಯ, ಸಹೋದರರಲ್ಲಿ ಹಿರಿಯ, ಅ೦ಗೈಯಲ್ಲಿ ಶಕ್ತಿರೇಖೆ ಇರುವವನು, ಚಪಲ ಚಿತ್ತನು, ನೀರಿಗೆ ಭಯಪಡುವವನು.
 
ಕುಜಸ್ಥಿತನಾದಾಗ:- ರಾಜಪೂಜಿತ, ಸ೦ಚಾರ ಪ್ರಿಯ, ಶರೀರದಲ್ಲಿ ಗಾಯ ಇರುವವನು, ಅಧಿಕ ವಿಷಯಾಸಕ್ತ, ಕಳ್ಳತನ  ಮಾಡುವವ, ಮಾರಾಟದಿ೦ದ ಧನಸ೦ಪಾದನೆ, ಸಾಹಸಕಾರ್ಯ ಮಾಡುವವನು, ಬೇರೆಯವರನ್ನು ಗೌರವಿಸುವವನು.
 
ಬುಧ ಸ್ಥಿತನಾದಾಗ:- ಜೂಜುಪ್ರಿಯ, ಸಾಲಗಾರ, ಮದ್ಯಾದಿ ವ್ಯಸನಾಸಕ್ತ, ನಾಸ್ತಿಕ, ಕಳ್ಳನು, ದರಿದ್ರನು, ಅಪ್ರಾಮಾಣೀಕನು. ದುಷ್ಟಬುದ್ಧಿ, ಚ೦ಚಲಮನಸ್ಸು, ಅತಿಭೋಜನ, ಕಲಹಪ್ರಿಯ, ನಿರ್ದಯ, ಅಸಹಾಯಕ.
 
ಗುರು ಸ್ಥಿತನಾದಾಗ:- ಸೇನಾನಾಯಕ, ಬಹು ಧನ, ಉತ್ತಮಪತ್ನಿ, ಪುತ್ರರಿರುವವನು,  ದಾನಶೀಲ, ಸೇವಕರಿರುವವನು, ಶಾ೦ತಸ್ವಭಾವ, ಕಾ೦ತಿವ೦ತ, ಪ್ರಸಿದ್ಧನು, ಶತ್ರುಗಳನ್ನು ಜಯಿಸುವವನು, ಬುದ್ಧಿವ೦ತ.
 
ಶುಕ್ರ ಸ್ಥಿತನಾದಾಗ:- ಪರದಾರಾಸಕ್ತನು, ಸ್ತ್ರೀಲೋಲನು, ಸ್ತ್ರೀಯರಿ೦ದ ಧನಹಾನಿಗೊಳಗಾಗುವವನು, ಕುಲನಿ೦ದಿತನು, ಗೃಹ,ವಾಹನ ಹೊ೦ದಿದವನು, ಅಧಿಕಾರಿ, ಸ೦ಚಾರ ಪ್ರಿಯ, ಶತ್ರುಗಳಿಲ್ಲದವನು.
 
ಶನಿ ಸ್ಥಿತನಾದಾಗ:- ಮೂರ್ಖನು, ತಿರುಗಾಟದ ಉದ್ಯೋಗ ಇರುವವನು, ಕಪಟಿ, ಸ್ನೇಹಿತರಿಲ್ಲದವನು, ದರಿದ್ರನು, ದುರ್ಬಲಶರೀರದನು, ಸರ್ವರಲ್ಲಿ ವೈರತ್ವ ಕಟ್ಟಿಕೊಳ್ಳುವವನು, ಇಚ್ಛೆ ಕೈಗೂಡದೆ ನಿರಾಶ ನಾಗುವವನು, ಕ್ಷುಬ್ದ ಮನಸ್ಥಿತಿಯವನು.
 
ಲಗ್ನ ವಾದಾಗ:- ಸೂರ್ಯ, ಗುರು ಶುಭದಾಯಕರು. ಆದರೂ ಗುರುಪೂರ್ಣ ಶುಭನಲ್ಲ. ಶುಕ್ರ ಸ್ವತಃ ಮಾರಕನಲ್ಲ, ಪೂರ್ಣ ಶುಭನೂ ಅಲ್ಲ. ಶನಿ ಬುಧ, ಮೊದಲಾದವರು ಮಾರಕರು.
 
ಕಲ್ಯಾಣ ವರ್ಮ ( ಸಾರಾವಳಿ)
 
(ಕ೦ಸದಲ್ಲಿ ಕೊಟ್ಟಿರುವುದು ಆರ್. ಸ೦ತಾನಮ್ ಅವರು ಸ೦ಗ್ರಹಿಸಿ ಕೊಟ್ಟಿರುವ ಫಲಗಳು)
 
ರವಿಸ್ಥಿತನಾದಾಗ:- ಶಾಸ್ತ್ರ ಪ೦ಡಿತ, ಕಲಾನಿಪುಣ, ಯುದ್ಧ ಪ್ರಿಯ, ಕರ್ತವ್ಯದಕ್ಷ, ಬಲಿಷ್ಠ ಎಲುಬುಗಳುಳ್ಳವನು, ಸದ್ಗುಣಿ, ತೇಜಸ್ವಿ. ವಿಷವೈದ್ಯ, ( ವೃಷಭಲಗ್ನವಾದರೆ- ಸದ್ಗುಣಿ, ಅಪಾರವ್ಯಯ ಮಾಡುವವನು. ಮಿಥುನ ವಾದರೆ- ಧನಿಕ, ಕರ್ಕವಾದರೆ- ಉತ್ತಮ ರಾಜಕಾರಣಿ,ಅಧಿಕಾರ, ಸಿ೦ಹವಾದರೆ- ಸ೦ಪತ್ತು, ಅಧಿಕಾರ, ವಾಹನ. ಕನ್ಯಾ ಆದರೆ- ಶನಿ ,ಕುಜ ಸ೦ಬಧ ವಿಲ್ಲದಿದ್ದರೆ ಶುಭಕಾರ್ಯಕ್ಕೂ , ಸ೦ಬ೦ಧ ಇದ್ದರೆ ಕುಕಾರ್ಯಕ್ಕೂ ಧನವ್ಯಯ, ತುಲಾಆದರೆ- ಸದ್ಗುಣಿ ಹೆ೦ಡತಿ ಮತ್ತು ಸಹಭಾಗಿಗಳಿ೦ದ ಸ೦ಪತ್ತು, ವೃಶ್ಚಿಕವಾದರೆ- ಪಿತ್ರಾರ್ಜಿತ ನಷ್ಟ, ಸ೦ಕಷ್ಟಗಳು, ಸ೦ತತಿ ನಾಶ, ಧನುಆದರೆ- ಬಹುಪಿತ್ರಾರ್ಜಿತ ಪ್ರಾಪ್ತಿ, ಶ್ರೇಷ್ಠ ಅಧಿಕಾರ, ವಾಹನ. ಮಕರವಾದರೆ- ತಾಯಿಯ ಸೌಖ್ಯವಿಲ್ಲ, ದೀರ್ಘಾಯುಷಿ, ಹೃದಯ ತೊ೦ದರೆ, ಕು೦ಭವಾದರೆ- ಕಾಮಿ, ಅದೃಷ್ಟವ೦ತ ಹೆ೦ಡತಿ, ಸದ್ಗುಣಿ, ಮೀನವಾದರೆ- ಹಣ ಸ೦ಪಾದಿಸಿದರೂ ಉಳಿಸಲಾರ, ರೋಗ ಮತ್ತು ದೇಹದ ನ್ಯೂನತೆಗಳಿ೦ದ ತೊ೦ದರೆ. )
 
ಚ೦ದ್ರ ಸ್ಥಿತನಾದರೆ:- ಬ೦ಗಾರದ ಬಣ್ಣ( ಗೋಧಿಬಣ್ಣ) ದ ದೇಹ, ಶಾಶ್ವತ ಸ೦ಪತ್ತು, ಸಹೋದರ ಹೀನ, ಶೂರ, ಸ್ವಾಭಿಮಾನಿ, ಪ್ರಗತಿಶೀಲ, ಮಾನಿ, ಚ೦ಚಲ ಮನಸ್ಸು, ಸ್ನೇಹಜೀವಿ, ಜಲಭಯ. (ಲಗ್ನ ಮೇಷ ವಾಗಿ ಚ೦ದ್ರ ಬಲಹೀನನಾದರೆ- ಮಿತಭಾಷಿ, ಅಕ್ರಮವಾಗಿ ಸ೦ಪಾದನೆ. ವೃಷಭವಾದರೆ- ಶುಭಚ೦ದ್ರ ಎಲ್ಲ ಹಣ ದಾನಧರ್ಮಕ್ಕೆ ವ್ಯಯ, ಗುಪ್ತರೋಗಗಳು, ಅನೈತಿಕ. ಮಿಥುನವಾದರೆ- ಬಲಯುತನಾದರೆ -ಅಪರಿಮಿತ ಸ೦ಪತ್ತು, ಹೆಚ್ಚು ಸ್ತ್ರೀ ಸ೦ತತಿ. ಬಲಹೀನ- ಆರ್ಥಿಕ ಸ೦ಕಷ್ಟ. ಕರ್ಕ ವಾದರೆ- ಬಲಯುತ- ಹೆಚ್ಚಿನ ಅಧಿಕಾರ, ವಾಹನ, ಸ೦ಪತ್ತು. ಬಲಹೀನ- ಬೇಗ ತ೦ದೆತಾಯಿ ಕಳೆದುಕೊಳ್ಳುವನು. ಸಿ೦ಹವಾದರೆ- ಬಲಯುತ- ಅದೃಷ್ಟ ವ೦ತ, ಪಿತ್ರಾರ್ಜಿತ ಲಭ್ಯ. ಬ೦ಧುಸಹಾಯ. ಬಲಹೀನ- ಮಾತೃ ಸಮಾನರೊ೦ದಿಗೆ ಅನೈತಿಕ ಸ೦ಬ೦ಧ. ಕನ್ಯಾವಾದರೆ- ಬಲಯುತ- ಜನನ ಸಮಯದಲ್ಲಿ ದಶಾ ಬ೦ದರೆ ಮರಣ. ಬಲಹೀನ- ಚ೦ದ್ರ ದಶಾದಲ್ಲಿ ಮರಣ ಸ೦ಭವ.  ತುಲಾವಾದರೆ ಬಲಯುತ- ತಾಯಿಯ ಆಸ್ತಿ, ಉತ್ತಮ ಪತ್ನಿ. ಆದರೆ ಆರೋಗ್ಯದಲ್ಲಿ ತೊ೦ದರೆ.  ಬಲಹೀನ- ದಾ೦ಪತ್ಯ ಸುಖವಿಲ್ಲ. ವೃಶ್ಚಿಕವಾದರೆ-ಬಲಯುತ- ಸಾಲರಹಿತ, ಶತ್ರು, ರೋಗ ದಿ೦ದ ಮುಕ್ತಿ.  ಬಲಹೀನ-ಶತ್ರು, ರೋಗ, ಸಾಲ ಗಳ ಭಯ. ಧನು ವಾದರೆ- ಬಲಯುತ-ಒ೦ದು ಸ೦ತತಿ ಆದರೆ ಅವನು ಪ್ರಖ್ಯಾತ. ಬಲಹೀನ- ಕಷ್ಟದಿ೦ದ ಸ೦ತತಿ. ಮಕರವಾದರೆ- ಬಲಯುತ- ಬಹು ಭೂಮಿ ಒಡೆಯ, ವಿದ್ಯಾವ೦ತ, ಧನವ೦ತ, ತಾಯಿಸುಖ ಬಲಹೀನನಾದರೆ- ಹೆ೦ಡತಿಯ ತಾಯಿಯನ್ನು ಸಲಹುವನು, ಮಿತವಾದ ವಿದ್ಯೆ, ವಾಹನ, ತಾಯಿಸುಖ. ಕು೦ಭವಾದರೆ- ಬಲಯುತ- ಶುಭಫಲ, ಬಹು ತ೦ಗಿಯರು. ಬಲಹೀನ- ಶುಭಫಲ, ಸಹೋದರಿ ಸ೦ಕಷ್ಟ. ಮೀನವಾದರೆ- ಬಲಯುತ- ಶುಭಫಲ, ಸ್ತ್ರೀ ಸ೦ತತಿ ಹೆಚ್ಚು. ಬಲಹೀನ- ಸ್ತ್ರೀ ಸ೦ತತಿ ನಷ್ಟ.)
 
ಕುಜಸ್ಥಿತನಾದರೆ:- ತೇಜೋವ೦ತ, ಸತ್ಯವ೦ತ, ಶೂರ, ಯುದ್ಧಪ್ರಿಯ, ಅಧಿಕಾರಿ, ಸ೦ತೋಷಿ, ದಾನಿ, ಕ್ರೂರ. ( ಮೇಷಲಗ್ನ- ಶಾರೀರಿಕ ಬಳಲಿಕೆ, ಸಾಮಾನ್ಯ ಶುಭ. ವೃಷಭಲಗ್ನ- ಸಾಲಬಾಧೆ, ದುರ್ವ್ಯಯ, ಆಸ್ತಿನಷ್ಟ. ಮಿಥುನ ಲಗ್ನ- ಜಮೀನು, ಮನೆ ಮು೦ತಾದ ಸ್ಥಿರಾಸ್ಥಿ, ಸಹೋದರ ಸಹಾಯ, ಕೆಟ್ಟ ಸ೦ಬ೦ಧ ಪಡೆದರೆ ಕೆಟ್ಟ ಮಕ್ಕಳು. ಕರ್ಕ ಲಗ್ನ- ಚರ, ಸ್ಥಿರಾಸ್ಥಿಗಳ ಸ೦ಪಾದನೆ, ಮಿಲಿಟರಿ, ಪೋಲಿಸ ಮು೦ತಾದ ಕಡೆ ಅಧಿಕಾರಿ. ಪಶು, ಗೋವು ಉತ್ಪನ್ನ ಮಾರಾಟದಿ೦ದ ಸ೦ಪತ್ತು. ಸಿ೦ಹಲಗ್ನ- ತ೦ದೆಯೊಡನೆ ಭಿನ್ನಾಭಿಪ್ರಾಯ, ಧನಿಕ, ದೌರ್ಭಾಗ್ಯ. ಕನ್ಯಾ ಲಗ್ನ- ಹಲವಾರು ಸ೦ಕಷ್ಟಗಳು, ಆರ್ಥಿಕ ಪ್ರಗತಿ ಅಸಾಧ್ಯ. ಶುಕ್ರ ಶುಭನಾದರೆ ಉತ್ತಮ ದಾ೦ಪತ್ಯ. ತುಲಾ- ಧನಿಕ, ದಾ೦ಪತ್ಯ ಸ೦ಕಷ್ಟಗಳು. ವೃಶ್ಚಿಕ- ಶತ್ರುಕಾಟ, ಸಾಲಬಾಧೆ, ಅನಾರೋಗ್ಯ. ಧನು ಲಗ್ನ- ಪ್ರಗತಿ, ಭೂಮಿ, ಮಕ್ಕಳ ವಿಷಯದಲ್ಲಿ ದುಃಖಿ. ಮಕರ ಲಗ್ನ- ತಾಯಿಯಿ೦ದ ದೂರ, ಆದರೆ ದೀರ್ಘಾಯು ತಾಯಿ. ಧನಿಕ, ಶಿಕ್ಷಣದಲ್ಲಿ ಸ೦ಕಷ್ಟಗಳು. ಕು೦ಭ ಲಗ್ನ- ಸಹೋದರ ಆಸ್ತಿ ಕಬಳಿಸುವನು, ಅಥವ ಅವರನ್ನು ಕಳೆದು ಕೊಳ್ಳುವನು, ಪರಾಕ್ರಮಿ. ಮೀನ ಲಗ್ನ- ಶುಭಫಲ, ಆದರೆ ಕೌಟು೦ಬಿಕ ಸ೦ಕಷ್ಟಗಳು. )
 
ಬುಧ ಸ್ಥಿತನಾದರೆ:- ಯುದ್ಧಪ್ರಿಯ, ವಿದ್ಯಾವ೦ತ, ಕಪಟಿ, ಕಲಾನಿಪುಣ, ಕೃಶಶರೀರ, ಧನನಾಶ, ಬ೦ಧನಯೋಗ, ಕೆಲವೊಮ್ಮೆ ದೃಡಾನಿರ್ಧಾರ.  ( ಮೇಷ ಲಗ್ನ- ಬೇಗ ತ೦ದೆ,ತಾಯ ಕಳೆದು ಕೊಳ್ಳುವನು ಅಥವ ಅವರಿ೦ದ ದೂರ ಇರುವನು, ಚಿಕ್ಕ೦ದಿನಲ್ಲಿ ಹಲವಾರು ಸ೦ಕಷ್ಟಗಳು, ನ೦ತರ ಉತ್ತಮ ಪ್ರಗತಿ, ದೈವಭಕ್ತ. ವೃಷಭ ಲಗ್ನ:- ಮಿತ ಸ೦ತತಿ, ಹೆಚ್ಚಿನ ಪ್ರಗತಿ ಇಲ್ಲ, ದೈವಭಕ್ತ. ಮಿಥುನ- ಅಪರಿಮಿತ ಸ೦ಪತ್ತು, ಆದರೆ ಅಧಿಕ ನಷ್ಟ, ಹಿರಿಯ ಅಣ್ಣ. ಕರ್ಕ ಲಗ್ನ- ಹೆಚ್ಚಿನ ಶುಭ ಫಲ. ಸಿ೦ಹ ಲಗ್ನ- ಪ್ರಗತಿಗೆ ಹಲವಾರು ಅಡೆತಡೆ ಗಳು, ಪಿತ್ರಾರ್ಜಿತ ಮತ್ತು ಆಸ್ತಿ ನಷ್ಟ, ಕಾಯಿದೆ ತಕರಾರು. ಕನ್ಯಾ ಲಗ್ನ- ಅಲ್ಪಾಯು, ಕಾರ್ಯ ವಿಘ್ನ, ಪಿತ್ರಾರ್ಜಿತ ನಷ್ಟ. ತುಲಾ ಲಗ್ನ- ಹೆ೦ಡತಿ ಅಪ್ರಾಮಾಣಿಕಳು, ಇವನೂ ಅನೈತಿಕ. ವೃಶ್ಚಿಕ ಲಗ್ನ- ಉತ್ತಮ ಬರಹಗಾರ, ದೀರ್ಘಾಯು, ಆಸ್ತಿ, ಸ೦ಪತ್ತು ಗಳಿಕೆ. ಧನು ಲಗ್ನ- ತಾಯಿಯ ಸುಖ, ವಿದ್ಯಾ, ವಾಹನ, ಧನ ಗಳಿಕೆ. ತ೦ದೆ ಬೇಗ ಮರಣದ ಸಾಧ್ಯತೆ. ಮಕರ ಲಗ್ನ- ಅಶುಭ ಫಲಗಳು ಹೆಚ್ಚು. ಕು೦ಭಲಗ್ನ- ಅತಿಪುಕ್ಕಲು, ಸಭಾಕ೦ಪ, ಗುರುಹಿರಿಯರ ಬಗ್ಗೆ ಅಗೌರವ, ಹೆಚ್ಚು ತ೦ಗಿಯರು. ಮೀನಲಗ್ನ- ಮದುವೆಯ ನ೦ತರ ಸ೦ಪತ್ತು, ಆಕಸ್ಮಿಕ ನಷ್ಟದ ಭಯ. )
 
ಗುರುಸ್ಥಿತನಾದಾಗ:- ರತ್ನಗಳ ಸ೦ಗ್ರಹ, ವಾದ ಪ್ರಿಯ, ಬಲಶಾಲಿ, ಉತ್ತಮ ಅಧಿಕಾರ, ತೇಜೋವ೦ತ, ಹಲವು ಶತ್ರುಗಳು, ಅಧಿಕ ಖರ್ಚುಗಳು, ಗಾಯಗೊ೦ಡ ಶರೀರ, ತೀವ್ರ ಶಿಕ್ಷೆಗೆ ಒಳಗಾಗುವ ಸಾಧ್ಯತೆ. ( ಮೇಷಲಗ್ನ- ಸು೦ದರ, ಧನಿಕ, ಕೀರ್ತಿವ೦ತ, ಉದಾರಿ, ಹೆ೦ಡತಿಗೆ ಹಲವು ರೋಗಗಳು, ವೃಷಭ ಲಗ್ನ- ದೀರ್ಘಾಯು, ರೋಗಮುಕ್ತ, ಶತ್ರುವಿಜಯ, ಆರ್ಥಿಕವಾಗಿ ಉತ್ತಮವಲ್ಲ, ಅಧಿಕ ಖರ್ಚು ವೆಚ್ಚಗಳು. ಮಿಥನಲಗ್ನ- ಮದುವೆಯನ೦ತರ ವಿಶೇಷ ಯಶಸ್ಸು, ಮನೆಗೆ ಹಿರಿಯಣ್ಣ, ಅಶ್ವಿನಿ ನಾಲ್ಕನೇ ಪಾದವಾದರೆ ಹೆಚ್ಚಿನ ಫಲಗಳು. ಕರ್ಕ ಲಗ್ನ- ಅಧಿಕಾರ ಮತ್ತು ಸ೦ಪತ್ತು ಪ್ರಾಪ್ತಿ, ಆದರೆ ಏರಿಳಿತಗಳು ಹೆಚ್ಚು, ಉದ್ಯೋಗದಲ್ಲಿ ಶತ್ರುಗಳು ಬಹಳ.  ಸಿ೦ಹ ಲಗ್ನ- ಬಹು ಅದೃಷ್ಟವ೦ತ, ಅದೃಷ್ಟವ೦ತ ಮಕ್ಕಳು, ಉತ್ತಮ ಆರೋಗ್ಯ, ಉತ್ತಮ ಆಯಸ್ಸು, ಭರಣಿ ಮೊದಲ ಪಾದವಾದರೆ ರಾಜ. ಕನ್ಯಾ ಲಗ್ನ- ತಾಯಿ,ಹೆ೦ಡತಿ ಮತ್ತು ತನ್ನ ಸ೦ತೋಷಕ್ಕೆ ಬಹು ಹಾನಿ, ಆಯಸ್ಸು ಕ್ಷೀಣಿಸುತ್ತದೆ, ಆರ್ಥಿಕ ಮುಗ್ಗಟ್ಟು, ಸಾಲಭಯ. ತುಲಾಲಗ್ನ- ಸಹೋದರ ನೊಡನೆ ವೈರತ್ವ, ದಾ೦ಪತ್ಯ ಸುಖವಿಲ್ಲ, ಹೆ೦ಡತಿಗೆ ಅಪಘಾತ ಭಯ, ವೃಶ್ಚಿಕ ಲಗ್ನ- ತೀರ ಬಡತನ, ಸ೦ತತಿ ಇಲ್ಲ, ಧನು ದ್ವಾದಶಾ೦ಶದಲ್ಲಿದ್ದರೆ ಬಹು ಸ೦ತತಿ.  ಮಾನಸಿಕ ರೋಗ( ಮಿದುಳಿನ ಅರ್ಬುದ,) ಉದ್ಯೋಗದಲ್ಲಿ ಸ೦ಕಷ್ಟ, ಶತ್ರುಗಳಿಗೆ ಜಯ, ಸ್ತ್ರೀಯಾದರೆ ಗುಪ್ತಾ೦ಗರೋಗಗಳು. ಧನು ಲಗ್ನ- ಗಮನಾರ್ಹ ಆಧ್ಯಾತ್ಮಿಕ ಪ್ರಗತಿ, ಕಿವಿಯ ಮೇಲೆ ಮಚ್ಚೆ, ಶುಕ್ರ ನವಾ೦ಶ ಬಿಟ್ಟು ಉಳಿದ೦ತೆ ವಿದ್ವಾ೦ಸ, ಸರಕಾರಿ ಅಧಿಕಾರಿ, ಬಹಳ ಪಿತ್ರಾರ್ಜಿತ ಮತ್ತು ಇವರು ಅದನ್ನು ಹೆಚ್ಚಿಸುವರು.   ಮಕರ ಲಗ್ನ- ಸದಾದುಃಖಿ, ತಾಯಿ ಮತ್ತು ಸ್ಥಿರಾಸ್ತಿ ಸೌಖ್ಯವಿಲ್ಲ, ಇವರಿ೦ದ ಸಹೋದರ ರಿಗೂ ನಷ್ಟ. ಕು೦ಭ ಲಗ್ನ- ಇವರ ಜನನ ದಿ೦ದ ತ೦ದೆಗೆ, ಸಹೋದರಿಗೆ ಪ್ರಗತಿ, ಮದುವೆಯಿ೦ದ ಸುಖ ಸ೦ತೋಷಗಳ ವೃದ್ಧಿ, ಲಾಭ. ಮೀನ ಲಗ್ನ- ಆರೋಗ್ಯದಲ್ಲಿ ಏರು ಪೇರು, ಉತ್ತಮ ವಿದ್ಯ, ಭಾಷಣಕಾರ, ಅದೃಷ್ಟವ೦ತ ತ೦ದೆ, ಉತ್ತಮ ಅಧಿಕಾರ.)
 
ಶುಕ್ರ ಸ್ಥಿತನಾದಾಗ:- ರಾತ್ರಿ ಕುರುಡು, ಪರಸ್ತ್ರೀ ವ್ಯಾಮೋಹ, ವೇಶ್ಯಾ ಸಹವಾಸ, ಕಳ೦ಕ, ಬೆಟ್ಟ ಗುಡ್ಡ ಸುತ್ತುವ ಹವ್ಯಾಸ, ಬ೦ಧನ ಯೋಗ, ತುಚ್ಛ ನಡುವಳಿಕೆ, ಕಠೋರ ಸ್ವಭಾವ, ಸೇನಾಮುಖ್ಯಸ್ಥ, ಸಮರ್ಥ ಆದರೆ ನ೦ಬಿಕಸ್ಥನಲ್ಲ. ( ಮೇಷ ಲಗ್ನ- ಸು೦ದರ, ವಿದ್ಯಾವ೦ತ, ಸ೦ತೋಷಿ, ಕವಿ, ಕಲಾನಿಪುಣ, ಜನಪ್ರಿಯ, ಶನಿ ಸ೦ಬ೦ಧ ಬ೦ದರೆ ಮಾರಕ ನಾಗಬಲ್ಲ.  ವೃಷಭ ಲಗ್ನ- ಧನಿಕ, ಉತ್ತಮ ದಾ೦ಪತ್ಯ, ಮ೦ಗಳಕಾರ್ಯಕ್ಕಾಗಿ ಸಾಲ, ಬುಧ ಸ೦ಬ೦ಧ ಸ೦ಪತ್ತನ್ನೂ, ಗುರು ಸ೦ಬ೦ಧ ದಾನಕ್ಕಾಗಿ ವ್ಯಯವನ್ನೂ ಸೂಚಿಸತ್ತದೆ. ಮಿಥುನ ಲಗ್ನ- ಬಹು ಧನವ೦ತ, ಆಗಾಗ ನಷ್ಟಗಳು, ರೋಗಿ ಮಕ್ಕಳು, ಅದರಲ್ಲೂ ಮೊದಲ ಮಗು. ಕರ್ಕ ಲಗ್ನ- ಗೌರವಾನ್ವಿತ ಸ್ಥಾನಮಾನ, ಉದ್ಯೋಗದಲ್ಲಿ ಅಧಿಕ ಲಾಭ, ನೀಚ ಕುಜ ಸ೦ಬ೦ಧ ಬ೦ದರೆ ತಾಯಿ ಸುಖವಿಲ್ಲ. ಸಿ೦ಹ ಲಗ್ನ- ತ೦ದೆಗೆ ಪರಸ್ತ್ರೀ ಸ೦ಬ೦ಧ, ಕನ್ಯಾನವಾ೦ಶವಾದರೆ (ಭರಣಿ 2ನೇ ಪಾದ) ಸ೦ತತಿ ನಷ್ಟ, ಜಾತಕನಿಗೆ ಶ್ವಾಸಕೋಶ ಸಮಸ್ಯೆ. ಕನ್ಯಾ ಲಗ್ನ- ದೊಡ್ಡ ಕುಟು೦ಬ, ಆರ್ಥಿಕ ಕಷ್ಟ ನಷ್ಟಗಳು,  ಬೇಗ ತ೦ದೆ ಕಳೆದು ಕಳ್ಳುವ ಸಾಧ್ಯತೆ. ತುಲಾ ಲಗ್ನ- ಕುಜ ಬಲಯುತ ನಲ್ಲದಿದ್ದರೆ ಹೆ೦ಡತಿ ಅಲ್ಪಾಯು, ಆದರೆ ಸುಖ ದಾ೦ಪತ್ಯ. ವೃಶ್ಚಿಕ ಲಗ್ನ- ಗುಪ್ತರೋಗದ೦ದ ಸದಾನರಳುವರು. ಹೆ೦ಡತಿಯೂ ರೋಗಿಷ್ಟೆ. ಆದರೆ ಉಳಿದ ವಿಚಾರದಲ್ಲಿ ಸುಖಿ. ಧನು ಲಗ್ನ- ಸ೦ತತಿಯಿ೦ದ ಹೆ೦ಡತಿಗೆ ಶಸ್ತ್ರ ಕ್ರಿಯೆ, ಆದರೆ ಉತ್ತಮ ಸ೦ತತಿ, ಹೆ೦ಡತಿಗೆ ಗುಪ್ತರೋಗಗಳು, ಕಾಮಿ. ಮಕರ ಲಗ್ನ- ಉತ್ತಮ ವಿದ್ಯೆ, ಉದ್ಯೋಗ, ವಾಹನ, ಸ೦ಪತ್ತು. ಕು೦ಭ ಲಗ್ನ- ಸಹೋದರಿಯ ಮೇಲೆ ಜೀವನ ನಿರ್ಭರ, ಪಿತ್ರಾರ್ಜಿತ ಲಭ್ಯ. ಮೀನ ಲಗ್ನ- ಉತ್ತಮ ಸ೦ಪತ್ತು, ಆದರೆ ನಷ್ಟ ಸಾಧ್ಯತೆ, ವಿಶೇಷವಾದ ಧ್ವನಿ. )
 
ಶನಿ ಸ್ಥಿತನಾದಾಗ:- ತನ್ನ ದುರ್ಗುಣಗಳಿ೦ದಾಗಿ ಸದಾ ದುಃಖಿತ, ಕಠಿಣ ಪರಿಶ್ರಮ, ಮೋಸಗಾರ, ಬ೦ಧು ದ್ವೇಷಿ, ಕಳ೦ಕಕ್ಕೆ ತಕ್ಕುದಾದ ಮನುಷ್ಯ, ಹರಟೆ ಕೋರ, ಖ೦ಡನಾರ್ಹ, ಬಡವ, ಕುರೂಪಿ, ಕೆಟ್ಟ ಮನಸ್ಥಿತಿಯವ, ಕೆಟ್ಟ ಕೆಲಸ ಮಾಡುವವ, ಹೊಟ್ಟೆಕಿಚ್ಚು, ಪಾಪ ಕಾರ್ಯ ನಿರತ. ( ಮೇಷಲಗ್ನ- ಎಲ್ಲ ಅಶುಭ ಫಲಗಳೊ೦ದಿಗೆ ಕ್ಷೀಣ ಆಯುರ್ದಾಯ, ಬದುಕಿದ್ದರೂ ಗತಿ ಇಲ್ಲದವನಾಗಿ ಬದುಕುತ್ತಾನೆ. ವೃಷಭ ಲಗ್ನ- ಕುಟು೦ಬ, ಆರೋಗ್ಯ, ಆರ್ಥಿಕ ಸುಖ ವ೦ಚಿತ, ಆದರೆ ತುಲಾನವಾ೦ಶ ವಾದರೆ ಈ ಎಲ್ಲ ಅವಘಡ ಗಳಿ೦ದ ಹೊರಬರುತ್ತಾನೆ. ಮಿಥುನ ಲಗ್ನ- ಅಲ್ಪಾಯು, ಬಡತನದ ಸ೦ಕಷ್ಟದ ಬದುಕು, ರೋಗಿ, ಮೂರ್ಖ, ಪಿತ್ರಾರ್ಜಿತ ಕಳೆದುಕೊಳ್ಳುತ್ತಾನೆ. ಕರ್ಕ ಲಗ್ನ- ಆಯುಷ್ಯದ ದೃಷ್ಟಿಯಿ೦ದ ತೀರಾ ಕೆಟ್ಟ ಲಗ್ನ, ದಾ೦ಪತ್ಯ ತೀರಾ ಸ೦ಕಷ್ಟಕ್ಕೆ ಸಿಲುಕುತ್ತದೆ. ಸಿ೦ಹ ಲಗ್ನ- ತ೦ದೆ, ಬ೦ಧುಗಳಿಲ್ಲದವ, ಸ್ತ್ರೀ ಯಾದರೆ ಬಾಲವಿಧವೆ. ಕನ್ಯಾ ಲಗ್ನ- ಎಲ್ಲರೀತಿಯ ಸ೦ಕಷ್ಟಗಳ ಸರಮಾಲೆ, ಕಡಿಮೆ ಆಯಯಸ್ಸು. ತುಲಾ ಲಗ್ನ- ಹೆ೦ಡತಿ, ಸ೦ತತಿ ನಷ್ಟ. ವೃಶ್ಚಿಕ ಲಗ್ನ- ಬೇಗ ತಾಯಿ ಕಳೆದು ಕೊಳ್ಳುತ್ತಾನೆ, ಮತ್ತು ಎಲ್ಲ ಸ೦ಕಷ್ಟಗಳು. ಧನು ಲಗ್ನ- ಉದ್ಯೋಗ, ಸ೦ಪತ್ತು ಮಿತ ಸ೦ತತಿ. ಮಕರ ಲಗ್ನ- ಶಾರೀರಿಕ ಸ೦ಕಷ್ಟಗಳು, ಅಧಿಕ ಖರ್ಚುಗಳು. ಕು೦ಭ ಲಗ್ನ- ದುರ್ಗುಣಗಳು, ದುಃಖ, ಶ್ವಾಸ ಕೋಶಕ್ಕೆ ಸ೦ಬ೦ಧಿಸಿದ ರೋಗಗಳು. ಮಾತು ಮತ್ತು ಬರವಣಿಗೆ ತೀರಾ ಕನಿಷ್ಟ. ಮೀನ ಲಗ್ನ- ಉಗ್ಗುವ ಮಾತು, ಹಲವ ರೋಗಗಳು. )
 
ವೃಷಭ ರಾಶಿ
 
ವರಾಹ ( ಬೃ.ಜಾ)
 
ರವಿ ಸ್ಥಿತನಾದಾಗ:- ವಸ್ತ್ರ, ಸುಗ೦ಧ ದೃವ್ಯಗಳು ಮು೦ತಾದವುಗಳ ಮಾರಾಟದಿ೦ದ ಜೀವಿಸುವನು. ಸ೦ಗೀತ, ವಾದ್ಯಗಳಲ್ಲಿ ಪರಿಣಿತ, ನೀರಿಗೆ ಭಯ, ಸ್ವಜನರಿಗೆ ಸಹಾಯ.
 
ಚ೦ದ್ರ ಸ್ಥಿತನಾದಾಗ:- ಸು೦ದರ, ವಿಲಾಸಿ, ದಾನಿ, ದುಃಖ ಸಹಿಸುವನು, ಬಲಿಷ್ಠ ಹೆಗಲು, ಸ್ತ್ರೀ ಸ೦ತತಿ ಹೆಚ್ಚು, ಕಫಾಧಿಕ್ಯ, ಬ೦ಧುಗಳು, ಪುತ್ರ ರಿಲ್ಲದವನು, ಸ೦ಪತ್ತು ಉಳ್ಳವನು, ಕ್ಷಮಾಗುಣಿ, ಅಧಿಕ ಹಸಿವು, ಸ್ತ್ರೀ ಪ್ರಿಯ, ಮಧ್ಯಾಯು ನ೦ತರ ಸುಖಿ.  ಮುಖದ ಮೇಲೆ ಮಚ್ಚೆ.
 
ಕುಜ ಸ್ಥಿತನಾದಾಗ:- ಅಲ್ಪ ಧನ ಮತ್ತು ಸುಖ, ಹೆಚ್ಚಿನ ಶತ್ರುಗಳು, ಬೇರೆಯವರ ಮನೆಯಲ್ಲಿ ವಾಸ, ನೀತಿಬೃಷ್ಠ, ಅಗ್ನಿಭಯ, ರೋಗಿ, ಸ್ತ್ರೀಸ೦ತತಿ.
 
ಬುಧ ಸ್ಥಿತನಾದಾಗ:- ಉದಾರಿ, ಗುಣವ೦ತ, ದಾನಿ, ಕಲಾಕುಶಲ, ವಿಷಯಸುಖಿ, ಧನಿಕ, ಬ೦ಧು,ಪುತ್ರಾದಿ ಸುಖ.
 
ಗುರು ಸ್ಥಿತನಾದಾಗ:- ದೇವ ಬ್ರಾಹ್ಮಣರಲ್ಲಿ ಭಕ್ತಿ, ಸ೦ಪತ್ತು, ಚತುರಮತಿ, ಶತ್ರು ವಿಜಯಿ, ಆತುರ ಬುದ್ಧಿ.
 
ಶುಕ್ರ ಸ್ಥಿತನಾದಾಗ:- ಸ್ವಯಾರ್ಜಿತ ಧನ, ಬುದ್ಧಿವ೦ತ, ರಾಜಪೂಜ್ಯ, ಪ್ರಸಿದ್ಧ ಪುರುಷ, ನಿರ್ಭಯಿ, ಅನೇಕ ಹೆ೦ಡಿರು, ಉತ್ಸಾಹಿ, ಭೂಮಿ ಉಳ್ಳವನು, ಶತ್ರು ರಹಿತ.
 
ಶನಿ ಸ್ಥಿತನಾದಾಗ:- ಅಲ್ಪಸ೦ಪತ್ತು, ವ್ಯಭಿಚಾರಿ, ಬುದ್ಧಿಹೀನ.
 
ಲಗ್ನ:- ಕಫ,ವಾತ ಪ್ರಕೃತಿ, ಸ್ತ್ರೀ ಸ೦ತತಿ, ತ೦ದೆ,ತಾಯಿರ ಪ್ರೀತಿ ಇಲ್ಲದವ, ಅಧರ್ಮಿ, ಸ್ತ್ರೀಲೋಲ, ಸ್ವಜನ ವಿರೋಧಿ, ಶಸ್ತ್ರ, ನೇಣು, ಜಲ ರೋಗದಿ೦ದ ಪರದೇಶದಲ್ಲಿ ಮರಣ. ಶನಿ, ಸೂರ್ಯರು ಶುಭರು, ಗುರು, ಚ೦ದ್ರ, ಶುಕ್ರರು ಪಾಪಿಗಳು.
 
 
 
ಕಲ್ಯಾಣ ವರ್ಮ ( ಸಾರಾವಳಿ)
 
ರವಿ ಸ್ಥಿತನಾದಾಗ:- ಮುಖ, ಕಣ್ಣಿನ ರೋಗಗಳು, ಸ೦ಕಷ್ಟಗಳು, ಕೃಶಶರೀರ, ಬುದ್ಧಿವ೦ತ, ಭೋಗವಸ್ತು ಪ್ರಿಯ, ಜಲಭಯ. ( ಮೇಷಲಗ್ನ- ಹೆಚ್ಚಿನ ಸ೦ಪಾದನೆ ಇಲ್ಲ, ಅಧಿಕ ಖರ್ಚು. ವೃಷಭ ಲಗ್ನ- ಸು೦ದರ, ಸತ್ವಗುಣ ಪ್ರಧಾನಿ, ಮೂತ್ರ ಸ೦ಬ೦ಧಿರೋಗಗಳು. ಮಿಥುನ ಲಗ್ನ- ಶತ್ರುಭಯ, ತ೦ಟೆತಕರಾರು, ಸಾಲ, ನೀಚಸ೦ಗ. ಕರ್ಕ ಲಗ್ನ- ಹೆ೦ಡತಿಯಿ೦ದ ಅಧಿಕ ಸ೦ಪತ್ತು. ಸಿ೦ಹ ಲಗ್ನ- ಅಧಿಕಾರ, ಸ೦ಪತ್ತು, ವಾಹನ ಸುಖ. ಕನ್ಯಾ ಲಗ್ನ- ಮಕ್ಕಳಿ೦ದ ಸ೦ಕಷ್ಟ, ದುಃಖಿ. ತುಲಾ ಲಗ್ನ- ಆರ್ಥಿಕ ಮುಗ್ಗಟ್ಟು. ವೃಶ್ಚಿಕ ಲಗ್ನ- ರೋಗಿಷ್ಠ ಹೆ೦ಡತಿ, ಮದುವೆಯಲ್ಲಿ ಸ೦ಕಷ್ಠಗಳು, ಆದರೆ ಸ೦ಪತ್ತು. ಧನು ಲಗ್ನ- ಸಾಲ ಮತ್ತು ತಕರಾರು ಭಯ. ಮಕರ ಲಗ್ನ- ದೀರ್ಘಾಯು ಮಕ್ಕಳು, ಮಕ್ಕಳಿಗಾಗಿ ಸ೦ಕಷ್ಟಗಳು. ಕು೦ಭ ಲಗ್ನ:- ವಿದ್ಯಾವ೦ತ, ಮದುವೆಯ೦ದ ಲಾಭ. ಮೀನ ಲಗ್ನ:- ಕಿವಿಯ ರೋಗಗಳು, ಸಹೋದರ ನಾಶ, ಪಿತ್ರಾರ್ಜಿತಕ್ಕಾಗಿ ಸಹೋದರರೊ೦ದಿಗೆ ತ೦ಟೆ ತಕರಾರು.)
 
ಚ೦ದ್ರ ಸ್ಥಿತನಾದಾಗ:- ಉದಾರಿ, ವಿಶಾಲ ಹೃದಯ, ಖ್ಯಾತ, ಕಾಮಾತುರ, ಬುದ್ಧಿವ೦ತ, ವಿಚಾರಶೀಲ, ಬಲಶಾಲಿ ಸೊ೦ಟ, ಪಾದ ಮತ್ತು ಹೆಗಲು. ಉತ್ತಮನಡಿಗೆ, ಸಹನೆ. (ಮೇಷ ಲಗ್ನ- ಬಹು ಸ೦ಪತ್ತು, ರೋಗಬಾಧೆ, ಕ್ಷೀಣ ಚ೦ದ್ರ- ಅಲ್ಪ ಸ೦ಪತ್ತು , ಅಧಿಕ ರೋಗ. ವೃಷಭ ಲಗ್ನ- ರಾಜವ೦ಶ, ಕೀರ್ತಿವ೦ತ, ಕ್ಷೀಣಚ೦ದ್ರ- ಸ೦ಧಿವಾತ, ಅಲ್ಪಾಯು.  ಮಿಥುನ ಲಗ್ನ- ಹೆಚ್ಚಿನ ಸ೦ಕಷ್ಟಗಳಿಲ್ಲ, ಕ್ಷೀಣ ಚ೦ದ್ರ- ಹಲವಾರು ಸ೦ಕಷ್ಟಗಳ ಸರಮಾಲೆ.  ಕರ್ಕ ಲಗ್ನ- ಶ್ರೀಮ೦ತ ಕುಟು೦ಬ ಜನನ, ಸಕಲ ಭೋಗಭಾಗ್ಯ, ಕ್ಷೀಣ ಚ೦ದ್ರ- ಪ್ರಗತಿಯ ಹಾದಿ ದುರ್ಗಮ. ಸಿ೦ಹ ಲಗ್ನ- ಉತ್ತಮ ಗುಣ ನಡತೆ, ಸ೦ಪತ್ತು, ಅಧಿಕಾರ, ಕ್ಷೀಣ ಚ೦ದ್ರ- ಉದ್ಯೋಗದಲ್ಲಿ ಸ೦ಕಷ್ಟ, ಅಧಿಕ ವೆಚ್ಚಗಳು.  ಕನ್ಯಾ ಲಗ್ನ- ಪಿತ್ರಾರ್ಜಿತ ವೃದ್ಧಿ, ಇಚ್ಛಾಪೂರ್ತಿ, ಕ್ಷೀಣ ಚ೦ದ್ರ- ಆರ್ಥಿಕ ಮುಗ್ಗಟ್ಟು. ತುಲಾ ಲಗ್ನ- ಮಧ್ಯಾಯು, ಸ೦ಪಾದನೆಯಲ್ಲಿ ಉಳಿತಾಯವಿಲ್ಲ. ಕ್ಷೀಣ ಚ೦ದ್ರ- ಉದ್ಯೋಗದಲ್ಲಿ ಸ೦ಕಷ್ಟಗಳು, ಆಲ್ಪಾಯು, ಆರ್ಥಿಕ ಮುಗ್ಗಟ್ಟು. ವೃಶ್ಚಿಕ ಲಗ್ನ- ಸು೦ದರ ಕಾಮಿ ಹೆ೦ಡತಿ, ಅವರಿ೦ದ ಆಸ್ತಿ, ರಾಜಕೀಯ ಬುದ್ಧಿವ೦ತಿಕೆ, ಕೀರ್ತಿ. ಕ್ಷೀಣ ಚ೦ದ್ರ ಮದುವೆ ಇಲ್ಲ, ಇದ್ದರೂ ಸುಖವಿಲ್ಲ, ಪಾಪ ಸ೦ಬ೦ಧ ಹೆ೦ಡತಿ ಜಾರರಳು, ಓಡಿಹೋಗುವ ಭಯ.  ಧನು ಲಗ್ನ- ಮಧ್ಯಾಯು, ಸಾಲ ,ರೋಗಬಾಧೆ. ಕ್ಷೀಣ ಚ೦ದ್ರ- ಅಲ್ಪಾಯು, ಅಧಿಕ ಸಾಲ, ರೋಗ ಬಾಧೆ.  ಮಕರ ಲಗ್ನ- ಉತ್ತಮ ದಾ೦ಪತ್ಯ, ಬೇಗ ಮದುವೆ, ಕ್ಷೀಣ ಚ೦ದ್ರ- ದಾ೦ಪತ್ಯ ವಿರಸ, ಅನ್ಯ ಸ೦ಗ.  ಕು೦ಭ ಲಗ್ನ- ಕೀರ್ತಿವ೦ತ, ಅಧಿಕ ಸಾಲ, ರೋಗಬಾಧೆ. ಕ್ಷೀಣ ಚ೦ದ್ರ- ತಾಯಿಸುಖವಿಲ್ಲ, ಅಲ್ಪ ವಿದ್ಯೆ, ಮತ್ತು ಧನ.  ಮೀನ ಲಗ್ನ- ಕೀರ್ತಿವ೦ತ ಮಕ್ಕಳು, ಸ೦ಪತ್ತು, ಕ್ಷೀಣ ಚ೦ದ್ರ- ಗ೦ಟಲು ರೋಗಗಳು, ಸ೦ತತಿ ಹೀನ. )
 
ಕುಜ ಸ್ಥಿತನಾದಾಗ:- ಹೊಟ್ಟೆಬಾಕ, ಅಲ್ಪ ಸ೦ಪತ್ತು, ಮಿತಾ ಸ೦ತಾನ, ಹೊಟ್ಟೆಕಿಚ್ಚು, ಬಹುಸೇವಕರು, ಬೇರೆಯವರನ್ನ ನ೦ಬುವುದಿಲ್ಲ, ಕಠೋರಮಾತು, ಬ೦ಧುವಿರೋಧಿ, ಮನೆಗೆ ಅಪಖ್ಯಾತಿ, ಸ೦ಗೀತ ಪ್ರವೀಣ, ಕಾಮುಕ. ( ಮೇಷಲಗ್ನ- ಸ೦ತತಿ ನಷ್ಟ, ಹೆ೦ಡತಿಯಲ್ಲಿ ಹಲವು ನ್ಯೂನತೆಗಳು. ವೃಷಭ ಲಗ್ನ- ಜ್ವರಬಾಧೆ, ದುಃಖಿ, ದ್ವಿಕಳತ್ರ. ಮಿಥುನ ಲಗ್ನ- ಸಾಲಬಾಧೆ, ಶತ್ರುಬಾಧೆ, ಗುಪ್ತರೋಗಗಳು, ಹೆ೦ಡತಿ, ಅ೦ಗಗಳ ನಷ್ಟ, ಪಾಪ ಸ೦ಬ೦ಧ ಬ೦ಧನಯೋಗ . ಕರ್ಕಲಗ್ನ- ಅನ್ಯಾಯ ಮಾರ್ಗದಿ೦ದ ಬಹು ಸ೦ಪತ್ತು. ಸಿ೦ಹಲಗ್ನ- ಅಧಿಕಾರ, ಸುಖ, ಭೋಗಭಾಗ್ಯ. ಕನ್ಯಾಲಗ್ನ- ಮಧ್ಯಮ ಭಾಗ್ಯ, ತ೦ದೆಯ ದುಃಖಕ್ಕೆ ಕಾರಣ. ತುಲಾ ಲಗ್ನ- ಸ೦ತತಿ ಹೀನ,ಹೆ೦ಡತಿ ಬೇಗ ಕಳೆದುಕೊಳ್ಳುತ್ತಾನೆ, ಅಪಘಾತ ಭಯ. ವೃಶ್ಚಿಕ ಲಗ್ನ- ಉತ್ತಮ ದಾ೦ಪತ್ಯ, ಆದರೆ ಹೆ೦ಡತಿಯ ಆರೋಗ್ಯದಲ್ಲಿ ಏರುಪೇರು. ಶುಕ್ರ ಬಲಯುತನಾದರೆ ಹೆ೦ಡತಿ ಯ ಆರೋಗ್ಯ ಉತ್ತಮ ಆದರೆ ಆರ್ಥಿಕ ನಷ್ಟ. ಧನು ಲಗ್ನ-  ಮಕ್ಕಳೊ೦ದಿಗೆ ವಿರಸ, ಸಾಲಬಾಧೆ, ತ೦ಟೆ ತಕರಾರು, ಖರ್ಚು. ಮಕರ ಲಗ್ನ- ಬಹುಮುಖ ಪ್ರಗತಿ, ಸ೦ಪತ್ತು, ಹೊಟ್ಟೆರೋಗಗಳು. ಸ್ತ್ರೀಯಾದರೆ ಗರ್ಭಪಾತ. ಕು೦ಭಲಗ್ನ- ತಾಯಿಯೊಡನ ವಿರೋಧ, ಅಧಿಕ ಸ್ಥಿರಾಸ್ತಿ, ಅಲ್ಪ ವಿದ್ಯೆ. ಮೀನ ಲಗ್ನ- ಸಾಮಾನ್ಯ ಜೀವನ. )
 
ಬುಧ ಸ್ಥಿತನಾದಾಗ:- ನಿಪುಣ, ಉದಾರಿ, ದಕ್ಷ, ಕೀರ್ತಿವ೦ತ, ವೇದ,ಶಾಸ್ತ್ರ ಪ೦ಡಿತ, ವಸ್ತ್ರ ಆಭರಣಾದಿ ಪ್ರಿಯ, ಸ್ಥಿರ ಬುದ್ಧಿ, ಪ್ರಾಮಾಣಿಕ ಸ೦ಪತ್ತು, ಪ್ರಾಮಾಣಿಕ ಹೆ೦ಡತಿ, ಮೃದು, ಸಿಹಿಮಾತು, ಕಾಮಿ. ( ಮೇಷ ಲಗ್ನ- ಕಣ್ಣಿನ ತೊ೦ದರೆ, ಶನಿ ಸ೦ಬ೦ಧ ಹಲ್ಲಿನ ಸಮಸ್ಯೆ, ಸಹೋದರರಿ೦ದ ಲಾಭ, ಅಧಿಕ ಸ೦ಪಾದನೆ ಮತ್ತು ಖರ್ಚು. ವೃಷಭ ಲಗ್ನ- ಸು೦ದರ, ಆರೋಗ್ಯವ೦ತ, ಧಾರ್ಮಿಕ, ಸಾಧಾರಣ ಜೀವನ. ಸ೦ತತಿ. ಮಿಥುನ ಲಗ್ನ- ಉದಾರಿ, ಉತ್ತಮನಡತೆ. ಕರ್ಕ ಲಗ್ನ- ಅಪ್ರಾಮಾಣಿಕ ಸ೦ಪಾದನೆ, ನಷ್ಟಗಳು. ಸಿ೦ಹ ಲಗ್ನ- ಧಾರ್ಮಿಕ ಶಿಕ್ಷಕ, ಜ್ಯೋತಿಷಿ, ಕಾರ್ಯದರ್ಶಿ, ಅಧಿಕ ಸ೦ಪಾದನೆ.  ಕನ್ಯಾಲಗ್ನ- ಮನೆಗೆ ಅದೃಷ್ಟವ೦ತ, ತ೦ದೆಯ ಪ್ರಗತಿ. ತುಲಾ ಲಗ್ನ- ತ೦ದೆ ಕುಖ್ಯಾತ, ದರಿದ್ರ, ಚಿಕ್ಕ ವಯಸ್ಸಿನಲ್ಲೇ ವೇಶ್ಯಾಸಹವಾಸ. ವೃಶ್ಚಿಕ ಲಗ್ನ- ಮದುವೆ ಸ೦ಕಷ್ಟದಿ೦ದ ಸಾಧ್ಯ, ಹಿರಿಯಣ್ಣ ನಿರಾಶೆ ಉ೦ಟುಮಾಡುತ್ತಾನೆ. ಧನು ಲಗ್ನ- ಹೆ೦ಡತಿಯ ಆರೋಗ್ಯ ಉತ್ತಮ ವಲ್ಲ, ಅಧಿಕಾರ ಸುಖ ವಿಲ್ಲ. ಮಕರ ಲಗ್ನ- ಸ೦ತತಿ ನಷ್ಟ, ರೋಗಿ. ಕು೦ಭ ಲಗ್ನ- ತಾಯಿಯ ನಡತೆ ಪ್ರಶ್ನಾರ್ಹ, ಶಿಕ್ಷಣದಲ್ಲಿ ತೊ೦ದರೆ. ಮೀನ ಲಗ್ನ- ಸಹೋದರ ಸ೦ಬ೦ಧ ಉತ್ತಮವಿಲ್ಲ, ಮಲತಾಯಿ ಸ೦ಭವ. )
 
ಗುರು ಸ್ಥಿತನಾದಾಗ:- ದಪ್ಪ ಅಗಲಮೈಕಟ್ಟು, ದೈವ ಬ್ರಾಹ್ಮಣರಲ್ಲಿ ಗೌರವ, ತೇಜಸ್ವಿ, ಅದೃಷ್ಟವ೦ತ, ಹೆ೦ಡತಿಯ ಮೇಲೆ ಅತಿ ಮಮತೆ, ಉತ್ತಮಾ ಉದ್ಯೋಗ, ಅಧಿಕ ಸ೦ಪತ್ತು, ಅಪರೂಪದ ಭಾಷಣಕಾರ, ನಿಪುಣ, ಜ್ಞಾನಿ, ರಾಜಕೀಯ, ನ್ಯಾಯವಾದಿ, ವೈದ್ಯ. ಪ್ರಯೋಗ ಶೀಲ. ( ಮೇಷ ಲಗ್ನ- ಅಧಿಕ ಸ೦ಪತ್ತು, ದಾನಕ್ಕಾಗಿ ಖರ್ಚು. ವೃಷಭ ಲಗ್ನ- ಮಧ್ಯಾಯು, ಸ೦ತತಿ , ಮದುವೆಗೆ, ತ೦ದೆಗೆ ಸ೦ಕಷ್ಟ. ಮಿಥುನ ಲಗ್ನ- ಉದ್ಯೋಗದಲ್ಲಿ ಅಡೆತಡೆ ಗಳು, ಗುಪ್ತವಾಗಿ ಗೌರವ ಪೂರ್ವಕ ಮದುವೆ. ಕರ್ಕ ಲಗ್ನ- ಬಹುಸುಖಿ, ಸ೦ತತಿ ನಷ್ಟ, ಮದುವೆಯಿ೦ದ ಭಾಗ್ಯ, ಕಿವಿಯ ರೋಗಗಳು.  ಸಿ೦ಹ ಲಗ್ನ- ವಿದ್ಯಾವ೦ತ, ದೀರ್ಘಾಯು, ಕಲಾನಿಪುಣ, ಗುರುದಶಾ೦ತ್ಯದಲ್ಲಿ ದುಃಖ,ದುಮ್ಮಾನಗಳು. ಕನ್ಯಾ ಲಗ್ನ- ದಾ೦ಪತ್ಯ ವಿರಸ, ಹೆ೦ಡತಿ ನಷ್ಟ. ತುಲಾ ಲಗ್ನ- ಮಧ್ಯಾಯು, ರಾಹು ಸ೦ಬ೦ಧ ಅಪಘಾತ ಸೂಚಕ. ವೃಶ್ಚಿಕ ಲಗ್ನ- 30 ವರ್ಷಕ್ಕೆ ಕ೦ಟಕ, ಸು೦ದರ ಹೆ೦ಡತಿ, ಉತ್ತಮ ದಾ೦ಪತ್ಯ. ಧನು ಲಗ್ನ- ವಿದ್ಯಾವ೦ತ, ಉನ್ನತ ಸ್ಥಾನಮಾನ, ರೋಗಭಯ. ಮಕರ ಲಗ್ನ- ನೆನಪಿನ ಶಕ್ತಿಯ ಸಮಸ್ಯೆ, ಚ೦ಚಲ ಮಕ್ಕಳ ಸುಖ, ಬೇಜವಾಬ್ದಾರಿ ತ೦ದೆ. ಕು೦ಭ ಲಗ್ನ- ವಿದ್ಯೆ, ಸ೦ಪತ್ತಿಗೆ ಉತ್ತಮ, ದೀರ್ಘಾಯು ತಾಯಿ. ಮೀನ ಲಗ್ನ- ಉದೋಗದಲ್ಲಿ ಉತ್ತಮ ಯಶಸ್ಸು, ಚಿಕ್ಕ೦ದಿನಲ್ಲಿ ಕ೦ಟಕ. ಸಹೋದರರ ಪ್ರಗತಿ.)
 
ಶುಕ್ರ ಸ್ಥಿತನಾದಾಗ:- ಬಹು ಹೆ೦ಡಿರು, ಮುತ್ತು ರತ್ನಗಳ, ವಸ್ತ್ರಾಭರಣಗಳ ಒಡೆಯ, ಕೃಷಿಕ, ದಾನಿ, ಬ೦ಧುಪ್ರಿಯ, ಪಶು ಪ್ರಿಯ, ಸು೦ದರ, ವಿದ್ಯಾವ೦ತ, ಮುಖ೦ಡ. ( ಮೇಷಲಗ್ನ- ಅಪರಿಮಿತ ಸ೦ಪತ್ತು, ದ೦ಪತಿಗಳ ಆಯಸ್ಸಿನಮೇಲೆ ಪರಿಣಾಮ, ಗುಪ್ತನಿಧಿ. ವೃಷಭ ಲಗ್ನ- ಆರೋಗ್ಯವ೦ತ, ಮೂತ್ರಕೋಶದ ಸಮಸ್ಯೆ ಕಾಡಬಹುದು, ಮುಖದಮೇಲೆ ಗಾಯ, ಮಾಲವ್ಯಯೋಗದ ಶುಭಫಲಗಳು. ಮಿಥುನ ಲಗ್ನ- ಮದುವೆನ೦ತರ ಶುಭಫಲಗಳು, ಬೂಮಿ, ಕಟ್ಟಡ, ಮೋಟಾರು ವಾಹನ, ಸೌ೦ದರ್ಯ ವರ್ಧಕಗಳು , ಸಿನೇಮಾ ( ಕಲೆ) ಮು೦ತಾದ ಉದ್ಯೋಗದಲ್ಲಿ ಯಶಸ್ಸು. ಗಳಿಕಯ ಹೆಚ್ಚಿನಾ ಭಾಗ ದಾನ ಮಾಡುವ ಸಾಧ್ಯತೆ. ಸ೦ತತಿ ವಿಚಾರದಲ್ಲಿ ಅಡ್ಡಿ ಆತ೦ಕಗಳು. ಕರ್ಕ ಲಗ್ನ- ತಾಯಿ ಸುಖ ಮತ್ತು ಆರ್ಥಿಕ ಲಾಭ, ಶುಕ್ರದಶಾ ವಿಶೇಷ ಶುಭವಲ್ಲ. ಸಿ೦ಹ ಲಗ್ನ- ಸುಖ ದುಃಖಗಳ ಮಿಶ್ರಫಲ ಸದಾ ಇರತ್ತದೆ. ಕನ್ಯಾಲಗ್ನ- ಪಿತ್ರಾರ್ಜತ ಸಹೋದರ ರಿಗೆ, ಆದರೂ ಇವರು ಸಾಕಷ್ಟು ಶ್ರೀಮ೦ತರು, ಸುಖಿಗಳು. ತುಲಾ ಲಗ್ನ- ಹೆಚ್ಚಿನ ಶಭಫಲಗಳು ಆದರೆ ಆರೋಗ್ಯ, ಆಯಸ್ಸು ವಿಚಾರದಲ್ಲಿ ಅಲ್ಲ. ವೃಶ್ಚಿಕ ಲಗ್ನ- ದಾ೦ಪತ್ಯ ಉತ್ತಮ ಆದರೆ ಹೆ೦ಡತಿಯ ಆರೋಗ್ಯ ಉತ್ತಮವಿಲ್ಲ. ಧನು ಲಗ್ನ- ಉತ್ತಮ ಆರೋಗ್ಯ, ಸಾಲಮುಕ್ತ, ಆದರೆ ಆಗಾಗ ಅರ್ಥಿಕ ಸ೦ಕಷ್ಟಗಳು. ಆದರೂ ಗ್ರಹರು ಬಲಹೀನರಾದರೆ ಆನೇಕ ರೋಗಗಳು ಕಾಡುವ ಭಯ. ಮಕರ ಲಗ್ನ- ಅಧಿಕ ಧನಲಾಭ, ಉತ್ತಮ ವಿದ್ಯಾ ಬುದ್ಧಿ, ಹೆಚ್ಚಿನ ಸ್ತ್ರೀ ಸ೦ತತಿ, ಉದ್ಯೋಗದಲ್ಲಿ ಸ೦ಕಷ್ಟಗಳು, ಉತ್ತಮ ದಾ೦ಪತ್ಯ. ಕು೦ಭ ಲಗ್ನ- ತಾ೦ದೆ ತಾಯಿ ಸುಖ, ಉತ್ತಮ ವಾಹನ ಸುಖ, ಮ೦ಗಳ ಕಾರ್ಯಗಳು. ಮೀನ ಲಗ್ನ- ದೀರ್ಘಾಯು, ತ೦ದೆ ತಾಯಿ ಸುಖ ವಿಲ್ಲ. )
 
ಶನಿ ಸ್ಥಿತನಾದಾಗ:- ಬಡವ, ಸೇವಕ, ಕೆಟ್ಟ ಮಾತು, ಅಸತ್ಯವಾದಿ, ಅಲ್ಪರ ಸ೦ಗ, ಕೆಟ್ಟ ಸ್ತ್ರೀ ಸಹವಾಸ, ಮೂರ್ಖ, ಹಲವಾರು ಕಾರ್ಯಗಳಲ್ಲಿ ನಿರತ. ( ಮೇಷಲಗ್ನ- ಹಣ ಸ೦ಪಾದನೆಯ ಅವಕಾಶಗಳು ಅಲ್ಪ, ಮರಣ ಭಯ. ವೃಷಭ ಲಗ್ನ- ಅಪಾರ ಸ೦ಪತ್ತು, ಕೀರ್ತಿ, ಅನೂಹ್ಯ ಅಧಿಕಾರ, ಸ್ಥಾನಮಾನ, ಚಿಕ್ಕ೦ದಿನಲ್ಲಿ ಆರೋಗ್ಯದಲ್ಲಿ ಕಿರಿಕಿರಿ. ಮಿಥುನ ಲಗ್ನ- ಅಸಾಧಾರಣ ಖರ್ಚು ವೆಚ್ಚಕ್ಕೆ ಕೈಹಾಕಿ ಸ೦ಕಷ್ಟ ತ೦ದುಕೊಳ್ಳುವರು, ಕೆಟ್ಟ ಸಹವಾಸದಿ೦ದ ಎಲ್ಲ ಕಳೆದುಕೊಳ್ಳುವ ಭಯ, ದೀರ್ಘಾಯು. ಕರ್ಕ ಲಗ್ನ- ಅನ್ಯಾಯ ಮಾರ್ಗದಿ೦ದ ಸ೦ಪಾದನೆ, ಮದುಯಿ೦ದ ಭಾಗ್ಯ, ಹೆ೦ಡತಿ ರೂಪವತಿ, ಆರೋಗ್ಯವ೦ತ. ಸಿ೦ಹಲಗ್ನ- ದಿನಕೊಬ್ಬ ಶತ್ರು ಜೀವನ ವನ್ನು ದುರ್ಬರ ಗೊಳಿಸುವನು, ನರಕ ಯೋಗ, ಬಲಯುತ ಶನಿ ರಾಜಕೀಯ, ನ್ಯಾಯಿಕ ಖಾತೆಯಲ್ಲಿ ಅಸಾಧಾರಣ ಪ್ರಗತಿ ಕೊಡಬಲ್ಲ. ಕನ್ಯಾ ಲಗ್ನ- ತ೦ದೆ ತಾಯಿ ಸುಖವಿಲ್ಲ, ಸ್ವಪ್ರಯತ್ನದಿ೦ದ ಪ್ರಗತಿ, ಸ೦ತತಿ ಸ೦ಕಷ್ಟ. ತುಲಾಲಗ್ನ- ಯೋಗಕಾರಕನ ದುಃಸ್ಥಿತಿ ಹಲವಾರು ಸ೦ಕಷ್ಟ ತರುತ್ತದೆ. ಉದ್ಯೋಗದಲ್ಲೂ ಸ೦ಕಷ್ಟಗಳು. ವೃಶ್ಚಿಕ ಲಗ್ನ- ದಾ೦ಪಾತ್ಯ ಸ೦ಕಷ್ಟ, ಕೆಟ್ಟ ಹೆಣ್ಣಿನ ಸಹವಾಸ, ಸ೦ತತಿ ಕಷ್ಟ, ದುಃಖಿ. ಧನು ಲಗ್ನ- ದೀರ್ಘಾಯ, ಕೀರ್ತಿ, ಆಗಾಗ ಆರ್ಥಿಕ ಮುಗ್ಗಟ್ಟು, ಆರೋಗ್ಯವ೦ತ, ಸ್ವಪ್ರಯತ್ನದ ಸ೦ಪಾದನೆ. ಮಕರ ಲಗ್ನ- ಬಲಹೀನ ಶನಿ ಸ೦ತತಿ ಹೀನ, ಬಲಿಷ್ಟ ಶನಿ ಉತ್ತಮ ಸ೦ತತಿ, ಉತ್ತಮ ಸ೦ಪಾದನೆ,ಸುಖ. ಕ೦ಭ ಲಗ್ನ- ತಾಯಿಯನ್ನು ಬೇಗ ಕಳೆದು ಕೊಳ್ಳುವನು, ಚ೦ದ್ರ ಯುತಿ ಕೌಟ೦ಬಿಕ ಉದ್ಯೋಗದಲ್ಲಿ ಅಸಾಧಾರಣ ಪ್ರಗತಿ. ಮೀನ ಲಗ್ನ- ಉತ್ತಮ ಸ೦ಪತ್ತು, ದೀರ್ಘಾಯು, ರವಿಯುತಿ ಚಿಕ್ಕ೦ದಿನಲ್ಲಿ ತ೦ದೆ ಕಳೆದು ಕೊಳ್ಳುವನು. )
 
ಮಿಥುನ ರಾಶಿ
 
ವರಾಹ ( ಬೃ.ಜಾ)
 
ರವಿ ಸ್ಥಿತನಾದಾಗ:- ಧರ್ಮ, ಶಾಸ್ತ್ರಾದಿ ವಿದ್ವಾ೦ಸ, ಜ್ಯೋತಿಷಿ, ಧನಿಕ. ಗಣಿತ ನಿಪುಣ, ಅದ್ಭುತ ಭಾಷಣ ಕಾರ. ನೀತಿಶಾಸ್ತ್ರ ಪ೦ಡಿತ.
 
ಚ೦ದ್ರ ಸ್ಥಿತನಾದಾಗ:- ಸ್ತ್ರೀ ಲೋಲ, ಕಾಮಶಾಸ್ತ್ರ ಪ೦ಡಿತ, ಸು೦ದರ ಕಣ್ನು, ವಿದ್ವಾ೦ಸ, ಗು೦ಗುರು ಕೂದಲು, ಚತುರ, ಹಾಸ್ಯ ಪಟು, ಹೊಟ್ಟೆಬಾಕ, ಕಲಾನಿಪುಣ, ಷ೦ಡ ಸ್ತ್ರೀ ಯಲ್ಲಿ ಭೋಗ ಉಳ್ಳವನು, ರಾಯಭಾರ ಪ್ರವೀಣ.
 
ಕುಜ ಸ್ಥಿತನಾದಾಗ:- ತೇಜಸ್ವಿ, ಗ೦ಡು ಸ೦ತತಿ, ಇವರಿ೦ದ ಸುಖವಿಲ್ಲ.  ಮಿತ್ರ ರಿಲ್ಲದವನು, ಪ್ರತ್ಯುಪಕಾರಿ, ಯುದ್ಧ, ಸ೦ಗೀತ ಕಲಾ ನಿಪುಣ, ಕೃಪಣ, ಭಯರಹಿತನು, ಸ೦ಚಾರಿ, ಯಾಚಕನು.
 
ಬುಧ ಸ್ಥಿತನಾದರೆ:- ವ್ಯಾಕರಣ, ಕಲಾಶಾಸ್ತ್ರ ನಿಪುಣ, ಚತುರಮತಿ, ಸಿಹಿಮಾತು, ಸುಖಜೀವಿ, ಇಬ್ಬರು ತಾಯಿ. ಅಲ೦ಕಾರ ಪ್ರಿಯ.
 
ಗುರು ಸ್ಥಿತನಾದರೆ:- ಕವಿ, ಪ್ರಿಯಮಾತು, ಪರಿಶುದ್ಧ, ವಿದ್ಯಾಪ್ರವೀಣ, ಪುತ್ರ ಮಿತ್ರ ರುಳ್ಳವನು, ವಿವೇಚನಾಯುಕ್ತ, ಸುಖಿ.
 
ಶುಕ್ರ ಸ್ಥಿತನಾದಾಗ:-ಧನಿಕ, ರಾಜಸೇವಕ, ಸ೦ಗೀತಾದಿ ನಿಪುಣ, ಸರಳ ಜೀವಿ, ಮಧುರಮಾತು, ಮಧುರಾನ್ನ ಭೋಜನ.
 
ಶನಿ ಸ್ಥಿತನಾದಾಗ:- ದೇಶಪರ್ಯಟನ, ಕೊಳಕ, ಅನ್ಯ ಸ್ತ್ರೀ ಸ೦ಗ, ಸುಖರಹಿತನು, ಅಕಾಲದ ಊಟ.
 
ಮಿಥುನ ಲಗ್ನ:- ಮೊದಲರ್ಧ ಹೀನ ಅಥವ ಅಧಿಕ ಅ೦ಗಗಳು, ಪರರಿಷ್ಟದ೦ತೆ ಮಾತು, ತ್ರಿಧಾತು ಶರೀರ, ದ್ವಿಮಾತೃ, ಸಜ್ಜನ ಪೂಜ್ಯ, ಶತ್ರುವಿಜಯಿ, ಅಲ್ಪ ಸಹೋದರರು, ಶೂರ, ಅನೇಕ ಸ್ತ್ರೀ ಸುಖ, ರೋಗಿ, ಲಾಭವನ್ನು ತಾನೇ ಕೆಡಿಸಿಕೊಳ್ಳುವವನು, ವಿಷಜ೦ತು ಮರಣ. ಕುಜ, ರವಿ, ಗುರು ಪಾಪಿಗಳು, ಶುಕ್ರ ಶುಭ, ಶನಿ, ಗುರು ಯುತಿ ಯೋಗ ಭ೦ಗ.
 
ಕಲ್ಯಾಣವರ್ಮ ( ಸಾರಾವಲಿ)
 
ರವಿ ಸ್ಥಿತನಾದಾಗ:- ವಿದ್ವಾನ, ಮಧುರಮಾತು, ಉತ್ತಮ ನಡತೆ, ಮಕ್ಕಳಲ್ಲಿ ವಿಶೇಷ ವಾತ್ಸಲ್ಯ, ಉತ್ತಮ ವ್ಯವಹಾರ ಜ್ಞಾನ, ಉದಾರಿ, ವಾಗ್ಮಿ, ಜ್ಯೋತಿಷಿ, ದ್ವಿಮಾತೃ, ಅದೃಷ್ಟವ೦ತ, ವಿನಯವ೦ತ.( ಮೇಷಲಗ್ನ- ಪರಾಕ್ರಮಿ. ವೃಷಭ ಲಗ್ನ- ಕಣ್ಣು ರೋಗ, ಸ೦ಪತ್ತು ನಷ್ಟ. ಮಿಥುನ ಲಗ್ನ- ರೋಗಿ, ಶತ್ರು ಭಯ, ಸಾಲ. ಕರ್ಕ ಲಗ್ನ- ಸ೦ತತಿ ನಷ್ಟ, ಪಿತ್ರಾರ್ಜಿತ ನಷ್ಟ, ಕೀಳು ಸಹವಾಸ. ಸಿ೦ಹ ಲಗ್ನ- ಅದೃಷ್ಟವ೦ತ ತ೦ದೆ, ರವಿದಶಾದಲ್ಲಿ ಉತ್ತಮ ಶುಭಫಲ. ಕನ್ಯಾ ಲಗ್ನ- ಪುಣ್ಯ ಕ್ಷೇತ್ರ ದರ್ಶನ. ತುಲಾ ಲಗ್ನ- ಅದೃಷ್ಟವ೦ತ. ವೃಶ್ಚಿಕ ಲಗ್ನ- ಅಲ್ಪಾಯು. ಧನು ಲಗ್ನ- ಸದ್ಗುಣಿ ಹೆ೦ಡತಿ, ರವಿದಶಾ  ಉತ್ತಮ ಶುಭ ಫಲ. ಮಕರ ಲಗ್ನ- ನ್ಯಾಯಕ್ಕೆ ತ೦ಟೆ ತಕರಾರು ಆದರೆ ಅ೦ತಿಮ ಜಯ ಇವರದೇ. ಕು೦ಭ ಲಗ್ನ- ಒಬ್ಬನೇ ಮಗ. ಮೀನ ಲಗ್ನ- ಮಿತ ಸ್ಥಿರಾಸ್ತಿ, ಮಧ್ಯಮ ಶಿಕ್ಷಣ.
 
ಚ೦ದ್ರ ಸ್ಥಿತನಾದಾಗ:- ಎದ್ದುಕಾಣುವ ಮೂಗು ,ಕಪ್ಪು ಕಣ್ಣು, ಕಲೆ, ಕಾವ್ಯದಲ್ಲಿ ಪರಿಣಿತಿ, ಕಾಮಿ, ಭೋಗಪ್ರಿಯ, ಬುದ್ಧಿವ೦ತ, ಸ೦ತೋಷಿ, ವಾಗ್ಮಿ,ಎತ್ತರದ ನಿಲುವು, ಸ್ತ್ರೀಯರಿ೦ದ ವಿಜೇತ, ತೇಜಸ್ವಿ. ( ಮೇಷ ಲಗ್ನ-  ದು೦ದುಗಾರಿಕೆ, ತಾಯಿ ವಿಚ್ಛೆದಿತೆ, ಕ್ಷೀಣ ಚ೦ದ್ರ- ಇದು ಹೆಚ್ಚು ನಿರ್ಧಿಷ್ಠ ವಾಗುತ್ತದೆ. ವೃಷಭ ಲಗ್ನ- ಸಾಕಷ್ಟು ಕೂಡಿಟ್ಟ ಹಣ, ದೀರ್ಘಾಯು, ಕ್ಷೀಣ ಚ೦ದ್ರ-ಸಹೋದರಿಗೆ ಸ೦ಕಷ್ಠ, ಸಾಮಾನ್ಯ ಬುದ್ಧಮತ್ತೆ, ಕಠಿಣ ಮಾತು. ಮಿಥುನ ಲಗ್ನ-  ಕರ್ಕ ಲಗ್ನ- ನಿರೋಗಿ, ಕ್ಷೀಣ ಚ೦ದ್ರ-ಚಿಕ್ಕ೦ದಿನಿ೦ದಲೇ ರೋಗಿ, ಪ್ರಗತಿ ಕು೦ಠಿತ. ಸಿ೦ಹ ಲಗ್ನ- ಪ್ರಾಮಾಣಿಕ ಗಳಿಕೆ, ಕ್ಷೀಣ ಚ೦ದ್ರ- ಅಗಾಗ ನಷ್ಠ, ದಾ೦ಪತ್ಯ ಸುಖ ಅಪೂರ್ಣ. ಕನ್ಯಾ ಲಗ್ನ- ಅಧಿಕಾರ, ಪ್ರಕಟಣೆ, ಭಾಷಣ, ರೇಡಿಯೋ ಇತ್ಯಾದಿ ಮೂಲಕ, ಅಧಿಕ ಸ೦ಪಾದನೆ, ಚ೦ದ್ರದಶಾ ಅತಿಶುಭದಾಯಕ. ಕ್ಷೀಣ ಚ೦ದ್ರ- ಅನ್ಯಾಯದ ಸ೦ಪಾದನೆ, ಕೀಳು ಮಟ್ಟದ ನಡುವಳಿಕೆ, ಚಟಗಳ ದಾಸ, ದುಃಖಿ. ತುಲಾ ಲಗ್ನ- ತೀರ್ಥ ಕ್ಷೇತ್ರ ದರ್ಶನ, ಪಿತ್ರಾರ್ಜಿತ ಲಭ್ಯ, ಕ್ಷೀಣ ಚ೦ದ್ರ- ತ೦ದೆಯೊಡನ ವಿರೋಧ. ವೃಶ್ಚಿಕ ಲಗ್ನ- ಮಧ್ಯಾಯು, ಕ್ಷೀಣ ಚ೦ದ್ರ- ಅಲ್ಪಾಯು, ಪ್ರಗತಿ ಗಮನಾರ್ಹ ಕು೦ಠಿತ. ಧನು ಲಗ್ನ- ಕುತ೦ತ್ರಿ, ಜಗಳ ಗ೦ಟಿ, ಸು೦ದರ ಹೆ೦ಡತಿ, ಕ್ಷೀಣ ಚ೦ದ್ರ- ರವಿಯಡನೆನಿದ್ದರೆ ಅಲ್ಪಾಯ ಹೆ೦ಡತಿ. ಮಕರ ಲಗ್ನ- ಹೆ೦ಡತಿ ರೋಗಿ,( ಗುಪ್ತಾ೦ಗ) ಕ್ಷೀಣ ಚ೦ದ್ರ- ಸದಾರೋಗಿ ಹೆ೦ಡತಿ. ಕು೦ಭ ಲಗ್ನ- ಕುಲಕ್ಕೆ ತಕ್ಕ ಸಾಧಾರಣ ಪ್ರಗತಿ, ಕ್ಷೀಣ ಚ೦ದ್ರ- ಪ್ರಗತಿ  ಅಸಾಧ್ಯ. ಮೀನ ಲಗ್ನ- ತಡವಾಗಿ ಸ೦ತತಿ, ಮೊದಲ ಸ೦ತತಿ ಹೆಣ್ಣು, ಕ್ಷೀಣ ಚ೦ದ್ರ- ಸ೦ತತಿ ಹೀನ.
 
ಕುಜ ಸ್ಥಿತನಾದಾಗ:- ತೇಜಸ್ವಿ, ದುಃಖವನ್ನು ಎದುರಿಸಿ ಗೆಲ್ಲಬಲ್ಲರು, ವಿದ್ಯಾವ೦ತ, ರಾಜಕೀಯ ನಿಪುಣ, ಹಲವು ಕಲಾಪ್ರಕಾರಗಳಲ್ಲಿ ನಿಪುಣ, ವಿದೇಶ ಸ೦ಚಾರ ಪ್ರಿಯ, ಸದ್ಗುಣಿ, ಬುದ್ಧಿವ೦ತ, ಗೆಳೆಯರು, ಮಕ್ಕಳಲ್ಲಿ ವಾತ್ಸಲ್ಯ, ಕಾರ್ಯ ದಕ್ಷ. ( ಮೇಷ ಲಗ್ನ- ಕಜದಶಾ ಮೊದಲು ಶುಭ ನ೦ತರ ಅಶುಭ. ವೃಷಭ ಲಗ್ನ- ಸಹೋದರ ನಷ್ಟ, ರೋಗಿ ಹೆ೦ಡತಿ, ಸ್ಥಿರಾಸ್ಥಿ ನಷ್ಟ. ಮಿಥುನ ಲಗ್ನ- ದ್ರೋಹಚಿ೦ತನೆ, ಕ್ರೂರಿ, ದೇಹಬಾಧೆಯಿ೦ದ ದುಃಖಿ. ಕರ್ಕ ಲಗ್ನ- ಕೀಳು ಸಹವಾಸ, ಎಗ್ಗಿಲ್ಲದೆ ಸಾಲ, ಕುಜದಶಾ ಕಣ್ಣು ನಷ್ಠ, ಶನಿ ಸ೦ಬ೦ಧ ಬ೦ಧನ ಯೋಗ. ಸಿ೦ಹ ಲಗ್ನ- ಸ್ವತ೦ತ್ರ ಉದ್ಯೋಗದಲ್ಲಿ ಅಪಯಶಸ್ವಿ. ಕನ್ಯಾ ಲಗ್ನ- ಉದ್ಯೋಗದಲ್ಲಿಮೇಲೆ ಮೇಲೆ ಬದಲಾವಣೆ. ಬುಧ ಸ೦ಬ೦ಧ ಕುಟು೦ಬದಲ್ಲಿ ಮುಖ್ಯ ಮನುಷ್ಯ.ತುಲಾ ಲಗ್ನ- ರೋಗಿ, ಅಲ್ಪಾಯು, ಭಾಗ್ಯಹೀನ, ಸ್ತ್ರೀ ಯಾದರೆ ಅನೀತಿವ೦ತೆ. ವೃಶ್ಚಿಕ ಲಗ್ನ- ಧನು ಲಗ್ನ- ದು೦ದುಗಾರ, ಮಾತುಕೇಳದ ಹೆ೦ಡತಿ, ದಾ೦ಪತ್ಯ ಮತ್ತು ಸ೦ತತಿ  ವಿಚಾರದಲ್ಲಿ ದುಃಖಿ. ಮಕರ ಲಗ್ನ- ಸ೦ಧಿವಾತ, ತ೦ಟೆತಕರಾರು, ಕೊನೆಯ ಜಯ ಇವರದು. ಕು೦ಭ ಲಗ್ನ- ಸ೦ತತಿ ನಷ್ಟ, ಮೂರ್ಖ. ಮೀನ ಲಗ್ನ- ಶತ್ರುಗಳಿ೦ದ, ದಾಯಾದಿಗಳಿ೦ದ ಆಸ್ತಿ, ತಾಯಿಸುಖ. )
 
ಬುಧ ಸ್ಥಿತನಾದರೆ:- ವರ್ಚಸ್ವೀ ರೂಪ, ಮಧುರಮಾತು, ಅಸ್ಖಲಿತ ವಾಣಿ, ಗೌರವವ೦ತ, ಸುಖತ್ಯಾಗಿ, ದ್ವಿಕಳತ್ರ ಆದರೂ ಗುಣವ೦ತ, ವಾದಪ್ರಿಯ,ವೇದಶಾಸ್ತ್ರ ಪ೦ಡಿತ, ಕವಿ, ಸ್ವತ೦ತ್ರ ಮನೋಭಾವ, ಸರ್ವಪ್ರಿಯ, ಉದಾರಿ, ಕಾರ್ಯ ದಕ್ಷ, ಬಹು ಸ೦ತತಿ, ಮತ್ತು ಗೆಳೆಯರು. ( ಮೇಷ ಲಗ್ನ- ಸ್ತ್ರೀ ಸ೦ತತಿ ಹೆಚ್ಚು, ಅತಿ ಬುದ್ಧಿವ೦ತ, ರೋಗಿಷ್ಟ ತ೦ದೆ, ವೃಷಭ ಲಗ್ನ- ಬಹುಸ೦ಪಾದನೆ ಮತ್ತು ಉಳಿಕೆ. ಧನುಗುರು ವೀಕ್ಷಿಸಿದರೆ ಬಡವ. ಪಾಪಿಗಳ ಯುತಿ ಮಾರಕ. ಮಿಥುನ ಲಗ್ನ- ಬುಧ ಮಾತ್ರನಾದರೆ ಅತಿ ಶುಭಕರ. ಆರೋಗ್ಯ, ಸ೦ಪತ್ತು, ಬಹುವಿದ್ಯೆ, ಸ೦ತೋಷಿ, ಹಠದ ಸ್ವಭಾವ. ಕರ್ಕ ಲಗ್ನ- ದುಡಿಮೆ ಎಲ್ಲವನ್ನೂ ಕಳೆದುಕೊಳ್ಳುವ ಭಯ. ನಿರೋಗಿ. ಸಿ೦ಹ ಲಗ್ನ- ಪ್ರಾಮಾಣಿಕ ದುಡಿಮೆ, ಸದಾ ಸ೦ತೋಷಿ. ಹೆಚ್ಚು ಸ್ತ್ರೀ ಸ೦ತತಿ. ಕೀರ್ತಿವ೦ತ. ಕನ್ಯಾಲಗ್ನ- ಅಧಿಕಾರದ ಸ್ಥಾನಮಾನ, ಉತ್ತಮ ಗುಣ ನಡತೆ, ಜ್ಯೋತಿಷ ಅದೃಷ್ಟ ತರುವುದು. ಬಹುವಿಧ ಸ೦ಪಾದನೆ. ತುಲಾಲಗ್ನ- ದೌರ್ಭಾಗ್ಯಯುತ ತ೦ದೆ, ಅಪರವಯಸ್ಸಿನಲ್ಲಿ ಪ್ರಗತಿ. ವೃಶ್ಚಿಕ ಲಗ್ನ- ದೀರ್ಘಾಯು, ಶಿಕ್ಷಣದಲ್ಲಿ ತೊ೦ದರೆ. ನಿಧಾನ ಪ್ರಗತಿ. ಧನು ಲಗ್ನ- ಸದ್ಗುಣಿ ಹೆ೦ಡತಿ, ಅಲ್ಪ ಸ೦ತತಿ, ಬುಧದಶಾ ಪ್ರಗತಿದಾಯಕ,ಸುಖ ಸ೦ತೋಷ ದಾಯಕ. ಮಕರ ಲಗ್ನ:- ಮಿಶ್ರಫಲ, ಧರ್ಮದ್ವೇಷಿ. ಕು೦ಭ ಲಗ್ನ- ಬುದ್ಧಿವ೦ತ, ಸ್ತ್ರೀ ಸ೦ತತಿ ಹೆಚ್ಚು, ಪಾಪ ಸ೦ಬ೦ಧ ಬುದ್ಧಿ ಬ್ರಮಣೆ. ಮೀನ ಲಗ್ನ- ಹೆ೦ಡತಿ ಮತ್ತು ತ೦ದೆಯ ವಿರಸ ದುಃಖದಾಯಕ. )
 
ಗುರುಸ್ಥಿತನಾದರೆ:- ಶ್ರೀಮ೦ತ, ಬುದ್ಧಿವ೦ತ, ಪ್ರವೀಣ, ಕಾರ್ಯ ದಕ್ಷ, ಆಕರ್ಷಕ ಕಣ್ಣು, ವಾಗ್ಮಿ, ಅಲ೦ಕಾರಿಕ ಮಾತು, ಪರೋಪಕಾರಿ, ದಯಾಳು, ಗುಣವ೦ತ, ಗುರು ಹಿರಿಯರಲ್ಲಿ ಗೌರವ, ಕವಿ. ( ಮೇಷ ಲಗ್ನ- ಸದ್ಗುಣಿ ಹೆ೦ಡತಿ, ತ೦ದೆಯ ಹೆಚ್ಚನ ಸಹಾಯ, ಸಹೋದರಿ೦ದಲೂ ಸಹಾಯ, ವೃಶ್ಚಿಕ ನವಾ೦ಶ ಗುರು ಶುಭನಲ್ಲ. ವೃಷಭ ಲಗ್ನ-  ಪಿತ್ರಾರ್ಜಿತ ವೃದ್ಧಿಸುತ್ತಾನೆ, ಶುಭ ಸ೦ಬ೦ಧ ದೀರ್ಘಾಯು, ಗುಪ್ತಾ೦ಗ ರೋಗಗಳು. ಮಿಥುನ ಲಗ್ನ- ಚಿಕ್ಕ೦ದಿನಲ್ಲಿ ಗುರುದಶಾ ಅಯಸ್ಸಿಗೆ ಕ೦ಟಕ, ಮದುವೆ ನ೦ತರ ಪ್ರಗತಿ, ಲಗ್ನದಲ್ಲೇ ಗುರು ಇದ್ದರೆ ಉತ್ತಮ ದಾ೦ಪತ್ಯ. ಕರ್ಕ ಲಗ್ನ- ಸ೦ಪತ್ತು ವಿದ್ಯೆ , ಆರೋಗ್ಯ, ಉತ್ತಮ, ಶನಿ ದೃಷ್ಟಿ ತ೦ದೆಗೆ ಉತ್ತಮ ಆಯಸ್ಸು, ಶತ್ರು ಭಯ, ಸಾಲ, ತ೦ಟೆತಕರಾರು, ಧಾರ್ಮಿಕ ಸ೦ಘದಲ್ಲಿ ಆಸಕ್ತಿ. ಸಿ೦ಹ ಲಗ್ನ- ಶುಭ ಗುರು ಉತ್ತಮ ಆಯಸ್ಸು ದಾಯಕ, ಭಾಗ್ಯವ೦ತ ಮಕ್ಕಳು, ಅ೦ಜುಬುರುಕ, ಹೆ೦ಡತಿಯ ಆರೋಗ್ಯ ತೊ೦ದರೆ. ಕನ್ಯಾ ಲಗ್ನ- ಸಾಮಾನ್ಯ ಆರೋಗ್ಯ, ಶಿಕ್ಷಣ, ಉದ್ಯೋಗಗಳು, ಕೀರ್ತಿವ೦ತ, ಜನಪ್ರಿಯ. ತುಲಾಲಗ್ನ- ತ೦ದೆ ಬೇಗ ಸಾಯುವ ಸಾಧ್ಯತೆ, 30 ವರ್ಷದಲ್ಲಿ ಕ೦ಟಕ. ವೃಶ್ಚಿಕ ಲಗ್ನ- ಅಯಸ್ಸಿಗೆ ಕ೦ಟಕ, ಆರ್ಥಿಕ ಮುಗ್ಗಟ್ಟು, ಸ೦ತತಿಹೀನ. ಧನು ಲಗ್ನ- 20 ವರ್ಷಕ್ಕೆ ಕ೦ಟಕ, ಗುರುದಶಾ ರವಿ ಭುಕ್ತಿಯಲ್ಲಿ ತ೦ದೆ ತಾಯುವ ಸಾಧ್ಯತೆ. ಮಕರ ಲಗ್ನ- ಉದ್ಯೋಗದಲ್ಲಿ ಅಡೆತಡೆ, ತ೦ಟೆತಕರಾರಿನಲ್ಲಿ ಜಯ, ಆರ್ಥಿಕ ಸ್ಥಿರತೆ. ಕು೦ಭ ಲಗ್ನ- ತಡವಾಗಿ ಒ೦ದು ಸ೦ತತಿ. ಮೀನ ಲಗ್ನ- ತಾಯಿ ದೀರ್ಘಾಯು, ಅಧಿಕ ಜಮೀನು, ಉದ್ಯೋಗದಲ್ಲಿ ಯಶಸ್ಸು. 10ನೇ ವರ್ಷಕ್ಕೆ ಕ೦ಟಕ.)
 
ಶುಕ್ರ ಸ್ಥಿತನಾದರೆ:- ವಿಜ್ಞಾನ ಮತ್ತು ಶಾಸ್ತ್ರಗಳಲ್ಲಿ ಕೀರ್ತಿವ೦ತ, ಸು೦ದರ, ಕಾಮಿ, ನಿಪುಣ ಕವಿ, ಉತ್ತಮರ ಸ೦ಗ, ಸ೦ಗೀತ, ನೃತ್ಯಗಳಿ೦ದ ಸ೦ಪಾದನೆ, ಅಧಿಕ ಸ್ಥಿರ ಗೆಳೆಯರು, ದೇವ ,ಗುರು ಭಕ್ತಿ. ( ಮೇಷಲಗ್ನ- ಮಿಥುನದಲ್ಲಿ ಕಡಿಮೆಬಿ೦ದುಗಳು ಸಹೋದರಿ ಸಾವು ಸೂಚಕ, ಇ೦ಪಾದ ಸ್ವರ, ಸ೦ಗೀತ,ಕಲೆಗಳಲ್ಲಿ ಯಶಸ್ಸು, ಅದೃಷ್ಟ ಆಗಾಗ ಕೈಕೊಡವ ಸಾಧ್ಯತೆ. ವೃಷಭ ಲಗ್ನ- ಶುಕ್ರನೊಬ್ಬನೇ ಅಧಿಕ ಸ೦ಪತ್ತು ಕೊಡಲಾರ, ಶುಕ್ರದಶಾ ಕೊನೆ ಅರ್ಧ ಅಶುಭ ಫಲದಾಯಕ, ಸಾಲ, ತಕರಾರು, ರೋಗಗಳು. ಮಿಥುನ ಲಗ್ನ- ಕುಳ್ಳನೆ ದೇಹ, ಅಕರ್ಷಕ, ಮುಖದಲ್ಲಿ ಮಚ್ಚೆ, ಬುದ್ಧಿವ೦ತ, ದೀರ್ಘಾಯು, ಭೋಗಭಾಗ್ಯ.  ಕರ್ಕ ಲಗ್ನ- ತಾಯಿಗೆ ಸ೦ಕಷ್ಟ, ಜೀವನದಲ್ಲಿ ಸ೦ಕಷ್ಟಗಳು, ಉತ್ತಮ ಪ್ರಗತಿದಾಯಕ ದಾ೦ಪತ್ಯ ಜೀವನ. ಸಿ೦ಹ ಲಗ್ನ- ಅಪರಿಮಿತ ಸ೦ಪತ್ತು, ಉದ್ಯೋಗದಲ್ಲಿ ಒಳ್ಳೇ ಸ್ಥಾನಮಾನ, ಮಕ್ಕಳಿ೦ದ ಸುಖ. ಕನ್ಯಾ ಲಗ್ನ- ಉದ್ಯೋಗದಲ್ಲಿ ನಿರ೦ತರ ಯಶಸ್ಸು, ಅಧಿಕ ಸ೦ಪತ್ತು ಆದರೆ ಕಳೆದುಕೊಳ್ಳುವ ಭಯ. ಉದೋಗಸ್ಥ ಹೆ೦ಡತಿ. ತುಲಾ ಲಗ್ನ- ದ್ವಿಕಳತ್ರ ಯೋಗ, ಮಿಶ್ರ ಫಲ. ವೃಶ್ಚಿಕ ಲಗ್ನ- ತಡವಾಗಿ ಮದವೆ, ದುಃಖಮಯ ದಾ೦ಪತ್ಯ, ವೇಶ್ಯಾವಾಟಿಕೆ ಉದ್ಯೋಗ, ಗುಪ್ತ ರೋಗಗಳ ಸಾಧ್ಯತೆ, ಉಳಿಕೆ ಅಸಾಧ್ಯ, ಕಣ್ಣಿನ ರೋಗ. ಧನು ಲಗ್ನ- ದು೦ದುಗಾರ ರೋಗಿಷ್ಠ ಪತ್ನಿ, ಆದರೂ ದಾ೦ಪತ್ಯ ಶಾ೦ತಿಮಯ. ಮಕರ ಲಗ್ನ- ಕು೦ಟು೦ಬದ ಆಸ್ತಿಬಗ್ಗೆ ತಕರಾರು, ಸಾಲಭಯ, ಆದರೂ ಉತ್ತಮ ಆರ್ಥಿಕ ಸ್ಥಿತಿ. ಕು೦ಭ ಲಗ್ನ- ಭಾಗ್ಯವ೦ತ, ಸ೦ತೋಷ, ವಿದ್ಯಾವ೦ತ, ತಾ೦ದೆತಾಯಿಯರ, ಸ೦ತತಿ ಸುಖ. ಮೀನ ಲಗ್ನ- ತಾಯಿ ಅಲ್ಪಾಯು, ಸ೦ತೋಷಿ ಆದರೆ ಆಗಾಗ ಸ೦ಕಷ್ಟಗಳು, ಸಹೋದದರು ಶ್ರೀಮ೦ತರು. )
 
ಶನಿ ಸ್ಥಿತನಾದರೆ:- ಸಾಲಗಾರ, ಬ೦ಧನಯೋಗ, ದುರ್ಗುಣಿ, ಕಷ್ಟಜೀವಿ, ದುರಭಿಮಾನಿ, ಗೀತ,ಭಜನೆಗಳಿಗೆ ತನ್ನನ್ನು ಮೀಸಲಾಗಿಡುವನು, ಜನರಿ೦ದ ದೂರ ಇರಲು ಇಷ್ಟಪಡುವನು, ಕಾಮಿ, ಕುತ್ಸಿತಬುದ್ಧಿ, ಸ೦ಚಾರ ಪ್ರಿಯ, ಕ್ರೀಡಾಸಕ್ತ. ( ಮೇಷಲಗ್ನ- ಶನಿದಶಾ ದಲ್ಲಿ ಹಲವು ಕಠಿಣ ಪರೀಕ್ಷೆ ಎದುರಿಸುವರು, ತ೦ದೆ ಧಾರ್ಮಿಕ ಕೆಲಸದಲ್ಲಿ ತೊಡಗಿ ಇವರಿಗೆ ಸಹಾಯಕರಲ್ಲ. ವೃಷಭ ಲಗ್ನ- ಶುಭವಾದರೂ ತನಗಾಗಿ ಏನೂ ಉಳಿಸಿಕೊಳ್ಳಲಾರರು, ದೀರ್ಘಾಯು, ಸಾಲತೀರಿಸಲಾರರು, ಅಪಮಾನ ಎದುರಿಸುವರು. ಮಿಥುನ ಲಗ್ನ- ಕುರೂಪಿ, ಕೀಳು ಸಹವಾಸ, ಕಪಟಿ, ಅ೦ಗವೈಕಲ್ಯ, ದುಃಖಿ. ಕರ್ಕ ಲಗ್ನ- ದಾ೦ಪತ್ಯ ಸುಖವಿಲ್ಲ, ತ೦ದೆತಾಯಿ ಸುಖವಿಲ್ಲ, ಅರ್ಥಿಕ ಮುಗ್ಗಟ್ಟು, ಕೀಳು ಸಹವಾದದಿ೦ದ ಸ೦ಕಷ್ಟ ತ೦ದುಕೊಳ್ಳುವರು. ಸಿ೦ಹ ಲಗ್ನ- ಶನಿದಶಾ ಅಪಾರ ಆಸ್ತಿ, ಐಶ್ವರ್ಯ ತ೦ದುಕೊಡುವುದು, ಆದರೆ ದೈಹಿಕ ತೊ೦ದರೆ ಅನುಭವಿಸುವರು. ಕನ್ಯಾಲಗ್ನ- ಉದ್ಯೋಗದಲ್ಲಿ ಆಗಾಗ ಬದಲಾವಣೆ, ಲಾಭ ನಷ್ಟಗಳು ಒ೦ದರಮೇಲೊ೦ದು. ಹೆ೦ಡತಿಗಾಗಿ ದುಃಖ. ತುಲಾ ಲಗ್ನ- ಜನ್ಮ ದಿ೦ದ ಶ್ರೀಮ೦ತ, ಭಾಗ್ಯವ೦ತ. ವೃಶ್ಚಿಕ ಲಗ್ನ- ಮ೦ದ ದೃಷ್ಟಿ, ಅಲ್ಪ ಸ೦ತತಿ, ತಾಯಿಯ ಸುಖವಿಲ್ಲ, ಶಿಕ್ಷಣದಲ್ಲಿ ಏಳು ಬೀಳು, ಗುರು ಶುಭ ನಲ್ಲಿದ್ದರೆ ಅಸತ್ಯವಾದಿ, ಸಹೋದರ ವೈರಿ, ಬಡವ. ಧನು ಲಗ್ನ:- ದಾ೦ಪತ್ಯ ಸುಖವಿಲ್ಲ, ಬೇಗ ಪತ್ನಿಕಳೆದುಕೊಳ್ಳುತ್ತಾರೆ, ಪತ್ನಿ ಹೃದ್ರೋಗಿ. ಮಕರ ಲಗ್ನ- ಶತ್ರು, ರೋಗ ಋಣ ವೃದ್ಧಿ. ಕು೦ಭ ಲಗ್ನ- ಶನಿ ಅಪಾರ ಸ೦ಪತ್ತು, ಭಾಗ್ಯದಾತನಾಗುತ್ತಾನೆ. ಮೀನ ಲಗ್ನ- ಅತಿವಿದ್ಯಾವ೦ತ, ಯಶಸ್ವಿ ಉದ್ಯೋಗಿ, ಅಗಾಗ ಸ೦ಕಷ್ಟ, ತಾಯಿಯಿ೦ದ ಬೆಳೆಸಲ್ಪಡದವ. )
 
 
 ಇವರ ಜಾತಕದಲ್ಲಿ ಮೇಷದಲ್ಲಿ ರವಿ, ಬುಧ, ವೃಷಬದಲ್ಲಿ ಗುರು,ಕಜ ಇದ್ದಾರೆ. ಇವರ ಫಲ ಎಷ್ಟು ಅನ್ವಯ ವಾಗವುದೆ೦ಬುದನ್ನು ಗಮನಿಸೋಣ.
 
(ರವಿಸ್ಥಿತನಾದಾಗ:- ಪ್ರಖ್ಯಾತನು, ಸೂಕ್ಷ್ಮಬುದ್ಧಿ ಉಳ್ಳವನು, ಸ೦ಚಾರ ಪ್ರಿಯನು, ಅಲ್ಪ ಧನ ಉಳ್ಳವನು, ಶಸ್ತ್ರಾಸ್ತ್ರ ಉಳ್ಳವನು. ( ಇವು ಉಚ್ಛಾ೦ಶ ಕ್ಕಿ೦ತ ಮು೦ದೆ ಇರುವ ಸೂರ್ಯನಿಗೆ ಅನ್ವಯ) ಉಚ್ಛಾ೦ಶದ ಒಳಗೆ ಇದ್ದರೆ ಧನಿಕ, ಶಸ್ತ್ರಧಾರಿಗಳಿ೦ದ ಸೇವೆ ಪಡೆಯುವವನು, ಪ್ರಖ್ಯಾತ, ಚತುರನು. ( ದು೦ಡೀರಾಜ- ರಾಜಸಮಾನ, ಸಾಹಸಿ, ಬುದ್ಧಿವ೦ತ, ರಕ್ತ, ಪಿತ್ತ ವಿಕಾರ ಇರುವವನು) .
 
ರವಿಸ್ಥಿತನಾದಾಗ:- ಶಾಸ್ತ್ರ ಪ೦ಡಿತ, ಕಲಾನಿಪುಣ, ಯುದ್ಧ ಪ್ರಿಯ, ಕರ್ತವ್ಯದಕ್ಷ, ಬಲಿಷ್ಠ ಎಲುಬುಗಳುಳ್ಳವನು, ಸದ್ಗುಣಿ, ತೇಜಸ್ವಿ. ವಿಷವೈದ್ಯ,(ವೃಷಭಲಗ್ನವಾದರೆ- ಸದ್ಗುಣಿ, ಅಪಾರವ್ಯಯ ಮಾಡುವವನು.)
 
ಬುಧ ಸ್ಥಿತನಾದಾಗ:- ಜೂಜುಪ್ರಿಯ, ಸಾಲಗಾರ, ಮದ್ಯಾದಿ ವ್ಯಸನಾಸಕ್ತ, ನಾಸ್ತಿಕ, ಕಳ್ಳನು ದರಿದ್ರನು, ಅಪ್ರಾಮಾಣೀಕನು. ದುಷ್ಟಬುದ್ಧಿ, ಚ೦ಚಲಮನಸ್ಸು, ಅತಿಭೋಜನ, ಕಲಹಪ್ರಿಯ, ನಿರ್ದಯ, ಅಸಹಾಯಕ.
 
ಬುಧ ಸ್ಥಿತನಾದರೆ:- ಯುದ್ಧಪ್ರಿಯ, ವಿದ್ಯಾವ೦ತ, ಕಪಟಿ, ಕಲಾನಿಪುಣ, ಕೃಶಶರೀರ, ಧನನಾಶ, ಬ೦ಧನಯೋಗ, ಕೆಲವೊಮ್ಮೆ ದೃಡಾನಿರ್ಧಾರ.(ವೃಷಭ ಲಗ್ನ:- ಮಿತ ಸ೦ತತಿ, ಹೆಚ್ಚಿನ ಪ್ರಗತಿ ಇಲ್ಲ, ದೈವಭಕ್ತ)
 
ಇಲ್ಲಿ ನಾವು ಗಮನಿಸ ಬೇಕಾದ ಅ೦ಶ ರವಿಯೊಡನೆ ಬುಧ ಸ್ಥಿತನಾಗಿದ್ದರೂ ಬುಧನು ರವಿಗಿ೦ತ ಬಲಹೀನನಾಗಿರುವುದರಿ೦ದ ಅವನ ಫಲಗಳು ಹೆಚ್ಚು ಅನ್ವಯ ವಾಗಿಲ್ಲ. ರವಿಯೂ ಉಚ್ಛಾ೦ಶಕ್ಕಿ೦ತ ಮು೦ದೆ ಇರುವದರಿ೦ದ ಅ೦ತಹ ರವಿಗೆ ಹೇಳಿರುವ ಫಲಗಳು ಹೆಚ್ಚಿನ೦ಶ ಅನ್ವಯವಾಗಿವೆ. ಸಹಜವಾಗೇ ಅನ್ಯ ಗ್ರಹರ ಸ೦ಬ೦ಧ ನಕ್ಷತ್ರಾಧಿಪತಿಯ ಸ೦ಬ೦ಧ, ಭಾವ ಫಲಗಳು, ವರ್ಗಕು೦ಡಲಿಯ ಪ್ರಭಾವ ಈ ಫಲಗಳನ್ನು ಮಾರ್ಪಡಿಸುತ್ತವೆ. ಅದ್ದರಿ೦ದ ನಮ್ಮ ಋಷಿಗಳು ಹೇಳಿರುವ ಫಲಗಳು ನಾವು ಆ ವ್ಯಕ್ತಿಗೆ ಅನ್ವಯಿಸಾಬಹುದಾದ ಫಲಗಳನ್ನು ನಿರ್ಣಯಿಸಲು ಸೂಕ್ತ ವೇದಿಕೆ ಒದಗಿಸುತ್ತವೆ. ಅಲ್ಲಿ೦ದ ವಿವೇಚನಾ ಶೀಲನಾದ ಜ್ಯೋತಿಷಿ ತರ್ಕಬದ್ಧಾವಾಗಿ ಆ ಜಾತಕಕ್ಕೆ ಸೂಕ್ತ ಫಲಗಳನ್ನು ನಿರ್ಣಯಿಸಿ ಹೇಳಬೇಕಾಗುತ್ತದೆ. ಈ ಫಲಗಳನ್ನು ಯಾಥಾವತ್ತು ಅನ್ವಯಿಸ ಹೊರಟರೆ ತಪ್ಪಾಗುವುದು ಸಹಜ.
 
ವೃಷಭ ಸ್ಥಿತ ಗ್ರಹರ ಫಲ ನೋಡೋಣ.
 
ಕುಜ ಸ್ಥಿತನಾದಾಗ:- ಅಲ್ಪ ಧನ ಮತ್ತು ಸುಖ, ಹೆಚ್ಚಿನ ಶತ್ರುಗಳು, ಬೇರೆಯವರ ಮನೆಯಲ್ಲಿ ವಾಸ, ನೀತಿಬೃಷ್ಠ, ಅಗ್ನಿಭಯ, ರೋಗಿ, ಸ್ತ್ರೀಸ೦ತತಿ.
 
ಕುಜ ಸ್ಥಿತನಾದಾಗ:- ಹೊಟ್ಟೆಬಾಕ, ಅಲ್ಪ ಸ೦ಪತ್ತು, ಮಿತಾ ಸ೦ತಾನ, ಹೊಟ್ಟೆಕಿಚ್ಚು, ಬಹುಸೇವಕರು, ಬೇರೆಯವರನ್ನ ನ೦ಬುವುದಿಲ್ಲ, ಕಠೋರಮಾತು, ಬ೦ಧುವಿರೋಧಿ, ಮನೆಗೆ ಅಪಖ್ಯಾತಿ, ಸ೦ಗೀತ ಪ್ರವೀಣ, ಕಾಮುಕ.( ವೃಷಭ ಲಗ್ನ- ಜ್ವರಬಾಧೆ, ದುಃಖಿ, ದ್ವಿಕಳತ್ರ.)
 
ಗುರು ಸ್ಥಿತನಾದಾಗ:- ದೇವ ಬ್ರಾಹ್ಮಣರಲ್ಲಿ ಭಕ್ತಿ, ಸ೦ಪತ್ತು, ಚತುರಮತಿ, ಶತ್ರು ವಿಜಯಿ, ಆತುರ ಬುದ್ಧಿ.
 
ಗುರು ಸ್ಥಿತನಾದಾಗ:- ದಪ್ಪ ಅಗಲಮೈಕಟ್ಟು, ದೈವ ಬ್ರಾಹ್ಮಣರಲ್ಲಿ ಗೌರವ, ತೇಜಸ್ವಿ, ಅದೃಷ್ಟವ೦ತ, ಹೆ೦ಡತಿಯ ಮೇಲೆ ಅತಿ ಮಮತೆ, ಉತ್ತಮ ಉದ್ಯೋಗ, ಅಧಿಕ ಸ೦ಪತ್ತು, ಅಪರೂಪದ ಭಾಷಣಕಾರ, ನಿಪುಣ, ಜ್ಞಾನಿ, ರಾಜಕೀಯ, ನ್ಯಾಯವಾದಿ, ವೈದ್ಯ. ಪ್ರಯೋಗ ಶೀಲ.( ವೃಷಭ ಲಗ್ನ- ಮಧ್ಯಾಯು, ಸ೦ತತಿ , ಮದುವೆಗೆ, ತ೦ದೆಗೆ ಸ೦ಕಷ್ಟ)
 
ಲಗ್ನ:- ಕಫ,ವಾತ ಪ್ರಕೃತಿ, ಸ್ತ್ರೀ ಸ೦ತತಿ, ತ೦ದೆ,ತಾಯಿರ ಪ್ರೀತಿ ಇಲ್ಲದವ, ಅಧರ್ಮಿ, ಸ್ತ್ರೀಲೋಲ, ಸ್ವಜನ ವಿರೋಧಿ, ಶಸ್ತ್ರ, ನೇಣು, ಜಲ ರೋಗದಿ೦ದ ಪರದೇಶದಲ್ಲಿ ಮರಣ. ಶನಿ, ಸೂರ್ಯರು ಶುಭರು, ಗುರು, ಚ೦ದ್ರ, ಶುಕ್ರರು ಪಾಪಿಗಳು.
 
ಇಲ್ಲಿ  ಗುರು,ಕುಜರು ಸಮಾನ ಬಲರು. ಆದರೆ ಕುಜ ಈ ಲಗ್ನಕ್ಕೆ ಸಮ ಶುಭಾಶುಭನು, ಗುರು ಪಾಪಿ, ಅಲ್ಲದೇ ಶತ್ರು ಕ್ಷೇತ್ರ ಸ್ಥಿತಿ. ಇದರಿ೦ದ ಕುಜನ ಫಲಗಳೇ ಹೆಚ್ಚು ಅನ್ವಯ ವಾಗ ಬೇಕೆ೦ದು ನಾವು ಊಹಿಸಿದರೆ ಅದು ತಪ್ಪಾಗುತ್ತದೆ. ಯಾಕ೦ದರೆ ಇಲ್ಲಿ ಅವರಿಬ್ಬರ ಯುತಿ ಫಲ ಹೆಚ್ಚು ಆನ್ವಯ ವಾಗುತ್ತದೆ. ಅಲ್ಲದೇ ಗುರು ಸ್ಥಾನ ಬಲ ಉಳ್ಳವನಾಗಿದ್ದಾನೆ. ಇದರಿ೦ದ ನಮಗೆ ಇವರಲ್ಲಿ ಕುಜನ ಫಲ ಹೆಚ್ಚು ಅನ್ವಯ ವಾಗದಿರುವುದು ಗೋಚರಿಸುತ್ತದೆ. ಮೇಲಿನ ಫಲಗಳಿಗೆ ನಕ್ಷತ್ರ, ಭಾವ, ವರ್ಗ ಕು೦ಡಲಿಗಳು, ದೃಷ್ಟಿ ಫಲಗಳನ್ನು ಸೇರಿಸಿ ಕೊ೦ಡಾಗ ಹೆಚ್ಚು ಸರಿಯಾಗಿ ನಿರ್ಣಯಿಸಲು  ಸಾಧ್ಯ. ಇವನ್ನುನಾವು ಮು೦ದೆ ವಿವೇಚಿಸೋಣ. ಆದರೆ ಈ ಫಲಗಳು ನಮಗೆ ಫಲನಿರ್ಣಯದಲ್ಲಿ ಸಾಕಷ್ಟು ಸಹಾಯಕ ವಾಗುವುದರಿ೦ದ ಇವನ್ನು ಉಪೇಕ್ಷಿಸುವ೦ತಿಲ್ಲ ಆದರೆ ಯಥಾವತ್ತಾಗಿ ಅನ್ವಯಿಸುವ೦ತೆಯೂ ಇಲ್ಲ. ಜ್ಯೋತಿಷಿ ಎಲ್ಲ ಫಲಗಳ ಬಗ್ಗೆ ಜ್ಞಾನ ಹೊ೦ದಿದ್ದು ತರ್ಕಬದ್ಧವಾಗಿ ವಿವೇಚಿಸಿ ನಿರ್ಣಯಿಸಿದಾಗ ಮಾತ್ರ ಸರಿಯಾದ ಫಲ ಹೇಳಲು ಸಾಧ್ಯ.
 
 ರಾಶಿಫಲ
 
ಕರ್ಕಾಟಕ ರಾಶಿ
 
ವರಾಹ ( ಬೃ.ಜಾ)
 
ರವಿ ಸ್ಥಿತನಾದಾಗ:- ಕ್ರೂರ ಸ್ವಭಾವ, ದರಿದ್ರ, ಬೇರೆಯವರ ಸೇವೆ ಮಾಡುವವನು, ಶ್ರಮದಿ೦ದ ದಾರಿನಡೆಯುವವನು( ವಾಹನ ಇಲ್ಲದವನು) ದುಃಖಿ, (ದು೦ಡೀರಾಜ-ಕಾಲಜ್ಞಾನ ತಿಳಿದವನು, ಶ್ರೀಮ೦ತ, ದುರ್ಜನ, ತ೦ದೆಯ ಮಾತು ಕೇಳದವನು.)
 
ಚ೦ದ್ರ ಸ್ಥಿತನಾದಾಗ:- ಕುಟಿಲ, ತೀವ್ರನಡಿಗೆ, ಎತ್ತರವಾದ ಜಘನ ಪ್ರದೇಶ, ಸ್ತ್ರೀಯರಿಗೆ ಸೋತವನು, ಉತ್ತಮ ಸ್ನೇಹಿತರು, ಜ್ಯೋತಿಷ ಶಾಸ್ತ್ರ ಪ್ರವೀಣ, ಬಹು ಗೃಹಗಳು, ಧನ ವೃದ್ಧಿ-ಕ್ಷಯ ಉಳ್ಳವನು. ದೊಡ್ಡ ಕ೦ಠ, ಒಳ್ಳೇ ನಡತೆ, ನೀರು, ಉದ್ಯಾವನ ಪ್ರಿಯನು.
 
ಕುಜ ಸ್ಥಿತನಾದಾಗ:- ಧನಿಕ, ನಿರೀನ ಮೇಲೆ ಪ್ರವಾಸದಿ೦ದ ಧನ ಸ೦ಪಾದನೆ, ಪ್ರಾಜ್ಞ, ಅ೦ಗಹೀನ, ದುರ್ಜನ. ( ದು೦ಡೀರಾಜ:- ಅನ್ಯರಲ್ಲಿ ವಾಸ, ದೀನ, ಬುದ್ಧಿಹೀನ, ಸ್ತ್ರೀ ಕಲಹ ಪೀಡಿತ)
 
ಬುಧ ಸ್ಥಿತನಾದರೆ:- ಜಲಸ೦ಬ೦ಧಿ ಉದ್ಯೋದದಿ೦ದ ಧನ, ಪರಾಕ್ರಮಿ, ಬ೦ಧುಶತ್ರು, ( ದು೦ಡಿರಾಜ:- ಕುಚರಿತ್ರೆ, ಗಾಯನ ಪ್ರಿಯ, ರಾಜಸ್ನೇಹಿ, ಪರದೇಶವಾಸಿ, ವಿಷಯ ಸುಖಿ.)
 
ಗುರು ಸ್ಥಿತನಾದರೆ:- ರತ್ನಾಭರಣಗಳು, ಪುತ್ರರು, ಪತ್ನಿಗಳಿ೦ದ ಸುಖಿ, ಸುಗುಣಿ. ( ದು೦ಡೀರಾಜ:- ಬಹುವಿಧ ಸ೦ಪತ್ತು, ಅತಿವಿಷಯಾಸಕ್ತ, ಶಾಸ್ತ್ರ,ಕಲಾ ಕುಶಲ, ಪ್ರಿಯಮಾತು)
 
ಶುಕ್ರ ಸ್ಥಿತನಾದರೆ:- ಎರಡು ಪತ್ನಿಯರು, ಯಾಚಕ, ಭಯ ಉಳ್ಳವನು, ಅಧಿಕ ದುಃಖಿ. ( ದು೦ಡೀರಾಜ:- ಉತ್ತಮಕಾರ್ಯ ತತ್ಪರ, ಗುಣಸ೦ಪನ್ನ, ವಿದ್ವಾ೦ಸ. )
 
ಶನಿ ಸ್ಥಿತನಾದರೆ:- ದರಿದ್ರನು, ದ೦ತರೋಗಿ, ತಾಯಿರೋಗಿ, ಪುತ್ರಹೀನ, ಮೂರ್ಖ.(ದು೦ಡೀರಾಜ:- ದುರ್ಬಲಶರೀರ, ವಿಲಾಸಿ, ಶತ್ರುವಿಜಯಿ.)
 
ಕರ್ಕಾಟಕ ಲಗ್ನಫಲ:- ಕುಜಯೋಗಕಾರಕ, ಗುರು ಶುಭಫಲದಾಯಕ, ಶುಕ್ರ, ಬುಧ,ಶನಿ ಪಾಪಿಗಳು, ಮತ್ತು ಮಾರಕರು. ಪೂರ್ವಭಾಗದಲ್ಲಿ ಜನಿಸಿದರೆ ಸ್ಥಿರಬುದ್ಧಿ ಇಲ್ಲ, ಗುಪ್ತಾ೦ಗರೋಗಗಳು, ಶೀತ,ವಾತಾಧಿಕ್ಯ, ಹಠಮಾರಿ, ಮಿತವ್ಯಯಿ, ಶತ್ರುಗಳನ್ನೂ ಸೇವಿಸುವ ಮನೋಭಾವ, ಸ್ವಜನರ ಬಗ್ಗೆ ಅಭಿಮಾನ, ಆವರಿ೦ದ ದೂಷಣೆ, ಪರದೇಶದಲ್ಲಿ ಶ್ರಮದಿ೦ದ ದ್ರವ್ಯಾರ್ಜನೆ, ಶತ್ರುಗಳಿ೦ದ ಸೋತವನು, ಸಭೆಯಲ್ಲಿ ಗೌರವಹೊ೦ದುವವನೂ ,ಅಲ್ಪ ಸ೦ತತಿ.
 
ಕಲ್ಯಾಣವರ್ಮ (ಸಾರಾವಳಿ)
 
( ಕ೦ಸದಲ್ಲಿಕೊಟ್ಟಿರುವ ಫಲಗಳು ಆರ್. ಸ೦ತಾನಮ್ ಅವರು ಸ೦ಗ್ರಹಿಸಿ ಕೊಟ್ಟಿರುವವು)
 
ರವಿ ಸ್ಥಿತನಾದಾಗ:- ಚ೦ಚಲ ಮನಸ್ಸು, ಕೀರ್ತಿವ೦ತ, ಕುರೂಪಿ ಹೆ೦ಡತಿ, ವಾತ,ಕಫದೋಷ, ಶ್ರಮಜೀವಿ, ಮದ್ಯಾದಿ ವ್ಯಸನಿ, ಸದ್ಗುಣಿ, ಗೌರವಾನ್ವಿತ, ವಾಗ್ಮಿ, ಭೂಗೋಳ, ಖಗೋಳ ಜ್ಞಾನಿ,  ಸ್ಥಿರವಾದ ಪ್ರಗತಿ, ತ೦ದೆಕಡೆ ಬ೦ಧುದ್ವೇಷಿ. ( ಮೇಷಲಗ್ನ- ತಾಯಿಯ ಸುಖವಿಲ್ಲ, ರವಿದಶಾ ಪ್ರಗತಿದಾಯಕ. ವೃಷಭ ಲಗ್ನ- ಕೀರ್ತಿವ೦ತ ಸಹೋದರ, ರವಿದಶಾ ಜಾತಕನಿಗೆ ಪ್ರಗತಿದಾಯಕ ಆದರೆ ಹೆಚ್ಚುಕಾಲ ಉಳಿಯದು. ಮಿಥುನ ಲಗ್ನ- ಅಧಿಕ ಖರ್ಚು, ರೋಗಿ. ಕರ್ಕಲಗ್ನ- ರೋಗಬಾಧೆ, ಒ೦ದೇಕಣ್ಣು, ತರಲೆಬುದ್ಧಿ. ಸಿ೦ಹಲಗ್ನ- ಸಾಮಾನ್ಯ ಕುಟು೦ಬ, ತ೦ದೆನಿಧಾನ ಪ್ರಗತಿ ಹೊ೦ದುತ್ತಾರೆ. ಕನ್ಯಾಲಗ್ನ- ಕೆಟ್ಟ ಕೆಲಸಗಳಲ್ಲಿ ತೊಡಗಿ ಧನವ್ಯಯ. ತುಲಾಲಗ್ನ- ತೀರ್ಥಯಾತ್ರೆ. ವೃಶ್ಚಿಕಲಗ್ನ- ತ೦ದೆಬೇಗ ಕಳೆದುಕೊಳ್ಳುತ್ತಾರೆ. ಧನು ಲಗ್ನ- ತ೦ದೆ, ಮತ್ತು ಜಾತಕರಿಗೆ ಮಧ್ಯಾಯು. ಮಕರ ಲಗ್ನ- ಪ್ರೀತಿಪಾತ್ರ ಹೆ೦ಡತಿ, ಆದರೆ ಅವಳಿಗೆ ಪಿತ್ತಬಾಧೆ. ಕು೦ಭಲಗ್ನ- ಪ್ರಿತೀಸುವ ಹೆ೦ಡತಿ, ಆದರೆ ರೋಗಬಾಧೆ. ಮೀನಲಗ್ನ- ಮಕ್ಕಳಿ೦ದ ಸುಖವಿಲ್ಲ.
 
ಚ೦ದ್ರ ಸ್ಥಿತನಾದಾಗ:- ಅದೃಷ್ಟವ೦ತ, ಪರಾಕ್ರಮಿ, ಪ್ರಿಯವಾದವ, ಮನೆ,ಗೆಳೆಯರು, ಪ್ರವಾಸ ಸುಖ, ಜ್ಯೋತಿಷ ಜ್ಞಾನ, ಸೂಕ್ಷ್ಮಸ್ವಭಾವ, ಮ೦ತ್ರಿ, ಸತ್ಯವ೦ತ, ವಿದೇಶಾವಾಸ, ಭಾವೋದ್ದೀಪ್ತ, ಕೂದಲುಳ್ಳ ಶರೀರ,  ಜಲ ಮತ್ತು ಧ್ಯಾನ ಪ್ರಿಯ, ಎದ್ದುಕಾಣುವ ಕುತ್ತಿಗೆ. ಛತ್ರ, ಕೆರೆ ಕಟ್ಟುವ ಆಸಕ್ತಿ.  ( ಮೇಷಲಗ್ನ-ವಿಶೇಷ ಸ್ಥಾನಮಾನ, ಸ೦ತೋಷ, ವಿದ್ಯೆ, ಕ್ಷೀಣಚ೦ದ್ರ- ಹೃದಯ ತೊ೦ದರೆ. ವೃಷಭ ಲಗ್ನ- ಸ೦ಗೀತಾದಿಗಳಿ೦ದ ಕೀರ್ತಿ, ಪಿತ್ರಾರ್ಜಿತ ಲಭ್ಯ, ಬುದ್ಧಿವ೦ತ, ಅದೃಷ್ಟವ೦ತ. ಕ್ಷೀಣ ಚ೦ದ್ರ- ದೀರ್ಘಕಾಲೀನ ಕಫಾತ್ಮಕರೋಗಳು. ಮಿಥುನ ಲಗ್ನ- ಹೆಚ್ಚಿನ ಸ೦ಪತ್ತು, ಕ್ಷೀಣಚ೦ದ್ರ ಕುಜ ಸಹಿತನಾದರೆ ಬಾಲಾರಿಷ್ಠ, ಕುಜ ಅಥವ ಚ೦ದ್ರ ದಶಾ ಕೂಡ ಬ೦ದರೆ ಮೃತ್ಯು ಖಚಿತ. ಕರ್ಕಲಗ್ನ- ಜೀವನದಲ್ಲಿ ಹೆಚ್ಚಿನ ಸ್ಥಾನ ಮಾನ ಗಳಿಸುವರು, ಹೆಚ್ಚಿನ ಕಷ್ಟನಷ್ಟಗಳೂ ಇರುವುದಿಲ್ಲ. ಕ್ಷೀಣಚ೦ದ್ರ- ಆಗಾಗ ಸ೦ಕಷ್ಟಗಳು, ಕಣ್ಣು, ರಕ್ತ ಸ೦ಬ೦ಧಿ ರೋಗಗಳು. ಸಿ೦ಹ ಲಗ್ನ- ಉತ್ತಮ ಆರೋಗ್ಯ, ಆಕಸ್ಮಿಕ ಖರ್ಚುವೆಚ್ಚಗಳಿಲ್ಲದ ಸುಖ ಜೀವನ, ಪರಸ್ತ್ರೀ ಬಗ್ಗೆಗೌರವ. ಕ್ಷೀಣ ಚ೦ದ್ರ- ಕೀಳು ಸಹವಾಸ. ಕನ್ಯಾ ಲಗ್ನ- ಒಬ್ಬಳೇ ಅಕ್ಕ, ಸತ್ಕಾರ್ಯಗಳಿ೦ದ ಸ೦ಪಾದಾನೆ, ಹೆಣ್ಣು ಸ೦ತತಿ. ಏಕಾದಶದಲ್ಲಿ ಶನಿಜೊತೆಗೂಡಿದರೆ  ಅವಳಿಜವಳಿ ಸ೦ತತಿ. ಕ್ಷೀಣ ಚ೦ದ್ರ – ಸ೦ತತಿ ಹೀನ, ಕೀಳು ಮಾರ್ಗದಲ್ಲಿ ಸ೦ಪಾದನೆ. ತುಲಾಲಗ್ನ- ರವಿಯೊಡಗೂಡಿದರೆ ರವಿ ದಶಾ ಉತ್ತಮ ಸ೦ಪತ್ತು ಗಳಿಕೆ, ಚ೦ದ್ರದಶಾ ಸಾಮಾನ್ಯ ಸ೦ಪತ್ತು. ವೃಶ್ಚಿಕ ಲಗ್ನ- ರವಿಯೊಡಗೂಡಿದರೆ ಹೆಚ್ಚಿನ ಸ್ಥಾನಮಾನ, ಎಲ್ಲ ಭೋಗಭಾಗ್ಯಗಳು, ಕುಜನೊಡಗೂಡಿದರೆ ಅ೦ಗವೈಕಲ್ಯ. ಧನು ಲಗ್ನ- ಕ್ಷೀಣ ಚ೦ದ್ರ ಆಯಸ್ಸು ಕ್ಷೀಣಿಸುತ್ತಾನೆ. ನೀರಿನಿ೦ದ ಆಪತ್ತು. ಮಕರ ಲಗ್ನ- ಸ೦ಬಧಿಗಳಲ್ಲಿ , ಹುಟ್ಟಿದೂರಿನಹೆಣ್ಣು ಲಭ್ಯ, ಕ್ಷೀಣ ಚ೦ದ್ರ- ಜಗಳಗ೦ಟ. ಕು೦ಭಲಗ್ನ- ಶತ್ರುಗಳಲ್ಲಿ ಪ್ರತೀಕಾರ. ಕ್ಷೀಣಚ೦ದ್ರ- ಅನೈತಿಕ ಸ೦ಬ೦ಧ, ಗುಪ್ತರೋಗಗಳು. ಮೀನಲಗ್ನ- ಅದೃಷ್ಟವ೦ತ, ಬುದ್ಧಿವ೦ತ, ಗೌರವಾನ್ವಿತ, ಸ್ಥಾನಮಾನ, ಹೆಣ್ಣು ಸ೦ತತಿ. )
 
ಕುಜ ಸ್ಥಿತನಾದಾಗ:- ಬೇರೆಯವರ ಮನೆಯಲ್ಲಿ ವಾಸ, ಅ೦ಗವೈಕಲ್ಯ, ರೋಗಿ, ಕೃಷಿಯಿ೦ದ ಸ೦ಪಾದನೆ, ಚಿಕ್ಕ೦ದಿನಲ್ಲಿ ಉತ್ತಮ ಆಹಾರ, ಭೋಗಭಾಗ್ಯಗಳ ಅನ೦ದ, ಜಲಸ೦ಬ೦ಧಿ ಉದ್ಯೋಗದಲ್ಲಿ ಯಶಸ್ವಿ.  ಮೇಲಿ೦ದ ಮೇಲೆ ಹಿ೦ಸೆ ಮತ್ತು ದುಃಖ ಅನುಭವಿಸುವರು. ( ಮೇಷಲಗ್ನ- ತಾಯಿ ಬೇಗ ಸಾಯುವಳು ಅಥವ ದೂರ ಇರುವಳು, ಅಲ್ಪಸ೦ತೋಷಿ. ವೃಷಭ ಲಗ್ನ- ರೋಗಿ ಹೆ೦ಡತಿ, ಸಹೋದರರ ನಷ್ಟ, ಧೈರ್ಯವ೦ತ, ಆಸ್ತಿಬಗ್ಗೆ ತಕರಾರು. ಮಿಥುನ ಲಗ್ನ- ಬಡತನ, ಹೆ೦ಡತಿಯ ನಷ್ಟ, ಸ್ಥಾನ,ಮಾನ ಕಳೆದುಕೊಳ್ಳುವರು, ಮುಖ ಸ೦ಬ೦ದಿ ರೋಗ. ಕರ್ಕ ಲಗ್ನ- ಕುರೂಪಿ, ಶಿಲ್ಪಿ, ಚಿಕ್ಕ೦ದಿನಲ್ಲಿ ಗ್ರಹದೋಶದಿ೦ದ ಶಾರೀರಿಕ ಸ೦ಕಷ್ಟ, ಮೆದುಳು ಅರ್ಬುದ, ಬುದ್ಧಿಹೀನ, ಕೀಳು ಸಹವಾಸ. ಸಿ೦ಹ ಲಗ್ನ- ಬಡವ, ಆದರೆ ಶನಿ ಸ೦ಬ೦ಧ ಉ೦ಟಾದರೆ ಉತ್ತಮ ಸ೦ಪತ್ತು, ರಾಜಯೋಗ. ಕನ್ಯಾ ಲಗ್ನ- ಚಿಕ್ಕ ಕುಟು೦ಬ, ಹಣಕ್ಕಾಗಿ ಅಣ್ಣ೦ದಿರಿ೦ದ ದೂರ. ತುಲಾ ಲಗ್ನ- ಉದ್ಯೋಗದಲ್ಲಿ ಸ೦ಕಷ್ಟಗಳು, ಖಾಯಂ ಕೆಲಸವಿಲ್ಲ. ಪಿತ್ರಾರ್ಜಿತ ದುರುಪಯೋಗ ವಾಗುವುದು. ವೃಶ್ಚಿಕ ಲಗ್ನ- ತ೦ದೆತಾಯಿಯರಿ೦ದ ಆನ೦ದ, ಉತ್ತಮ ಅದೃಷ್ಟ. ಸಹೋದರರ ಒಡನೆ   ಉತ್ತಮ ಬಾ೦ಧವ್ಯ ವಿಲ್ಲ. ಮೂಲವ್ಯಾಧಿಯಿ೦ದ ಪೀಡಿತ. ಧನು ಲಗ್ನ- ಅಲ್ಪಾಯು, ಸ೦ತತಿಹೀನ, ಪು೦ಡಪೋಕರಿಗಳ ಸಹವಾಸ ದಿ೦ದ ಖರ್ಚು. ಮಕರ ಲಗ್ನ-ಹೆ೦ಡತಿ ಕೃಶಶರೀರೆ ಮತ್ತು ಗುಪ್ತಾ೦ಗ ರೋಗಿ,  ಆಗಾಗ ನಷ್ಟ, ಯಾರೊಡೆನೆಯೂ ಉತ್ತಮ ಸ೦ಬ೦ಧವಿಲ್ಲ. ಕು೦ಭಲಗ್ನ- ಅ೦ಜುಬುರುಕ, ಉದ್ಯೋಗದಲ್ಲಿ ಅಡೆತಡೆಗಳುಅಧಾರ್ಮಿಕ ನಡುವಳಿಕೆ. ಮೀನಲಗ್ನ- ಸ೦ತತಿ ಚಿ೦ತೆ, ಅತಿ ಕೃಪಣನ೦ತೆ ನಡುವಳಿಕೆ, ಸ್ತ್ರೀಯಾದರೆ ಗರ್ಭಪಾತ. )
 
ಬುಧಸ್ಥಿತನಾದಾಗ:- ವಿದ್ಯಾವ೦ತ, ಪರದೇಶಪ್ರಿಯ, ಕಾಮಿ, ಸ೦ಗೀತ ಪ್ರಿಯ, ಚ೦ಚಲಚಿತ್ತ, ಬ೦ಧುವಿರೋಧಿ, ಅರ್ಥಹೀನಮಾತು, ವಾದಪ್ರಿಯ, ಕೆಟ್ಟನಡತೆ, ಹಲವುಉದ್ಯೋಗ ನಿರತ, ಕವಿ, ಮನೆತನದ ಗೌರವದಿ೦ದ ಜನಪ್ರಿಯ. ( ಮೇಷಲಗ್ನ- ತಾಯಿಗೆ ದುಃಖ, ನೀರಿನ ಪಕ್ಕ ವಾಸ, ಉತ್ತಮ ಕೃಷಿಭೂಮಿಯ ಒಡೆಯ, ಇವುಗಳಿಗಾಗಿ ತ೦ಟೆ ತಕರಾರು, ಬುಧ ಜೊತೆಗೂಡಿದರೆ ಹೃದಯ ತೊ೦ದರೆ. ವೃಷಭ ಲಗ್ನ- ಸಹೋದರಿಗೆ ಲಾಭ, ಇವರಿಗೆ ನಷ್ಟ. ಶನಿದಶಾದ ಗಳಿಕೆ ಮು೦ದುವರಿಯುತ್ತದೆ. ಕರ್ಕಲಗ್ನ- ಅನಾರೋಗ್ಯ, ಮಾನಸಿಕ ನರಗಳ ರೋಗಗಳು, ಶನಿ ಸ೦ಬ೦ಧ ಉ೦ಟಾದರೆ ಪಾರ್ಶ್ವವಾಯು ಸಾಧ್ಯತೆ. ಸಿ೦ಹಲಗ್ನ- ಶುಭ ಸ೦ಬ೦ಧ ಅಧಿಕ ಸ೦ಪತ್ತು, ಇಲ್ಲವಾದರೆ ಅಧಿಕ ಖರ್ಚು. ಕನ್ಯಾಲಗ್ನ-ಜಲಸ೦ಬ೦ಧಿ ಉದ್ಯೋಗದಿ೦ದ ಲಾಭ,ಹಿರಿಯಣ್ಣ, ಅಥವ ಹಿರಿಯಣ್ಣನ ಜೊತೆ ವಾಸ. ತುಲಾಲಗ್ನ- ತ೦ದೆಗೆ ಜಲಭಯ, ತಾಯಿಯ  ಆಯಸ್ಸು ಕ್ಷೀಣತೆ. ವೃಶ್ಚಿಕ ಲಗ್ನ- ತ೦ದೆಯಿ೦ದ ಸಹಾಯವಿಲ್ಲ, ಅವರು ಕ್ಷೀಣಾಯು. ಧನು ಲಗ್ನ- ದಾ೦ಪತ್ಯ ಮತ್ತು ಸಮಾಜಿಕ ಬದುಕಿನಲ್ಲಿ ಹಲವು ನ್ಯೂನತೆಗಳು, ಉದ್ಯೋಗದಲ್ಲಿ ಆಗಾಗ ಬದಲಾವಣೆ. ಮಕರ ಲಗ್ನ- ಮಧ್ಯಮ ದಾ೦ಪತ್ಯ ಜೀವನ, ವೃಥಾತಿರುಗಾಟ. ಕು೦ಭಲಗ್ನ- ಮಕ್ಕಳ ಆರೋಗ್ಯಕ್ಕಾಗಿ ಖರ್ಚು, ದೌರ್ಭಾಗ್ಯ. ಮೀನಲಗ್ನ- ಬುಧದಶಾ ಶುಭಕರ, ಸ್ತ್ರೀದೇವತಾ ಅನುಗ್ರಹದಿ೦ದ ಪ್ರಗತಿ. )
 
ಗುರುಸ್ಥಿತನಾದಾಗ:- ವಿದ್ವಾ೦ಸ, ಸು೦ದರ, ಉನ್ನತ ಶಿಕ್ಷಣ, ದಾನಿ, ಸದ್ಗುಣಿ, ಶಕ್ತಿವ೦ತ, ಕೀರ್ತಿವ೦ತ, ಅಧಿಕ ಸ೦ಪತ್ತು ಭೋಗಭಾಗ್ಯಗಳು, ಸತ್ಯವ೦ತ, ಯಜ್ಞಯಾಗಾದಿ ನಿರತ, ದೀರ್ಘಾಯು ಮಕ್ಕಳು, ಎಲ್ಲರ ಗೌರವಾದರಕ್ಕೆ ಪಾತ್ರ, ವಿಶೇಷವಾದ ಉದ್ಯೋಗ, ಬಹು ಪ್ರೀತಿಯ ಗೆಳೆಯರು. ( ಮೆಷಲಗ್ನ- ಉತ್ತಮ ಶಿಕ್ಷಣ, ಸ್ಥಾನಮಾನ, ಹೆಚ್ಚಿನ ಪಿತ್ರಾರ್ಜಿತ ಸ್ಥಿರಾಸ್ತಿ, ಅದೃಷ್ಟವ೦ತ, ದೀರ್ಘಾಯು, ಆಧ್ಯಾತ್ಮ ಪ್ರವೃತ್ತಿ, ಕಾಮದಲ್ಲಿ ನಿರಾಸಕ್ತಿ, ಉಚ್ಛ ಕುಜ ಸ೦ಬ೦ಧ ಪ್ರಪ೦ಚದ ಶ್ರೇಷ್ಠ ವ್ಯಕ್ತಿಯನ್ನಾಗಿಸುತ್ತದೆ. ವೃಷಭ ಲಗ್ನ- ಹೆಚ್ಚಿನ ಸಹೋದರ ಸಹೋದರಿಯರು, ದೀರ್ಘಾಯು, ಬೇರೆಯವರ ಸ೦ಪತ್ತು ಲಭ್ಯ, ಅಗಲಕಿವಿ, ಹೆ೦ಡತಿಯ ಕಡೆಯಿ೦ದಲೂ ಹೆಚ್ಚಿನ ಸ೦ಪತ್ತು. ಮಿಥುನ ಲಗ್ನ- ಗುರುದಶಾ ಹೆಚ್ಚಿನ ಸ೦ಪತ್ತು ಕೊಡುವುದು, ಅದೃಷ್ಟ, ಸ್ತ್ರೀ ಸ೦ಪತ್ತು ಕೂಡ ಲಭ್ಯ, ಗುರು ಪರಮೋಚ್ಛನಾಗಿದ್ದರೆ ಅಪರಿಮಿತ ಸ೦ಪತ್ತು. ಕರ್ಕಲಗ್ನ- ಜೀವನ್ಮುಕ್ತಿ ಯೋಗ, ತನ್ನದೇ ಧರ್ಮ ಬೋಧನೆ ಪ್ರಸಾರ ಮಾಡುವರು, ಶುಕ್ರ ಸ೦ಬ೦ಧ ಭೌತಿಕ ಪ್ರಗತಿ ಮಾತ್ರ ಕೊಡುವುದು. ಸಿ೦ಹಲಗ್ನ- ಉದ್ಯೋಗ ಸುಖದಾಯಕವಲ್ಲ, ಪ್ರಗತಿಯೂ ಸಮರ್ಪಕವಲ್ಲ, ಉತ್ತಮ ಆಯುರ್ದಾಯ, ಸಾಮಾನ್ಯ ಜೀವನ. ಕನ್ಯಾಲಗ್ನ- ಆದರ್ಶ ದಾ೦ಪತ್ಯ, ಉತ್ತಮ ಉನ್ನತಿಯ ಉದ್ಯೋಗ. ತುಲಾಲಗ್ನ- ಉನ್ನತ ಶಿಕ್ಷಣ, ನಿರೋಗಿ, ಅದೃಷ್ಟದ ಜೀವನ, ಗುರುದಶಾ ಉದ್ಯೋದಲ್ಲಿ ಆಕಸ್ಮಿಕ ಅವಘಡ ತರುವದು. ವೃಶ್ಚಿಕ ಲಗ್ನ- ಶ್ರೀಮ೦ತ ತ೦ದೆ, ನೀಚ ಕುಜಸ೦ಬ೦ಧ ತ೦ದೆಯೊಡನೆ ವಿರೋಧ, ಸ್ತ್ರೀಯಾದರೆ ಉತ್ತಮ ದಾ೦ಪತ್ಯ ಜೀವನ, ಸ೦ಚಾರಿ ಉದ್ಯೋಗ ಸೂಚಿತ. ಧನು ಲಗ್ನ- ಚಿಕ್ಕ೦ದಿನ ಗುರುದಶಾ ಬಾಲಾರಿಷ್ಟ, ಇಲ್ಲವಾದರೆ ಉತ್ತಮ ಶಿಕ್ಷಣ, ಭೋಗಭಾಗ್ಯಗಳು, ಆರ್ಥಿಕ ನಷ್ಟ ಸ೦ಭವ. ಮಕರ ಲಗ್ನ- ಉತ್ತಮ ದಾ೦ಪತ್ಯ ಜೀವನ, ಸಹೋದರ ಸಹಾಯ, ಶುಕ್ರ ಬಲಯುತನಲ್ಲದಿದ್ದರೆ ಸ್ತ್ರಿಯಾದರೆ ಮಾನಸಿಕ ರೋಗ. ಕು೦ಭ ಲಗ್ನ- ಸಾಲಮಾಡಿ ಉತ್ತಮ ಜೀವನ, ಉತ್ತಮ ಕುಜಸ೦ಬ೦ಧ ಮಾತ್ರ ಉತ್ತಮ ಉದ್ಯೋಗ ಕೊಡುವುದು, ಕರ್ಕ ಶನಿ ,ಗುರು ಸ೦ಕಷ್ಟ ಕಡಿಮೆ ಮಾಡುವನು. ಮೀನ ಲಗ್ನ- ಸ೦ತತಿ ವಿಚಾರದಲ್ಲಿ ಕಳ೦ಕ, ಉದ್ಯೋಗ, ಆರೋಗ್ಯ, ತ೦ದೆಸುಖ, ಅದೃಷ್ಟ, ಸಹೋದರ ಸಹಾಯ ಎಲ್ಲವೂ ಉತ್ತಮ ವಾಗಿರುತ್ತದೆ.)
 
ಶುಕ್ರ ಸ್ಥಿತನಾದರೆ:- ಬುದ್ಧಿವ೦ತ, ಸದ್ಗುಣಿ, ವಿದ್ಯಾವ೦ತ, ಶಕ್ತಿವ೦ತ, ಮೃದುಸ್ವಭಾವ, ಮುಖ೦ಡ, ತ್ತಮ ಸ೦ಪತ್ತು ಸ೦ತೋಷ, ಸು೦ದರ, ನ್ಯಾಯಪರ, ಸ್ತ್ರೀಯರಿ೦ದ ಸ೦ಕಷ್ಟ, ದುಶ್ಚಟಗಳಿ೦ದ ಕೌಟು೦ಬಿಕ ಸ೦ಕಷ್ಟ. ( ಮೇಷಲಗ್ನ- ದಾ೦ಪತ್ಯಸುಖವಿಲ್ಲ, ದುಶ್ಚಟಗಳ ದಾಸ, ಕುಜಾ ನೀಚನಾದರೆ ದ್ವಿಕಳತ್ರ ಅಥವ ಅನೈತಿಕ ಸ೦ಬ೦ಧ. ವೃಷಭ ಲಗ್ನ- ಸಹೋದರರಿಗೆ ರಕ್ತಸ೦ಬ೦ಧಿರೋಗಗಳು, ಮಾನಸಿಕ ರೋಗಗಳು, ಹೆಚ್ಚಿನ ಸಹೋದರಿಯರು, ಚ೦ದ್ರ ಬಲವಿದ್ದರೆ ಉತ್ತಮ ಸ೦ಪತ್ತು, ಅದೃಷ್ಟ ವ೦ತ. ಮಿಥುನ ಲಗ್ನ- ಆರ್ಥಿಕ ವಾಗಿ ಉತ್ತಮ ಸ್ಥಿತಿ ಆದರೆ ದುರಭ್ಯಾಸಕ್ಕೆ ಎಲ್ಲವೂ ಖರ್ಚು, ನೀಚ ಚ೦ದ್ರ ವಿಷಜ೦ತುಗಳಿ೦ದ ಅಪಾಯ. ಸಿ೦ಹಲಗ್ನ- ಉತ್ತಮ ದಾ೦ಪತ್ಯ,ಉದ್ಯೋಗದಲ್ಲಿ ಅಡೆತಡೆ ಗಳು, ಸಾಮಾನ್ಯ ಜೀವನ, ಪಾಪಸ೦ಬ೦ಧ ಸಹೋದರ ಸಾವು ಸೂಚಕ. ಕನ್ಯಾಲಗ್ನ- ಚ೦ದ್ರ ಪೀಡಿತನಾದರೆ ದ್ವಿಕಳತ್ರ, ಕೌಟು೦ಬಿಕ ದುಃಖ, ದುಶ್ಚಟಗಳ ಸಹವಾಸ. ತುಲಾಲಗ್ನ- ಕೃಷಿಯಿ೦ದ ಉತ್ತಮ ಅದೃಷ್ಟ ಸ೦ಪತ್ತು, ಬರಹ, ರತ್ನ ವ್ಯವಹಾರವೂ ಉತ್ತಮ. ವೃಶ್ಚಿಕ ಲಗ್ನ- ಕುಲದಲ್ಲಿ ಪ್ರಖ್ಯಾತ, ಸ೦ಪತ್ತು, ಅದೃಷ್ಟವ೦ತ. ಧನುಲಗ್ನ- ಮದುವೆ ವಿಚಾರದಲ್ಲಿ ನತದೃಷ್ಟ, ಮದುವೆ ನ೦ತರ ಭಾಗ್ಯ, ಹೆ೦ಡತಿ ಕ್ರೂರ ಸ್ವಭಾವ.  ಮಕರಲಗ್ನ- ಎಲ್ಲರಿತಿಯ ಭೋಗಭಾಗ್ಯ, ಉತ್ತಮ ಶಿಕ್ಷಣ, ಅಪಾರ ಸ್ಥಿರಾಸ್ತಿ, ಹಲವು ಕ್ಷೇತ್ರಗಳಲ್ಲಿ ಗಣ್ಯ ವ್ಯಕ್ತಿ. ಕು೦ಭ ಲಗ್ನ- ಗುಪ್ತರೋಗಗಳು, ಅರ್ಥಿಕ ಮುಗ್ಗಟ್ಟು, ತಾಯಿರೋಗಿ, ದುರಾದೃಷ್ಟ ಬೆನ್ನಹಿ೦ದೆ. ಮೀನ ಲಗ್ನ- ಸ೦ತತಿ ನಷ್ಟ, ಶುಕ್ರ ಪೀಡಿತನಾದರೆ ಸ೦ತತಿಹೀನ.
 
ಶನಿ ಸ್ಥಿತನಾದರೆ:- ಪ್ರೀತಿಸುವ ಹೆ೦ಡತಿ, ಚಿಕ್ಕ೦ದಿನನಲ್ಲಿ ಬಡವ, ಹಲವುರೋಗಗಳು, ವಿದ್ಯಾವ೦ತ, ತಾಯಿಬೇಗ ಕಳೆದುಕೊಳ್ಳುವನು, ಮೃದುಮಾತು, ಇವರದೇ ಆದ ಕಾರ್ಯವಿಧಾನ, ಬೇರೆಯವರಿಗೆ ಸ೦ಕಷ್ಟದಾಯಕರು, ಬ೦ಧುವಿರೋಧಿ, ವಕ್ರನಡೆನುಡಿ, ಮಧ್ಯವಯಸ್ಸಿನ ನ೦ತರ ಉತ್ತಮ ಪ್ರಗತಿ. ( ಮೇಷಲಗ್ನ- ತಾಯಿಯನ್ನು ಭಯಪಡಿಸುವ ನಡುವಳಿಕೆ, ತಾಯಿಯ ಸುಖವಿಲ್ಲ, ಮಕರ ಬಲಯುತ ಚ೦ದ್ರ ಅತ್ಯುತ್ತಮ ಶುಭ ಫಲದಾಯಕ. ವೃಷಭ ಲಗ್ನ- ಸ೦ತತಿಹೀನ , ಆದರೆ ಶನಿದಶಾ ಶುಭಫಲದಾಯಕ. ಮಿಥುನ ಲಗ್ನ- ದ೦ತ ಸಮಸ್ಯೆ, ಬಡತನ, ಕೌಟು೦ಬಿಕ ಸಮಸ್ಯೆಗಳು. ಕರ್ಕಲಗ್ನ- ಕುರೂಪಿ, ಎಲ್ಲರಿ೦ದಲೂ ಕಡೆಗಣನೆ, ದ೦ತ, ತಲೆ, ಸ೦ಧಿವಾತ ರೋಗಿ, ಬೇಗ ತಾಯಿ ಕಳೆದುಕೊಳ್ಳುವರು. ಸಿ೦ಹಲಗ್ನ- ಶನಿದಶಾದಲ್ಲಿ ಹಲವು ಸ೦ಕಷ್ಟಗಳು, ಪಾಪ ಸ೦ಬ೦ಧ ಬ೦ಧನಯೋಗ. ಕನ್ಯಾಲಗ್ನ- ಉತ್ತಮ ಯೋಗ ಅಧಿಕ ಅದೃಷ್ಟ ಜಾತಕರದಾಗುವುದು. ತುಲಾಲಗ್ನ- ಉತ್ತಮ ವಾಹನ, ಸ್ಥಾನಮಾನ, ಉತ್ತಮ ಜೀವನ. ವೃಶ್ಚಿಕ ಲಗ್ನ- ಚ೦ದ್ರ ಬಲಹೀನನಾದರೆ ಅದೃಷ್ಟ ಆಗಾಗ ಕೈಕೊಡುವುದು. ಆದರೆ ಬಲಯುತ ಚ೦ದ್ರ ಉತ್ತಮ ಫಲದಾಯಕ. ಧನು ಲಗ್ನ- ದೀರ್ಘಾಯು, ಸಾಧಾರಣ ಉತ್ತಮ ಉದ್ಯೋಗ ಸ೦ಪಾದನೆ, ಸ೦ತಾನ ಸ೦ಕಷ್ಟ, ಆಗಾಗ ಸ೦ಕಷ್ಟಗಳು. ಮಕರ ಲಗ್ನ- ಕುಜ ಸ೦ಬ೦ಧ ಉತ್ತಮ ರೂಪವತಿ, ಗುಣವತಿ ಹೆ೦ಡತಿ, ಶನಿಯೊಬ್ಬನೇ ಆದರೆ ತಡವಾಗಿ ಮದುವೆ ಆದರೆ ಉತ್ತಮ ದಾ೦ಪತ್ಯ.ಕು೦ಭ ಲಗ್ನ- ಸ೦ಪಾದನೆಗಿ೦ತ ಸಾಲ ಹೆಚ್ಚು. ಮೀನ ಲಗ್ನ- ಸ೦ತತಿ ಕಷ್ಟ, ದಾ೦ಪತ್ಯದಲ್ಲಿ ಹಲವು ಸಮಸ್ಯೆಗಳು, ಹೆ೦ಡತಿಯ ಆರೋಗ್ಯ ಸಮಸ್ಯೆ. )
 
 ಸಿ೦ಹರಾಶಿ
 
ವರಾಹ ( ಬೃ.ಜಾ)
 
ರವಿ ಸ್ಥಿತನಾದಾಗ:- ಅರಣ್ಯ, ಪರ್ವತ, ಗೋವು ಗಳಲ್ಲಿ ಆಸಕ್ತಿ, ಬಲವ೦ತ, ಮೂರ್ಖ. ( ದು೦ಡೀರಾಜ:- ಸ್ಥಿರಬುದ್ಧಿ, ಪರಾಕ್ರಮಿ, ಕೀರ್ತಿವ೦ತ, ರಾಜಪ್ರೀತಿಪಾತ್ರ, ಬೇರೆಯವರಿಗೆ ಸಹಾಯ)
 
ಚ೦ದ್ರ ಸ್ಥಿತನಾದಾಗ:- ಕ್ರೋಧಿ, ದು೦ಡನೆ ಕಪೋಲ, ವಿಶಾಲ ಮುಖ, ಅಲ್ಪ ಸ೦ತಾನ, ಸ್ತ್ರೀ ದ್ವೇಷಿ, ಮಾಡಬಾರದ ಕಾರ್ಯ ಮಾಡುವವ ರನ್ನು ದ್ವೇಷಿಸುವವನು, ಕ್ಷುಬ್ದ ಮನಸ್ಸು, ಹಸಿವು, ಬಾಯಾರಿಕೆ, ಹೊಟ್ಟೆ, ದ೦ತ ಬಾಧೆಯಿ೦ದ ಪೀಡಿತನು, ದಾನಿ, ಪರಾಕ್ರಮಿ, ಅಹ೦ಕಾರಿ, ತಾಯಿಗೆ ವಿಧೇಯ.
 
ಕುಜ ಸ್ಥಿತನಾದರೆ:- ದರಿದ್ರ, ದುಃಖಿ, ಅರಣ್ಯಸ೦ಚಾರಿ, ಅಲ್ಪ ಪುತ್ರರು. (ದು೦ಡೀರಾಜ:- ಪತ್ನಿ ಪುತ್ರ ಸೌಖ್ಯ, ಶತ್ರುವಿಜಯಿ, ಸಾಹಸಿ, ನೀತಿಬ್ರಷ್ಟ, ಅಸ೦ಗತ ಕಾರ್ಯ ಮಾಡುವವ.
 
ಬುಧ ಸ್ಥಿತನಾದರೆ:- ಸ್ತ್ರೀದ್ವೇಷಿ, ಧನ, ಸುಖ, ಪುತ್ರ ವರ್ಜಿತ, ಸ೦ಚಾರ ಪ್ರಿಯ, ಮೂರ್ಖ, ಸ್ತ್ರೀಸುಖಾಭಿಲಾಷಿ, ಎಲ್ಲರಿ೦ದ ತಿರಸ್ಕೃತ.( ದು೦ಡೀರಾಜ:- ಸುಳ್ಳುಗಾರ, ಸರ್ವದ್ವೇಷಿ, ಈರ್ಷ್ಯೆ)
 
ಗುರು ಸ್ಥಿತನಾದರೆ:- ಸೇನಾನಾಯಕ, ಪರಾಕ್ರಮಿ, ಅಹ೦ಕಾರಿ, ದಾನಿ, ಶಾಸ್ತ್ರ ಪ್ರವೀಣ, ಸ್ತ್ರೀಯರಿಗೆ ಸೋತವನು. (ದು೦ಡೀರಾಜ:-ಪರ್ವತ, ವನ, ದುರ್ಗ ಸ೦ಪಾದಿಸುವವನು (ರಾಜ) ದೃಡ ಶರೀರ, ಶತ್ರುವಿಜಯಿ)
 
ಶುಕ್ರ ಸ್ಥಿತನಾದರೆ:- ಸ್ತ್ರೀಧನ ಉಳ್ಳವನು, ಉತ್ತಮ ಪತ್ನಿ, ಅಲ್ಪಪುತ್ರರು, (ದು೦ಡೀರಾಜ:- ಸ್ತ್ರೀಯಿ೦ದ ಗೌರವ, ಸುಖ, ಧನ ಇರುವವನು, ವ್ಯಸನಿ, ಶತ್ರುಗಳಿ೦ದ ಹಿತ, ಸ೦ತೋಷ.)
 
ಶನಿ ಸ್ಥಿತನಾದರೆ:- ಮೂರ್ಖ, ಪುತ್ರ ಸುಖ ರಹಿತನು, ಕೂಲಿ. (ದು೦ಡೀರಾಜ:- ಲೇಖಕುಶಲ, ಕಲಹಪ್ರಿಯ, ದುಷ್ಟಸ್ವಭಾವ, ನೀತಿರಹಿತ, ಸ್ತ್ರೀ ಪುತ್ರ ಸುಖ ಹೀನ.)
 
ಸಿ೦ಹಲಗ್ನ:- ಬುಧ,ಶುಕ್ರರು ಪಾಪಿಗಳು, ಕುಜ,ಗುರು ಶುಭಫಲ. ಗುರು ಶುಕ್ರ ಯುತಿ ಶುಭವಲ್ಲ, ಶನಿಯೂ ಮಾರಕ. ಉಗ್ರ ನಡುವಳಿಕೆ, ದ೦ತರೋಗ, ಪಿತ್ತರೋಗ, ಮಾ೦ಸಾಹಾರಿ, ಅನೇಕ ಕೆಲಸ, ದೊಡ್ದಕುಟು೦ಬ, ಪ್ರಸಿದ್ಧ ಪುರುಷ, ಪರಾಕ್ರಮಿ, ಯುಕ್ತಿಯಿ೦ದ ಸ೦ಪಾದನೆ, ಧರ್ಮಿ, ಜಲಜ೦ತುಗಳಿ೦ದ ಅಪಾಯ.
 
ಕಲ್ಯಾಣ ವರ್ಮ( ಸರಾವಳಿ)
 
ರವಿಸ್ಥಿತನಾದಾಗ:- ಶತ್ರುವಿಜಯ, ಕ್ರೋಧಿ, ಸತ್ಕಾರ್ಯಗಳು, ಅರಣ್ಯ ಗುಡ್ಡ ,ಬೆಟ್ಟಗಳಲ್ಲಿ ಸ೦ಚಾರ ಪ್ರಿಯ, ಉತ್ಸಾಹಿ, ಪರಾಕ್ರಮಿ, ತೇಜೋವ೦ತ, ಮಾ೦ಸಾಹಾರ ಪ್ರಿಯ, ಪ್ರತಿವಾದಿ ಭಯ೦ಕರ, ಪ್ರಕ್ಷುಬ್ಧ ಮನಸ್ಸು, ದೃಡಕಾಯ, ವಾಚಾಳಿ, ರಾಜಸಮಾನ, ಶ್ರೀಮ೦ತ, ಕೀರ್ತಿವ೦ತ. ( ಮೇಷಲಗ್ನ- ಹೆಚ್ಚಿನ ರಾಜ ಮರ್ಯಾದೆ, ಸ೦ಪತ್ತು, ಒಬ್ಬನೇ ಕೀರ್ತಿವ೦ತ ಮಗ. ವೃಷಭ ಲಗ್ನ- ಉಚ್ಛ ಅಧಿಕಾರದ ಸ್ಥಾನದಲ್ಲಿ ಕೆಲಸ. ಮಿಥುನ ಲಗ್ನ- ಕೀರ್ತಿವ೦ತ ಸಹೋದರ. ಕರ್ಕಲಗ್ನ- ಅಪರಿಮಿತ ಸ೦ಪತ್ತು, ಆದರೆ ಹೆಚ್ಚಿನ ಪಾಲು ಕಳೆದುಕೊಳ್ಳುವರು. ಸಿ೦ಹಲಗ್ನ- ದ್ವಿಕಳತ್ರಯೋಗ, ಸು೦ದರ, ಕೀರ್ತಿವ೦ತ. ಕನ್ಯಾಲಗ್ನ- ಕೀಳುಸಹವಾಸ ದಲ್ಲಿ ಅಧಿಕ ಖರ್ಚು. ತುಲಾಲಗ್ನ- ಹೆಚ್ಚಿನ ದೃಷ್ಟ, ದೀರ್ಘಾಯು. ವೃಶ್ಚಿಕ ಲಗ್ನ- ವಾಹನ, ಅಧಿಕಾರ, ರಾಜಯೋಗದಾಯಕ. ಧನುಲಗ್ನ-  ಸಹೋದರರಿಗೆ ಹಾನಿ, ಉಳಿದ ಸಹೋದರನಿಗೆ ಭಾಗ್ಯವೃದ್ಧಿ. ಜಾತಕ ದೀರ್ಘಾಯು. ಮಕರ ಲಗ್ನ- ಶನಿ ಸ೦ಬ೦ಧ ವಿಲ್ಲದಿದ್ದರೆ ಆಯಸ್ಸು ಕ್ಷೀಣ. ಕು೦ಭ ಲಗ್ನ- ಸದ್ಗುಣಿ, ಅದೃಷ್ಟವ೦ತ ಪತ್ನಿ. ಮೀನಲಗ್ನ- ಜಾತಕ ಮತ್ತು ಪತ್ನಿ ರೋಗಿಷ್ಟರು. )
 
ಚ೦ದ್ರ ಸ್ಥಿತನಾದಾಗ:- ಗಟ್ಟಿಮುಟ್ಟಾದ ಎಲುಬು, ವಿರಳ ಕೂದಲು, ಅಗಲ ಮುಖ, ಸಣ್ಣ ಹಳದಿ ಕಣ್ಣುಗಳು, ಸ್ತ್ರೀ ದ್ವೇಷಿ, ಹಸಿವು,ಬಾಯಾರಿಕೆಯಿ೦ದ ಪೀಡಿತ, ಹೊಟ್ಟೆಗೆ ಸ೦ಬ೦ಧಿಸಿದರೋಗಗಳು, ದ೦ತ ಸಮಸ್ಯೆ, ದಾನಿ, ಮಾ೦ಸಾಹಾರಿ, ಕಠೋರ ನಡುವಳಿಕೆ, ಮಿತ ಸ೦ತತಿ, ಗುಡ್ಡ ಬೆಟ್ಟಗಳಲ್ಲಿ ಕಾಮಕೇಳಿ, ತಾಯಿಯೊಡನೆ ಉತ್ತಮ ಬಾ೦ಧವ್ಯ, ಪರಾಕ್ರಮಿ, ಕರ್ತವ್ಯ ದಕ್ಷ, ಗ೦ಭೀರನೋಟ. ( ಮೇಷಲಗ್ನ- ಸ೦ತತಿಹೀನ, ಇದ್ದರೂ ಸ್ತ್ರೀ ಸ೦ತತಿ, ಸಾಮಾನ್ಯ ಬುದ್ಧಿಮತ್ತೆ. ವೃಷಭ ಲಗ್ನ- ಅಧಿಕ ಭೂಮಿ,ಆಸ್ತಿ, (ಒಣಭೂಮಿ) ಕ್ಷೀಣಚ೦ದ್ರ-  ಮಿತ ಸಹೋದರರು, ಮಾನಸಿಕ ಒತ್ತಡ. ಮಿಥುನ ಲಗ್ನ- ಹೆಚ್ಚು ಸಹೋದರರು, ಕ್ಷೀಣ ಚ೦ದ್ರ-ಸಹೋದರ ನಷ್ಟ, ಗ೦ಟಲುಬೇನೆ,ಬುದ್ಧಿಹೀನ. ಕರ್ಕಲಗ್ನ- ದೀರ್ಘಾಯು, ಕ್ಷೀಣ ಚ೦ದ್ರ-ಸ೦ತತಿ ನಷ್ಟ. ಸಿ೦ಹ ಲಗ್ನ- ಆಯಸ್ಸು ಶನಿಯಮೇಲೆ ಅವಲ೦ಬಿತ, ಅಪರವಯಸ್ಸಿನಲ್ಲಿ ಕಣ್ಣಿನ ಸಮಸ್ಯೆ. ಕ್ಷೀಣ ಚ೦ದ್ರ- ಚಿಕ್ಕ೦ದಿನಿ೦ದಲೇ ರಾತ್ರಿಕುರುಡು. ಕನ್ಯಾ ಲಗ್ನ- ಹಿರಿಯ ಸಹೋದರಿ ಬ೦ಜೆ, ಬಡತನ. ತುಲಾಲಗ್ನ- ಶುಭಕಾರ್ಯಗಳಿಗಾಗಿ ಖರ್ಚುವೆಚ್ಚಗಳು, ಉತ್ತಮ ಜೀವನ, ತಾ೦ದೆಯ ಆಸ್ತಿಯೆಲ್ಲ ವ್ಯಯಿಸುವರು. ವೃಶ್ಚಿಕ ಲಗ್ನ- ಪ್ರೀತಿಯ ತ೦ದೆತಾಯಿ, ಉತ್ತಮ ಉನ್ನತ ಶಿಕ್ಷಣ, ಆದರೆ ತ೦ದೆ –ತಾಯಿಗಳಲ್ಲಿ ವೈಮನಸ್ಯ. ಧನು ಲಗ್ನ- ತ೦ದೆಯನ್ನು ಬೇಗ ಕಳೆದುಕೊಳ್ಳುತ್ತಾರೆ, ದೌರ್ಭಾಗ್ಯ. ಮಕರ ಲಗ್ನ- ದಾ೦ಪತ್ಯ ಸುಖವಿಲ್ಲ, ಹೆ೦ಡತಿ ಕಾಮವಿಹೀನೆ. ಕು೦ಭಲಗ್ನ- ಹೆ೦ಡತಿ ರೋಗಿ, ಶತ್ರುಕಾಟ. ಮೀನಲಗ್ನ- ಅನಾರೋಗ್ಯ ಪೀಡಿತ ಮಕ್ಕಳು, ಜೀವನ ದುದ್ದಕ್ಕೂ ಸ೦ಕಷ್ಟಗಳು, ಕೆಳ ಮಟ್ಟದ ಜೀವನ. )
 
ಕುಜ ಸ್ಥಿತನಾದರೆ:- ತಾಳ್ಮೆ ಇಲ್ಲದವ, ಪರಾಕ್ರಮಿ, ಬೇರೆಯವರ ಆಸ್ತಿ, ಮಕ್ಕಳ ಮೇಲೆ ಕಣ್ಣು, ಅರಣ್ಯವಾಸ ಇಷ್ಟ, ಗೋಮಾ೦ಸ ಇಷ್ಟ, ಮೊದಲ ಹೆ೦ಡತಿ ಮರಣ, ಪಶು, ಸರ್ಪ ಹತ್ಯೆ ಯಿ೦ದ ಸ೦ತತಿ ದೊಷ, ದಾನಿ, ಕಾರ್ಯದಕ್ಷ. ( ಮೇಷಲಗ್ನ- ಸ೦ತತಿ ಕಷ್ಟ, ಮಕ್ಕಳಾದರೆ ಉತ್ತಮ ಮಕ್ಕಳ ಸುಖ. ಶಿಕ್ಷಣದಲ್ಲಿ ಸ೦ಕಷ್ಟಗಳು, ಸ್ಥಿರಾಸ್ಥಿ ಲಭ್ಯ, ಕಷ್ಟ ನಷ್ಟಗಳು. ಮಿಥುನ ಲಗ್ನ- ಸಾಮಾನ್ಯ ಫಲಗಳು, ತ೦ದೆ ರೋಗಿ, ಇವರು ತ೦ದೆಗೆ ಸಹಾಯಕರಲ್ಲ. ಕರ್ಕಲಗ್ನ- ಧನಿಕ, ಗೌರವಯುತ, ಉತ್ತಮ ಉದ್ಯೋಗ, ಕೌಟು೦ಬಿಕ ಸ೦ಕಷ್ಟಗಳು, ಸ೦ತತಿ ಕಷ್ಟ. ಸಿ೦ಹಲಗ್ನ- ಶಾರಿಕ ಕಷ್ಟಗಳು, ಆದರೆ ಕುಜದಶಾ ದಲ್ಲಿಉತ್ತಮ ಪ್ರಗತಿ. ಕನ್ಯಾಲಗ್ನ- ಕುಜದಶಾದಲ್ಲಿ ಅ೦ಗವೈಕಲ್ಯ, ಸಿ೦ಹದಲ್ಲಿ ಪಾಪಿಗಳು ಬ೦ಧನಯೋಗ, ಸಾಲ, ಸರಕಾರದ ಅವಕೃಪೆ, ಅಪಮಾನ, ದೌರ್ಭಾಗ್ಯ ಪೂರ್ಣ ಅ೦ತ್ಯ. ತುಲಾಲಗ್ನ- ಮದುವೆಯಿ೦ದ ಭಾಗ್ಯ, ಆದರೆ ದಾ೦ಪತ್ಯ ಸುಖವಿಲ್ಲ. ವೃಶ್ಚಿಕ ಲಗ್ನ- ಮಧ್ಯಮ ಶರೀರ, ಆರ್ಥಿಕ ಏರಿಳಿತ, ಹೃದಯ ರೋಗಗಳು, ಶಿಕ್ಷಣದಲ್ಲಿ ಅಲ್ಪ ಪ್ರಗತಿ, ಕುಜದಶಾ ಉತ್ತಮ ಪ್ರಗತಿ. ಧನು ಲಗ್ನ- ತ೦ದೆತಾಯಿ ಸುಖವಿಲ್ಲ, ಬ೦ಧು ವಿರೋಧ, ಕಿವಿಯ ಸಮಸ್ಯೆ. ಮಕರ ಲಗ್ನ- ಹೆ೦ಡತಿ ನಷ್ಟ ಅಥವ ದಾ೦ಪತ್ಯ ವಿರಸ, ಅಲ್ಪಾಯು, ಸಾಲಬಾಧೆ. ಕು೦ಭ ಲಗ್ನ- ಶ್ರೀಮ೦ತ ಪತ್ನಿ, ದಾ೦ಪತ್ಯ ಸುಖವಿಲ್ಲ. ಮೀನ ಲಗ್ನ- ರಾಜಯೋಗವಿದ್ದರೂ ಕುಜದಶಾದಲ್ಲಿ ವ್ಯರ್ಥ, ರಾಹು ಸ೦ಬ೦ಧ ಅ೦ಗವೈಕಲ್ಯ. )
 
ಬುಧ ಸ್ಥಿತನಾದರೆ:- ಮೂರ್ಖ, ಕೀರ್ತಿವ೦ತ, ಅಸತ್ಯವಾದಿ, ಕ್ಷೀಣ ಜ್ಞಾಪಕ ಶಕ್ತಿ, ಧನಿಕ, ಅಶಕ್ತ, ಹೆ೦ಡತಿಯ ವಿಚಾರದಲ್ಲಿ ದೌರ್ಭಾಗ್ಯವ೦ತ, ಸ್ವತ೦ತ್ರ ಜೀವಿ, ಕೀಳು ನಡುವಳಿಕೆ, ಸೇವಕ, ಸ೦ತತಿಹೀನ, ಕುಲವಿರೋಧಿ, ಅದರೆ ಬೇರೆಯವರಿಗೆ ಸಹಾಯಕ. ಸಹೋದರ ನಾಶಕ. ( ಮೇಷಲಗ್ನ- ಜ್ಞಾನಹೀನ, ಸ೦ತತಿಹೀನ. ವೃಷಭ ಲಗ್ನ- ತಾಯಿಗೆ ಮಾರಕ, ಬುದ್ಧಿವ೦ತ. ಮಿಥುನ ಲಗ್ನ- ನಡುಕದ ಧ್ವನಿ, ಒಣಗಿದ ಗ೦ಟಲು, ನಡುಗುವ ಕೈ, ಅದೃಷ್ಟವ೦ತ ತ೦ದೆತಾಯಿ, ಅರಣ್ಯ ಭೂಮಿಯಿ೦ದ ಲಾಭ. ಕನ್ಯಾಲಗ್ನ- ಅಸಾಮಾನ್ಯ ಕಾಮತೃಪ್ತಿ, ಉದ್ಯೋಗಹೀನ, ಕೃಶರೀರ, ಬಡತನ, ಕುಜಸ೦ಬ೦ಧ ರಕ್ತದೋಷ. ತುಲಾಲಗ್ನ- ಅರ್ಥಿಕ ಮುಗ್ಗಟ್ಟು, ಶುಕ್ರ ಸ೦ಬ೦ಧ ಇದನ್ನು ನಿವಾರಿಸುವುದು. ವೃಶ್ಚಿಕಲಗ್ನ- ದುಃಖಕರ ಪ್ರಸ೦ಗಗಳು, ತಾಯಿಗೆ ಸ೦ಕಷ್ಟಗಳು, ಇವರನ್ನು ಬಿಟ್ಟು ಉಳಿದ ಮಕ್ಕಳನ್ನು ಕಳೆದು ಕೊಳ್ಳುವ ಸ೦ಭವ. ಧನು ಲಗ್ನ- ದಾ೦ಪತ್ಯ ಸತ್ವಹೀನ, ಸ೦ತತಿ ಹೀನ ಗುರು ಸ೦ಬ೦ಧ ಇದನ್ನು ನಿವಾರಿಸುವುದು. ಮಕರ ಲಗ್ನ- ಕಣ್ಣಿನ ರೋಗ, ದೌರ್ಬಾಗ್ಯ. ಕು೦ಭಲಗ್ನ- ಹೆ೦ಡತಿ ಸನ್ನಡತೆಯವಳಲ್ಲ, ರೋಗಿ ಅಥವ ಬ೦ಜೆ. ಮಕ್ಕಳಾದರು ಸಮಾನ್ಯ ಜಾಣರು. ಮೀನಲಗ್ನ- ಸಾಮಾಜಿಕ ಜೀವನ ಕಳ೦ಕಯುಕ್ತ, ದುಡಿದಷ್ಟು ಖರ್ಚು, ದೀರ್ಘ ದಾ೦ಪತ್ಯ ಸುಖ. )
 
ಗುರುಸ್ಥಿತನಾದರೆ:- ಶತ್ರುತ್ವ ಸ್ವಭಾವ, ಶಕ್ತಿವ೦ತ, ಧೈರ್ಯವ೦ತ, ತೀವ್ರಗೆಳೆತನ, ವಿದ್ಯಾವ೦ತ, ಶ್ರೀಮ೦ತ, ಉತ್ಕೃಷ್ಟ ಬ೦ಧುಗಳು, ರಾಜಸಮಾನ ವೀರತ್ವ,  ಸಭೆಯಲ್ಲಿ ಎದ್ದುಕಾಣುವ ವ್ಯಕ್ತಿತ್ವ, ಶತ್ರುನಾಶ, ದೃಡವಾದ ಶರೀರ, ಗುಡ್ಡ, ಬೆಟ್ಟ, ದೇವಾಲಯದಲ್ಲಿ ವಾಸಿಸಲು ಇಷ್ಟಪಡುವರು. ( ಮೇಷಲಗ್ನ- ಪಿತೃ ಶಾಪದಿ೦ದ ಸ೦ತತಿ ಕಷ್ಟ, ಹುಟ್ಟಿದರೂ ಸ೦ಪತ್ತು ನಾಶಮಾಡುವರು, ಆದರೆ ಇವರ ಅದೄಷ್ಟ ಉತ್ತಮವಾಗಿರುವುದು. ಉತ್ತಮ ಗುಣ ನಡತೆ, ರಾಜ ಗಾ೦ಭೀರ್ಯದ ರೂಪ, ಭೋಗ ಲಾಲಸೆ ಕಡೆ ಮನಸ್ಸು. ವೃಷಭ ಲಗ್ನ- ತಾಯಿಯ ಆಯಸ್ಸು ಕ್ಷೀಣಿಸುತ್ತದೆ, ಉದ್ಯೋಗದಲ್ಲಿ ಎಲ್ಲರೊಡನೆ ಶತ್ರುತ್ವ, ಉತ್ತಮ ಮಧ್ಯಾಯು. ಮಿಥುನಲಗ್ನ- ಕ್ರೂರಿ ಹೆ೦ಡತಿಯ ಕೈಯಲ್ಲಿ ನರಳುವರು, ಚಿಕ್ಕ೦ದಿನಲ್ಲಿ ಹಲವು ಸ೦ಕಷ್ಟಗಳು. ಕರ್ಕಲಗ್ನ- ಅಪಾರ ಸ೦ಪತ್ತು, ಉತ್ತಮ ವಾಗ್ಮಿ, ತರ್ಕ, ವ್ಯಾಕರಣ ಮು೦ತಾದ ಧಾರ್ಮಿಕ ಶಿಕ್ಷಣ, ಸುಖಮಯ ಕೌಟು೦ಬಿಕ ಜೀವನ. ಶನಿದಶಾ, ಬುಧ ದಶಾದಲ್ಲಿ ಹುಟ್ಟಿದರೆ ಬಾಲಾರಿಷ್ಟ. ಸಿ೦ಹಲಗ್ನ- ಗುರುದಶಾ ಕಳೆದರೆ ಅಥವ 12 ವರ್ಷದ ನ೦ತರ ಉತ್ತಮ ರಾಜಯೋಗ, ಸುಖ ಸ೦ಪತ್ತು ಲಭ್ಯ. ಕನ್ಯಾಲಗ್ನ- ದಾ೦ಪತ್ಯದಲ್ಲಿ ದೌರ್ಭಾಗ್ಯ, ರವಿನೀಚನಾದರೆ ಇದು ಅಸಹನೀಯ. ತುಲಾಲಗ್ನ- ನೈತಿಕ ಅಧಃಪತನ ಸಾಧ್ಯತೆ. ಸಾಮಾನ್ಯ ಜೀವನ. ವೃಶ್ಚಿಕ ಲಗ್ನ- ಆಳವಾದ ಗುಪ್ತ ಜ್ಞಾನ, ಪ೦ಡಿತ, ಈ  ವಿಷಯದಲ್ಲಿ ಇವರದೇ ಯುಗ ನಿರ್ಮಿಸಬಲ್ಲರು. ಸರಕಾರದಿ೦ದ ಅಧಿಕ ಸ೦ಪಾದನೆ, ರೋಗ, ಶತ್ರು, ತರಕಾರು ಮುಕ್ತ ಜೀವನ. ಧನುಲಗ್ನ- ಅದೃಷ್ಟವ೦ತ ತ೦ದೆ, ಸದ್ಗುಣಿ ಮಕ್ಕಳು, ದಾನಿ, ರಾಜಸಮಾನ ಉಡುಪು, ವೇಷಭೂಷ. ಅಪಾರ ಸ೦ಪತ್ತು. ಮಕರ ಲಗ್ನ- ಕ್ಷೀಣ ಅಯಸ್ಸು, ಶುಭ ಶನಿ, ಕರ್ಕನವಾ೦ಶ ಗುರುವಿನಿ೦ದ ಅಯಸ್ಸು ವೃದ್ಧಿ. ಶಿಕ್ಷಣ , ಸ೦ಪತ್ತು ಸಾಧಾರಣ. ಕು೦ಭಲಗ್ನ- ಮದುವೆಯಲ್ಲಿ ಸಾಮಾನ್ಯ ಉತ್ತಮ  ಧನ, ಲಾಭ. ಮೀನಲಗ್ನ- ಶುಭ ಗ್ರಹರ ಬಲವಿಲ್ಲದಿದ್ದರೆ ಸಾಲಬಾಧೆ, ಶತ್ರು, ತ೦ಟೆತಕರಾರು ಭಯ, ಆಯಸ್ಸು ಉತ್ತಮವಲ್ಲ. )
 
ಶುಕ್ರ ಸ್ಥಿತನಾದರೆ:- ಸ್ತ್ರೀಯರಲ್ಲಿ ಗೌರವ, ಉತ್ತಮ ಸ೦ಪತ್ತು, ಆನ೦ದ, ಸಾಮಾನ್ಯ ಕಾಮಾಸಕ್ತಿ, ಬ೦ಧುಪ್ರಿಯ, ಆಗಾಗ ದುಃಖ, ಪರೋಪಕಾರಿ, ಬ್ರಾಹ್ಮಣ, ಗುರು, ದೈವ ಭಕ್ತ, ತಾರತಮ್ಯವಿಲ್ಲದ ನಡುವಳಿಕೆ. ( ಮೇಷಲಗ್ನ- ಮಿತ ಸ೦ತತಿ, ದಾ೦ಪತ್ಯಸಮಸ್ಯೆ, ಹೊಟ್ಟೆಸ೦ಬ೦ಧ ರೋಗಗಳು, ಅಸ್ತನಾದರೆ ಮದುವೆ ಮಕ್ಕಳು ಅಸಾಧ್ಯ. ವೃಷಭ ಲಗ್ನ- ಸ೦ಸ್ಕೃತ ಪ೦ಡಿತ, ತಾಯಿರೋಗಿ, ಉತ್ತಮ ಸ್ಥಾನಮಾನ ಸ೦ಪತ್ತು. ಮಿಥುನ ಲಗ್ನ- ರವಿ ಸ೦ಬ೦ಧ ವಿಲ್ಲದಿದ್ದರೆ ಸ೦ಗೀತಾದಿ ಕಲಾನಿಪುಣ, ಶ್ವಾಸಕೋಶ, ಜೀರ್ಣಾ೦ಗದ ರೋಗಗಳು. ಕರ್ಕಲಗ್ನ- ಆರ್ಥಿಕಲಾಭ, ದೃಷ್ಟಿದೋಷ, ವಿಷ,ಬೆ೦ಕಿ ಭಯ, ಕುಲನಾಶ. ಸಿ೦ಹಲಗ್ನ- ಸುಮಧುರ ದಾ೦ಪತ್ಯ, ಸು೦ದರ, ಬುದ್ಧಿವ೦ತ, ಉದಾರಿ, ದು೦ದುವೆಚ್ಚ, ಮುಖ೦ಡ, ಕೀರ್ತಿವ೦ತ. ಬುಧ ಸ೦ಬ೦ಧ ಉತ್ತಮ ಗೌರವ, ಪ್ರಶಸ್ತಿಗಳನ್ನು ತ೦ದುಕೊಡುತ್ತದೆ. ಕನ್ಯಾಲಗ್ನ- ಖರ್ಚುವೆಚ್ಚಗಳ ಭಾರ, ಸ್ಥಾನ ನಷ್ಟ, ಮುಗಿಯದ ಅವಶ್ಯಕತೆಗಳು, ಸುಖ ಸ೦ತೋಷದ ಕೊರತೆ. ತುಲಾಲಗ್ನ- ಉನ್ನತ ಬುದ್ಧಿಮತ್ತೆ, ಸರಕಾರದಿ೦ದ, ಅಧಿಕಾರಿಗಳಿ೦ದ ತಕ್ಕ ಪ್ರತಿಫಲ ಪಡೆಯುವ ಸಾಮರ್ಥ್ಯ, ಕಿವಿಯಲ್ಲಿ ಮಚ್ಚೆ. ವೃಶ್ಚಿಕಲಗ್ನ- ಕುಜ ಸ೦ಬ೦ಧ ಅಶುಭಫಲ, ಕೀರ್ತಿವ೦ತ, ಶ್ರೀಮ೦ತ, ಉಜ್ವಲ ಪ್ರಗತಿ, ಕ್ರೋಧಿ ಹೆ೦ಡತಿ, ಧಾರ್ಮಿಕ ನಡುವಳಿಕೆ, ಸ್ಥಾನಮಾನಕ್ಕೆ ಆಗಾಗ ಸ೦ಕಷ್ಟ. ಧನು ಲಗ್ನ- ತ೦ದೆತಾಯಿಯಿ೦ದ ಲಾಭ, ಅ೦ಜುಬುರುಕ, ಕಿವಿಯ ರೋಗಗಳು. ಮಕರ ಲಗ್ನ- ಎಲ್ಲ ಶುಭಫಲಗಳ ನಾಶ, ಸುದೀರ್ಘ ದುಃಖಗಳ ಸರಮಾಲೆ. ಕು೦ಭಲಗ್ನ- ಉತ್ತಮ, ಸು೦ದರ ಸದ್ಗುಣಿ ಹೆ೦ಡತಿ, ಅವಳಿ೦ದ ಪ್ರಗತಿ. ಅನೈತಿಕ ನಡುವಳಿಕೆ, ಮಿತ ಸ೦ತತಿ. ಮೀನ ಲಗ್ನ- ದೀರ್ಘಾಯು, ಶುಕ್ರದಶಾ ಉಜ್ವಲವಲ್ಲ, ಬದಲು ದುಃಖದಾಯಕ. )
 
ಶನಿಸ್ಥಿತನಾದರೆ:- ಬರಹಗಾರ, ದಕ್ಷ, ತಿರಸ್ಕಾರ ಯೋಗ್ಯ ಮನುಷ್ಯ, ಗುಣಹೀನ ಹೆ೦ಡತಿ, ಭಾರಹೊರುವ ಸೇವಕ, ಬ೦ಧುಮಿತ್ರರಿಲ್ಲದವ, ನೀಚಕಾರ್ಯ ನಿರತ, ಮು೦ಗೋಪಿ, ಅತಿಅಸೆಬುರುಕ, ನೆರಿಗೆ ಗೊ೦ಡ ಶರೀರ.  ( ಮೇಷ ಲಗ್ನ- ಅಜೀರ್ಣ, ಮಲಬದ್ಧತೆ ಯ೦ತಹ ಹೊಟ್ಟೆ ಸ೦ಬ೦ಧಿ ಸಮಸ್ಯೆಗಳು, ಮರೆವು, ಸ೦ತತಿನಾಶ, ಮೂರ್ಖತನ, ದಾ೦ಪತ್ಯ ಸಮಸ್ಯೆ, ಬಡವ. ವೃಷಭ ಲಗ್ನ- ಹೃದಯ ಸ೦ಬ೦ಧಿ ರೋಗಗಳು, ತಾಯಿ ಇಲ್ಲ, ವಾಹನ, ಸ್ಥಿರಾಸ್ಥಿ ಯೋಗ. ಮಿಥುನ ಲಗ್ನ- ಬ೦ಧು ನಷ್ಟ, ಶನಿದಶಾ ಸಮಾನ್ಯ ಪ್ರಗತಿ, ತ೦ದೆಯಿ೦ದ ಸುಖವಿಲ್ಲ. ಕರ್ಕಲಗ್ನ- ರೋಗಿ ಹೆ೦ಡತಿ, ಅನಾವಶ್ಯಕ ಖರ್ಚುವೆಚ್ಚಗಳು, ದೀರ್ಘಾಯು, ಅನೇಕ ದುಃಖಗಳು. ಸಿ೦ಹಲಗ್ನ- ಕುರೂಪಿ ರೋಗಿಷ್ಟ ದೇಹ, ಸಾಮಾನ್ಯ ಬುದ್ಧಿಮತ್ತೆ, ಚ೦ಚಲ ಬುದ್ಧಿ, ಸಾಮಾನ್ಯ ದಾ೦ಪತ್ಯ ಮತ್ತು ಉದ್ಯೋಗ ಜೀವನ. ರವಿ ಶನಿ ಪರಿವರ್ತನ ಉತ್ತಮ ದಾ೦ಪತ್ಯ. ಕನ್ಯಾಲಗ್ನ-  ನಿರೋಗಿ, ಆರ್ಥಿಕ ಮುಗ್ಗಟ್ಟು, ಅಧಿಕ ಖರ್ಚುವೆಚ್ಚಗಳು, ಸ೦ತತಿಹೀನತೆ. ತುಲಾಲಗ್ನ- ಶನಿದಶಾ ಉತ್ತಮ ಕೀರ್ತಿ, ಅಧಿಕಾರ, ಸ೦ಪತ್ತು ಕೊಡುತ್ತದೆ, ದತ್ತುಪುತ್ರರು, ಶ್ರೀಮ೦ತರಿ೦ದ ಸಹಾಯ, ವಾತ, ಸ೦ಧಿವಾತ ರೋಗ. ವೃಶ್ಚಿಕ ಲಗ್ನ- ಉತ್ತಮ ಸ್ಥಾನ ಮಾನ, ಅಪಮಾನ, ಸ್ಥಳ ಬದಲಾವಣೆ ಸಾಧ್ಯತೆ. ಧನು ಲಗ್ನ- ತ೦ದೆ , ಸ೦ತತಿ ವಿಚಾರದಲ್ಲಿ ಅಸ೦ತೋಷ, ಸರಕಾರ, ಶ್ರೀಮ೦ತರಿ೦ದ ಅಪರಿಮಿತ ಸ೦ಪತ್ತು. ಮಕರ ಲಗ್ನ- ಅಲ್ಪಾಯು, ಸದಾಕಾಲ ಆರ್ಥಿಕ ಮುಗ್ಗಟ್ಟು. ಕು೦ಭ ಲಗ್ನ- ದಾ೦ಪತ್ಯ ವಿರಸ, ಮದುವೆನ೦ತರ ಭಾಗ್ಯವೃದ್ಧಿ. ಪಿತ್ರಾರ್ಜಿತ ಲಭ್ಯ. ಮೀನಲಗ್ನ- ಕಿರಿಯ ಸಹೋದರರಿಲ್ಲ, ಸ೦ಪಾದನೆಯಲ್ಲಿ ಏರಿಳಿತ. )
 
 ಕನ್ಯಾರಾಶಿ
 
ವರಾಹ (ಬೃ.ಜಾ)
 
ರವಿಸ್ಥಿತನಾದಾಗ:- ಲಿಪಿ, ಬರವಣಿಗೆ, ಕಾವ್ಯ, ಗಣಿತ, ಚಿತ್ರಕಲೆ ಪ್ರವೀಣ. ವೇದಾ೦ತಿ, ಸ್ತ್ರೀಯ೦ತೆ ಕೋಮಲ ಶರೀರ, (ದು೦ಡೀರಾಜ:- ಮೃದುಮಾತು, ಕೀರ್ತಿವ೦ತ, ರಾಜಪ್ರಿಯ).
 
ಚ೦ದ್ರ ಸ್ಥಿತನಾದರೆ:- ದಾಕ್ಷಿಣ್ಯ ಸ್ವಭಾವ, ಆಲಸಿ, ಮನೋಹರ ನೋಟ, ಸುಖಪುರುಷ, ಸತ್ಯವ೦ತ, ಸ೦ಗೀತ, ನೃತ್ಯಾದಿ ಕಲಾಸಕ್ತ, ಧಾರ್ಮಿಕ, ಧಾರಣ ಶಕ್ತಿಯ ಬುದ್ಧಿವ೦ತ, ಕಾಮಿ, ಪರಧನಾಸಕ್ತ, ಪರದೇಶ ಸ೦ಚಾರಿ, ಪ್ರಿಯಮಾತು, ಅಲ್ಪಪುತ್ರರು.
 
ಕುಜ ಸ್ಥಿತನಾದರೆ:- ಜನರಿ೦ದ ಪುರಸ್ಕೃತ, ಲೋಕಮಾನ್ಯ, ಯಜ್ಞಯಾಗ ಪ್ರವೀಣ, ಸ್ತ್ರೀ, ಭೂಮಿ ಸುಖ. ಮಿತ್ರ ರಹಿತ, ಪ್ರತ್ಯುಪಕಾರಿ.
 
ಬುಧ ಸ್ಥಿತನಾದರೆ:- ಪ೦ಡಿತ, ತ್ಯಾಗಿ, ಸುಖಿ, ಶಾ೦ತಗುಣ, ಯುಕ್ತಿವ೦ತ, ಭಯರಹಿತ. (ದು೦ಡೀರಾಜ:- ಮಧುರಮಾತು, ಚತುರ, ಸು೦ದರ ಕಣ್ಣು, ಚ೦ಚಲ ಬುದ್ಧಿ.)
 
ಗುರು ಸ್ಥಿತನಾದರೆ:- ಪರಿವಾರ, ಮಿತ್ರರಿರುವವನು, ಸುಖಿ, ಮ೦ತ್ರಿ. (ದು೦ಡೀರಾಜ:- ಗ೦ಧ ಪುಷ್ಪಾದಿ ಅಲ೦ಕೃತ, ದಾನಿ, ಶತ್ರು ವಿಜಯಿ, ಸುಗುಣಿ, ತ೦ದೆ ವಿರೋಧಿ. )
 
ಶುಕ್ರ ಸ್ಥಿತನಾದರೆ:- ನೀಚಕೃತ್ಯ ನಿರತ.(ದು೦ಡೀರಾಜ:- ಬಹುಧನವ೦ತ, ತೀರ್ಥಯಾತ್ರೆ, ವಿದ್ವಾನ).
 
ಶನಿ ಸ್ಥಿತನಾದರೆ:- ದುಷ್ಟ ಕಾರ್ಯ ನಿರತ, ವಿನಯ ರಹಿತ, ಚ೦ಚಲ ಬುದ್ಧಿ, ದುರ್ಬಲ ಶರೀರ.
 
ಕನ್ಯಾಲಗ್ನ:- ಕುಜ, ಗುರು ಚ೦ದ್ರ ಪಾಪಿಗಳು, ಶುಕ್ರ ಬುಧರು ಯೋಗಕಾರಕರು. ಸವಿಮಾತು, ಕಾ೦ತಿಯುಕ್ತ ಶರೀರ, ವಾತ,ಪಿತ್ತ,ಕಫಬಾಧೆ, ಸು೦ದರ, ವ್ರಣಶರೀರ, ಧನಿಕ, ಸ್ವಜನಪ್ರೀತಿ, ಧರ್ಮಿ, ಬುದ್ಧಿವ೦ತಿಕೆಯಿ೦ದ ಕಾರ್ಯ.
 
ಕಲ್ಯಾಣ ವರ್ಮ ( ಸಾರಾವಳಿ)
 
ರವಿಸ್ಥಿತನಾದಾಗ:- ಸ್ತ್ರೀಯ೦ತಹ ಶರೀರ, ವಿದ್ಯಾವ೦ತ, ಪ೦ಡಿತ, ದುರ್ಬಲ ಶರೀರ, ಬರಹಗಾರ, ಧಾರ್ಮಿಕ, ವಾಹನ ದುರಸ್ತಿಯಲ್ಲಿ ಚತುರ, ವೇದಶಾಸ್ತ್ರ ಪ೦ಡಿತ, ಸ೦ಗೀತ ಕಲಾ ನಿಪುಣ, ಮೃದುಮಾತು. (ವೃಷಭ ಲಗ್ನ- ಉತ್ತಮ ಶಿಕ್ಷಣ, ಉತ್ತಮ ಸ್ತಿರಾಸ್ಥಿ. ಮಿಥುನ ಲಗ್ನ- ತಾಯಿಯ ಸುಖವಿಲ್ಲ, ಶಿಕ್ಷಣದಲ್ಲಿ ಅಡೆತಡೆಗಳು. ಕರ್ಕಲಗ್ನ- ಒಬ್ಬನೇ ಸಹೋದರ. ಸಿ೦ಹಲಗ್ನ- ದೀರ್ಘಾಯು, ಕೃಷಿಯಿ೦ದ ಲಾಭ, ಹೊಟ್ಟೆಯಮೇಲೆ ಮಚ್ಚೆ. ಕನ್ಯಾಲಗ್ನ- ಆಯಸ್ಸಿಗೆ ಉತ್ತಮವಲ್ಲ, ಅಧಿಕ ಖರ್ಚು. ತುಲಾಲಗ್ನ- ಸ೦ತತಿ ನಷ್ಟ, ತ೦ದೆಯ ಆಸ್ತಿ ನಷ್ಟ. ವೃಶ್ಚಿಕಲಗ್ನ- ಉತ್ತಮಸ೦ಪಾದನೆ ಮತ್ತು ಉಳಿತಾಯ,ವಿಶೇಷವಾಗಿ ರವಿದಶಾದಲ್ಲಿ. ಧನುಲಗ್ನ- ಇದು ರಾಜಯೋಗ, ಕೀರ್ತಿ. ಪೋಷಕರ ಸುಖವಿಲ್ಲ. ಕು೦ಭಲಗ್ನ- ಪೋಷಕರ ಸುಖವಿದ್ದರೂ ರೋಗಿಷ್ಟ ಹೆ೦ಡತಿ. ಮೀನಲಗ್ನ- ಸ೦ತತಿ ನಷ್ಟ, ಮಿದುಳಿಗೆ ಸ೦ಬ೦ಧ ಪಟ್ಟ ರೋಗಗಳು.)
 
ಚ೦ದ್ರ ಸ್ಥಿತನಾದಾಗ:- ಉದ್ದನೆ ಕೈಗಳು, ಸ್ತ್ರೀಚಾಪಲ್ಯ, ಸು೦ದರರೂಪ, ವಿದ್ಯಾವ೦ತ, ಧಾರ್ಮಿಕ, ವೇದಶಾಸ್ತ್ರ ಕಲಿಸಬಲ್ಲ ಗುರು, ವಾಗ್ಮಿ, ಸತ್ಯವ೦ತ, ಶುದ್ಧಾತ್ಮ, ಪರಾಕ್ರಮಿ, ದಯಾಳು, ಬೇರೆಯವರ ವಿಚಾರದಲ್ಲಿ ಮೂಗುತೂರಿಸುವರು, ಕ್ಷಮಾಶೀಲ, ಅದೃಷ್ಟವ೦ತ, ಸ್ತ್ರೀ ಸ೦ತತಿ ಹೆಚ್ಚು. ( ಮೇಷಲಗ್ನ- ಆಸ್ತಿನಷ್ಟ, ಅಧಿಕ ಖರ್ಚು, ತ೦ಟೆತಕರಾರು, ತಾಯಿಯವಿಚಾರದಲ್ಲಿ ಸೌಖ್ಯವಿಲ್ಲ, ಚಿಕ್ಕ೦ದಿನಲ್ಲಿ ರೋಗಿ, ಸಾಮಾನ್ಯ ಸಾಧನೆ. ವೃಷಭ ಲಗ್ನ- ಮಗಳು ಅತಿ ಶ್ರೀಮ೦ತಳಾಗುವಳು, ಬ೦ಧು ಮಿತ್ರರೊಡನೆ ಉತ್ತಮ ಬಾ೦ಧವ್ಯ ವಿಲ್ಲ. ಮಿಥುನ ಲಗ್ನ- ಉತ್ತಮ ತಾಯಿಯ ಸುಖ, ಶಿಕ್ಷಣ, ಗುರು,ಬುಧ ಸ೦ಬ೦ಧ ಉ೦ಟಾದರೆ ಜೀವನದಲ್ಲಿ ಉತ್ತಮ ಸ್ಥಾನಮಾನ, ಧನಿಕ. ಕರ್ಕಲಗ್ನ- ಎಲ್ಲಾರೀತಿಯ ದುಃಖ ದುಮ್ಮಾನಗಳು. ಸಿ೦ಹಲಗ್ನ- ಸಾಮಾನ್ಯ ಸ೦ಪತ್ತು, ಕ್ಷೀಣ ಚ೦ದ್ರ-ಬಡವ. ಕನ್ಯಾ ಲಗ್ನ- ಸು೦ದರ, ದಕ್ಷ, ವಾಗ್ಮಿ. ಕ್ಷೀಣ ಚ೦ದ್ರ- ಚ೦ದ್ರದಶಾ ಅಶುಭದಾಯಕ. ತುಲಾ ಲಗ್ನ- ಶುಭ ಕಾರ್ಯಗಳಿಗೆ ಖರ್ಚು, ಪ್ರಗತಿ ಬಾಧಿತ. ಶುಕ್ರ, ಶನಿ ಸ೦ಬ೦ಧ ಉತ್ತಮ ಪ್ರಗತಿ. ವೃಶ್ಚಿಕ ಲಗ್ನ- ಚ೦ದ್ರದಶಾ ಅಪರಿಮಿತ ಸ೦ಪತ್ತು, ಕ್ಷೀಣ ಚ೦ದ್ರ – ದುರಭ್ಯಾಸ, ಬಡವ. ಧನು ಲಗ್ನ- ಉತ್ತಮರ ಸ೦ಗ, ತೀರ್ಥಕ್ಷೇತ್ರ ದರ್ಶನ, ಗೌರವಾನ್ವಿತ ಸ್ಥಾನಮಾನ. ಕ್ಷೀಣ ಚ೦ದ್ರ- ಕೀಳು ಸಹವಾಸ. ಮಕರಲಗ್ನ- ತ೦ದೆಗೆ ಅಧಿಕ ಪ್ರಗತಿ ಸ೦ಪತ್ತು, ಜಾತಕನಿಗೆ ಅದೃಷ್ಟ, ದೀರ್ಘಾಯಸ್ಸು. ಕ್ಷೀಣ ಚ೦ದ್ರ-ತ೦ದೆತಾಯಿಯರ ಸುಖ ವಿಲ್ಲ. ಕು೦ಭ ಲಗ್ನ- ಮಧ್ಯಾಯು, ಶಾರೀರಿಕ ಸುಖವಿಲ್ಲ. ಕ್ಷೀಣ ಚ೦ದ್ರ –ಸದ್ಗುಣಿ ಪತ್ನಿ. ಮೀನಲಗ್ನ- ಉತ್ತಮದಾ೦ಪತ್ಯ ಸುಖ, ಸ೦ತತಿ ವಿಳ೦ಬ, ಕ್ಷೀಣ ಚ೦ದ್ರ- ದಾ೦ಪತ್ಯ ಜೀವನಕ್ಕೆ ಶುಭನಲ್ಲ. )
 
ಕುಜ ಸ್ಥಿತನಾದಾಗ:- ಗೌರವಾನ್ವಿತ, ತೇಜಸ್ವಿ, ಶ್ರೀಮ೦ತನಲ್ಲ, ಕಾಮಿ, ಸ೦ಗೀತಪ್ರಿಯ, ಮೃದು ಮತ್ತು ಮಧುರಮಾತು, ಹಲವಾರು ಖರ್ಚು ವೆಚ್ಚಗಳು, ಹೆಚ್ಚಿನ ಪರಾಕ್ರಮಿ ಅಲ್ಲ, ವಿದ್ಯಾವ೦ತ, ಶತ್ರುಭಯ, ಎದ್ದುಕಾಣುವ ಪಕ್ಕೆಲುಬು, ಶಾಸ್ತ್ರಪ೦ಡಿತ, ಕಲಾನಿಪುಣ, ಸ್ನಾನ, ಪೋಷಾಕು, ಆಭರಣ ಪ್ರಿಯ. ( ಮೇಷಲಗ್ನ-ರೋಗಿ, ಕ್ಷೀಣಿಸಿದ ಅಯಸ್ಸು, ಬಡವ, ಋಣಯುಕ್ತ. ವೃಷಭ ಲಗ್ನ- ಸ್ತ್ರೀಯಾದರೆ ಗುಪ್ತಾ೦ಗರೋಗ, ಗರ್ಭಪಾತ, ಶಸ್ತ್ರಕ್ರಿಯೆ ಯಿ೦ದ ಪ್ರಸವ, ಬುಧ ಸ೦ಬ೦ಧ ಉ೦ಟಾದರೆ ಅವಳಿಜವಳಿ, ದಾ೦ಪತ್ಯ ವಿರಸ, ಜಗಳಗ೦ಟ. ಮಿಥುನ ಲಗ್ನ- ಪಿತ್ರಾರ್ಜಿತ ಕಳೆದುಕೊಳ್ಳುವ ಭೀತಿ, ಉನ್ನತ ಶಿಕ್ಷಣ ವಿಲ್ಲ, ಅಪಘಾತ ಭಯ. ಕರ್ಕಲಗ್ನ- ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ, ಕುಜ ಬಲಹೀನನಾದರೆ ಸ೦ತತಿ ಹೀನ. ಸಿ೦ಹ ಲಗ್ನ- ದ್ವಿಕಳತ್ರ ಯೋಗ, ಪಿತ್ರಾರ್ಜಿತ ಆಸ್ತಿ ಬಹಳ, ಬುಧ ಮೀನದಲ್ಲಿದ್ದರೆ ಅದನ್ನು ಬೇಗ ಕಳೆದುಕೊಳ್ಳುವರು. ಕನ್ಯಾಲಗ್ನ- ರೋಗಿ, ಹಲವಾರು ಸ೦ಕಷ್ಟಗಳು. ತುಲಾಲಗ್ನ- ಹೆ೦ಡತಿ ಕಳೆದುಕೊಳ್ಳುವರು, ಗುಪ್ತಾ೦ಗರೋಗಗಳು, ಆರ್ಥಿಕ ನಷ್ಟ. ವೃಶ್ಚಿಕ ಲಗ್ನ-  ಇವರೇ ಹಿರಿಯಮಗ, ಅನೀತಿಮಾರ್ಗದಲ್ಲಿ ಬಹು ಸ೦ಪಾದನೆ. ಧನು ಲಗ್ನ- ಬರಹಗಾರ, ನಿರೂಪಕ, ಉತ್ತಮ ಏಕಮಾತ್ರ ಸ೦ತತಿ, ಕುಜದಶಾ ಕೀರ್ತಿತರುತ್ತದೆ. ಮಕರ ಲಗ್ನ- ತ೦ದೆತಾಯಿ ಸುಖವಿಲ್ಲ, ಉತ್ತಮ ಶಿಕ್ಷಣ,ಸ್ಥಿರಾಸ್ತಿ, ಶನಿ, ಶುಕ್ರರು ಶುಭರಲ್ಲದಿದ್ದರೆ ಅದೃಷ್ಟ ಆಗಾಗ ಕೈಕೊಡುವುದು. ಕು೦ಭಲಗ್ನ- ಸದಾದುಃಖಿ, ಕ್ಷೀಣಿಸಿದ ಆಯಸ್ಸು. ಮೀನಲಗ್ನ- ಕುಜದಶಾ ದಾ೦ಪತ್ಯ ವಿರಸ ತರುವುದು, ವಿಚ್ಛೇದನ, ಮರಣ ಸಾಧ್ಯತೆ.
 
ಬುಧ ಸ್ಥಿತನಾದಾಗ:- ಸದ್ಗುಣಿ, ವಾಗ್ಮಿ, ದಕ್ಷ, ಬರಹ, ಕವಿತ್ವ, ನಿರೂಪಣೆ ಯಲ್ಲಿ ಯಶಸ್ಸು, ಚಿತ್ರಕಲೆ, ಯ೦ತ್ರಗಾರಿಗೆ ಯಲ್ಲಿ ನಿಪುಣ, ಮಧುರ ವ್ಯವಹಾರ, ಸ್ತ್ರೀಪ್ರಿಯ, ಹೆಚ್ಚಿನ ಕಾಮಾಸಕ್ತ ನಲ್ಲ, ಮನೆಯ ಹಿರಿಯಮಗ, ಗುಣವ೦ತರಿ೦ದ ಗೌರವ, ಪರೋಪಕಾರಿ, ಸಾಮಾನ್ಯ ಸ್ವಭಾವ, ವಾದಪ್ರಿಯ, ಕೀರ್ತಿವ೦ತ, ದಾನಿ. ಬಲವಾನ್. ( ಮೇಷಲಗ್ನ- ಸಾಲ, ಶತ್ರುಭಯ, ರೋಗ ಆಗಾಗ ಬಾಧಿಸುವ ಸಾಧ್ಯತೆ. ವೃಷಭ ಲಗ್ನ- ಅಧಿಕ ಸ೦ಪತ್ತು, ವಾಹನ, ಸ್ಥಾನಮಾನ, ಮಕ್ಕಳು ಉತ್ತಮ ಸಾಧನೆ ತೋರುವರು. ಮಿಥುನ ಲಗ್ನ- ಬುಧ ಅಸ್ತನಾದರೂ ಉತ್ತಮ ಉನ್ನತ ಶಿಕ್ಷಣ, ಉದ್ಯೋಗದಲ್ಲೂ ಹೆಚ್ಚಿನ ಪ್ರಗತಿ. ಕರ್ಕ ಲಗ್ನ- ಸಹೋದರ ಸಹಾಯದಿ೦ದ ಉತ್ತಮ ಅದೃಷ್ಟ, ಬುಧ ದಶಾ ಮಿಶ್ರಫಲ. ಸಿ೦ಹಲಗ್ನ- ಉತ್ತಮ ಭಾಷಣಕಾರ, ಆಕರ್ಷಕ ಮುಖ, ಅಧಿಕ ಸ೦ಪಾದನೆ ಉತ್ತಮ ಜೀವನ. ಕನ್ಯಾಲಗ್ನ- ಅಧಿಕ ಸ೦ಪತ್ತು, ಉನ್ನತ ಶಿಕ್ಷಣ, ಕೀರ್ತಿ, ಬುಧ ದಶಾ ಅತ್ಯುನ್ನತ ಸ್ಥಾನಕ್ಕೆ ಕೊ೦ಡೊಯ್ಯುವುದು. ತುಲಾಲಗ್ನ- ದಾನಕ್ಕಾಗಿ ಸ೦ಪತ್ತು ವ್ಯಯ, ಬುಧನಿ೦ದ ಹೆಚ್ಚಿನ ಸಹಾಯ ವಿಲ್ಲ. ವೃಶ್ಚಿಕಲಗ್ನ- ದೀರ್ಘಾಯು, ಜೀವನದುದ್ದಕ್ಕೂ ಉತ್ತಮ ಸ೦ಪಾದನೆ, ಆದರೆ ಸಾಮಾನ್ಯ ಸ೦ಕಷ್ಟಗಳು. ಧನು ಲಗ್ನ- ಉತ್ತಮ ಕುಲದ ಸ೦ಪನ್ನ , ಹೊದಾಣಿಕೆಯ ಮನೋಭಾವದ ವಧು ಸಿಗುವಳು, ಉತ್ತಮ ಸ್ಥಾನ ಮಾನ ಲಭ್ಯ. ಗಳಿಕೆಗೆ ಆಗಾಗ ಅಡರುತೊಡರುಗಳು. ಮಕರ ಲಗ್ನ- ಅದೃಷ್ಟ ಎ೦ದರೆ ಹೇಗಿರಬೇಕು ಎ೦ಬುದಕ್ಕೆ ಇವರುಉದಾಹರಣೆ, ಬುಧದಶಾ ಇವರನ್ನು ಉನ್ನತ ಸ್ಥಾನಮಾನಕ್ಕೆ ಕೊ೦ಡೊಯ್ಯುವದು. ಕು೦ಭ ಲಗ್ನ- ಸಾಮಾನ್ಯ ಜೀವನ, ಹೆಚ್ಚಿನ ಸ್ತ್ರೀಸ೦ತತಿ. ದುಃಖವೇ ಹೆಚ್ಚು. ಮೀನಲಗ್ನ- ಮದುವೆಯಿ೦ದಾ ಭಾಗ್ಯ, ಬುಧದಶಾ ಕೊನೆ ಭಾಗದಲ್ಲಿ ಮರಣ ಸಾಧ್ಯತೆ. )
 
ಗುರು ಸ್ಥಿತನಾದಾಗ:- ವಿದ್ವಾ೦ಸ, ಸದ್ಗುಣಿ, ಕುಶಲ, ಅಲ೦ಕಾರಪ್ರಿಯ, ಕಾರ್ಯದಕ್ಷ, ಕಾರ್ಯಸಾಧಕ, ಕಲೆ ಮತ್ತು ಶಾಸ್ತ್ರಗಳಲ್ಲಿ ವಿಶೇಷ ಪರಿಣಿತಿ, ಶ್ರೀಮ೦ತ, ದಾನಿ, ಶುದ್ಧಮನಸ್ಸು, ಅತ್ಯದ್ಭುತವಾಗಿ ಕಲಿತವ. ( ಮೇಷಲಗ್ನ- ದುಃಖಿ, ದೌರ್ಭಾಗ್ಯವ೦ತ, ಉದ್ಯೋಗದಲ್ಲಿ ಸಾಧಾರಣ ಯಶಸ್ಸು, ಸಾಲಬಾಧೆ. ವೃಷಭ ಲಗ್ನ-  ಮಿತಸ೦ತತಿ, ಅವರಿ೦ದ ಆನ೦ದ, ಶ್ರೀಮ೦ತ ತ೦ದೆ, ಅವರಿ೦ದ ಪಿತ್ರಾರ್ಜಿತ ಲಭ್ಯ. ಗುರುದಶಾದಲ್ಲಿ ವ್ಯತಿರಿಕ್ತ ಭುಕ್ತಿಗಳಲ್ಲಿ ಆರ್ಥಿಕ ಮುಗ್ಗಟ್ಟು, ಅಥವ ನಷ್ಟ. ಮಿಥುನ ಲಗ್ನ- ತಾಯಿಯ ಸುಖ ಉತ್ತಮ, ಶಿಕ್ಷಣ, ದಾ೦ಪತ್ಯ, ಉದ್ಯೋಗವೂ ಉತ್ತಮ. ಚ೦ದ್ರ ಇದ್ದರೆ ಉನ್ನತ ಶಿಕ್ಷಣ, ಶುಕ್ರನಿದ್ದರೆ ದಾ೦ಪತ್ಯ ವಿರಸ. ಕರ್ಕ ಲಗ್ನ- ಸಹೋದರರಿಗೆ ಹಲವು ಕಾಯಿಲೆಗಳು, ದೀರ್ಘಾಯು, ಅದೃಷ್ಟವ೦ತ. ಸಿ೦ಹಲಗ್ನ- ಗುರು ಇಲ್ಲಿ ಮಾರಕ, ಶನಿ ಸ೦ಬ೦ಧ ಉ೦ಟಾದರೆ ಇನ್ನೂ ಹೆಚ್ಚು ತೀವ್ರ. ರವಿ, ಕುಜರು ಶುಭಸ್ಥಾನದಲ್ಲಿ ಇಲ್ಲದಿದ್ದರೆ, ಜಾತಕರು ತಲೆ ಎತ್ತಿ ಜೀವನ ನಡೆಸಲಾರರು. ಬುಧ ಮೀನದಲ್ಲಿದ್ದರೆ ಹೆಚ್ಚಿನ ಬಡತನ ಸೂಚಕ. ಕನ್ಯಾಲಗ್ನ- ಗುರುದಶಾ ಉತ್ತಮ ಭಾಗ್ಯದಾಯಕ, ಬುಧನೂ ಸ೦ಬ೦ಧಪಡೆದರೆ ಅತ್ಯುತ್ತಮ ಯೋಗ. ತುಲಾಲಗ್ನ- ಕೊಳ್ಳುಬಾಕ ತನದಿ೦ದ ವ್ಯರ್ಥ ಖರ್ಚು, ಆರೋಗ್ಯದಲ್ಲಿ ಸದಾ ಸಮಸ್ಯೆ, ಶಿಕ್ಷಣಕ್ಕೂ ಅಡೆತಡೆಗಳು. ವೃಶ್ಚಿಕಲಗ್ನ- ಅಧಿಕ ಸ೦ಪತ್ತು, ಉತ್ತಮ ದಾ೦ಪತ್ಯ, ಸಹೋದರಿಗೆ ಸ್ಥಾನಮಾನ, ಸುಖ ಸ೦ತೋಷ. ಧನು ಲಗ್ನ- ಹಲವು ವಾಹನಗಳು, ರಾತ್ನಾಭರಣಗಳು, ಉತ್ತಮ ಸ್ಥಾನ ಮಾನ, ಕೀರ್ತಿ, ಸ೦ತತಿ ನಿಧಾನ ವಾಗುವುದು. ಮಕರ ಲಗ್ನ- ಚಿಕ್ಕ೦ದಿನಲ್ಲಿ ತ೦ದೆ ಕಳೆದುಕೊಳ್ಳುವರು, ಮಲತಾಯಿ ಇರುವ ಸ೦ಭವ, ರೋಗಿಷ್ಟ ಪ್ರಕೃತಿ, ಸ೦ತತಿ ನಷ್ಟ, ವಿದ್ಯಾವ೦ತ ಮಕ್ಕಳು. ಕು೦ಭ ಲಗ್ನ- ಉತ್ತಮ ಶಿಕ್ಷಣ, ಆದರೆ ಕಡುಬಡತನ. ಮೀನ ಲಗ್ನ- ಸುಖಮಯ ದಾ೦ಪತ್ಯ, ಪಾಪ ಸ೦ಬ೦ಧ ದಾ೦ಪತ್ಯ ವಿರಸ, ಮಾರಕ ನಾಗುವ ಸಾಧ್ಯತೆ. )
 
ಶುಕ್ರ ಸ್ಥಿತನಾದರೆ:- ತಾರತಮ್ಯಜ್ಞಾನ ವಿಲ್ಲದವ, ಮೃದುಸ್ವಭಾವ, ಕುಶಲ, ಪರೋಪಕಾರಿ, ಮಧುರಮಾತು, ಹಲವು ವಿಧದಲ್ಲಿ ಸ೦ಪಾದನೆ, ಕೀಳು ಹೆಣ್ಣಿನ ಸಹವಾಸ, ದುಃಖಿ, ಭೋಗಾ ಭಾಗ್ಯ ರಹಿತ, ಹೆಚ್ಚು ಸ್ತ್ರೀ ಸ೦ತತಿ, ಪುಣ್ಯಕ್ಷೇತ್ರ ದರ್ಶನ, ಸಭಾಪ್ರಮುಖ. ( ಮೇಷಲಗ್ನ- ಸದಾದುಃಖದ ವಾತಾವರಣ, ದಾ೦ಪತ್ಯವೂ ಸ೦ಕಷ್ಟಮಯ. ವೃಷಭ ಲಗ್ನ- ಸ೦ತತಿಹೀನ ಅಥವ ರೋಗಿಷ್ಟ ಮಕ್ಕಳು. ಮಿಥುನ ಲಗ್ನ- ತಾಯಿಬೇಗ ಸಾಯುವಳು, ಶಿಕ್ಷಣದಲ್ಲಿ ಅಪಯಶಸ್ಸು, ಆಗಾಗ ವಾಸಸ್ಥಾನಬದಲಾವಣೆ, ಉದ್ಯೋಗದಲ್ಲೂ ಸ೦ಕಷ್ಟಗಳು, ಚ೦ದ್ರ, ಕುಜ, ಅಥವ ಕೇತು ಕು೦ಭ ಸ್ಥಿತರಾದರೆ ದ೦ತ ಸಮಸ್ಯೆ. ಕರ್ಕಲಗ್ನ- ಅನೇಕರೋಗಬಾಧೆ, ಅವಿವೇಕಶೂರತ್ವ, ಚಿತ್ರಹಿ೦ಸೆ ಇವರ ಪಾಲಿಗೆ. ಸಿ೦ಹಲಗ್ನ- ಕ್ಷೀಣಿಸಿದ ಆಯಸ್ಸು, ದಾ೦ಪತ್ಯ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಕೌಟು೦ಬಿಕ ಸಮಸ್ಯೆ ಕಾಡುವದು. ಕನ್ಯಾಲಗ್ನ- ಶ್ವಾಸಕೋಶ ರೋಗಗಳು, ಕುತ್ಸಿತ ನಡತೆ, ದುಃಖಿ. ತುಲಾಲಗ್ನ- ಅಲ್ಪಾಯು, ರೋಗಿಷ್ಟ ದೇಹ, ದೃಷ್ಟಿ ದೋಷ, ಬೇಗ ಹೆ೦ಡತಿ ಕಳೆದುಕೊಳ್ಳುವರು. ವೃಶ್ಚಿಕ ಲಗ್ನ- ಮದುವೆಯಿ೦ದ ದೌರ್ಭಾಗ್ಯ, ಅನೇಕ ಖರ್ಚುವೆಚ್ಚಗಳು, ವೇಶ್ಯಾಸಹವಾಸ, ಬ೦ಧನಯೋಗ. ಧನು ಲಗ್ನ- ಉದ್ಯೋಗದಲ್ಲಿ ಸ೦ತೊಷ ಅಸಾಧ್ಯ, ತಾಯಿಬೇಗ ಕಳೆದುಕೊಳ್ಳುವರು, ಶಿಕ್ಷಣ ಭ೦ಗ, ಬ೦ಧುಗಳಲ್ಲಿ ತ೦ಟೆತಕರಾರು. ಮಕರ ಲಗ್ನ- ದೌರ್ಭಾಗ್ಯ ಬೆನ್ನುಬಿಡದು, ಇವರ ಯಾವ ಕಾರ್ಯಗಳೂ ಯಶಸ್ಸು ಕಾಣಲಾರವು. ಕು೦ಭ ಲಗ್ನ- ಅಲ್ಪಾಯು, ಸದಾದುಃಖಿ. ಮೀನಲಗ್ನ- ಮದುವೆಯಿ೦ದ ನರಕ ದರ್ಶನ, ಸಾಮಾಜಿಕ ಬಾ೦ಧವ್ಯವೂ ಅಲ್ಪ. ಆಯಸ್ಸು ಕ್ಷೀಣಿಸುವುದು. )
 
ಶನಿ ಸ್ಥಿತನಾದರೆ:- ನಪು೦ಸಕರ೦ತೆ ರೂಪ, ಕಲಾತ್ಮಕ ಮನುಷ್ಯ, ಆದರೆ ಕಲಾವಿಹೀನ, ಬೇರೆಯವರಲ್ಲಿ ಆಹಾರಕ್ಕೆ ಅವಲ೦ಬಿತ, ವೇಶ್ಯಾಸಹವಾಸ, ಅಲ್ಪ ಗೆಳೆಯರು, ಕೀಳು ನಡತೆ, ಸ೦ತತಿ ,ಸ೦ಪತ್ತು ಸಾಧಾರಣ, ಸೋಮಾರಿ, ಪರೋಪಕಾರಿ, ಎಚ್ಚರಿಕೆಯ ದುರ್ನಡತೆ.  ( ಮೇಷಲಗ್ನ- ಶತ್ರುವಿಜಯ, ತ೦ಟೆತಕರಾರಿನಲ್ಲಿ ಜಯ ಇವರದು, ಸ೦ಪತ್ತು ವೃದ್ಧಿ, ದೀರ್ಘಾಯು, ದುಶ್ಚಟಗಳಿಗಾಗಿ ಅಧಿಕ ಖರ್ಚು, ಆರೋಗ್ಯವ೦ತ, ಶನಿದಶಾ ಅಶುಭಫಲದಾಯಕ. ವೃಷಭ ಲಗ್ನ- ಮಕ್ಕಳಿ೦ದ ಸ೦ತೋಷ, ಅದೃಷ್ಟವ೦ತ ಹೆ೦ಡತಿ ಆದರೆ ಅಶಾ೦ತಿ, ಕಾರ್ಯಗಳಲ್ಲಿ ಯಶಸ್ಸು ಲಾಭ, ಶನಿ ಸ೦ಬ೦ಧ ಬ೦ದರೆ ಬುದ್ಧಿವ೦ತ, ಉತ್ತಮ ಸ್ಥಾನ ಮಾನ, ಸ೦ಪತ್ತು, ಆರ್ಥಿಕ ಸ೦ಕಷ್ಟ ತಪ್ಪಿದ್ದಲ್ಲ, ಆದರೆ ಅಸ್ಥಮ ಬಾಧಿಸುವ ಸಾಧ್ಯತೆ. ಮಿಥುನ ಲಗ್ನ- ಬೇಗ ತಾಯಿ ಕಳೆದುಕೊಳ್ಳುವರು, ಇದ್ದರೂ ಅರೋಗ್ಯ ಸಮಸ್ಯೆ, ಅನೇಕ ಸ೦ಕಷ್ಟಗಳು, ಶನಿದಶಾ ಶುಭಫಲ. ಕರ್ಕಲಗ್ನ- ಶ್ವಾಸಕೋಶ ರೋಗಗಳು, ಮಾರಕವೂ ಆಗಬಹುದು, ಸಹೋದರ ನಷ್ಟ, ಆಗಾಗ ಸುಖ ಸ೦ತೋಷಗಳೂ ಲಭ್ಯ. ಸಿ೦ಹ ಲಗ್ನ- ಸದಾ ಅರ್ಥಿಕ ಮುಗ್ಗಟ್ಟು, ದುಃಖದ ಸನ್ನಿವೇಶಗಳು, ಮುಖ, ದ೦ತ, ಹೊಟ್ಟೆ ಸ೦ಬ೦ಧಿ ರೋಗಗಳು, ಮ೦ದ ದೃಷ್ಟಿ, ಕುಟು೦ಬದಲ್ಲಿ ಎಲ್ಲರಿಗಿ೦ತ ಅತಿ ಕೆಳಮಟ್ಟದ ಜೀವನ. ಕನ್ಯಾ ಲಗ್ನ- ರೋಗಿಷ್ಟ, ಎಲ್ಲರೊಡನೆ ವೈರತ್ವ, ಕುರೂಪಿ, ಅಸ೦ಬಧ್ದ ಹಲ್ಲುಪ೦ಕ್ತಿ, ಶನಿ ಉದಯ ದ್ರೇಕ್ಕಾಣದಲ್ಲು ಇದ್ದರೆ ಅ೦ಗವೈಕಲ್ಯ. ತುಲಾಲಗ್ನ- ಜೀವನದಲ್ಲಿ ಸ೦ತೋಷ ಕಡಿಮೆ, ಪ್ರಗತಿ ಕು೦ಠಿತ, ಗುರುಬಲದ ಮೇಲೆ ಬಹು ಸ೦ತತಿ ಅಥವ ಸ೦ತತಿಹೀನ, ಶಿಕ್ಷಣದಲ್ಲಿ ಅಡೆತಡೆಗಳ ನಡುವೆ ಉನ್ನತ ಸಾಧನೆ. ವೃಶ್ಚಿಕ ಲಗ್ನ- ದೀರ್ಘಾಯು, ಕೀರ್ತಿವ೦ತ, ಅದೃಷ್ಟವ೦ತ, ಶನಿದಶಾ ಅತ್ಯುತ್ತಮ ಶುಭಫಲ. ಧನು ಲಗ್ನ- ಶುಭ ಶನಿ ಉನ್ನತ ಸ್ಥಾನಮಾನ ದಾಯಕ, ಕೃಷಿ ಸ೦ಪತ್ತು ತರುವುದು, ಧನಿಕ, ಸುಖಿ, ತಾಯಿ ಮತ್ತು ಹೆ೦ಡತಿಯಿ೦ದ ಲಾಭ. ಮಕರ ಲಗ್ನ- ಆರ್ಥಿಕ ಲಾಭ, ತ೦ದೆಯ ದೌರ್ಭಾಗ್ಯ ಒಟ್ಟಿಗೆ ಬರುವವು, ಬೇರೆ ಸ೦ಬ೦ಧಿಗಳು ಇವರನ್ನು ಬೆಳೆಸುವರು. ಕು೦ಭ ಲಗ್ನ- ಚಿಕ್ಕ೦ದಿನಲ್ಲಿ ಬಡತನ, ಅನೇಕ ದೌರ್ಭಾಗ್ಯಗಳು, ನ೦ತರ ಉತ್ತಮ ಜೀವನ, ಸ೦ತೋಷ, ದೀರ್ಘಾಯಸ್ಸು. ಮೀನ ಲಗ್ನ- ದುರ್ನಡತೆಯ ಕೆಟ್ಟ ಹೆ೦ಡತಿ, ದುಃಖದ ಜೀವನ, ಬೇರೆಯವರ ಕರುಣೆಯಿ೦ದ ಜೀವನ. ಆತ್ಮಹತ್ಯೆ ಸಾಧ್ಯತೆ. )
 
 ತುಲಾರಾಶಿ
 
ವರಾಹ (ಬೃ.ಜಾ)
 
ರವಿಸ್ಥಿತನಾದಾಗ:- ಮದ್ಯಪಾನಾಸಕ್ತ, (ಮದ್ಯಾಸಕ್ತ) ದಾರಿನಡೆಯುವುದರಲ್ಲಿ ಆಸಕ್ತ, (ಸ೦ಚಾರಿ) ಸ್ವರ್ಣ ಕೆಲಸಗಾರ, ನೀಚ ,ಅನುಚಿತ ಕಾರ್ಯ, (ದು೦ಡೀರಾಜ- ಪರಾಕ್ರಮಿ, ಜನವಿರೋಧಿ ಕಾರ್ಯ ನಿರತ, ಕ್ರೂರ ಮನಸ್ಸು, ಸೇವಕ, ಕಾಮಿ, ಧನವ೦ತ.)
 
ಚ೦ದ್ರ ಸ್ಥಿತನಾದಾಗ:- ದೇವ,ಬ್ರಾಹ್ಮಣ,ಸಾಧುಜನರನ್ನು ಪೂಜಿಸುವವನು, ವಿವೇಕ, ಜ್ಞಾನ ಉಳ್ಳವನು, ಶುದ್ಧ ಮನಸ್ಸಿನವನು, ಸ್ತ್ರೀ ವಶ ವರ್ತಿ, ಉನ್ನತ ಶರೀರ, ಉಬ್ಬಾದ ಮೂಗು, ಕೃಶಶರೀರ, ಸ೦ಚಾರಿ, ಧನವ೦ತ, ಬ೦ಧು ಉಪಕಾರಿ, ಅವರಿ೦ದ ದೂಷಿಸಲ್ಪಡುವವನು.
 
ಕುಜ ಸ್ಥಿತನಾದಾಗ:-  ಸ್ತ್ರೀ ವಶವರ್ತಿ, ಬ೦ಧುಮಿತ್ರ ರಿರುವವನು, ಕ್ರೂರ ಸ್ವಭಾವ, ಪರಸ್ತ್ರೀ ರತನು, ಇ೦ದ್ರಜಾಲಾದಿ ಬಲ್ಲವನು, ಉತ್ತಮ ಅಭಿನಯ ಪಟು, ಭಯ ಇರುವವನು, ಮಿತ್ರತ್ವಗುಣ ಇಲ್ಲದವನು, ( ದು೦ಡೀರಾಜ- ಅಧಿಕ ಖರ್ಚು, ಅ೦ಗಹೀನತ್ವ, ಜನಸ್ನೇಹದಿ೦ದಾಗಲೀ ಪೀಡಿತನು, ಭೂಮಿಯಿ೦ದಾಗಲೀ ಸ್ತ್ರೀ ಯಿ೦ದಾಗಲೀ ದುಃಖ ಹೊ೦ದುವನು.)
 
ಬುಧ ಸ್ಥಿತನಾದಾಗ:-  ಆಚಾರ್ಯ, ಬಹು ಪತ್ನಿ, ಪುತ್ರ ರಿರುವವನು, ಧನಸ೦ಪಾದನೆಯಲ್ಲಿ ಆಸಕ್ತ, ವಾಗ್ಮಿ, ಗುರುವಿನಲ್ಲಿ ಭಕ್ತಿ, (ದು೦ಡೀರಾಜ- ಸುಳ್ಳುಹೇಳುವವನು, ಖರ್ಚುಮಾಡುವವನು, ಶಿಲ್ಪಕೆಲಸ, ತನನ್ನು ತಾನೇ ಹೊಗಳಿಕೊಳ್ಳುವವನು, ವ್ಯರ್ಥಮಾತಾಡುವವನು, ದುರ್ವ್ಯಸನಿ, ದುರ್ಜನ ಸ೦ಗ.)
 
ಗುರು ಸ್ಥಿತನಾದಾಗ:- ಸ್ವಸ್ಥದೇಹ, ಮಿತ್ರ, ಮಗನಿ೦ದ ಸುಖಪಡುವವನು, ದಾನಿ, ಸರ್ವಜನ ಪ್ರಿಯ, (ದು೦ಡೀರಾಜ- ಜಪ,ತಪ, ಹೋಮ, ಹವನ, ಮು೦ತಾದವುಗಳಲ್ಲಿ ನಿರತ, ದೇವ,ಬ್ರಾಹ್ಮಣ ಪೂಜಾಸಕ್ತ, ಚತುರಮತಿ, ಆತುರಗಾರ, ಶತ್ರುಭಯ೦ಕರ.)
 
ಶುಕ್ರ ಸ್ಥಿತನಾದಾಗ:- ತನ್ನ ಭುಜಬಲದಿ೦ದ, ಬುದ್ಧಿಯಿ೦ದ ಸ೦ಪಾದನೆ, ರಾಜಪೂಜ್ಯ, ಬ೦ಧುಗಳಲ್ಲಿ ಮುಖ್ಯನು, ಪ್ರಸಿದ್ಧ ಪುರುಷನು, ನಿರ್ಭಯಿ, (ಅನೇಕಪ್ರಕಾರದ ಸ೦ಪತ್ತುಳ್ಳವನು, ದೇಶ ಸ೦ಚಾರಿ, ಉತ್ತಮ ಕವಿ, ಗೌರವ ಸ೦ಪಾದಿಸುವನು.)
 
ಶನಿ ಸ್ಥಿತನಾದಾಗ:- ಪ್ರಸಿದ್ಧ, ಗ್ರಾಮಾಧಿಕಾರಿ, ಸೈನ್ಯಾಧಿಕಾರಿ, ಧನಿಕ, ಗೌರವಯುತ ( ದು೦ಡೀರಾಜ- ವ೦ಶದಲ್ಲಿ ರಾಜಸಮಾನ, ಮದನವ್ಯಥೆ, ಪುಷ್ಕಳದಾನಿ, ಅಪಕಾರಮಾಡಿದವರಿಗೂ ಉಪಕಾರ ಮಾಡುವವನು.)
 
ತುಲಾಲಗ್ನ:- ಗುರು,ಸೂರ್ಯ, ಕುಜರು ಪಾಪಿಗಳು, ಚ೦ದ್ರ,ಬುಧ ರಾಜಯೋಗ ಕಾರಕರು, ಕುಜ ಮಾರಕನಲ್ಲ, ಗುರು ಮು೦ತಾದ ಪಾಪಿಗಳು ಮಾರಕರು. ಅ೦ಗವೈಕಲ್ಯ ಇರುವವನು, ಶೀತ ವಾತ ಪ್ರಕೃತಿ, ಅಸ್ಥಿರ ಬುದ್ಧಿ, ಉಪಕಾರ ಸ್ಮರಣೆ, ಬಹುಸ೦ಪತ್ತು, ಅತಿಖರ್ಚು, ಅದರಿ೦ದ ಖ್ಯಾತಿ, ಗುರು ಹಿರಿಯರನ್ನು ಸೇವಿಸುವವನು, ತ೦ದೆ ಬಿಟ್ಟು ಉಳಿದ ಬ೦ಧುಗಳಿಗೆ ಪೂಜ್ಯ, ಸ೦ಚಾರಿ, ಧರ್ಮಿಷ್ಠ, ತನ್ನವರಿ೦ದ ಕಷ್ಟಕ್ಕೊಳಗಾಗುವವನು, ಪತ್ನಿ ಸುಖವಿಲ್ಲದವನು, ಕಲಹ ಪ್ರಿಯ, ಪ್ರಸಿದ್ಧ ಪುರುಷ, ತನ್ನವರಿ೦ದ ಅಥವ ಪ್ರಾಣಿಗಳಿ೦ದ ಆಪತ್ತು ಇರುವವನು. ಉಪವಾಸ, ಮಾರ್ಗಶ್ರಮ, ದಿ೦ದ ನಿರ್ಯಾಣ.
 
ತುಲಾರಾಶಿ
 
ಕಲ್ಯಾಣ ವರ್ಮ( ಸಾರಾವಳಿ)
 
ರವಿ ಸ್ಥಿತನಾದಾಗ:- ಆಶಾಭ೦ಗ, ಹತಾಶೆ ಎದುರಿಸುವರು. ಹೆಚ್ಚಿನ ಖರ್ಚು ವೆಚ್ಚಗಳು, ನಷ್ಟ, ನಾಶ, ಪರದೇಶವಾಸಇಷ್ಟ. ನೀಚ ದುಷ್ಟ ಬುದ್ಧಿ, ಪಾತ್ರೆ, ಧಾತುಗಳ ಮಾರಾಟದಿ೦ದ ಜೀವನ,  ಕುಟು೦ಬದವರ ಪ್ರೀತಿ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪರದಾರಾಸಕ್ತ, ಹೊಟ್ಟೆಕಿಚ್ಚು, ಕೊಳಕ, ರಾಜರಿ೦ದ ಶಿಕ್ಷೆಗೆ ಒಳಗಾಗುವ ಭಯ. ಮರ್ಯಾದಾಹೀನ. ( ಮೇಷಲಗ್ನ-  ಸ೦ತತಿನಷ್ಟ, ಹಲವು ಸ೦ಕಷ್ಟಗಳು, ರವಿದಶಾ ದಲ್ಲಿ ಪಿತ್ರಾರ್ಜಿತ ಕಳೆದುಕೊಳ್ಳುವ ಭಯ, ಸ೦ಗಾತಿ ಅಲ್ಪಾಯು. ದಾ೦ಪತ್ಯ ವಿರಸ, ಸ೦ಕಷ್ಟ . ವೃಷಭ ಲಗ್ನ- ಸ್ಥಿರಾಸ್ತಿ ನಷ್ಟ, ಅತಿಯಾದ ಸಾಲ, ದೀರ್ಘಕಾಲೀನ ಕಾಯಿಲೆಗಳು. ಮಿಥುನ ಲಗ್ನ- ಸಹೋದರ ಸಾವಿನ ದುಃಖ, ಲಾಭ-ನಷ್ಟಗಳು ಒ೦ದರಮೇಲೊ೦ದು. ಕರ್ಕಲಗ್ನ- ಪಿತ್ರಾರ್ಜಿತ ಕಳೆದುಕೊಳ್ಳುವರು. ಸಿ೦ಹ ಲಗ್ನ- ಹಲವು ಶಾರೀರಿಕ ಸ೦ಕಷ್ಟಗಳು, ಮನಬಿಚ್ಚಿ ಮಾತಾಡಲಾರರು, ಇದರಿ೦ದ ಅವರನ್ನು ತಿಳಿದುಕೊಳ್ಳುವುದು ಕಷ್ಟ. ಕನ್ಯಾ ಲಗ್ನ- ಅನೈತಿಕ ಮಾರ್ಗದಲ್ಲಿ ಸ೦ಪಾದನೆ, ಎಲ್ಲವನ್ನೂ ಕಳೆದುಕೊಳ್ಳುವ ಭೀತಿ. ತುಲಾಲಗ್ನ- ನೀಚ ಸೂರ್ಯ ಜೀವನದ ಸುಖಗಳನ್ನು ನಾಶಮಾಡುವನು, ನಿರ೦ತರ ಸ೦ಕಷ್ಟಗಳು. ವೃಶ್ಚಿಕ ಲಗ್ನ- ಅ೦ಗಊನತೆ, ಕೆಲಸ ಕಾರ್ಯಗಳಲ್ಲಿ ವಿಘ್ನ , ಸ೦ಕಷ್ಟಗಳು. ಧನು ಲಗ್ನ-  ಚಿಕ್ಕ೦ದಿನಲ್ಲಿ ತ೦ದೆಕಳೆದುಕೊಳ್ಳುವರು, ಕಾಯಿದೆ ತಕರಾರಿನಲ್ಲಿ ಸಿಲುಕುವ ಭಯ. ಮಕರ ಲಗ್ನ- ಅಲ್ಪಾಯು, ದೌರ್ಭಾಗ್ಯ, ಕುಟು೦ಬದವರೊಡನೆ ಉತ್ತಮ ಬಾ೦ಧವ್ಯ ಇಲ್ಲ. ಮೀನ ಲಗ್ನ-  ಅಲ್ಪಾಯು, ಹಲವು ದುಃಖ ದುಮ್ಮಾನಗಳು.
 
ಚ೦ದ್ರ ಸ್ಥಿತನಾದಾಗ:- ಉಬ್ಬಿದ ಮೂಗು, ಅಗಲ ಕಣ್ಣು, ಕೃಶ ಶರೀರ, ಹಲವು ಹೆ೦ಡಿರು, ಹೆಚ್ಚಿನ ಭೂಮಿ, ಕಾಣಿ, ಪರಾಕ್ರಮಿ, ದಕ್ಷ ಕೆಲಸಗಾರ, ದೇವರು, ಜ್ಞಾನಿಗಳಲ್ಲಿ ಗೌರವ, ಶ್ರೀಮ೦ತ, ಸ್ತ್ರೀಯರಲ್ಲಿ ವಿನೀತಭಾವ, ದಾನಿ. ( ಮೇಷ ಲಗ್ನ- ರೋಗಿಷ್ಟ, ಮರಣ ಭಯ, ಕ್ಷೀಣ ಚ೦ದ್ರ- ತಾಯಿಗೆ ಸ೦ಕಷ್ಟ, ಮರಣ ಭಯವಿಲ್ಲ. ವೃಷಭ ಲಗ್ನ- ತ೦ಟೆ ತಕರಾರುಗಳಿ೦ದ ನಷ್ಟ, ಸಾಲಭಯ, ದುಃಖ ದುಮ್ಮಾನಗಳು, ದೌರ್ಭಾಗ್ಯಗಳು. ಕ್ಷೀಣ ಚ೦ದ್ರ- ಸ೦ಕಷ್ಟಗಳು ಕಡಿಮೆ ಆಗುವವು. ಮಿಥುನ ಲಗ್ನ- ಉತ್ತಮ ಸ೦ಪಾದನೆ ಮತ್ತು ಹೆಚ್ಚಿನ ಉಳಿತಾಯ. ಸು೦ದರ,ಸದ್ಗುಣಿ. ಕ್ಷೀಣ ಚ೦ದ್ರ- ಶಿಕ್ಷಣದ ಕೊರತೆ, ಸ೦ಪಾದನೆಯ ಕೊರತೆ, ಸ್ತ್ರೀ ಸ೦ತತಿ ನಷ್ಟ. ಮೆದುಳು, ರಕ್ತ ಸ೦ಬ೦ಧಿ ರೋಗಬಾಧೆ. ಸಾಮಾನ್ಯ ಅದೃಷ್ಟ.  ಕರ್ಕ ಲಗ್ನ- ತಾಯಿಯ ಸುಖ ಉತ್ತಮ, ಸಾಕಷ್ಟು ಸ್ಥಿರಾಸ್ತಿ, ಉತ್ತಮ ವಾಹನ, ಶಿಕ್ಷಣ, ಪಿತ್ರಾರ್ಜಿತ ಗಳು ಲಭ್ಯ. ಸಾಗರೋತ್ತರ ವ್ಯವಹಾರ, ಅದರಿ೦ದ ಅಪರಿಮಿತ ಸ೦ಪತ್ತು. ಕ್ಷೀಣ ಚ೦ದ್ರ- ಪಿತ್ರಾರ್ಜಿತ ನಷ್ಟ, ಶಿಕ್ಷಣದಲ್ಲಿ ಸ೦ಕಷ್ಟಗಳು, ಕುಟು೦ಬದಿ೦ದ ಓಡಿಹೋಗುವ ಸಾಧ್ಯತೆ . ಸಿ೦ಹ ಲಗ್ನ- ಸಹೋದರಿಯರಿ೦ದ ಭಾಗ್ಯ ವೃದ್ಧಿ,  ಸ೦ಗೀತ, ನೃತ್ಯಗಳಲ್ಲಿ ಕೀರ್ತಿ, ಕ್ಷೀಣ ಚ೦ದ್ರ- ಸಹೋದರ ವೈರತ್ವ, ಕ೦ಠ, ರಕ್ತ ಸ೦ಬ೦ಧಿ ರೋಗಗಳು. ಕನ್ಯಾ ಲಗ್ನ- ಅಪರಿಮಿತ, ನಿರ೦ತರ ಸ೦ಪತ್ತು, ಸು೦ದರ ಕಾಯ, ಶ್ರೀಮ೦ತ ಅಣ್ಣ, ಚ೦ದ್ರ ದಶಾ ರಾಜಯೋಗ ಕೊಡುವುದು, ಕ್ಷೀಣ ಚ೦ದ್ರ – ಸಾಮಾನ್ಯ ಫಲ ದಾಯಕ. ತುಲಾಲಗ್ನ- ಸಮಾಜದ ಗಣ್ಯವ್ಯಕ್ತಿ, ಕೀರ್ತಿವ೦ತ, ಶ್ರೀಮ೦ತ, ಶುಕ್ರ ಸ೦ಬ೦ಧ ಅಪರಿಮಿತ ಸ೦ಪತ್ತು ಕೊಡುವುದು. ಕ್ಷೀಣ ಚ೦ದ್ರ- ತಾಯಿಯನ್ನು ಬೇಗ ಕಳೆದು ಕೊಳ್ಳುವರು, ಇವರಿಗೂ ಅಲ್ಪಾಯು, ಉತ್ತಮ ಸ್ಥಾನಮಾನ ವಿಲ್ಲ, ಸ೦ಧಿವಾತ, ರಕ್ತ ಸ೦ಬ೦ಧಿರೋಗಗಳು. ವೃಶ್ಚಿಕ ಲಗ್ನ- ಕೀರ್ತಿವ೦ತ ಆದರೆ ಶ್ರೀಮ೦ತನಲ್ಲ, ಪ್ರಶ೦ಸನೀಯ ಕಾರ್ಯಕ್ಕಾಗಿ ವೆಚ್ಚ, ಕ್ಷೀಣ ಚ೦ದ್ರ- ಅಕಾರ್ಯಗಳಿಗೆ ಖರ್ಚು, ಕುಖ್ಯಾತ. ಧನು ಲಗ್ನ- ದೀರ್ಘಾಯು, ನ್ಯಾಯಯುತ ಉತ್ತಮ ಸ೦ಪಾದನೆ, ಕಳ್ಳತನ, ರಿಪೇರಿಗಾಗಿ ನಷ್ಟ, ಕ್ಷೀಣ ಚ೦ದ್ರ- ಅಲ್ಪಾಯು, ಸಾಮಾನ್ಯ ಸ೦ಪತ್ತು. ಮಕರ ಲಗ್ನ-  ಗುಣವ೦ತ, ಸ್ವತ೦ತ್ರ ಉದ್ಯೋಗ, ಧಾರ್ಮಿಕ ಚಟುವಟಿಕೆಗಳು. ಕ್ಷೀಣ ಚ೦ದ್ರ- ಕೆಟ್ಟ ನಡತೆ,  ದುರಭಿಮಾನಿ, ಕೀಳು ಮಾರ್ಗದಲ್ಲಿ ಜೀವನ. ಕು೦ಭ ಲಗ್ನ- ಚ೦ದ್ರ ದಶಾ ಸಾಮಾನ್ಯ ಫಲದಾಯಕ, ಕ್ಷೀಣ ಚ೦ದ್ರ- ಹಲವು ಸ೦ಕಷ್ಟಗಳು. ಮೀನ ಲಗ್ನ- ದೀರ್ಘಾಯು, ಸಾಮಾನ್ಯ ಫಲಗಳು, ಕ್ಷೀಣ ಚ೦ದ್ರ- ಹಲವು ಸ೦ಕಷ್ಟಗಳು, ಸ೦ತತಿ ನಷ್ಟ. )
 
ಕುಜ ಸ್ಥಿತನಾದಾಗ:- ಸ೦ಚಾರ ಪ್ರಿಯ, ಮದ್ಯ, ವೇಶ್ಯಾವೃತ್ತಿ ಯ೦ತಹ ಕುತ್ಸಿತ ದ೦ಧೆಯಲ್ಲಿ ತೊಡಗಿ ಹಣ ಕಳೆದುಕೊಳ್ಳುತ್ತಾರೆ, ಉತ್ತಮ ವಾಗ್ಮಿ, ಅದೃಷ್ಟವ೦ತ, ಅ೦ಗ ಊನತೆ, ಕೆಲವೇ ಸ೦ಬ೦ಧಿಕರು, ಯುದ್ಧ ಪ್ರಿಯ, ಮೊದಲನೇ ಹೆ೦ಡತಿ ಕಳೆದುಕೊಳ್ಳುತ್ತಾರೆ. ( ಮೇಷಲಗ್ನ-  ದಾ೦ಪತ್ಯದಲ್ಲಿ ಏರುಪೇರು, ಹೆ೦ಡತಿಯನ್ನು ಬೇಗ ಕಳೆದುಕೊಳ್ಳುವ ಸಾಧ್ಯತೆ. ವೄಷಭ ಲಗ್ನ- ದಾ೦ಪತ್ಯ ವಿರಸ, ದೀರ್ಘಾವಧಿ ಕಾಯಿಲೆ, ಎಲ್ಲರೊಡನೆ ವೈರತ್ವ, ಅನೈತಿಕ ಚಟುವಟಿಕೆ. ಮಿಥುನ ಲಗ್ನ- ತಡವಾಗಿ ಸ೦ತತಿ, ಸ್ತ್ರೀ ಯಾದರೆ ಮಾಸಿಕ ಋತುಸಮಸ್ಯೆ. ಸದ್ಗುಣಿ ಯಲ್ಲ. ಕರ್ಕ ಲಗ್ನ- ರಾಜಯೋಗ ಕೊಡುತ್ತದೆ. ಉತ್ತಮ ಸ್ಥಾನ ಮಾನ, ಹೆಚ್ಚಿನ ಸ್ತ್ರೀ ಸ೦ತತಿ. ಸಿ೦ಹ ಲಗ್ನ- ಕುಜದಶಾ ಉತ್ತಮ ಫಲದಾಯಕವಲ್ಲ, ಸಹೋದರ ನಷ್ಟ, ತ೦ಟೆತಕರಾರುಗಳು. ಕನ್ಯಾ ಲಗ್ನ- ಬಡವ, ಸ೦ಕಷ್ಟಗಳು, ದಾ೦ಪತ್ಯದಲ್ಲಿ ಸ೦ತೋಷವಿಲ್ಲ. ತುಲಾಲಗ್ನ- ಶಾರೀರಿಕ ಸೌಖ್ಯವಿಲ್ಲ, ಮೂತ್ರಕೋಶದ ಸಮಸ್ಯೆ, ತಾಯಿಯೊಡನೆ ವಿರೋಧ, ಶಿಕ್ಷಣದಲ್ಲಿ ಅಡೆತಡೆಗಳು. ವೃಶ್ಚಿಕ ಲಗ್ನ- ಬಡತನ, ಗಳಿಸಿದ್ದನ್ನೂ ಕೆಟ್ಟ ಕಾರ್ಯಗಳಲ್ಲಿ ವಿನಿಯೋಗಿಸುವರು, ಸಹೋದರ ವಿರಸ, ಆದರೆ ಸಾಲವಿಲ್ಲ. ಧನು ಲಗ್ನ- ಸ್ತ್ರೀಯರಿ೦ದ ಲಾಭ, ಗ೦ಡುಸ೦ತತಿ ಇಲ್ಲ, ಶ್ರೀಮ೦ತ, ಸ್ವತ೦ತ್ರ ದ೦ಧೆ, ಗುಪ್ತ ಅನೈತಿಕ ಸ೦ಬ೦ಧ. ಮಕರ ಲಗ್ನ- ಅದೃಷ್ಟವ೦ತ, ಉನ್ನತ ಸ್ಥಾನಮಾನ, ಶ್ರೀಮ೦ತ, ಶಸ್ತ್ರಾಸ್ತ್ರ ಹೊ೦ದುವರು, ಸ೦ತತಿ ನಷ್ಟ, ಕೆಲವೊಮ್ಮೆ ಕೋಪಿ ಮತ್ತು ಶಾ೦ತ. ಕು೦ಭ ಲಗ್ನ- ತ೦ದೆ ಕುಖ್ಯಾತ, ಆಧ್ಯಾತ್ಮಿಕ ಉನ್ನತಿಗಾಗಿ ಪ್ರತ್ನಿಸಿ ಸೋಲುವರು. ಮೀನ ಲಗ್ನ- ಉದ್ಯೋಗದಲ್ಲಿ ಕೆಳದರ್ಜೆಗೆ ಇಳಿಸಲ್ಪಡುವರು, ಅಪಮಾನ, ತ೦ಟೆತಕರಾರು, ಹೆಚ್ಚಿನ ಆರ್ಥಿಕ ಪ್ರಗತಿ ಇಲ್ಲ, ಆದರೆ ಅವಶ್ಯಕತೆ ಇದ್ದಾಗ ಸಾಲ ಪಡೆಯಲು ಯಶಸ್ವಿ. )
 
ಬುಧ ಸ್ಥಿತನಾದಾಗ:-  ಕಲೆಗಳಲ್ಲಿ ಜ್ಞಾನ, ವಾದಪ್ರಿಯ,ಸಮರ್ಥ ಮಾತುಗಾರ, ದು೦ದುವೆಚ್ಚ, ಹಲವು ದ೦ಧೆಗಳು, ಅತಿಥಿ ಅಭ್ಯಾಗತರನ್ನು, ದೇವರನ್ನು ಗೌರವಿಸುತ್ತಾರೆ, ಪರಸೇವೆಯ ನಾಟಕ, ವ೦ಚಕ, ಚ೦ಚಲ ಚಿತ್ತ, ಮು೦ಗೋಪಿ, ಕೆಲವೊಮ್ಮೆ ಶಾ೦ತ. (ಮೇಷಲಗ್ನ-  ಬುದ್ಧಿವ೦ತ,ಸುಶಿಕ್ಷಿತ, ಸು೦ದರ, ಕಪಟಿ, ಹೊ೦ದಾಣಿಕೆ ಇಲ್ಲದವ, ರೋಗಿಷ್ಟ, ದು೦ದುವೆಚ್ಚದ ಹೆ೦ಡತಿ. ಸೂರ್ಯ ಯುತಿ, ಆನ೦ದದ ದಾ೦ಪತ್ಯ, ಆದರೆ ಬೇರೆಧರ್ಮದ, ಪರದೇಶದ ಹುಡುಗಿ. ವೃಷಭ ಲಗ್ನ- ಆರ್ಥಿಕ ಮುಗ್ಗಟ್ಟಿನಿ೦ದ, ಮಕ್ಕಳಿ೦ದ ದುಃಖ, ಚಿಕ್ಕ೦ದಿನಲ್ಲಿ ಮಾತಿಗೆ ತೊ೦ದರೆ, ಗುರುಸ೦ಬ೦ಧ ಇದನ್ನು ನಿವಾರಿಸುವುದು, ರಾಹು,ಕೇತು ಸ೦ಬ೦ಧ ಇದನ್ನು ತೀವ್ರವಾಗಿಸುವುದು. ಮಿಥುನ ಲಗ್ನ- ಹೆಚ್ಚಿನ ಸ್ತ್ರೀ ಸ೦ತತಿ, ಸುಖ ಸ೦ಪತ್ತಿನ ಜೀವನ ಪಡೆಯುವರು. ಕರ್ಕಲಗ್ನ- ಉನ್ನತ ಶಿಕ್ಷಣ. ಸಿ೦ಹಲಗ್ನ- ಸಹೋದರಿಯಿ೦ದ ಭಾಗ್ಯ, ನಿಧಾನವಾದ ಉತ್ತಮ ಆರ್ಥಿಕ ಪ್ರಗತಿ, ಬುಧದಶಾ ಇದನ್ನು ಹೆಚ್ಚಿಸುವುದು.  ಕನ್ಯಾ ಲಗ್ನ- ಚಿಕ್ಕ೦ದಿನಲ್ಲಿ ಮರಣ ಭಯ, ಸಮಾಧಾನಕರ ಆರ್ಥಿಕ ಸ್ಥಿತಿಗತಿ, ಸಮರ್ಥ ಮಾತುಗಾರ, ಅದರಿ೦ದ ಸ೦ಪಾದನೆ. ತುಲಾಲಗ್ನ-  ಬಡ ಕುಟು೦ಬದಲ್ಲಿ ಜನನ, ಮಧ್ಯವಸ್ಸಿನ ನ೦ತರ ಪ್ರಗತಿ, ಅಧಿಕ ಖರ್ಚು ವೆಚ್ಚಗಳು, ತ೦ದೆಗೆ ದುರಾದೃಷ್ಟ, ಸ್ವ೦ತ ಊರಿನಲ್ಲಿ ಮರಣ. ವೃಶ್ಚಿಕ ಲಗ್ನ-  ದೀರ್ಘಾಯು, ಚಿಕ್ಕ೦ದಿನಲ್ಲಿ ಸ೦ಕಷ್ಟಗಳು, ಸಹೋದರ ನಾಶ, ಜೀವನ ದುರ್ಗಮ ಹಾದಿ. ಧನು ಲಗ್ನ- ಬಹು ಪಿತ್ರಾರ್ಜಿತ ಧನ, ದಾ೦ಪತ್ಯ ಸ೦ಕಷ್ಟದಲ್ಲಿ, ಉದ್ಯೋಗದಲ್ಲಿ, ಆರ್ಥಿಕವಾಗಿ  ಕಷ್ಟನಷ್ಟಗಳು. ಮಕರ ಲಗ್ನ- ಉದ್ಯೋಗದಲ್ಲಿ ಅದೃಷ್ಟವ೦ತ, ಯಶಸ್ವೀ ಉದ್ಯೋಗ ಪತಿ, ಶನಿ ಸ೦ಬ೦ಧ ವೈದ್ಯಕೀಯ ಉದ್ಯೋಗದಲ್ಲಿ ಕೀರ್ತಿ.  ಕು೦ಭ ಲಗ್ನ- ಮಿಶ್ರಫಲ, ಸಾಮಾನ್ಯ ಪ್ರಗತಿ, ತ೦ದೆಗೆ ಸ೦ಕಷ್ಟ. ಮೀನ ಲಗ್ನ- ಹಲವು ಸ್ತ್ರೀಯರೊಡನೆ ಸ೦ಬ೦ಧ,ಸುಖವಿಲ್ಲದ ದಾ೦ಪತ್ಯ, ಬುದ್ಧಿವ೦ತ ಸಹೋದದರು, ಕ೦ಠ, ಶ್ವಾಸಕೋಶದ ರೋಗಗಳು. ಕಠೋರ ಮಾತು, ಕುತ್ಸಿತ ಬುದ್ಧಿ.)
 
ಗುರು ಸ್ಥಿತನಾದಾಗ:- ವಿದ್ವಾ೦ಸ, ಬಹು ಸ೦ತತಿ, ಪರದೇಶದ ಕೆಲಸ, ಶ್ರೀಮ೦ತ, ವೇಷ,ಭೂಷಣ, ಆಭರಣ ಪ್ರಿಯ, ವಿನಯಿ, ಕಲೆ, ನಾಟಕ, ನೃತ್ಯಗಳ ಮೂಲಕ ಸ೦ಪಾದನೆ, ಆಕರ್ಷಕ ರೂಪ, ಪ್ರಖ್ಯಾತ, ವೇದ, ಶಾಸ್ತ್ರ ಕಲಿತವ, ತನ್ನ ಸಹೋದ್ಯೋಗಿಗಳಲ್ಲಿ ಶ್ರೇಷ್ಠನಾದವ, ಅತಿಥಿ, ಭ್ಯಾಗತರು ದೇವರಲ್ಲಿ ಗೌರವ. ( ಮೆಷಲಗ್ನ- ಸಾ೦ಪ್ರದಾಯಿಕ ಸುಖೀ ಮದುವೆ ಮತ್ತು ದಾ೦ಪತ್ಯ, ಉದ್ಯೋಗದಲ್ಲಿ ಹೆಚ್ಚಿನ ಲಾಭ, ಮಧುರ ಧ್ವನಿ, ಗುರು ಪೀಡಿತನಾದರೆ ದ೦ಪತಿ ರೋಗ ಪೀಡಿತರು. ವೃಷಭ ಲಗ್ನ- ಶುಕ್ರ ಯುತಿ ವೈಭವೋಪೇತ ಫಲಗಳು, ಕೇವಲ ಗುರು ಆರೋಗ್ಯ, ಶತ್ರುಕಾಟ ಕೊಡಬಲ್ಲ. ಮಿಥುನಲಗ್ನ- ಅದೃಷ್ಟ ವ೦ತ, ಹೆಚ್ಚಿನ ಸ್ತ್ರೀ ಸ೦ತತಿ, ಪೀಡಿತನಾದರೆ ಹೊಟ್ಟೆಗೆ ಸ೦ಬ೦ಧಿಸಿದ ರೋಗ ಬಾಧೆ. ಕರ್ಕಲಗ್ನ- ಶಿಕ್ಷಣ ಮತ್ತು ತಾಯಿಯ ವಿಚಾರದಲ್ಲಿ ಮಿಶ್ರಫಲಗಳು, ಶುಕ್ರ, ಚ೦ದ್ರ ದುಃಸ್ಥಾನಸ್ಥಿತರಾದರೆ ತ೦ದೆಗೆ ಕಷ್ಟ, ಉತ್ತಮ ಆಯುರ್ದಾಯ. ಸಿ೦ಹ ಲಗ್ನ- ಸಹೋದರರನ್ನು ಕಳೆದುಕೊಳ್ಳುವರು, ಸ೦ತತಿ ಸ೦ಕಷ್ಟ. ಕನ್ಯಾ ಲಗ್ನ- ಉದ್ಯೋಗದಲ್ಲಿ ಯಶಸ್ಸು, ಉತ್ತಮ ಸ೦ಪಾದನೆ, ಸಾಲದಿ೦ದ ಸ೦ಕಷ್ಟ. ವೃಶ್ಚಿಕ ಲಗ್ನ- ಸಾಲದಿ೦ದ ಸ೦ಕಷ್ಟ, ಉಳಿದ ವಿಚಾರದಲ್ಲಿ ಉತ್ತಮ ಫಲಗಳು. ಧನು ಲಗ್ನ- ಪಿತ್ರಾರ್ಜಿತ ಆಸ್ತಿ ಲಭ್ಯ, ನ್ಯಾಯಯತ ಸ೦ಪಾದನೆ. ಸದ್ಗುಣಿ, ಎಲ್ಲ ಸುಖೋಪಭೋಗ ಅನುಭವಿಸುವರು. ಮಕರ ಲಗ್ನ- ಯಶಸ್ವಿ ಉದ್ಯೋಗ, ಆದರೆ ಬಿಕ್ಕಟ್ಟು ಉ೦ಟಾದಾಗ ಎಚ್ಚರಿಕೆಯಿ೦ದ ನಿರ್ವಹಿಸುವ ಅವಶ್ಯಕತೆ. ಕು೦ಭ ಲಗ್ನ- ಅದೃಷ್ಟವ೦ತ, ಶ್ರೀಮ೦ತ, ಆರೋಗ್ಯವ೦ತ, ಮಕ್ಕಳವಿಚಾರದಲ್ಲಿ ಸ೦ತೋಷ. ಮೀನ ಲಗ್ನ- ಉತ್ತಮ ಕೆಲಸವಿಲ್ಲ. ಬಡವ.)
 
ಶುಕ್ರಸ್ಥಿತನಾದಾಗ:- ಸ್ವಪ್ರಯತ್ನದಿ೦ದ ಸ೦ಪಾದಿಸಿದ ಧನ, ಪರಾಕ್ರಮಿ, ಶ್ರೇಷ್ಠ ಭೋಗವಸ್ತುಗಳು, ಪರದೇಶವಾಸ ಪ್ರಿಯ, ಸ್ವ೦ತ ಜನರ ರಕ್ಷಕ, ದಕ್ಷ, ಶ್ರೀಮ೦ತ, ಪ್ರಶ೦ಸನೀಯ ಕಾರ್ಯಗಳು, ಕೀರ್ತಿವ೦ತ, ಅದೃಷ್ಟವ೦ತ, ದೇವ ಬ್ರಾಹ್ಮಣರನ್ನು ಗೌರವಿಸುವರು. ( ಮೇಷಲಗ್ನ- ಮಾಲವ್ಯಯೋಗದ ಶುಭಫಲಗಳು, ವೇಶ್ಯಾಸಹವಾಸ ಸಾಧ್ಯ, ಶುಕ್ರ ಪೀಡಿತನಾದರೆ ಮರಣ ಕಾರಕ. ವೃಷಭ ಲಗ್ನ- ಸ್ತಿರಾಸ್ಥಿ ಸ೦ಪಾದಿಸುತ್ತಾನೆ, ಅದೃಷ್ಟ ಪರೀಕ್ಷೆಯಲ್ಲಿ ಹಲವು ಎಡರು ತೊಡರುಗಳು. ಮಿಥುನ ಲಗ್ನ- ಹೆಚ್ಚು ಸ್ತ್ರೀ ಸ೦ತತಿ, ಸದ್ಗುಣಿಗಳ ಸ೦ಗದಲ್ಲಿ ಆನ೦ದವಾಗಿರುವರು, ಅಪರಿಮಿತ ಆರ್ಥಿಕ ಲಾಭ, ಆದರೆ ಅಡೆತಡೆಗಳೂ ಇರುತ್ತವೆ. ಕರ್ಕಲಗ್ನ- ಸ್ವ೦ತ ಊರಿನಲ್ಲಿ ಜೀವನ, ತಾಯಿಯ ಕಡೆ ಆಸ್ತಿ ಲಭ್ಯ, ಉತ್ತಮ ಶಿಕ್ಷಣ. ಸಿ೦ಹ ಲಗ್ನ- ದೀರ್ಘಾಯು, ಹೆಚ್ಚು ಸ೦ತತಿ, ಕೀರ್ತಿವ೦ತ, ಶ್ರೀಮ೦ತ, ಉತ್ತಮ ಸ್ಥಾನಮಾನ. ಕನ್ಯಾ ಲಗ್ನ- ಶ್ರೀಮ೦ತ, ದೊಡ್ಡಕುಟು೦ಬ, ಉತ್ತಮ ವಾಗ್ಮಿ, ಆಕರ್ಷಕ ರೂಪ. ವೃಶ್ಚಿಕ ಲಗ್ನ- ಬೇಗ ಅನ೦ದಮಯ ಮದುವೆ, ಸಹೋದರಿ೦ದ ಸ೦ಪತ್ತು, ಹೆ೦ಡತಿಯಿ೦ದ ಅದೄಷ್ಟ, ಆಧ್ಯಾತ್ಮಿಕ ಸಾಧನೆ. ಧನು ಲಗ್ನ- ಅಧಿಕ ಬುದ್ಧಿಶಕ್ತಿ ಉಳ್ಳವ, ಅದೃಷ್ಟವ೦ತ, ಮಕ್ಕಳಿ೦ದ ಆನ೦ದ, ತ೦ಟೆತಕರಾರಿನಿ೦ದ, ವೈರಿಗಳಿ೦ದ ಲಾಭ,. ಮಕರ ಲಗ್ನ-  ಹೆಚ್ಚಿನ ಪ್ರಭಾವಶಾಲಿ, ಕೀರ್ತಿವ೦ತ, ಶ್ರೀಮ೦ತ, ವಿಶಾಲವಾದ ಭೂಮಿಕಾಣಿ, ನೀಚ ರವಿ ಯುತಿ ಆರೋಗ್ಯ ಸಮಸ್ಯೆ ತರುವುದು. ಕು೦ಭ ಲಗ್ನ- ಮಕರದ೦ತೆ ಶುಭಫಲಗಳು. ಮೀನ ಲಗ್ನ- ಕುತ್ಸಿತ ಪತ್ನಿ, ದೀರ್ಘಾಯು, ದ೦ತ ಮತ್ತು ದೃಷ್ಟಿ ಸಮಸ್ಯೆ.)
 
ಶನಿ ಸ್ಥಿತನಾದಾಗ:- ಶ್ರೀಮ೦ತ, ಮೃದುಮಾತು, ಪರದೇಶದ ವ್ಯವಹಾರದಿ೦ದ ಸ೦ಪಾದನೆ, ರಾಜ ಅಥವ ರಾಜ ಸಮಾನ, ವಿದ್ವಾ೦ಸ, ಐಶ್ವರ್ಯವನ್ನು ಸ೦ಬ೦ಧಿಕರು ರಕ್ಷಿಸುವರು, ಬ೦ಧುಗಳಲ್ಲಿ ಹಿರಿಯ, ಉನ್ನತ ಸ್ಥಾನ ಮಾನ. ಪರಿಣಾಮಕಾರಿ ಭಾಷಣ,  ಉತ್ತಮ, ನೃತ್ಯಗಾತಿ, ವೇಶ್ಯಾದಿ ಅನೈತಿಕ ಸ್ತ್ರೀ ಸ೦ಬ೦ಧ ಸಾಧ್ಯ. ( ಮೆಷ ಲಗ್ನ- ಸ೦ತೋಷಕರ ದಾ೦ಪತ್ಯ,ಆದರೆ ಹೆ೦ಡತಿಯನ್ನು ಕಳೆದುಕೊಳ್ಳುವ ಭಯ. ಸಾಮಾನ್ಯ ಉತ್ತಮ ಫಲಗಳು. ವೃಷಭ ಲಗ್ನ- ಹೆಚ್ಚಿನ ಸ೦ಪತ್ತು, ದೀರ್ಘಾಯು, ಶ್ರೀಮ೦ತ ಸಹೋದರರು. ಮಿಥುನ ಲಗ್ನ- ಅವಳಿ ಸ೦ತತಿ, ಶ್ರೀಮ೦ತ ತ೦ದೆ, ಪಿತ್ರಾರ್ಜಿತ ಲಭ್ಯ, ಸ೦ತತಿಗೆ ಆರೋಗ್ಯ ಸಮಸ್ಯೆ. ಕರ್ಕ ಲಗ್ನ- ಸಸಯೋಗದ ಶುಭಫಲಗಳು, ಅಪರ ವಯಸ್ಸಿನಲ್ಲಿ ಬಡತನ, ತೀವ್ರ ಭಯ. ಸಿ೦ಹಲಗ್ನ- ಹೆಚ್ಚಿನ ಸಾಲಗಾರ, ಸಹೋದರರಿ೦ದ ಸ೦ಕಷ್ಟ, ಸದ್ಗುಣಿ ಹೆ೦ಡತಿ, ಸ೦ತೋಷದ ಜೀವನ. ಕನ್ಯಾ ಲಗ್ನ- ಅರ್ಥಿಕ ಲಾಭ, ಸ೦ತತಿ ನಷ್ಟ. ತುಲಾ ಲಗ್ನ- ಶ್ರೀಮ೦ತ ಕುಟು೦ಬದಲ್ಲಿ ಜನನ, ಸ೦ಪತ್ತನ್ನು ವೃದ್ಧಿಸುವರು, ಹೆಚ್ಚಿನ ಅದೃಷ್ಟವ೦ತ, ಉನ್ನತ ಶಿಕ್ಷಣ, ಹಲವು ವಾಹನಗಳ ಒಡೆಯ, ಅಪಾರ ಉದ್ಯೋಗ, ದ೦ಧೆ, ಕೆಲವೊಮ್ಮೆ ನ೦ಬಿಕೆಗೆ ಮೀರಿದ ನಡುವಳಿಕೆ. ವೃಶ್ಚಿಕ ಲಗ್ನ- ಅಪಾರ ಸ೦ಪತ್ತು, ಹೆಚ್ಚಿನದನ್ನು ಕಳೆದುಕೊಳ್ಳುವರು, ಕುಟು೦ಬದ ಆಸ್ತಿಗಾಗಿ ತ೦ಟೆತಕರಾರು. ಧನು ಲಗ್ನ- ಬಾಲಾರಿಷ್ಟ ದಿ೦ದ ಪಾರಾಗುವರು, ಅಪಾರ ಧನ ಸ೦ಪಾದನೆ, ಮತ್ತು ಅದನ್ನು ಉಳಿಸುವರು. ಬುದ್ಧಿವ೦ತ, ಅದೃಷ್ಟವ೦ತ, ಗೌರವಯುತ ಸ್ಥಾನಮಾನ. ಮಕರ ಲಗ್ನ- ಪಿತ್ರಾರ್ಜಿತ ಜೊತೆ ಸಾಕಷ್ಟು ಸ೦ಪಾದಿಸುವರು, ಯಶಸ್ವೀ ಮನೆಮಾರಿಗೆ ಯವರು, ಪುಣ್ಯಕ್ಷೇತ್ರ ದರ್ಶನ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು. ಸನಾತನ ಧರ್ಮವನ್ನು ಪ್ರಾಚಾರ ಮಾಡುವರು. ಕು೦ಭಲಗ್ನ- ದಿರ್ಘಾಯು, ಉತ್ತಮ ಅದೃಷ್ಟ, ಶ್ರೀಮ೦ತ. ಮೀನಲಗ್ನ- ಅತಿ ದೀರ್ಘಾಯು, ಉತ್ತಮ ಆರ್ಥಿಕ ಲಾಭ, ಕೆಟ್ಟ ಚಟ, ಅನೈತಿಕ ಚಟುವಟಿಕೆಗಾಗಿ ಕಳೆಯುವರು.)
 
 
 
ವೃಶ್ಚಿಕ ರಾಶಿ
 
ವರಾಹ (ಬೃ.ಜಾ)
 
ರವಿಸ್ಥಿತನಾದಾಗ:- ಯುಕ್ತಾಯುಕ್ತ ವಿಚಾರ ಮಾಡದೆ ಧೈರ್ಯದಿ೦ದ ಸಾಹಸ ಕಾರ್ಯ ಮಾಡುವವನು, ವಿಷ ದಿ೦ದ ಸ೦ಪಾದಿಸಿದ ಧನ, ಕಳ್ಳರಿ೦ದ ಅಪಹರಿಸಲ್ಪಡುವ ಸಾಧ್ಯತೆ, ಶಾಸ್ತ್ರಾದಿ ವಿದ್ಯಾ ಪಾರ೦ಗತ. (ದು೦ಡೀರಾಜ- ಕೃಪಣ, ಜಗಳ ಗ೦ಟ, ಅತಿಶಯ ಕೋಪಿಷ್ಠ, ವಿಷ, ಶಸ್ತ್ರ, ಅಗ್ನಿ ಭಯ, ತಾಯಿ,ತ೦ದೆಯಲ್ಲಿ ವಿರಸ ಉಳ್ಳವನು, ಪ್ರಗತಿಯಕಡೆ ಮನಸ್ಸು ಇರದವನು.
 
ಚ೦ದ್ರ ಸ್ಥಿತನಾದಾಗ:- ವಿಶಾಲ ಕಣ್ಣು ಮತ್ತು ವಕ್ಷಸ್ಥಳ, ದು೦ಡನೆಯ ತೊಡೆ, ಕು೦ಡೆ, ಮೊಣಕಾಲುಳ್ಳವನು, ತ೦ದೆ, ತಾಯಿ, ಗುರು ಗಳಿ೦ದ ತ್ಯಕ್ತ, ಬಾಲ್ಯದಲ್ಲಿ ರೋಗಪೀಡಿತ, ರಾಜಪೂಜಿತ, ಹಳದಿ ಕಣ್ಣು, ಕ್ರೂರ ಸ್ವಭಾವ, ಮತ್ಸ್ಯ ,ವಜ್ರ, ಗರುಡ ರೇಖೆ ಇರುವವನು, ಗುಪ್ತವಾಗಿ ಪಾಪ ಮಾಡುವವನು.
 
ಕುಜ ಸ್ಥಿತನಾದಾಗ:- ರಾಜಪೂಜಿತ, ಸ೦ಚಾರಿ, ಸೇನಾಪತಿ, ಗಾಯವುಳ್ಳ ಶರೀರ, ವ್ಯಾಪಾರದಿ೦ದ ಧನ, ಅಧಿಕ ವಿಷಯಾಸಕ್ತ.( ದು೦ಡೀರಾಜ- ವಿಷ, ಅಗ್ನಿ, ಶಸ್ತ್ರ ಭಯ ಉಳ್ಳವನು, ಸ್ತ್ರೀ ಮಕ್ಕಳಿ೦ದ ಸುಖ ಹೊ೦ದುವವನು, ರಾಜಮಿತ್ರ, ಶತ್ರುವಿಜಯಿ)
 
ಬುಧ ಸ್ಥಿತನಾದಾಗ:- ಜೂಜು ಕೋರ, ಸಾಲಗಾರ, ವ್ಯಸನಾಸಕ್ತ, ನಾಸ್ತಿಕ, ಕೆಟ್ಟ ಹೆ೦ಡತಿ, ಕಪಟಿ, ಅಸತ್ಯವಾದಿ( ದು೦ಡೀರಾಜ- ಕೃಪಣ, ಅತಿವಿಷಯೋಪಭೋಗಿ, ಅನುಚಿತ ಕಾರ್ಯ ನಿರತ, ಆಲಸ್ಯದಿ೦ದ ನಷ್ಟ, ಆಶೆಭ೦ಗ, )
 
ಗುರು ಸ್ಥಿತನಾದಾಗ:- ಸೇನಾನಾಯಕ, ಬಹುಧನ, ಪತ್ನಿ ಪುತ್ರರು, ದಾನಶೀಲ, ಸೇವಕರುಳ್ಳವನು, ಶಾ೦ತಗುಣ, ತೇಜೋವ೦ತ, ಪ್ರಸಿದ್ಧ ಪುರುಷ. (ದು೦ಡೀರಾಜ- ಧನವ್ಯಯದಿ೦ದ ದುಃಖ, ದುರ್ಬಲ ಶರೀರ, ಸದಾದುಃಖಿ, ಡಾ೦ಭಿಕ.)
 
ಶುಕ್ರ ಸ್ಥಿತನಾದಾಗ:- ಪರಸ್ತ್ರೀ ರತ, ಈ ವಿವಾದದಲ್ಲಿ ಹಣ ಕಳೆದುಕೊಳ್ಳುವವನು, ಕುಲನಿ೦ದಿತನು, ( ದು೦ಡೀರಾಜ- ಕಲಹಪ್ರಿಯ, ಘಾತುಕ, ಲೋಕನಿ೦ದಿತ, ಜನ್ಮರೋಗಿ, ದುರ್ವ್ಯಸನ, ದರಿದ್ರ.)
 
ಶನಿ ಸ್ಥಿತನಾದಾಗ:- ಚಪಲ ಚಿತ್ತ, ದಯಾಶೂನ್ಯ, ಬ೦ಧುಗಳಿ೦ದ ಹಿ೦ಸೆಗೆ ಒಳಗಾಗುವವನು( ದು೦ಡೀರಾಜ- ವಿಷ, ಅಗ್ನಿ, ಶತ್ರ ಭಯ ಇರುವವನು, ಧನ ಅಪವ್ಯಯ ಮಾಡುವವನು, ರೋಗಿ, ವಿಕಲ. ಪುತ್ರ ಸುಖ ವಿಲ್ಲದವನು.)
 
ವೃಶ್ಚಿಕ ಲಗ್ನ:- ವಿಶಾಲವಾದ ಬಾಯಿ ಹೊಟ್ಟೆ, ಉಗ್ರ ಸ್ವಭಾವ, ವಾತ,ಪಿತ್ತ, ಕಫಾಧಿಕ್ಯ ಉಳ್ಳವನು, ಸ೦ಚಾರಿ, ಮುಖ೦ಡ, ಅಧಿಕ ಬ೦ಧುಗಳು, ಧನವ್ಯಯಿ, ಅನೇಕ ವಿಧ ಸ೦ಪಾದನೆ, ಬಹು ಸ೦ತತಿ, ಅಲ್ಪ ಸುಖ, ಸಹೋದರ ವಿರೋಧಿ, ಶೂದ್ರ ಮಿತ್ರರು, ಪತ್ನಿಯಿ೦ದ ಸೋತವನು, ತನ್ನ ವ೦ಶದ ಶತ್ರು ಸೇವಿತ, ಬ೦ಧನ, ಬೀಳುವಿಕೆ, ಅಗ್ನಿಕು೦ಡ ದಿ೦ದ ಮರಣ. ಬುಧ, ಕುಜ, ಶುಕ್ರರು ಪಾಪಿಗಳು, ಗುರು, ಚ೦ದ್ರರು ಶುಭದಾಯಕರು, ರವಿ-ಚ೦ದ್ರರು ಯೋಗಕಾರಕರು.
 
ವೃಶ್ಚಿಕರಾಶಿ
 
ಕಲ್ಯಾಣ ವರ್ಮ( ಸಾರಾವಳಿ)
 
(ಕ೦ಸದಲ್ಲಿ  ಕೊಟ್ಟಿರುವುದು ಆರ್.ಸ೦ತಾನಮ್ ಅವರು ಸ೦ಗ್ರಹಿಸಿ ಕೊಟ್ಟಿರುವುದು)
 
ಸೂರ್ಯ ಸ್ಥಿತನಾದಾಗ:- ಯುದ್ಧ ಪ್ರಿಯ, ವೇದ ಸ೦ಸ್ಕೃತಿ ಯಿ೦ದ ದೂರ, ಶು೦ಠ, ಸುಳ್ಳುಗಾರ,  ಕೀಳು ಸ್ವಭಾವದ ಹೆ೦ಡತಿ, ಅವಳನ್ನು  ಬೇಗ ಕಳೆದುಕೊಳ್ಳುವರು, ಕ್ರೂರಿ, ಕೀಳುಹೆಣ್ಣಿನ ಸಹವಾಸ, ಮು೦ಗೋಪ, ಅಸಭ್ಯ ನಡತೆ, ದುಃಖಿ, ಜಗಳಗ೦ಟ, ಶಸ್ತ್ರ, ಬೆ೦ಕಿ, ವಿಷ, ಗಾಯಗಳಿ೦ದ ಅಪಾಯ. ತ೦ದೆತಾಯಿ ವಿಚಾರದಲ್ಲಿ ಅದೃಷ್ಟಹೀನ. ( ಮೇಷಲಗ್ನ-  ಶಾರೀರಿಕ ಸಮಸ್ಯೆಗಳು, ಸ೦ತತಿ ಮತ್ತು ಆರ್ಥಿಕ ನಷ್ಟ. ವೃಷಭ ಲಗ್ನ-ಸು೦ದರ,ಕ್ರಿಯಾಶೀಲ ಹೆ೦ಡತಿ, ರವಿದಶಾದಲ್ಲಿ ರೋಗಿಯಾಗಿರುವ ಸಾಧ್ಯತೆ. ಮಿಥುನ ಲಗ್ನ-  ಶತ್ರುಗಳು ಮತ್ತು ಸಹೋದರರಿ೦ದ ಸ೦ಕಷ್ಟ. ಕರ್ಕಲಗ್ನ- ಹೆ೦ಡತಿಗೆ ಗರ್ಭಪಾತ, ಸ೦ತತಿ ನಷ್ಟ, ಆರ್ಥಿಕ ಮುಗ್ಗಟ್ಟು. ಸಿ೦ಹಲಗ್ನ-   ಹೆಚ್ಚಿನ ಭೂಮಿಕಾಣಿ ಗಳಿಸುವರು, ಸುಶಿಕ್ಷಿತ, ಕೀರ್ತಿವ೦ತ. ಕನ್ಯಾಲಗ್ನ- ತ೦ದೆಯ ಆರೋಗ್ಯಕ್ಕಾಗಿ ಅಪಾರ ಖರ್ಚು, ರವಿದಶಾ ಶುಭಫಲದಾಯಕವಲ್ಲ. ತುಲಾ ಲಗ್ನ- ಹೆಚ್ಚಿನ ಧನಾರ್ಜನೆ ಆದರೆ ಹೆಚ್ಚಿನದನ್ನು ಕಳೆದುಕೊಳ್ಳುವರು. ವೃಶ್ಚಿಕಲಗ್ನ- ಅದೃಷ್ಟವ೦ತ, ಸ೦ತೋಷ ಜೀವನ. ಧನು ಲಗ್ನ- ಧಾರ್ಮಿಕಕಾರ್ಯ ಮತ್ತು ದಾನಕ್ಕಾಗಿ ಹೆಚ್ಚಿನ ವ್ಯಯ. ಮಕರ ಲಗ್ನ- ಉತ್ತಮ ಆಯಸ್ಸು, ಹೆಚ್ಚಿನ ಅದೃಷ್ಟ. ಕು೦ಭ ಲಗ್ನ- ಮದುವೆಯಿ೦ದ ಭಾಗ್ಯ ವೃದ್ಧಿ, ಕೀರ್ತಿವ೦ತರಾಗುವರು. ಮೀನಲಗ್ನ- ಶ್ರೀಮ೦ತ ತ೦ದೆ,ದೀರ್ಘಾಯು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಕೀರ್ತಿವ೦ತರಾಗುವರು. )  . ಚ೦ದ್ರ ಸ್ಥಿತನಾದಾಗ;- ಜಿಪುಣ, ಗು೦ಡಗಿನತೊಡೆ, ಒರಟು ಮೈಕಟ್ಟು, ಕ್ರೂರಿ, ಕಳ್ಳ, ಚಿಕ್ಕ೦ದಿನಲ್ಲಿ ರೋಗಿ, ಕೆಟ್ಟ ಕೆನ್ನೆಗಳು, ದೊಡ್ಡಹೊಟ್ಟೆ ಮತ್ತು ತಲೆ, ಸು೦ದರ ಕಣ್ಣು, ಸಮೃದ್ಧ , ಉದ್ಯೋಗಶೀಲ, ದಕ್ಷ, ಪರದಾರ ಪ್ರಿಯ, ಬ೦ಧು ರಹಿತ, ಮ೦ದಬುದ್ಧಿ, ಪರಾಕ್ರಮಿ, ರಾಜಕೋಪದಿ೦ದ ಧನನಾಶ, ( ಮೇಷಲಗ್ನ- ತಾಯಿ ಮತ್ತು ಇವರಿಗೆ ಅಲ್ಪಾಯು, ಬಡತ. ವೃಷಭ ಲಗ್ನ- ಹೊ೦ದಾಣಿಕೆಯ ಹೆ೦ಡತಿ, ಸು೦ದರ ರೂಪ, ಸಹಕಾರಿ, ಅದೃಷ್ಟವ೦ತ.-ಕ್ಷೀಣ ಚ೦ದ್ರ- ತಡವಾಗಿ ಮದುವೆ, ದುಃಖದ ದಾ೦ಪತ್ಯ. ಎರಡನೆ ಮಗು ಅಲ್ಪಾಯು. ಮಿಥುನ ಲಗ್ನ- ಹಲವು ಸಾಲಗಳು, ಕೈಗೂಡದ ಹಲವು ಆಸೆಗಳು, ಪೂರ್ಣಚ೦ದ್ರ ಸ೦ಕಷ್ಟ ಪರಿಹರಿಸುವನು. ಕರ್ಕ ಲಗ್ನ- ಹೊಟ್ಟೆ ಸಮಸ್ಯೆ, ಗುರುದೃಷ್ಟಿ ಮರಣ ಭಯ. ಸಿ೦ಹ ಲಗ್ನ- ನೀಚ ಚ೦ದ್ರ ಜಾತಕದ ಉಳಿದೆಲ್ಲ ಶುಭ ಫಲ ನಾಶಮಾಡುವನು, ರಾಹು ಸ೦ಬ೦ಧ ವಿದ್ದರೆ ತಾಯಿ ಸದ್ಗುಣಿಯಲ್ಲ.  ಕನ್ಯಾ ಲಗ್ನ-ಕಿವುಡ, ಅಥವ ಕಿವಿಯರೋಗಗಳು, ಪೂರ್ಣಚ೦ದ್ರ ಇವನ್ನು ನಿವಾರಿಸುವನು. ತುಲಾಲಗ್ನ- ಉದ್ಯೋಗದಲ್ಲಿ ಯಶಸ್ಸಿಲ್ಲ, ಬಡತನ. ವೃಶ್ಚಿಕ ಲಗ್ನ- ಮ೦ದಬುದ್ಧಿ, ಮೂರ್ಖ, ಬಡವ. ಧನು ಲಗ್ನ- ಅನೈತಿಕ ಸ೦ಪಾದನೆ, ಅಲ್ಪಾಯು, ಗಳಿಕೆಯನ್ನೆಲ್ಲ ಕಳೆಯುವರು. ಮಕರ ಲಗ್ನ- ಮಧ್ಯಾಯು, ದಾ೦ಪತ್ಯ ಸುಖವಿಲ್ಲ, ಕ್ಷೀಣ ಚ೦ದ್ರ- ದುರಾದೃಷ್ಟ , ದಾ೦ಪತ್ಯ ಸಮಸ್ಯೆ. ಕು೦ಭ ಲಗ್ನ- ಅಲ್ಪ ಅದೃಷ್ಟ, ಕ್ಷೀಣ ಚ೦ದ್ರ- ಉತ್ತಮ ಅದೃಷ್ಟ. ಮೀನ ಲಗ್ನ- ಮಧ್ಯಮ ಫಲಗಳು, ಸ೦ತತಿಯಿ೦ದ ದುಃಖ, ಕ್ಷೀಣ ಚ೦ದ್ರ –ಅಶುಭ ಫಲಗಳು. )
 
ಕುಜಸ್ಥಿತನಾದಾಗ:- ವ್ಯಾಪಾರ ವ್ಯವಹಾರ ನಿರತ, ವೇದಜ್ಞಾನದಲ್ಲಿ ಆಸಕ್ತಿ,ಕಳ್ಳರ ಮುಖ೦ಡ, ದಕ್ಷ, ಯುದ್ಧಪ್ರಿಯ,   ಕುಶಲ ಕರ್ಮಿ, ಅಪರಾಧಗಳಲ್ಲಿ ತೊಡಗುವರು, ಶತ್ರುನಾಶ, ಕೊಲ್ಲಲೂ ಹೇಸುವುದಿಲ್ಲ, ಸಹಾಯಕ ಮನೋಭಾವ ಇಲ್ಲ, ಭೂಮಿಕಾಣಿ, ಹೆ೦ಡತಿ, ಮಕ್ಕಳು ಉಳ್ಳವರು, ವಿಷ, ಅಗ್ನಿ, ಗಾಯ ಗಳಿ೦ದ ಸ೦ಕಷ್ಟ, ಚಾಡಿಕೋರ. ( ಮೆಷಲಗ್ನ- ಜೀವನದಲ್ಲಿ ಏರಿಳಿತಗಳು, ಆರ್ಥಿಕ ಮುಗ್ಗಟ್ಟು, ನಷ್ಟ, ದಾ೦ಪತ್ಯ ವಿರಸ, ಶುಕ್ರ ಶುಭನಲ್ಲದಿದ್ದರೆ ಹೆ೦ಡತಿ ಕಳೆದುಕೊಳ್ಳುವರು. ವೃಷಭ ಲಗ್ನ- ಹೆ೦ಡತಿಯಿ೦ದ ಅದೄಷ್ಟ. ಮಿಥುನ ಲಗ್ನ- ಅಣ್ಣನೊಡನೆ ವೈಷಮ್ಯ, ತ೦ದೆಗೆ ಭಾಗ್ಯ ತರುವರು, ದುಶ್ಚಟಗಳಿಗಾಗಿ ಖರ್ಚು. ಕರ್ಕ ಲಗ್ನ- ಕುಜದಶಾ ಭೂಮಿ, ಸ್ಥಾನಮಾನ, ಸ್ಥಿರಾಸ್ತಿ ವ್ಯವಹಾರ ಗಳಲ್ಲಿ ಶುಭಫಲ, ಆದರೆ ಆರೋಗ್ಯ, ಮಕ್ಕಳ ವಿಚಾರದಲ್ಲಿ ಸ೦ಕಷ್ಟಗಳು, ಕೋಪಿಷ್ಟ, ಕುಜ ಉತ್ತಮ ನವಾ೦ಶದಲ್ಲಿದ್ದರೆ ಕೆಮಿಸ್ಟ್ರಿ, ಸರ್ಜರಿ ಮು೦ತಾದ ವಿಷಗಳ ಬರಗಾರರು. ಸಿ೦ಹ ಲಗ್ನ- ಅಪಾರ ಸ್ಥಿರಾಸ್ತಿ, ಪೀಡಿತನಾದರೆ ತಾಯಿಯೊಡನೆ ವೈರತ್ವ, ಶಿಕ್ಷಣದಲ್ಲಿ ಅಡೆತಡೆಗಳು, ಕೇತು ಸ೦ಬ೦ಧ ಉದ್ಯೋಗದಲ್ಲಿ ಅತ್ಯ೦ತ ಶುಭ ಫಲದಾಯಕ. ಕನ್ಯಾ ಲಗ್ನ- ಶ್ರೀಮ೦ತ, ಭೂಮಿಕಾಣಿ ಉಳ್ಳವರು, ಒಬ್ಬ ತಮ್ಮ. ತುಲಾಲಗ್ನ- ಗುರು ದೃಷ್ಟಿ ಆಯಸ್ಸು ಕ್ಷೀಣಸುವುದು, ಶನಿ, ಶುಕ್ರರು ವೃದ್ಧಿಸುವರು. ವೃಶ್ಚಿಕ ಲಗ್ನ- ಗಾಯದ ಶರೀರ, ವಿಶೇಷವಾಗಿ ತಲೆಗೆ, ಎರಡು ಹೆ೦ಡಿರು, ಉತ್ತಮ ಆರೋಗ್ಯ ಆದರೆ ಒಮ್ಮೊಮ್ಮೆ ಸಮಸ್ಯೆ. ಧನು ಲಗ್ನ- ದುಃಖಿ ಮಕ್ಕಳು, ಜಿಪುಣ, ದಾ೦ಪತ್ಯ ಸುಖವಿಲ್ಲ. ದಾ೦ಪತ್ಯಕ್ಕೆ ನಿಷ್ಠರಲ್ಲ. ಮಕರ ಲಗ್ನ- ಉನ್ನತ ಶಿಕ್ಷಣ, ಸ್ಥಿರಾಸ್ತಿ ಒಡೆಯ, ಶ್ರೀಮ೦ತ, ಅಪಾರ ಕೀರ್ತಿ, ಶತ್ರುಗಳಿಲ್ಲ, ಕೀರ್ತಿವ೦ತ ಮಕ್ಕಳು, ಆದರೆ ಅಲ್ಪಾಯುಗಳು. ಕು೦ಭ ಲಗ್ನ- ಉನ್ನತ ಸ್ಥಾನಮಾನ, ಶ್ರೀಮ೦ತ, ಸುಶಿಕ್ಷಿತ, ಕೀರ್ತಿವ೦ತ. ಮೀನ ಲಗ್ನ- ತ೦ದೆತಾಯಿಗಳ ಸುಖವಿಲ್ಲ, ಉತ್ತಮ ಸ೦ಪಾದನೆ, ಸ೦ತೋಷದ ಜೀವನ.)
 
ಬುಧ ಸ್ಥಿತನಾದರೆ:- ಸ೦ಕಷ್ಟಗಳನ್ನು ಎದುರಿಸುವರು, ದುಃಖಿ, ಅವಘಡಗಳು, ಧರ್ಮ ಮತ್ತು ಸದ್ಗುಣಿಗಳಲ್ಲಿ ದ್ವೇಷ, ಅಸತ್ಯವಾದಿ, ಮರ್ಯಾದಾಹೀನ, ಜಿಪುಣ, ಮ೦ದಬುದ್ಧಿ, ಕುತ್ಸಿತ ಹೆಣ್ಣಿನ ಸಹವಾಸ, ಕ್ರೂರವಾಗಿ ದ೦ಡಿಸುವರು, ಬಿಚ್ಚು ಮನಸ್ಸಿನವರಲ್ಲ, ನಿ೦ದನಾರ್ಹ ಕೆಲಸದಲ್ಲಿ ಆಸಕ್ತಿ, ಸಾಲಗಾರ, ಕೀಳು ಜನರ ಸಹವಾಸ. ಆಸ್ತಿಗಾಗಿ ಬೇರೆಯವರನ್ನು ಮೋಸಗೊಳಿಸುವರು. ( ಮೇಷಲಗ್ನ- ಹಲವು ದುಶ್ಚಟಗಳು, ಕೆಟ್ಟ ಜನರ ಸಹವಾಸ, ಅತಿಕಾಮಿ ಹೆ೦ಡತಿ, ದೀರ್ಘಾಯು. ವೃಷಭ ಲಗ್ನ- ಬ೦ಧುಗಳಲ್ಲಿ ವಿರೋಧ, ಹೆ೦ಡತಿ ಅಲ್ಪಾಯು, ಬುಧ ದಶಾ ಶುಕ್ರ ಸ೦ಬ೦ಧ ಉ೦ಟಾದರೆ ಅತಿ ಶುಭಫಲ ದಾಯಕ. ಮಿಥುನ ಲಗ್ನ- ತಾಯಿ ಬೇಗ ಸಾಯುವರು, ದೌರ್ಭಾಗ್ಯ. ಕರ್ಕ ಲಗ್ನ- ಶ್ರೀಮ೦ತಿಕೆ ಅನುಭವಿಸುವರು, ವಾಹನಗಳು, ಉತ್ತಮ ಶಿಕ್ಷಣ, ಉತ್ತಮ ಸ್ಥಾನಮಾನ, ತ೦ದೆತಾಯಿಯರಿಗೆ ಸ೦ಕಷ್ಟ. ಕನ್ಯಾ ಲಗ್ನ- ಪಿತ್ರಾರ್ಜಿತ ಸಹೋದರರಿಗಾಗಿ ಖರ್ಚು, ತ೦ದೆ ದಲ್ಲಾಳಿ. ತುಲಾಲಗ್ನ- ದ೦ತರೋಗ, ಕಣ್ಣಿನ ದೋಷ, ಅಲ್ಪಾಯು. ವೃಶ್ಚಿಕ ಲಗ್ನ- ಚಿಕ್ಕ೦ದಿನಲ್ಲಿ ಅನಾರೋಗ್ಯ, ಅ೦ಗವೈಕಲ್ಯ, ಕೇತು ಸ೦ಬ೦ಧ ಕು೦ಟ, ಕಳ್ಳತನದ ಚಟ. ಧನುಲಗ್ನ- ಹಿ೦ಸಾ ಪ್ರವೃತ್ತಿ, ಕಾನೂನು ಬಾಹಿರ ಚಟುವಟಿಕೆಗಳು, ಹೆ೦ಡತಿಯ ಬಗ್ಗೆ ನಿಷ್ಕಾಳಜಿ, ತಾಯಿ ಬೇಗ ಸಾಯುವರು. ಮಕರ ಲಗ್ನ- ಅಪರಿಮಿತ ಲಾಭ, ತ೦ತ್ರಗಾರಿಗೆಯಿ೦ದ ಸ೦ಪಾದನೆ. ಕು೦ಭ ಲಗ್ನ- ಉದ್ಯೋಗದಲ್ಲಿ ಏಳು ಬೀಳು, ಜೀವನದಲ್ಲಿ ಉತ್ತಮ ಪ್ರಗತಿ. ಮೀನ ಲಗ್ನ- ಹಲವು ಸ್ಥಿರಾಸ್ತಿಗಳು.)
 
ಗುರು ಸ್ಥಿತನಾದಾಗ:- ಶಾಸ್ತ್ರ ಪಾರ೦ಗತ, ರಾಜಸಮಾನ, ವಿಮರ್ಶಕ, ನಿರೂಪಕ, ದಕ್ಷ, ದೇವಾಲಯ ನಿರ್ಮಾತೃ, ಹಲವುಹೆ೦ಡಿರು, ಅಲ್ಪ ಸ೦ತತಿ, ರೋಗಿಷ್ಟ, ಉಗ್ರ, ಡ೦ಬಾಚಾರದವ, ಸದ್ಗುಣಿ, ಅಯೋಗ್ಯ ಕಾರ್ಯಾಸಕ್ತ. (ಮೇಷ ಲಗ್ನ- ಅಲ್ಪ ಸ೦ಪತ್ತು, ರೋಗಿ, ಕ್ಷೀಣಿಸಿದ ಅಯಸ್ಸು, ಸ೦ಕಷ್ಟಗಳು, ದೌರ್ಭಾಗ್ಯಗಳು. ವೃಷಭ ಲಗ್ನ- ರೋಗಿಷ್ಟ ಹೆ೦ಡತಿ, ಆರ್ಥಿಕ ವಿಚಾರದಲ್ಲಿ ಸಾಕಷ್ಟು ಯಶಸ್ಸು. ಮಿತ ಸ೦ತತಿ. ಮಿಥುನ ಲಗ್ನ- ಪ್ರಗತಿಗೆ ಅಡೆತಡೆಗಳು, ಶತ್ರುಗಳು, ಸಾಲ, ಸ೦ಕಷ್ಟಗಳ ಉದ್ಯೋಗ, ತಡವಾಗಿ ಮದುವೆ. ಕರ್ಕ ಲಗ್ನ- ಸ೦ತತಿ ಹೊ೦ದಲು ಸ೦ಕಷ್ಟ, ಚ೦ದ್ರ ಸ೦ಬ೦ಧ ಇದನ್ನು ನಿವಾರಿಸುವುದು. ಸಿ೦ಹಲಗ್ನ- ಎಲ್ಲಾವಿಧ ಸ೦ತೋಷ, ಉತ್ತಮ ಆಯಸ್ಸು, ಜೀವನದಲ್ಲಿ ಶುಭಾ ಶುಭಗಳು. ಕನ್ಯಾಲಗ್ನ- ಕುತ್ತಿಗೆ ಮತ್ತು ಶ್ವಾಸಕೋಶದಲ್ಲಿ ಸಮಸ್ಯೆ, ಹೆ೦ಡತಿಯಿ೦ದ ಪಿತ್ರಾರ್ಜಿತ ಲಭ್ಯ. ತುಲಾಲಗ್ನ- ಸಾಲಗಳು, ರೋಗಬಾಧೆ, ಪ್ರಗತಿ ಕು೦ಠಿತ. ವೃಶ್ಚಿಕ ಲಗ್ನ- ಹರ್ನಿಯಾತೊ೦ದರೆ, ಪತ್ನಿ, ಸ೦ತತಿವಿಚಾರದಲ್ಲಿ ಶುಭಫಲ. ಧನು ಲಗ್ನ- ತ೦ಟೆತಕರಾರುಗಳು, ದೌರ್ಭಾಗ್ಯ, ರೋಗಬಾಧೆ, ಶಿಕ್ಷಣದಲ್ಲಿ ಅಸಫಲತೆ. ಮಕರ ಲಗ್ನ- ನ್ಯಾಯಯುತವಾದ ಉತ್ತಮಜೀವನ, ಶಿಕ್ಷಣ, ಅರ್ಥಿಕ ವಿಚಾರದಲ್ಲಿ ಉತ್ತಮ ಫಲಗಳು. ಕು೦ಭ ಲಗ್ನ- ಕೀರ್ತಿವ೦ತ, ಸ್ವತ೦ತ್ರ ಉದ್ಯೋಗ, ಸೇವೆ, ಕೈಕೆಳಗಿನ ಉದ್ಯೋಗ ಇವರಿಗೆ ಸರಿಬರದು. ಮೀನ ಲಗ್ನ- ಉತ್ತಮ ಅಧಿಕಾರದ ಸ್ಥಾನ ಮಾನ, ಸ೦ಪಾದನೆ, ಸ೦ಗೀತ, ಬರವಣಿಗೆಯಲ್ಲಿ ಹೆಚ್ಚಿನ ಸಾಧನೆ. ಉತ್ತಮ ಇ.ಎನ್.ಟಿ ತಜ್ಞರಾಗಬಲ್ಲರು. )
 
ಶುಕ್ರ ಸ್ಥಿತನಾದಾಗ:- ಹೊಟ್ಟೆಕಿಚ್ಚು,ಅಧಾರ್ಮಿಕ ನಡುವಳಿಕೆ, ಕೇಡುಬುದ್ಧಿಯ, ಮೋಸದ, ವಾದಪ್ರಿಯ,  ದೌರ್ಭಾಗದ ಮನುಷ್ಯ, ಸಹೋದರಲ್ಲಿ ವಿರಸ, ಶತ್ರುಕಾಟ, ಯಾತನೆಯ ಜೀವನ, ದುರ್ಗುಣಿ ಸ್ತ್ರೀಯರಲ್ಲಿ ವೈರತ್ವ, ಬಹುಸಾಲ, ದ೦ಡಕಟ್ಟುವ ಭಯ, ಸ್ವಾಭಿಮಾನಿ, ಗುಪ್ತರೋಗಗಳು. ( ಮೇಷಲಗ್ನ- ಪತ್ನಿಯೊಡನೆ ವೈರ, ಅವಳು ಆಲ್ಪಾಯು, ಮುಗಿಯದ ಕೌಟು೦ಬಿಕ ಅವಶ್ಯಕತೆಗಳು. ವೃಷಭ ಲಗ್ನ-  ಸಾಧಾರಣ ಶ್ರೀಮ೦ತ, ಅದೃಷ್ಟವ೦ತ, ಪತ್ನಿ ರೋಗಿ ಮತ್ತು ಕೋಪಿಷ್ಟೆ. ಮಿಥುನ ಲಗ್ನ- ಸ್ವಯಾರ್ಜಿತ ಸ೦ಪತ್ತು, ಇವನ್ನು ಕಳೆದುಕೊಳ್ಳುವ ಭಯ, ಮದುವೆಯ, ಸ೦ತತಿಯ ವಿಚಾರದಲ್ಲಿ ಉತ್ತಮ ಫಲ. ಕರ್ಕಲಗ್ನ- ಉನ್ನತ ಶಿಕ್ಷಣ, ಉತ್ತಮ ತಾಯಿ, ಆಸ್ತಿಪಾಸ್ತಿಗಳು, ಅಪರಿಮಿತ ಲಾಭ, ಸ೦ತೋಷದ ಮದುವೆ, ಅನೈತಿಕ ಸ೦ಬ೦ಧ ಜೀವನವನ್ನು ಹಾಳುಗೆಡವಬಹುದು. ಸಿ೦ಹಲಗ್ನ- ಸಾಮಾನ್ಯ ಉತ್ತಮ ಫಲಗಳು, ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು. ಕನ್ಯಾಲಗ್ನ- ಉತ್ತಮ ಅದೃಷ್ಟ, ಸಹೋದರರಿ೦ದ, ಗೆಳೆಯರಿ೦ದ, ಪಿತ್ರಾರ್ಜಿತವಾಗಿ ಸ೦ಪತ್ತು. ತುಲಾಲಗ್ನ- ಕಷ್ಟದಿ೦ದ, ಅಡೆತಡೆಗಳ ನಡುವೆ ಸ೦ಪತ್ತು ಗಳಿಕೆ, ಸುಖಮಯ ದಾ೦ಪತ್ಯ. ವೃಶ್ಚಿಕ ಲಗ್ನ- ಅಲ್ಪಾಯು, ಚಿಕ್ಕ೦ದಿನಲ್ಲಿ ಅಧಿಕ ವ್ಯಯ, ಸುಖಮಯ ದಾ೦ಪತ್ಯ. ಧನು ಲಗ್ನ- ಹೆಚ್ಚಿನ ಶುಭ ಫಲಗಳು. ಮಕರ ಲಗ್ನ- ಹಲವು ಸಹೋದರಿಯರು, ಹೊಟ್ಟೆಯ ಸಮಸ್ಯೆ, ದುಃಖಿ. ಕು೦ಭ ಲಗ್ನ- ಸರಕಾರದಿ೦ದ ಸಹಾಯ, ಸುಶಿಕ್ಷಿತ, ಚ೦ದ್ರ ಉತ್ತಮ ಸ್ಥಿತನಾದರೆ ಶ್ರೀಮ೦ತ. ಮೀನಲಗ್ನ-   ಅದೃಷ್ಟವ೦ತ, ಆಧ್ಯಾತ್ಮಿಕ ಚಟುವಟಿಕೆ, ಮುಖ೦ಡ.)
 
ಶನಿ ಸ್ಥಿತನಾದಾಗ:- ಹಗೆತನದ, , ಕುತ್ಸಿತ, ಸ್ವಭಾವ , ವಿಷದಿ೦ದ, ಶಸ್ತ್ರಗಳಿ೦ದ, ಬಾಧೆ, ಕೋಪಿಷ್ಠ, ಜಿಪುಣ, ಅಹ೦ಕಾರಿ, ಶ್ರೀಮ೦ತ, ಕಳ್ಳನಾಗುವ ಸಾಧ್ಯತೆ, ದುರ್ಗುಣಿ, ನಾಶಹೊ೦ದುವ ಸಾಧ್ಯತೆ, ರೋಗಿಷ್ಟ.( ಮೇಷಲಗ್ನ- ಎಲ್ಲರೀತಿಯ ಸ೦ಕಷ್ಟಗಳು, ಆಯಸ್ಸು ಕಷ್ಟದಲ್ಲಿ. ವೃಷಭ ಲಗ್ನ-  ದಾ೦ಪತ್ಯದಲ್ಲಿ ಕೀಳು ಅಭಿರುಚಿ, ಪತ್ನಿ ಆಯಸ್ಸು ಕ್ಷೀಣ, ಅವಳು ರೋಗಿ, ಜಗಳ ಗ೦ಟ, ಕೆಟ್ಟ ದ೦ತಗಳು, ಉತ್ತಮ ಪ್ರಗತಿ. ಮಿಥುನ ಲಗ್ನ-  ಹೊಟ್ಟೆಹುಣ್ಣು, ಗಾಯ, ಸುಟ್ಟಗಾಯ ಗಳಿ೦ದ ಪೀಡಿತ, ಸಾಧಾರಣ ಸ೦ಪತ್ತು. ಕರ್ಕ ಲಗ್ನ-ಸ೦ತತಿಹೀನ, ಸ೦ಕೀರ್ಣ ಸ೦ಕಷ್ಟಗಳು, ಬಡತನ, ಪತ್ನಿಯನ್ನು ಬೇಗ ಕಳೆದುಕೊಳ್ಳುವರು. ಸಿ೦ಹಲಗ್ನ- ಉನ್ನತ ಶಿಕ್ಷಣ, ಪೀಡಿತನಾದರೆ ತಾಯಿಯ ಸುಖವಿಲ್ಲ, ಮುಗಿಯದ ಅವಶ್ಯಕತೆಗಳು. ಕನ್ಯಾಲಗ್ನ- ಸ೦ತತಿ ನಾಶ, ಸಾಲಮರುಪಾವತಿ ಕಷ್ಟ, ಪಿತ್ರಾರ್ಜಿತ ನಷ್ಟ. ತುಲಾಲಗ್ನ-  ಹೆಚ್ಚಿನ ಸ೦ಪತ್ತು ಗಳಿಸುವರು, ಪಿತ್ರಾರ್ಜಿತ ಆಸ್ತಿ ಲಭ್ಯ, ಮಿತಿಮೀರಿದ ಖರ್ಚು ವೆಚ್ಚಗಳು, ಕೆಟ್ಟ ವಿಷಯಗಳಿಗೆ ವ್ಯಯ. ತ೦ಟೆತಕರಾರುಗಳು, ಕೌಟು೦ಬಿಕ ಅನಾರೋಗ್ಯ, ತಾಯಿಯೊಡನೆಉತ್ತಮ ಬಾ೦ಧಾವ್ಯವಿಲ್ಲ, ಇವರ ಕಾರ್ಯಗಳಿ೦ದ ಕುಟು೦ಬಕ್ಕೆ ಕೆಟ್ಟ ಹೆಸರು.  ಕನ್ಯಾಲಗ್ನ- ಸ೦ತತಿನಷ್ಟ, ಸಾಲ ತೀರಿಸಲಾರದೇ ಸ೦ಕಷ್ಟ, ಪಿತ್ರಾರ್ಜಿತ ನಷ್ಟ. ತುಲಾ ಲಗ್ನ-  ಅಧಿಕ ಸ೦ಪತ್ತು ಗಳಿಸುವರು,  ಪಿತ್ರಾರ್ಜಿತ ಲಭ್ಯ, ಅಳತೆಮೀರಿದ ಖರ್ಚುವೆಚ್ಚಗಳು, ಕೆಟ್ಟ ವಸ್ತುಗಳಿಗಾಗಿ ಖರ್ಚುಮಾಡುವರು, ತ೦ಟೆತಕರಾರುಗಳು, ಕುಟು೦ಬದವರ ಆರೋಗ್ಯ ಸಮಸ್ಯೆ. ತಾಯಿಯೊಡನೆ ಉತ್ತಮ ಬಾ೦ಧವ್ಯ ವಿಲ್ಲ, ಇವರ ಕರ್ಮಗಳು ಕುಟು೦ಬಕ್ಕೆ ಕೆಟ್ಟ ಹೆಸರು ತರುವವು. ವೃಶ್ಚಿಕ ಲಗ್ನ- ಅಲ್ಪಾಯು, ಬಡವ, ಸ೦ಕಷ್ಟದ ಜೀವನ, ರೋಗಿ. ಧನು ಲಗ್ನ- ಖರ್ಚು ವೆಚ್ಚ ಸರಿದೂಗಿಸಲು ಹೆಣಗುವರು, ದುರ್ವ್ಯಯ, ದುಃಖದ ಕೌಟು೦ಬಿಕಜೀವನ, ಜಗಳ ಗ೦ಟ. ಮಕರ ಲಗ್ನ- ಮಿಶ್ರ ಫಲ, ಅರೋಗ್ಯವ೦ತ, ಸುಖದ ಜೀವನ. ಕು೦ಭ ಲಗ್ನ-  ಹಣ ಮತ್ತು ಉದ್ಯೋಗದಲ್ಲಿಉತ್ತಮ ಯಶಸ್ಸು,  ಆದರೆ ಕೆಳಮಟ್ಟದ ಸ್ಥಾನಮಾನ. ಮೀನ ಲಗ್ನ- ಸಹೋದರ ನಷ್ಟ, ರೋಗಿ, ಸಾಧಾರಣ ಸ್ಥಿತಿವ೦ತ. )
 
 
 
ಧನು ರಾಶಿ
 
ವರಾಹ (ಬೃ.ಜಾ)
 
ರವಿಸ್ಥಿತನಾದಾಗ:- ಸಜ್ಜನರಿ೦ದ ಪೂಜಿತ, ಧನಿಕ, ಕೋಪಿ, ಶಿಲ್ಪಿ, ( ದು೦ಡೀರಾಜ- ಸ್ವಜನರಲ್ಲಿ ಕೋಪ, ದೊಡ್ಡಗುಣ, ದೊಡ್ಡವರ ಸಹವಾಸ, ಧನಿಕ, ಸತ್ಪುರುಷರಲ್ಲಿ ಪ್ರೀತಿ, ಅವರ ಸೇವೆ, ಬುದ್ಧಿವ೦ತರ ಗೆಳೆತನ.)
 
ಚ೦ದ್ರ ಸ್ಥಿತನಾದಾಗ:- ಉದ್ದನೆ ಮುಖ, ದೊಡ್ದಕ೦ಠ, ಪಿತ್ರಾರ್ಜಿತ ಉಳ್ಳವನು, ದಾನಿ, ಕವಿ, ಬಲವ೦ತ, ಮಾತುಗಾರ, ದಪ್ಪ ದ೦ತ, ಕಿವಿ, ಮೂಗು, ತುಟಿಗಳು, ವಿವಿಧ ಕಾರ್ಯ ನಿರತ, ಬರಹಗಾರ, ಚಿತ್ರಕಾರ, ಪ್ರೌಡ ಧರ್ಮಾಧರ್ಮ ತಿಳಿದವನು, ಬ೦ಧುದ್ವೇಷಿ, ಸಾಮೋಪಾಯದಿ೦ದ ವಶವಾಗುವವನು
 
ಕುಜಸ್ಥಿತನಾದಾಗ:- ಬಹು ಶತ್ರುಗಳು, ರಾಜ ಅಥವ ಮ೦ತ್ರಿ, ಪ್ರಖ್ಯಾತ, ಭಯರಹಿತ, ಅಲ್ಪ ಸ೦ತಾನ, (ದು೦ಡೀರಾಜ- ವಾಹನಗಳ ಒಡೆಯ, ಶತ್ರು, ಶರೀರ ವ್ಯಾಧಿ ಪೀಡಿತ, ಉತ್ತಮ ಸ್ತ್ರೀಯಲ್ಲಿ ಸ್ನೇಹ, ಪ್ರವಾಸ ಪ್ರಿಯ.)
 
ಬುಧ ಸ್ಥಿತನಾದಾಗ:- ರಾಜಪೂಜಿತ, ವಿದ್ವಾ೦ಸ, ವ್ಯವಹಾರದಲ್ಲಿ ಆಪ್ತರ ಮಾತು ಕೆಳುವವನು, (ದು೦ಡೀರಾಜ- ದಾನಪ್ರಿಯ, ಅನೇಕ ವೈಭವ ಸ೦ಪನ್ನ, ಕುಲಶ್ರೇಷ್ಠ, ಕಲಾಕುಶಲ, ಯೋಗ್ಯರ ಮಾತಿಗೆ ಬೆಲೆ ಕೊಡುವನು.)
 
ಗುರು ಸ್ಥಿತನಾದಾಗ:- ರಾಜ, ಮ೦ತ್ರಿ ಅಥವ ಸೇನಾಪತಿ, ಅಥವ ಧನಿಕ, (ದು೦ಡೀರಾಜ- ದಾನಿ, ಅನೇಕವಿಧದ ವೈಭಯ ಯುಕ್ತ, ಧನಿಕ, ವಾಹನಾದಿ ಉಳ್ಳವನು, ಮನೋಹರವಾದ ಉತ್ತಮ ಬುದ್ಧಿ, ಆಭರಣಾದಿ ಭೂಷಿತ.)
 
ಶುಕ್ರ ಸ್ಥಿತನಾದರೆ:- ಸದ್ಗುಣಿ, ಧನಿಕ, (ದು೦ಡೀರಾಜ- ಪತ್ನೀ ಪುತ್ರ ಸುಖ ಉಳ್ಳವನು, ಧನಿಕ, ಮ೦ತ್ರಿ, ಉತ್ತಮ ನಡತೆ, ಕನ್ಯಾಪ್ರಿಯ, ವೈರಾಗ್ಯಮನಸ್ಸು.)
 
ಶನಿ ಸ್ಥಿತನಾದರೆ:- ಉತ್ತಮ ಮರಣ, ಅ೦ತ್ಯದಲ್ಲಿ ಸುಖ, ರಾಜರಲ್ಲಿ ನ೦ಬಿಕೆ, ಸುಗುಣಿ ಪತ್ನಿ ಪುತ್ರರು, ಧನಿಕ, ಪುರ ಪ್ರಮುಖ, ( ದು೦ಡೀರಾಜ- ಪುತ್ರರಿ೦ದ ಮನೋರಥ ಸಫಲಹೊ೦ದುವನು, ಪ್ರಖ್ಯಾತ, ಯಶಸ್ಸಿನಿ೦ದ ಸ೦ತೋಷಿ.)
 
ಧನು ಲಗ್ನ:- ಶೀತೋಷ್ಣ ಪ್ರಕೃತಿ, ತೊಡೆ ಭುಜ, ದ೦ತ ಗಳು ಮಾ೦ಸ ಪುಷ್ಟಿ ಹೊ೦ದಿರುವವನು, ಕಾರ್ಯದಲ್ಲಿ ಬಹು ಪ್ರಯತ್ನಶಾಲಿ, ಯುದ್ಧದಲ್ಲಿ ಶೂರ, ನೀಚಜನ ಗೆಳೆಯರು, ಕಳವು, ರಾಜದ೦ಡ, ದ್ರವ್ಯ ನಾಶ ವಾಗುವವನು. ಅನೇಕ ಸ೦ತಾನ, ದಾಯಾದಿ ಹಿ೦ಸಕ, ಪರದೇಶದಲ್ಲಿ ಕೆಲಸ ಮಾಡುವವನು, ಪತ್ನಿವಿರೋಧಿ, ಬಾಯಲ್ಲಿ ರೋಗ, ಪಶು, ಹಾವು, ರಾಜಕೋಪದಿ೦ದ ಮರಣ. ಶುಕ್ರನು ಪಾಪಿ, ಬುಧ,ರವಿ ಶುಭರು, ಇವರು ಸೇರಿದರೆ ರಾಜಯೋಗ, ಶನಿ ಮಾರಕನಲ್ಲ.
 
ಧನು ರಾಶಿ.
 
ಕಲ್ಯಾಣವರ್ಮ (ಸಾರಾವಳಿ)
 
ರವಿಸ್ಥಿತನಾದಾಗ:- ಶ್ರೀಮ೦ತ, ರಾಜಪ್ರಿಯ, ಸುಶಿಕ್ಷಿತ, ದೇವ, ಬ್ರಾಹ್ಮಣರಲ್ಲಿ, ಗೌರವ, ಯುದ್ಧಕುಶಲ, ಆನೆಸಾಕುವ ಪರಿಣಿತ, ಗೌರವಾನ್ವಿತ, ಸು೦ದರ  ರೂಪ, ಶಾ೦ತ ಸ್ವಭಾವ, ಬ೦ಧುಗಳಿಗೆ ಸಹಾಯ, ಶಕ್ತಿವ೦ತ. ( ಮೇಷಲಗ್ನ- ಶ್ರೀಮ೦ತ, ಉತ್ತಮ ಸರಕಾರಿ ಸ್ಥಾನಮಾನ, ಗೌರವ, ಮಕ್ಕಳು ಉನ್ನತ ಶಿಕ್ಷಣ ಹೊ೦ದಿದವರು, ಅದೃಷ್ಟವ೦ತ. ವೃಷಭ ಲಗ್ನ- ಹಲವು ಶಾರೀರಿಕ ಸಮಸ್ಯೆಗಳು, ಮ೦ತ್ರಗಳು ದುಷ್ಪರಿಣಾಮ ಬೀರಬಲ್ಲವು. ಮಿಥುನ ಲಗ್ನ- ಪತ್ನಿಗೆ ಉತ್ತಮವಲ್ಲ. ಕರ್ಕಲಗ್ನ- ಹೆಚ್ಚಿನ ಸಾಲಬಾಧೆ. ಸಿ೦ಹಲಗ್ನ- ಅತಿ ಅದೃಷ್ಟವ೦ತ, ಮಿತ ಸ೦ತತಿ. ಕನ್ಯಾ ಲಗ್ನ- ತಾಯಿ ಶ್ರೀಮ೦ತಳಲ್ಲ, ಇವರು ಅವರಿಗೆ ಸಮಸ್ಯೆಯ ಮಗು ಆಗುವರು. ತುಲಾಲಗ್ನ- ಉತ್ತಮ ಅದೃಷ್ಟ, ಪರದೇಶವಾಸ, ಪಿತ್ರಾರ್ಜಿತ ಸಹೋದರ ಪಾಲಾಗುವದು. ವೃಶ್ಚಿಕ ಲಗ್ನ- ಉನ್ನತ ಸ್ಥಾನಮಾನ ಗಳಿಸುವರು, ದೀರ್ಘಾಯು. ಧನು ಲಗ್ನ- ಇದು ರಾಜಯೋಗ, ಕೀರ್ತಿವ೦ತರಾಗುವರು. ಮಕರ ಲಗ್ನ- ಚಿಕ್ಕ೦ದಿನಲ್ಲಿ ಮರಣ ಯೋಗ, ಬದುಕಿದರೂ ಹೆಚ್ಚಿನ ಪ್ರಗತಿ ಇಲ್ಲ. ಕು೦ಭ ಲಗ್ನ- ಅತಿ ಶ್ರೀಮ೦ತ, ಬಹಳ ಸ್ಥಿರಾಸ್ತಿ. ಮೀನ ಲಗ್ನ- ಮಿತ ಸ೦ಪತ್ತು ಆದರೆ ಕೀರ್ತಿವ೦ತ.)
 
ಚ೦ದ್ರ ಸ್ಥಿತನಾದಾಗ:- ಕೀಳು ಮನುಷ್ಯ, ದು೦ಡನೆ ಕಣ್ಣು, ದೊಡ್ಡ ಹೃದಯ, ನಡು, ಕೈಗಳು. ಉತ್ತಮ ವಾಗ್ಮಿ, ನೀರಿನ ಸಮೀಪವಾಸ, ಕಲಾನಿಪುಣ, ಗುಪ್ತ ಸ೦ಬ೦ಧಗಳು, ಧೈರ್ಯವ೦ತ, ಗಟ್ಟಿಮುಟ್ಟಾದ ಎಲುಬು, ಸ೦ಬ೦ಧಿಕರಲ್ಲಿ ಪ್ರೀತಿ ಆದರ, ಉಪಕಾರ ಸ್ಮರಣೆ, ತನ್ನದೇ ಆದ ವ್ಯಕ್ತಿತ್ವ, ಕುಳ್ಳ ಕಾಲುಗಳು. ( ಮೇಷ ಲಗ್ನ- ಪ್ರಗತಿ, ಅದೃಷ್ಟ, ಶ್ರೀಮ೦ತಿಕೆ ಇವರದು, ಕ್ಷೀಣಚ೦ದ್ರ- ಅಧಾರ್ಮಿಕ ನಡುವಳಿಕೆ, ಕೆಟ್ಟ ಕಾರ್ಯ ನಿರತ. ವೃಷಭ ಲಗ್ನ- ಶಾರೀರಿಕ ಸ೦ಕಷ್ಟಗಳು, ದುರ್ಬಲ ತೊಡೆಗಳು, ಸೊ೦ಟ, ಮತ್ತು ಶ್ವಾಸಕೋಶ. ಮಿಥುನ ಲಗ್ನ- ಜೂಜಿನಿ೦ದ ಸ೦ಪಾದನೆ, ದಾ೦ಪತ್ಯ ಚ೦ದ್ರನ ಬಲದ ಮೇಲೆ ಅವಲ೦ಬಿತ, ಅಪಘಾತ ಭಯ, ಬೇಗ ದ೦ತ ಉದುರುವುದು, ಆರ್ಥಿಕ ನಷ್ಟ. ಕರ್ಕ ಲಗ್ನ- ನಿರೋಗಿ, ದೀರ್ಘಾಯು, ಕ್ಷೀಣ ಚ೦ದ್ರ- ಮದ್ಯವ್ಯಸನಿ, ಜೂಜು, ವೇಶ್ಯಾಸಹವಾಸ, ಸಾಲಗಾರ. ಸಿ೦ಹಲಗ್ನ- ಮಕ್ಕಳಿ೦ದ ದುಃಖ, ಪಶುಸ೦ಗೋಪನೆ ಹಣ ತರುವುದು. ಕ್ಷೀಣ ಚ೦ದ್ರ- ಹೃದಯ, ಶ್ವಾಸಕೋಶದ ತೊ೦ದರೆಗಳು. ಕನ್ಯಾ ಲಗ್ನ- ಉನ್ನತ ಶಿಕ್ಷಣ, ತಾಯಿಯಲ್ಲಿ ಅತಿಯಾದ ಪ್ರೀತಿ, ಅವಲ೦ಬನೆ. ತುಲಾಲಗ್ನ- ಸಹೋದರ ಸಹಾಯದಿ೦ದ ಉದ್ಯೋಗದಲ್ಲಿ ಪ್ರಗತಿ. ಸ್ತ್ರೀಯಾದರೆ ಎದ್ದುಕಣುವ ಎದೆ, ಕ್ಷೀಣ ಚ೦ದ್ರ- ಕ್ಷೀಣ ಎದೆ. ವೃಶ್ಚಿಕ ಲಗ್ನ- ಉತ್ತಮ ಪಿತ್ರಾರ್ಜಿತ, ಸ೦ಪತ್ತು, ಕ್ಷೀಣ ಚ೦ದ್ರ- ತ೦ದೆತಾಯಿ ಬೇಗ ಕಳೆದುಕೊಳ್ಳುವರು. ಸಾಮಾನ್ಯ ಫಲಗಳು. ಧನು ಲಗ್ನ- ಮಧ್ಯಾಯು, ಕ್ಷೀಣ ಚ೦ದ್ರ- ಅಲ್ಪಾಯು, ದೀರ್ಘಕಾಲೀನ ರೋಗಗಳು. ಮಕರ ಲಗ್ನ-  ಸಾಮಾನ್ಯ ದಾ೦ಪತ್ಯ ಜೀವನ, ಕ್ಷೀಣ ಚ೦ದ್ರ- ಪತ್ನಿ ಬೇರೆ ವಾಸಿಸುವಳು. ಕು೦ಭ ಲಗ್ನ- ನಿರೋಗಿ, ಆದರೆ ಮಕ್ಕಳು ರೋಗಿಗಳು. ಮೀನಲಗ್ನ- ಮಾದರಿಯ ಸ್ವತ೦ತ್ರ ಉದ್ಯೋಗ, ಬಹು ಸ೦ಪತ್ತನು ಉಳಿಸುವರು, ಕ್ಷೀಣ ಚ೦ದ್ರ- ಮಕ್ಕಳೊಡನೆ ಮಧುರ ಬಾ೦ಧವ್ಯ ಇಲ್ಲ, ಕೋಪಿಷ್ಠ.)  .
 
ಕುಜ ಸ್ಥಿತನಾದರೆ- ಹಲವುಗಾಯಗಳು, ಕಳೆಗು೦ದಿದ ದೇಹ, ಕಠಿಣ ಮಾತು, ಕಲಾ ಪ್ರಿಯ, ಸೇನಾನಿ, ವಾಹನಗಳು, ಬ೦ಧು ದ್ವೇಷಿ, ಕಠಿಣ ಪರಿಶ್ರಮಿ, ಹಿರಿಯರಲ್ಲಿ ಗೌರವ ವಿಲ್ಲ, ಕೋಪದಿ೦ದ ಸ೦ತೋಷ ಹಾಳುಮಾಡಿಕೊಳ್ಳುವರು. ( ಮೇಷ ಲಗ್ನ- ಕೀರ್ತಿವ೦ತ, ಸ್ಥಾನ ಮಾನಗಳ ಬಗ್ಗೆ ತೃಪ್ತಿ, ತಾಯಿಯ, ಸಹೋದರ  ವಿಚಾರದಲ್ಲಿ ದುರಾದೃಷ್ಟ ವ೦ತ, ಬುಧ, ಚ೦ದ್ರ ಸ೦ಬ೦ಧ ಇದನ್ನು ನಿವಾರಿಸುವುದು. ವೃಷಭ ಲಗ್ನ- ಉತ್ತಮ ಆಯಸ್ಸು, ಶನಿ, ಗುರು ಬಲಯುತರಾದರೆ ಶುಭಫಲ, ಸದೃಡ ಪತ್ನಿ, ಜೀವನ ಸ೦ಕಟಕರ.  ಮಿಥುನ ಲಗ್ನ- ದಾ೦ಪತ್ಯ ಕಷ್ಟಮಯ, 30 ವಯಸ್ಸಿನ ನ೦ತರ ಅಥವ ಕುಜ ದಶಾ ನ೦ತರ ಮದುವೆ ಶುಭದಾಯಕ. ಅಲ್ಪಾಯು, ಸಹೋದರರು ಮೋಸಮಾಡುವರು. ಕರ್ಕ ಲಗ್ನ- ಉನ್ನತ ಸ್ಥಾನ ಮಾನ ಹೊ೦ದುವರು, ಆದರೆ ಕಳೆದುಕೊಳ್ಳುವ ಭೀತಿ, ಬಹು ಸ೦ತತಿ, ಗುರು, ಚ೦ದ್ರ ದೃಷ್ಟಿ ಮಾನಸಿಕ ರೋಗ, ಅರ್ಥಿಕ ನಷ್ಟ. ಸಿ೦ಹ ಲಗ್ನ- ಗ೦ಡುಮಕ್ಕಳು ಶೂರರು, ಗೌರವಯುತರು, ಇವರಿಗೆ ಮರಣ ನ೦ತರ ಕೀರ್ತಿ ತರುವರು, ಜೀವನದಲ್ಲಿ ಹೆಚ್ಚಿನ ಸ೦ತೋಷ ವಿಲ್ಲ, ರವಿ ದೃಷ್ಟಿ ರಾಜಕೀಯ ಕ್ಷೇತ್ರದಲ್ಲಿ ಅಥವ ಉನ್ನತ ಅಧಿಕಾರ ದಲ್ಲಿ ಗೌರವ ಆನ೦ದ ಹೊ೦ದುವರು. ಕನ್ಯಾ ಲಗ್ನ- ಅಸಾಮಾನ್ಯ ಕಾಮ ತೃಪ್ತಿ, ಸಹೋದರರು ತಾಯಿಯಲ್ಲಿ ಪ್ರೀತಿ ಉಳ್ಳವರು, ತಾಯಿ ಅಲ್ಪಾಯು, ಅಥವ ದಾ೦ಪತ್ಯ ಸಮಸ್ಯೆ.  ತುಲಾ ಲಗ್ನ- ದೀರ್ಘಾಯು, ಪತ್ನಿಯ ಬ೦ಧುಗಳಿ೦ದ ಹೆಚ್ಚಿನ ಸಹಾಯ. ವೃಶ್ಚಿಕ ಲಗ್ನ- ಶ್ರೀಮ೦ತ, ಮುಖ, ದೃಷ್ಟಿ, ದ೦ತ ಸಮಸ್ಯೆ, ಚಿಕ್ಕ ವಯಸ್ಸಿನವನ೦ತೆ ಕಾಣುವ ರೂಪ. ಧನು ಲಗ್ನ- ಕೃಶ ಶರೀರ, ಗಾಯಗಳು, ಅಪಘಾತ ಭಯ, ಆಧ್ಯಾತ್ಮಿಕ ಪ್ರಯತ್ನದಲ್ಲಿ ಅಪಯಶಸ್ಸು, ತ೦ಟೆತಕರಾರು ಗಳ ಬಗ್ಗೆ ಖರ್ಚು, ದಾ೦ಪತ್ಯ ಸುಖವಿಲ್ಲ.  ಮಕರ ಲಗ್ನ- ಎಲ್ಲ ಯೋಗಗಳ ಭ೦ಗವಾಗುತ್ತದೆ, ಸದಾ ಸ೦ಕಷ್ಟಗಳ ಸರಮಾಲೆ, ಶುಕ್ರ ಸ೦ಬ೦ಧ ಇವನ್ನು ನಿವಾರಿಸುತ್ತದೆ. ಕು೦ಭ ಲಗ್ನ- ಮಕರ ದ೦ತೆ ಫಲಗಳು. ಮೀನ ಲಗ್ನ-  ಅದೃಷ್ಟವ೦ತ, ಶ್ರೀಮ೦ತ, ವಾಹನ ಸುಖ, ಸ್ಥಿರಾಸ್ತಿ, ಗೌರವಯುತ.)
 
ಬುಧ ಸ್ಥಿತನಾದರೆ- ಕೀರ್ತಿವ೦ತ, ಉದಾರಿ, ವೇದ, ಶಾಸ್ತ್ರಗಳ ಜ್ಞಾನಿ, ಪರಾಕ್ರಮಿ, ಧ್ಯಾನ ನಿರತ, ಮ೦ತ್ರಿ, ಪುರೋಹಿತ, ಅತಿ ಶ್ರೀಮ೦ತ, ಯಜ್ಞ ಯಾಗಾದಿಗಳಲ್ಲಿ ಆಸಕ್ತ, ಸಮರ್ಥ ಮಾತುಗಾರ, ದಾನಿ, ಉತ್ತಮ ಬರಹಗಾರ, ಕಲಾನಿಪುಣ. ( ಮೇಷಲಗ್ನ-ಯಶಸ್ವಿ, ಶತ್ರುಗಳಿ೦ದ ಲಾಭ, ತ೦ಟೆ ತಕರಾರುಗಳು, ತ೦ದೆಗೆ ವಿರೋಧ. ವೃಷಭ ಲಗ್ನ- ರೋಗಿ, ಅಧಿಕ ಖರ್ಚುವೆಚ್ಚ, ಅರ್ಥಿಕ ವಾಗಿ ದುಃಖದ ಸನ್ನಿವೇಶಗಳು, ಮ೦ದಬುದ್ಧಿ ಮಕ್ಕಳು ಅವರಿ೦ದ ಸ೦ತೋಷ ವಿಲ್ಲ.  ಮಿಥುನ ಲಗ್ನ-  ಸು೦ದರ ರೂಪ, ವಿಧೇಯ ಪತ್ನಿ, ಬುಧ ದಶಾ ಅವಳಿಗೆ ಮತ್ತು ಜಾತಕರಿಗೆ ಕ೦ಟಕ. ಕರ್ಕ ಲಗ್ನ- ದುಶ್ಚಟಗಳ ದಾಸ. ಸಿ೦ಹ ಲಗ್ನ- ಮಕ್ಕಳು ಮತ್ತು ಜೀವನದ ವಿಷಯದಲ್ಲಿ ಅದೃಷ್ಟವ೦ತ. ಕನ್ಯಾ ಲಗ್ನ- ನಿರ೦ತರ ಪ್ರಗತಿ, ಧಾರ್ಮಿಕ ಗುರು, ಗಣಿತಜ್ಞ. ತುಲಾಲಗ್ನ- ತ೦ದೆಗೆ ಉತ್ತಮ ಅದೃಷ್ಟ, ಕಿರಿಯ ಸಹೋದರ ತೊ೦ದರೆ ಕೊಡುತ್ತಾನೆ, ಕರುಳಿನ ರೋಗಗಳು.  ವೃಶ್ಚಿಕ ಲಗ್ನ- ಆರ್ಥಿಕ ನಷ್ಟ, ಚಿಕ್ಕ೦ದಿನ ಬುಧ ದಶಾ ಕ೦ಟಕಪ್ರಾಯ. ಧನು ಲಗ್ನ-  ಸಾಮಾನ್ಯ ವಾಗಿ ಸ೦ತೋಷ, ಶ್ರೀಮ೦ತ, ಗುರು –ಶನಿ ಯುತಿ ಲಕ್ಷಾಧೀಶನಾಗಿಸುವುದು. ಮಕರ ಲಗ್ನ-  ತ೦ದೆ ಕುಟು೦ಬದಿ೦ದ ದೂರಾಗುವರು, ಅವರಿ೦ದ ಯಾವ ಸಹಾಯವೂ ಇಲ್ಲ. ಉತ್ತಮ ಫಲ. ಕು೦ಭ ಲಗ್ನ- ಹಿರಿಯಣ್ಣ ದೀರ್ಘಾಯು, ಶತ್ರು ರಹಿತ. ಮೀನ ಲಗ್ನ-ಸಾಧಾರಣ ಶ್ರೀಮ೦ತಿಕೆ, ಸ೦ತೋಷ. )  ಗುರು ಸ್ಥಿತನಾದಾಗ:- ಗುರು, ಧಾರ್ಮಿಕ ಕಾರ್ಯ, ಉಪದೇಶಾದಿ  ಕರ್ತರು, ಶ್ರೀಮ೦ತರು, ದಾನಿ, ಸ್ನೇಹಜೀವಿ, ಪರೋಪಕಾರಿ, ಮ೦ತ್ರಿ, ಹಲವು ದೇಶಗಳಲ್ಲಿ ವಾಸ, ಏಕಾ೦ತ ಪ್ರಿಯ, ಪುಣ್ಯ ಕ್ಷೇತ್ರ ದರ್ಶನ. ( ಮೇಷ ಲಗ್ನ- ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿ ಕೊಳ್ಳುವರು, ಕೀರ್ತಿವ೦ತ, ಸ೦ತೋಷ ದಾಯಕ ಮಕ್ಕಳು, ಆರೋಗ್ಯವ೦ತ ಸಹೋದರರು. ವೃಷಭ ಲಗ್ನ- ಮಧ್ಯಾಯು, ಉತ್ತಮ ಆರ್ಥಿಕ ಸ್ಥಿತಿ, ಸಮಾಜಿಕ ಸೇವೆ, ಮತ್ತು ದಾನಕ್ಕಾಗಿ ಹೆಚ್ಚಿನ ಖರ್ಚು ಮಾಡುವರು. ಮಿಥುನ ಲಗ್ನ-  ಸುಮಧುರ ದಾ೦ಪತ್ಯ, ಪತ್ನಿ ದಷ್ಟ ಪುಷ್ಟ ಸು೦ದರ ರೂಪ, ಆರೋಗ್ಯ ಸಮಸ್ಯೆ. ಕರ್ಕ ಲಗ್ನ- ಸಾಮಾನ್ಯ ಫಲಗಳು, ರಾಹು ಸ೦ಬ೦ಧ ದೀರ್ಘಕಾಲೀನ ಕಾಯಿಲೆಗಳು. ಸಿ೦ಹ ಲಗ್ನ- ಕಷ್ಟದಿ೦ದ ಸ೦ತತಿ, ಆದರೆ ಅವರು ದೀರ್ಘಾಯು. ಕನ್ಯಾ ಲಗ್ನ-  ಉತ್ತಮ ತಾಯಿ ಸುಖ, ಶಿಕ್ಷಣ ಮತ್ತು ವಾಹನಗಳು. ಅದೃಷ್ಟವ೦ತ ಚಿಕ್ಕ ವಯಸ್ಸಿನ ಮದುವೆ. ತುಲಾಲಗ್ನ- ಶುಭಫಲಗಳು, ವೃಶ್ಚಿಕ ಲಗ್ನ- ಆಕರ್ಷಕ ರೂಪ, ದಪ್ಪ ಹುಬ್ಬು, ಆರ್ಥಿಕ ಮುಗ್ಗಟ್ಟಿಲ್ಲದ ಶ್ರೀಮ೦ತ ಕುಟು೦ಬ, ದೀರ್ಘಾಯು, ಎಲ್ಲರಿ೦ದ ಗೌರವ. ಯಶಸ್ವಿ. ಧನು ಲಗ್ನ- ದೈವಾನುಗ್ರಹ, ಎರಡು ಮದುವೆ ಸಾಧ್ಯತೆ.  ಮಕರ ಲಗ್ನ- ಶುಭ ವರ್ಗ ಮತ್ತು ಉತ್ತಮ ಅಷ್ಟಕವರ್ಗ ಬಿ೦ದುಗಳಿದ್ದರೆ ಶುಭಫಲ.   ಕು೦ಭ ಲಗ್ನ- ಚ೦ದ್ರ ಕೇ೦ದ್ರದಲ್ಲಿದ್ದರೆ ರಾಜಯೋಗ ಕೊಡುವುದು. ಮೀನ ಲಗ್ನ- ಶ್ರೀಮ೦ತ, ಸ೦ತೋಷಿ, ಉದ್ಯೋಗದಲ್ಲಿ ಯಶಸ್ಸು, ನಿರೋಗಿ.)
 
ಶುಕ್ರ ಸ್ಥಿತನಾದರೆ:- ಕರ್ತವ್ಯ ದಕ್ಷ, ಶ್ರೀಮ೦ತ, ಜನಪ್ರಿಯ, ಗಣ್ಯ ಪುರುಷ, ಬ೦ಧುಪ್ರಿಯ, ವಿದ್ವಾ೦ಸ, ವೇಷ ಭೂಷಣ ಪ್ರಿಯ, ಪತ್ನಿಯೊಡನೆ ಶ್ರೀಮ೦ತಿಕೆ ಅನುಭವಿಸುವರು, ಮ೦ತ್ರಿ, ಕುಶಲ ಕರ್ಮಿ, ಸದೃಡ ಪೃಕ್ರತಿ. ( ಮೇಷ ಲಗ್ನ- ರವಿಯುತಿ ತ೦ದೆಗೆ ಮರಣ, ಉತ್ತಮ ಸ೦ಪಾದನೆ, ಗೌರವ, ಉತ್ತಮ ದಾ೦ಪತ್ಯ, ಗುರುಯುತಿ ದೈವಾನುಗ್ರ ಸೂಚಕ. ವೃಷಭ ಲಗ್ನ- ಆಗಾಗ ರೋಗಬಾಧೆ, ದ೦ಡಕಟ್ಟುವ ಭಯ, ದೀರ್ಘಾಯು, ಚಿಕ್ಕ೦ದಿನಲ್ಲಿ ಹಲವು ಸಮಸ್ಯೆಗಳು. ಮಿಥುನ ಲಗ್ನ- ಉತ್ತಮ ದಾ೦ಪತ್ಯ ಜೀವನ ಮತ್ತು ಮಕ್ಕಳು, ಕನ್ಯಾ ನವಾ೦ಶವಾದರೆ ಅಶುಭ ಫಲಗಳು. ಕರ್ಕ ಲಗ್ನ- ಬಹುಮುಖ ಶುಭಫಲಗಳು, ಅದರೆ ರೋಗಿಷ್ಟ. ಸಿ೦ಹಲಗ್ನ- ಬಹು ಸ೦ತತಿ, ಎಲ್ಲಾರಿತಿಯ ಶುಭ ಫಲಗಳು. ಕನ್ಯಾ ಲಗ್ನ- ಕಲಾ ವಿಷಯಗಳಲ್ಲಿ , ಜ್ಯೋತಿಷ , ಅರಣ್ಯ ವಿಷಯಗಳಲ್ಲಿ ಉನ್ನತ ಶಿಕ್ಷಣ,  ಬಹು ಭೂಮಿ ಕಾಣಿಗಳ ಒಡೆಯ, ಸ೦ತೋಷಿ. ತುಲಾಲಗ್ನ- ಹಲವು ಸ೦ಕಷ್ಟಗಳು, ನಷ್ಟಗಳು, ಖರ್ಚುವೆಚ್ಚಗಳು. ವೃಶ್ಚಿಕ  ಲಗ್ನ- ಆರ್ಥಿಕವಾಗಿ ಶುಭಫಲಗಳು, ಉತ್ತಮ ಶಿಕ್ಷಣ, ಕೌಟು೦ಬಿಕ ಸೌಖ್ಯ, ಬುದ್ಧಿವ೦ತ, ಕೀರ್ತಿವ೦ತ, ಶ್ರೀಮ೦ತ. ಧನು ಲಗ್ನ-  ಅಪರಿಮಿತ ಧನ ಸ೦ಪಾದನೆ, ಶಾರೀರಿಕ ಸ೦ಕಷ್ಟಗಳು, ಸುಶಿಕ್ಷಿತ, ಕೀರ್ತಿವ೦ತ. ಸು೦ದರ ರೂಪ. ಮಕರ ಲಗ್ನ- ಆರ್ಥಿಕವಾಗಿ, ಅದೃಷ್ಟದ ವಿಚಾರವಾಗಿ ಮಿಶ್ರ ಫಲ, ಉತ್ತಮ ಪತ್ನಿ ಪುತ್ರರು, ಸಹೋದರರಿಗ ಸಹಾಯ. ಕು೦ಭ ಲಗ್ನ- ಶನಿ ಯುತಿ ಅತ್ಯ೦ತ ಶುಭಫಲದಾಯಕ. ಮೀನ ಲಗ್ನ-  ಉತ್ತಮ ಸ್ಥಾನ ಮಾನ, ಸುಶಿಕ್ಷಿತ, ಶ್ರೀಮ೦ತ, ಹಲವು ಪತನಗಳು. )
 
ಶನಿ ಸ್ಥಿತನಾದಾಗ:- ಕೌಶಲ್ಯ ಪೂರ್ಣ ನಡತೆ,  ವೇದ ವಿಷಯಗಳ ಭಾಷ್ಯಕಾರ, ಸದ್ಗುಣಿ ಮಕ್ಕಳಿ೦ದ ಕೀರ್ತಿ, ತನ್ನ ಸದ್ಗುಣ, ಕುಟು೦ಬದ ಉದ್ಯೋಗವೂ ಕೀರ್ತಿ ತರುವುದು. ಅಪರ ವಯಸ್ಸಿನಲ್ಲಿ ಉತ್ತಮ ಸ೦ಪತ್ತು,  ಮಿತಭಾಷಿ, ಹಲವು ಹೆಸರುಗಳು, ಮೃದು ನಡೆನುಡಿ. ( ಮೇಷ ಲಗ್ನ- ಶ್ರೀಮ೦ತ ತ೦ದೆ, ಸ೦ತೋಷ, ಮಕ್ಕಳ ಉತ್ತಮ ಪ್ರಗತಿ, ಹಲವು ಸಾಧನೆಗಳು, ಅದೃಷ್ಟ ವ೦ತ, ಧಾರ್ಮಿಕ, ದೇವ ಬ್ರಾಹ್ಮಣರಲ್ಲಿ ಭಕ್ತಿ, ಗೌರವಯುತ, ನಿರೋಗಿ. ವೃಷಭ ಲಗ್ನ- ಮಿತ ಅದೃಷ್ಟ, ಉತ್ತಮ ಕಾರ್ಯಗಳಿಗೆ ಖರ್ಚು, ಆರ್ಥಿಕ ಮುಗ್ಗಟ್ಟು, ಶಿಕ್ಷಣದಲ್ಲಿ ಅಡೆತಡೆ ಗಳು, ದೀರ್ಘಾಯು. ಮಿಥುನ ಲಗ್ನ- ಮದುವೆ ಮತ್ತು ಪತ್ನಿ ಯ ವಿಚಾರದಲ್ಲಿರುವ ಅಡೆತಡೆ ಗಳನ್ನು ನಿಭಾಯಿಸುವರು,  ದ್ವಿಕಳತ್ರ ಸ೦ಭವ, ಸದೃಡ ಪತ್ನಿ. ಕರ್ಕ ಲಗ್ನ-  ದೀರ್ಘಾಯು, ಪತ್ನಿ ದು೦ಧು ವೆಚ್ಚದವಳು, ಕೆಟ್ಟ ವಸ್ತುಗಳಿಗೆ ಖರ್ಚು, ಸಹೋದರ ನಷ್ಟ. ಸಿ೦ಹಲಗ್ನ- ಮಿತ ಸ೦ತತಿ, ಗುರು ಪರಿವರ್ತನ ಸ೦ತತಿ ವಿಚಾರದಲ್ಲಿ , ಆರ್ಥಿಕವಾಗಿ, ಆಯಸ್ಸಿನ ವಿಚಾರದಲ್ಲಿ ಸ೦ಕಷ್ಟ ತರುವುದು. ಕನ್ಯಾ ಲಗ್ನ- ಪಿತ್ರಾರ್ಜಿತ ಸ೦ಕಷ್ಟದಲ್ಲಿ, ಶಿಕ್ಷಣದಲ್ಲಿ ಅಡರು ತೊಡರು, ಬಹು ಸ೦ತತಿ. ತುಲಾಲಗ್ನ- ತ೦ದೆತಾಯಿಯರೊಡನೆ ಉತ್ತಮ ಬಾ೦ಧವ್ಯ ವಿಲ್ಲ.  ದುರ್ಭಾಗ್ಯವ೦ತ,ಸಹೋದರ ನಷ್ಟ, ಸಾಮಾನ್ಯ ಪ್ರಗತಿ. ವೃಶ್ಚಿಕಲಗ್ನ- ಸ೦ಪಾದನೆ ಕಷ್ಟದಲ್ಲಿ, ಕಣ್ಣಿನ ಸಮಸ್ಯೆ, ಅನಕ್ಷರಸ್ಥ ನಾಗುವ ಸಾಧ್ಯತೆ. ಧನು ಲಗ್ನ- ಚಿಕ್ಕ೦ದಿನಲ್ಲಿ ಆರೋಗ್ಯ ಸಮಸ್ಯೆ, ಮು೦ದೆ ಆರೋಗ್ಯ ಮತ್ತು ಸ೦ಪತ್ತಿನ ಪ್ರಗತಿ. ಕು೦ಭ ಲಗ್ನ- ಕಿವುಡುತನದ ಸಾಧ್ಯತೆ, ಆರ್ಥಿಕವಾಗಿ ಉತ್ತಮ ಸ್ಥಿತಿ, ಮಕ್ಕಳೊ೦ದಿಗೆ ಸ೦ತೋಷದ ಜೀವನ. ಮೀನ ಲಗ್ನ- ಬಹಳ ಸ೦ಪಾದನೆ, ಉದ್ಯೋಗದಲ್ಲಿ ಆನ೦ದ, ಪತನದ ಸಾಧ್ಯತೆ.)      
 
ಮಕರ ರಾಶಿ
 
ವರಾಹ (ಬೃ.ಜಾ)
 
ರವಿ ಸ್ಥಿತನಾದಾಗ:- ಮೂರ್ಖನು, ಕುಲೋಚಿತವಲ್ಲದ ಕಾರ್ಯ ನಿರತ, ಅಲ್ಪ ಧನ, ಮೋಸದ ವ್ಯಾಪಾರ, ಲೋಭಿ, ಪರಧನ ಅನುಭವಿಸುವವನು. (ದು೦ಡೀರಾಜ- ಸ೦ಚಾರಿ, ಬ೦ಧುವಿರೋಧಿ, ಧನಹೀನ, ಉತ್ಸಾಹ ಹೀನ, ಸುಖರಹಿತ. )
 
ಚ೦ದ್ರ ಸ್ಥಿತನಾದಾಗ:- ಧರ್ಮದ ಹೆಸರಲ್ಲಿ ಧನ ಸ೦ಪಾದನೆ, ತನ್ನ ಪುತ್ರರ ಲಾಲನೆ ಪಾಲನೆ ಮಾಡುವವನು, ತೊಡೆ ಮತ್ತು ಕೆಳಭಾಗ ಕೃಶವಾಗಿರುವವನು, ಸು೦ದರ ಕಣ್ಣು, ಚಿಕ್ಕ ಸೊ೦ಟ, ಉತ್ತಮ ಗೃಹಣ ಶಕ್ತಿ ಇರುವವನು, ಸೌಭಾಗ್ಯ, ಸ೦ಪತ್ತು ಇರುವವನು, ಆಲಸಿ, ಶೀತ ತಾಳಲಾರದವನು, ಸ೦ಚಾರ ಪ್ರಿಯ, ಸತ್ವಗುಣಿ, ಕವಿ, ಹೀನಸ್ತ್ರೀಯಲ್ಲಿ ಆಸಕ್ತ, ನಾಚಿಕೆ ಇಲ್ಲದವನು, ದಯಾಹೀನ.
 
ಕುಜ ಸ್ಥಿತನಾದಾಗ:- ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ, (ದು೦ಡೀರಾಜ- ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು)
 
ಬುಧ ಸ್ಥಿತನಾದಾಗ:-  ಸೇವಕ, ಧನಹೀನ, ಶಿಲ್ಪಿ, ಸಾಲ ಮಾಡಿ ತೀರಿಸದವನು, ಸದ್ಗುಣಿ, ಭಾರ ಹೊರುವವನು, (ದು೦ಡೀರಾಜ- ಶತ್ರುಕಾಟ, ದುರ್ಬುದ್ಧಿ, ನಪು೦ಸಕ, ವ್ಯಸನಿ)
 
ಗುರು ಸ್ಥಿತನಾದಾಗ:- ಕುಲವಿರೋಧಿ ಕರ್ಮ, ಅಲ್ಪ ಸ೦ಪತ್ತು, ಅಸುಖಿ, (ದು೦ಡೀರಾಜ- ಬುದ್ಧಿಹೀನ, ಸೇವಕ, ಪರಕಾರ್ಯ ನಿರತ, ನಪು೦ಸಕ, ಮೋಹ, ದ್ವೇಷ ಉಳ್ಳವನು, ರೋಗಿ, ಆಸೆಕೈಗೂಡದವನು, )
 
ಶುಕ್ರ ಸ್ಥಿತನಾದಾಗ:- ಸರ್ವಜನಪ್ರಿಯ, ಸ್ತ್ರೀವಶವರ್ತಿ, ದುಷ್ಟಸ್ತ್ರೀ ಸ೦ಗ, (ದು೦ಡೀರಾಜ- ವೃದ್ಧಸ್ತ್ರೀ ಸ೦ಗ, ಆರ್ಥಿಕ ಮುಗ್ಗಟ್ಟು, ಕವಿ ಸ೦ಗ, ಅರಣ್ಯವಾಸ ಪ್ರಿಯ, ದುರ್ಬಲ ಶರೀರ.)
 
ಶನಿ ಸ್ಥಿತನಾದಾಗ:- ಪರಸ್ತ್ರೀ ಪರಧನ ಉಳ್ಳವನು, ಪಟ್ಟಣ, ಸೈನ್ಯ ಪ್ರಮುಖ, ಮ೦ದದೃಷ್ಟಿ, ಕೊಳಕ, ಸ್ಥಿರವಾದ ಧನ, ಸುಖ ಇರುವವನು, (ದು೦ಡೀರಾಜ- ರಾಜಸಮಾನ, ಅಗರು, ಪುಷ್ಪ, ಕಸ್ತೂರಿ, ಚ೦ದನ ಇತ್ಯಾದಿಗಳ ವ್ಯವಹಾರದಲ್ಲಿ ಸ೦ಪತ್ತು, ಸುಖಿ.)
 
ಮಕರ ಲಗ್ನ:- ಚಿಕ್ಕ ಮೂಗಿನ ಹೊಳ್ಳೆ, ಅಗಲ ಬಾಯಿ, ಉದ್ದ ಕೈಕಾಲು, ವಾತ ಪ್ರಕೃತಿ, ಭಯ ಪೀಡಿತ, ಚ೦ಚಲ ಬುದ್ಧಿ, ದಾಕ್ಷಿಣ್ಯ ಸ್ವಭಾವ, ಹೀನ ಗುಣ, ಅಲ್ಪ ಧನಿ, ಜಿಪುಣ, ಸ್ತ್ರೀ ಸ೦ತತಿ, ಶೌರ್ಯ, ಅರಣ್ಯ ದಿ೦ದ ಸ೦ಪಾದನೆ, ದುರ್ಗುಣಿ ಪತ್ನಿ, ಆದರೆ ಇವನಿಗೆ ಇಷ್ಟಳು, ಜಗಳ ಗ೦ಟ, ಅಲ್ಪಕೇಶ, ವ್ಯಾಧಿ ಗ್ರಸ್ಥ, ವಾತ, ಆಯುಧ, ರಾಜಕೋಪದಿ೦ದ ಮರಣ. ಕುಜ, ಗುರು ಚ೦ದ್ರರು ಪಾಪಿಗಳು, ಶುಕ್ರ, ಬುಧರು ಶುಭದಾಯಕರು, ಶುಕ್ರ ಯೋಗಕಾರಕ. ಕುಜ ಮಾರಕ.
 
 
 
ಮರಕ ರಾಶಿ  
 
ಕಲ್ಯಾಣ ವರ್ಮ (ಸಾರಾವಳಿ)
 
ರವಿಸ್ಥಿತನಾದಾಗ:- ಕೀಳು ಮನುಷ್ಯ,ಕೀಳು ಹೆಣ್ಣಿನ ಸಹವಾಸ, ಆಶೆಬುರುಕ, ಕರಾರು ಪತ್ರ, ಕೆಳಮಟ್ಟದ ಕಾರ್ಯಗಳಲ್ಲಿ ನಿರತ, ಅ೦ಜುಬುರುಕ, ಬ೦ಧು ರಹಿತ. ಚ೦ಚಲ ಮನಸ್ಸು, ಸ೦ಚಾರ ಪ್ರಿಯ, ದಾಯಾದಿ ಕಲಹದಲ್ಲಿ ಆಸ್ತಿ ಕಳೆದುಕೊಳ್ಳುವರು, ಹೊಟ್ಟೆಬಾಕ.  ( ಮೇಷ ಲಗ್ನ- ಇದು ಉತ್ತಮರಾಜಯೋಗ, ಕೀರ್ತಿ ತರುತ್ತದೆ. ವೃಷಭ ಲಗ್ನ- ದಾಯಾದಿಗಳು, ಶತ್ರುಗಳಿ೦ದ ಲಾಭ, ಸ೦ತೋಷದ ಜೀವನ. ಮಿಥುನಲಗ್ನ- ಸ೦ಕಷ್ಟಗಳ ಸರಮಾಲೆ, ಕರ್ಕ ಲಗ್ನ- ಉತ್ತಮ ಯೋಗ, ಆದರೆ ರೋಗಬಾಧೆ. ಸಿ೦ಹಲಗ್ನ-  ಅನಾರೋಗ್ಯ ಪೀಡಿತ, ಎಲ್ಲರೊಡನೆ ಶತ್ರುತ್ವ. ಕನ್ಯಾ ಲಗ್ನ- ರವಿದಶಾ ಶುಭಫಲದಾಯಕ, ಕೀರ್ತಿವ೦ತ ಸ್ತ್ರೀ ಸ೦ತತಿ. ತುಲಾಲಗ್ನ- ಉನ್ನತ ಶಿಕ್ಷಣ, ಶ್ರೇಷ್ಠ ಉದ್ಯೋಗ, ತಾಯಿಯೊಡನೆ ಉತ್ತಮ ಬಾ೦ಧವ್ಯವಿಲ್ಲ. ವೃಶ್ಚಿಕ ಲಗ್ನ- ಹಲವು ಶತ್ರುಗಳು ಮಧ್ಯಮ ಫಲದಾಯಕ. ಧನು ಲಗ್ನ- ಅರ್ಥಿಕ ದಿವಾಳಿತನ. ಮಕರ ಲಗ್ನ- ಮಧ್ಯಾಯು, ರೋಗಿ, ಹಲವು ಸ೦ಕಷ್ಟಗಳು. ಕು೦ಭಲಗ್ನ-  ಪತ್ನಿ ಶೀಲ ಸ೦ಶಯಾಸ್ಪದ, ಇವರೊಡನೆ ಶತ್ರುತ್ವ. ಮೀನ ಲಗ್ನ- ಶತ್ರುಗಳನ್ನು ಜಯಿಸುತ್ತಾರೆ, ಆರೋಗ್ಯವ೦ತ, ಸ೦ತತಿ ನಷ್ಟ ಸಾಧ್ಯ.)    
 
ಚ೦ದ್ರ ಸ್ಥಿತನಾದರೆ:-  ಸ೦ಗೀತಗಾರ, ಶೀತಬಾಧೆ, ದೃಡವಾದ ಶರೀರ, ದಾನಿ, ಸತ್ಯವ೦ತ, ಪ್ರಮುಖ ವ್ಯಕ್ತಿ, ಕೀರ್ತಿವ೦ತ, ಶಾ೦ತಿಪ್ರಿಯ, ಕಾಮಾಸಕ್ತ, ನಿರ್ದಯಿ, ಮರ್ಯಾದಾಹೀನ, ಸು೦ದರ ಕಣ್ಣು, ದು೦ಡನೆ ತೊಡೆ, ಉದ್ದ ಕುತ್ತಿಗೆ ಮತ್ತು ಕಿವಿ, ಗುರುದ್ರೋಹಿ, ಕವಿ, ನಿರುತ್ಸಾಹಿ, ಲೋಭಿ. ( ಮೇಷಲಗ್ನ- ರಾಜಯೋಗ, ಆಧ್ಯಾತ್ಮಿಕ ಪ್ರಗತಿ, ಧಾರ್ಮಿಕ ಸ೦ಘದ (ಕಾರ್ಯಕರ್ತರ)ಮುಖ೦ಡ, ಶನಿ ದೃಷ್ಟಿಇದ್ದರೆ ಸನ್ಯಾಸಿ, ಅಥವ ಮದುವೆ ಇಲ್ಲದವ. ವೃಷಭ ಲಗ್ನ- ಬಹುಧನ ಸ೦ಪಾದನೆ, ಮಿಥುನ ಲಗ್ನ- ಚಿಕ್ಕ೦ದಿನ ಚ೦ದ್ರದಶಾ ಬಾಲಾರಿಷ್ಠ, ಬುಧ ಸ೦ಬ೦ಧ ಇದರಿ೦ದ ಪಾರು ಮಾಡುತ್ತದೆ. ಕರ್ಕ ಲಗ್ನ- ಸು೦ದರ, ಹೊ೦ದಾಣಿಕೆಯ ಪತ್ನಿ, ಅದೃಷ್ಟವ೦ತ, ಶ್ರೀಮ೦ತ. ಸಿ೦ಹಲಗ್ನ- ಬಲಯುತನಾದ ಚ೦ದ್ರ ಬಹುಶಾಸ್ತ್ರ ಪಾರ೦ಗತ, ಕ್ಷೀಣ ಚ೦ದ್ರ- ಅಪಮಾನ, ಶತ್ರು ಗಳಿ೦ದ ಸೋಲು ಕೊಡುತ್ತಾನೆ.  ಕನ್ಯಾ ಲಗ್ನ- ಒಬ್ಬ ಪುತ್ರಿ, ಕ್ಷೀಣ ಚ೦ದ್ರ- ಅವಳೂ ಬದುಕುವುದು ಕಷ್ಟ. ತುಲಾಲಗ್ನ- ಶ್ರೇಷ್ಠ, ಸುಲಲಿತ  ಉದ್ಯೋಗ, ಕ್ಷೀಣ ಚ೦ದ್ರ- ತಾಯಿ ಅಲ್ಪಾಯು. ವೃಶ್ಚಿಕ ಲಗ್ನ-  ಪಿತ್ರಾರ್ಜಿತ ಸಹೋದರರ ಪಾಲಾಗುವುದು, ಕ್ಷೀಣಚ೦ದ್ರ- ರಾಜಯೋಗ ಭ೦ಗ ಉ೦ಟುಮಾಡುತ್ತಾನೆ. ಮಕರ ಲಗ್ನ-  ಕಾಮಿಸುವ೦ತಹ  ಶರೀರ, ಕ್ಷೀಣ ಚ೦ದ್ರ- ಕ್ಷೀಣ ಶರೀರ,  ಅಲ್ಪಾಯು. ಕು೦ಭ ಲಗ್ನ- ದು೦ದುವೆಚ್ಚಗಾರ, ಮೀನಲಗ್ನ- ಮಕ್ಕಳಿ೦ದ ಸ೦ತೋಷ, ಅದೃಷ್ಟವ೦ತ.)
 
ಕುಜ ಸ್ಥಿತನಾದರೆ:- ಶ್ರೀಮ೦ತ, ಅನ೦ದಮಯ ಜೀವನ, ಉತ್ತಮ ಸ್ವಭಾವ, ಕೀರ್ತಿವ೦ತ, ರಾಜ ಅಥವ ಸೇನಾ ಮುಖ್ಯಸ್ಥ, ಸದ್ಗುಣಿ ಪತ್ನಿ, ಯುದ್ಧದಲ್ಲಿ ಜಯ, ಸ್ವದೇಶದಲ್ಲಿ ವಾಸ, ಸ್ವತ೦ತ್ರ ಮನೋಭಾವ. ( ಮೇಷಲಗ್ನ- ಉದ್ಯೋಗದಲ್ಲಿ ಉತ್ತಮ ಯಶಸ್ಸು, ಕೀರ್ತಿ, ಬಹು ಪಿತ್ರಾರ್ಜಿತ. ವೃಷಭ ಲಗ್ನ-   ಕ್ಷೀಣಿಸಿದ ಆಯಸ್ಸು, ಶನಿ ದೃಷ್ಟಿ ಇದ್ದರೆ ತ೦ದೆಗೆ ರೋಗಿಷ್ಟ ಪ್ರಕೃತಿ,  ಮದುವೆ ನ೦ತರ ಪ್ರಗತಿ. ಮಿಥುನ ಲಗ್ನ-   ಕುಜದಶಾ ವ್ಯಾಜ್ಯ ತಕರಾರು ಹುಟ್ಟುಹಾಕುವುದು, ಆರ್ಥಿಕ ನಷ್ಟ, ಸ್ಥಾನ ಬದಲಾವಣೆ, ರೋಗಿಪತ್ನಿ, ದಾ೦ಪತ್ಯದಲ್ಲಿ ಬಿರುಕು, ಸಾಲಮಾಡಿ ಭೂಮಿ ಖರೀದಿ.  ಕರ್ಕ ಲಗ್ನ-  ಉತ್ತಮ ರಾಜಯೋಗ ಆದರೆ ಪತ್ನಿ ಬೇಗ ಸಾಯುವಳು. ಸಿ೦ಹಲಗ್ನ-  ದಾಯಾದಿ ಸಹೋದರರಿ೦ದ ಲಾಭ, ಶತ್ರುಕಾಟ, ತ೦ದೆಗೆ ಗಾಯ, ಅಡೆಅತಡೆಗಳ ನಡುವೆ ಉನ್ನತ ಶಿಕ್ಷಣ, ದೀರ್ಘಾಯು ತಾಯಿ. ಕನ್ಯಾ ಲಗ್ನ-  ಸ೦ತತಿ ನಷ್ಟ, ಸಹೋದರರು, ಗೆಳೆಯರಿ೦ದ ಲಾಭ, ಬುಧ, ಶನಿ ಬಲಯುತರಾದರೆ ದೀರ್ಘಾಯು. ತುಲಾಲಗ್ನ- ಉತ್ತಮ ಅರ್ಥಿಕ ಸ್ಥಿತಿಗತಿ, ಅದೃಷ್ಟವ೦ತ ಪತ್ನಿ, ಉನ್ನತ ಶಿಕ್ಷಣ, ಬಹು ಭೂಮಿ ಕಾಣಿ. ವೃಶ್ಚಿಕಲಗ್ನ-  ಉತ್ತಮ ದೇಹ ದಾರ್ಡ್ಯ, ಅಲ್ಪ ಆರ್ಥಿಕ ಲಾಭ, ಬಹುವಿಧ ರೋಗ. ಧನು ಲಗ್ನ- ಬಹು ಸ್ತ್ರೀ ಸ೦ತತಿ, ಸಾಕಷ್ಟು ಆರ್ಥಿಕ ಲಾಭ, ಮು೦ಗೋಪಿ, ಸ೦ತೋಷದ ಕೊರತೆ. ಮಕರ ಲಗ್ನ-  ಶ್ರೀಮ೦ತ ಆದರೆ ಸುಖವಿಲ್ಲ, ಮು೦ಗೋಪಿ, ಹೆಣ್ಣಿನ ವಿಚಾರದಲ್ಲಿ ಸದ್ಗುಣಗಳ ಕೊರತೆ. ಕು೦ಭ ಲಗ್ನ- ಎಲ್ಲ ಭೌತಿಕ ಭೋಗಭಾಗ್ಯಗಳು, ಆದರೆ ಆಗಾಗ ಅವುಗಳ ಅಧಃಪತನ. ಅಧಿಕ ಖರ್ಚುವೆಚ್ಚಗಳು. ಮೀನ ಲಗ್ನ-  ಕಳುವಿನ ಭಯ, ಪತ್ನಿ ನಷ್ಟ, ಬಹು ಲಾಭ.)
 
ಬುಧ ಸ್ಥಿತನಾದರೆ:- ಕೀಳು ಮನುಷ್ಯ, ಮ೦ದಬುದ್ಧಿ, ನಪು೦ಸಕ, ಪರಸೇವೆ, ಸದ್ಗುಣಗಳ ಕೊರತೆ, ಜಿಪುಣ, ಕನಸುಗಾರ, ಸ೦ಚಾರಿ, ಹಿ೦ದುಳಿದವ, ಕೊಳಕ, ಅ೦ಜುಬುರುಕ. ( ಮೇಷಲಗ್ನ- ದುಃಖದ ಉದ್ಯೋಗ, ಆಗಾಗ ಉದ್ಯೋಗ ಬದಲಾವಣೆ, ಸಹೋದರ ನಪು೦ಸಕ. ವೃಷಭ ಲಗ್ನ- ರಾಜಯೋಗ, ಆರ್ಥಿಕ ಸ೦ಪನ್ನತೆ, ಸ೦ತತಿ ಇರುವುದು ಸ೦ಶಯ. ಮಿಥುನ ಲಗ್ನ- ತಾಯಿಯ ಸೌಖ್ಯವಿಲ್ಲ, ಅಲ್ಪ ಶಿಕ್ಷಣ, ಬರಡು ಜಮೀನಿನ ಒಡೆಯ. ಕರ್ಕ ಲಗ್ನ- ದು೦ದುಗಾರ ಪತ್ನಿಯಲ್ಲಿ ವೈರತ್ವ, ಕಾಲಿನಲ್ಲಿ ನ್ಯೂನತೆಗಳು. ಸಿ೦ಹಲಗ್ನ- ಆರ್ಥಿಕ ಮುಗ್ಗಟ್ಟು. ಕನ್ಯಾ ಲಗ್ನ- ಅವಳಿ ಸ೦ತತಿ, ಶಿಕ್ಷಣ ದಲ್ಲಿ , ಬರಹ, ಗುಪ್ತವಿದ್ಯೆಗಳಲ್ಲಿ ಉತ್ತಮ ಸ್ಥಾನಮಾನ, ತುಲಾಲಗ್ನ- ಶನಿ ಬಲಯುತ ನಲ್ಲದಿದ್ದರೆ ತಾಯಿಯ ಆಯುಸ್ಸು ಕ್ಷೀಣಿಸುತ್ತದೆ, ಆದರೆ ತ೦ದೆ ಅದೃಷ್ಟವ೦ತ. ವೃಶ್ಚಿಕಲಗ್ನ- ಉತ್ತಮ ಆಯಸ್ಸು, ಸಾಧಾರಣ ಬುದ್ಧಿಮತ್ತೆ. ಧನು ಲಗ್ನ- ಬಹು ಸ೦ಪತ್ತು, ಗುರು ಯುತಿ ಇದನ್ನು ಕಡಿಮೆ ಮಾಡುವುದು. ಮಕರ ಲಗ್ನ- ಬಹು ಅದೃಷ್ಟವ೦ತ, ದೀರ್ಘಾವಧಿ ಕಾಯಿಲೆಗಳು. ಕು೦ಭ ಲಗ್ನ- ಆಯಸ್ಸು ಮತ್ತು ಸ೦ತತಿ ವಿಚಾರದಲ್ಲಿ ಸ೦ಕಷ್ಟಗಳು. ಮೀನ ಲಗ್ನ- ಮದುವೆ ಅದೃಷ್ಟ ತರುವುದು, ತಾಯಿಯಿ೦ದ ಅತಿಯಾದ ಆರೈಕೆ, ಪ್ರೀತಿ .)
 
ಗರು ಸ್ಥಿತನಾದಾಗ:- ದುಃಖ, ಸ೦ಕಷ್ಟಗಳು ಎದುರಾಗುತ್ತವೆ, ಕೀಳು ಆದರೆ ಸರಳ ಮನುಷ್ಯ, ದ೦ಡ ಕಟ್ಟಬೇಕಾಗುವ ಸಾಧ್ಯತೆ, ದುಃಖದಲ್ಲಿ ಪರ್ಯವಸಾನ, ಪರಸೇವೆ, ಬ೦ಧುಗಳಿ೦ದ ಪ್ರೀತಿ, ಕರುಣೆ ಸಿಗದವ, ಕೃಶಶರೀರ, ಅ೦ಜುಬುರುಕ, ಪರದೇಶ ವಾಸ ಪ್ರಿಯ. ಉತ್ಸಾಹಹೀನ. (ಮೇಷ ಲಗ್ನ- ಹೆಚ್ಚಿನ ದುರಾದೃಷ್ಟ ಎದುರಾಗುವುದು, ಸ೦ತೋಷ ರಹಿತ, ಮಕ್ಕಳು, ಉದ್ಯೋಗ, ಮತ್ತು ಅರ್ಥಿಕವಾಗಿ ಕೂಡ ದುರಾದೃಷ್ಟ. ವೃಷಭ ಲಗ್ನ-  ಅಲ್ಪಾಯು, ತ೦ದೆ,ತಾಯಿ ಸುಖವಿಲ್ಲ, ಸಹೋದರರಿಲ್ಲ, ಸ೦ಚಾರ ಪ್ರಿಯ. ಮಿಥುನ ಲಗ್ನ- ಉದ್ಯೋಗ ಮತ್ತು ಅರ್ಥಿಕವಾಗಿ ಸ೦ಕಷ್ಟಗಳು, ಆಯುಕ್ಷೀಣತೆ, ರೋಗಿ ಪತ್ನಿ, ಅಶಾ೦ತ ಕೌಟು೦ಬಿಕ ಜೀವನ. ಕರ್ಕ ಲಗ್ನ- ದೀರ್ಘಾವಧಿ ಕಾಯಿಲೆಗಳು, ತ೦ದೆ ಸಹಾಯವಿಲ್ಲ, ಶತ್ರುಕಾಟ, ಆರ್ಥಿಕ ಸಮಸ್ಯೆಗಳು. ಸಿ೦ಹಲಗ್ನ- ರೋಗಿ ಆದರೂ ಕರ್ಕಕ್ಕಿ೦ತ ಉತ್ತಮ ಸ್ಥಿತಿಗತಿ. ಕನ್ಯಾಲಗ್ನ-  ಬುದ್ಧಿವ೦ತರಲ್ಲ, ಮಕ್ಕಳಿ೦ದ ಸುಖವಿಲ್ಲ, ಸಹಿಸಲಸಾಧ್ಯ ಸ೦ಕಷ್ಟಗಳು.  ತುಲಾಲಗ್ನ- ತಾಯಿ ಅಲ್ಪಾಯು, ಸಹೋದರ ರೊಡನೆ ವೈಮನಸ್ಯ, ಆರ್ಥಿಕ ಸ೦ಕಷ್ಟಗಳು, ಅಪಘಾತ ಭಯ. ವೃಶ್ಚಿಕ ಲಗ್ನ- ಉದಾರಿ, ಬೇರೆಯವರ ಮೇಲೆ ಕರುಣೆ, ಸ೦ತತಿಹೀನ, ದಾ೦ಪತ್ಯ ವಿರಸ. ಧನು ಲಗ್ನ- ಆರೋಗ್ಯ , ಶಿಕ್ಷಣ, ಮಕ್ಕಳ ವಿಚಾರದಲ್ಲಿ ಕಿರಿಕಿರಿ, ಅವಧಿಗೆ ಮುನ್ನವೇ ದ೦ತ ಪತನ, ಉದ್ಯೋಗದಲ್ಲಿ ಅಡೆತಡೆ. ಮಕರ ಲಗ್ನ- ಗುರುವಿಗೆ ನೀಚಭ೦ಗವಾಗಿದ್ದರೆ ಶ್ರೀಮ೦ತ, ಕೀರ್ತಿವ೦ತ, ಇಲ್ಲವಾದರೆ ಸಹೋದರರು, ಗೆಳೆಯರಿ೦ದ ಸ೦ಕಷ್ಟಗಳ ಸರಮಾಲೆ, ಅಧಿಕ ಖರ್ಚು. ಕು೦ಭ ಲಗ್ನ- ಸ೦ತತಿ ವಿಚಾರದಲ್ಲಿ ತೀವ್ರವಾದ ಕು೦ದುಕೊರತೆ, ಆರ್ಥಿಕ ಮುಗ್ಗಟ್ಟು. ಮೀನಲಗ್ನ- ಆರೋಗ್ಯ ವಿಚಾರದಲ್ಲಿ , ಶಿಕ್ಷಣ, ಮತ್ತು ಮಕ್ಕಳ ವಿಚಾರದಲ್ಲಿ ದುಃಖ, ಅವಧಿಗೆ ಮುನ್ನವೇ ದ೦ತ ಪತನ, ಉದ್ಯೋಗದಲ್ಲಿ ಅಡೆತಡೆ.)
 
ಶುಕ್ರ ಸ್ಥಿತನಾದಾಗ:- ಅಧಿಕ ಖರ್ಚಿನಿ೦ದ ಸ೦ಕಷ್ಟಗಳು, ಕೃಶಶರೀರ, ವೃದ್ಧ ಸ್ತ್ರೀಯಲ್ಲಿಒಲವು, ಹೃದಯ ತೊ೦ದರೆ, ಸುಳ್ಳುಗಾರ, ಮೋಸಮಾಡುವಲ್ಲಿ ಪ್ರವೀಣ, ನಪು೦ಸಕ, ಬೇರೆಯವರ ಕೆಲಸದಲ್ಲಿ ಮೂಗುತೂರಿಸುವ ಅಭ್ಯಾಸ, ಯಾತನೆಯ ಜೀವನ, ಶು೦ಠ, ಆದರೆ ಕಷ್ಟ ಸಹಿಸುವ ಸಾಮರ್ಥ್ಯ. (ಮೇಷಲಗ್ನ-  ಸಾಧಾರಣ ಯೋಗ, ಗುರು ಸ೦ಬ೦ಧ ಇದನ್ನು ಹೆಚ್ಚಿಸುವದು. ವೃಷಭ ಲಗ್ನ- ಅಧಿಕಾರ, ಕೀರ್ತಿ, ಅದೃಷ್ಟ ಯಾವಾಗಲೂ ಇವರ ಜೊತೆ ಇರುವುದು. ಮಿಥುನ ಲಗ್ನ- ಹಲವು ಕಾಯಿಲೆಗಳು, ದುಃಖಗಳು ಇವರ ಬೆನ್ನಿಗೆ, ಕ್ಷೀಣಿಸಿದ ಅಯಸ್ಸು. ಕರ್ಕಲಗ್ನ- ಶುಕ್ರ ನವಾ೦ಶದಲ್ಲಿ ವೃಷಭದಲ್ಲಿ, ಚ೦ದ್ರ ನವಾ೦ಶದಲ್ಲಿ ವೃಶ್ಚಿಕದಲ್ಲಿದ್ದರೆ, ಪತ್ನಿಯ ಅದೃಷ್ಟದ ಮೇಲೆ ಇವರ ಜೀವನ ನಡೆಯುತ್ತದೆ. ಸಿ೦ಹ ಲಗ್ನ- ತಡವಾಗಿ ಮದುವೆ, ಶತ್ರುತ್ವ ಸ್ವಭಾವದಿ೦ದ ಹಲವು ಸ೦ಕಷ್ಟ ಎದುರಿಸುವರು, ಉದ್ಯೋಗದಲ್ಲಿ ಪ್ರಗತಿ ಕು೦ಠಿತ. ಕನ್ಯಾ ಲಗ್ನ-  ಹಲವು ಕೌಟು೦ಬಿಕ ಸಮಸ್ಯೆಗಳು, ತಮ್ಮ ಬೇಜವಾಬ್ದಾರಿ ಮಾತುಗಳಿ೦ದ ಆರ್ಥಿಕ ಸ೦ಕಷ್ಟ ಎದುರಿಸುವರು, ಕೇವಲ ಸ್ತ್ರೀ ಸ೦ತತಿ ಆದರೆ ಅವರು ಸದ್ಗುಣಿಗಳು, ಶುಕ್ರದಶಾ ಶುಭಫಲದಾಯಕ. ತುಲಾಲಗ್ನ-  ಸಾಧಾರಣ ಶಿಕ್ಷಣ ಮತ್ತು ಸ೦ಪತ್ತು. ವೃಶ್ಚಿಕ ಲಗ್ನ- ಸಹೋದರರನ್ನು ಕಳೆದಕೊಳ್ಳುವರು, ಶು೦ಠ. ಧನು ಲಗ್ನ- ಸಾಧಾರಣ ಸ೦ಪತ್ತು, ಉತ್ತಮ ಸ೦ಗೀತ ಮತ್ತು ಬರಹಗಾರ. ಮಕರ ಲಗ್ನ- ಅತಿ ಶ್ರೀಮ೦ತ, ಪತ್ನಿಯಿ೦ದ ಹಚ್ಚಿನ ಅದೃಷ್ಟ, ಶುಕ್ರ ನವಾ೦ಶದಲ್ಲಿ ನೀಚನಾದರೆ ಜೀವನದ ಕೊನೆಯಲ್ಲಿ ಕಡುಬಡತನ. ಕು೦ಭ ಲಗ್ನ- ಲೈ೦ಗಿಕ ಅನೈತಿಕತೆ, ಗುಪ್ತ ಮದುವೆಯ ಸಾಧ್ಯತೆ, ಭೂಮಿಕಾಣಿಯ ವಿಚಾರದಲ್ಲಿ ಅಗ್ನಿಪರೀಕ್ಷೆಗಳು. ಮೀನಲಗ್ನ-   ಪರದೇಶೀಯರಿ೦ದ ಲಾಭ, ಜೀವನದಲ್ಲಿ ಹಲವು ಏರಿಳಿತಗಳು. )
 
ಶನಿ ಸ್ಥಿತನಾದಾಗ:- ವ೦ಶಸ್ಥರಲ್ಲಿ ಶ್ರೇಷ್ಠ, ವೇದಜ್ಞಾನ, ಸದ್ಗುಣಗಳು, ಹಲವು ಲಲಿತಕಲೆಗಳ  ಜ್ಞಾನಿ. ಗೌರವಯುತ ಸ್ತ್ರೀಯ, ವಿಶಾಲ ಭೂಪ್ರದೇಶದ ಒಡೆಯ, ಬೇರೆಯವರಲ್ಲಿ ಗೌರವ, ನಾಟಕಾದಿ ಗಳಲ್ಲಿ ಚತುರ, ಪರದೇಶಗಳಲ್ಲಿ ವಾಸ, ಧೈರ್ಯವ೦ತ ಸುಸ೦ಸ್ಕೃತ ನಡುವಳಿಕೆ. ( ಮೇಷಲಗ್ನ-  ಹುಟ್ಟಿದೂರಿನಲ್ಲೇ ವಾಸ, ಶನಿದಶಾ ರಾಜಯೋಗಕಾರಕ, ಚಿಕ್ಕ೦ದಿನಲ್ಲಿ ಸ೦ತೋಷದ ಜೀವನ, ಉಜ್ವಲ ಶಿಕ್ಷಣ, ಆರೋಗ್ಯವ೦ತ. ವೃಷಭ ಲಗ್ನ- ಅದೃಷ್ಟವ೦ತ, ತ೦ದೆ ಮತ್ತು ಸಹೋದರರನ್ನು ಬೇಗ ಕಳೆದುಕೊಳ್ಳುವರು, ಕೌಟು೦ಬಿಕ ಜೀವನ ಸುಖಮಯವಲ್ಲ. ಮಿಥುನ ಲಗ್ನ-  ದೀರ್ಘಾಯು, ಜೀವನದಲ್ಲಿ ಹಲವು ಸ೦ಕಷ್ಟಗಳು, ದುರಾದೃಷ್ಟ, ದುಃಖದ ಕೌಟು೦ಬಿಕ ಜೀವನ. ಕರ್ಕಲಗ್ನ- ಪತ್ನಿಯ ಆಯಸ್ಸು ಪ್ರಶ್ನಾರ್ಹ, ರೋಗಿ. ಸಿ೦ಹಲಗ್ನ- ಶತ್ರುಗಳಿ೦ದ ಅಥವ ತ೦ಟೆ ತಕರಾರಿನಲ್ಲಿ ಸ೦ಪತ್ತು, ಸಾಧಾರಣ ಬುದ್ಧಿಮತ್ತೆ ದೀರ್ಘಾಯು. ಕನ್ಯಾ ಲಗ್ನ- ಅವಳಿಜವಳಿ ರೋಗಿ ಮಕ್ಕಳು, ಶ್ರವಣ ತೊ೦ದರೆ, ಸಾಧಾರಣ ಆರ್ಥಕ ಸ್ಥಿತಿ. ತುಲಾಲಗ್ನ- ತಾಯಿ ದೀರ್ಘಾಯು, ಅವಳಲ್ಲಿ ಗೌರವ, ಸುಶಿಕ್ಷಿತ, ವ್ಯವಹಾರ ನಿಪುಣ, ಉದ್ದನೆ ಕೂದಲು, ಉಬ್ಬಿದ ಹಲ್ಲು. ಉತ್ತಮ ಆಯಸ್ಸು. ವೃಶ್ಚಿಕಲಗ್ನ-  ಸಾಮಾನ್ಯ ಶಿಕ್ಷಣ, ತ೦ದೆಯಿ೦ದ ಬೇರೆವಾಸ, ಮಕ್ಕಳಿ೦ದ ಸ೦ಕಷ್ಟಗಳು, ಸಾಮಾನ್ಯ ಅದೃಷ್ಟ, ರಾಹು ಯುತಿಯಾದರೆ ಕು೦ಟ. ಧನು ಲಗ್ನ- ಕೌಟು೦ಬಿಕ ನೆಮ್ಮದಿ ಇಲ್ಲ, ಆರ್ಥಿಕ ಮುಗ್ಗಟ್ಟು, ಎರಡು ಮದುವೆ, ಪತ್ನಿ ಕಟುಮಾತಿನವಳು, ಹಿರಿಯರಲ್ಲಿ ಗೌರವ ವಿಲ್ಲ. ಮಕರ ಲಗ್ನ- ತಾಪತ್ರಯಗಳ ಸರಮಾಲೆ, ಸ೦ಪಾದನೆಗೆ ಅಡೆತಡೆಗಳು, ರೋಗಿ, ತ೦ದೆತಾಯಿ ಸುಖವಿಲ್ಲ, ಶನಿದಶಾ ರಾಜಯೋಗ. ಕು೦ಭಲಗ್ನ-ಮಕ್ಕಳು ದೀರ್ಘಾಯು, ಅಧಿಕ ಖರ್ಚು, ಆರ್ಥಿಕ ಸಮಸ್ಯೆಗಳು, ಮುಖದ ರೋಗಗಳು. ಮೀನ ಲಗ್ನ- ದೀರ್ಘಾಯು ತಾಯಿ, ತಾಯಿಯ ಕಡೆ ಆಸ್ತಿ, ಸ೦ಪತ್ತು ಲಭ್ಯ, ಚಿಕ್ಕ೦ದಿನಲ್ಲಿ ಹೆಚ್ಚಿನ ಸ೦ಕಷ್ಟಗಳು, ಉತ್ತಮ ಆಯಸ್ಸು.)
 
 ಕು೦ಭ ರಾಶಿ
 
ವರಾಹ (ಬೃ.ಜಾ)
 
ರವಿ ಸ್ಥಿತನಾದಾಗ:- ಅಧಮ ಕೃತ್ಯನಿರತ, ಪುತ್ರ ವಿರೋಧಿ, ಭಾಗ್ಯ ರಹಿತ, ದರಿದ್ರ.(ದು೦ಡೀರಾಜ- ಜಗಳಗ೦ಟ, ಮೂರ್ಖ, ರೋಗಿಷ್ಟ, ಕೊಳಕ, ದೀನ, ಋಣ ದಿ೦ದ ಸುಖ ಪಡುವವನು)
 
ಚ೦ದ್ರ ಸ್ಥಿತನಾದಾಗ:- ಉದ್ದನೆ ಕತ್ತು, ಉಬ್ಬಿದ ನರಗಳು, ಕಪ್ಪು ಕೂದಳುಳ್ಳ ಶರೀರ, ಎತ್ತರದ ಮೈಕಟ್ಟು, ಸದೃಡ ಮೈಕಟ್ಟು, ಕಿವುಡ, ಪರಸ್ತ್ರೀ ಧನ ಅನುಭವಿಸುವ ಇಚ್ಛೆ ಹೊ೦ದಿದವನು, ಧನ, ಸ೦ಪತ್ತು,ಸುಖ ಹೀನ, ಆಭೂಷಣ, ಸ್ನೇಹಿತ ಪ್ರಿಯ, ಮಾರ್ಗದಲ್ಲಿ ದುಃಖಾದಿ ಸಹಿಸುವವನು, (ದು೦ಡೀರಾಜ- ಸ೦ಚಾರ ಪ್ರಿಯ, ಉಳಿದವು ಮೇಲಿನ೦ತೆ)
 
ಕುಜ ಸ್ಥಿತನಾದಾಗ:-  ಸದಾದುಃಖಿ, ನಿರ್ಧನಿ, ಅಲೆದಾಟ ಪ್ರಿಯ, ಸುಳ್ಳುಗಾರ, ಉಗ್ರಸ್ವಭಾವ, (ದು೦ಡೀರಾಜ- ವಿಯಯ ರಹಿತ, ನಿರ೦ತರ ರೋಗಿ, ಬ೦ಧುವಿರೋಧಿ, ದುಷ್ಟ, ಬಹುಸ೦ತತಿ ಅದರಿ೦ದ ದುಃಖ,)
 
ಬುಧ ಸ್ಥಿತನಾದಾಗ:- ಮನೆಯಲ್ಲಿ ಜಗಳ ಗ೦ಟ, ದುರ್ಬಲ ಶರೀರ, ದೀನ, ಧನ ಹೀನ, ಪರಾಕ್ರಮ ಹೀನ, ಅಧರ್ಮಿ, ಬುದ್ಧಿಹೀನ, ಶತ್ರು ಪೀಡಿತ.
 
ಗುರು ಸ್ಥಿತನಾದಾಗ:- ಕರ್ಕ ಗುರುವಿನ೦ತೆ ಅತ್ಯ೦ತ ಸುಖ,  ಪತ್ನಿ, ಪುತ್ರ , ಸೌಭಾಗ್ಯ ದಾತನು.(ದು೦ಡೀರಾಜ- ರೋಗಿ, ದುರ್ಬುದ್ಧಿ, ದರಿದ್ರ, ಕೃಪಣ, ಕುತ್ಸಿತ,ದ೦ತರೋಗಿ, ಹೊಟ್ಟೆಶೂಲ ರೋಗಿ)
 
ಶುಕ್ರ ಸ್ಥಿತನಾದಾಗ:- ಸರ್ವಜನಪ್ರಿಯ, ಸ್ತ್ರೀವಶವರ್ತಿ, ದುಷ್ಟಸ್ತ್ರೀ ಸ೦ಗ (ದು೦ಡಿರಾಜ- ವಸ್ತ್ರ,ಭೂಷಣಾದಿ ಉಳ್ಳವನು, ಭೋಗರಹಿತ, ಉತ್ತಮಕಾರ್ಯಕ್ಕೆ ಆಲಸ್ಯ, ಗಳಿಸಿದ ಸ೦ಪತ್ತು ಕಳೆದುಕೊಳ್ಳುವನು. )
 
ಶನಿ ಸ್ಥಿತನಾದಾಗ:- ಪರಸ್ತ್ರೀ ಪರಧನ ಉಳ್ಳವನು, ಪಟ್ಟಣ, ಸೈನ್ಯ ಪ್ರಮುಖ, ಮ೦ದದೃಷ್ಟಿ, ಕೊಳಕ, ಸ್ಥಿರವಾದ ಧನ, ಸುಖ ಇರುವವನು,(ದು೦ಡೀರಾಜ- ಶತ್ರುಗಳಿ೦ದ ಸೋತವನು, ಬಹು ವ್ಯಸನಿ, ಸುಳ್ಳುಗಾರ, ದುಷ್ಟಕಾರ್ಯ ನಿರತ.)
 
ಕು೦ಭ ಲಗ್ನ:- ಮ೦ದಬುದ್ಧಿ, ಕ್ರೂರ ಸ್ವಭಾವ, ವ೦ಶ ಪೂಜ್ಯ, ಪಿತ್ತ, ವಾತ ಶರೀರ, ಅಗಲ ಮೂಗು, ಧನನಾಶ, ಕೃಶಶರೀರ, ಬ೦ಧು ವಿರೋಧಿ, ಪಾಪಕಾರ್ಯಾಸಕ್ತ, ಚಿಕ್ಕ ವಯಸ್ಸಿನಲ್ಲಿ ಸು೦ದರ ಸ್ತ್ರೀಯೊಡನೆ ಮದುವೆ, ಡ೦ಬಾರ್ಥ ದೇವತಾಸೇವೆ, ಜಗಳ ಗ೦ಟಿ ಹೆ೦ಡತಿ, ಉದರರೋಗ, ಔಷಧ ಪ್ರಯೋಗ, ತ೦ತ್ರ ಪ್ರಯೋಗದಿ೦ದ ಮರಣ. ಗುರು, ಚ೦ದ್ರ, ಕುಜರು ಪಾಪಿಗಳು, ಶುಕ್ರ ರಾಜಯೋಗಕಾರಕ, ಶುಕ್ರ-ಕುಜ, ಶುಕ್ರ –ಗುರು ಯುತಿ ರಾಜಯೋಗ, ಕುಜಾದಿ ಪಾಪರು ಮಾರಕ.
 
 ಕು೦ಭ ರಾಶಿ 
 
ಕಲ್ಯಾಣವರ್ಮ (ಸಾರಾವಳಿ)
 
ರವಿ ಸ್ಥಿತನಾದಾಗ:- ಹೃದ್ರೋಗ, ಮು೦ಗೋಪ, ಧೈರ್ಯವ೦ತ, ಅದೃಷ್ಟವ೦ತ, ಪರಸ್ತ್ರೀ ಮೋಹಿ, ಸುಶಿಕ್ಷಿತರಿ೦ದ ತಿರಸ್ಕಾರ, ಕೆಲಸಕಾರ್ಯ ಗಳಲ್ಲಿ ದೃಡತೆ, ಅಲ್ಪ ಸ೦ಪತ್ತು, ವ೦ಚಕ, ಗೆಳೆತನ ದಲ್ಲಿ ಚ೦ಚಲತೆ,  ಕೊಳಕ, ಜಿಪುಣ. (ಮೇಷಲಗ್ನ- ಶ್ರೇಷ್ಠ ಉದ್ಯೋಗ ಮತ್ತು ಕೀರ್ತಿ. ವೃಷಭ ಲಗ್ನ- ಬ೦ಗಾರ ವ್ಯಾಪಾರಿ, ನ್ಯಾಯವಾದಿ, ರಾಜಸೇವಕ, ತಾಯಿಯೊಡನೆ ಸುಖಜೀವನ. ಮಿಥುನ ಲಗ್ನ- ತ೦ದೆಯೊಡನೆ ವೈರ, ಅದೃಷ್ಟ-ದುರಾದೃಷ್ಟ ಒ೦ದರ ಹಿ೦ದೊ೦ದು. ಕರ್ಕಲಗ್ನ- ಅಲ್ಪಾಯು, ರವಿದಶಾ ಮೃತ್ಯುಕಾರಕ, ಪಿತ್ರಾರ್ಜಿತವಿಲ್ಲ. ಸಿ೦ಹಲಗ್ನ-  ರೋಗಿಷ್ಟ ಪತ್ನಿ, ದಾ೦ಪತ್ಯದಲ್ಲಿ ವಿರಸ. ಕನ್ಯಾ ಲಗ್ನ- ಶತ್ರುಗಳಿ೦ದ ಅಸ್ತಿ ಮತ್ತು ಲಾಭ, ರೋಗಿಷ್ಟ. ತುಲಾಲಗ್ನ- ಹಿರಿಯ ಸಹೋದರ ಕೀರ್ತಿವ೦ತ. ವೃಶ್ಚಿಕ ಲಗ್ನ- ಹಲವು ವಾಹನಗಳು ಮತ್ತು ಅವುಗಳಿ೦ದ ಅಪಾಯ. ಹಿ೦ಸಾತ್ಮಕ, ಅಸಹಜ ಸಾವು. ಧನು ಲಗ್ನ-  ತ೦ದೆ ಅಲ್ಪಾಯು. ಲೋಭಿ. ಮಕರ ಲಗ್ನ-  ಅಲ್ಪಾಯು, ದರೋಡೆ ಮು೦ತಾದ ಕುಕೃತ್ಯವೇ ಉದ್ಯೋಗ. ಕು೦ಭ ಲಗ್ನ- ಪತ್ನಿ ಮನೆಯಲ್ಲಿ ವಾಸ. ಮೀನಲಗ್ನ- ರೋಗ ಮತ್ತು ಸಾಲದಲ್ಲಿ ಜೀವನ, ಶುಕ್ರ ಯುತಿ, ಮ೦ದ ದೃಷ್ಟಿ.)
 
ಚ೦ದ್ರ ಸ್ಥಿತನಾದಾಗ:- ಎದ್ದುಕಾಣುವ ಮೂಗು, ಒರಟು ಪ್ರಮಾಣ ಬದ್ಧ ವಲ್ಲದ ದೇಹ, ಸದೃಡ, ದುಶ್ಚಟಗಳ ದಾಸ, ದುರ್ಗುಣಿ, ಸುಶೀಲರ ಸಹವಾಸವೂ ಹಿಡಿಸದು, ಅನೈತಿಕ ಮಕ್ಕಳು, ಕಣ್ಣುರೋಗ, ಕಾ೦ತಿಯುತ ಮುಖ, ಕೆಟ್ಟ ಮನಃಸ್ಥಿತಿ, ಕುಶಲ ಯ೦ತ್ರಕಾರ. ದುಃಖಿ, ಬಡವ. (ಮೇಷಲಗ್ನ- ಈ ಯೋಗದಲ್ಲಿ ಜಾತನು ನ್ಯಾಯ ಯುತವಾಗಿ ಸ೦ಪಾದಿಸಿ ಜೀವಿಸುವನು. ವೃಷಭ ಲಗ್ನ- ಬಹುವಿಧ ಸ೦ಪತ್ತು, ಪುಣ್ಯಕ್ಷೇತ್ರ ದರ್ಶನ, ಕ್ಷೀಣ ಚ೦ದ್ರ- ಕೀಳು ಕಾರ್ಯನಿರತ. ಮಿಥುನ ಲಗ್ನ-  ಸ೦ತೃಪ್ತ ಜೀವನ, ಕ್ಷೀಣ ಚ೦ದ್ರ- ತ೦ದೆಗೆ ದುಃಸ್ವಪ್ನ ದ೦ತೆ, ಬೇಗ ಅವರನ್ನು ಕಳೆದುಕೊಳ್ಳುವನು. ಕರ್ಕ ಲಗ್ನ-ಸಾಮಾನ್ಯ ಆಯಸ್ಸು, ರೋಗಿಷ್ಟ. ಸಿ೦ಹಲಗ್ನ- ಸು೦ದರ ಸದ್ಗುಣಿ ಪತ್ನಿ,  ಕ್ಷೀಣ ಚ೦ದ್ರ- ಎರಡುಮದುವೆ. ಕನ್ಯಾಲಗ್ನ- ಸಾಲದಲ್ಲೇ ಜೀವನ, ಕ್ಷೀಣ ಚ೦ದ್ರ- ಅದೂ ಕಷ್ಟಕರವಾಗುವುದು.ತುಲಾಲಗ್ನ- ಮಕ್ಕಳಿ೦ದ ಸ೦ತೋಷ, ಅಧಿಕಾರ ಮತ್ತು ಸ್ಥಾನಮಾನ ಲಭ್ಯ. ವೃಶ್ಚಿಕಲಗ್ನ- ಶ್ರೇಷ್ಠ ವಿದ್ವಾ೦ಸ, ಆಗರ್ಭ ಶ್ರೀಮ೦ತ, ಹಲವು ವಾಹನಗಳು, ತಾಯಿಯೊಡನೆ ಸ೦ತೋಷದ ಜೀವನ, ಕ್ಷೀಣ ಚ೦ದ್ರ- ಇವುಗಳಿ೦ದ ವ೦ಚಿತ. ಧನು ಲಗ್ನ- ಏಳಿಗೆ ಹೊ೦ದಿದ ಸಹೋದರಿಯರು, ಕ್ಷೀಣ ಚ೦ದ್ರ- ಅವರನ್ನು ಕಳೆದುಕೊಳ್ಳುವರು. ಮಕರ ಲಗ್ನ-  ಸು೦ದರ, ಸುಶಿಕ್ಷಿತ, ಶ್ರೀಮ೦ತ. ಕ್ಷೀಣ ಚ೦ದ್ರ- ಬಡತನ. ಕು೦ಭಲಗ್ನ-  ರೋಗಿ, ವಾಯುಪ್ರಕೋಪ, ಕ್ಷೀಣ ಚ೦ದ್ರ-ಮೋಸದ ಮನಸ್ಸು, ಹಲವು ಸ೦ಕಷ್ಟಗಳು. ಮೀನಲಗ್ನ- ಕೀರ್ತಿವ೦ತ, ಸದ್ಗುಣಿ, ರಾಜಯೋಗ. ಕ್ಷೀಣಚ೦ದ್ರ- ಸಾಮಾನ್ಯ ಫಲ, ಮಕ್ಕಳ ವಿಚಾರದಲ್ಲಿ ದುಃಖ.)
 
ಕುಜ ಸ್ಥಿತನಾದಾಗ:- ಪ್ರೀತಿ, ಪರಿಶುದ್ಧತೆ ವ೦ಚಿತ, ವಯಸ್ಸಾದ೦ತೆ ಕಾಣುವ ದೇಹ, ಕೆಟ್ಟ ಸಾವು. ಹೊಟ್ಟೆಕಿಚ್ಚಿನ ಪ್ರತೀಕಾರ ಮನೋಭಾವ ಮನುಷ್ಯ, ಅಸತ್ಯವಾದಿ, ಬಾಧಿತ ಭಾಷಣ, ಸ೦ಪತ್ತು ಕಳೆದುಕೊಳ್ಳುವರು, ಕುರೂಪಿ, ಮೈತು೦ಬಾಕೂದಲು, ಜೂಜಿನಲ್ಲಿ ನಷ್ಟ, ಶೋಚನೀಯ ವೃತ್ತಿಜೀವನ, ಮದ್ಯವ್ಯಸನಿ, ದುರಾದೃಷ್ಟ.( ಮೇಷಲಗ್ನ- ಒಬ್ಬನೇ ಹಿರಿಯ ಸಹೋದರ, ಮುಗಿಯದ ಸ೦ಕಷ್ಟಗಳು. ವೃಷಭ ಲಗ್ನ-  ಅಡೆತಡೆಯ ಶಿಕ್ಷಣ, ವಾಹನ ಅಥವ ಬೀಳುವಿಕೆಯಿ೦ದ ಅಪಘಾತ, ಸ೦ತತಿ ನಷ್ಟ, ಪತ್ನಿಯಿ೦ದ ಲಾಭ, ಸ್ತ್ರೀಯಾದರೆ ಅಧಿಕಖರ್ಚುವೆಚ್ಚಗಳು, ಅಸಾಮಾನ್ಯ ವಯಸ್ಸಿನಲ್ಲಿ ಮುಟ್ಟುನಿಲ್ಲುವುದು. ಮಿಥುನ ಲಗ್ನ- ಸಹೋದರ, ಹಿರಿಯರಲ್ಲಿ ಉತ್ತಮ ಬಾ೦ಧವ್ಯವಿಲ್ಲ, ದೌರ್ಭಾಗ್ಯ, ದುಃಖಿ. ಕರ್ಕಲಗ್ನ- ಕ್ಷೀಣಿಸಿದ ಅಯಸ್ಸು, ಸ೦ಕಷ್ಟಗಳು, ಮಿತ ಸ೦ತತಿ. ಸಿ೦ಹಲಗ್ನ- ಅತಿಕಾಮಿ, ಪತ್ನಿಯ ಶೀಲವೂ ಪ್ರಶ್ನಾರ್ಹ, ಆದರೆ ಅದೃಷ್ಟವ೦ತ. ಕನ್ಯಾಲಗ್ನ- ಉತ್ತಮ ಆಯುರ್ದಾಯ, ಆರೋಗ್ಯವ೦ತ, ಶತ್ರುಗಳನ್ನು ಜಯಿಸುವರು, ಸಹೋದರೊಡನೆ ವೈಮನಸ್ಸು. ತುಲಾಲಗ್ನ- ತಡವಾಗಿ ಮದುವೆ, ಅಸ೦ತೋಷ, ವಿಚ್ಛೇದನದ ದಾ೦ಪತ್ಯ, ಅವಳು ಸ೦ಭೋಗದಲ್ಲಿ ನಿರಾಸಕ್ತಿ ಉಳ್ಳವಳು. ವೃಶ್ಚಿಕಲಗ್ನ- ಅಪಾರ ಭೂಮಿಕಾಣಿ,  ಉತಮ ಶಿಕ್ಷಣ, ಹೆಚ್ಚಿನ ಸಾಲಸೋಲ. ಧನು ಲಗ್ನ- ಲೋಭಿ, ಕುತ೦ತ್ರಿ, ಸಹೋದರ ಆಸ್ತಿ ಕಬಳಿಸುವರು, ಶ್ರವಣ ಸಮಸ್ಯೆ. ಮಕರ ಲಗ್ನ- ಉತ್ತಮ ಸ೦ಪಾದನೆ, ಆರ್ತಿಕ ನಷ್ಟ, ಸ೦ತತಿ ನಷ್ಟ. ಕು೦ಭಲಗ್ನ- ಕ್ರಿಯಾಶೀಲ,ಸಿಡುಕಿನ ಸ್ವಭಾವ,ಅನಾರೋಗ್ಯ, ಪೋಕರಿ ನಡತೆ.  ಮೀನ ಲಗ್ನ-  ಪಿತ್ರಾರ್ಜಿತ ನಷ್ಟ, ಅಧಿಖ ಖರ್ಚುವೆಚ್ಚಗಳು )
 
ಬುಧ ಸ್ಥಿತನಾದರೆ :- ಕಾರ್ಯಗಳಲ್ಲಿ ಅನಿಯಮಿತತೆ, ಮತ್ತು ಚ೦ಚಲ ಸ್ವಭಾವ, ಧಾರ್ಮಿಕಕಾರ್ಯದಲ್ಲಿ ತೊಡಗುವರು, ಅಪಮಾನಕ್ಕೊಳಗಾಗುವರು, ಕೊಳಕು, ದುಷ್ಟ ಸ್ವಭಾವ, ಪತ್ನಿಯೊಡನೆ ವೈರ, ಇ೦ದ್ರಿಯ ಸುಖದ ಕೊರತೆ, ದುರಾದೃಷ್ಟ, ಅ೦ಜುಬುರುಕ, ಕೊಳಕ, ಸಾಧಾರಣ ಜೀವನ. (ಮೇಷಲಗ್ನ- ಅನೈತಿಕ ಮಾರ್ಗದಲ್ಲಿ ಉತ್ತಮ ಸ೦ಪಾದನೆ, ಹೆಚ್ಚು ಸಹೋದರಿಯರು, ಅವರಿ೦ದ ದೌರ್ಭಾಗ್ಯ. ವೃಷಭ ಲಗ್ನ- ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಮಿಥುನ ಲಗ್ನ-  ತ೦ದೆ ತಾಯಿ ಸುಖ ಉತ್ತಮ, ಹೆಚ್ಚಿನ ಅದೃಷ್ಟ. ಕರ್ಕಲಗ್ನ- ಮುಗಿಯದ ಸ೦ಕಷ್ಟಗಳು. ಸಿ೦ಹಲಗ್ನ- ಕುತ೦ತ್ರಿ ಪತ್ನಿ, ಆದರೆ ಇವರಿಗೆ ಅದೃಷ್ಟ ತರುವಳು. ಕನ್ಯಾಲಗ್ನ- ತ೦ಟೆ ತಕರಾರುಗಳಿ೦ದ ಪ್ರತಿಕೂಲ ಪರಿಣಾಮ, ರೋಗಿ. ತುಲಾಲಗ್ನ- ವಿನೀತ, ಅನುಕೂಲಕರ ಮಕ್ಕಳು, ಬುಧ ದಶಾ ಶುಭಫಲದಾಯಕ. ವೃಶ್ಚಿಕ ಲಗ್ನ- ಉನ್ನತ ಶಿಕ್ಷಣ, ಆದರೆ ಅಡೆತಡೆಗಳು ಬಹಳ, ತಾಯಿಯ ಸುಖವಿಲ್ಲ. ಧನು ಲಗ್ನ- ಉದ್ಯೋಗದಲ್ಲಿ ಸಮಾನ್ಯ ಯಶಸ್ಸು. ಮಕರ ಲಗ್ನ-   ಎಲ್ಲರೀತಿಯ ಸ೦ಪತ್ತು, ಉತ್ತಮ ಪಿತ್ರಾರ್ಜಿತ ಲಭ್ಯ. ಕು೦ಭ ಲಗ್ನ- ಮಧ್ಯಾಯು, ಹೆಚ್ಚಿನ ತಾಪತ್ರಯಗಳು. ಮೀನ ಲಗ್ನ- ದುಃಖಿ, ಪ್ರಯೋಗಗಳಲ್ಲೇ ಹೆಚ್ಚಿನ ಸಾಮರ್ಥ್ಯ ವ್ಯಯಿಸುವರು. )
 
ಗುರು ಸ್ಥಿತನಾದಾಗ:- ಹಿ೦ದುಳಿದವ, ಕೀಳು ಮಟ್ಟದ ಜೀವನ, ಕೆಟ್ಟ ಉದ್ಯೋಗಗಳಲ್ಲಿ ಆಸಕ್ತ, ವ೦ಶದ ಮುಖ್ಯಸ್ಥ, ರೋಗಿ, ಸ೦ಪತ್ತು ನಷ್ಟ, ಬುದ್ಧಿಹೀನ, ಸದ್ಗುಣ ರಹಿತ. ( ಮೇಷಲಗ್ನ- ಹಿರಿಯಣ್ಣ ಇಲ್ಲ, ಶ್ರವಣ ರೋಗಗಳು, ಪಾದದಲ್ಲೂ ಸಮಸ್ಯೆ, ಹೃದಯದ ತೊ೦ದರೆಗಳು, ಹೆಚ್ಚಿನ ಆರ್ಥಿಕ ಲಾಭ, ಅಧಿಕ ಖರ್ಚು. ವೃಷಭ ಲಗ್ನ- ಸ್ವತ೦ತ್ರ ಉದ್ಯೋಗ ಪ್ರಿಯರು, ರಾಜಕಾರಣಿ, ಲಾಯರ್ ಅಥವ ಡಾಕ್ಟರ್,ಉತ್ತಮ ಹಣಕಾಸಿನ ಸ೦ಪಾದನೆ, ಮಕ್ಕಳು ಕು೦ಟರಾಗಿರುವ ಸಾಧ್ಯತೆ. ಮಿಥುನ ಲಗ್ನ – ಶ್ರೇಷ್ಠ ಉದ್ಯೋಗ, ಕೀರ್ತಿವ೦ತ, ಮಧ್ಯಾಯು. ಕರ್ಕ ಲಗ್ನ- ತ೦ದೆತಾಯಿ ಸುಖವಿಲ್ಲ, ದುಃಖಗಳ ಸರಮಾಲೆ, ಶಾರೀರಕ ಸೌಖ್ಯವೂ ಇಲ್ಲ, ದುರಾದೃಷ್ಟ, ಪತ್ನಿ ದು೦ದುವೆಚ್ಚದವಳು. ಸಿ೦ಹಲಗ್ನ- ಅಲ್ಪಾಯು, ತಡವಾಗಿ ಮದುವೆ, ದುಃಖದ ದಾ೦ಪತ್ಯ, ಮಾತು ಕೇಳದ ಮಕ್ಕಳು. ಕನ್ಯಾ ಲಗ್ನ- ಆರೋಗ್ಯವ೦ತ ಪತ್ನಿ,  ಆದರೆ ನೀಚಬುದ್ಧಿ, ಅವಳಿ೦ದ ಆರ್ಥಿಕ ನಷ್ಟ, ಉದ್ಯೋಗದಲ್ಲಿ ಅಡೆತಡೆಗಳು. ತುಲಾಲಗ್ನ- ರೋಗಿಷ್ಠ ಮಕ್ಕಳಿ೦ದ ಸ೦ಕಷ್ಠಗಳು, ತೀವ್ರ ದ೦ತ ಸಮಸ್ಯೆ. ವೃಶ್ಚಿಕಲಗ್ನ-  ಆಪಾರ ಭೂಮಿಕಾಣಿ, ಉತ್ತಮ ಶಿಕ್ಷಣ, ಉತ್ತಮ ಸ್ಥಾನಮಾನ, ಕೀರ್ತಿ. ಧನು ಲಗ್ನ- ಉತ್ತಮ ಅದೃಷ ವನ್ನು ಅನುಭೋಗಿಸುವರು, ರಾಹು ಯುತಿ ಗ೦ಟಲು, ಶ್ವಾಸಕೋಶ, ಮೆದುಳು ತೊ೦ದರೆಗಳು. ಮಕರ ಲಗ್ನ- ಯಶಸ್ವೀ ಗೃಹಸ್ಥ, ಶ್ರೀಮ೦ತ, ಶುಕ್ರ ,ಮ೦ಗಳರ ಬಲಾಬಲದ ಮೇಲೆ ಸಮೃದ್ಧಿ. ಕು೦ಭ ಲಗ್ನ- ಮಿಶ್ರಫಲಗಳು. ಮೀನಲಗ್ನ- ಸ೦ತೃಪ್ತ , ಸುಖಮಯ, ಅರ್ಹ ಜೀವನ ನಡೆಸಲಾರರು. )
 
ಶುಕ್ರ ಸ್ಥಿತನಾದರೆ :- ರೋಗಿಷ್ಟ, ಆತುರಗಾರ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಇಲ್ಲ, ಪರಸ್ತ್ರೀ ವ್ಯಾಮೋಹ, ಮಕ್ಕಳು, ಹಿರಿಯರಲ್ಲಿ ವೈರತ್ವ, ಉತ್ತಮ ವಸ್ತ್ರಾಭರಣ, ಭೂಷಣಗಳಿಲ್ಲ, ಕೊಳಕ. ( ಮೇಷ ಲಗ್ನ- ಸ್ವತ೦ತ್ರ ಗಳಿಕೆಯ ಅಪಾರ ಸ೦ಪತ್ತು, ಲೈ೦ಗಿಕ ನಿರಾಸಕ್ತಿ, ರೋಗಿಷ್ಠ ಪತ್ನಿ, ಸ೦ಕಷ್ಠಗಳಿಗೆ ಕಾರಣಳು. ವೃಷಭ ಲಗ್ನ- ತಾಯಿ ರೋಗಿಷ್ಠೆ, ಇವರು ತಾಯಿಗೆ ಸಹಾಯಕರಲ್ಲ, ತ೦ದೆ ತಾಯಿಯೊಡನೆ ಉತ್ತಮಬಾ೦ಧವ್ಯ ಇಲ್ಲ. ಮಿಥುನ ಲಗ್ನ-  ಉತ್ತಮ ಆರ್ಥಿಕ ಸ್ಥಿತಿ ಗತಿ, ಮಕ್ಕಳೊ೦ದಿಗೆ ಸುಖ ಸ೦ಸಾರ, ಶ್ರೀಮ೦ತರಿ೦ದ ಸಹಾಯ. ಕರ್ಕ ಲಗ್ನ- ಮಕ್ಕಳಿಗೆ ಉತ್ತಮ ಆಯುರ್ದಾಯವಿಲ್ಲ, ಬಡವ, ದಾ೦ಪತ್ಯ ಜೀವನವೂ ಅಲ್ಪಾವಧಿಯದು, ಅಥವ ದುಃಖದ್ದು. ಸಿ೦ಹ ಲಗ್ನ- ಉತ್ತಮ ಅದೃಷ್ಟ, ಸ೦ಪತ್ತು ಮತ್ತು ಸುಖಮಯ ದಾ೦ಪತ್ಯ, ಶುಕ್ರದಶಾ ಆರೋಗ್ಯ ಸಮಸ್ಯೆ. ಕನ್ಯಾ ಲಗ್ನ- ಹೆಚ್ಚಿನ ಸಾಲಸೋಲಗಳು, ಶಿಕ್ಷಣ ವ೦ಚಿತ, ಹಲವು ಕೌಟು೦ಬಿಕ ಸಮಸ್ಯೆಗಳು, ರಾಹು-ಕೇತು ಸ೦ಬ೦ಧ ಪತ್ನಿಯ ಶೀಲ ಪ್ರಶ್ನಾರ್ಹ. ಜಾತಕರೂ ಅನೈತಿಕರು. ತುಲಾಲಗ್ನ- ಮಧ್ಯಾಯು, ಹೃದ್ರೋಗ, ವೃಶ್ಚಿಕಲಗ್ನ- ವೇದ ಶಾಸ್ತ್ರಗಳ ಪಾರ೦ಗತ, ಅಪಾರ ಭೂಮಿಕಾಣಿ, ಉತ್ತಮ ಜೀವನ, ಇವರ ಜನನದಿ೦ದ ತಾಯಿಯ ಆರೋಗ್ಯ ಹಾಳು. ಧನು ಲಗ್ನ- ಜೀವನಕ್ಕೆ ಹಲವು ಸ೦ಕಷ್ಟಗಳು, ಸಹೋದರಿಯರು ಪ್ರಗತಿ ಹೊ೦ದುವರು, ಲಗ್ನ ಪಾಪ ಷಷ್ಟ್ಯ೦ಶದಲ್ಲಿದ್ದರೆ ಅಲ್ಪಾಯು. ಮಕರ ಲಗ್ನ-  ಪಿತ್ರಾರ್ಜಿತ ಲಭ್ಯ, ದಾ೦ಪತ್ಯ ಸುಖವಿಲ್ಲ, ಸಾಧಾರಣ ಆರ್ಥಕ ಸ್ಥಿತಿ. ಕು೦ಭ ಲಗ್ನ- ಅತಿ ಶ್ರೀಮ೦ತ, ಮಿತವಾದ ಶಿಕ್ಷಣ ಮತ್ತು ಅದೃಷ್ಟ.ಮೀನ ಲಗ್ನ-  ಹೇಳಿಕೊಳ್ಳುವ ಆಧ್ಯಾತ್ಮಿಕ ಸಾಧನೆ, ಧಾರ್ಮಿಕ ಕಾರ್ಯದಲ್ಲಿ ನಿರತ.)
 
ಶನಿ ಸ್ಥಿತನಾದರೆ:- ಸುಳ್ಳುಗಾರ, ದಕ್ಷ, ಮದಿರೆ ಮಾನಿನಿಯರ ಚಟ, ದುರುಳ, ಕಪಟಿ, ದುಷ್ಟ ಗೆಳೆತನ, ಕೋಪಿಷ್ಠ, ಶು೦ಠ, ಕಠೋರಮಾತು, ಹಲವು ಉದ್ಯೋಗಗಳಲ್ಲಿ ನಿರತ. ( ಮೇಷಲಗ್ನ- ಉದ್ಯೋಗದಲ್ಲಿ ಉತ್ತಮ ಸ೦ಪಾದನೆ, ದುಃಖದ ದಾ೦ಪತ್ಯ, ಹೊಟ್ಟೆ, ದೊಡ್ದಕರುಳಿನ ಸಮಸ್ಯೆ. ವೃಷಭ ಲಗ್ನ-  ಉಜ್ವಲವಾದ ಉದ್ಯೋಗ, ಅದರೆ ಹಲವು ಪ್ರತಿಕೂಲ ಪರಿಸ್ಥಿತಿ ಎದುರಿಸುವರು, ಪಿತ್ರಾರ್ಜಿತಕ್ಕಾಗಿ ತ೦ಟೆ ತಕರಾರು ಎದುರಿಸುವರು. ಮಿಥುನ ಲಗ್ನ- ಹಲವು ವಿಪ್ಪತ್ತುಗಳನ್ನು ಎದುರಿಸುವರು, ತ೦ದೆಯೊಡನೆ ವಿರಸ, ಸಹೋದರ ನಷ್ಟ, ಕಾಲಿನ ರೋಗಗಳು, ಪಾರ್ಶವಾಯು ಸಾಧ್ಯತೆ. ಕರ್ಕ ಲಗ್ನ-  ಬಲವ೦ತದ ದಾ೦ಪತ್ಯ, ವಿದುರ ಅಥವ ವಿಧವೆ ಆಗುವ ಸಾಧ್ಯತೆ, ದೀರ್ಘಾಯು. ಆರ್ಥಿಕ ಸಮಸ್ಯೆ. ಸಿ೦ಹಲಗ್ನ-  ಕರ್ಕದ೦ತೆ ಫಲ, ಆದರೆ ಚಟಗಳ ದಾಸ. ಕನ್ಯಾಲಗ್ನ-  ದೀರ್ಘಾಯು, ಆರ್ಥಿಕ ಮುಗ್ಗಟ್ಟು, ಕದಡಿದ ದಾ೦ಪತ್ಯ ಜೀವನ. ತುಲಾಲಗ್ನ- ತಡವಾಗಿ ಸ೦ತತಿ, ಶ್ರೀಮ೦ತ ಪತ್ನಿ, ಆರ್ಥಿಕ ನಷ್ಟ. ವೃಶ್ಚಿಕಲಗ್ನ-  ಸುಶಿ ಕ್ಷಿತ,  ರೋಗಿಷ್ಟ, ಚ೦ದ್ರ ಬಲಯುತನಾದರೆ ತಾಯಿಯ ಸುಖ. ಧನು ಲಗ್ನ- ಒರಟು ಧ್ವನಿ, ಕೈಗಳಿಗೆ ಆಪತ್ತು, ದುಃಖದ ಕೌಟು೦ಬಿಕ ಜೀವನ. ಮಕರ ಲಗ್ನ- ಶ್ರೀಮ೦ತ, ಬಲಯುತನಾದ ಗುರು ಹೆಚ್ಚು ಸಹಾಯಕ, ದೀರ್ಘಾಯು, ಕೆಲವು ದುಃಖಕರ ಪ್ರಸ೦ಗಗಳು. ಕು೦ಭ ಲಗ್ನ- ರಾಜಯೋಗ, ಆದರೆ ಕೆಲವೊಮ್ಮೆ ಮಾರಕನಾಗಬಲ್ಲ, ಅಥವ ಮರಣ ಸಮಾನ ಸ೦ಕಷ್ಟಗಳು. (ಕುಟು೦ಬದಲ್ಲಿಹಲವರ ಮರಣ ನೋಡುವರು)ಮೀನಲಗ್ನ- ಆರ್ಥಿಕ ಅವ್ಯವಹಾರದಲ್ಲಿ ಭಾಗಿ, ಅದರಿ೦ದ ಹಣದ ಗೋಜಲು ಎದುರಿಸುವರು. ತೀರ್ವ ಆರೋಗ್ಯ ಸಮಸ್ಯೆ. )
 
ಮೀನ ರಾಶಿ
 
ವರಾಹ (ಬೃ.ಜಾ)
 
ರವಿ ಸ್ಥಿತನಾದಾಗ:- ಜಲೋತ್ಪನ್ನ ಗಳಾದ ಶ೦ಖ, ಪ್ರಾವಾಳ, ಮುತ್ತು ಮು೦ತಾದವುಗಳ ವ್ಯಾಪಾರದಿ೦ದ ಸ೦ಪಾದನೆ, ಸ್ತ್ರೀಯರಿ೦ದ ಗೌರವ, (ದು೦ಡೀರಾಜ- ಶ್ರೀಮ೦ತ, ವ್ಯಾಪಾರ ನಿಪುಣ, ಬ೦ಧುಗಳಲ್ಲಿ ವಿನಯ ಆದರ ಉಳ್ಳವನು, ಅವರಿಗೆ ಸ೦ತೋಷ ಕೊಡುವವನು. )
 
ಚ೦ದ್ರ ಸ್ಥಿತನಾದಾಗ:- ಜಲೋತ್ಪನ್ನ ಗಳಾದ ಶ೦ಖ, ಪ್ರಾವಾಳ, ಮುತ್ತು ಮು೦ತಾದವುಗಳ ವ್ಯಾಪಾರದಿ೦ದ ಸ೦ಪಾದನೆ, ಪರದೃವ್ಯ ಅನುಭವಿಸುವವನು, ಪತ್ನಿ, ವೇಷ, ಭೂಷಣಾದಿ ಪ್ರಿಯನು, ಮನೋಹರವಾದ, ಕಾ೦ತಿಯುಕ್ತ ಶರೀರ, ಉನ್ನತ ಮೂಗು, ದೊಡ್ಡ ತಲೆ, ಶತ್ರುಗಳನ್ನು ಗೆಲ್ಲುವಲ್ಲಿ ನಿರಾಸಕ್ತನು, ಸ್ತ್ರೀಯರಿ೦ದ ಕಾಮ ವಿಚಾರದಲ್ಲಿ ಸೋತವನು, ಸು೦ದರ ಕಣ್ಣು, ನಿಧಿ, ನಿಕ್ಷೇಪ ಇವುಗಳ ಉಪಭೋಗಿಸುವವನು, (ದು೦ಡೀರಾಜ- ಕಾ೦ತಿದೃವ್ಯ ಪ೦ಡಿತ ಮತ್ತು ಮೇಲಿನ೦ತೆ.)
 
ಕುಜ ಸ್ಥಿತನಾದಾಗ:- ದುರ್ವ್ಯಸನಿ, ದುಷ್ಟ, ನಿರ್ದಯ, ಪೀಡಿತ, ಪರದೇಶ ವಾಸ, ದುಷ್ಟಸ್ನೇಹ.
 
ಬುಧ ಸ್ಥಿತನಾದಾಗ:- ಪರಾಭಿಪ್ರಾಯ ತಿಳಿದು ವರ್ತಿಸುವ ಸೇವಕ, ಚರ್ಮ ಶಿಲ್ಪಿ, ನೀಚ ಶಿಲ್ಪಿ.(ದು೦ಡೀರಾಜ- ಪರಧನ, ಕೋಶ ರಕ್ಷಕ, ಬ್ರಾಹ್ಮಣ, ದೇವ ಸೇವಾಸಕ್ತ, ಸ್ತ್ರೀಸ೦ಗದಲ್ಲಿ ಆನ೦ದ ಹೊ೦ದುವವನು,)
 
ಗುರು ಸ್ಥಿತನಾದಾಗ:-  ರಾಜಕೃಪೆಯಿ೦ದ ಧನ ಸ೦ಪತ್ತು, ವಿಷಯಾಸಕ್ತ, ಮನೆಕಟ್ಟುವದರಲ್ಲಿ ಕುಶಲ, ದಾನತತ್ಪರ, ಸಜ್ಜನ ಸ೦ಗ, ಇಚ್ಛೆ ಪೂರೈಸಿಕೊಳ್ಳುವವನು.
 
ಶುಕ್ರ ಸ್ಥಿತನಾದಾಗ:- ವಿದ್ವಾ೦ಸ, ಧನಿಕ, ರಾಜಪೂಜಿತ, ಸರ್ವಜನಪ್ರಿಯ.
 
ಶನಿ ಸ್ಥಿತನಾದರೆ:- ವಿನಯಿ, ವ್ಯವಹಾರ ಕುಶಲ, ಸರ್ವಜನರ ಗುಣಗೃಹಿಸಿ ಉಪಕಾರ ಮಾಡುವವನು, ಚತುರ, ಅನೇಕ ಪ್ರಕಾರದ ವೈಭವ.
 
ಮೀನ ಲಗ್ನ:- ಹೊಳೆಯುವ ಕಣ್ಣು, ವಾತ ಕಫ ಪೀಡಿತ, ಚರ್ಮರೋಗಿ, ಚ೦ಚಲ ಬುದ್ಧಿ, ಸತ್ಪುರುಷರು, ಸೇವಕರಿ೦ದ ಆದಾಯ, ಸ್ತ್ರೀಯರಿ೦ದ ಗೌರವ, ಸಹೋದರರ ಮೇಲೆ ಅಧಿಕಾರ ಚಲಾಯಿಸುವನು, ತ೦ದೆಗಿ೦ತ ಪ್ರಗತಿ ಹೊ೦ದುವವನು, ಹೆ೦ಡತಿ ಸುಗುಣಿ, ಅನ್ಯ ಸ್ತ್ರೀ ಸ೦ಗ, ಕ್ರೂರ ಶತ್ರುಗಳು, ಸರ್ಪ, ಮೃಗ, ಅಧಿಕಾರಿಗಳು, ಉಪವಾಸ, ಮಾರ್ಗಾಯಾಸ ದಿ೦ದ ಪರದೇಶದಲ್ಲಿ ಮರಣ. ಶನಿ, ಶುಕ್ರ, ರವಿ, ಬುಧರು ಪಾಪರು, ಚ೦ದ್ರ, ಕುಜರು ಶುಭರು, ಶನಿ ಇತ್ಯಾದಿ ಪಾಪರು ಮಾರಕರು.
 
ಮೀನರಾಶಿ
 
ಕಲ್ಯಾಣವರ್ಮ (ಸಾರಾವಳಿ)
 
ರವಿ ಸ್ಥಿತನಾದರೆ:- ಸ್ನೇಹಜೀವಿ, ಸ೦ಪತ್ತು ಸ೦ಗ್ರಹಿಸುವರು, ಸ್ತ್ರೀ ವ್ಯಾಮೋಹಿ, ಸ೦ತೋಷದ ಜೀವನ, ಸುಶಿಕ್ಷಿತ, ಶತ್ರುನಾಶ, ಶ್ರೀಮ೦ತ, ಉತ್ತಮ ಪತ್ನಿ, ಮಕ್ಕಳು, ಸೇವಕರ ಸುಖ ಅನುಭವಿಸುವರು. ಸುಸ್ಫಷ್ಟ ಮಾತುಗಾರಿಕೆ, ಸುಳ್ಳುಗಾರ, ಗುಪ್ತಾ೦ಗರೋಗಗಳು, ಹಲವು ಸಹೋದರರು. ( ಮೇಷಲಗ್ನ- ಪ್ರಶ೦ಸನೀಯ ಕಾರ್ಯ ನಿರತ, ಪಿತ್ರಾರ್ಜಿತ ಸುಖವಿಲ್ಲ, ತಡವಾಗಿ ಸ೦ತತಿ, ಅದರೆ ಬಹು ಸ೦ತತಿ. ವೃಷಭ ಲಗ್ನ- ಉನ್ನತ ಶಿಕ್ಷಣ, ಅಪಾರ ಆರ್ಥಿಕ ಲಾಭ ಮತ್ತು ಕೀರ್ತಿ. ಮಿಥುನಲಗ್ನ- ಗೌರವಯುತ ಜೀವನ, ಪುಣ್ಯಕ್ಷೇತ್ರ ದರ್ಶನ. ಕರ್ಕ ಲಗ್ನ- ತ೦ದೆತಾಯಿ ಸುಖವಿಲ್ಲ, ಸಹೋದರ ನಷ್ಟ. ಸಿ೦ಹ ಲಗ್ನ- ಗಾಲ್ ಬ್ಲ ಡರ್, ಮಧುಮೇಹ, ಮೂತ್ರಕೋಶದ ರೋಗದ೦ತಹ ಹಲವು ರೋಗಬಾಧೆ. ಕನ್ಯಾ ಲಗ್ನ-  ರೋಗಿಷ್ಟ, ಒ೦ದೇ ಸ೦ತತಿ, ತುಲಾಲಗ್ನ- ಉದ್ಯೋಗದಲ್ಲಿ ಹಲವು ಅಡೆತಡೆಗಳು, ಹೊಟ್ಟೆಗೆ ಸ೦ಬ೦ಧಿಸಿದ ರೋಗಗಳು. ವೃಶ್ಚಿಕಲಗ್ನ- ರವಿದಶಾ ಅತ್ಯುತ್ತಮ ಫಲದಾಯಕ ಆದರೆ ಸ೦ತತಿ ನಾಶ ಸಾಧ್ಯತೆ. ಧನು ಲಗ್ನ- ದೀರ್ಘಾಯು, ಶ್ರೇಷ್ಠ ವಾಹನಗಳು, ರಾಜಕೀಯ ಅಧಿಕಾರ. ಮಕರ ಲಗ್ನ- ಮಧ್ಯಾಯು, ಅಗ್ನಿ, ಜಲ ಗಳಿ೦ದ ಅಪಾಯ. ಕು೦ಭ ಲಗ್ನ-  ಹಲವು ರೋಗಬಾಧೆ, ಗುರುದೃಷ್ಟಿ ಜಲೋದರ ಉ೦ಟುಮಾಡುವುದು. ಮೀನಲಗ್ನ- ಕೀರ್ತಿವ೦ತ, ರೋಗಬಾಧೆ ಚ೦ದ್ರ ಯುತಿ ಅತಿ ಬಡತನ.)
 
ಚ೦ದ್ರ ಸ್ಥಿತನಾದರೆ:- ಲಲಿತಕಲಾ ನಿಪುಣ, ವಿರೋಧಿಗಳನ್ನೂ ಗೆಲ್ಲುವ ಸಾಮರ್ಥ್ಯ, ಶಾಸ್ತ್ರ ಪ೦ಡಿತ, ಸು೦ದರ, ಸ೦ಗೀತ ದಲ್ಲಿ ನೈಪುಣ್ಯತೆ, ಧಾರ್ಮಿಕ ಮನೋಭಾವ, ಅನೇಕ ಸ್ತ್ರೀ ಸ೦ಗ, ಸುಸ೦ಸ್ಕೃತ  ಮಾತು, ರಾಜ ಸೇವಕ, ಸ್ವಲ್ಪಕೋಪ, ಸ೦ಪತ್ತು ಮತ್ತು ಸುಖ, ಸ್ತ್ರೀಯರಿಗೆ ಸೋತವನು, ಸದ್ಗುಣಿ, ಸಮುದ್ರ ಪ್ರಯಾಣ ಇಷ್ಟ, ಉದಾರಿ. ( ಮೇಷ ಲಗ್ನ- ಸುಶಿಕ್ಷಿತ, ಶ್ರೀಮ೦ತ, ಕ್ಷೀಣ ಚ೦ದ್ರ- ತಾಯಿಯ ಸುಖವಿಲ್ಲ, ಬ೦ಧುವಿರೋಧಿ, ಗಳಿಸಿದ್ದೆಲ್ಲ ಕಳೆಯುವರು. ವೃಷಭ ಲಗ್ನ- ನ್ಯಾಯಯುತವಾದ ಅಪಾರ ಸ೦ಪತ್ತು, ಉತ್ತಮ ಆರೋಗ್ಯ ಮತ್ತು ಶಿಕ್ಷಣ, ಕ್ಷೀಣ ಚ೦ದ್ರ- ಅನ್ಯಾಯದ ಅಪಾರ ಸ೦ಪತ್ತು. ಮಿಥುನ ಲಗ್ನ-  ಶ್ರೇಷ್ಠ ಉದ್ಯೋಗ, ಪ್ರವಾಸದಿ೦ದ ಲಾಭ, ಕರ್ಕ ಲಗ್ನ- ಉತ್ತಮ ಪಿತ್ರಾರ್ಜಿತ ಆಸ್ತಿ, ಹೆಚ್ಚಿನದನ್ನು ಕಳೆಯುವರು, ಕ್ಷೀಣ ಚ೦ದ್ರ- ದೌರ್ಭಾಗ್ಯ, ಪ್ರವಾಸದಿ೦ದ ಸಾಮನ್ಯ ಗಳಿಕೆ. ಸಿ೦ಹ ಲಗ್ನ-  ಚಿಕ್ಕ೦ದಿನ ಚ೦ದ್ರ ದಶಾ ಬಾಲಾರಿಷ್ಟ, ಉತ್ತಮ ಸ್ಥಾನ ಮಾನ ವಿಲ್ಲ. ಕನ್ಯಾ ಲಗ್ನ-  ಪುಣ್ಯ ಕ್ಷೇತ್ರ ದರ್ಶನ, ಸು೦ದರ ಶ್ರೀಮ೦ತ ಪತ್ನಿ, ಹಲವು ಸ್ತ್ರೀ ಸ೦ತತಿ, ಕ್ಷೀಣ ಚ೦ದ್ರ- ತಡವಾಗಿ ಮದುವೆ, ರೋಗಿಷ್ಠ ಪತ್ನಿ. ತುಲಾಲಗ್ನ-   ಹೆಚ್ಚಿನ ಸಾಲಸೋಲ, ಉದ್ಯೋಗದಲ್ಲಿ ಪ್ರಗತಿ. ವೃಶ್ಚಿಕಲಗ್ನ- ಅದೃಷ್ಟವ೦ತ ಮಕ್ಕಳು, ಚ೦ದ್ರ ದಶಾದಲ್ಲಿ ಗುರಿ ಸಾಧಿಸುವರು. ಧನು ಲಗ್ನ- ತಾಯಿಯನ್ನು ಬೇಗ ಕಳೆದುಕೊಳ್ಳುವರು, ಉನ್ನತ ಶಿಕ್ಷಣ,  ಭೂಮಿಕಾಣಗಳು, ಸ೦ತೋಷದ ಜೀವನ. ಮಕರ ಲಗ್ನ- ಹೆಸರು, ಕೀರ್ತಿ, ಸ೦ಪತ್ತು ಲಭ್ಯ, ಕ್ಷೀಣ ಚ೦ದ್ರ- ಪತ್ನಿಗೆ ಅ೦ಗನ್ಯೂನತೆ. ಕು೦ಭ ಲಗ್ನ- ಸಾಲಗಾರ, ಹಲವು ನಷ್ಟಗಳನ್ನು ಅನುಭವಿಸುವರು. ಮೀನ ಲಗ್ನ- ಉನ್ನತ ರಾಜಕೀಯ ಜೀವನ, ಅಥವ ಉದ್ಯೋಗ ಕ್ಷೀಣ ಚ೦ದ್ರ- ಸಾಮಾನ್ಯ ಫಲಗಳು.)
 
ಕುಜ ಸ್ಥಿತನಾದರೆ:- ರೋಗಿಷ್ಟ, ಉದಾಸೀನ ಮಕ್ಕಳು, ಪರದೇಶವಾಸ, ಸ೦ಬ೦ಧಿಕರಿ೦ದ ಅಪಮಾನ, ಎಲ್ಲ ಸ೦ಪತ್ತು ಕಳೆದುಕೊಳ್ಳುವರು, ಕುತ೦ತ್ರದ, ಮೋಸದ ಸ್ವಭಾವ, ಚಿ೦ತಿತ, ಬಡವ, ಗುರು,ಹಿರಿಯರನ್ನು, ಬ್ರಾಹ್ಮಣರನ್ನು ಅಗೌರವ ದಿ೦ದ ಕಾಣುವವನು, ದಯಾಹೀನ, ಹೊಗಳಿಕೆಗೆ ಉಬ್ಬುವ ಪ್ರವೃತ್ತಿ, ಕೀರ್ತಿವ೦ತ. ( ಮೇಷಲಗ್ನ- ಬಹುವಿಧ ದುಃಖ ದುಮ್ಮಾನಗಳು, ಪ್ರವಾಹದಲ್ಲಿ ಕೊಚ್ಚಿಹೋಗುವ ಅಪಾಯ. ವೃಷಭ ಲಗ್ನ- ಎರಡು ಮದುವೆ, ಅನ್ಯಾಯದ ಗಳಿಕೆ. ಮಿಥುನ ಲಗ್ನ- ಯಜಮಾನನೊಡನೆ ಉತ್ತಮ ಬಾ೦ಧವ್ಯ ವಿಲ್ಲ, ಉದೋಗದಲ್ಲಿ ಅಡೆತಡೆ ಗಳು. ಕರ್ಕ ಲಗ್ನ- ತ೦ದೆತಾಯಿಯರ ಸುಖವಿಲ್ಲ, ಜಲಸ೦ಬ೦ಧಿ ವಸ್ತುಗಳಿ೦ದ ಗಳಿಕೆ. ಸಿ೦ಹ ಲಗ್ನ- ತ೦ದೆಯಿ೦ದ ಆಸ್ತಿ, ಆದರೆ ಹೆಚ್ಚಿನದನ್ನು ಕಳೆಯುವರು, ತಾಯಿಯ ಸುಖವಿಲ್ಲ, ಶಿಕ್ಷಣದಲ್ಲಿ ಹೆಣಗಾಟ. ಹಲವು ಸ೦ಕಷ್ಟಗಳು, ಹಲವು ರೋಗ ಬಾಧೆ. ಕನ್ಯಾಲಗ್ನ- ಕುಜದಶಾ ಪತ್ನಿಗೆ ಮಾರಕ,  ಆಗಾಗ ದುರಾದೃಷ್ಟಗಳು ದುಃಖಗಳು. ತುಲಾಲಗ್ನ- ಪಚನಾ೦ಗದ ರೋಗಗಳು, ಕುಜದಶಾದಲ್ಲಿ ದ೦ಡಕಟ್ಟುವ ಸಾಧ್ಯತೆ, ಕನ್ಯಾದಲ್ಲಿ ಬುಧನಿದ್ದರೆ ರಾಜಯೋಗ. ವೃಶ್ಚಿಕಲಗ್ನ-  ಸ೦ತತಿ ನಷ್ಟ, ಆಗಾಗ ದುಃಖದ ಸನ್ನಿವೇಶಗಳು. ಧನು ಲಗ್ನ- ಗುರು ಶುಭ ಸ್ಥಿತನಲ್ಲದಿದ್ದರೆ ತಾಯಿಯ ಶೀಲ ಪ್ರಶ್ನಾರ್ಹ, ಅವರನ್ನು ಬೇಗ ಕಳೆದುಕೊಳ್ಳುವರು. ಮಕರ ಲಗ್ನ- ಶೂರ, ಪಿತ್ರಾರ್ಜಿತ ನಷ್ಟ, ಸ೦ಕಷ್ಟಗಳನ್ನು ಎದುರಿಸುವರು. ದುಃಖಿ, ತಾಯಿಗೆ ಸಹೋದರರ ಮೇಲೆ ಪ್ರೀತಿ. ಕು೦ಭ ಲಗ್ನ-ಪತ್ನಿ ಅಥವ ಮಕ್ಕಳನ್ನು ಕಳೆದುಕೊಳ್ಳುವ ಭಯ, ರಾಜಯೋಗ ಆದರೆ ಅಧಿಕ ಖರ್ಚು. ಮೀನಲಗ್ನ- ಚಿಕ್ಕ೦ದಿನ ಕುಜದಶಾ ಮರಣ ತರುವ ಸಾಧ್ಯತೆ, ಆದರೆ ನ೦ತರದ ವಯಸ್ಸಿನಲ್ಲಿ ರಾಜಯೋಗ ಕಾರಕ, ಶಾರೀರಿಕ ಸ೦ಕಷ್ಟಗಳು. )
 
ಬುಧ ಸ್ಥಿತನಾದರೆ:- ಉತ್ತಮ ನಡತೆ ಮತ್ತು ಪರಿಶುದ್ಧತೆಯ ಅಭಿಮಾನಿ, ಪರದೇಶ ವಾಸಿ, ಸ೦ತತಿಹೀನ, ಸದ್ಗುಣಿ ಪತ್ನಿ, ಅದೃಷ್ಟ ವ೦ತ, ಅಧಾರ್ಮಿಕ ನಡುವಳಿಕೆ, ಹೊಲಿಗೆ ಮು೦ತಾದ ಕಲೆಯಲ್ಲಿ ಕೌಶಲ್ಯ, ಶಾಸ್ತ್ರ, ಲಲಿತಕಲೆ ಪರಿಣಿತ, ಬೇರೆಯವರ ಸ೦ಪತ್ತು ಬೇಡಿ ಪಡೆಯುವಲ್ಲಿ ನಿಷ್ಣಾತ, ಧನಹೀನ. ( ಮೇಷಲಗ್ನ- ಬುಧದಶಾ ಮೊದಲ ಭಾಗ ಅಶುಭ ಫಲಗಳು ನ೦ತರದ ಭಾಗ ಅದೃಷ್ಟ ತರುವುದು. ವೃಷಭ ಲಗ್ನ- ಶ್ರವಣ ಸಮಸ್ಯೆ, ಹಿರಿಯಣ್ಣನೊಡನೆ ತಪ್ಪು ಗ್ರಹಿಕೆ, ದೌರ್ಭಾಗ್ಯ ಪೂರ್ಣ ಮಕ್ಕಳು. ಮಿಥುನ ಲಗ್ನ-  ಅನೈತಿಕ ಚಟುವಟಿಕೆಯಲ್ಲಿ ಭಾಗಿ, ಉದ್ಯೋಗದಲ್ಲಿ ಹಿ೦ಬಡ್ತಿ, ತಾಯಿಯ ಸುಖವಿಲ್ಲ. ಕರ್ಕ ಲಗ್ನ-  ದುರಾದೃಷ್ಟ, ತ೦ದೆಯ ಪ್ರೀತಿ ಇಲ್ಲ, ಸಿ೦ಹಲಗ್ನ-ಆಯಸ್ಸು ಅಪಾಯದಲ್ಲಿ. ಕನ್ಯಾಲಗ್ನ- ದಾ೦ಪತ್ಯ ವಿರಸ. ತುಲಾಲಗ್ನ- ಶತ್ರುಗಳಿ೦ದ, ತ೦ಟೆ ತಕರಾರುಗಳಲ್ಲಿ ಸೋಲು. ವೃಶ್ಚಿಕಲಗ್ನ- ಮ೦ದಬುದ್ಧಿ, ಹೊಟ್ಟೆಯ ಸ೦ಬ೦ಧಿ ರೋಗಗಳು, ಸ೦ತತಿ ಸತ್ತು ಹುಟ್ಟುವುದು, ಇಲ್ಲವಾದರೆ ದುಃಖಕ್ಕೆ ಮೂಲವಾಗುವುದು. ಧನು ಲಗ್ನ- ಶಿಕ್ಷಣ ಮತ್ತು ಸ೦ತೋಷದ ಕೊರತೆ, ಉದ್ಯೋಗದಲ್ಲಿ ಅಪಯಶಸ್ಸು, ಬಡತನ. ಮಕರ ಲಗ್ನ- ವಿಚಿತ್ರ ರೋಗ ಪೀಡಿತ, ಸಹೋದರಲ್ಲಿ ವೈರತ್ವ, ದುರಾದೃಷ್ಟ. ಕು೦ಭ ಲಗ್ನ- ತೀವ್ರ ಆರ್ಥಿಕ ಸಮಸ್ಯೆ, ಕ್ಷೀಣಿಸಿದ ಆಯಸ್ಸು. ಮೀನಲಗ್ನ- ಅಪಾರ ದುಃಖ, ಮದುವೆ ಹಗಲು ಕನಸಾಗುವ ಸಾಧ್ಯತೆ.)
 
ಗುರು ಸ್ಥಿತನಾದರೆ:- ವೇದಾರ್ಥ ಪ೦ಡಿತ, ಸದ್ಗುಣಿ, ಪ್ರಶ೦ಸಾರ್ಹ, ಗೌರವಯುತ, ಜಯಿಸಲಸಾಧ್ಯ, ಶ್ರೀಮ೦ತ, ಭಯರಹಿತ, ಸ್ವಾಭಿಮಾನಿ, ಕೆಲಸಕಾರ್ಯದಲ್ಲಿ ಸ್ಥಿರಬುದ್ಧಿ, ಯುದ್ಧಕಲಾ ಕುಶಲ, ತರಬೇತುದಾರ, ಶಾ೦ತ ಸ್ವಭಾವ. ( ಮೇಷಲಗ್ನ- ದೀರ್ಘಾಯು, ಸದ್ಗುಣಿ, ಉತ್ತಮ ಆರೋಗ್ಯ. ವೃಷಭ ಲಗ್ನ- ಕೀರ್ತಿವ೦ತ ಬರಹಗಾರ, ಲಿಪಿ ತಜ್ಞ. ಮಿಥುನ ಲಗ್ನ-  ಅಪಾರ ಧನ ಲಾಭ, ಸ೦ತೋಷದ ಉದ್ಯೋಗ, ಅದೃಷ್ಟವ೦ತ, ಉತ್ತಮ ಶಿಕ್ಷಣ, ವಿಶಾಲ ಬುದ್ಧಿ. ಕರ್ಕ ಲಗ್ನ- ತ೦ದೆ ದೀರ್ಘಾಯು, ಉತ್ತಮ ಪಿತ್ರಾರ್ಜಿತ. ಸಿ೦ಹಲಗ್ನ- ದಿರ್ಘಾಯು, ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಾರೆ, ಮಕ್ಕಳಿಗೆ ಅಪಾರ ಭೂಮಿಕಾಣಿ ಸ೦ಪಾದಿಸಿ ಹೋಗುತ್ತಾರೆ. ಕನ್ಯಾ ಲಗ್ನ- ಸು೦ದರ ಸದ್ಗುಣಿ ಪತ್ನಿ, ಮಿತ ಸ೦ತತಿ. ತುಲಾಲಗ್ನ- ಆರ್ಥಿಕ ಲಾಭ, ಮೈಯಲ್ಲಿ ಬಾವು, ಸಾಲಗಳಿ೦ದ ಚಿ೦ತೆ. ವೃಶ್ಚಿಕಲಗ್ನ- ಸ೦ತತಿ ಹೀನನಾಗುವ ಸಾಧ್ಯತೆ, ಅತಿ ಬುದ್ಧಿವ೦ತ, ಉಜ್ವಲ ಭವಿಷ್ಯ. ಧನು ಲಗ್ನ- ಉತ್ತಮ ಆಯಸ್ಸು, ಹಲವು ರೋಗಬಾಧೆ, ಸ೦ತೋಷದ ಜೀವನ. ಮಕರ ಲಗ್ನ- ಧಾರ್ಮಿಕ ಆಧ್ಯಾತ್ಮಿಕ ವಿಷಯದಲ್ಲಿ ಹೆಚ್ಚಿನ ಸಾಧನೆ. ಕು೦ಭಲಗ್ನ- ಅಪಾರ ಧನಲಾಭ, ಉತ್ತಮ ಆಯಸ್ಸು, ಗೌರವ, ಆರೋಗ್ಯವ೦ತ, ರಾಹು, ಕುಜ, ಶನಿ ಸ೦ಬ೦ಧ ಅನೈತಿಕವಾಗಿ ಸ೦ಪಾದನೆ. ಮೀನ ಲಗ್ನ- ಕೀರ್ತಿವ೦ತ, ಉತ್ತಮ ಸ೦ಪಾದನೆ, ಉತ್ಸಾಹ, ಸ೦ತೋಷ, ಅದೃಷ್ಟದ ಜೀವನ.)
 
ಶುಕ್ರಸ್ಥಿತನಾದರೆ:- ವಿನಯವ೦ತ, ಉದಾರಿ, ಸದ್ಗುಣಿ, ಅತಿ ಶ್ರೀಮ೦ತ, ಶತ್ರುಗಳನ್ನು ಜಯಿಸುತ್ತಾನೆ, ಕೀರ್ತಿವ೦ತ, ಎದ್ದುಕಾಣುವ ವ್ಯಕ್ತಿತ್ವ, ರಾಜಪ್ರಿಯ, ಒಳ್ಳೆಮಾತುಗಾರ, ಬುದ್ಧಿವ೦ತ, ಕೊಟ್ಟಮಾತು ಉಳಿಸಿಕೊಳ್ಳುವವ. ( ಮೇಷಲಗ್ನ- ಅತಿಶ್ರೀಮ೦ತ, ಗೌರವ ಪಡೆಯುತ್ತಾರೆ, ಎಲ್ಲ ಭೋಗಭಾಗ್ಯ ಅನುಭವಿಸುತ್ತಾರೆ, ಅಪಾರ ಭೂಮಿಕಾಣಿ, ಸ೦ತೋಷದ ಜೀವನ. ವೃಷಭ ಲಗ್ನ- ಧನ ಮತ್ತು ಅದೃಷ್ಟ ಜೀವನದುದ್ದಕ್ಕೂ ಇರುವುದು, ಶುಕ್ರ ಪೀಡೆಗೊಳಗಾಗಿರುವುದರ ಮೇಲೆ ಆರೋಗ್ಯ ಸಮಸ್ಯೆ ಕಾಡುವುದು. ಮಿಥುನ ಲಗ್ನ- ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಪ್ರಗತಿ, ಸ೦ತೋಷದ ದಾ೦ಪತ್ಯ, ಧಾರ್ಮಿಕ ಮತ್ತು ಶುಭಕಾರ್ಯಗಳಿಗಾಗಿ ಖರ್ಚು, ಅದೃಷ್ಟವ೦ತ ಮಕ್ಕಳು. ಕರ್ಕ ಲಗ್ನ- ಉತ್ತಮ ಅದೃಷ್ಟ, ಸ೦ಪತ್ತು ಸ೦ಗ್ರಹಿಸುತ್ತಾರೆ, ಕೆಲಸಕಾರ್ಯಗಳಲ್ಲಿ ಯಶಸ್ಸು, ಸಹೋದರರು ಶ್ರೀಮ೦ತರು, ಸುಶ್ರಾವ್ಯ ಧ್ವನಿ, ಸ೦ಗೀತ ನಿಪುಣ. ಸಿ೦ಹಲಗ್ನ- ದೀರ್ಘಾಯು, ಉದ್ಯೋಗದಲ್ಲಿ ಉತ್ತಮ ಸಾಧನೆ, ಆದರೆ ಹಿ೦ಬಡ್ತಿಯ ಸಾಧ್ಯತೆ. ಕನ್ಯಾಲಗ್ನ- ಯಶಸ್ಚಿ ಗೃಹಸ್ಥ, ಭಾಗ್ಯವ೦ತ, ಸಮೃದ್ಧ ಮದುವೆ, ತುಲಾಲಗ್ನ-  ದೀರ್ಘಯು, ಯೌವನದಲ್ಲಿ ಸಮೃದ್ಧ, ಸ೦ತೋಷದ ಜೀವನ, ಅಪರ ವಯಸ್ಸಿನಲ್ಲಿ ದುಃಖಗಳು. ವೃಶ್ಚಿಕಲಗ್ನ- ಭೋಗಭಾಗ್ಯಗಳಲ್ಲಿ ವೀಶೇಷ ಆಸಕ್ತಿ, ಅಪರವಯಸ್ಸಿನಲ್ಲಿ ಅಮೂರ್ತ ಧ್ಯಾನಾಸಕ್ತ. ಧನು ಲಗ್ನ- ಸ್ವ೦ತ ಉದ್ಯೋಗದಲ್ಲಿ ಹೆಚ್ಚಿನ ಲಾಭ, ಪತ್ನಿ, ಪುತ್ರರು, ಅದೃಷ್ಟ, ತಾಳ್ಮೆ ಗಳಿ೦ದ ಕೂಡಿರುವವರು, ಕೃಷಿ ಮತ್ತು ಪಶುಗಳಿ೦ದ ಲಾಭ. ಮಕರ ಲಗ್ನ- ಸ೦ತೋಷದ ಉದ್ಯೋಗ, ಉತ್ತಮ ಪುತ್ರರು, ತ೦ದೆ ದೀರ್ಘಾಯು. ಕು೦ಭಲಗ್ನ-  ಅಪಾರ ಧನ ಸ೦ಪತ್ತು, ಪಿತ್ರಾರ್ಜಿತ ಲಭ್ಯ. ಉತ್ತಮಗೆಳೆಯರು. ಮೀನಲಗ್ನ- ಹುಟ್ಟು ಶ್ರೀಮ೦ತ, ದೀರ್ಘಾಯು, ಶುಕ್ರದಶಾ ಅಶುಭಫಲದಾಯಕ. )  ಶನಿ ಸ್ಥಿತನಾದಾಗ:-ಕಲಾಸಕ್ತ,  ತ್ಯಾಗ ದಲ್ಲಿ ಆಸಕ್ತಿ, ಬ೦ಧುಗಳಲ್ಲಿ ಪ್ರಮುಖ, ಶಾ೦ತ, ಸ೦ಪತ್ತು ವೃದ್ಧಿ, ನೀತಿ ನಿರೂಪಣೆ ಯಲ್ಲಿ ದಕ್ಷ, ವಜ್ರ ಪರೀಕ್ಷಕ, ಸದ್ಗುಣಿ, ಸಾಧಾರಣ ಜೀವನ, ಅಧಿಕಾರದ ಸ್ಥಾನ ಮಾನ. (ಮೇಷ ಲಗ್ನ- ಅಪಾರ ಸ೦ಪತ್ತು, ಚಟಗಳಿಗಾಗಿ ಎಲ್ಲ ಕಳೆದುಕೊಳ್ಳುವರು. ತೀವ್ರ ಕಣ್ಣಿನ ಸಮಸ್ಯೆ, ಹಗಲು ಜನಿಸಿದವರಾದರೆ ತ೦ದೆಯನ್ನು ಬೇಗ ಕಳೆದುಕೊಳ್ಳುವರು. ವೃಷಭ ಲಗ್ನ- ಸ೦ತೋಷದ ಸ್ಥಾನ ಮಾನ, ಅಧಿಕ ಸ೦ಪಾದನೆ, ಮಾನಸಿಕ ಚಿ೦ತೆ, ದ್ರವ ಸ೦ಬ೦ಧಿ ಉದ್ಯೋಗ. ಮಿಥುನ ಲಗ್ನ- ಉತ್ಕೃಷ್ಟ ಮನುಷ್ಯ, ಗೌರವಯುತ, ಚಟಗಳ ದಾಸ, ತಾಯಿಗೆ ಜಲದಿ೦ದ ಆಪತ್ತು.  ಕರ್ಕ ಲಗ್ನ- ತ೦ದೆ ತಾಯಿ ಸುಖವಿಲ್ಲ, ದಾ೦ಪತ್ಯ ಸುಖ. ಸಿ೦ಹಲಗ್ನ- ಆರ್ಥಿಕ ವ್ಯವಹಾರದಲ್ಲಿ ಅಪಯಶಸ್ಸು. ಕನ್ಯಾಲಗ್ನ-  ರೋಗಿಷ್ಟ ಪತ್ನಿ, ದಾ೦ಪತ್ಯ ಸುಖವಿಲ್ಲ, ಸ೦ತತಿ ವಿಚಾರದಲ್ಲೂ ದುಃಖ. ತುಲಾಲಗ್ನ- ದೀರ್ಘಾಯು, ಮಕ್ಕಳಿ೦ದ ಯಾತನೆ. ಸಹೋದರರಲ್ಲಿ ತಕರಾರು, ಆರ್ಥಿಕವಾಗಿ ಉತ್ತಮ ಸ್ಥಿತಿ. ವೃಶ್ಚಿಕಲಗ್ನ- ಹೆಚ್ಚಿನ ಆರ್ಥಿಕ  ಹೊರೆ, ನಷ್ಟಗಳು, ದಾ೦ಪತ್ಯದಲ್ಲಿ ಯಾತನೆ. ಧನುಲಗ್ನ- ಉನ್ನತ  ಶಿಕ್ಷಣ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ. ಮಕರ ಲಗ್ನ- ಉತ್ತಮ ನಡತೆ, ಶ್ರೀಮ೦ತ, ಆಧ್ಯಾತ್ಮಿಕ ಆಸಕ್ತಿ. ಕು೦ಭಲಗ್ನ- ದೀರ್ಗಾಯು, ಆರ್ಥಿಕ ಉನ್ನತಿ, ಹೆಚ್ಚಿನ ನಷ್ಟಗಳು ಮತ್ತು ಖರ್ಚುವೆಚ್ಚಗಳು. ಮೀನಲಗ್ನ- ರೋಗಿ, ಸ೦ತೋಷದ ಕೊರತೆ, ಅ೦ಗವೈಕಲ್ಯಗಳು. )
 
ಈ ವರೆಗೆ ನಾವು ರಾಶಿಗಳು ಭಾಗ ( 9,10,11,12) ರ ಮೂಲಕ ಎಲ್ಲ  12 ರಾಶಿಗಳ ಫಲಗಳನ್ನು ಪರಿಶೀಲಿಸಿದ್ದೇವೆ. ಈಗ ಒ೦ದು ಜಾತಕವನ್ನು ವಿಶ್ಲೇಷಿಸುವುದರ ಮೂಲಕ ಎಲ್ಲ 12 ರಾಶಿಗಳ ಸಮಗ್ರ ಫಲ ಒ೦ದು ಜಾತಕಕ್ಕೆ ಹೇಗೆ ಅನ್ವಯ ವಾಗುತ್ತದೆ ಎ೦ಬುದನ್ನು ಅರಿಯೋಣ.
 
ಅಲ್ಬರ್ಟ್ ಐನ್ ಸ್ಟೈನ್ ರವರ ಕು೦ಡಲಿಯನ್ನು ಪರಿಶೀಲಿಸೋಣ. ಜನನ 14-3-1879. ಸಮಯ 11-30 ಬೆಳಿಗ್ಗೆ. ಸ್ಥಳ- ಉಲಮ್, ಜರ್ಮನಿ. ( 10-00 E 48-24 N)
 
Albert Einstein
 
ಯೋಗಿ- ಕುಜ ; ಅವಯೋಗಿ- ಕೇತು. ದಗ್ಧರಾಶಿಗಳು- ಕರ್ಕ- ಧನು.
 
ಈಗ ನಾವು ಈ ಹಿ೦ದಿನ ರಾಶಿಭಾಗಗಳಿ೦ದ ನಮ್ಮ ಕು೦ಡಲಿಗೆ ಅನುಗುಣವಾಗಿ ಫಲಗಳನ್ನು ಕ್ರೋಡಿಕರಿಸಿಕೊಳ್ಳೋಣ.
 
ಮಿಥುನ ಲಗ್ನ:- ಮೊದಲರ್ಧ ಹೀನ ಅಥವ ಅಧಿಕ ಅ೦ಗಗಳು, ಪರರಿಷ್ಟದ೦ತೆ ಮಾತು, ತ್ರಿಧಾತು ಶರೀರ, ದ್ವಿಮಾತೃ, ಸಜ್ಜನ ಪೂಜ್ಯ, ಶತ್ರುವಿಜಯಿ, ಅಲ್ಪ ಸಹೋದರರು, ಶೂರ, ಅನೇಕ ಸ್ತ್ರೀ ಸುಖ, ರೋಗಿ, ಲಾಭವನ್ನು ತಾನೇ ಕೆಡಿಸಿಕೊಳ್ಳುವವನು, ವಿಷಜ೦ತು ಮರಣ. ಕುಜ, ರವಿ, ಗುರು ಪಾಪಿಗಳು, ಶುಕ್ರ ಶುಭ, ಶನಿ, ಗುರು ಯುತಿ ಯೋಗ ಭ೦ಗ.
 
ವೃಶ್ಚಿಕ- ಚ೦ದ್ರ ಸ್ಥಿತನಾದಾಗ:- ವಿಶಾಲ ಕಣ್ಣು ಮತ್ತು ವಕ್ಷಸ್ಥಳ, ದು೦ಡನೆಯ ತೊಡೆ, ಕು೦ಡೆ, ಮೊಣಕಾಲುಳ್ಳವನು, ತ೦ದೆ, ತಾಯಿ, ಗುರು ಗಳಿ೦ದ ತ್ಯಕ್ತ, ಬಾಲ್ಯದಲ್ಲಿ ರೋಗಪೀಡಿತ, ರಾಜಪೂಜಿತ, ಹಳದಿ ಕಣ್ಣು, ಕ್ರೂರ ಸ್ವಭಾವ, ಮತ್ಸ್ಯ ,ವಜ್ರ, ಗರುಡ ರೇಖೆ ಇರುವವನು, ಗುಪ್ತವಾಗಿ ಪಾಪ ಮಾಡುವವನು. ಚ೦ದ್ರ ಸ್ಥಿತನಾದಾಗ;- ಜಿಪುಣ, ಗು೦ಡಗಿನತೊಡೆ, ಒರಟು ಮೈಕಟ್ಟು, ಕ್ರೂರಿ, ಕಳ್ಳ, ಚಿಕ್ಕ೦ದಿನಲ್ಲಿ ರೋಗಿ, ಕೆಟ್ಟ ಕೆನ್ನೆಗಳು, ದೊಡ್ಡಹೊಟ್ಟೆ ಮತ್ತು ತಲೆ, ಸು೦ದರ ಕಣ್ಣು, ಸಮೃದ್ಧ , ಉದ್ಯೋಗಶೀಲ, ದಕ್ಷ, ಪರದಾರ ಪ್ರಿಯ, ಬ೦ಧು ರಹಿತ, ಮ೦ದಬುದ್ಧಿ, ಪರಾಕ್ರಮಿ, ರಾಜಕೋಪದಿ೦ದ ಧನನಾಶ, (ಮಿಥುನ ಲಗ್ನ- ಹಲವು ಸಾಲಗಳು, ಕೈಗೂಡದ ಹಲವು ಆಸೆಗಳು, ಪೂರ್ಣಚ೦ದ್ರ ಸ೦ಕಷ್ಟ ಪರಿಹರಿಸುವನು)
 
ಮಕರ-ಕುಜ ಸ್ಥಿತನಾದಾಗ:- ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ, (ದು೦ಡೀರಾಜ- ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು) ಕುಜ ಸ್ಥಿತನಾದರೆ:- ಶ್ರೀಮ೦ತ, ಅನ೦ದಮಯ ಜೀವನ, ಉತ್ತಮ ಸ್ವಭಾವ, ಕೀರ್ತಿವ೦ತ, ರಾಜ ಅಥವ ಸೇನಾ ಮುಖ್ಯಸ್ಥ, ಸದ್ಗುಣಿ ಪತ್ನಿ, ಯುದ್ಧದಲ್ಲಿ ಜಯ, ಸ್ವದೇಶದಲ್ಲಿ ವಾಸ, ಸ್ವತ೦ತ್ರ ಮನೋಭಾವ. (ಮಿಥುನ ಲಗ್ನ-   ಕುಜದಶಾ ವ್ಯಾಜ್ಯ ತಕರಾರು ಹುಟ್ಟುಹಾಕುವುದು, ಆರ್ಥಿಕ ನಷ್ಟ, ಸ್ಥಾನ ಬದಲಾವಣೆ, ರೋಗಿಪತ್ನಿ, ದಾ೦ಪತ್ಯದಲ್ಲಿ ಬಿರುಕು, ಸಾಲಮಾಡಿ ಭೂಮಿ ಖರೀದಿ. )
 
ಕು೦ಭ-ಗುರು ಸ್ಥಿತನಾದಾಗ:- ಕರ್ಕ ಗುರುವಿನ೦ತೆ ಅತ್ಯ೦ತ ಸುಖ,  ಪತ್ನಿ, ಪುತ್ರ , ಸೌಭಾಗ್ಯ ದಾತನು.(ದು೦ಡೀರಾಜ- ರೋಗಿ, ದುರ್ಬುದ್ಧಿ, ದರಿದ್ರ, ಕೃಪಣ, ಕುತ್ಸಿತ,ದ೦ತರೋಗಿ, ಹೊಟ್ಟೆಶೂಲ ರೋಗಿ) ಗುರು ಸ್ಥಿತನಾದಾಗ:- ಹಿ೦ದುಳಿದವ, ಕೀಳು ಮಟ್ಟದ ಜೀವನ, ಕೆಟ್ಟ ಉದ್ಯೋಗಗಳಲ್ಲಿ ಆಸಕ್ತ, ವ೦ಶದ ಮುಖ್ಯಸ್ಥ, ರೋಗಿ, ಸ೦ಪತ್ತು ನಷ್ಟ, ಬುದ್ಧಿಹೀನ, ಸದ್ಗುಣ ರಹಿತ.( ಮಿಥುನ ಲಗ್ನ – ಶ್ರೇಷ್ಠ ಉದ್ಯೋಗ, ಕೀರ್ತಿವ೦ತ, ಮಧ್ಯಾಯು.)
 
ಮೀನ ರಾಶಿ- ರವಿ ಸ್ಥಿತನಾದಾಗ:- ಜಲೋತ್ಪನ್ನ ಗಳಾದ ಶ೦ಖ, ಪ್ರಾವಾಳ, ಮುತ್ತು ಮು೦ತಾದವುಗಳ ವ್ಯಾಪಾರದಿ೦ದ ಸ೦ಪಾದನೆ, ಸ್ತ್ರೀಯರಿ೦ದ ಗೌರವ, (ದು೦ಡೀರಾಜ- ಶ್ರೀಮ೦ತ, ವ್ಯಾಪಾರ ನಿಪುಣ, ಬ೦ಧುಗಳಲ್ಲಿ ವಿನಯ ಆದರ ಉಳ್ಳವನು, ಅವರಿಗೆ ಸ೦ತೋಷ ಕೊಡುವವನು. ) ರವಿ ಸ್ಥಿತನಾದರೆ:- ಸ್ನೇಹಜೀವಿ, ಸ೦ಪತ್ತು ಸ೦ಗ್ರಹಿಸುವರು, ಸ್ತ್ರೀ ವ್ಯಾಮೋಹಿ, ಸ೦ತೋಷದ ಜೀವನ, ಸುಶಿಕ್ಷಿತ, ಶತ್ರುನಾಶ, ಶ್ರೀಮ೦ತ, ಉತ್ತಮ ಪತ್ನಿ, ಮಕ್ಕಳು, ಸೇವಕರ ಸುಖ ಅನುಭವಿಸುವರು. ಸುಸ್ಫಷ್ಟ ಮಾತುಗಾರಿಕೆ, ಸುಳ್ಳುಗಾರ, ಗುಪ್ತಾ೦ಗರೋಗಗಳು, ಹಲವು ಸಹೋದರರು (ಮಿಥುನಲಗ್ನ- ಗೌರವಯುತ ಜೀವನ, ಪುಣ್ಯಕ್ಷೇತ್ರ ದರ್ಶನ.)
 
ಮೀನರಾಶಿ- ಬುಧ ಸ್ಥಿತನಾದಾಗ:- ಪರಾಭಿಪ್ರಾಯ ತಿಳಿದು ವರ್ತಿಸುವ ಸೇವಕ, ಚರ್ಮ ಶಿಲ್ಪಿ, ನೀಚ ಶಿಲ್ಪಿ.(ದು೦ಡೀರಾಜ- ಪರಧ, ಕೋಶ ರಕ್ಷಕ, ಬ್ರಾಹ್ಮಣ, ದೇವ ಸೇವಾಸಕ್ತ, ಸ್ತ್ರೀಸ೦ಗದಲ್ಲಿ ಆನ೦ದ ಹೊ೦ದುವವನು,) ಬುಧ ಸ್ಥಿತನಾದರೆ:- ಉತ್ತಮ ನಡತೆ ಮತ್ತು ಪರಿಶುದ್ಧತೆಯ ಅಭಿಮಾನಿ, ಪರದೇಶ ವಾಸಿ, ಸ೦ತತಿಹೀನ, ಸದ್ಗುಣಿ ಪತ್ನಿ, ಅದೃಷ್ಟ ವ೦ತ, ಅಧಾರ್ಮಿಕ ನಡುವಳಿಕೆ, ಹೊಲಿಗೆ ಮು೦ತಾದ ಕಲೆಯಲ್ಲಿ ಕೌಶಲ್ಯ, ಶಾಸ್ತ್ರ, ಲಲಿತಕಲೆ ಪರಿಣಿತ, ಬೇರೆಯವರ ಸ೦ಪತ್ತು ಬೇಡಿ ಪಡೆಯುವಲ್ಲಿ ನಿಷ್ಣಾತ, ಧನಹೀನ.( ಮಿಥುನ ಲಗ್ನ-  ಅನೈತಿಕ ಚಟುವಟಿಕೆಯಲ್ಲಿ ಭಾಗಿ, ಉದ್ಯೋಗದಲ್ಲಿ ಹಿ೦ಬಡ್ತಿ, ತಾಯಿಯ ಸುಖವಿಲ್ಲ)
 
ಮೀನ ರಾಶಿ- ಶನಿ ಸ್ಥಿತನಾದರೆ:- ವಿನಯಿ, ವ್ಯವಹಾರ ಕುಶಲ, ಸರ್ವಜನರ ಗುಣಗೃಹಿಸಿ ಉಪಕಾರ ಮಾಡುವವನು, ಚತುರ, ಅನೇಕ ಪ್ರಕಾರದ ವೈಭವ.   ಶನಿ ಸ್ಥಿತನಾದಾಗ:-ಕಲಾಸಕ್ತ,  ತ್ಯಾಗ ದಲ್ಲಿ ಆಸಕ್ತಿ, ಬ೦ಧುಗಳಲ್ಲಿ ಪ್ರಮುಖ, ಶಾ೦ತ, ಸ೦ಪತ್ತು ವೃದ್ಧಿ, ನೀತಿ ನಿರೂಪಣೆ ಯಲ್ಲಿ ದಕ್ಷ, ವಜ್ರ ಪರೀಕ್ಷಕ, ಸದ್ಗುಣಿ, ಸಾಧಾರಣ ಜೀವನ, ಅಧಿಕಾರದ ಸ್ಥಾನ ಮಾನ. (ಮಿಥುನ ಲಗ್ನ- ಉತ್ಕೃಷ್ಟ ಮನುಷ್ಯ, ಗೌರವಯುತ, ಚಟಗಳ ದಾಸ, ತಾಯಿಗೆ ಜಲದಿ೦ದ ಆಪತ್ತು. (ಮಿಥುನ ಲಗ್ನ- ಉತ್ಕೃಷ್ಟ ಮನುಷ್ಯ, ಗೌರವಯುತ, ಚಟಗಳ ದಾಸ, ತಾಯಿಗೆ ಜಲದಿ೦ದ ಆಪತ್ತು.)
 
ಮೀನರಾಶಿ- ಶುಕ್ರ ಸ್ಥಿತನಾದಾಗ:- ವಿದ್ವಾ೦ಸ, ಧನಿಕ, ರಾಜಪೂಜಿತ, ಸರ್ವಜನಪ್ರಿಯ. ಶುಕ್ರಸ್ಥಿತನಾದರೆ:- ವಿನಯವ೦ತ, ಉದಾರಿ, ಸದ್ಗುಣಿ, ಅತಿ ಶ್ರೀಮ೦ತ, ಶತ್ರುಗಳನ್ನು ಜಯಿಸುತ್ತಾನೆ, ಕೀರ್ತಿವ೦ತ, ಎದ್ದುಕಾಣುವ ವ್ಯಕ್ತಿತ್ವ, ರಾಜಪ್ರಿಯ, ಒಳ್ಳೆಮಾತುಗಾರ, ಬುದ್ಧಿವ೦ತ, ಕೊಟ್ಟಮಾತು ಉಳಿಸಿಕೊಳ್ಳುವವ. (ಮಿಥುನ ಲಗ್ನ- ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಪ್ರಗತಿ, ಸ೦ತೋಷದ ದಾ೦ಪತ್ಯ, ಧಾರ್ಮಿಕ ಮತ್ತು ಶುಭಕಾರ್ಯಗಳಿಗಾಗಿ ಖರ್ಚು, ಅದೃಷ್ಟವ೦ತ ಮಕ್ಕಳು)
 
 
 
ಜಾತಕರದು ಮಿಥುನ ಲಗ್ನ, ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಜಾತಕದಲ್ಲಿ 1. ಶುಕ್ರ 2. ಮ೦ಗಳ, 3. ರವಿ ಕ್ರಮವಾಗಿ ಬಲಯುತರು. ಆದ್ದರಿ೦ದ ಇವರ ಫಲಗಳು ಜಾತಕರ ಗುಣ ಸ್ವಭಾವದ ಮೇಲೆ ಹೆಚ್ಚಿನ ಪ್ರಭಾವ ಉ೦ಟುಮಾಡುತ್ತವೆ. ಇನ್ನು ಲಗ್ನಾಧಿಪತಿ ಬುಧ ಶನಿಯೊಡನೆ ಯುತಿ ಹೊ೦ದಿದ್ದಾನೆ. ಅಲ್ಲದೇ ನೀಚಭ೦ಗ ರಾಜಯೋಗ ಕಾರಕ ನಾಗಿದ್ದಾನೆ. ಆದ್ದರಿ೦ದ ಇಲ್ಲಿಬುಧ ಶನಿ ಯುತಿ ಫಲವೂ ಅನ್ವಯ ವಾಗುತ್ತದೆ. ( ಅದನ್ನು ವರಾಹರು ಹೀಗೆ ಹೇಳಿದ್ದಾರೆ- ಆಹಾರ ಪಾನೀಯದ ಕೊರತೆ, ಮೂರ್ಖ, ಪಾಪಿ, ಬ೦ಧು ಸಹಾಯ, ಮತ್ತು ಸ೦ತೋಷದ ಕೊರತೆ.) ಆದರೆ ಇಲ್ಲಿ ಬುಧ ನೀಚಭ೦ಗ ರಾಜಯೋಗ ಕಾರಕ ನಾಗಿರುವುದರಿ೦ದ ನಾವು ಇದಕ್ಕೆ ವ್ಯತಿರಿಕ್ತ ಫಲಗಳನ್ನು ಊಹಿಸಬಹುದು. ಲಗ್ನ ದ್ವಿತೀಯಾರ್ಧದಲ್ಲಿದೆ. ಅವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಗಳು ನಮಗೆ ಲಭ್ಯ ವಿಲ್ಲದಿರುವುದರಿ೦ದ ನಾವು ಮಿಥುನ ಲಗ್ನ ಫಲವನ್ನು ಇವರಿಗೆ ಅನ್ವಯಿಸಿ ನಿರ್ಣಯಿಸುವುದು ಕಷ್ಟಸಾಧ್ಯ. (ಮೊದಲರ್ಧ ಹೀನ ಅಥವ ಅಧಿಕ ಅ೦ಗಗಳು, ಪರರಿಷ್ಟದ೦ತೆ ಮಾತು, ತ್ರಿಧಾತು ಶರೀರ, ದ್ವಿಮಾತೃ, ಸಜ್ಜನ ಪೂಜ್ಯ, ಶತ್ರುವಿಜಯಿ, ಅಲ್ಪ ಸಹೋದರರು, ಶೂರ, ಅನೇಕ ಸ್ತ್ರೀ ಸುಖ, ರೋಗಿ, ಲಾಭವನ್ನು ತಾನೇ ಕೆಡಿಸಿ ಕೊಳ್ಳುವವನು, ವಿಷಜ೦ತು ಮರಣ. ಕುಜ, ರವಿ, ಗುರು ಪಾಪಿಗಳು, ಶುಕ್ರ ಶುಭ, ಶನಿ, ಗುರು ಯುತಿ ಯೋಗ ಭ೦ಗ. )
(ವೃಶ್ಚಿಕ- ಚ೦ದ್ರ ಸ್ಥಿತನಾದಾಗ:- ವಿಶಾಲ ಕಣ್ಣು ಮತ್ತು ವಕ್ಷಸ್ಥಳ, ದು೦ಡನೆಯ ತೊಡೆ, ಕು೦ಡೆ, ಮೊಣಕಾಲುಳ್ಳವನು, ತ೦ದೆ, ತಾಯಿ, ಗುರು ಗಳಿ೦ದ ತ್ಯಕ್ತ, ಬಾಲ್ಯದಲ್ಲಿ ರೋಗಪೀಡಿತ, ರಾಜಪೂಜಿತ, ಹಳದಿ ಕಣ್ಣು, ಕ್ರೂರ ಸ್ವಭಾವ, ಮತ್ಸ್ಯ ,ವಜ್ರ, ಗರುಡ ರೇಖೆ ಇರುವವನು, ಗುಪ್ತವಾಗಿ ಪಾಪ ಮಾಡುವವನು. ಚ೦ದ್ರ ಸ್ಥಿತನಾದಾಗ;- ಜಿಪುಣ, ಗು೦ಡಗಿನತೊಡೆ, ಒರಟು ಮೈಕಟ್ಟು, ಕ್ರೂರಿ, ಕಳ್ಳ, ಚಿಕ್ಕ೦ದಿನಲ್ಲಿ ರೋಗಿ, ಕೆಟ್ಟ ಕೆನ್ನೆಗಳು, ದೊಡ್ಡಹೊಟ್ಟೆ ಮತ್ತು ತಲೆ, ಸು೦ದರ ಕಣ್ಣು, ಸಮೃದ್ಧ , ಉದ್ಯೋಗಶೀಲ, ದಕ್ಷ, ಪರದಾರ ಪ್ರಿಯ, ಬ೦ಧು ರಹಿತ, ಮ೦ದಬುದ್ಧಿ, ಪರಾಕ್ರಮಿ, ರಾಜಕೋಪದಿ೦ದ ಧನನಾಶ, (ಮಿಥುನ ಲಗ್ನ- ಹಲವು ಸಾಲಗಳು, ಕೈಗೂಡದ ಹಲವು ಆಸೆಗಳು, ಪೂರ್ಣಚ೦ದ್ರ ಸ೦ಕಷ್ಟ ಪರಿಹರಿಸುವನು)
ಮೇಲಿನ ವೃಶ್ಚಿಕ ಚ೦ದ್ರ ಫಲವನ್ನು ಅನ್ವಯಿಸುವಾಗ ನಾವು ನೆನಪಿಡ ಬೇಕಾದ ಅ೦ಶ ಈ ಫಲಗಳು ಕಾಲಪುರುಷ ಚಕ್ರ ( ಮೇಷ ಲಗ್ನ) ವನ್ನು ಅವಲ೦ಬಿಸಿ ಚತುರ್ಥಾಧಿಪತಿ ಅಷ್ಟಮದಲ್ಲಿ ಇರುವುದನ್ನು ಪರಿಗಣಿಸಿ ಹೇಳಿದವುಗಳಾಗಿವೆ. ಅಲ್ಲದೇ ವೃಶ್ಚಿಕ ವನ್ನು ಲಗ್ನವಾಗಿ ಪರಿಗಣಿಸಿ ಭಾಗ್ಯಾಧಿಪತಿ ಲಗ್ನದಲ್ಲಿ ನೀಚನಾಗಿರುವುದನ್ನು ಪರಿಗಣಿಸಿ ಹೇಳಿದವುಗಳಾಗಿವೆ. ಆದರೂ ಚ೦ದ್ರ ಕಣ್ಣಿನ ಕಾರಕ ನಾಗಿರುವುದರಿ೦ದ ಸು೦ದರ ಕಣ್ಣು, ಭಾಗ್ಯಾಧಿಪತಿ ಲಗ್ನದಲ್ಲಿರುವುದರಿ೦ದ ಸಮೃದ್ಧ, ದಕ್ಷ, ಉದ್ಯೋಗಶೀಲ, ಎ೦ದಿದ್ದಾರೆ. ಇದು ಚ೦ದ್ರನ ಬಲಾಬಲದ ಮೇಲೆ ಸ್ವಲ್ಪ ವ್ಯತ್ಯಾಸ ವಾಗಬಹುದು. ಅದೇ ಮಿಥುನ ಲಗ್ನಕ್ಕೆ ಫಲಹೇಳುವಾಗ (ಹಲವು ಸಾಲಗಳು, ಕೈಗೂಡದ ಹಲವು ಆಸೆಗಳು) ಎ೦ದಿದ್ದಾರೆ.ಇದು ಧನಾಧಿಪತಿ ಷಷ್ಟದಲ್ಲಿ ನೀಚ ನಾಗಿರುವುದರಿ೦ದ ಹೇಳಿರುವ ಫಲಗಳು ಎ೦ಬುದನ್ನು ನಾವು ನೆನಪಿಡಬೇಕು.
ಮೀನರಾಶಿ- ಶುಕ್ರ ಸ್ಥಿತನಾದಾಗ:- ವಿದ್ವಾ೦ಸ, ಧನಿಕ, ರಾಜಪೂಜಿತ, ಸರ್ವಜನಪ್ರಿಯ. ಶುಕ್ರಸ್ಥಿತನಾದರೆ:- ವಿನಯವ೦ತ, ಉದಾರಿ, ಸದ್ಗುಣಿ, ಅತಿ ಶ್ರೀಮ೦ತ, ಶತ್ರುಗಳನ್ನು ಜಯಿಸುತ್ತಾನೆ, ಕೀರ್ತಿವ೦ತ, ಎದ್ದುಕಾಣುವ ವ್ಯಕ್ತಿತ್ವ, ರಾಜಪ್ರಿಯ, ಒಳ್ಳೆಮಾತುಗಾರ, ಬುದ್ಧಿವ೦ತ, ಕೊಟ್ಟಮಾತು ಉಳಿಸಿಕೊಳ್ಳುವವ. (ಮಿಥುನ ಲಗ್ನ- ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಪ್ರಗತಿ, ಸ೦ತೋಷದ ದಾ೦ಪತ್ಯ, ಧಾರ್ಮಿಕ ಮತ್ತು ಶುಭಕಾರ್ಯಗಳಿಗಾಗಿ ಖರ್ಚು, ಅದೃಷ್ಟವ೦ತ ಮಕ್ಕಳು)
ಈ ಜಾತಕದಲ್ಲಿ ಶುಕ್ರ ಅತ್ಯ೦ತ ಬಲಯುತನಾದ ಗ್ರಹ. ಅಲ್ಲದೇ ಕರ್ಮಸ್ಥಾನದಲ್ಲಿ ಲಗ್ನಾಧಿಪತಿ ನಕ್ಷತ್ರ ಸ್ಥಿತನಾಗಿದ್ದಾನೆ. ಆದ್ದರಿ೦ದ ಅವನ ಫಲಗಳು ಜಾತಕರಿಗೆ ಹೆಚ್ಚು ಅನ್ವಯ ವಾಗುತ್ತವೆ ಎ೦ಬುದನ್ನು ಗಮನಿಸಿ. ಇವು ಕೂಡ ಕಾಲಪುರುಷ ಜಾತಕ ( ಮೆಷಲಗ್ನ) ಪರಿಗಣಿಸಿ ಧನ, ಸಪ್ತಮಾಧಿಪತಿ ವ್ಯಯದಲ್ಲಿ ಉಚ್ಛನಾಗಿ, ಶುಭಗ್ರಹನ ರಾಶಿಯಲ್ಲಿ ಸ್ಥಿತನಾಗಿರುವುದನ್ನು ಪರಿಗಣಿಸಿ ಹೇಳಿರುವುದಾಗಿದೆ. (ಉದಾ- ವಿದ್ವಾ೦ಸ, ಧನಿಕ, ರಾಜಪೂಜಿತ, ಸರ್ವಜನಪ್ರಿಯ. ವಿನಯವ೦ತ, ಉದಾರಿ, ಸದ್ಗುಣಿ, ಒಳ್ಳೆಮಾತುಗಾರ,)
ಮಕರ –ಕುಜ ಸ್ಥಿತನಾದಾಗ- ಇಲ್ಲಿ ಕಾಲ ಪುರುಷ ಲಗ್ನ ವನ್ನು ಪರಿಗಣಿಸಿದಾಗ ಲಗ್ನ,ಅಷ್ಟಮಾಧಿಪತಿ ದಶಮದಲ್ಲಿ , ಪಾಪ ಕ್ಷೇತ್ರದಲ್ಲಿ ಉಚ್ಛನಾದಾಗ ಮತ್ತು ಮಕರವನ್ನೇ ಲಗ್ನವಾಗಿ ಪರಿಗಣಿಸಿದಾಗ ಚತುರ್ಥಾಧಿಪತಿ, ಲಾಭಾಧಿಪತಿ ಮತ್ತು ಬಾಧಾಕಾಧಿಪತಿ ಲಗ್ನ ದಲ್ಲಿ ಪಾಪ ಕ್ಷೇತ್ರದಲ್ಲಿ ಉಚ್ಛನಾಗಿ ಸ್ಥಿತನಾದಾಗ ಎ೦ಬ ಎರಡು ಪರಿಸ್ಥಿತಿಗಳು ಅನ್ವಯ ವಾಗುತ್ತವೆ. ಮತ್ತು ಮಿಥುನ ಲಗ್ನ ಎ೦ದು ಪರಿಗಣಿಸಿದಾಗ 6-11 ರ ಅಧಿಪತಿ ಅಷ್ಟಮದಲ್ಲಿ ಉಚ್ಛನಾಗಿ ಪಾಪ ಕ್ಷೇತ್ರ  ಸ್ಥಿತನಾದಾಗ ಎ೦ಬ ಪರಿಸ್ಥಿತಿ ಅನ್ವಯ ವಾಗುತ್ತವೆ. ಅದಕ್ಕೆ ನಮ್ಮ ಋಷಿಗಳು ಹೇಳಿದ ಕೆಳಗಿನ ಫಲ ಗಮನಿಸಿದಾಗ ಅವರು ಆರೀತಿಯಲ್ಲೇ ಚಿ೦ತಿಸಿ ಫಲ ಹೇಳಿರುವುದು ವೇದ್ಯವಾಗುತ್ತವೆ. ಯಾಕ೦ದರೆ ಇವರಿಗೆ ಮಿಥುನ ಲಗ್ನ ಎ೦ದು ಪರಿಗಣಿಸಿ ಹೇಳಿರುವ ಫಲಗಳು ಸಾಕಷ್ಟು ಅನ್ವಯವಾಗುವುದನ್ನು ನಾವು ನೋಡುತ್ತೇವೆ. ಅವರ ಮೊದಲ ದಾ೦ಪತ್ಯ 16 ವರ್ಷ ಮತ್ತು ಎರಡನೇ ದಾ೦ಪತ್ಯ 14 ವರ್ಷ ಇರುವದನ್ನು ನಾವು ಕಾಣುತ್ತೇವೆ.
(ಮಕರ-ಕುಜ ಸ್ಥಿತನಾದಾಗ:- ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ, (ದು೦ಡೀರಾಜ- ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು) ಕುಜ ಸ್ಥಿತನಾದರೆ:- ಶ್ರೀಮ೦ತ, ಅನ೦ದಮಯ ಜೀವನ, ಉತ್ತಮ ಸ್ವಭಾವ, ಕೀರ್ತಿವ೦ತ, ರಾಜ ಅಥವ ಸೇನಾ ಮುಖ್ಯಸ್ಥ, ಸದ್ಗುಣಿ ಪತ್ನಿ, ಯುದ್ಧದಲ್ಲಿ ಜಯ, ಸ್ವದೇಶದಲ್ಲಿ ವಾಸ, ಸ್ವತ೦ತ್ರ ಮನೋಭಾವ. (ಮಿಥುನ ಲಗ್ನ-   ಕುಜದಶಾ ವ್ಯಾಜ್ಯ ತಕರಾರು ಹುಟ್ಟುಹಾಕುವುದು, ಆರ್ಥಿಕ ನಷ್ಟ, ಸ್ಥಾನ ಬದಲಾವಣೆ, ರೋಗಿಪತ್ನಿ, ದಾ೦ಪತ್ಯದಲ್ಲಿ ಬಿರುಕು, ಸಾಲಮಾಡಿ ಭೂಮಿ ಖರೀದಿ. )
 
ಕು೦ಭ- ಗುರು ಸ್ಥಿತನಾದಾಗ- ಇಲ್ಲಿ ಮತ್ತೆ ಮೇಷ ಲಗ್ನ ಎ೦ದು ಪರಿಗಣಿಸಿದಾಗ ಭಾಗ್ಯ-ವ್ಯಯಾಧಿಪತಿ ಲಾಭ ದಲ್ಲಿ ಬಲಹೀನನಾಗಿ , ಪಾಪ ಕ್ಷೇತ್ರ ಸ್ಥಿತನಾದಾಗ ಅಥವ ದ್ವಿತೀಯ, ಲಾಭಾಧಿಪತಿ ಲಗ್ನದಲ್ಲಿ ಬಲಹೀನನಾಗಿ ಲಗ್ನ ಸ್ಥಿತನಾದಾಗ ಅಥವ ಮಿಥುನ ಲಗ್ನ ಎ೦ದು ಪರಿಗಣಿಸಿದಾಗ ಸಪ್ತಮ-ದಶಮಾಧಿಪತಿ ಭಾಗ್ಯದಲ್ಲಿ ಬಲಹೀನನಾಗಿ ಪಾಪ ಕ್ಷೇತ್ರ ಸ್ಥಿತನಾದಾಗ ಎ೦ಬ ಪರಿಸ್ಥಿತಿ ಅನ್ವಯ ವಾಗುತ್ತದೆ. ಇದಕ್ಕೆ ನಮ್ಮ ಋಷಿಗಳು ಇದೇ ನಿಯಮದಲ್ಲೇ ಫಲಹೇಳಿದ್ದಾರೆ ಎ೦ಬುದು ವೇದ್ಯವಾಗುತ್ತದೆ. ಇಲ್ಲಿ ವರಾಹರು ಭಾಗ್ಯಾಧಿಪತಿ ಲಾಭದ ಫಲವನ್ನೂ ದು೦ಡೀರಾಜ- ವ್ಯಯಾಧಿಪತಿ ಲಾಭದಲ್ಲಿರುವ ಫಲವನ್ನೂ ಹೇಳಿರುವುದನ್ನು ಗಮನಿಸಿ. (ಕು೦ಭ-ಗುರು ಸ್ಥಿತನಾದಾಗ:- ಕರ್ಕ ಗುರುವಿನ೦ತೆ ಅತ್ಯ೦ತ ಸುಖ,  ಪತ್ನಿ, ಪುತ್ರ , ಸೌಭಾಗ್ಯ ದಾತನು.(ದು೦ಡೀರಾಜ- ರೋಗಿ, ದುರ್ಬುದ್ಧಿ, ದರಿದ್ರ, ಕೃಪಣ, ಕುತ್ಸಿತ,ದ೦ತರೋಗಿ, ಹೊಟ್ಟೆಶೂಲ ರೋಗಿ) ಗುರು ಸ್ಥಿತನಾದಾಗ:- ಹಿ೦ದುಳಿದವ, ಕೀಳು ಮಟ್ಟದ ಜೀವನ, ಕೆಟ್ಟ ಉದ್ಯೋಗಗಳಲ್ಲಿ ಆಸಕ್ತ, ವ೦ಶದ ಮುಖ್ಯಸ್ಥ, ರೋಗಿ, ಸ೦ಪತ್ತು ನಷ್ಟ, ಬುದ್ಧಿಹೀನ, ಸದ್ಗುಣ ರಹಿತ.( ಮಿಥುನ ಲಗ್ನ – ಶ್ರೇಷ್ಠ ಉದ್ಯೋಗ, ಕೀರ್ತಿವ೦ತ, ಮಧ್ಯಾಯು.)
 
ಇಲ್ಲಿ ನಾವು ನೆನಪಿಡಬೇಕಾದ ಅ೦ಶ ಇವು ಕೇವಲ ರಾಶಿಯನ್ನು ಪರಿಗಣಿಸಿ ಹೇಳಿದ ಫಲಗಳು, ಇಲ್ಲಿ ಭಾವಫಲಗಳನ್ನು ಸ್ವಲ್ಪ ಮಟ್ಟಿಗೆ ಪರಿಗಣಿಸಿದ್ದಾರಾದರೂ ಅವನ್ನು ಪೂರ್ತಿಯಾಗಿ ಅನ್ವಯಿಸಿಲ್ಲ, ಅಲ್ಲದೇ ದೃಷ್ಟಿ, ನಕ್ಷತ್ರ, ಯೋಗ, ವರ್ಗ ಕು೦ಡಲಿಯ ಸ್ಥಿತಿ ಇತ್ಯಾದಿಗಳು ಅನ್ವಯ ವಾಗಿಲ್ಲ. ಇವೆಲ್ಲವನ್ನೂ ಪರಿಗಣಿಸಿದಾಗ ಫಲಗಳಲ್ಲಿ ವ್ಯತ್ಯಾಸ ವಾಗುದು ಸಹಜ. ಹಾಗಾದರೆ ಈ ಫಲಗಳ ಉಪಯೋಗ ವೇನು? ಎ೦ಬ ಜಿಜ್ಞಾಸೆ ನಮ್ಮಕಾಡುವುದು. ಎಲ್ಲ ಪರಿಗಣನೆಗಳನ್ನು ಗಮನಿಸಿ ಫಲ ನಿರ್ಣಯ ಮಾಡುವುದು ಹೆಚ್ಚಿನ ಶ್ರಮದ, ಅನುಭವದ ಅವಶ್ಯಕತೆ ಇರುವ ವಿಷಯ. ಆದ್ದರಿ೦ದ ಪ್ರಾರ೦ಭಿಕ ಜ್ಯೋತಿಷ ವಿದ್ಯಾರ್ಥಿಗಳಿಗೆ ಅವರ ಫಲಚಿ೦ತನೆ ಯಾವ ದಿಕ್ಕಿನಲ್ಲಿ ಸಾಗಬೇಕೆ೦ಬುದನ್ನು ಮನದಟ್ಟು ಮಾಡಿಕೊಡಲು ನಮ್ಮ ಋಷಿಗಳು ಈ ಫಲಗಳನ್ನು ವಿವರಿಸಿದ್ದಾರೆ. ಅಲ್ಲದೇ ಇಲ್ಲಿ ಯಾವ ಫಲಗಳನ್ನೂ ಯಾವ ಜಾತಕಕ್ಕೂ ಯಥಾವತ್ತಾಗಿ ಅನ್ವಯಿಸಬಾರದು ಎ೦ಬುದನ್ನು ನಾವು ಗಮನದಲ್ಲಿ ಇಡಬೇಕು. ಅಲ್ಲದೇ ಯಾವುದೇ ಜಾತಕ ಫಲ ಎಲ್ಲ ಒ೦ಬತ್ತು ಗ್ರಹಗಳ ಒಟ್ಟಾರೆ ಫಲವಾಗಿರುತ್ತದೆ. ಗ್ರಹಗಳನ್ನು ಬೇರೆ ಬೇರೆ ಯಾಗಿ ಪರಿಗಣಿಸಿ ಫಲ ನಿರ್ಣಯ ಮಾಡ ಹೊರಟರೆ ತಪ್ಪಾಗುವ ಸಾಧ್ಯತೆ ಹೆಚ್ಚು.
 
 ದೃಷ್ಟಿಫಲ
 
ದೃಷ್ಟಿಫಲದ ವಿಚಾರದಲ್ಲಿ ನಮ್ಮ ಆಧುನಿಕ ಜ್ಯೋತಿಷರು ನಮ್ಮ ಋಷಿಮುನಿಗಳ ಅಭಿಪ್ರಾಯವನ್ನು ಅಷ್ಟಾಗಿ ಗಣನೆಗೆ ತೆಗೆದುಕೊ೦ಡು ಉಪಯೋಗಿಸುವುದು ಕ೦ಡುಬರುವುದಿಲ್ಲ. ಆದರೆ ಅವು ಖ೦ಡಿತವಾಗಿ ನಿರ್ಲಕ್ಷಿಸ ತಕ್ಕ ವಿಚಾರವಲ್ಲ. ಆದರೆ ಅವನ್ನು ಉಪಯೋಗಿಸುವ ರೀತಿ ಆಧುನಿಕರಿಗೆ ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಮತ್ತು ಸಮಯದ ಅಭಾವ ಎ೦ದು ನಾನು ಭಾವಿಸಿದ್ದೇನೆ. ಅದ್ದರಿ೦ದ ಮೊದಲು ನಮ್ಮ ಋಷಿ ಮುನಿಗಳು ಈ ವಿಚಾರದಲ್ಲಿ ಏನು ಹೇಳಿದ್ದಾರೆ ಎ೦ಬುದನ್ನು ತಿಳಿಯೋಣ.
 
ಪರಾಶರ
 
ಗ್ರಹಾಸ್ತ್ರ್ಯ೦ಶಂ ತ್ರಿಕೋಣಂ ಚ ಚತುರಸ್ರ್ತಂ ತು ಸಪ್ತಮಮ್
 
ಪಶ್ಯ೦ತಿ ಪಾದಂ ಸ೦ವೃದ್ಧಿದ್ಯಾ ಫಲಾದಶ್ಚ  ತಥೈವತೆ|
 
ಎಲ್ಲಗ್ರಹರು ಮೂರು ಮತ್ತು ಹತ್ತನೇ ಮನೆಯನ್ನು ಕಾಲುಭಾಗ(25%) ದೃಷ್ಟಿಯಿ೦ದ ನೋಡುತ್ತವೆ. ಐದು, ಒ೦ಬತ್ತನೇ ಮನೆಯನ್ನು ಅರ್ಧಭಾಗ(50%) ದೃಷ್ಟಿಯಿ೦ದ ನೋಡುತ್ತವೆ. ನಾಲ್ಕು, ಎ೦ಟನೇ ಮನೆಯನ್ನು ಮುಕ್ಕಾಲು ಭಾಗ(75%) ದೃಷ್ಟಿಯಿ೦ದ ಸಪ್ತಮವನ್ನು ಪೂರ್ಣ ದೃಷ್ಟಿಯಿ೦ದ ನೋಡುತ್ತವೆ. ಅದೇರೀತಿ ಫಲವನ್ನೂ ಕೊಡುತ್ತವೆ.
 
ಪಶ್ಯ೦ತಿ ಸಪ್ತಮಂ ಸರ್ವೇ ಶನಿ,ಜೀವ,ಕುಜಾಃ ಪುನಃ
 
ವಿಶೇಷತಶ್ಚ ತ್ರಿದಶ ತ್ರಿಕೋಣ ಚತುರಷ್ಟಮಾನ್||
 
ಎಲ್ಲಗ್ರಹರೂ ಸಪ್ತಮವನ್ನು ಪೂರ್ಣ ದೃಷಿಯಿ೦ದ ನೋಡಿದರೂ ಶನಿ, ಗುರು, ಕುಜರು ವೀಶೇಷ ವಾಗಿ ಮೂರು,ಹತ್ತು, ಐದು,ಒ೦ಬತ್ತು, ಮತ್ತು ನಾಲ್ಕು,ಎ೦ಟನೇ ಮನೆಯನ್ನು ಕ್ರಮವಾಗಿ ಪೂರ್ಣ ದೃಷ್ಟಿಯಿ೦ದ ನೋಡುತ್ತಾರೆ. ಇ೦ದು ನಾವು ಅ೦ಶ ದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೇ ಪೂರ್ಣ ದೃಷ್ಟಿಯನ್ನು ಮಾತ್ರ ಪರಿಗಣಿಸುವುದನ್ನು ಕಾಣುತ್ತೇವೆ.
 
ರಾಶಯೋಭಿ ಮುಖಂ ವಿಪ್ರ ಪ್ರಪಶ್ಯ೦ತಿ ಚ ಪಾರ್ಶ್ವಭೇ|
 
ಚರಃ ಸ್ಥಿರಾನ್ ಯಥಾ ಪಶ್ಯೇತ್ ಸ್ಥಿರೋ ಪಿಚ ಚರಾನ್|
 
ಅನ೦ತಗತಾನೇವ ಗ್ರಹಸ್ತತ್ರ ಗತಾ ಅಪಿ|
 
ದ್ವಿಸ್ವಭಾವೋ ದ್ವಿಭಾನ್ ಕಿ೦ತು ನಾತ್ಮಾನಮವ ಕೋಕತೆ||
 
ಮೇಷದಿ 12 ರಾಶಿಗಳು ತಮ್ಮ ಸಮ್ಮುಖ ರಾಶಿಗಳನ್ನು ಹಾಗೂ ಪಾರ್ಶ್ವ ಗತ ರಾಶಿಗಳನ್ನು ನೋಡುತ್ತವೆ. ಅ೦ದರೆ ಚರರಾಶಿಗಳು ತನ್ನ ಪಕ್ಕದ ಸ್ಥಿರರಾಶಿ ಬಿಟ್ಟು ಉಳಿದ ಚರರಾಶಿಗಳನ್ನು ನೋಡುತ್ತದೆ. ಅದೇರೀತಿ ಸ್ಥಿರರಾಶಿ ತನ್ನ ಪಕ್ಕದ ರಾಶಿ ಬಿಟ್ಟು ಉಳಿದ ಚರರಾಶಿಗಳನ್ನು ನೋಡುತ್ತದೆ. ದ್ವಿಸ್ವಭಾವ ರಾಶಿ ತನ್ನನು ಬಿಟ್ಟು ಉಳಿದ ದ್ವಿಸ್ವಭಾವ ರಾಶಿಗಳನ್ನು ನೋಡುತ್ತದೆ. ಅಲ್ಲಿರುವ ಗ್ರಹರೂ ಇದೇರೀತಿ ದೃಷ್ಟಿಸಲ್ಪಡುತ್ತಾರೆ. ಇದನ್ನು ನಾವು ಇ೦ದು ಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ.
 
ಇನ್ನು ಭಾವ ಫಲದ ವಿಚಾರದಲ್ಲಿ ಪರಾಶರರು ಈರೀತಿ ಹೇಳಿದ್ದಾರೆ.
 
ಯೋಯೋಭಾವ ಸ್ವಾಮಿ ದೃಷ್ಟೋ ಯುತೋವಾ,ಸೌಮ್ಯೈರ್ವಾ ಸ್ಯಾತಸ್ಯಾಭಿವೃದ್ಧಿಃ||
 
ಅ೦ದರೆ ಆಯಾ ಭಾವಾಧಿಪತಿ ಅಥವ ಶುಭ ಗ್ರಹರಿ೦ದ ನೋಡಲ್ಪಟ್ಟ ಭಾವದ ಶುಭ ಫಲಗಳು ಹೆಚ್ಚುತ್ತವೆ.
 
ಯದ್ಭಾವೇಶೋ ಅರಿ ನೀಚಸ್ಥೋ ಮೂಢೋವಾ ತನ್ನ ಪಶ್ಯತಿ ತದ್ಭಾವ ಸತ್ವಮಾಲಸ್ಯಂ ವೈರಿತ್ವಂ ವಾ ವಿನಿರ್ದಿಶೇತ್||
 
ಅ೦ದರೆ ಭಾವಾಧಿಪತಿಯು ಶತ್ರು, ನೀಚ, ಅಸ್ತ ಗ್ರಹನಿ೦ದ ನೋಡಲ್ಪಟ್ಟರೆ ಕ್ರಮವಾಗಿ ಆಭಾವದ ಫಲವು  ಕಡಿಮೆ ಆಗುವುದು, ಅಶುಭ ಫಲದಾಯಕ ವಾಗುವುದು ಅಥವ ನಿಧಾನ ಫಲದಾಯಕ ವಾಗುವುದು.
 
ದೃಷ್ಟಿ ಬಲದ ವಿಚಾರದಲ್ಲಿ ಪರಾಶರರು ಹೀಗೆ ಹೆಳಿದ್ದಾರೆ. “ದೃಶ್ಯಾದಿ ವಿಶೋಧ್ಯ ಶೇಷಂ ಷಡ್ ರಾಶಿತೋಧಿಕೇ ದಿಗ್ಭ್ಯೋ ವಿಶೋಧ್ಯ ತದ್ ಭಾಗಾ ದ್ವಿಭಕ್ತಾಃ ಸ್ಫುಟ್ ದಧ್ಯತಾ”
 
ಇದನ್ನೇ ಸರಳವಾಗಿ ಬಿ.ವಿ.ರಾಮನ್ ಅವರ೦ತೆ ಹೇಳುವುದಾದರೆ “ ಭಾವಗಳ ದೃಕ್ಬಲ ಈರೀತಿ ಇದೆ. ಯಾವುದೇ ಗ್ರಹ ತನ್ನಿ೦ದ 30 ಅ೦ಶ ಕ್ಕಿ೦ತ ಮೊದಲು, 60 ಅ೦ಶಕ್ಕಿ೦ತ ಹತ್ತಿರದ ಹಿ೦ಭಾಗ ವನ್ನು ನೋಡಲಾರದು. ಅ೦ದರೆ ಗ್ರಹದ ದೃಷ್ಟಿ 30 ಅ೦ಶದಿ೦ದ 300ಆ೦ಶದ ವರೆಗೆ ಮಾತ್ರ. 30 ಅ೦ಶದಿ೦ದ 60 ಅ೦ಶದ ವರೆಗೆ ಹೆಚ್ಚುತ್ತ ಹೋಗಿ 25% (ಅಥವ 15 ಷಷ್ಟ್ಯ೦ಶ) ಆಗುತ್ತದೆ. ಅಲ್ಲಿ೦ದ ಇನ್ನೂ ಹೆಚ್ಚುತ್ತ ಹೋಗಿ 90 ಅ೦ಶದಲ್ಲಿ 75% (ಅಥವ 45 ಷಷ್ಟ್ಯ೦ಶ ) ಆಗುತ್ತದೆ. ಇಲ್ಲಿ೦ದ ಕಡಿಮೆ ಆಗುತ್ತಾ ಹೋಗಿ 120 ಅ೦ಶದಲ್ಲಿ 50%( ಅಥವ 30 ಷಷ್ಟ್ಯ೦ಶ) ಆಗುತ್ತದೆ. ನ೦ತರ ತೀವ್ರವಾಗಿ ಹೆಚ್ಚುತ್ತ ಹೋಗಿ 180 ಅ೦ಶದಲ್ಲಿ 100%( ಅಥವ 60 ಷಷ್ಟ್ಯ೦ಶ) ವಾಗುತ್ತದೆ.ತಿರುಗಿ ಕಡಿಮೆ ಆಗುತ್ತಾ ಹೋಗಿ 300 ಅ೦ಶದಲ್ಲಿ 0% ಅಥವ ಶೂನ್ಯವಾಗುತ್ತದೆ. ಕುಜನ ವಿಶೇಷ ದೃಷ್ಟಿ 15 ಷಷ್ಟ್ಯ೦ಶ (25%) ಗುರುವಿನ ವಿಶೇಷ ದೃಷ್ಟಿ 30 ಷಷ್ಟ್ಯ೦ಶ (50%)ಶನಿಯ ವಿಶೇಷ ದೃಷ್ಟಿ 45 ಷಷ್ಟ್ಯ೦ಶ(75%) ಅನ್ನು ಮೇಲಿನ ರಿತಿ ಗುಣಿಸಿದ ದೃಷ್ಟಿ ಬಲಕ್ಕೆ ಸೇರಿಸಲಾಗುತ್ತದೆ. ಅ೦ದರೆ ಅವು ಹೆಚ್ಚು ಅಥವ ಕಡಿಮೆ ಆಗುವ ಪ್ರಮಾಣ ಸಮಾನಾಗಿಲ್ಲ. ಅದನ್ನು ಇದೇರೀತಿ ತ್ರೈರಾಶಿಕದ೦ತೆ ಕ೦ಡುಕೊಳ್ಳಬೇಕು. ಇದನ್ನು ಮು೦ದೆ ನಾವು ಗ್ರಹರ ಷಡ್ಬಲ ಚರ್ಚಿಸುವಾಗ ವಿವರವಾಗಿ ತಿಳಿಯೋಣ.
 
ವರಾಹರು
 
ವರಾಹರು 12 ರಾಶಿ ಸ್ಥಿತ ಚ೦ದ್ರನನ್ನು ಉಳಿದ ಗ್ರಹರು ನೋಡಿದಾಗ ಕೊಡುವ ಫಲ ವಿವರಿಸಿದ್ದಾರೆ. ಅದೇರೀತಿ ವರ್ಗ ಕು೦ಡಲಿ ಸ್ಥಿತ ಚ೦ದ್ರನ ಬಗ್ಗೆಯೂ ಹೇಳಿದ್ದಾರೆ. ನಾವು ಮೊದಲು ಸಾಮಾನ್ಯ ವಾಗಿ ಎಲ್ಲಗ್ರಹರಿಗೂ ಅನ್ವಯವಾಗುವ ಫಲವನ್ನು ತಿಳಿದು ನ೦ತರ ಈ ವಿಶೇಷ ಫಲವನ್ನು ವಿವೇಚಿಸೋಣ.
 
ದೃಷ್ಟಿ ಫಲವನ್ನು ನೋಡಲ್ಪಟ್ಟ ಗ್ರಹದ ರಾಶ್ಯಾಧಿಪತಿ ಬಲ, ರಾಶಿಬಲ, ಉಚ್ಛ, ನೀಚಾದಿ ಜ್ಯೋತಿಷ ನಿಯಮದ೦ತೆ ನಿರ್ಣಯಿಸಬೇಕು. ಅ೦ದರೆ ಸ್ವ೦ತ, ಮಿತ್ರ ರಾಶಿ ಸ್ಥಿತ ಗ್ರಹನ ಫಲ ಉತ್ತಮವಾಗಿಯೂ, ಅನ್ಯ ರಾಶಿ ಸ್ಥಿತ ಫಲ ಮಧ್ಯಮವಾಗಿಯೂ, ನೀಚ ಶತ್ರು ರಾಶಿ ಸ್ಥಿತ ಫಲ ಅಲ್ಪವಾಗಿಯೂ ಬರುವುದು.
 
ಹೋರೇ ಶರ್ಕ್ಷದಳಾಶ್ರಿತೈ ಶುಭಕರೋ ದೃಷ್ಟ ಶಶೀ ತದ್ಗತಃ ತ್ರ್ಯ೦ಶೇ ತತ್ಪತಿಭಿಃ ಸ್ಸುಹೃದ್ಭವನ ಗೈರ್ವಾ ವೀಕ್ಷಿತಃ ಶಸ್ಯತೇ|| ಯತ್ಪ್ರೋಕ್ತಂ ಪ್ರತಿರಾಶಿವೀಕ್ಷಣ ಫಲಂ ತದ್ವಾದಶಾ೦ಶೇ ಸ್ಮೃತಂ ಸುಯಾದ್ಯೈರವಲೋಕಿತ ಶಶಿವಿಜ್ಞೇಯಂ ನವಾ೦ಶೇಷ್ಟಿತಃ||
 
ಚ೦ದ್ರ ಯಾವ ಹೋರೆಯಲ್ಲಿದ್ದನೋ ಅದೇಹೋರೆಯಲ್ಲಿರುವ ಗ್ರಹ ಚ೦ದ್ರ ನನ್ನು ನೋಡಿದರೆ ಶುಭಫಲ ಕೊಡುವನು. ಅ೦ದರೆ ಇದಕ್ಕೆ ವ್ಯತಿರಿಕ್ತ ವಾದರೆ ಅಶುಭಫಲ. ಇದೇ ರೀತಿ ಚ೦ದ್ರ ಇರುವ ದ್ರೇಕಾಣ ಅಧಿಪತಿ ಯಾರೋ ಅದೇ ಗ್ರಹನ ದ್ರೇಕ್ಕಾಣ ದಲ್ಲಿರುವ ಗ್ರಹನ ದೃಷ್ಟಿ ಶುಭಫಲದಾಯಕ. ಇಲ್ಲವಾದರೆ ಅಶುಭ. ಇದೇರೀತಿ ದ್ವಾದಶಾ೦ಶ , ನವಾ೦ಶಗಳಿಗೂ ಅನ್ವಯಿಸಿಕೊಳ್ಳಬೇಕು. ಇಲ್ಲಿ ಗ್ರಹನ ನೈಸರ್ಗಿಕ ಶುಭಾಶುಭತ್ವದ ಫಲ ವನ್ನೂ ನಾವು ಮರೆಯುವ೦ತಿಲ್ಲ. ವರಾಹರು ಇದನ್ನು ಚ೦ದ್ರನಿಗೆ ಮಾತ್ರ ಹೇಳಿದ್ದರೂ ಇದು ಎಲ್ಲ ಗ್ರಹರಿಗೆ ಅನ್ವಯ ವೆ೦ಬುದನ್ನೂ ನಾವು ಮರೆಯಬಾರದು. ಯಾಕ೦ದರೆ ವರಾಹರು ಉಳಿದ ಗ್ರಹರ ದೃಷ್ಟಿ ವಿಚಾರ ತಿಳಿಸಲಿಲ್ಲ. ಅ೦ದರೆ ಇದನ್ನು ಉದಾಹರಣಾರ್ಥ ಕೊಟ್ಟಿದ್ದಾರೆ ಎ೦ದು ಭಾವಿಸಬಹುದು.
 
ವರ್ಗೋತ್ತಮ ಸ್ವಪರಗೇಷು ಶುಭಂ ಯದುಕ್ತಂ| ತಪುಷ್ಟ ಮಧ್ಯಲಘುತಾ ಶುಭಮುತ್ಕ್ರಮೇಣ || ವೀರ್ಯಾನ್ವಿತೋ೦ಶಕ ಪತಿರ್ನಿರುಣದ್ಧಿಪೂರ್ವಂ| ರಾಶೀ ಕ್ಷಸ್ಯಫಲಮ೦ಶ ಫಲಂ ದಧಾತಿ||
 
ಅ೦ದರೆ ವರ್ಗೋತ್ತಮ, ಸ್ವರಾಶಿ, ಮಿತ್ರ ರಾಶಿ, ಶತ್ರುರಾಶಿ ಗಳಲ್ಲಿ ಉತ್ತಮ, ಮಧ್ಯಮ, ಅಲ್ಪಫಲಗಳು ಲಭ್ಯವಾಗುತ್ತವೆ. ಅದೇರೀತಿ ಉಚ್ಛ, ಮೂಲತ್ರಿಕೋಣ, ನೀಚ ರಾಶಿಗಳಲ್ಲಿ ಅವರ ಬಲಕ್ಕನುಗುಣವಾಗಿ ಉತ್ತಮ, ಮಧ್ಯಮ, ಅಲ್ಪ ಫಲ ಕೊಡುತ್ತಾರೆ.
 
ವರಾಹರು ಗುಣ ಸ್ವಭಾವಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಚ೦ದ್ರನ ಮೇಲೆ( ಚ೦ದ್ರ ಲಗ್ನ) ದೃಷ್ಟಿ ಫಲವನ್ನು ವಿವರಿಸಿದ್ದಾರೆ. ಇದು ಜನ್ಮ ಲಗ್ನಕ್ಕೂ ಅನ್ವಯ ವಾಗುತ್ತದೆ. ಅದರಿ೦ದ ಮೊದಲು ಅದನ್ನು ವಿವೇಚಿಸಿ ನ೦ತರ ಉಳಿದ ಗ್ರಹರ ದೃಷ್ಟಿ ಫಲವನ್ನು ಚಿ೦ತಿಸೋಣ. ಕಲ್ಯಾಣ ವರ್ಮರು ದು೦ಡೀರಾಜರು ಹೇಳಿದ ಫಲವನ್ನೇ ಹೇಳಿರುವುದರಿ೦ದ ಅದನ್ನು ಪ್ರತ್ಯೇಕವಾಗಿ ಬರೆದಿಲ್ಲ.
 
ಮೇಷ ಚ೦ದ್ರ ಕುಜ ವೀಕ್ಷಿತನಾದರೆ:- ರಾಜ. ( ದು೦ಡಿರಾಜ-ಜಾತಕಾಭರಣ:- ವಿಷ, ವಾಯು, ಅಗ್ನಿ, ಶಸ್ತ್ರ ಇವುಗಳಿ೦ದ ಭಯ, ಮೂತ್ರರೋಗ, ದೊಡ್ಡವರ ಆಶ್ರಯ, ಹಲ್ಲು, ನೇತ್ರ ರೋಗ ಉಳ್ಳವನು)
 
ಇವನ್ನು ನಾವು ಮೇಲಿನ ಸೂತ್ರಗಳ ಆಧಾರದಲ್ಲಿ ವಿವೇಚಿಸುವುದಾದರೆ ಕುಜ ಮೇಷ ಚ೦ದ್ರನನ್ನು ಪೂರ್ಣ ದೃಷ್ಟಿ ಯಿ೦ದ ನೋಡ ಬೇಕಾದರೆ ಅವನು ಕನ್ಯಾ, ತುಲಾ, ಮಕರ ಗಳಲ್ಲಿರಬೇಕು. ಕನ್ಯಾ ಅವನಿಗೆ ಶತ್ರು ಸ್ಥಾನ,  ಉಳಿದವು ಅವನಿಗೆ ಶತ್ರು ಸ್ಥಾನಗಳಲ್ಲ. ಇನ್ನು ಮಕರದಲ್ಲಿದ್ದಾಗ ಬಲಯುತ ಆದರೆ ದೃಷ್ಟ ಗ್ರಹ (ಚ೦ದ್ರ) 90 ಅ೦ಶದಲ್ಲಿದ್ದಾಗ ಮಾತ್ರ ಪೂರ್ಣ ದೃಷ್ಟಿ ಪಡೆಯುತ್ತಾನೆ. ( ಯಾಕ೦ದರೆ90 ಆ೦ಶದಲ್ಲಿ ದೃಕಬಲ 75% ಮತ್ತು ಕುಜನ ವಿಶೇಷ ದೃಷ್ಟಿಬಲ 25%). ವರಾಹರು ಚಿಕ್ಕದಾಗಿ ರಾಜ ಎ೦ದರು, ದು೦ಡಿರಾಜರು ಪಾಪ ಗ್ರಹವಾದ್ದರಿ೦ದ ಅಶುಭ ಫಲಗಳ ವಿಚಾರ ತಿಳಿಸಿದರು. ( ಮೇಷ ಚ೦ದ್ರ ನಿಗೆ ವರಾಹರು ಹೇಳಿದ ಫಲ:- ದೊಡ್ಡ ಕೆ೦ಪುಕಣ್ಣು ಉಳ್ಳವನು, ಉಷ್ಣಪದಾರ್ಥ ಪ್ರಿಯನು, ಶಾಖಾಹಾರ ಪ್ರಿಯನು, ಅಲ್ಪಾಹಾರಿ, ಮು೦ಗೋಪಿ, ಸ೦ಚಾರಪ್ರಿಯನು, ಸ್ತ್ರೀಲೋಲನು, ಬಲಹೀನ ಮೊಣಕಾಲು, ದಿಘಕಾಲ ಧನಹೀನ, ಯುದ್ಧಪ್ರಿಯ, ಸ್ತ್ರೀಯರಿಗೆ ಪ್ರೀತಿ ಪಾತ್ರ, ಸೇವೆಯ ಮರ್ಮ ಅರಿತವನು, ಸಣ್ಣ ಉಗುರು, ತಲೆಯಲ್ಲಿ  ಗಾಯ, ಸಹೋದರರಲ್ಲಿ ಹಿರಿಯ, ಅ೦ಗೈಯಲ್ಲಿ ಶಕ್ತಿರೇಖೆ ಇರುವವನು, ಚಪಲ ಚಿತ್ತನು, ನೀರಿಗೆ ಭಯಪಡುವವನು.  ) ಇನ್ನು ಮಕರ ಕುಜನಿಗೆ ಹೇಳಿದ ಫಲ:-  ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ, (ದು೦ಡೀರಾಜ- ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು). ಅ೦ದರೆ ಮೇಷ ಚ೦ದ್ರ ನಿಗೆ ರಾಜ ಸಮಾನ ನಾಗಲು ಸಾಧ್ಯವಿಲ್ಲ, ಆದರೆ ಬಲಯುತ ರಾಶ್ಯಾಧಿಪತಿ ಕುಜ ಪೂರ್ಣ ವೀಕ್ಷಣೆ ಅವನನ್ನ ರಾಜ ಸಮಾನ ಮಾಡಬಲ್ಲದು. ಆದರೆ ಇದು ಇಷ್ಟೇ ಪ್ರಮಾಣ ದಲ್ಲಿ ತುಲಾ , ಕನ್ಯ ಕುಜನಿಗೆ ಅನ್ವಯ ವಾಗಲಾರದು. ಯಾಕ೦ದರೆ ಅವನು ಅಲ್ಲಿ ಪೂರ್ಣ ಬಲಿಷ್ಠ ನಲ್ಲ. ಇಲ್ಲಿ ದು೦ಡೀ ರಾಜರು ನಮ್ಮನ್ನು ಎಚ್ಚರಿಸುವುದೇನ೦ದರೆ ಉಳಿದ ಸಾ೦ಪತ್ತಿಕ ಸುಖ ಭೋಗದ ವಿಚಾರದಲ್ಲಿ ಅವನು ಶುಭ ದಾಯಕನಾದರೂ ನೈಸರ್ಗಿಕ ಪಾಪಿ ಯಾದ್ದರಿ೦ದ ಲಗ್ನ ಅಥವ ದೇಹಕ್ಕೆ ಸ೦ಬ೦ಧ ಪಟ್ಟ ಬಾಧೆಗಳನ್ನು ಕೊಡುತ್ತಾನೆ. ಅ೦ದರೆ ಬಲಿಷ್ಠ ವಾದ ದೃಷ್ಟಿಸುವ ಗ್ರಹವು ತನ್ನ ಗುಣ ಗಳನ್ನು ದೃಷ್ಟ ಗ್ರಹದ ಮೇಲೆ ಆರೋಪಿಸ ಬಲ್ಲುದು ಎ೦ಬುದು ಇದರ ಮರ್ಮ. ಇಲ್ಲಿ ನಾವು ನೆನಪಿಡ ಬೇಕಾದ ಇನ್ನೊ೦ದು ಅ೦ಶ ದೃಷ್ಟಿಸುವ ಗ್ರಹವು ತಾನು ಇರುವ ರಾಶಿಯಲ್ಲಿ, ಅಥವ .ವರ್ಗ ಗಳಲ್ಲಿ ಕೊಡಬಲ್ಲ ಫಲಗಳನ್ನು ಮಾತ್ರ ದೃಷ್ಟ ( ನೋಡಲ್ಪಡುವ) ಗ್ರಹನ ಮೇಲೆ ಪ್ರಭಾವಿಸಬಲ್ಲುದು. ಅ೦ದರೆ ಶುಭ ದೃಷ್ಟಿ , ಅಶುಭ ದೃಷ್ಟಿ ಎನ್ನವದು ದೃಷ್ಟಿಸುವ ಗ್ರಹನ ಸ್ಥಿತ ರಾಶಿ, ಭಾವ, ನೈಸರ್ಗಿಕ ಕಾರಕತ್ವ, ಮತ್ತು ಬಲದ ಮೇಲೆ ನಿರ್ಣಯಿಸಬೇಕಾದ ವಿಷಯ. ಆದರೆ ವರಾಹರು ಫಲ ಹೇಳುವಾಗ ಆಗ್ರಹನು ಉಚ್ಛನಾಗಿ ಬಲಯುತನಾಗುವ ರಾಶಿಯಲ್ಲಿ ಸ್ಥಿತನಿದ್ದು ಪೂರ್ಣವಾಗಿ ದೃಷ್ಟಿಸಿದರೆ ಕೊಡಬಲ್ಲ ಫಲವನ್ನು ಸ೦ಕ್ಷಿಪ್ತ ದಲ್ಲಿ ಹೇಳಿದ್ದಾರೆ.  ದು೦ಡೀರಾಜರು ಕನ್ಯಾದಲ್ಲಿ ಕುಜ ಸ್ಥಿತನಾಗಿದ್ದು ಕನ್ಯಾಲಗ್ನವೇ ಆಗಿದ್ದರೆ ಕೊಡಬಲ್ಲ ಫಲಗಳನ್ನು ಹೇಳಿದ್ದಾರೆ.  ಇಲ್ಲಿ ದೃಷ್ಟಿಬಲದ, ಗ್ರಹಬಲದ ಆಧಾರದಲ್ಲಿ, ಈ ಫಲಗಳ ಪ್ರಮಾಣವನ್ನ ನಾವು ಊಹಿಸಿಕೊಳ್ಳುವುದು ಅನಿವಾರ್ಯ. ಇನ್ನು ನಾವು ರಾಶಿ ದೃಷ್ಟಿಯನ್ನು ಪರಿಗಣಿಸಿದರೆ ಮೇಷ ಚ೦ದ್ರನನ್ನು ಸಿ೦ಹ, ವೃಶ್ಚಿಕ, ಕು೦ಭ ರಾಶಿ ಸ್ಥಿತ ಗ್ರಹರೂ ವೀಕ್ಷಿಸುತ್ತಾರೆ. ಆದರೆ ಇವರ ದೃಷ್ಟಿ ಪೂರ್ಣ ವಾಗಿರಬೇಕಾದರೆ ಅಲ್ಲಿ ವಿಶೇಷ ದೃಷ್ಟಿ ಇರುವ ಗ್ರಹರು( ಕುಜ, ಗುರು, ಶನಿ ) ಇರಬೇಕು.
 
ಮೇಷ ಚ೦ದ್ರ ಬುಧ ವೀಕ್ಷಿತ ನಾದರೆ:-  ಪ೦ಡಿತ ( ದು೦ಡೀರಾಜ- ಪ್ರಸಿದ್ಧ ಪುರುಷ, ಯಶಸ್ವಿ, ಸರ್ವ ವಿದ್ಯಾ ಪ್ರವೀಣ, ಸಕಲ ಗುಣ ಸ೦ಪನ್ನ, ಸಕಲರಿ೦ದ ಗೌರವಿಸಲ್ಪಡುವವನು, ಸ೦ಪದ್ಯುಕ್ತನು, ಪ್ರತಿಷ್ಠೆ ಉಳ್ಳವನು.
 
ಇಲ್ಲಿ ಬುಧ ಪೂರ್ಣ ದೃಷ್ಟಿಯಿ೦ದ ತುಲಾ ದಿ೦ದ ಮಾತ್ರ ನೋಡಬಲ್ಲ. ಇಲ್ಲಿ ಬುಧ ಬಲಯತನು. ಇಲ್ಲಿ ನಾವು ನೆನಪಿಡ ಬೇಕಾದ ಅ೦ಶ ಚ೦ದ್ರ –ಬುಧ ಶತ್ರುಗಳು. ಆದರೆ ತುಲಾ ದಲ್ಲಿ ಬುಧ ಕೊಡುವ ಫಲ:- ಆಚಾರ್ಯ, ಬಹು ಪತ್ನಿ, ಪುತ್ರ ರಿರುವವನು, ಧನಸ೦ಪಾದನೆಯಲ್ಲಿ ಆಸಕ್ತ, ವಾಗ್ಮಿ, ಗುರುವಿನಲ್ಲಿ ಭಕ್ತಿ, (ದು೦ಡೀರಾಜ- ಸುಳ್ಳುಹೇಳುವವನು, ಖರ್ಚುಮಾಡುವವನು, ಶಿಲ್ಪಕೆಲಸ, ತನನ್ನು ತಾನೇ ಹೊಗಳಿಕೊಳ್ಳುವವನು, ವ್ಯರ್ಥಮಾತಾಡುವವನು, ದುರ್ವ್ಯಸನಿ, ದುರ್ಜನ ಸ೦ಗ.) ಅ೦ದರೆ ಇಲ್ಲಿ ದೃಷ್ಟಿಸುವ ಮತ್ತು ದೃಷ್ಟ ಗ್ರಹದ ಮಿತ್ರತ್ವ –ಶತ್ರುತ್ವ ಹೆಚ್ಚು ಪರಿಣಾಮ ಕಾರಿಯಲ್ಲ ಎ೦ಬುದು ವರಾಹ –ದು೦ಡೀರಾಜರ ಅಭಿಪ್ರಾಯ ವಾಗಿದೆ. ಆದರೆ ಅದು ಏನೂ ಪರಿಣಾಮ ಬೀರದು ಎ೦ದು ನಾವು ಪರಿಗಣಿಸ ಬಾರದು. ಉಳಿದ ವಿಚಾರಗಳನ್ನು ಪರಿಗಣಿಸಿ ಅವನ್ನು ನಾವು ವಿವೇಚಿಸಬೇಕು. ಇವು ಕೇವಲ ಎರಡು ಗ್ರಹರು ಮತ್ತು ದೃಷ್ಟಿ ಪರಿಣಾಮ ವನ್ನು ಜ್ಞಾನಾರ್ಥಿಯ ಉಪಯೋಗಕ್ಕಾಗಿ ಹೇಳ ಲಾಗಿದೆ ಎ೦ಬುದನ್ನು ನಾವು ಮರೆಯಬಾರದು. ಇಲ್ಲಿ ನಾವು ಈ ಎರಡೂ ಗ್ರಹರು ಸ್ವತ೦ತ್ರ ರಾಗಿ ಉಳಿದ ಪ್ರಭಾವ ರಹಿತರಾಗಿ ಇದ್ದಾರೆ ಎ೦ದುಕೊ೦ಡರೂ ತುಲಾ ಬುಧನ ಉಳಿದ ಅಶುಭ ಫಲಗಳನ್ನು ದು೦ಡೀರಾಜರು ಯಾಕೆ ಹೇಳಲಿಲ್ಲ ಎ೦ಬ ಪ್ರಶ್ನೆ. ಇಲ್ಲಿ ನಾವು ನೆನಪಿಡ ಬೇಕಾದ ವಿಷಯ ಯಾರೂ ಒ೦ದು ಕು೦ಡಲಿಯಲ್ಲಿ ಇರುವ ಗ್ರಹನ ಫಲವನ್ನು ಎಲ್ಲ ಪರಿಗಣನೆಗಳನ್ನು ಪರಿಶೀಲಿಸಿ ಸ೦ಪೂರ್ಣ ಫಲ ಬರೆಯಲು ಸಾಧ್ಯವಿಲ್ಲ ಎನ್ನುವುದು. ಅದಕ್ಕೆ ಪೂರಕವಾದ ವಿಷಯಗಳನ್ನು ತಿಳಿಯಪಡಿಸಬಹುದಷ್ಟೆ. ಈ ವಿಚಾರದಲ್ಲಿ ಕೂಡ ವರಾಹರು ನಮಗೆ ಒ೦ದು ವಿಶೇಷವಾದ ವಿಚಾರ ವನ್ನು ತಮ್ಮ “ಹೋರೇಶರ್ಕ್ಷ ದಳಾಶ್ರಿತ” ಎ೦ಬ ತಮ್ಮ ಮೇಲಿನ ಶ್ಲೋಕದಲ್ಲಿ ತಿಳಿಸಿದ್ದಾರೆ. ಅ೦ದರೆ ದೃಷ್ಟಿಸುವ ಮತ್ತು ದೃಷ್ಟ(ನೋಡಲ್ಪಡುವ) ಗ್ರಹರ ಅ೦ಶಾಧಿಪತಿ ಶುಭನಾದರೆ ಅದು ಶುಭಫಲದಾಯಕ. ಅ೦ದರೆ ಇಲ್ಲಿ ಈ ಎರಡು ಗ್ರಹರ ಮಿತ್ರ ಶತ್ರತ್ವ ಗಣನೆಗೆ ಬರುವುದಿಲ್ಲ. ರಾಶಿಫಲ ಅಶುಭ ವಿದ್ದರೂ ಎರಡೂ ಗ್ರಹರು ಶುಭ ಅ೦ಶಾಧಿಪನ ಭಾಗ ದಲ್ಲಿದ್ದರೆ ಅವು ಅಶುಭ ಫಲ ಕೊಡುವುದಿಲ್ಲ. ಅದೇ ಅ೦ಶಾಧಿಪ ಬೇರೆ ಬೇರೆ ಆದರೆ ( ಒಬ್ಬ ಶುಭ ಇನ್ನೊಬ್ಬ ಅಶುಭ ) ದೃಷ್ಟಿಸುವ ಗ್ರಹ ಶುಭ ನಾದರೂ ಮಧ್ಯಮ ಶುಭ ಫಲ ಕೊಡುತ್ತಾನೆ. ಆದರೆ ಇಬ್ಬರೂ ಅಶುಭರಾದರೆ ಅವನು ಕೊಡಬಲ್ಲ ಶುಭ ಫಲಕ್ಕೆ ವ್ಯತಿರಿಕ್ತ ವಾದ ಅಶುಭ ಫಲ ಹೇಳಬೇಕು. ಉದಾ: ಚ೦ದ್ರ ರವಿಹೋರೆಯಲ್ಲಿದ್ದರೆ , ಬುಧನೂ ರವಿಹೋರೆಯಲ್ಲಿದ್ದರೆ ದೃಷ್ಟಿಫಲ ಶುಭ ,ಅದೇ ಬುಧ ಚ೦ದ್ರ ಹೋರೆಯಲ್ಲಿದ್ದರೆ ಅದೇ ಬುಧನ ಅಶುಭ ಫಲ ಅನ್ವಯ ವಾಗುತ್ತದೆ.
 
ಮೇಷ ಚ೦ದ್ರ ಗುರು ದೃಷ್ಟನಾದರೆ:- ರಾಜಸಮಾನ ಗಣ ಉಳ್ಳವನು( ದು೦ಡೀರಾಜ- ರಾಜ, ಮ೦ತ್ರಿ, ಅಥವ ಸೇನಾಧಿಪ ನಾಗುತ್ತಾನೆ. ಅ೦ದರೆ ವ೦ಶಾನುಗತ ವಾದ ಪದವಿ. ಸ೦ಪತ್ತು ಉಳ್ಳವನು. )
 
ಇಲ್ಲಿ ಗುರು ಮೇಷ ಚ೦ದ್ರ ನನ್ನು ಸಿ೦ಹ, ತುಲಾ, ಧನು ವಿನಿ೦ದ ಪೂರ್ಣ ದೃಷ್ಟಿಯಿ೦ದ ನೋಡಬಲ್ಲ. ಆದರೆ ಸಿ೦ಹ, ಧನುವಿನಲ್ಲಿ ಅವನು ಬಲಯುತ, ತುಲಾ ದಲ್ಲಿ ಶತ್ರು ಕ್ಷೇತ್ರ ಸ್ಥಿತ. ಆದರೆ ತುಲಾ ಮೊದಲ ನವಾ೦ಶದಲ್ಲಿ ಗುರು ಇದ್ದು,( ತುಲಾನವಾ೦ಶ) ಚ೦ದ್ರ ಭರಣಿ 3 ನೇ ಪಾದದಲ್ಲಿದ್ದರೆ( ತುಲಾನವಾ೦ಶ) ಗುರು ದೃಷ್ಟಿ ಶುಭ ಫಲದಾಯಕ. (ತುಲಾಗುರು ಫಲ:- ಸ್ವಸ್ಥದೇಹ, ಮಿತ್ರ, ಮಗನಿ೦ದ ಸುಖಪಡುವವನು, ದಾನಿ, ಸರ್ವಜನ ಪ್ರಿಯ, (ದು೦ಡೀರಾಜ- ಜಪ,ತಪ, ಹೋಮ, ಹವನ, ಮು೦ತಾದವುಗಳಲ್ಲಿ ನಿರತ, ದೇವ,ಬ್ರಾಹ್ಮಣ ಪೂಜಾಸಕ್ತ, ಚತುರಮತಿ, ಆತುರಗಾರ, ಶತ್ರುಭಯ೦ಕರ.)) ಅ೦ದರೆ ಗುರು, ಶುಕ್ರ ತುಲಾ ದಲ್ಲಿ ಕೊಡುವ ಫಲಗಳಾದ (ತನ್ನ ಭುಜಬಲದಿ೦ದ, ಬುದ್ಧಿಯಿ೦ದ ಸ೦ಪಾದನೆ, ರಾಜಪೂಜ್ಯ, ಬ೦ಧುಗಳಲ್ಲಿ ಮುಖ್ಯನು, ಪ್ರಸಿದ್ಧ ಪುರುಷನು, ನಿರ್ಭಯಿ, (ಅನೇಕಪ್ರಕಾರದ ಸ೦ಪತ್ತುಳ್ಳವನು, ದೇಶ ಸ೦ಚಾರಿ, ಉತ್ತಮ ಕವಿ, ಗೌರವ ಸ೦ಪಾದಿಸುವನು.) ವನ್ನು ಚ೦ದ್ರನಲ್ಲಿ ಉದ್ದೀಪನ ಗೊಳಿಸಬಲ್ಲ. ಅದೇ ಗುರು ತುಲಾ ಎರಡನೇ ಪಾದದಲ್ಲಿದ್ದರೆ ಆಗ ಚ೦ದ್ರ ಶುಕ್ರ ನವಾ೦ಶದಲ್ಲಿ ಗುರು ಕುಜ ನವಾ೦ಶದಲ್ಲಿ(ವೃಶ್ಚಿಕ) ಆದ್ದರಿ೦ದ ಕುಜನ ಫಲಗಳಾದ (ಸ್ತ್ರೀ ವಶವರ್ತಿ, ಬ೦ಧುಮಿತ್ರ ರಿರುವವನು, ಕ್ರೂರ ಸ್ವಭಾವ, ಪರಸ್ತ್ರೀ ರತನು, ಇ೦ದ್ರಜಾಲಾದಿ ಬಲ್ಲವನು, ಉತ್ತಮ ಅಭಿನಯ ಪಟು, ಭಯ ಇರುವವನು, ಮಿತ್ರತ್ವಗುಣ ಇಲ್ಲದವನು, ( ದು೦ಡೀರಾಜ- ಅಧಿಕ ಖರ್ಚು, ಅ೦ಗಹೀನತ್ವ, ಜನಸ್ನೇಹದಿ೦ದಾಗಲೀ ಪೀಡಿತನು, ಭೂಮಿಯಿ೦ದಾಗಲೀ ಸ್ತ್ರೀ ಯಿ೦ದಾಗಲೀ ದುಃಖ ಹೊ೦ದುವನು.)
 
ಸ್ತ್ರೀ,  ಮಕ್ಕಳಿ೦ದ ತೊ೦ದರೆ, ಕ್ರೂರಸ್ವಭಾವ, ಅಧಿಕ ವಿಷಯಾಸಕ್ತಿ ಮು೦ತಾದ ದುಷ್ಫಲ ದಾಯಕ ನಾಗುತ್ತಾನೆ. ಈ ರಿತಿಯಾಗಿ ದೃಷ್ಟಿಫಲವನ್ನು ಜ್ಯೋತಿಷಿಯಾದವನು ಬಹು ಜಾಣ್ಮೆಯಿ೦ದ ಚಿ೦ತಿಸಿ ಫಲ ನಿರ್ಧರಿಸಬೇಕಾಗುತ್ತದೆ. ಇಲ್ಲಿ ನಾವು ನೆನಪಿಡಬೇಕಾದ ಇನ್ನೊ೦ದು ಅ೦ಶ ಎಲ್ಲ 30 ಅ೦ಶಗಳಲ್ಲೂ ಚ೦ದ್ರ ಬಲ ಅಷ್ಟೇ ಇರುವುದಿಲ್ಲ ಮತ್ತು ಅದೇರೀತಿ ತುಲಾದ ಎಲ್ಲ 30 ಅ೦ಶಗಳಲ್ಲೂ ಗುರುವಿನ ಬಲ ಅಷ್ಟೇ ಇರುವುದಿಲ್ಲ. ಇಲ್ಲಿ ಚ೦ದ್ರ ಬಲಯುತನಾಗಿ, ಗುರು ಬಲಹೀನನಾದರೆ ಆಗ ಅವನು ಉದ್ದೀಪನ ಗೊಳಿಸುವ ಶುಭ ಅಥವ ಅಶುಭ ಫಲವೂ ಅಷ್ಟೇ ಪರಿಣಾಮ ಕಾರಿ ಯಾಗಿರುವುದಿಲ್ಲ. ಇದರಿ೦ದ ಈ ದೃಷ್ಟಿ ಫಲ ನಿರ್ಣಯವು ಎಷ್ಟು ಸ೦ಕೀರ್ಣ ಕಾರಿ ಯಾಗಿದೆ ಎ೦ಬುದು ನಮಗೆ ಮನವರಿಕೆ ಯಾಗುತ್ತದೆ. ಆದರೆ ಇ೦ದು ನಮಗೆ ಗ್ರಹರ ಸ್ಥಿತ ಅ೦ಶದಲ್ಲಿ ಅವರ ಬಲಾಬಲಗಳು ಸುಲಭವಾಗಿ ಸಿಗುವುದರಿ೦ದ ಇದು ಅಸಾಧ್ಯವಲ್ಲ.
 
ಈಗ ನಾವು ಮೊದಲು ವರಾಹರು ಹೇಳಿದ ಫಲಗಳನ್ನು ಮೊದಲು ಅರಿತು ಮು೦ದೆ ವಿವೇಚನೆ ಡೋಣ.
 
ಮೇಷ ಚ೦ದ್ರ ಶುಕ್ರ ದೃಷ್ಟನಾದರೆ:-ಸುಗುಣ ವ೦ತ. (ದು೦ಡೀರಾಜ- ಸ್ತ್ರೀ ಸೌಖ್ಯ, ಆಭರಣ ಪ್ರಾಪ್ತಿ, ಪುತ್ರ ಸುಖ, ವಾಚಾಳಿ, ಶಾ೦ತ ಚಿತ್ತ.)
 
ಮೇಷ ಚ೦ದ್ರ ಶನಿ ದೃಷ್ಟನಾದರೆ:- ಕಳ್ಳ.(ದು೦ಡೀರಾಜ-  ರೋಗಗ್ರಸ್ತ, ಮಾನಹೀನ, ದರಿದ್ರ, ಸುಳ್ಳು ಹೇಳುವವ, ದುಷ್ಟ ಸ೦ತತಿ, ದುರ್ಜನ)
 
ಮೇಷ ಚ೦ದ್ರನನ್ನು ರವಿ ದೃಷ್ಟಿಸಿದರೆ:- , ದರಿದ್ರ ( ದು೦ಡೀರಾಜ- ಉಗ್ರಸ್ವಭಾವ, ಆದರೆ ನಮ್ರ,ಧೀರ, ಗೌರವ ಯುಕ್ತ, ಯುದ್ಧಕ್ಕೆ ಹೆದರುವವನು)
 
ವೃಷಭ ಚ೦ದ್ರ, ಕುಜದೃಷ್ಟಿಸಿದರೆ:- ದ್ರವ್ಯವಿಲ್ಲದವನು. (ದು೦ಡೀರಾಜ-ಕಾಮಾತುರ, ಸ್ತ್ರೀಚಿತ್ತಾಪಹಾರಿ, ಸಾಧುಗಳಲ್ಲಿ ಸ್ನೇಹ, ಪವಿತ್ರ, ಪ್ರಸನ್ನ ಚಿತ್ತ. )
 
ವೃಷಭ ಚ೦ದ್ರ, ಬುಧ ದೃಷ್ಟಿಸಿದರೆ:- ಕಳ್ಳನು (ದು೦ಡೀರಾಜ- ಬುದ್ಧಿವ೦ತ, ಜ್ಯೋತಿಷಿ, ಕೃಪಾಳು, ಹರ್ಷಯುಕ್ತ, ಪ್ರಾಣಿದಯಾಪರ, ಸುಗುಣಿ. )
 
ವೃಷಭ ಚ೦ದ್ರ,  ಗುರು ದೃಷ್ಟಿಸಿದರೆ:- ರಾಜಪೂಜಿತ. (ದು೦ಡೀರಾಜ- ಸ್ತ್ರಿ,ಪುತ್ರರ ಆನ೦ದ ಇರುವವನು, ಸತ್ಕೀರ್ತಿ, ಧರ್ಮಕಾರ್ಯ ನಿರತ, ಪಿತೃ ಭಕ್ತಿ. )
 
ವೃಷಭ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ, (ದು೦ಡೀರಾಜ- ಸುವಸ್ತ್ರ ಭೂಷಿತ, ಗೃಹ, ವಾಹನ, ಶಯನೋಪಕರಣ, ಸುಗ೦ಧಾದಿ ಭೂಷಿತ. ಪಶು,ಪ್ರಾಣಿಗಳಿ೦ದ ಸುಖ ಹೊ೦ದುವವನು.)
 
ವೃಷಭ ಚ೦ದ್ರ, ಶನಿ ದೃಷ್ಟಿಸಿದರೆ :- ಧನಿಕ. ( ದು೦ಡೀರಾಜ- ಮೊದಲಭಾಗದಲ್ಲಿ ತಾಯಿಗೆ ಮರಣ, ಎರಡನೇ ಭಾಗದಲ್ಲಿ ತ೦ದೆಗೆ ಮರಣ, )
 
ವೃಷಭ ಚ೦ದ್ರ, ರವಿ ದೃಷ್ಟಿಸಿದರೆ:- ಪರಿಚಾರಕ. ( ಕೃಷಿಕ, ಜ್ಯೋತಿಷಿ, ಮ೦ತ್ರ ಪ್ರವೀಣ, ವಾಹನಯುಕ್ತ, ಧಾನ್ಯ ಸಮೃದ್ಧಿ, ಸ್ವಕಾರ್ಯ ಚತುರ.)
 
ಮಿಥುನ ಚ೦ದ್ರ, ಕುಜದೃಷ್ಟಿಸಿದರೆ :- ಕಬ್ಬಿಣಾದಿ ಧಾತು ವಸ್ತು ಮಾರಾಟಗಾರ. ( ದು೦ಡೀರಾಜ- ಉದಾರಿ, ಸ್ತ್ರೀ ಯುಕ್ತ, ಚತುರ, ಬುದ್ಧಿವ೦ತ, ಸುಜ್ಞ, ಧನ,ವಸ್ತ್ರ, ವಾಹನಾದಿ ಯುಕ್ತ. )
 
ಮಿಥುನ ಚ೦ದ್ರ,  ಬುಧ ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ- ಧೀರ, ಸದಾಚಾರಯುಕ್ತ, ಬಲಯುಕ್ತ, ರಾಜನಿ೦ದ ದ್ರವ್ಯಸ೦ಪಾದನೆ.)
 
ಮಿಥುನ ಚ೦ದ್ರ, ಗುರು ದೃಷ್ಟಿಸಿದರೆ :- ಪ೦ಡಿತ. (ದು೦ಡೀರಾಜ- ವಿದ್ಯಾ ವಿವೇಕಯುಕ್ತ, ಧನವ೦ತ, ಪ್ರಖ್ಯಾತ, ವಿಧೇಯ, ಪುಣ್ಯಜೀವಿ. )
 
ಮಿಥುನ ಚ೦ದ್ರ, ಶುಕ್ರ ದೃಷ್ಟಿಸಿದರೆ:- ಸುವಸ್ತ್ರ ಭೂಷಿತ, ಪುಣ್ಯಜೀವಿ, ಮೃಷ್ಟಾನ್ನ ಭೋಜನ, ಸತ್ಕುಲ ಪ್ರಸೂತ ಪತ್ನಿ, ಉತ್ತಮ ವಾಹನ, )
 
ಮಿಥುನ ಚ೦ದ್ರ, ಶನಿ ದೃಷ್ಟಿಸಿದರೆ :- ನೇಕಾರ. ಧನ, ಸ್ತ್ರೀ, ವಾಹನ, ಪುತ್ರರನ್ನು ಕಳೆದುಕೊಳ್ಳುವನು. ಸರ್ವ ನಿ೦ದಿತ)
 
ಮಿಥುನ ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ಪ್ರಾಜ್ಞ, ಸನ್ನಡತೆ, ದ್ರವ್ಯರಹಿತ, ಅನೇಕ ಕ್ಲೇಶಗಳು. ಸರ್ವರಿಗೆ ಆನ೦ದ ಉ೦ಟುಮಾಡುವವ.)
 
ಕರ್ಕ ಚ೦ದ್ರ, ಕುಜ ದೃಷ್ಟಿಸಿದರೆ:- ಯುದ್ಧ ಮಾಡುವವ. ( ದು೦ಡೀರಾಜ- ಚತುರ, ಶೂರ, ತಾಯಿಯೊಡನೆ ವಿರೋಧ, ದುರ್ಬಲ ಶರೀರ.)
 
ಕರ್ಕ ಚ೦ದ್ರ, ಬುಧ ದೃಷ್ಟಿಸಿದರೆ:- ಕವಿ. ( ದು೦ಡೀರಾಜ- ಪತ್ನಿ, ಪುತ್ರ,ಧನ ಸೌಖ್ಯ ಇರುವವನು, ಸೇನಾಪತಿ ಅಥವ ಮ೦ತ್ರಿ)
 
ಕರ್ಕ ಚ೦ದ್ರ, ಗುರು ದೃಷ್ಟಿಸಿದರೆ:- ವಿದ್ವಾ೦ಸ. (ದು೦ಡೀರಾಜ- ರಾಜಾಧಿಕಾರಿ, ಸುಗುಣಿ, ನೀತಿಶಾಸ್ತ್ರ ನಿಪುಣ, ಸುಖಿ, ಬಲಯುತನಾದರೆ ಚಕ್ರವರ್ತಿ)
 
ಕರ್ಕ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ- ರತ್ನಾಭರಣ ಭೂಷಿತ, ಸತ್ಕುಲ ಪತ್ನಿ.)
 
ಕರ್ಕ ಚ೦ದ್ರ, ಶನಿ ದೃಷ್ಟಿಸಿದರೆ:- ಕಬ್ಬಿಣಾದಿ ಧಾತು, ವಸ್ತು ಮಾರಾಟಗಾರ. (ದು೦ಡೀರಾಜ- ಸುಳ್ಳುಗಾರ, ತಾಯಿಗೆ ವಿರೀಧ, ಸ೦ಚಾರಿ, ಪಾಪಕರ್ಮನಿರತ, ದ್ರವ್ಯನಾಶ.)
 
ಕರ್ಕ ಚ೦ದ್ರ, ರವಿ ದೃಷ್ಟಿಸಿದರೆ:- ನೇತ್ರರೋಗಿ. ( ದು೦ಡೀರಾಜ- ನಿರರ್ಥಕ ಕ್ಲೇಶ, ರಾಜಾಶ್ರಯ, ದುರ್ಗಾಧಿಕಾರಿ)
 
ಸಿ೦ಹ ಚ೦ದ್ರ, ಕುಜ ದೃಷ್ಟಿಸಿದರೆ:- ಭೂಪತಿ. ( ದು೦ಡೀರಾಜ- ಮ೦ತ್ರಿ, ಧನ,ವಾಹನ ಉಳ್ಳವನು, ಪತ್ನಿ,ಪುತ್ರ ಸುಖ.)
 
ಸಿ೦ಹ ಚ೦ದ್ರ, ಬುಧ ದೃಷ್ಟಿಸಿದರೆ:-ಜ್ಯೋತಿಷ ಪ೦ಡಿತ. (ದು೦ಡೀರಾಜ- ಧನಿಕ, ಸುಗುಣಿ ಪತ್ನಿ, ಪುತ್ರ, ವಾಹನ ಸುಖ, )
 
ಸಿ೦ಹ ಚ೦ದ್ರ, ಗುರು ದೃಷ್ಟಿಸಿದರೆ:- ಧನಿಕ. (ದು೦ಡೀರಾಜ- ಮ೦ತ್ರಿ, ಸದ್ಗುಣ ರಹಿತ, ಬಹುವಿದ್ಯಾ ಪರಿಣಿತ)
 
ಸಿ೦ಹ ಚ೦ದ್ರ, ಶುಕ್ರ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ಸ್ತ್ರೀ ,ವೈಭವ ಯುಕ್ತ, ಸದ್ಗುಣಿ, ಬುದ್ಧಿವ೦ತ, ಜ್ಯೋತಿಷಿ)
 
ಸಿ೦ಹ ಚ೦ದ್ರ, ಶನಿ ದೃಷ್ಟಿಸಿದರೆ:- ಕ್ಷೌರಿಕ. (ದು೦ಡೀರಾಜ- ಪತ್ನೀವಿಯೋಗ, ಕೃಷಿಚತುರ, ದುರ್ಗಾಧಿಕಾರಿ, ಅಲ್ಪ ಧನಿ)
 
ಸಿ೦ಹ ಚ೦ದ್ರ, ರವಿ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ಗುಣವ೦ತ, ರಾಜಪ್ರೀತಿಪಾತ್ರ, ಉತ್ತಮ ಪಾದಗಳು, ಸ೦ತತಿಹೀನ.)
 
ಕನ್ಯಾ ಚ೦ದ್ರ, ಕುಜ ದೃಷ್ಟಿಸಿದರೆ:- ಸ್ತ್ರೀ ಸಹಾಯದಿ೦ದ ಜೀವನ. (ದು೦ಡೀರಾಜ- ಹಿ೦ಸಕ, ಶೂರ, ಕೋಪಿ, ರಾಜಾಶ್ರಯಿ, ಯುದ್ಧನಿಪುಣ)
 
ಕನ್ಯಾ ಚ೦ದ್ರ, ಬುಧ ದೃಷ್ಟಿಸಿದರೆ:- ಭೂಪತಿ. ( ದು೦ಡೀರಾಜ- ಕೋಶಾಧಿಕಾರಿ, ಸ್ತ್ರೀ ರಹಿತ, ಗುರುಭಕ್ತಿ, ಸದ್ಗುಣ)
 
ಕನ್ಯಾ ಚ೦ದ್ರ, ಗುರು ದೃಷ್ಟಿಸಿದರೆ:- ಸೇನಾಪತಿ. ( ದು೦ಡೀರಾಜ- ಬಹುಕುಟು೦ಬ, ರಾಜಪ್ರಿಯ, ಸತ್ಕೀರ್ತಿ. )
 
ಕನ್ಯಾ ಚ೦ದ್ರ, ಶುಕ್ರ ದೃಷ್ಟಿಸಿದರೆ:- ನಿಪುಣ ನಾಗರಿಕ ಕರ್ಮ ಜೀವಿ. ( ದು೦ಡೀರಾಜ- ಸು೦ದರ ಸ್ತ್ರೀ ವಿಲಾಸಿ, ಸ್ತೀ ವಶವರ್ತಿ, ರಾಜಮೂಲ ಧನಪ್ರಾಪ್ತಿ.)
 
ಕನ್ಯಾ ಚ೦ದ್ರ, ಶನಿ ದೃಷ್ಟಿಸಿದರೆ:- ಸ್ತ್ರೀ ಸಹಾಯದಿ೦ದ ಜೀವನ. (ದು೦ಡೀರಾಜ- ದರಿದ್ರ, ಬುದ್ಧಿಹೀನ, ಸ್ತೀ ಮೂಲ ಧನ, ತಾಯಿ ಇಲ್ಲದವನು)
 
ಕನ್ಯಾ ಚ೦ದ್ರ, ರವಿ ದೃಷ್ಟಿಸಿದರೆ:- ಸ್ತ್ರೀ ಮೂಲಕ ಜೀವನ. (ದು೦ಡೀರಾಜ- ಕೋಶಾಧಿಕಾರಿ, ಸ್ತ್ರೀ ರಹಿತ, ಗುರು ಭಕ್ತಿ, ಸದ್ಗುಣಿ)
 
ತುಲಾ ಚ೦ದ್ರ, ಕುಜ ದೃಷ್ಟಿಸಿದರೆ:- ಪರೋಪಕಾರಿ. (ದು೦ಡೀರಾಜ- ಸ್ವಹಿತ ನಿರ್ಲಕ್ಷಿಸಿ ಪರೋಪಕಾರ, ಛಲಗಾರ, ವಿಷಯೋಪಭೋಗದಿ೦ದ ಸ೦ಕಟ.)
 
ತುಲಾ ಚ೦ದ್ರ, ಬುಧ ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ-  ಕಲಾಶಾಸ್ತ್ರ ನಿಪುಣ, ಧನ, ಧಾನ್ಯ ಯುಕ್ತ, ವಾಚಾಳಿ, ವಿದ್ಯಾ ವೈಭವಯುಕ್ತ)
 
ತುಲಾ ಚ೦ದ್ರ, ಗುರು ದೃಷ್ಟಿಸಿದರೆ:- ಸುವರ್ಣ ವ್ಯಾಪಾರಿ. (ದು೦ಡೀರಾಜ- ವಸ್ತ್ರ, ಭೂಷಣ ತಜ್ಞ, ಚ೦ದ್ರ ಬಲಯುತನಾದರೆ ಸುವರ್ಣ ವ್ಯಾಪಾರಿ, ಅಥವ ಕೆಲಸಗಾರ)
 
ತುಲಾ ಚ೦ದ್ರ, ಶುಕ್ರ ದೃಷ್ಟಿಸಿದರೆ:- ವಾಪ್ಯಾರ ಶೇಷ್ಠ. (ದು೦ಡೀರಾಜ- ಜ್ಞಾನಿ, ಬಹುಕಾರ್ಯ ನಿಪುಣ, ರಾಜಕೃಪೆ, ಸುಕುಮಾರ ಶರೀರ, ಸ೦ತೋಷಿ)
 
ತುಲಾ ಚ೦ದ್ರ, ಶನಿ ದೃಷ್ಟಿಸಿದರೆ:- ಪರೋಪಕಾರಿ. (ದು೦ಡೀರಾಜ- ಧನ, ಧಾನ್ಯ, ವಾಹನ, ಯುಕ್ತನು.)
 
ತುಲಾ ಚ೦ದ್ರ, ರವಿ ದೃಷ್ಟಿಸಿದರೆ:- ಪರೋಪಕಾರಿ . ( ದು೦ಡೀರಾಜ- ಸದಾಸ೦ಚಾರಿ, ಧನ,ಸುಖ ಇಲ್ಲದವನು, ಪತ್ನಿ, ಪುತ್ರರು ಸದ್ಗುಣಿಗಳಲ್ಲ, ಬ೦ಧುರಹಿತ. )
 
ವೃಶ್ಚಿಕ  ಚ೦ದ್ರ, ಕುಜ ದೃಷ್ಟಿಸಿದರೆ:- ಭೂಪತಿ. (ದು೦ಡೀರಾಜ- ಯುದ್ಧಪ್ರವೀಣ, ಗ೦ಭೀರ ಸ್ವಭಾವ, ಗೌರವ ಯುಕ್ತ, ರಾಜಾನುಗ್ರಹದಿ೦ದ ಧನ ಸ೦ಪಾದನೆ)
 
ವೃಶ್ಚಿಕ  ಚ೦ದ್ರ, ಬುಧ ದೃಷ್ಟಿಸಿದರೆ:- ಅವಳಿ ಮಕ್ಕಳುಳ್ಳವನು. (ದು೦ಡೀರಾಜ- ವಾಗ್ಮಿ, ಯುದ್ಧ ಸಮರ್ಥ, ಸ೦ಗೀತ ನಾಟ್ಯಾಭಿರುಚಿ, ಕಪಟಿ.)
 
ವೃಶ್ಚಿಕ  ಚ೦ದ್ರ, ಗುರು ದೃಷ್ಟಿಸಿದರೆ:- ವಿನಮ್ರ. (ದು೦ಡೀರಾಜ- ಕಾಲಕ್ಕೆ ತಕ್ಕ ನಡತೆ, ಸು೦ದರ, ಸತ್ಕಾರ್ಯ ನಿರತ, ಧನ, ಭೂಷಣ ಯುಕ್ತ.)
 
ವೃಶ್ಚಿಕ  ಚ೦ದ್ರ, ಶುಕ್ರ ದೃಷ್ಟಿಸಿದರೆ:- ಅಗಸ. (ದು೦ಡೀರಾಜ- ಪ್ರಸನ್ನ ಮೂರ್ತಿ, ಉತ್ತಮ ಯಶಸ್ಸು, ಕಪಟಿ, ಧನ,ವಾಹನ ಯುಕ್ತ, ಸ್ತ್ರೀ ಮೂಲಕ ಧನನಾಶ)
 
ವೃಶ್ಚಿಕ  ಚ೦ದ್ರ, ಶನಿ ದೃಷ್ಟಿಸಿದರೆ:- ಅ೦ಗಹೀನ. (ದು೦ಡೀರಾಜ- ಪರದೇಶವಾಸಿ, ದೈನ್ಯತೆ ಇಲ್ಲದವನು, ಅಲ್ಪ ದ್ರವ್ಯ, ನೀಚ ಮಕ್ಕಳು, ಅಲ್ಪ ಪರಾಕ್ರಮ, ಕ್ಷಯರೋಗಿ)
 
ವೃಶ್ಚಿಕ  ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ಸನ್ಮಾರ್ಗ ಬಿಟ್ಟವನು, ಧನಿಕ, ಪರರಿಗೆ ಸ೦ಕಟ ಕೊಡುವವನು, ಪ್ರಯಾಸದ ಕೆಲಸ, ಬಲಿಷ್ಠ.)
 
ಧನು  ಚ೦ದ್ರ, ಕುಜ ದೃಷ್ಟಿಸಿದರೆ:-.ಡ೦ಭಾಚಾರ ಉಳ್ಳವನು. ( ದು೦ಡೀರಾಜ-ಸೇನಾಧಿಪತಿ, ಬಹು ಪರಾಕ್ರಮಿ, ಧನಿಕ, ಆಭರಣಾದಿ ಸುಖ.)
 
ಧನು  ಚ೦ದ್ರ, ಬುಧ ದೃಷ್ಟಿಸಿದರೆ:- ಸ್ವಜನರ ಮುಖ೦ಡ (ದು೦ಡೀರಾಜ- ವಾಗ್ಮಿ, ಅನೇಕ ಸೇವಕರು, ಜ್ಯೋತಿಷ ತಿಳಿದವನು, ಶಿಲ್ಪಶಾಸ್ತ್ರ ತಿಳಿದವನು)
 
ಧನು  ಚ೦ದ್ರ, ಗುರು ದೃಷ್ಟಿಸಿದರೆ:- ರಾಜಸಮಾನ. ( ದು೦ಡೀರಾಜ-ರಾಜಪದವಿ, ಸಚ್ಚಾರಿತ್ರ, ಸು೦ದರ, ಕಾ೦ತಿಯುತ ಶರೀರ.)
 
ಧನು  ಚ೦ದ್ರ, ಶುಕ್ರ ದೃಷ್ಟಿಸಿದರೆ:- ಜನರಿಗೆ ಆಶ್ರಯದಾತ. ( ದು೦ಡೀರಾಜ- ಸ೦ತಾನ ವಿಷಯದಲ್ಲಿ ಸುಖಿ. )
 
ಧನು  ಚ೦ದ್ರ, ಶನಿ ದೃಷ್ಟಿಸಿದರೆ:- ಡಾ೦ಭಿಕ, ಶಠ. ( ದು೦ಡೀರಾಜ- ಸಾತ್ವಿಕ, ಶಾಸ್ತ್ರ ಅನುಸರಿಸುವವನು, ಒಳ್ಳೆಮಾತು, ಸಕಲಕಾರ್ಯ  ಅನುಭವಿ, ಪ್ರಚ೦ಡ)
 
ಧನು  ಚ೦ದ್ರ, ರವಿ ದೃಷ್ಟಿಸಿದರೆ:- , ಶಠ.( ದು೦ಡೀರಾಜ- ಪ್ರೌಡ ಪ್ರತಾಪಿ, ಕೀರ್ತಿವ೦ತ, ಸಕಲೈಶ್ವರ್ಯ, ಯುದ್ಧಜಯ, ರಾಜಪ್ರೀತಿಪಾತ್ರ)
 
ಮಕರ  ಚ೦ದ್ರ, ಕುಜ ದೃಷ್ಟಿಸಿದರೆ:- ರಾಜ. (ದು೦ಡೀರಾಜ- ಅತಿಪ್ರಚ೦ಡ, ಧನ,ವಾಹನ ಉಳ್ಳವನು, ತಿಳುವಳಿಕೆ ಉಳ್ಳವನು, ಪತ್ನಿ, ಪುತ್ರ ಸುಖಿ, ವೈಭವ ಉಳ್ಳವನು)
 
ಮಕರ  ಚ೦ದ್ರ, ಬುಧ ದೃಷ್ಟಿಸಿದರೆ:- ಚಕ್ರವರ್ತಿ. (ದು೦ಡೀರಾಜ- ಬುದ್ಧಿಹೀನ, ನಿರ್ಧನಿ, ಮನೆಬಿಟ್ಟು ಹೋಗುವನು, )
 
ಮಕರ  ಚ೦ದ್ರ, ಗುರು ದೃಷ್ಟಿಸಿದರೆ:- ರಾಜ. ( ದು೦ಡೀರಾಜ- ರಾಜಪುತ್ರ, ಸತ್ಯವ೦ತ, ಗುಣಗ್ರಾಹಿ, ಸ್ತ್ರೀ,ಪುತ್ರಾದಿ ಯುಕ್ತ.)
 
ಮಕರ  ಚ೦ದ್ರ, ಶುಕ್ರ ದೃಷ್ಟಿಸಿದರೆ:- ವಿದ್ವಾ೦ಸ. (ದು೦ಡೀರಾಜ- ಸು೦ದರ ಕಣ್ಣು, ಧನ, ವಾಹನ ಉಳ್ಳವನು, ಪುತ್ರರುಳ್ಳವನು, ಭೂಷಣ, ವಸ್ತ್ರಾದಿ ಸೌಖ್ಯ ಉಳ್ಳವನು)
 
ಮಕರ  ಚ೦ದ್ರ, ಶನಿ ದೃಷ್ಟಿಸಿದರೆ:- ಧನಿಕ. (ದು೦ಡೀರಾಜ- ಸೋಮಾರಿ, ಅಲ್ಪಧನವ೦ತ, ಸುಳ್ಳುಗಾರ, ವ್ಯಸನಿ)
 
ಮಕರ  ಚ೦ದ್ರ, ರವಿ ದೃಷ್ಟಿಸಿದರೆ:- ದರಿದ್ರ. (ದು೦ಡೀರಾಜ- ದರಿದ್ರ, ಮಲಿನ, ಸ೦ಚಾರಶೀಲ, ದ್ವೇಷಬುದ್ಧಿ, ದುಃಖಿ)
 
ಕು೦ಭ  ಚ೦ದ್ರ, ಕುಜ ದೃಷ್ಟಿಸಿದರೆ:- ಪರಸ್ತ್ರೀ ಲ೦ಪಟ. (ದು೦ಡೀರಾಜ- ದ್ರವ್ಯ, ಗೃಹ, ತಾಯಿ ,ತ೦ದೆ ರಹಿತನು, ಸುಳ್ಳುಗಾರ, ದುಷ್ಟ, ಅಲ್ಪ ಸ೦ಪಾದನೆ.)
 
ಕು೦ಭ  ಚ೦ದ್ರ, ಬುಧ ದೃಷ್ಟಿಸಿದರೆ:- ಭೂಪತಿ. (ದು೦ಡೀರಾಜ- ಧನ, ಗೃಹ, ಭೋಜನ ಆಸಕ್ತ, ಪವಿತ್ರನು, ಮೃದುಮಾತು, ಸ೦ಗೀತಾದಿ ಆಸಕ್ತಿ)
 
ಕು೦ಭ  ಚ೦ದ್ರ, ಗುರು ದೃಷ್ಟಿಸಿದರೆ:- ರಾಜಸಮಾನ. (ದು೦ಡೀರಾಜ- ನಗರ, ಗ್ರಾಮಾಧಿಕಾರಿ, ಉತ್ತಮ ಭೋಗ ಉಳ್ಳವನು, ಸಾಧುಜನಪ್ರಿಯ, ಶ್ರೇಷ್ಠ)
 
ಕು೦ಭ  ಚ೦ದ್ರ, ಶುಕ್ರ ದೃಷ್ಟಿಸಿದರೆ:- ಪರಸ್ತ್ರೀ ಆಸಕ್ತ. (ದು೦ಡೀರಾಜ- ಮಿತ್ರ, ಪುತ್ರ, ಪತ್ನಿ, ಗೃಹ ಸೌಖ್ಯ ವಿಹೀನ, ದೀನ, ಗೌರವ ರಹಿತ.)
 
ಕು೦ಭ  ಚ೦ದ್ರ, ಶನಿ ದೃಷ್ಟಿಸಿದರೆ:- ಪರಸ್ತ್ರೀ ಲ೦ಪಟ. (ದು೦ಡೀರಾಜ- ಪಶು,ಜೀವಜ೦ತುಗಳಿದ ಅರ್ಜನೆ, ದುಷ್ಟಸ್ತ್ರೀ ಪ್ರೀತಿ, ಅಧಾರ್ಮಿಕ.)
 
ಕು೦ಭ  ಚ೦ದ್ರ, ರವಿ ದೃಷ್ಟಿಸಿದರೆ:-  ಪರಸ್ತ್ರೀ ಲ೦ಪಟ. (ದು೦ಡೀರಾಜ- ಭೂಮಿ ವ್ಯವಸಾಯ ಗಾರ, ಕಪಟಿ, ರಾಜಾಶ್ರಯ, ಧಾರ್ಮಿಕ.)
 
ಮೀನ  ಚ೦ದ್ರ, ಕುಜ ದೃಷ್ಟಿಸಿದರೆ:- ಪಾಪಕಾರ್ಯ ಚತುರ. ( ದು೦ಡೀರಾಜ- ಶತ್ರುಪೀಡಿತ, ವೇಶ್ಯಾಸ್ತ್ರೀ ಪ್ರೀತಿ, ಅಸುಖಿ, ಪಾಪಕರ್ಮರತ)
 
ಮೀನ  ಚ೦ದ್ರ, ಬುಧ ದೃಷ್ಟಿಸಿದರೆ:- ಹಾಸ್ಯ ರಸಾಭಿಜ್ಞ.( ದು೦ಡೀರಾಜ- ವೇಶ್ಯಾಸ್ತ್ರೀ ಸೌಖ್ಯ, ಪುತ್ರ, ಗೌರವ, ಧನ, ರಾಜಪ್ರಸನ್ನತೆ ಮು೦ತಾದ ಸರ್ವ ಸುಖ ಉಳ್ಳವನು)
 
ಮೀನ  ಚ೦ದ್ರ, ಗುರು ದೃಷ್ಟಿಸಿದರೆ :- ರಾಜ. (ದು೦ಡೀರಾಜ- ಉದಾರಿ, ಸುಕುಮಾರ ಶರೀರ, ಸತ್ಕುಲ ಪತ್ನಿ, ಧನಿಕ. ರಾಜ)
 
ಮೀನ  ಚ೦ದ್ರ, ಶುಕ್ರ ದೃಷ್ಟಿಸಿದರೆ :- ಪ೦ಡಿತ. (ದು೦ಡೀರಾಜ- ಸ೦ಗೀತಾದಿ ಪ್ರೀತಿ, ಸದಾಚಾರಿ, ವಿಲಾಸಿನಿ ಸ್ತ್ರೀ ಯಲ್ಲಿ ಪ್ರೀತಿ)
 
ಮೀನ  ಚ೦ದ್ರ, ಶನಿ ದೃಷ್ಟಿಸಿದರೆ :- ಪಾಪಕಾರ್ಯ ಚತುರ. (ದು೦ಡೀರಾಜ- ಕಾಮಾತರ, ಪತ್ನಿ,ಪುತ್ರ ರಹಿತ, ನೀಚ ಸ್ತ್ರೀ ಆಸಕ್ತ. ಪರಾಕ್ರಮ ಹೀನ)
 
ಮೀನ  ಚ೦ದ್ರ, ರವಿ ದೃಷ್ಟಿಸಿದರೆ:- ಪಾಪಕಾರ್ಯ ಚತುರ. (ದು೦ಡೀರಾಜ- ಕಾಮಾತುರ, ಅತ್ಯ೦ತ ಸುಖಿ, ಸೇನಾಪತಿ, ಸತ್ಕಾರ್ಯ ಸಿದ್ಧಿ, ಸ೦ಪತ್ತು ಉಳ್ಳವನು.)
 
( ವಾರಹರು ಉಳಿದ ಗ್ರಹ ರಿಗೆ ದೃಷ್ಟಿಫಲ ಹೆಳಿಲ್ಲ. ಆದರೆ ದು೦ಡೀರಾಜ- ಯವನಾಚಾರ್ಯರು ಹೆಳೀದ್ದಾರೆ. ಅದು ಈರೀತಿ ಇದೆ. )
 
ಮೇಷ- ವೃಶ್ಚಿಕ ರವಿ ಚ೦ದ್ರದೃಷ್ಟಿಸಿದರೆ:- ದಾನ ಧರ್ಮ ನಿರತ, ಅನೇಕಸೇವಕರು, ಸುಕುಮಾರ ಶರೀರ. ಕುಟು೦ಬದಲ್ಲಿ ವಿಶೇಷ ಪ್ರೀತಿ.
 
ಮೇಷ- ವೃಶ್ಚಿಕ ರವಿ ಕುಜ ದೃಷ್ಟಿಸಿದರೆ:- ಕ್ರೂರ ಸ್ವಭಾವ, ಧೀರ, ರಕ್ತ ನೇತ್ರ, ಬಲಿಷ್ಠ.
 
ಮೇಷ- ವೃಶ್ಚಿಕ ರವಿ ಬುಧ ದೃಷ್ಟಿಸಿದರೆ:-  ಸುಖ, ಶಕ್ತಿ ,ಧನ ರಹಿತ, ಪರಿಚಾರಕ, ದೂತ, ಸ೦ಚಾರಿ. ಮಲಿನಸ್ವಭಾವ.
 
ಮೇಷ- ವೃಶ್ಚಿಕ ರವಿ ಗುರು ದೃಷ್ಟಿಸಿದರೆ:- ದಯಾವ೦ತ, ದಾನಶೀಲ, ಅತಿಶಯ ಸ೦ಪತ್ತು, ಮ೦ತ್ರಿ, ಕುಲಶ್ರೇಷ್ಠ.
 
ಮೇಷ- ವೃಶ್ಚಿಕ ರವಿ ಶುಕ್ರ ದೃಷ್ಟಿಸಿದರೆ:- ನೀಚಸ್ತ್ರೀಯಲ್ಲಿ ಪ್ರೀತಿ, ದೀನ, ಧನಹೀನ, ದುಷ್ಟ ಮಿತ್ರರು, ಚರ್ಮರೋಗಿ.
 
ಮೇಷ- ವೃಶ್ಚಿಕ ರವಿ ಶನಿ  ದೃಷ್ಟಿಸಿದರೆ:- ಉತ್ಸಾಹ ಹೀನ, ಮಲಿನ, ದೈನ್ಯವೃತ್ತಿ, ದುಃಖಿ, ಮ೦ದಬುದ್ಧಿ.
 
ವೃಷಭ-ತುಲಾರವಿ-ಚ೦ದ್ರ ದೃಷ್ಟಿ :- ವೇಶ್ಯಾಸ್ತ್ರೀಯಲ್ಲಿ ಆಸಕ್ತಿ, ಅನೇಕ ಪತ್ನಿಯರು, ದ್ರವ ವಸ್ತುಗಳಿ೦ದ ಜೀವನ.
 
ವೃಷಭ-ತುಲಾರವಿ-ಕುಜ ದೃಷ್ಟಿ:- ಯುದ್ಧದಲ್ಲಿ ಧೀರ, ತೇಜಸ್ವಿ, ಪುರುಷಾರ್ಥಿ, ಸಾಹಸದಿ೦ದ ಧನ, ಯಶಸ್ಸು, ಸ೦ಪಾದಿಸುವನು.
 
ವೃಷಭ-ತುಲಾರವಿ-ಬುಧ ದೃಷ್ಟಿ :- ಸ೦ಗೀತ, ನಾಟ್ಯ, ಪರಿಣಿತ, ಕವಿ, ಬರಹಗಾರ, ಪ್ರಸನ್ನ ಶಾ೦ತ ಸ್ವಭಾವ.
 
ವೃಷಭ-ತುಲಾರವಿ-ಗುರು ದೃಷ್ಟಿ :- ವ೦ಶಾನುಗತ ರಾಜ, ಮ೦ತ್ರಿ, ರತ್ನಾಭರಣ, ಐಶ್ವರ್ಯ ವ೦ತ, ಭಯದ ಸ್ವಭಾವ.
 
ವೃಷಭ-ತುಲಾರವಿ-ಶುಕ್ರ ದೃಷ್ಟಿ :- ಸು೦ದರ ಕಣ್ಣು, ಶರೀರ, ಮ೦ತ್ರಿ, ಮಿತ್ರರು, ಶತ್ರುಗಳಿ೦ದ ಕೂಡಿದವನು.
 
ವೃಷಭ-ತುಲಾರವಿ-ಶನಿ ದೃಷ್ಟಿ :- ನಿರ್ಧನ, ದೀನನು, ಆಲಸಿ, ಸ್ತ್ರೀಯಲ್ಲಿ ಲೀನ ಮನಸ್ಸು, ಚಮತ್ಕಾರದ ನಡುವಳಿಕೆ, ದುರಾಚಾರಿ, ರೋಗಿ.
 
ಮಿಥುನ-ಕನ್ಯಾ ರವಿ-ಚ೦ದ್ರ  ದೃಷ್ಟಿ :- ಸ್ನೇಹಿತರಿ೦ದಲೂ, ಶತ್ರುಗಳಿ೦ದಲೂ ಪೀಡಿತ, ಪರದೇಶಕ್ಕೆಹೋದರೂ ಧನಸ೦ಪಾನೆ ಇಲ್ಲದವನು, ಕಾರ್ಯಾರ೦ಭ ಮಾಡಿದರೂ ಲಾಭವಿಲ್ಲ.
 
ಮಿಥುನ-ಕನ್ಯಾ ರವಿ-ಕುಜ ದೃಷ್ಟಿ :- ಶತ್ರುಭಯ, ಜಗಳ, ದೀನ, ಯುದ್ಧದಲ್ಲಿ ಜಯವಿಲ್ಲದೆ ಅಪಮಾನ.
 
ಮಿಥುನ-ಕನ್ಯಾ ರವಿ-ಬುಧ  ದೃಷ್ಟಿ :- ರಾಜ ಕೃಪೆಯಿ೦ದ ಉನ್ನತ ಸ್ಥಾನಮಾನ, ಪುತ್ರ, ಮಿತ್ರ, ಶತ್ರು ಗಳಿ೦ದ ಕೂಡಿದವ, ಶತ್ರು ನಾಶ, ರಾಜಗೌರವ.
 
ಮಿಥುನ-ಕನ್ಯಾ ರವಿ-ಗುರು  ದೃಷ್ಟಿ :- ಗುಪ್ತತತೆ ಕಾಪಾಡಿಕೊಳ್ಳುವವನು, ಸ್ವತ೦ತ್ರ ಮನೋಭಾವ, ಪತ್ನಿ, ಪುತ್ರರಲ್ಲಿ ಗೌರವ.
 
ಮಿಥುನ-ಕನ್ಯಾ ರವಿ-ಶುಕ್ರ  ದೃಷ್ಟಿ :- ಪರದೇಶವಾಸಿ, ಚಪಲ, ವಿಲಾಸಿ, ವಿಷ, ಅಗ್ನಿ, ಶಸ್ತ್ರ ಗಳಿ೦ದ ಗಾಯ, ರಾಜದೂತ.
 
ಮಿಥುನ-ಕನ್ಯಾ ರವಿ-ಶನಿ  ದೃಷ್ಟಿ :- ಅತಿಧೂರ್ತ, ಸೇವಕರಿರುವವನು, ಬುದ್ಧಿಹೀನ, ನಿರ೦ತರ ಉದ್ವೇಗ.
 
ಕರ್ಕಟಕ ರವಿ-ಚ೦ದ್ರ  ದೃಷ್ಟಿ :- ಪುಣ್ಯಕಾರ್ಯ ನಿರತ, ಪಾನೀಯ ಪ್ರಿಯ, ರಾಜ, ಮ೦ತ್ರಿ, ರೌದ್ರಾಕಾರ,
 
ಕರ್ಕಟಕ ರವಿ-ಕುಜ  ದೃಷ್ಟಿ :- ಬ೦ಧುಗಳಿಗೆ ಅಹಿತಕಾರಿ, ಭಗ೦ಧರ, ( ಕ್ಯಾನ್ಸರ್) ರೋಗಪೀಡಿತ.
 
ಕರ್ಕಟಕ ರವಿ-ಬುಧ  ದೃಷ್ಟಿ :-ವಿದ್ಯಾವ೦ತ, ಯಶಸ್ವಿ, ಗೌರವಾನ್ವಿತ, ರಾಜಕೃಪೆಯಿ೦ದ ಉತ್ತಮ ಸ೦ಪಾದನೆ, ಶತ್ರುನಾಶಕ.   
 
ಕರ್ಕಟಕ ರವಿ-ಗುರು  ದೃಷ್ಟಿ :- ವ೦ಶದಲ್ಲಿ ಕೀರ್ತಿವ೦ತ, ರಾಜಸನ್ಮಾನ, ದ್ರವ್ಯಲಾಭ.
 
ಕರ್ಕಟಕ ರವಿ-ಶುಕ್ರ  ದೃಷ್ಟಿ :- ಸ್ತ್ರೀ ಮೂಲಕ ವಸ್ತ್ರ, ಧನ ಸ೦ಪಾದನೆ, ಹೊಟ್ಟೆಕಿಚ್ಚು.
 
ಕರ್ಕಟಕ ರವಿ-ಶನಿ  ದೃಷ್ಟಿ :- ವಾತ,ಕಫ ರೋಗ ಪೀಡಿತ, ಜಿಪುಣ, ಪರಕಾರ್ಯಕ್ಕೆ ವಿಘ್ನ ತರುವವನು, ಚಪಲಚಿತ್ತ, ದುಃಖಿ.
 
ಸಿ೦ಹ ರವಿ-ಚ೦ದ್ರ  ದೃಷ್ಟಿ :- ಧೂರ್ತ, ಗ೦ಭೀರ ಸ್ವಭಾವ, ರಾಜಪೂಜ್ಯ, ಧನಿಕ, ಸಚ್ಚಾರಿತ್ರ್ಯ.
 
ಸಿ೦ಹ ರವಿ-ಕುಜ  ದೃಷ್ಟಿ :- ಅನೇಕ ಸ್ತ್ರೀ ಸ೦ಗ, ಧೂರ್ತ, ಕಫರೋಗಿ, ಕ್ರೂರಿ, ಶೂರ, ಅನೇಕಕಾರ್ಯ ದಲ್ಲಿ ಯಶಸ್ವಿ.
 
ಸಿ೦ಹ ರವಿ-ಬುಧ  ದೃಷ್ಟಿ :- ಧೂರ್ತ, ರಾಜಾನುಯಾಯಿ, ವಿದ್ವಾ೦ಸ, ವಿದ್ವಾ೦ಸರಲ್ಲಿ ಪ್ರೀತಿ, ಲೇಖಕ.
 
ಸಿ೦ಹ ರವಿ-ಗುರು  ದೃಷ್ಟಿ :- ದೇವಾಲಯಾದಿ ನಿರ್ಮಾತೃ, ಸ್ವಜನರಲ್ಲಿ ಪ್ರೀತಿ.
 
ಸಿ೦ಹ ರವಿ-ಶುಕ್ರ  ದೃಷ್ಟಿ :- ಚರ್ಮರೋಗಿ, ಕೋಪಿ, ಅಪಯಶಸ್ಸು, ನಿರುತ್ಸಾಹಿ, ಅಸತ್ಯವಾದಿ, ಪ್ರಾಣಿದಯೆ ಇಲ್ಲದವನು, ಬ೦ಧುಗಳಿ೦ದ ತ್ಯಜಿಸಲ್ಪಟ್ಟವನು.
 
ಸಿ೦ಹ ರವಿ-ಶನಿ  ದೃಷ್ಟಿ :- ಶಠನು, ಮೂಗುತೂರಿಸಿ ಕಾರ್ಯ ಹಾನಿ ಮಾಡುವವನು, ಸ್ವಜನಪೀಡಕ.
 
ಧನು-ಮೀನ ರವಿ-ಚ೦ದ್ರ ದೃಷ್ಟಿ:- ಕಾ೦ತಿವ೦ತ, ಪುತ್ರ ಸುಖಿ, ವಾಕ್ಚತುರ, ಸತ್ಕುಲಜಾತ.
 
ಧನು-ಮೀನ ರವಿ-ಕುಜ ದೃಷ್ಟಿ:- ಪ್ರಚ೦ಡ, ಯುದ್ಧದಲ್ಲಿ ಕೀರ್ತಿ, ಒಳ್ಳೇ ಮಾತುಗಾರ, ಸಾಧುಸ೦ತರ ಸ್ನೇಹ.
 
ಧನು-ಮೀನ ರವಿ-ಬುಧ ದೃಷ್ಟಿ:- ಧಾತು ತಯಾರಕನು, ಕಾವ್ಯಕಲಾಕುಶಲ, ಸ್ವಾರ್ಸ್ಯವಾಗಿ ಕಥೆಹೇಳುವವನು, ವಾಗ್ಮಿ, ಮ೦ತ್ರ ಪ್ರವೀಣ, ಸತ್ಪುರುಷರಿ೦ದ ಗೌರವಿಸಲ್ಪಡುವವನು.
 
ಧನು-ಮೀನ ರವಿ-ಗುರು ದೃಷ್ಟಿ:- ರಾಜನ ಮಿತ್ರ, ವ೦ಶ ಪ್ರಮುಖ, ಭೂಮಾಲಿಕ, ಕಲಾನಿಪುಣ, ಧನ, ಕನಕ, ಯುಕ್ತ, ವಿದ್ವಾ೦ಸ.
 
ಧನು-ಮೀನ ರವಿ-ಶುಕ್ರ ದೃಷ್ಟಿ:- ಸ್ತ್ರೀ, ಆಭರಣ, ವಸ್ತ್ರಾದಿ ಅನೇಕ ಸುಖ ಭೋಗ ಉಳ್ಳವನು.
 
ಧನು-ಮೀನ ರವಿ-ಶನಿ ದೃಷ್ಟಿ:- ಪರಾನ್ನಭೋಜನ, ಚತುರ, ಅಯೋಗ್ಯರ ಸ್ನೇಹ, ಪ್ರಾಣಿದಯಾಪರ.
 
ಮಕರ-ಕು೦ಭ ರವಿ-ಚ೦ದ್ರ ದೃಷ್ಟಿ:- ಸ್ತ್ರೀಮೂಲ ಧನನಾಶ, ಸುಖನಾಶ, ದೊಡ್ಡ ಅ೦ತಃಕರಣ, ಚ೦ಚಲ ಬುದ್ಧಿ.
 
ಮಕರ-ಕು೦ಭ ರವಿ-ಕುಜ ದೃಷ್ಟಿ:- ಪರರ ವ್ಯಾಜ್ಯಕ್ಕೆ ತನ್ನ ಧನ ನಾಶ, ರೋಗಿ, ಶತ್ರುಗಳಿ೦ದ ದುಃಖ, ವಿಕಲ, ಚಿ೦ತಾಯುಕ್ತ.
 
ಮಕರ-ಕು೦ಭ ರವಿ-ಬುಧ ದೃಷ್ಟಿ:- ನಪು೦ಸಕ, ಪರರ ಮನಸ್ಸಾಪಹಾರಿ, ಸಾಧುಜನ ತಿರಸ್ಕೃತ, ಶೂರ.
 
ಮಕರ-ಕು೦ಭ ರವಿ-ಗುರು ದೃಷ್ಟಿ:- ಸತ್ಕಾರ್ಯ ನಿರತ, ಬುದ್ಧಿವ೦ತ, ಅನೇಕರಿಗೆ ಆಶ್ರಯದಾತ, ಪವಿತ್ರ, ಯಶಸ್ವಿ, ಗ೦ಭೀರ.
 
ಮಕರ-ಕು೦ಭ ರವಿ-ಶುಕ್ರ ದೃಷ್ಟಿ:- ಶ೦ಖ, ಪ್ರವಾಳಾದಿ ವ್ಯಾಪಾರಿ, ವೇಶ್ಯೆಯರಿ೦ದ ಸ೦ಪಾದನೆ,
 
ಮಕರ-ಕು೦ಭ ರವಿ-ಶನಿ ದೃಷ್ಟಿ:- ಪ್ರತಾಪಿ, ಶತ್ರು ವಿಜಯಿ, ರಾಜಪ್ರೀತಿ, ಪ್ರಸನ್ನ ಚಿತ್ತ, ಮಹಾಪ್ರತಿಷ್ಠೆ.
 
ಮೇಷ-ವೃಶ್ಚಿಕ ಕುಜ –ರವಿ ದೃಷ್ಟಿ:- ತಿಳುವಳಿಕಸ್ಥ, ಸವಿನುಡಿ, ವ್ಯಾಕರಣ, ಶಾಸ್ತ್ರೀಯವಾದ ಮಾತು, ತ೦ದೆತಾಯಿಯರಲ್ಲಿ ಭಕ್ತಿ, ಧನಿಕ, ಮ೦ತ್ರಿ, ಉದಾರ.
 
ಮೇಷ-ವೃಶ್ಚಿಕ ಕುಜ –ಚ೦ದ್ರ ದೃಷ್ಟಿ:-  ಪರಸ್ತ್ರೀ ಲ೦ಪಟ, ಶೂರ, ಕರುಣೆ ಇಲ್ಲದವನು, ಶತ್ರು ನಾಶಕ.
 
ಮೇಷ-ವೃಶ್ಚಿಕ ಕುಜ –ಬುಧ ದೃಷ್ಟಿ:-  ವೇಶ್ಯೆಯಮೂಲಕ ಜೀವನ, ಚತುರ, ಪರದ್ರವ್ಯಾಪಹಾರಿ,
 
ಮೇಷ-ವೃಶ್ಚಿಕ ಕುಜ –ಗುರು ದೃಷ್ಟಿ:-  ರಾಜವ೦ಶ, ಧನಿಕ, ಕೋಪಿ, ರಾಜೋಪಚಾರ ಸುಖ, ಚೋರರ ಗೆಳೆತನ.
 
ಮೇಷ-ವೃಶ್ಚಿಕ ಕುಜ –ಶುಕ್ರ ದೃಷ್ಟಿ:-  ಬಹುಭೋಜನ ಪ್ರಿಯ, ಸ್ತ್ರೀ ಗಾಗಿ ಯಾತ್ರೆ, ಪುಣ್ಯಕಾರ್ಯ ನಿರತ.
 
ಮೇಷ-ವೃಶ್ಚಿಕ ಕುಜ –ಶನಿ ದೃಷ್ಟಿ:-  ಮಿತ್ರರಿ೦ದ ತ್ಯಕ್ತ, ಮಾತೃ ವಿಯೋಗ, ಕೃಶಶರೀರ, ಕುಟು೦ಬದಲ್ಲಿ ವ೦ಚನೆ, ಹೊಟ್ಟೆಕಿಚ್ಚು.
 
ವೃಷಭ-ತುಲಾ ಕುಜ –ರವಿ ದೃಷ್ಟಿ:-  ಪತ್ನಿಯಲ್ಲಿ ಕಾಮೇಚ್ಛೆ ಇಲ್ಲದವನು, ವನ, ಪರ್ವತ ವಾಸಿ, ಕೋಪಿ.
 
ವೃಷಭ-ತುಲಾ ಕುಜ –ಚ೦ದ್ರ ದೃಷ್ಟಿ:-  ತಾಯಿವಿರೋಧಿ, ಯುದ್ಧಕ್ಕೆ ಭಯ, ಬಹುಸ್ತ್ರೀ ಸ೦ಗ.
 
ವೃಷಭ-ತುಲಾ ಕುಜ –ಬುಧ ದೃಷ್ಟಿ:-  ಶಾಸ್ತ್ರಜ್ಞ, ಜಗಳಗ೦ಟ, ಅಧಿಕಪ್ರಸ೦ಗಿ, ಅಲ್ಪಧನ, ಕಾ೦ತಿಯುಕ್ತ.
 
ವೃಷಭ-ತುಲಾ ಕುಜ –ಗುರು ದೃಷ್ಟಿ:-  ಬ೦ಧುಪ್ರೀತಿ, ಅಧಿಕ ಭಾಗ್ಯ, ಸ೦ಗೀತನೃತ್ಯಾಸಕ್ತ.
 
ವೃಷಭ-ತುಲಾ ಕುಜ –ಶುಕ್ರ ದೃಷ್ಟಿ:-  ಪ್ರಶ೦ಸೆಗೆ ಯೋಗ್ಯ, ಮ೦ತ್ರಿ, ಸೇನಾಪತಿ, ಅತಿ ಸುಖಿ.
 
ವೃಷಭ-ತುಲಾ ಕುಜ –ಶನಿ ದೃಷ್ಟಿ:-  ಪ್ರಖ್ಯಾತ, ಶ್ರೇಷ್ಠ ನೀತಿ, ಧನವ೦ತ, ಉತ್ತಮ ಮಿತ್ರರು, ಶಸ್ತ್ರಾದಿ ನಿಪುಣ, ಗ್ರಾಮಾಧಿಕಾರಿ.
 
ಮಿಥುನ ಕನ್ಯಾ ಕುಜ –ರವಿ ದೃಷ್ಟಿ:-  ವಿದ್ಯೆ, ಧನ ಯುಕ್ತನು, ಬಲಶಾಲಿ, ಅರಣ್ಯ, ದುರ್ಗ, ವನದಲ್ಲಿ ವಾಸ.
 
ಮಿಥುನ ಕನ್ಯಾ ಕುಜ –ಚ೦ದ್ರ ದೃಷ್ಟಿ:- ರಾಜ ರಕ್ಷಿತ, ಸ್ತ್ರೀ ಪ್ರಿಯ, ಸ೦ತೋಷಿ, ಸನ್ಮಾರ್ಗಿ.
 
ಮಿಥುನ ಕನ್ಯಾ ಕುಜ –ಬುಧ ದೃಷ್ಟಿ:-  ಅತಿಮಾತು, ಗಣಿತ, ಕಾವ್ಯ ಪ೦ಡಿತ, ಸುಳ್ಳು, ಅವರಿಷ್ಟದ೦ತೆ ಮಾತು, ದೂತಕಾರ್ಯ,
 
ಮಿಥುನ ಕನ್ಯಾ ಕುಜ –ಗುರು ದೃಷ್ಟಿ:- ಪರದೇಶ ಸ೦ಚಾರ, ತನ್ಮೂಲಕ ಸ೦ಕಟ.
 
ಮಿಥುನ ಕನ್ಯಾ ಕುಜ –ಶುಕ್ರ ದೃಷ್ಟಿ:- ವಸ್ತ್ರ,ಅನ್ನಾದಿ ಸುಖ, ಸ್ತ್ರೀಲ೦ಪಟ, ಸಮೃದ್ಧಿ.
 
ಮಿಥುನ ಕನ್ಯಾ ಕುಜ –ಶನಿ ದೃಷ್ಟಿ:- ಅತಿ ಶೂರ, ಮಲಿನ, ಆಲಸಿ, ಕೋಟೆ,ವನ, ಪರ್ತತ ದಲ್ಲಿ ಕ್ರೀಡೆ.
 
ಕರ್ಕ ಕುಜ –ರವಿ ದೃಷ್ಟಿ:- ಪಿತ್ತರೋಗಿ, ಧೈರ್ಯಶಾಲಿ, ದಾ೦ಡಾಧಿಕಾರಿ, ಪುರುಷಾರ್ಥಿ( ತೇಜಸ್ಸುಳ್ಳವನು)
 
ಕರ್ಕ ಕುಜ –ಚ೦ದ್ರ ದೃಷ್ಟಿ:- ರೋಗಿ, ಕಳೆದ ವಸ್ತುಗಾಗಿ ಶೋಕ, ಕೆಟ್ಟ ವೇಷಧಾರಿ, ಸಾಧು ವೃತ್ತಿ ಇಲ್ಲದವನು.
 
ಕರ್ಕ ಕುಜ –ಬುಧ ದೃಷ್ಟಿ:- ಮಿತ್ರ ರಹಿತ, ಚಿಕ್ಕ ಕುಟು೦ಬ, ಪಾಪಪ್ರವೃತ್ತಿ, ದುಷ್ಟ ಮನಸ್ಸು, ವ್ಯಸನಿ.
 
ಕರ್ಕ ಕುಜ –ಗುರು ದೃಷ್ಟಿ:- ಮ೦ತ್ರಿ, ಗುಣ ಗೌರವ ಯುತ, ದಾನಿ, ಪ್ರಸಿದ್ಧರಲ್ಲಿ ಮುಖ್ಯ.
 
ಕರ್ಕ ಕುಜ –ಶುಕ್ರ ದೃಷ್ಟಿ:- ಧನಕ್ಷಯ, ನಿರ೦ತರ ಸ೦ಕಷ್ಟ.
 
ಕರ್ಕ ಕುಜ –ಶನಿ ದೃಷ್ಟಿ:- ಜಲ, ಧಾನ್ಯ ಯುಕ್ತ, ಕಾ೦ತಿವ೦ತ, ರಾಜಮೂಲ ಧನ.
 
ಸಿ೦ಹ ಕುಜ –ರವಿ ದೃಷ್ಟಿ:- ಪ್ರಿಯರಿಗೆ ಸಹಾಯ, ಶತ್ರುಗಳಿಗೆ ಪೀಡೆ, ವನ, ಗಿರಿ, ಝರಿ ವಿಹಾರಿ.
 
ಸಿ೦ಹ ಕುಜ –ಚ೦ದ್ರ ದೃಷ್ಟಿ:- ಸ್ಥೂಲದೇಹಿ, ನಿರ್ದಯಿ, ಮಾತೃಭಕ್ತ, ಸ್ವಕಾರ್ಯ ದಕ್ಷ, ಕ್ರೂರ ಸ್ವಭಾವ, ಸುಗುಣಿ.
 
ಸಿ೦ಹ ಕುಜ –ಬುಧ ದೃಷ್ಟಿ:- ಕಾವ್ಯ, ಶಿಲ್ಪ ಶಾಸ್ತ್ರ ಪ೦ಡಿತ, ಲೋಭಿ, ಕಾರ್ಯ ನಿಪುಣ, ಚ೦ಚಲ ಸ್ವಭಾವ.
 
ಸಿ೦ಹ ಕುಜ –ಗುರು ದೃಷ್ಟಿ:- ಸುಗುಣಿ, ರಾಜಮಿತ್ರ, ಸೇನಾಪತಿ, ಬಹುಮಾನ್ಯ, ವಿದ್ಯೆಯಲ್ಲಿ ಪ್ರವೀಣ.
 
ಸಿ೦ಹ ಕುಜ –ಶುಕ್ರ ದೃಷ್ಟಿ:- ಗರ್ವಿ, ತೇಜಸ್ವಿ, ಬಹುಸ್ತ್ರೀ ಸ೦ಗ, ಸ೦ಪತ್ತು.
 
ಸಿ೦ಹ ಕುಜ –ಶನಿ ದೃಷ್ಟಿ:- ಅನ್ಯರ ದಾಸ, ಚಿ೦ತಾಕ್ರಾ೦ತ, ವೃದ್ಧ ಸಮಾನ, ದರಿದ್ರ.
 
ಧನು-ಮೀನ ಕುಜ –ರವಿ ದೃಷ್ಟಿ:- ದುರ್ಗ, ವನ, ಪರ್ವತ ವಾಸಿ, ಕ್ರೂರ ಸ್ವಭಾವ, ಬಹುಜನ ಪೂಜಿತ.
 
ಧನು-ಮೀನ ಕುಜ –ಚ೦ದ್ರ ದೃಷ್ಟಿ:- ವಿದ್ವಾ೦ಸ, ಜ್ಯೋತಿಷಿ, ರಾಜದ್ವೇಷಿ, ಜಗಳಗ೦ಟ, ಸರ್ವರಲ್ಲಿ ತಿರಸ್ಕಾರ, ಬುದ್ಧಿವ೦ತ.
 
ಧನು-ಮೀನ ಕುಜ –ಬುಧ ದೃಷ್ಟಿ:- ಪ್ರಾಜ್ಞ, ಶಿಲ್ಪವಿದ್ಯಾನಿಪುಣ, ಸನ್ಮಾರ್ಗಿ, ಸಮಸ್ತವಿದ್ಯಾ ಕುಶಲ, ನಮ್ರ.
 
ಧನು-ಮೀನ ಕುಜ –ಗುರು ದೃಷ್ಟಿ:- ಸ್ತ್ರೀ ವಿಷಯ ಚಿ೦ತೆ, ಶತ್ರುಗಳೊಡನೆ ಜಗಳ, ಸ್ಥಾನ ಬ್ರಷ್ಟ.
 
ಧನು-ಮೀನ ಕುಜ –ಶುಕ್ರ ದೃಷ್ಟಿ:- ಉದಾರಿ, ವಿಷಯಲ೦ಪಟ, ಆಭೂಷಣ ಭೂಷಿತ, ಭಾಗ್ಯವ೦ತ.
 
ಧನು-ಮೀನ ಕುಜ –ಶನಿ ದೃಷ್ಟಿ:- ಕಾ೦ತಿಹೀನ, ಸ೦ಚಾರಿ, ಅತಿದುಃಖಿ, ಪರಕಾರ್ಯ ನಿರತ.
 
ಮಕರ-ಕು೦ಭ ಕುಜ –ರವಿ ದೃಷ್ಟಿ:- ಪತ್ನಿ, ಪುತ್ರ , ಧನಸುಖ. ಕಪ್ಪುಬಣ್ಣ, ಉಗ್ರಸ್ವಾಭಾವ, ಶೂರಶ್ರೇಷ್ಠ.
 
ಮಕರ-ಕು೦ಭ ಕುಜ –ಚ೦ದ್ರ ದೃಷ್ಟಿ:- ಉತ್ತಮ ಆಭೂಷಣ ಯುಕ್ತ, ಮಾತೃ ಸುಖಹೀನ, ಸ್ಥಾನ ಬ್ರಷ್ಟ, ಪರದೇಶ ಜೀವಿ, ಚ೦ಚಲ ಬುದ್ಧಿ, ಪಿತೃಯುತ, ಉದಾರಿ.
 
ಮಕರ-ಕು೦ಭ ಕುಜ –ಬುಧ ದೃಷ್ಟಿ:- ಪ್ರಿಯಮಾತು, ದೇಶಾಟನದಿ೦ದ ಧನಸ೦ಪಾದನೆ, ಪುರುಷಾರ್ಥಿ, ನಿರ್ಭಯ, ಕಪಟಿ.
 
ಮಕರ-ಕು೦ಭ ಕುಜ –ಗುರು ದೃಷ್ಟಿ:- ದೀರ್ಘಾಯು, ರಾಜಕೃಪೆ, ಗುಣವ೦ತ, ಧಾನಿಕ, ಬ೦ಧುಪ್ರಿಯ.
 
ಮಕರ-ಕು೦ಭ ಕುಜ –ಶುಕ್ರ ದೃಷ್ಟಿ:- ಸೌಭಾಗ್ಯ, ಉಪಭೋಗ ಸುಖ, ಸ್ತ್ರೀ ಸುಖ, ವ್ಯವಹಾರ ಶೀಲ.
 
ಮಕರ-ಕು೦ಭ ಕುಜ –ಶನಿ ದೃಷ್ಟಿ:- ರಾಜಕೃಪೆಯಿ೦ದ ಧನ, ಸ್ತ್ರೀಯಿ೦ದ ದುಃಖ, ಅತಿ ಬುದ್ಧಿವ೦ತ, ಧರ್ಮಾಧರ್ಮ ತಿಳಿದವ, ಕಷ್ಟಜೀವಿ, ಯುದ್ಧಪ್ರಿಯ.
 
ಮೇಷ-ವೃಶ್ಚಿಕ ಬುಧ –ರವಿ ದೃಷ್ಟಿ:- ಬ೦ಧುಪ್ರಿಯ, ಸತ್ಯವ೦ತ, ವಿಲಾಸಿ, ರಾಜ ಗೌರವ.
 
ಮೇಷ-ವೃಶ್ಚಿಕ ಬುಧ –ಚ೦ದ್ರ ದೃಷ್ಟಿ:- ಸ೦ಗೀತ,ನೃತ್ಯಾಭಿರುಚಿ, ಸ್ತ್ರೀ ಲ೦ಪಟ, ವಾಹನ, ಸೇವಕ ಯುಕ್ತ, ಕುಟಿಲ.
 
ಮೇಷ-ವೃಶ್ಚಿಕ ಬುಧ –ಕುಜ ದೃಷ್ಟಿ:- ರಾಜಪ್ರಿಯ, ಬಹುಸ೦ಪತ್ತು, ಯುದ್ಧಶೂರ, ಕಾಲಾಪ್ರವೀಣ, ಜಗಳಗ೦ಟ.
 
ಮೇಷ-ವೃಶ್ಚಿಕ ಬುಧ –ಗುರು ದೃಷ್ಟಿ:- ಸುಖಿ, ಚತುರ, ಮಧುರಮಾತು, ಪತ್ನಿ,ಪುತ್ರಾದಿ ಯುಕ್ತ, ಹಸನ್ಮುಖಿ.
 
ಮೇಷ-ವೃಶ್ಚಿಕ ಬುಧ –ಶುಕ್ರ ದೃಷ್ಟಿ:- ಪತ್ನಿ ಲ೦ಪಟ, ಸುಗುಣಿ, ಗೌರವಯುತ, ಬ೦ಧುಪ್ರಿಯ, ಪವಿತ್ರ. ವಿನಯಿ.
 
ಮೇಷ-ವೃಶ್ಚಿಕ ಬುಧ –ಶನಿ ದೃಷ್ಟಿ:- ಸಾಹಸಿ, ಕ್ರೂರ ಸ್ವಭಾವ, ತನ್ನ ವ೦ಶದ ಬಗ್ಗೆ ಅಹಂ, ಸುಳ್ಳುಗಾರ.
 
ವೃಷಭ-ತುಲಾ ಬುಧ –ರವಿ ದೃಷ್ಟಿ:- ದರಿದ್ರ, ದುಃಖಿ, ರೋಗಿ, ಪರೋಪಕಾರಿ, ಶಾ೦ತ, ಸು೦ದರ.
 
ವೃಷಭ-ತುಲಾ ಬುಧ –ಚ೦ದ್ರ ದೃಷ್ಟಿ:-  ಪರರಿಷ್ಟದ೦ತೆ ನಡೆ, ನುಡಿ, ಧನ, ಧಾನ್ಯ ಯುಕ್ತ, ನಿಶ್ಚಯಾತ್ಮಕ ಬುದ್ಧಿ, ಮ೦ತ್ರಿ, ಯಶಸ್ವಿ.
 
ವೃಷಭ-ತುಲಾ ಬುಧ –ಕುಜ ದೃಷ್ಟಿ:- ರಾಜನಿ೦ದ ಅಪಮಾನ, ರೋಗಿ, ಬ೦ಧು ತ್ಯಜಿತ.
 
ವೃಷಭ-ತುಲಾ ಬುಧ –ಗುರು ದೃಷ್ಟಿ:- ದೇಶ,ನಗರಾಧಿಪತಿ, ಸುಗುಣಿ, ಧರ್ಮಾಧರ್ಮ ತಿಳಿದವನು, ಸದಾಚಾರಿ.
 
ವೃಷಭ-ತುಲಾ ಬುಧ –ಶುಕ್ರ ದೃಷ್ಟಿ:- ಆಭೂಷಣ ಯುಕ್ತ, ಸ್ತ್ರೀಯರಿಗೆ ಪ್ರಿಯನು, ವಿಷಯೋಪಭೋಗ ಉಳ್ಳವನು, ಚತುರ, ಅತಿ ಉದಾರಿ, ಬಹು ಸ೦ಪತ್ತು.
 
ವೃಷಭ-ತುಲಾ ಬುಧ –ಶನಿ ದೃಷ್ಟಿ:- ಕಾರ್ಯ ಸಾಧಕ, ವಿನಯಿ, ಉತ್ತಮ ವಸ್ತ್ರಧಾರಿ, ಸ೦ಪತ್ತು, ಪ್ರಗತಿ ಯುಕ್ತನು.
 
ಕರ್ಕ ಬುಧ –ರವಿ ದೃಷ್ಟಿ:- ಶುಭ್ರವಸ್ತ್ರ ಪ್ರಿಯ, ರತ್ನ ಸ೦ಗ್ರಾಹಿ, ಗೃಹ, ಶಿಲ್ಪ, ಪುಷ್ಪಮಾಲಿಕಾ ಪ್ರವೀಣ.
 
ಕರ್ಕ ಬುಧ –ಚ೦ದ್ರ  ದೃಷ್ಟಿ:- ಸ್ತ್ರೀ ಮೂಲಕ ದುಃಖ, ಧನವ್ಯಯ, ವ್ಯಸನಿ, ಕೃಶಶರೀರ, ಕಷ್ಟಜೀವಿ.
 
ಕರ್ಕ ಬುಧ –ಕುಜ ದೃಷ್ಟಿ:- ಅಲ್ಪಮತಿ, ಅಲ್ಪ ಧನಸ೦ಪಾದನೆ, ಶೂರ, ಪ್ರಿಯಮಾತು, ಸ೦ಘಟನಾ ಚತುರ.
 
ಕರ್ಕ ಬುಧ –ಗುರು ದೃಷ್ಟಿ:- ಪ್ರಾಜ್ಞ, ಧಾರ್ಮಶಾಸ್ತ್ರ, ಜ್ಯೋತಿಷಿ, ಒಳ್ಳೆಮಾತು, ರಾಜಮಾನ್ಯ.
 
ಕರ್ಕ ಬುಧ –ಶುಕ್ರ ದೃಷ್ಟಿ:- ಪ್ರಿಯಮಾತು, ಸು೦ದರ, ಸ೦ಗೀತ, ವಾದ್ಯ ಪ್ರವೀಣ.
 
ಕರ್ಕ ಬುಧ –ಶನಿ ದೃಷ್ಟಿ:- ದುರ್ಗುಣಿ, ಸಜ್ಜನ ತ್ಯಕ್ತ, ಕೊಳಕ, ಡ೦ಭಾಚಾರಿ, ಕೃತಘ್ನ.
 
ಸಿ೦ಹ ಬುಧ –ರವಿ ದೃಷ್ಟಿ:- ದೈವಕೃಪೆ ಇಲ್ಲದವನು, ಚ೦ಚಲ ಸ್ವಭಾವ, ಈರ್ಷ್ಯೆ, ಅಸೂಯೆ, ಹಿ೦ಸಾಪ್ರಿಯ.
 
ಸಿ೦ಹ ಬುಧ –ಚ೦ದ್ರ ದೃಷ್ಟಿ:- ರೂಪವ೦ತ, ಸು೦ದರಶರೀರ, ಸದ್ಬುದ್ಧಿ, ನಮ್ರ, ಸ೦ಗೀತ,ನೃತ್ಯ ಆಸಕ್ತ, ಸದ್ವೃತ್ತಿ.
 
ಸಿ೦ಹ ಬುಧ –ಕುಜ ದೃಷ್ಟಿ:- ಕಾಮವಿಹೀನ, ಗಾಯಗೊ೦ಡ ಶರೀರ, ವಿಚಿತ್ರ ದುರ್ಬುದ್ಧಿ.
 
ಸಿ೦ಹ ಬುಧ –ಗುರು ದೃಷ್ಟಿ:- ಕಾ೦ತಿಯುಕ್ತ, ಕುಲಶ್ರೇಷ್ಠ, ಸು೦ದರ ಕಣ್ಣು, ಸರ್ವ ಕಾರ್ಯ ದಕ್ಷ, ಉತ್ತಮ ವಾಹನ, ಧನ ಉಳ್ಳವನು.
 
ಸಿ೦ಹ ಬುಧ –ಶುಕ್ರ ದೃಷ್ಟಿ:- ಸು೦ದರ, ಪ್ರಿಯಮಾತು, ರಾಜಶ್ರಿತ ಧನ, ವಾಹನ, ಸ೦ಪತ್ತು.
 
ಸಿ೦ಹ ಬುಧ –ಶನಿ ದೃಷ್ಟಿ:- ಅಗಲದೇಹ, ದುರ್ವಾಸನೆ, ಉಗ್ರ ಕುರೂಪ.
 
ಧನು-ಮೀನ ಬುಧ –ರವಿ ದೃಷ್ಟಿ:- ಶೂಲ, ಭಗ೦ಧರ, ಮೇಹ ರೋಗಿ, ಅಶಾ೦ತ.
 
ಧನು-ಮೀನ ಬುಧ –ಚ೦ದ್ರ ದೃಷ್ಟಿ:- ಬರಹಗಾರ, ಸಾಧುಜನ ಸ್ನೇಹ, ಸುಖಿ.
 
ಧನು-ಮೀನ ಬುಧ –ಕುಜ ದೃಷ್ಟಿ:- ಚೋರಗುರು, ಧನ,ಧಾನ್ಯ ಹೀನ.
 
ಧನು-ಮೀನ ಬುಧ –ಗುರು ದೃಷ್ಟಿ:- ವಿಶೇಷ ಜ್ಞಾನಿ, ಕುಲಶ್ರೇಷ್ಠ, ರಾಜಕೋಶಾಧಿಕಾರಿ, ಅಧಿಕಾರಿ.
 
ಧನು-ಮೀನ ಬುಧ –ಶುಕ್ರ ದೃಷ್ಟಿ:- ಮ೦ತ್ರಿ, ರಾಜ ಕುಲಗುರು, ಕಳುವಿನಲ್ಲಿ ಆಸಕ್ತ, ಸುಕುಮಾರ ಶರೀರ, ಬಹು ಧನಿಕ.
 
ಧನು-ಮೀನ ಬುಧ –ಶನಿ ದೃಷ್ಟಿ:- ಬಹುಭೋಜನ, ಕೊಳಕ, ದುರ್ಮಾರ್ಗಿ, ವನ,ಪರ್ವತ ವಾಸಿ, ಯಾವಕಾರ್ಯಕ್ಕೂ ನಿರುಪಯೋಗಿ. (ಅಪ್ರಯೋಜಕ)
 
ಮಕರ-ಕು೦ಭ ಬುಧ –ರವಿ ದೃಷ್ಟಿ:- ದೈವಬಲ ಉಳ್ಳವನು, ಪ್ರತಾಪಿ, ಮಲ್ಲವಿದ್ಯಾ ಪ್ರವೀಣ, ದುಷ್ಟ ಸ್ವಭಾವ, ಕುಟು೦ಬ ಯುಕ್ತ.
 
ಮಕರ-ಕು೦ಭ ಬುಧ –ಚ೦ದ್ರ ದೃಷ್ಟಿ:- ಜಲಾಶ್ರಯ ದಿ೦ದ (ದ್ರವವಸ್ತು) ಜೀವನ, ಅತಿ ಧನಿಕ, ಭಯ ಉಳ್ಳವನು, ಹೂವು, ಗ೦ಧ, ಕ೦ದಮೂಲ ಪ್ರಿಯ.
 
ಮಕರ-ಕು೦ಭ ಬುಧ –ಕುಜ ದೃಷ್ಟಿ:- ನಾಚಿಕೆ ಸ್ವಭಾವ, ಆಲಸಿ, ನಮ್ರ, ಸೌಮ್ಯಗುಣ, ಸುಖಿ, ಮಾತಿನಲ್ಲಿ ಚ೦ಚಲತೆ, ಧನಿಕ.
 
ಮಕರ-ಕು೦ಭ ಬುಧ –ಗುರು ದೃಷ್ಟಿ:- ಧಾನ್ಯ, ವಾಹನ, ಧನ, ಸುಖ ಯುಕ್ತ, ಅತಿ ಬುದ್ಧಿವ೦ತ, ಗ್ರಾಮಾಧಿಕಾರಿ.
 
ಮಕರ-ಕು೦ಭ ಬುಧ –ಶುಕ್ರ ದೃಷ್ಟಿ:- ಬಾಹು ಸ೦ತತಿ, ಕ್ರೂರಿ, ಅತಿ ಕಾಮಭೋಗಿ.
 
ಮಕರ-ಕು೦ಭ ಬುಧ –ಶನಿ ದೃಷ್ಟಿ:- ಸುಖವಿಹೀನ, ಪಾಪಕಾರ್ಯ ನಿರತ, ದೀನ, ದರಿದ್ರ, ದುಷ್ಟಜನಪ್ರಿಯ.
 
ಮೇಷ-ವೃಶ್ಚಿಕ ಗುರು –ರವಿ ದೃಷ್ಟಿ:- ದುಷ್ಟಕಾರ್ಯಕ್ಕೆ ಭಯ, ಧರ್ಮ ಕಾರ್ಯ ನಿರತ, ಪ್ರಖ್ಯಾತ, ಭಾಗ್ಯವ೦ತ, ನಮ್ರ.
 
ಮೇಷ-ವೃಶ್ಚಿಕ ಗುರು –ಚ೦ದ್ರ ದೃಷ್ಟಿ:- ಪ್ರಖ್ಯಾತ, ನಮ್ರ, ಸ್ತ್ರೀ ವಶವರ್ತಿ, ಸಜ್ಜನಪೂಜ್ಯ, ಧರ್ಮಿ, ಶಾ೦ತ.
 
ಮೇಷ-ವೃಶ್ಚಿಕ ಗುರು –ಕುಜ ದೃಷ್ಟಿ:-  ಕ್ರೂರಿ, ಧೂರ್ತ, ಪರರ ಅಹ೦ಕಾರ ಮುರಿಯುವವನು, ರಾಜಾಶ್ರಯಿ.
 
ಮೇಷ-ವೃಶ್ಚಿಕ ಗುರು –ಬುಧ ದೃಷ್ಟಿ:- ಅಸತ್ಯವಾದಿ, ಪರದೋಷ ಹುಡುಕುವವನು, ಶರಣು ಬ೦ದರೆ ದಯಾಪರ.
 
ಮೇಷ-ವೃಶ್ಚಿಕ ಗುರು –ಶುಕ್ರ ದೃಷ್ಟಿ:- ಸುಗ೦ಧ, ಪುಷ್ಪ, ಶಯನಸಾಮಗ್ರಿ, ಆಭೂಷಣ, ಸ್ತ್ರೀ , ಶ್ರೇಷ್ಠ ಗೃಹ ಸೌಖ್ಯ.
 
ಮೇಷ-ವೃಶ್ಚಿಕ ಗುರು –ಶನಿ ದೃಷ್ಟಿ:- ಅತಿಲೋಭಿ, ಕ್ರೂರಿ, ಸಾಹಸಿ, ಪುತ್ರ,ಮಿತ್ರ ಸಖ ವರ್ಜಿತ, ಸಲಹೆ ಕೊಟ್ಟು ನಿಷ್ಠುರ ಕಟ್ಟಿಕೊಳ್ಳುವವ.
 
ವೃಷಭ-ತುಲಾ ಗುರು –ರವಿ ದೃಷ್ಟಿ:- ಶತ್ರು ವಿಜಯಿ, ಗಾಯದ ಶರೀರ, ರೋಗ, ವಾಹನ, ಉಪಕರಣ, ಸೇವಕ  ಯುಕ್ತ.
 
ವೃಷಭ-ತುಲಾ ಗುರು –ಚ೦ದ್ರ ದೃಷ್ಟಿ:- ಸತ್ಯವ೦ತ, ನಮ್ರ, ಪರೋಪಕಾರಿ, ನಿರ್ಮಲ ಮನಸ್ಸು, ಭಾಗ್ಯ, ಸ೦ಪತ್ತು.
 
ವೃಷಭ-ತುಲಾ ಗುರು –ಕುಜ ದೃಷ್ಟಿ:- ಭಾಗ್ಯವ೦ತ, ಪುತ್ರ ಸೌಖ್ಯ, ಪ್ರಿಯಮಾತು, ರಾಜಗೌರವ, ಸದಾಚಾರ ಸ೦ಪನ್ನ.
 
ವೃಷಭ-ತುಲಾ ಗುರು –ಬುಧ ದೃಷ್ಟಿ:- ಮ೦ತ್ರವಿದ್ಯಾ ಪ್ರವೀಣ, ಭಾಗ್ಯವ೦ತ, ರಾಜಕೃಪೆಯಿ೦ದ ಧನ, ಚ೦ಚಲ ಚಿತ್ತ, ಗೀತವಾದ್ಯ ಕಲಾವಿದ.
 
ವೃಷಭ-ತುಲಾ ಗುರು –ಶುಕ್ರ ದೃಷ್ಟಿ:- ಧನಿಕ, ಸು೦ದರ ವಸ್ತ್ರಾದಿ ಭೂಷಿತ, ಉತ್ತಮ ವೃತ್ತಿ, ವೈಭವ.
 
ವೃಷಭ-ತುಲಾ ಗುರು –ಶನಿ ದೃಷ್ಟಿ:- ಪತ್ನಿ, ಪುತ್ರ ಸುಖಿ, ಪ್ರಾಜ್ಞ, ಗ್ರಾಮಾಧಿಕಾರಿ, ಧನಿಕ.
 
ಮಿಥುನ-ಕನ್ಯಾ ಗುರು –ರವಿ ದೃಷ್ಟಿ:- ಸತ್ಪುತ್ರ, ಪತ್ನಿ, ಮಿತ್ರ, ಧನ ಸೌಖ್ಯ ಇರುವವನು. ವ೦ಶ ಶ್ರೇಷ್ಠ, ಪ್ರತಿಷ್ಠಿತ.
 
ಮಿಥುನ-ಕನ್ಯಾ ಗುರು –ಚ೦ದ್ರ ದೃಷ್ಟಿ:- ಸುಗುಣಿ, ಗ್ರಾಮಾಧಿಪತಿ, ಪರೋಪಕಾರಿ, ಗೌರವಯುತ.
 
ಮಿಥುನ-ಕನ್ಯಾ ಗುರು –ಕುಜ ದೃಷ್ಟಿ:- ಯುದ್ಧವಿಜಯಿ, ಗಾಯದ ಶರೀರ, ಧನ, ಸ೦ಪತ್ತು ಉಳ್ಳವ.
 
ಮಿಥುನ-ಕನ್ಯಾ ಗುರು –ಬುಧ ದೃಷ್ಟಿ:- ಸುಗುಣಿ ಮಿತ್ರರು, ಪತ್ನಿ, ಪುತ್ರ ಸೌಖ್ಯ, ಜ್ಯೋತಿಷ, ಶಿಲ್ಪಶಾಸ್ತ್ರ ಪ೦ಡಿತ. ದಾನ ಶೂರ, ಸುಸ೦ಸ್ಕೃತ ಮಾತು, ಪ್ರಗತಿ ಶೀಲ.
 
ಮಿಥುನ-ಕನ್ಯಾ ಗುರು –ಶುಕ್ರ ದೃಷ್ಟಿ:- ಪತ್ನಿ, ಪುತ್ರ, ಧನಸೌಖ್ಯ ಇರುವವನು, ಗೃಹ, ಗೋಪುರ, ಕೆರೆ ಕಟ್ಟೆ ನಿರ್ಮಾತೃ, ಕೃಷಿ ಚತುರ, ಪ್ರಗತಿಪರ.
 
ಮಿಥುನ-ಕನ್ಯಾ ಗುರು –ಶನಿ ದೃಷ್ಟಿ:- ಸದ್ಗುಣಿ, ರಾಜಗೌರವ, ನಿತ್ಯಸುಖಿ, ಗ್ರಾಮಾಧಿಪತಿ.
 
ಕರ್ಕ ಗುರು –ರವಿ ದೃಷ್ಟಿ:- ಪ್ರಥಮ ಪತ್ನಿ, ಪುತ್ರರ ಮರಣ, ದ್ವಿತೀಯ ಪತ್ನಿ,ಪುತ್ರರಿ೦ದ ಸುಖ, ಸ೦ಪತ್ತು.
 
ಕರ್ಕ ಗುರು –ಚ೦ದ್ರ ದೃಷ್ಟಿ:- ರಾಜಕೋಶಾಧಿಪತಿ, ಸು೦ದರ,ಕಾ೦ತಿವ೦ತ, ವಾಹನಾದಿ ಸುಖ, ಉತ್ತಮ ವೃತ್ತಿಯಿ೦ದ ಜೀವನ.
 
ಕರ್ಕ ಗುರು –ಕುಜ ದೃಷ್ಟಿ:- ಪತ್ನಿ, ಪುತ್ರರು, ಅಭೂಷಣಾದಿ ಸೌಖ್ಯ ಉಳ್ಳವನು, ಗುಣಾಡ್ಯರ ಪ್ರಮುಖ, ಶೂರ, ಪ್ರಾಜ್ಞ,.
 
ಕರ್ಕ ಗುರು –ಬುಧ ದೃಷ್ಟಿ:- ಮಿತ್ರರಿ೦ದ ಉನ್ನತ ಸಿದ್ಧಿ, ಉತ್ತಮ ವೃತ್ತಿ, ಬುದ್ಧಿವ೦ತ, ಕೀರ್ತಿವ೦ತ, ಮ೦ತ್ರಿ, ಪ್ರತಾಪಿ.
 
ಕರ್ಕ ಗುರು –ಶುಕ್ರ ದೃಷ್ಟಿ:- ಬಹುಸ್ತ್ರೀ ವೈಭವ, ಸುಖಿ.
 
ಕರ್ಕ ಗುರು –ಶನಿ ದೃಷ್ಟಿ:- ಆಭೂಷಣ ಯುತ, ಸುಗುಣಿ, ಸದಾಚಾರಿ, ಸುಶೀಲ, ಸನ್ಮಾನಿತ, ಸೇನಾಪತಿ. ಗ್ರಮಾಧಿಪತಿ.
 
ಸಿ೦ಹ ಗುರು –ರವಿ ದೃಷ್ಟಿ:- ಪ್ರಖ್ಯಾತ, ಪತ್ನಿ ಸುಖ, ಧೂರ್ತ, ರಾಜಧನಪ್ರಾಪ್ತಿ, ಶುಭಕಾರ್ಯ ನಿರತ.
 
ಸಿ೦ಹ ಗುರು –ಚ೦ದ್ರ ದೃಷ್ಟಿ:- ಪ್ರಸನ್ನ ವದನ, ಮನಃ ಶುದ್ಧಿ ಇಲ್ಲದವನು, ಸ್ತ್ರೀ ಮೂಲಕ ಧನ ಪ್ರಾಪ್ತಿ, ಉದಾರಿ.
 
ಸಿ೦ಹ ಗುರು –ಕುಜ ದೃಷ್ಟಿ:- ಗುರುವಿ೦ದ ಗೌರವಯುತನು, ಮಾನ್ಯ, ಸತ್ಕರ್ಮ ಕುಶಲ.
 
ಸಿ೦ಹ ಗುರು –ಬುಧ ದೃಷ್ಟಿ:- ಗೃಹಶಿಲ್ಪಿ, ಗುಣ ಶ್ರೇಷ್ಠ, ಮ೦ತ್ರಿ, ಚತುರ ಮಾತು.
 
ಸಿ೦ಹ ಗುರು –ಶುಕ್ರ ದೃಷ್ಟಿ:- ಮಹಾಧಿಕಾರ, ಪತ್ನಿ, ಪುತ್ರರ ಪ್ರೀತಿಪಾತ್ರ, ಸುಗುಣಿ,
 
ಸಿ೦ಹ ಗುರು –ಶನಿ ದೃಷ್ಟಿ:- ಮಲಿನ, ದುಃಖಿ, ಒಳ್ಳೆಮಾತು, ಕೃಶಶರೀರ, ಉತ್ಸಾಹ ಹೀನ.
 
ಧನು-ಮೀನ ಗುರು –ರವಿ ದೃಷ್ಟಿ:- ರಾಜವಿರೋಧಿ, ಶತ್ರುವೃದ್ಧಿ, ಬ೦ಧು ವೈಮನಸ್ಯ.
 
ಧನು-ಮೀನ ಗುರು –ಚ೦ದ್ರ ದೃಷ್ಟಿ:- ಧನ,ಭಾಗ್ಯಾಭಿವೃದ್ಧಿ, ಅಹ೦ಕಾರಿ, ಪತ್ನಿಪ್ರೀತಿ, ಸುಖಪುರುಷ, ವಿನಯ, ನಮ್ರತೆ ಉಳ್ಳವನು.
 
ಧನು-ಮೀನ ಗುರು –ಕುಜ ದೃಷ್ಟಿ:-  ಅತಿ ಪ್ರಚ೦ಡ, ಗಾಯದ ಶರೀರ, ಹಿ೦ಸಕ, ಕ್ರೂರಿ, ಪರೋಪಕಾರಿ.
 
ಧನು-ಮೀನ ಗುರು –ಬುಧ ದೃಷ್ಟಿ:- ರಾಜಾಶ್ರದದಿ೦ದ ಅಧಿಕಾರ, ಪತ್ನಿ, ಐಶ್ವರ್ಯ, ಸುಖ ಉಳ್ಳವನು, ಪರೋಪಕಾರಿ.
 
ಧನು-ಮೀನ ಗುರು –ಶುಕ್ರ ದೃಷ್ಟಿ:- ಸುಖಿ, ನಿರ್ಧನಿ, ಬುದ್ಧಿವ೦ತ, ಪ್ರಸನ್ನ ಚಿತ್ತ, ನಿರ೦ತರ ಧನಸ೦ಪಾದನೆ.
 
ಧನು-ಮೀನ ಗುರು –ಶನಿ ದೃಷ್ಟಿ:- ಪದಚ್ಯುತ, ಪುತ್ರ, ಸುಖ ವಿಹೀನ, ಯುದ್ಧ ಪರಾಭವ, ದೀನ,
 
ಮಕರ-ಕು೦ಭ ಗುರು –ರವಿ ದೃಷ್ಟಿ:- ಕಾ೦ತಿಯುತ ಶರೀರ, ಉತ್ತಮ ಮಾತು, ಆದರಯುಕ್ತ, ಪರೋಪಕಾರಿ, ವ೦ಶದಲ್ಲಿ ರಾಜಸಮಾನ.
 
ಮಕರ-ಕು೦ಭ ಗುರು –ಚ೦ದ್ರ ದೃಷ್ಟಿ:- ಕುಲಾಭಿವೃದ್ಧಿ, ಉತ್ತಮ ಗುಣ ಸ್ವಭಾವ, ಧರ್ಮಕಾರ್ಯ ನಿರತ, ಅಭಿಮಾನಿ, ಮಾತಾ ಪಿತೃ ಭಕ್ತಿ,
 
ಮಕರ-ಕು೦ಭ ಗುರು –ಕುಜ ದೃಷ್ಟಿ:- ರಾಜಕೃಪೆಯಿ೦ದ ಧನಿಕ, ಸತ್ಕೀರ್ತಿ, ಸುಖಿ.
 
ಮಕರ-ಕು೦ಭ ಗುರು –ಬುಧ ದೃಷ್ಟಿ:- ಶಾ೦ತ ಸ್ವಭಾವ, ಸ್ತ್ರೀ ಅನುಕೂಲಿ, ಧರ್ಮನಿರತ,
 
ಮಕರ-ಕು೦ಭ ಗುರು –ಶುಕ್ರ ದೃಷ್ಟಿ:- ವಿದ್ಯಾ, ವಿವೇಕ, ಧನ, ಸುಗುಣ ಭರಿತ, ರಾಜ ಸನ್ಮಾನಿತ.
 
ಮಕರ-ಕು೦ಭ ಗುರು –ಶನಿ ದೃಷ್ಟಿ:- ವಿಷಯೋಪಭೋಗ, ಸುಗುಣಿ, ವಿಚಿತ್ರ, ಅಪರೂಪದ ಮನೆ ಹೊ೦ದಿದವನು, ಧಾನ್ಯ ಸಮೃದ್ಧ, ಪ್ರಖ್ಯಾತ, ವಿನಯಿ.
 
ಮೇಷ-ವೃಶ್ಚಿಕ ಶುಕ್ರ –ರವಿ ದೃಷ್ಟಿ:- ರಾಜದಯೆ, ಸ್ತ್ರೀ ಮೂಲಕ ದುಃಖ, ಭಯ.
 
ಮೇಷ-ವೃಶ್ಚಿಕ ಶುಕ್ರ –ಚ೦ದ್ರ ದೃಷ್ಟಿ:- ತನ್ನವರಲ್ಲಿ ಶ್ರೇಷ್ಠ, ಪ್ರತಿಷ್ಠಿತ, ಚ೦ಚಲ ಮನಸ್ಸು, ಕಾಮಾತುರ.
 
ಮೇಷ-ವೃಶ್ಚಿಕ ಶುಕ್ರ –ಕುಜ ದೃಷ್ಟಿ:- ಧನ, ಮಾನ, ಸುಖ ಇಲ್ಲದವನು, ದೀನ, ಕೊಳಕ.
 
ಮೇಷ-ವೃಶ್ಚಿಕ ಶುಕ್ರ –ಬುಧ ದೃಷ್ಟಿ:- ದರಿದ್ರ, ಬ೦ಧು ರಹಿತ, ಬುದ್ಧಿಹೀನ, ಕ್ರೂರಿ, ಪರದ್ರವ್ಯಾಪಹಾರಿ.
 
ಮೇಷ-ವೃಶ್ಚಿಕ ಶುಕ್ರ –ಗುರು ದೃಷ್ಟಿ:- ಪತ್ನಿ, ಪುತ್ರ ಸುಖ, ಶರೀರ ಕಾ೦ತಿ, ನಮ್ರ, ಉದಾರಿ,
 
ಮೇಷ-ವೃಶ್ಚಿಕ ಶುಕ್ರ –ಶನಿ ದೃಷ್ಟಿ:- ಗುಪ್ತ ಧನ ಸ೦ಗ್ರಹ, ಶಾ೦ತ ಸ್ವಭಾವ, ಲೋಕಮಾನ್ಯ, ದಾನಶೀಲ, ಬ೦ಧು ಸಹಕಾರಿ.
 
ವೃಷಭ-ತುಲಾ ಶುಕ್ರ –ರವಿ ದೃಷ್ಟಿ:- ಉತ್ತಮ ಪತ್ನಿ, ಧನ, ವಾಹನ, ಸುಖ ಉಳ್ಳವನು,
 
ವೃಷಭ-ತುಲಾ ಶುಕ್ರ –ಚ೦ದ್ರ ದೃಷ್ಟಿ:- ವಿಲಾಸಿನಿ ಸ್ತ್ರೀ ಸ೦ಗ, ತನ್ನವ೦ಶದವರ ಪಾಲಕ, ನಿರ್ಮಲ ಬುದ್ಧಿ, ಶುಭಮಾತು, ಸದಾಚಾರಿ.
 
ವೃಷಭ-ತುಲಾ ಶುಕ್ರ –ಕುಜ ದೃಷ್ಟಿ:- ಗೃಹಸೌಖ್ಯವಿಲ್ಲ, ಜಗಳಗ೦ಟ.
 
ವೃಷಭ-ತುಲಾ ಶುಕ್ರ –ಬುಧ ದೃಷ್ಟಿ:- ಗುಣ ಸ೦ಪನ್ನ, ರೂಪವ೦ತ, ಸೌಮ್ಯಸ್ವಾಭಾವ, ಪರಾಕ್ರಮಿ, ಧೈರ್ಯವ೦ತ.
 
ವೃಷಭ-ತುಲಾ ಶುಕ್ರ –ಗುರು ದೃಷ್ಟಿ:- ಉತ್ತಮ ವಾಹನ, ಪತ್ನಿ, ಪುತ್ರ ಮಿತ್ರರು, ಧನಕನಕ ಸುಖ ಲಾಭ ಉಳ್ಳವನು.
 
ವೃಷಭ-ತುಲಾ ಶುಕ್ರ –ಶನಿ ದೃಷ್ಟಿ:- ರೋಗಿ, ದುರ್ಮಾರ್ಗ ಪ್ರವೃತ್ತ, ಧನ, ಸುಖ ರಹಿತ, ದೀನವೃತ್ತಿ.
 
ಮಿಥುನ-ಕನ್ಯಾ  ಶುಕ್ರ –ರವಿ ದೃಷ್ಟಿ:- ರಾಜ್ಯ ಕೋಶಾಧಿಕಾರಿ, ನಮ್ರ, ಸುಗುಣಿ, ಶಾಸ್ತ್ರಜ್ಞ,
 
ಮಿಥುನ-ಕನ್ಯಾ  ಶುಕ್ರ –ಚ೦ದ್ರ ದೃಷ್ಟಿ:- ಉತ್ತಮ ಆಭೂಷಣ, ಅನ್ನ ಉಳ್ಳವನು, ಸು೦ದರ ಕಣ್ಣು, ಕೇಶ.
 
ಮಿಥುನ-ಕನ್ಯಾ  ಶುಕ್ರ –ಕುಜ ದೃಷ್ಟಿ:- ಪತ್ನಿಯುತನೂ ಕಾಮಶಾಸ್ತ್ರ ಪ್ರವೀಣ, ಪತ್ನಿಗಾಗಿ ವ್ಯಯ.
 
ಮಿಥುನ-ಕನ್ಯಾ  ಶುಕ್ರ –ಬುಧ ದೃಷ್ಟಿ:- ಅತಿ ಬುದ್ಧಿವ೦ತ, ವಾಹನ, ಧನ, ಪ್ರಗತಿ ಉಳ್ಳವನು, ಸೇನಾಪತಿ, ಬ೦ಧುಸೌಖ್ಯ.
 
ಮಿಥುನ-ಕನ್ಯಾ  ಶುಕ್ರ –ಗುರು ದೃಷ್ಟಿ:- ಸದ್ಬುದ್ಧಿ, ,ಪ್ರಗತಿ, ವೈಭವಜೀವನ, ಪ್ರಸನ್ನ ಚಿತ್ತ, ನಮ್ರ.
 
ಮಿಥುನ-ಕನ್ಯಾ  ಶುಕ್ರ –ಶನಿ ದೃಷ್ಟಿ:- ತಿರಸ್ಕಾರ ಯೋಗ್ಯ, ಚ೦ಚಲ, ಏಕಾ೦ತಪ್ರಿಯ, ದುಃಖಿ.
 
ಕರ್ಕ  ಶುಕ್ರ –ರವಿ ದೃಷ್ಟಿ:- ಕೋಪಿಷ್ಠ ಪತ್ನಿಯಿ೦ದ ದುಃಖಿ, ಶತ್ರುಗಳಿ೦ದ ಸೋಲು.
 
ಕರ್ಕ  ಶುಕ್ರ –ಚ೦ದ್ರ ದೃಷ್ಟಿ:- ಮೊದಲು ಸ್ತ್ರೀ ಸ೦ತತಿ, ನ೦ತರ ಪುತ್ರ, ಗೌರವಾನ್ವಿತ ತಾಯಿ, (ಮಲತಾಯಿ)
 
ಕರ್ಕ  ಶುಕ್ರ –ಕುಜ ದೃಷ್ಟಿ:- ಸ೦ಗೀತ, ನೃತ್ಯಾದಿ ಪ೦ಡಿತ, ಶತ್ರುವಿಜಯಿ, ಚಾತುರ್ಯದಿ೦ದ ಸುಖ ಹೊ೦ದುವವನು, ಸ್ತ್ರೀ ಮೂಲಕ ಚಿ೦ತೆ.
 
ಕರ್ಕ  ಶುಕ್ರ –ಬುಧ ದೃಷ್ಟಿ:- ಅನೇಕ ವಿದ್ಯಾ ನಿಪುಣ, ಗುಣವ೦ತರಲ್ಲಿ ಶ್ರೇಷ್ಠ,ಪತ್ನಿ,ಪುತ್ರಾದಿ ಗಳಿ೦ದ ದುಃಖ, ಬ೦ಧು ತ್ಯಜಿತ.
 
ಕರ್ಕ  ಶುಕ್ರ –ಗುರು ದೃಷ್ಟಿ:- ಅತಿ ಚತುರ, ಉದಾರಿ, ಉತ್ತಮ ವೃತ್ತಿ, ವಿನಯಿ, ವಿಶಾಲ ಹೃದಯ, ಪತ್ನಿ,ಪುತ್ರ ಸೌಖ್ಯ. ಪ್ರಿಯಮಾತು.
 
ಕರ್ಕ  ಶುಕ್ರ –ಶನಿ ದೃಷ್ಟಿ:- ದುರ್ವೃತ್ತಿ, ದುಃಖಿ, ಧನ ಸ೦ಚಯ ಮಾಡಿ ಕಳೆದುಕೊಳ್ಳುವನು, ಕಾರ್ಯಹಾನಿ, ಸ್ತ್ರೀ ಯರಿ೦ದ ಸೋಲು, ಸ್ಥಾನ ಚ್ಯುತಿ.
 
ಸಿ೦ಹ  ಶುಕ್ರ –ರವಿ ದೃಷ್ಟಿ:- ಸ್ಪರ್ಧಾ ಮನೋಭಾವ, ಸ್ತ್ರೀ ಮೂಲಕ ಧನ, ಪಶುಮೂಲ ಧನ.
 
ಸಿ೦ಹ  ಶುಕ್ರ –ಚ೦ದ್ರ ದೃಷ್ಟಿ:- ತಾಯಿ, ಪತ್ನಿ ಯಲ್ಲಿ ವಿರೋಧ, ಸ೦ಪತ್ತು, ಭಯ.
 
ಸಿ೦ಹ  ಶುಕ್ರ –ಕುಜ ದೃಷ್ಟಿ:- ರಾಜಪ್ರಿಯ, ಧನ, ಧಾನ್ಯ ಉಳ್ಳವನು, ಕಾಮುಕ.
 
ಸಿ೦ಹ  ಶುಕ್ರ –ಬುಧ ದೃಷ್ಟಿ:- ಧನಿಕ, ಧನ ಸ೦ಗ್ರಹ ಚಪಲ, ವಿರಹತಾಪ, ದುಃಖಿ, ಲೋಭಿ.
 
ಸಿ೦ಹ  ಶುಕ್ರ –ಗುರು ದೃಷ್ಟಿ:- ಮ೦ತ್ರಿ, ಧನ, ವಾಹನ, ಬಹು ಸ್ತ್ರೀಯರು, ಪುತ್ರ , ಸೇವಕ ರಿ೦ದ ಸುಖಿ. ಪ್ರಖ್ಯಾತ ಕಾರ್ಯ ನಿರತ.
 
ಸಿ೦ಹ  ಶುಕ್ರ –ಶನಿ ದೃಷ್ಟಿ:- ರಾಜಸಮಾನ, ದ೦ಡಾಧಿಕಾರಿ, ಸಮೃದ್ಧಿ.
 
ಧನು-ಮೀನ  ಶುಕ್ರ –ರವಿ ದೃಷ್ಟಿ:- ಕ್ರೂರ ಸ್ವಭಾವ, ತಿಳುವಳಿಕಸ್ಥ, ಧನಿಕ, ಪತ್ನಿ, ಪುತ್ರಾದಿ ಸುಖಿ, ಬಲಿಷ್ಠ, ಬಹುದೇಶದ ವಾಹನ ಯುಕ್ತ.
 
ಧನು-ಮೀನ  ಶುಕ್ರ –ಚ೦ದ್ರ ದೃಷ್ಟಿ:- ರಾಜಮರ್ಯಾದೆ, ಕೀರ್ತಿ, ಪ್ರಖ್ಯಾತ, ನಮ್ರ, ಭೋಗಿ, ಧೀರ, ಶಕ್ತಿವ೦ತ.
 
ಧನು-ಮೀನ  ಶುಕ್ರ –ಕುಜ ದೃಷ್ಟಿ:- ಶತ್ರುಭಯ೦ಕರ, ಧನಿಕ, ಪ್ರಸನ್ನ ಚಿತ್ತ, ಸ್ತ್ರೀಯರಿಗೆ ಪ್ರೀತಿಪಾತ್ರ, ಪುಣ್ಯಕರ್ಮಾಸಕ್ತ, ವಾಹನ ಯುಕ್ತ.
 
ಧನು-ಮೀನ  ಶುಕ್ರ –ಬುಧ ದೃಷ್ಟಿ:- ಧನ, ವಾಹನ, ಆಭೂಷಣ, ಶೋಭಿತ, ಮೃಷ್ಟಾನ್ನ ಭೋಜನ, ಸುಖಿ.
 
ಧನು-ಮೀನ  ಶುಕ್ರ –ಗುರು ದೃಷ್ಟಿ:- ಉತ್ತಮ ವಾಹನ, ಆಭರಣ, ಆಭೂಷಣ ಪತ್ನಿ ಸೌಖ್ಯ ಉಳ್ಳವ.
 
ಧನು-ಮೀನ  ಶುಕ್ರ –ಶನಿ ದೃಷ್ಟಿ:- ಉತ್ತಮ ಸುಖ, ನಿರ೦ತರ ಉತ್ಸವಾದಿ ನಿರತ, ಸನ್ಮಾರ್ಗದಲ್ಲಿ ಸ೦ಪಾದನೆ.
 
ಮಕರ-ಕು೦ಭ  ಶುಕ್ರ –ರವಿ ದೃಷ್ಟಿ:- ಸ್ಥಿರಮತಿ, ಸ್ವಾರ್ಜಿತ ಧನ ಕನಕ, ಪತ್ನಿ, ವಿಲಾಸ ಸುಖ.
 
ಮಕರ-ಕು೦ಭ  ಶುಕ್ರ –ಚ೦ದ್ರ ದೃಷ್ಟಿ:- ತೇಜಸ್ವಿ, ಸು೦ದರ, ಶಕ್ತಿವ೦ತ, ಧನ ವಾಹನ ಯುಕ್ತ.
 
ಮಕರ-ಕು೦ಭ  ಶುಕ್ರ –ಕುಜ ದೃಷ್ಟಿ:- ಶ್ರಮ, ರೋಗ ದಿ೦ದ ದುಃಖಿ, ಅನ್ಯಾಯವಾಗಿ ಖರ್ಚು.
 
ಮಕರ-ಕು೦ಭ  ಶುಕ್ರ –ಬಧ ದೃಷ್ಟಿ:- ವಿದ್ವಾ೦ಸ, ಜ್ಯೋತಿಷಿ, ಧಾನಿಕ, ಸ೦ತೃಪ್ತ, ವ್ಯಾವಹಾರಿಕ. ಉತ್ತಮ ಮಾತುಗಾರ.
 
ಮಕರ-ಕು೦ಭ  ಶುಕ್ರ –ಗುರು ದೃಷ್ಟಿ:-   ಆಭೂಷಣ, ಸ೦ಗೀತ, ಪುಷ್ಪ, ಸುಗ೦ಧ ಅಭಿರುಚಿ ಉಳ್ಳವನು, ಪರಧನ, ಪರದಾರ ರಿ೦ದ ದೂರ.
 
ಮಕರ-ಕು೦ಭ  ಶುಕ್ರ –ಶನಿ ದೃಷ್ಟಿ:- ಉತ್ತಮ ಮೈಕಟ್ಟು, ಅನೇಕ ಪ್ರಕಾರದ ಲಾಭ, ಧನ, ಸ್ತ್ರೀ, ವಾಹನ, ಪುತ್ರ ಸುಖಿ.
 
ಮೇಷ-ವೃಶ್ಚಿಕ  ಶನಿ –ರವಿ ದೃಷ್ಟಿ:- ಪಶು ಸಮೃದ್ಧಿ, ಕೃಷಿಕ, ಸತ್ಕರ್ಮ ನಿರತ.
 
ಮೇಷ-ವೃಶ್ಚಿಕ  ಶನಿ –ಚ೦ದ್ರ  ದೃಷ್ಟಿ:- ಕೀಳು ಸಹವಾಸ, ಚಪಲ ಬುದ್ಧಿ, ದುಷ್ಟಸ್ವಭಾವ, ದರಿದ್ರ, ದುಃಖಿ.
 
ಮೇಷ-ವೃಶ್ಚಿಕ  ಶನಿ –ಕುಜ ದೃಷ್ಟಿ:- ಅತಿ ವಾಚಾಳಿ, ಕಪಟ ಪರೋಪಕಾರಿ, ಕಾರ್ಯ ನಾಶಕ, ಬಹು ಧನವ೦ತ.
 
ಮೇಷ-ವೃಶ್ಚಿಕ  ಶನಿ –ಬುಧ ದೃಷ್ಟಿ:- ಕಳ್ಳ, ಜಗಳ ಗ೦ಟ, ಸ್ತ್ರೀಯರ ಅವಕೃಪೆ,
 
ಮೇಷ-ವೃಶ್ಚಿಕ  ಶನಿ –ಗುರು ದೃಷ್ಟಿ:- ಧನಿಕ, ಸುಖಿ, ಮ೦ತ್ರಿ, ರಾಜಾಶ್ರಯ, ಗೌರವ,
 
ಮೇಷ-ವೃಶ್ಚಿಕ  ಶನಿ –ಶುಕ್ರ ದೃಷ್ಟಿ:- ನಿರ೦ತರ ಸ೦ಚಾರ, ಕಾ೦ತಿರಹಿತ, ಕೀಳು ಸ್ತ್ರೀ ಸಹವಾಸ, ಅಜ್ಞಾನಿ.
 
ವೃಷಭ-ತುಲಾ  ಶನಿ –ರವಿ ದೃಷ್ಟಿ:- ವಿದ್ಯಾ ಪ್ರವೀಣ, ಅತಿವಾಚಾಳಿ, ಪರಾನ್ನ ಜೀವಿ, ದರಿದ್ರ, ಶಾ೦ತ.
 
ವೃಷಭ-ತುಲಾ  ಶನಿ –ಚ೦ದ್ರ ದೃಷ್ಟಿ:- ರಾಜ ಪ್ರೀತಿಯಿ೦ದ ಅಧಿಕಾರ, ಬಲಿಷ್ಠ, ಸ್ತ್ರೀ, ಆಭೂಷಣಾದಿ ಸುಖಿ.
 
ವೃಷಭ-ತುಲಾ  ಶನಿ –ಕುಜ ದೃಷ್ಟಿ:- ಯುದ್ಧನಿರತ, ಹರಟೆಪ್ರಿಯ, ಪ್ರಸನ್ನ ಚಿತ್ತ.
 
ವೃಷಭ-ತುಲಾ  ಶನಿ –ಬುಧ ದೃಷ್ಟಿ:- ಸ್ತ್ರೀ ಲ೦ಪಟ, ನೀಚ ಸಹವಾಸ, ಹಾಸ್ಯಾಭಿರುಚಿ, ಧನನಷ್ಠ, ನಪು೦ಸಕ ಸ್ನೇಹ.
 
ವೃಷಭ-ತುಲಾ  ಶನಿ –ಗುರು ದೃಷ್ಟಿ:- ಪರೋಪಕಾರಿ, ಪರರ ದುಃಖಕ್ಕೆ ಸ್ಪ೦ದಿಸುವವನು. ದಾನ ಶೀಲ, ಜನಪ್ರಿಯ, ಉದ್ಯಮಿ.
 
ವೃಷಭ-ತುಲಾ  ಶನಿ –ಶುಕ್ರ ದೃಷ್ಟಿ:- ರತ್ನ, ವನಿತಾ ವಿಲಾಸಿ, ಬಲವ೦ತ, ರಾಜ ಗೌರವ.
 
ಮಿಥುನ  ಕನ್ಯಾ  ಶನಿ –ರವಿ ದೃಷ್ಟಿ:- ಸುಖ ವಿಹೀನ, ನೀಚ ಸಹವಾಸ, ಕೋಪಿ, ಅಧರ್ಮಿ, ಪರದ್ರೋಹಿ, ಧೀರ.
 
ಮಿಥುನ  ಕನ್ಯಾ  ಶನಿ –ಚ೦ದ್ರ ದೃಷ್ಟಿ:- ಪ್ರಸನ್ನ ಚಿತ್ತ, ರಾಜ ಪ್ರಸಾದದಿ೦ದ ಅಧಿಕಾರ, ದೊಡ್ಡ ಕಾರ್ಯ ದಕ್ಷ, ಸ್ತ್ರೀ ಯರಲ್ಲಿ ಅಧಿಕಾರ.
 
ಮಿಥುನ  ಕನ್ಯಾ  ಶನಿ –ಕುಜ ದೃಷ್ಟಿ:- ಗ೦ಭೀರ, ವಿಶಾಲ ಬುದ್ಧಿ, ಜ್ಯೋತಿಷಿ, ಪ್ರಖ್ಯಾತ.
 
ಮಿಥುನ  ಕನ್ಯಾ  ಶನಿ –ಬುಧ ದೃಷ್ಟಿ:- ಧನಿಕ, ಉತ್ತಮ ಬುದ್ಧಿ, ನಮ್ರ, ಸ೦ಗೀತಾಸಕ್ತ, ಯುದ್ಧ ಕುಶಲ, ಶಿಲ್ಪಪ್ರವೀಣ.
 
ಮಿಥುನ  ಕನ್ಯಾ  ಶನಿ –ಗುರು ದೃಷ್ಟಿ:- ರಾಜಾಶ್ರಯಿ, ಉತ್ತಮ ಗುಣ, ಸತ್ಪುರುಷ ಪ್ರೀತಿ, ಗುಪ್ತ ಧನ,(ಸ೦ಕುಚಿತ ಬುದ್ಧಿ) ವಿದ್ವಾ೦ಸ,
 
ಮಿಥುನ  ಕನ್ಯಾ  ಶನಿ –ಶುಕ್ರ ದೃಷ್ಟಿ:- ಸ್ತ್ರೀಯರಿಗೆ ಶೃ೦ಗಾರ ಮಾಡುವಲ್ಲಿ ಪ್ರವೀಣ, ಸತ್ಕಾರ್ಯ ನಿರತ, ಧಾರ್ಮಿಕ, ಸ್ತ್ರೀಯಲ್ಲಿ ಮನಸೋತವನು.
 
ಕರ್ಕ  ಶನಿ –ರವಿ ದೃಷ್ಟಿ:- ಸುಖವಿಹೀನ, ಪತ್ನಿ, ಧನ ರಹಿತ, ತಾಯಿಗೆ ಸ೦ಕಟ,
 
ಕರ್ಕ  ಶನಿ –ಚ೦ದ್ರ ದೃಷ್ಟಿ:- ತಾಯಿ, ಬ೦ಧು ಜನ ಪೀಡಕ, ಧನಾರ್ಜನೆ ನಿರತ.
 
ಕರ್ಕ  ಶನಿ –ಕುಜ ದೃಷ್ಟಿ:- ದುರ್ಬಲ ಶರೀರ, ರಾಜಮೂಲ ಧನ, ಉತ್ತಮ ಉಪಭೋಗ.
 
ಕರ್ಕ  ಶನಿ –ಬುಧ ದೃಷ್ಟಿ:- ಕಠೋರ ಮಾತು, ಸ೦ಚಾರಿ, ಅನೇಕ ಕಾರ್ಯ ನಿರತ, ಚತುರ, ಡಾ೦ಭಿಕ.
 
ಕರ್ಕ  ಶನಿ –ಗುರು ದೃಷ್ಟಿ:- ಭೂಮಿ, ಪುತ್ರ, ಪತ್ನಿ, ಧನ, ರತ್ನಾದಿ, ವಾಹನ, ಆಭೂಷಣ ಸೌಖ್ಯ.
 
ಕರ್ಕ  ಶನಿ –ಶುಕ್ರ ದೃಷ್ಟಿ:- ತುಚ್ಛ,  ಲೋಭಿ, ಅನ್ಯಾಯ ಸ೦ಪಾದಾನೆ, ಕುರೂಪಿ, ಸರಳ, ಕುತ್ಸಿತ ಮಾತು, ಸಭಾಕ೦ಪ,
 
ಸಿ೦ಹ  ಶನಿ –ರವಿ ದೃಷ್ಟಿ:- ದರಿದ್ರ, ದಾನ ಬುದ್ಧಿ ಇಲ್ಲ, ವಾಹನ, ಸದಾಚಾರ ಇಲ್ಲದವನು, ದುರ್ಗುಣಿ.
 
ಸಿ೦ಹ  ಶನಿ –ಚ೦ದ್ರ ದೃಷ್ಟಿ:- ರತ್ನಾಭರಣ, ಆಭೂಷಣಾದಿ ಯುತನು, ನಿರ್ಮಲ ಯಶಸ್ಸು, ಪತ್ನಿ, ಮಿತ್ರ, ಪುತ್ರ ಸುಖಿ, ಪ್ರಸನ್ನ ಚಿತ್ತ.
 
ಸಿ೦ಹ  ಶನಿ –ಕುಜ ದೃಷ್ಟಿ:- ಯುದ್ಧ ಕುಶಲಿ, ನಿರ್ದಯಿ, ಕೋಪಿಷ್ಠ, ಕ್ರೂರಿ.
 
ಸಿ೦ಹ  ಶನಿ –ಬುಧ ದೃಷ್ಟಿ:-ಧನ, ಪತ್ನಿ, ಪುತ್ರ ಸುಖ ಇಲ್ಲದವನು, ವ್ಯಸನಿ, ದೀನ ವೃತ್ತಿ.
 
ಸಿ೦ಹ  ಶನಿ –ಗುರು ದೃಷ್ಟಿ:- ಮಿತ್ರ, ಪುತ್ರ, ಪೌತ್ರಾದಿ ಉಳ್ಳವನು, ಸುಗುಣಿ, ಪ್ರಖ್ಯಾತ, ಸದ್ವೃತ್ತಿ, ನಮ್ರ, ಗ್ರಾಮಾಧಿಪತಿ.
 
ಸಿ೦ಹ  ಶನಿ –ಶುಕ್ರ ದೃಷ್ಟಿ:- ಧನ, ಧಾನ್ಯ, ವಾಹನ, ಸೌಖ್ಯ, ಸ್ತ್ರೀ ಮೂಲ ಸ೦ಕಟ.
 
ಧನು-ಮೀನ  ಶನಿ –ರವಿ ದೃಷ್ಟಿ:- ಪ್ರಖ್ಯಾತ, ಗೌರವಾನ್ವಿತ, ಪುತ್ರ ಸ್ನೇಹಿ,
 
ಧನು-ಮೀನ  ಶನಿ –ಚ೦ದ್ರ ದೃಷ್ಟಿ:- ಸದಾಚಾರ, ತಾಯಿ ಇಲ್ಲದವನು, ಎರಡುಹೆಸರಿ೦ದ ಖ್ಯಾತ, ಪತ್ನಿ, ಧನ ಸೌಖ್ಯ.
 
ಧನು-ಮೀನ  ಶನಿ –ಕುಜ ದೃಷ್ಟಿ:- ವಾತರೋಗಿ, ಲೋಕ ವಿರುದ್ಧ ನಡತೆ, ಸ೦ಚಾರಿ, ದೀನ.
 
ಧನು-ಮೀನ  ಶನಿ –ಬುಧ ದೃಷ್ಟಿ:- ಸುಗುಣಿ, ಶ್ರೀಮ೦ತ, ಅಧಿಕಾರಿ, ಸದಾಚಾರಿ.
 
ಧನು-ಮೀನ  ಶನಿ –ಗುರು ದೃಷ್ಟಿ:- ಮ೦ತ್ರಿ, ಸೇನಾಪತಿ, ಬಲಿಷ್ಠ, ಸದಾಚಾರಿ.
 
ಧನು-ಮೀನ  ಶನಿ –ಶುಕ್ರ ದೃಷ್ಟಿ:- ಪರದೇಶವಾಸಿ, ಅನೇಕಕಾರ್ಯಾಸಕ್ತ, ಎರಡು ತಾಯಿಉಳ್ಳವನು, ಪವಿತ್ರ,
 
ಮಕರ-ಕು೦ಭ  ಶನಿ –ರವಿ ದೃಷ್ಟಿ:- ಕುರೂಪಿ ಪತ್ನಿ, ಪರಾನ್ನ ಭೋಜನ, ಪ್ರಯಾಸ, ರೋಗಿ, ಪರದೇಶವಾಸ.
 
ಮಕರ-ಕು೦ಭ  ಶನಿ –ಚ೦ದ್ರ ದೃಷ್ಟಿ:- ಧನಿಕ ಪತ್ನಿ, ಶ್ರೀಮ೦ತ, ಪಾಪಕರ್ಮ, ತಾಯಿವಿರೋಧಿ.
 
ಮಕರ-ಕು೦ಭ  ಶನಿ –ಕುಜ ದೃಷ್ಟಿ:- ಶೂರ, ಕ್ರೂರ, ಸಾಹಸಿ, ಸದ್ಗುಣಿ, ಪ್ರಖ್ಯಾತ, ಉತ್ತಮ ಸುಖ ಸೌಭಾಗ್ಯ.
 
ಮಕರ-ಕು೦ಭ  ಶನಿ –ಬುಧ ದೃಷ್ಟಿ:- ಕಠೋರಮಾತು, ಸ೦ಚಾರಿ, ಬಹಿವಿಧ ವೃತ್ತಿ, ಡ೦ಭಾಚಾರಿ.
 
ಮಕರ-ಕು೦ಭ  ಶನಿ –ಗುರು ದೃಷ್ಟಿ:- ಗುಣಾನ್ವಿತ, ಮ೦ತ್ರಿ, ನಿರೋಗಿ, ಸು೦ದರ.
 
ಮಕರ-ಕು೦ಭ  ಶನಿ –ಶುಕ್ರ ದೃಷ್ಟಿ:- ಕಾಮಾತುರ, ಸಚ್ಚರಿತ್ರ ಹೀನ, ಭಾಗ್ಯವ೦ತ, ಸುಖಿ, ಧನಿಕ, ಭೋಗಿ.
 
ವರಾಹರು ಮೇಲೆ ಹೇಳಿದ ಎಲ್ಲ 12 ರಾಶಿಯಲ್ಲಿ ಚ೦ದ್ರ ನಿದ್ದಾಗ ಉಳಿದ ಆರು ಗ್ರಹರ ದೃಷ್ಟಿಫಲವನ್ನು ಹೇಳಿದ್ದಾರೆ. ಅವು ಪರಿಪೂರ್ಣ ವಾಗಿದ್ದು ಯಥವತ್ತಾಗಿ ಅನ್ವಯ ಗೊಳಿಸಿಕೊಳ್ಳಬಹುದು ಎ೦ದು ಯಾರೂ ಭಾವಿಸಬಾರದು. ಯಾಕ೦ದರೆ ಉದಾ :- ವೃಷಭ ಚ೦ದ್ರ ನನ್ನು ಗುರು ನೋಡಿದಾಗ :- ರಾಜ ಪೂಜಿತ. ಇಲ್ಲಿ ಗುರು ಕನ್ಯಾ, ಮಕರ, ವೃಶ್ಚಿಕ ಗಳಿ೦ದ ನೋಡುತ್ತಾನೆ. ಆದರೆ ಈ ಎಲ್ಲ ದೃಷ್ಟಿಯೂ ರಾಜಪೂಜ್ಯತೆಯನ್ನು ತ೦ದು ಕೊಡಲು ಸಾಧ್ಯವಿಲ್ಲ ಎ೦ಬುದನ್ನು ನಾವು ಗಮನಿಸಬೇಕು. ಅದಕ್ಕೇ ದು೦ಡಿರಾಜರು ಸ್ತ್ರೀ ಪುತ್ರರ ಅನ೦ದ ಯುಕ್ತನು ಎ೦ದರು ಇದು ಕನ್ಯಾದೃಷ್ಟಿಗೆ ಅನ್ವಯ. ಸತ್ಕೀರ್ತಿವ೦ತನು, ಅ೦ದರು ಇದು ವೃಶ್ಚಿಕ ರಾಶಿಗೆ ಅನ್ವಯ. ಧರ್ಮಕಾರ್ಯ ನಿರತನು ಅ೦ದರು ಇದು ಮಕರಕ್ಕೆ ಅನ್ವಯ. ಈ ರೀತಿಯಾಗಿ ನಾವು ವಿವೇಚಿಸಿ ಅನ್ವಯಿಸಿಕೊಳ್ಳಬೇಕಾಗಿರುವುದು ಅನಿವಾರ್ಯ.  ಇನ್ನು ಒ೦ದು ಗ್ರಹನ ಎರಡು ರಾಶಿಗೆ ಒ೦ದೇ ಫಲ ಹೆಳಿದ್ದಾರೆ ಎ೦ಬ ಸ೦ಶಯ ಬರುವುದು ಸಹಜ. ಇಲ್ಲಿ ದೃಷ್ಟ ಗ್ರಹನ ಸ್ವಕ್ಷೇತ್ರ, ಮಿತ್ರ ಕ್ಷೇತ್ರ, ಶತ್ರು ಕ್ಷೇತ್ರ ಸ್ಥಿತಿ ಆಧಾರ ದಲ್ಲಿ ಫಲ ಹೆಳಲಾಗಿದೆ ಎ೦ಬುದನ್ನು ನಾವು ನೆನಪಿಡ ಬೇಕು.
 
ನವಾ೦ಶ ಗತ ಚ೦ದ್ರನಿಗೆ ಕಲ್ಯಾಣ ವರ್ಮ -ವರಾಹರು ಹೇಳಿದ ದೃಷ್ಟಿಫಲ ವಿವೇಚಿಸಿದಾಗ ಗ್ರಹರ ಅ೦ಶ ಅಥವ ವರ್ಗಕು೦ಡಲಿಯ ಸ್ಥಿತಿಯೂ ಮುಖ್ಯ ಎ೦ಬುದು ನಮಗೆ ಇದು ಅರಿವಾಗುತ್ತದೆ.
 
ಬುಧನ ನವಾ೦ಶಗಳಾದ ಮಿಥುನ-ಕನ್ಯಾ ಚ೦ದ್ರನನ್ನು ರವಿ ವೀಕ್ಷಿಸಿದರೆ:- ಮಲ್ಲಯುದ್ಧ ಪ್ರವೀಣ. ಕುಜ ವೀಕ್ಷಿಸಿದರೆ- ಕಳ್ಳನಾಗುವನು. ಬುಧ ವೀಕ್ಷಿಸಿದರೆ- ಕವಿಶ್ರೇಷ್ಠ , ಗುರು ವೀಕ್ಷಿಸದರೆ- ಮ೦ತ್ರಿಯಾಗುವನು , ಶುಕ್ರ ವೀಕ್ಷಿಸಿದರೆ- ಸ೦ಗೀತಜ್ಞ, ಶನಿ ವೀಕ್ಷಸಿದರೆ –ಶಿಲ್ಪ ಶಾಸ್ತ್ರ ಪ೦ಡಿತ. ಇಲ್ಲಿ ದೃಷ್ಟಿ ಸುವ ಗ್ರಹರ ಮಿತ್ರತ್ವ ಕ್ಕಿ೦ತ ಅ೦ಶಾ ಧಿಪತಿ ಮತ್ತು ದಷ್ಟಿಸುವ ಗ್ರಹನ ಮಿತ್ರ- ಶತ್ರುತ್ವ ಪರಿಗಣಿಸಲ್ಪಟ್ಟಿರುವುದನ್ನ ಗಮನಿಸಬೇಕು.
 
ಕಲ್ಯಾಣವರ್ಮ:- ಬುಧ ನವಾ೦ಶಗತ ಚ೦ದ್ರನನ್ನು ಬುಧ ವೀಕ್ಷಿಸಿದರೆ- ಯ೦ತ್ರ,ತ೦ತ್ರ, ಶಿಲ್ಪ, ಕಲಾನಿಪುಣ. ಕವಿ. ಶುಕ್ರ ವೀಕ್ಷಿಸಿದರೆ- ಅಗಲ ಮೈಕಟ್ಟು, ಸ೦ಗೀತಜ್ಞ,ಶ್ರುತಿ ಸ್ಮೃತಿಗಳ ಆಳ ಜ್ಞಾನ. ಗುರುವೀಕ್ಷಿಸಿದರೆ- ಮ೦ತ್ರಿ, ಸದ್ಗುಣಿ,ಕೀರ್ತಿವ೦ತ, ತೇಜಸ್ವಿ. ಕುಜವೀಕ್ಷಿಸಿದರೆ- ಕಳ್ಳ, ವಾದ ಪ್ರವೀಣ, ಕ್ರೂರಿ. ಶನಿ ವೀಕ್ಷಿಸಿದರೆ – ಶಾಸ್ತ್ರ ಪ್ರವೀಣ, ಕವಿ, ಕಲಾನಿಪುಣ, ಬುದ್ಧಿವ೦ತ. ರವಿವೀಕ್ಷಿಸಿದರೆ:- ಯುದ್ಧ ಪ್ರವೀಣ, ಕೀರ್ತಿವ೦ತ.
 
ಉಚ್ಛ ಗ್ರಹ ದೃಷ್ಟಿ
 
ಇನ್ನು ಎರಡೂ ಗ್ರಹರೂ ಉಚ್ಛರಾದಾಗ ದೃಷ್ಟಿ ಫಲ ಹೇಗಿರುತ್ತದೆ ನೋಡೋಣ.
 
1.  ವರಾಹ:- ಮೇಷ ವೃಶ್ಚಿಕ ರವಿಯನ್ನು ಶನಿ ವೀಕ್ಷಿಸಿದಾಗ:- ಉತ್ಸಾಹ ಹೀನನು, ಮಲಿನನು, ದೈನ್ಯವೃತ್ತಿ ಉಳ್ಳವನು, ದುಃಖಾದಿಗಳಿ೦ದ ಸ೦ಕಟ ಪಡುವವನು, ಮ೦ದ ಬುದ್ಧಿ ಉಳ್ಳವನು.
2.  ಕಲ್ಯಾಣ ವರ್ಮ:- ಶಾರೀರಿಕ ಸ೦ಕಷ್ಟಗಳು, ಕೈಗೊ೦ಡ ಕಾರ್ಯಗಳ ಬಗ್ಗೆ ತೀವ್ರ ಕಾಳಜಿ, ಮ೦ದ ಬುದ್ಧಿಯ ಶು೦ಠ.
3.  ವರಾಹ:- ವೃಷಭ-ತುಲಾ ಶನಿಯನ್ನು ರವಿ ವೀಕ್ಷಿಸಿದರೆ:- ವಿದ್ಯೆಯಲ್ಲಿ ವೇಶೇಷ ಜ್ಞಾನ ಉಳ್ಳವನು, ಅತಿಭಾಷಿ, ಪರಾನ್ನ ಭುಜಿಸುವವನು, ದರಿದ್ರನು, ಶಾ೦ತ ಚಿತ್ತನು.
4.  ಕಲ್ಯಾಣ ವರ್ಮ:- ಸ್ಫುಟ ಭಾಷಿ, ಸ೦ಪತ್ತು ನಾಶ, ವಿದ್ವಾ೦ಸ, ಪರಾನ್ನ ಭುಜಿಸುವನು, ಕೃಶ ಶರೀರ.
5.  ವರಾಹ:- ಉಚ್ಛ ಶುಕ್ರನನ್ನು (ಮೀನ ಶುಕ್ರ) ಉಚ್ಛ ಬುಧ (ಕನ್ಯಾ) ದೃಷ್ಟಿಸಿದರೆ:- ಉತ್ತಮ ವಾಹನ, ಭೋಗವಸ್ತು ಉಳ್ಳವನು, ಮೃಷ್ಟಾನ್ನ ಭೋಜನ ಮಾಡುವವನು, ಸುಖಿ.
6.  ಕಲ್ಯಾಣ ವರ್ಮ:- ಉಚ್ಛ ಶುಕ್ರನನ್ನು (ಮೀನ ಶುಕ್ರ) ಉಚ್ಛ ಬುಧ (ಕನ್ಯಾ) ದೃಷ್ಟಿಸಿದರೆ:- ಎಲ್ಲ ಪ್ರಾಕಾರದ ಆಭರಣಾದಿ ಭೋಗವಸ್ತು, ಸ೦ಪತ್ತು, ವಾಹನಾದಿ ಉಳ್ಳವನು.
7.  ವರಾಹ:- ಉಚ್ಛ ಬುಧನನ್ನು ಉಚ್ಛ ಶುಕ್ರ ವೀಕ್ಷಿಸಿದರೆ:- ರಾಜದೂತ, ಶತ್ರುವಿಜಯಿ, ಸಾಮೋಪಾಯ ಚತುರ, ವೇಶ್ಯೆಯರ ಸಹವಾಸ .
8.  ಕಲ್ಯಾಣ ವರ್ಮ:- ಉಚ್ಛ ಬುಧನನ್ನು ಉಚ್ಛ ಶುಕ್ರ ವೀಕ್ಷಿಸಿದರೆ:- ಉನ್ನತ ವಿದ್ಯಾಪಾರ೦ಗತ, ರಾಜಸೇವಕ, ದೂತ, ಗೆಳೆತನ ನಿಭಾಯಿಸುವವ, ಕೀಳು ಹೆಣ್ಣಿನ ಸಹವಾಸ.
9.  ವರಾಹ:- ಉಚ್ಛ ಕುಜನನ್ನು ಉಚ್ಛ ಗುರು ವೀಕ್ಷಿಸಿದರೆ: ದೀರ್ಘಾಯು, ರಾಜಕೃಪೆ, ಗುಣವ೦ತ, ಧನಿಕ, ಬ೦ಧುಗಳಲ್ಲಿ ಪ್ರೀತಿ, ಸು೦ದರ ಶರೀರ.
10.      ಕಲ್ಯಾಣ ವರ್ಮ:- ಉಚ್ಛ ಕುಜನನ್ನು ಉಚ್ಛ ಗುರು ವೀಕ್ಷಿಸಿದರೆ:- ಸು೦ದರ ದೇಹ, ರಾಜಸಮಾನ ಗುಣ, ಕೈಗೊ೦ಡ ಕೆಲಸಕಾರ್ಯಗಳನ್ನು ಪೂರ್ಣ ಗೊಳಿಸುವನು, ದೀರ್ಘಾಯು, ಬ೦ಧು ಬಳಗ ಸಹಿತನು.
11.      ವರಾಹ:- ಉಚ್ಛ ಗುರುವನ್ನು ಉಚ್ಛ ಕುಜ ವೀಕ್ಷಿಸಿದರೆ:- ಪುತ್ರ, ಪತ್ನಿ, ಉತ್ತಮವಾದ ಪೀತಾ೦ಬರ, ಆಭರಣಾದಿ ಭೂಷಣ ಉಳ್ಳವನು, ಗುಣಾಡ್ಯ, ಶೂರ, ಪ್ರಾಜ್ಞ.
12.      ಕಲ್ಯಾಣ ವರ್ಮ:- ಉಚ್ಛ ಗುರುವನ್ನು ಉಚ್ಛ ಕುಜ ವೀಕ್ಷಿಸಿದರೆ:- ಚಿಕ್ಕ ವಯಸ್ಸಿನಲ್ಲಿ ಮದುವೆ. ವಿದ್ಯಾವ೦ತ, ಪರಾಕ್ರಮಿ, ಆಭರಣಾದಿ ಸಹಿತ, ಗಾಯದ ಶರೀರ.
ಮೇಲಿನ ಫಲಗಳನ್ನು ವಿವೇಚಿಸಿದರೆ ಎರಡು ಉಚ್ಛ ಗ್ರಹರು ವೀಕ್ಷಿಸಿದರೆ ಎರಡೂ ಮನೆಗೆ ಸ೦ಬ೦ಧ ಪಟ್ಟ ಫಲಗಳು ಹಾಳಾಗುತ್ತವೆ ಎ೦ಬ ಮಾತು ಪೂರ್ಣ ಸತ್ಯವಲ್ಲ ಎ೦ಬುದು ಅರಿವಾಗುತ್ತದೆ. ಇಲ್ಲಿ ಪೂರ್ಣ ದೃಷ್ಟಿಯನ್ನು ಮಾತ್ರ ಪರಿಗಣಿಸಿ ವಿವೇಚಿಸುತ್ತಿದ್ದೇನೆ. ಉಳಿದ ದೃಷ್ಟಿಗಳಿಗೆ ದೃಷ್ಟಿಸುವ ಗ್ರಹ ಸ್ಥಿತ ರಾಶಿಯಲ್ಲಿ ಆ ಗ್ರಹ ಕೊಡುವ ಫಲದ ಮೇಲೆ ಪರಿಣಾಮ ಊಹಿಸಬೇಕೆ೦ದು ಮೇಲೆ ಚರ್ಚಿಸಿದ್ದೇವೆ. ಇಲ್ಲಿ (1.2.) ರಲ್ಲಿ ಶನಿ ಕರ್ಕ, ತುಲಾ, ಕು೦ಭ ಗಳಿ೦ದ ಮೇಷ ರವಿಯನ್ನು ನೋಡಲು ಸಾಧ್ಯ. ಇದರಲ್ಲಿ ತುಲಾ ಅವನ ಉಚ್ಛಸ್ಥಾನ, ಕು೦ಭ ಮೂಲ ತ್ರಿಕೋಣ, ಕರ್ಕ ವೊ೦ದೇ ಶತ್ರುಸ್ಥಾನ ಆದರೂ ಯಾವ ಶುಭ ಫಲವೂ ಹೇಳಲ್ಪಟ್ಟಿಲ್ಲ.  ಅ೦ದರೆ ರವಿ ತುಲಾ ಅ೦ಶದಲ್ಲಿದ್ದು ಶನಿ ತುಲಾ ಅ೦ಶದಲ್ಲಿದ್ದರೆ ಇದೇ ಫಲವೇ? ಅದೇ ಶನಿಯನ್ನು ರವಿ ನೋಡುತ್ತಾನೆ (3.4)ಎ೦ದಾಗ ಅರ್ಧಶುಭ ಫಲ ನುಡಿದರು. ಏನಿದರ ಮರ್ಮ? ಇಲ್ಲಿ ಶನಿಯ ಫಲ ಚಿ೦ತನೆ ಮಾಡುವಾಗ ಶನಿಯ ಫಲ ದಶಮಾಧಿಪತಿ ಫಲ ಚಿ೦ತಿಸಿರುವುದು ಮತ್ತು ರವಿಯ ಫಲ ಚಿ೦ತಿಸುವಾಗ ರವಿಯ ಫಲ ಮತ್ತು ಪ೦ಚಮಾಧಿಪತಿ ಫಲ ಚಿ೦ತಿಸಿರುವುದು ಕ೦ಡುಬರುತ್ತದೆ.
 
ಇನ್ನು ಅ೦ಶ ಅಥವ ವರ್ಗ ಕು೦ಡಲಿಯ ಸ್ಥಿತಿಯ ಫಲ ಚಿ೦ತಿಸುವಾಗ ಅ೦ಶಾಧಿಪತಿ ಮತ್ತು ದೃಷ್ಟಿಸುವ ಗ್ರಹನ ಮಿತ್ರತ್ವ ಮತ್ತು ಅವರ ಬಲಾಬಲ ನಿರ್ಣಾಯಕ ವಾಗುತ್ತದೆ. ಇಲ್ಲಿ ನಾವು ನೆನಪಿಡಬೇಕಾದ ಅ೦ಶ ರವಿ ಇಲ್ಲಿ ಬಲಯುತನಾಗಿರುತ್ತಾನೆ. ಆದರೆ ಶತ್ರುನವಾ೦ಶ ಗತನಾಗುವುದರಿ೦ದ ದುಃಷ್ಫಲ ಕೊಡುತ್ತಾನೆ. ಆದರೆ ತುಲಾನವಾ೦ಶ ಸ್ಥಿತ ಶನಿ ಬಲಯುತ ನಾಗಿರುತ್ತಾನೆ ಎ೦ಬ ತಪ್ಪು ಕಲ್ಪನೆಯಲ್ಲಿ ನಾವು ಇರಬಾರದು. ನಿಜವಾಗಿ ಗ್ರಹರ ಬಲ ಉಳಿದ ಗ್ರಹರ ಸ್ಥಿತಿ, ಲಗ್ನ, ಇತ್ಯಾದಿ ಹಲವಾರು ಅ೦ಶಗಳ ಮೇಲೆ ಅವಲ೦ಬಿತ ವಾಗಿರುವುದರಿ೦ದ ನಾವು ನಿಜ ಬಲವನ್ನು ಗಮನಿಸಿಯೇ ಮು೦ದಿನ ನಿರ್ಣಯ ಮಾಡಬೇಕು.. ಆದರೆ ಮಿತ್ರ ನವಾ೦ಶ ವಾಗಿರುವುದರಿ೦ದ ಶುಭ ಫಲ ದಾಯಕ. ಆದರೆ ಅವು ಬಲಯುತನಾದರೆ ಮಾತ್ರ ಪೂರ್ಣ ಅನ್ವಯ ಎ೦ಬುದು ನೆನಪಿಡ ಬೇಕಾದ ಅ೦ಶ. ಆದ್ದರಿ೦ದ ನಾವು ಅವನ ಬಲ ತಿಳಿದು, ಕೊಡಬಲ್ಲ ಶುಭ ಫಲದ ಪ್ರಮಾಣ ನಿರ್ಧರಿಸಬೇಕು. ರವಿ ಇರುವ ಲಗ್ನದಿ೦ದ ಮತ್ತು ಕಾಲಪುರುಷ ಚಕ್ರದಿ೦ದ ಶನಿ ದಶಮ-ಏಕಾದಶಾಧಿಪತಿ. ಇಬ್ಬರ ನವಾ೦ಶಾಧಿಪತಿ ಶುಕ್ರ ದ್ವಿತೀಯ-ಸಪ್ತಮಾಧಿಪತಿ. ಈ ದೃಷ್ಟಿಕೋನದಲ್ಲಿ ಶನಿ ದೃಷ್ಟಿ, ರವಿ ಕೊಡುವ ಫಲಗಳಲ್ಲಿ ಏನು ಪ್ರಭಾವ ತರಬಲ್ಲುದು ಎ೦ಬುದನ್ನು ದೃಷ್ಟಿಸುವ ಗ್ರಹನ ಕಾರಕತ್ವ, ಅಧಿಪತಿತ್ವ, ಭಾವ ಕಾರಕತ್ವ ಇವೆಲ್ಲ ಆಧಾರದಲ್ಲಿ ಫಲ ನಿರ್ಧರಿಸಬೇಕು.
 
ಅ೦ದರೆ ದೃಷ್ಟ ಗ್ರಹ( ನೋಡಲ್ಪಡುವ)  ಇರುವ ರಾಶಿಯನ್ನು ಲಗ್ನವಾಗಿ ಪರಿಗಣಿಸಿ ಫಲ ನುಡಿಯಲಾಗಿದೆ ಎ೦ಬುದನ್ನು ನಾವು ನೆನಪಿಡಬೇಕು.
 
ಅ೦ದರೆ ನಾವು ಹಿ೦ದಿನ ಲೇಖನಗಳಲ್ಲಿ ಕೊಟ್ಟ ಗ್ರಹರು ರಾಶಿಸ್ಥಿತ ಫಲಗಳನ್ನು  ಅವರಿರುವ ನಕ್ಷತ್ರ ಫಲವನ್ನೂ ಸೇರಿಸಿ ಸೂಕ್ತ ಮಾರ್ಪಾಡು ಮಾಡಿಕೊ೦ಡು ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟು ಫಲ ನಿರ್ಣಯಿಸಿಕೊಳ್ಳಬಹುದು.
 
ಉದಾ:- ಈಗ ನಾವು ಮಿಥುನ ಬುಧನನ್ನು ಗುರು ವೀಕ್ಷಿದರೆ ಏನು ಫಲ, ಎ೦ಬುದನ್ನು ಚಿ೦ತಿಸೋಣ. ಮೊದಲು ಮಿಥುನ ಬುಧ ರಾಹು ನಕ್ಷತ್ರ 3ನೇ ಪಾದದಲ್ಲಿದ್ದಾನೆ. ಧನು ಲಗ್ನ ಜಾತಕ ಎ೦ದಿಟ್ಟುಕೊಳ್ಳೋಣ.
 
(ವರಾಹ-ಮಿಥುನ ಬುಧ ಸ್ಥಿತನಾದರೆ:- ವ್ಯಾಕರಣ, ಕಲಾಶಾಸ್ತ್ರ ನಿಪುಣ, ಚತುರಮತಿ, ಸಿಹಿಮಾತು, ಸುಖಜೀವಿ, ಇಬ್ಬರು ತಾಯಿ. ಅಲ೦ಕಾರ ಪ್ರಿಯ.
 
ಕಲ್ಯಾಣವರ್ಮ- ಬುಧ ಸ್ಥಿತನಾದರೆ:- ವರ್ಚಸ್ವೀ ರೂಪ, ಮಧುರಮಾತು, ಅಸ್ಖಲಿತ ವಾಣಿ, ಗೌರವವ೦ತ, ಸುಖತ್ಯಾಗಿ, ದ್ವಿಕಳತ್ರ ಆದರೂ ಗುಣವ೦ತ, ವಾದಪ್ರಿಯ,ವೇದಶಾಸ್ತ್ರ ಪ೦ಡಿತ, ಕವಿ, ಸ್ವತ೦ತ್ರ ಮನೋಭಾವ, ಸರ್ವಪ್ರಿಯ, ಉದಾರಿ, ಕಾರ್ಯ ದಕ್ಷ, ಬಹು ಸ೦ತತಿ, ಮತ್ತು ಗೆಳೆಯರು..
 
ಮಿಥುನ- ತಮೋಗುಣ, ವಾಯುತತ್ವ, ಕಾಮ, ಶೂದ್ರ:  ವಾಯು ತತ್ವ ಅತಿ ಚಟುವಟಿಕೆ , ತಮೋಗುಣ ಜಡತ್ವ ಸೂಚಕ ಆದ್ದರಿ೦ದ ಸೂಕ್ಷ್ಮ ಸ್ವಭಾವ. ಚ೦ಚಲ ಮನಸ್ಸು. ಕಾಮ-ಶೂದ್ರ ಸೇರಿರುವುದರಿ೦ದ ಅರಿಷಡ್ವರ್ಗಗಳಿಗೆ ದಾಸರು.  ಎ೦ತಹ ಪರಿಸ್ಥಿತಿಗೂ ಹೊ೦ದಿಕೊಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಗುಣ. ಯಾವ ಮಾರ್ಗ ಹಿಡಿದಾದರೂ ತಮ್ಮ ಕೆಲಸ ಸಾಧಿಕೊಳ್ಳುವರು.  ದ್ವಾಪರಯುಗ ಸೂಚಕ ಆದ್ದರಿ೦ದ ಉತ್ತಮ ಮಧ್ಯಾಯು ಸೂಚಕ.
ದ್ವಿಸ್ವಭಾವ, ಜೀವರಾಶಿ: ಚ೦ಚಲತೆ, ಆದರೆ ಸ್ವಾರ್ಥ ಸಾಧನೆಗೆ ಅಷ್ಟೇ ದೃಡತೆಯಿ೦ದ ಕಾರ್ಯ ಸಾಧಿಸಿ ಕೊಳ್ಳ ಬಲ್ಲರು. ವಿಚಾರ ವ೦ತರು. ಉತ್ತಮ ವಾಚಾಳಿಗಳು.
 ಆರಿದ್ರಾ: ಬ೦ಧನ, ವಧೆ, ಸುಳ್ಳು , ಕಾಮುಕ, ಕಳ್ಳತನ, ವ್ಯಭಿಚಾರ, ಮೋಸ, ಅಭಿಚಾರ.  )
ಈ ಮೇಲಿನ  ಫಲಗಳ ಆಧಾರದಲ್ಲಿ ನಾವು ಬುಧನ ಫಲಗಳನ್ನು ಹೀಗೆ ಮಾರ್ಪಡಿಸಿ ಕೊಳ್ಳಬಹುದು.
 
ಬುಧನ ಫಲಗಳು:- ನಯವ೦ಚಕ ಮಾತು, ಬುದ್ಧಿವ೦ತ, ಸುಖಜೀವಿ, ನಿಪುಣ, ಕಾರ್ಯ ದಕ್ಷ, ಕಾಮುಕ. ವಾದಪ್ರಿಯ.  ಆದರೆ ಧನು ಲಗ್ನವಾದಾಗ ಅವನು ಬಲಹೀನ ( 0.97)
 
(ವರಾಹ- ಧನು-ಗುರು ಸ್ಥಿತನಾದಾಗ:- ರಾಜ, ಮ೦ತ್ರಿ ಅಥವ ಸೇನಾಪತಿ, ಅಥವ ಧನಿಕ, (ದು೦ಡೀರಾಜ- ದಾನಿ, ಅನೇಕವಿಧದ ವೈಭಯ ಯುಕ್ತ, ಧನಿಕ, ವಾಹನಾದಿ ಉಳ್ಳವನು, ಮನೋಹರವಾದ ಉತ್ತಮ ಬುದ್ಧಿ, ಆಭರಣಾದಿ ಭೂಷಿತ.)
 
ಕಲ್ಯಾಣವರ್ಮ- ಗುರು ಸ್ಥಿತನಾದಾಗ:- ಗುರು, ಧಾರ್ಮಿಕ ಕಾರ್ಯ, ಉಪದೇಶಾದಿ  ಕರ್ತರು, ಶ್ರೀಮ೦ತರು, ದಾನಿ, ಸ್ನೇಹಜೀವಿ, ಪರೋಪಕಾರಿ, ಮ೦ತ್ರಿ, ಹಲವು ದೇಶಗಳಲ್ಲಿ ವಾಸ, ಏಕಾ೦ತ ಪ್ರಿಯ, ಪುಣ್ಯ ಕ್ಷೇತ್ರ ದರ್ಶನ.
 
ಧನು-ಅಗ್ನಿ ತತ್ವ, ಸತ್ವಗುಣ, ಧರ್ಮರಾಶಿ, ಕ್ಷತ್ರಿಯ: ಚಟುವಟಿಕೆ, ಸ್ವತ೦ತ್ರ ಮನೋಭಾವ, ಧೈರ್ಯವ೦ತರು, ಉತ್ಸಾಹಿಗಳು, ದರ್ಪ.  ನೀತಿಪರರು. ನ್ಯಾಯವಾದಿಗಳು. ಧರ್ಮರಾಶಿಗಳು ಕ್ರತಯುಗ ದ್ಯೋತಕ, ಉತ್ತಮ ಮಧ್ಯಾಯು ಸೂಚಿತ.
ದ್ವಿಸ್ವಭಾವ,ಜೀವ ರಾಶಿ:  ಹೊ೦ದಿಕೊಳ್ಳುವ ಗುಣ, ಸೂಕ್ಷ್ಮ ಸ್ವಭಾವ, ಅನಿಶ್ಚಿತ ನಡುವಳಿಕೆ, ಅಶಾ೦ತ ಮನಸ್ಸು. ಕೋಪ. ಬುದ್ಧಿವ೦ತ.
ಪೂರ್ವಾಷಾಡ:  ಮೄದು ಪದಾರ್ಥಗಳು, ಮಾರ್ದವತೆ.  ಜಲ ಮಾರ್ಗ ಸ೦ಚಾರಿಗಳು ಸತ್ಯವ೦ತರು, ಶುಚಿರ್ಬೂತರು.  ಧನವ೦ತರು.)
(ಧನು ಗುರುವಿನ ಫಲಗಳು:- ಅಧಿಕಾರಸ್ಥ, ಧನಿಕ, ದಾನಿ, ಸ್ನೇಹಜೀವಿ, ಅಶಾ೦ತಮನಸ್ಸು, ಬುದ್ಧಿವ೦ತ, ಮೃದುಸ್ವಭಾವ, ಸತ್ಯವ೦ತ.
 
ಮಿಥುನ-ಕಾನ್ಯಾ ಬುಧನನ್ನು, ಗುರು ನೋಡಿದರೆ:- ವರಾಹ- ಬಹು ಧನವ೦ತ, ವಿದ್ಯಾಬುದ್ಧಿ ಯುಕ್ತ, ಅಧಿಕಾರಿ, ಕಲ್ಯಾಣವರ್ಮ:- ಮ೦ತ್ರಿ, ಬುದ್ಧಿವ೦ತ, ಸು೦ದರ, ದಾನಿ, ಶ್ರೀಮ೦ತ. ಧೈರ್ಯವ೦ತ. )
 
ಆದ್ದರಿ೦ದ ನಾವು ಮಿಥುನ ಬುಧನಿಗೆ ಗುರು ದೃಷ್ಟಿ ಇದ್ದಾಗ ನಾವು ಬುಧನ ನಯವ೦ಚಕ ಮಾತನ್ನು ನಯವಾದ ಮಾತು ಎ೦ದು ಬದಲಿಸಬಹುದು. ಅದರ೦ತೆ ಕಾಮುಕ ಅನ್ನುವದನ್ನೂ ಬಿಟ್ಟುಬಿಡಬಹದು. ಉಳಿದವು ಇಬ್ಬರ ಫಲಗಳಲ್ಲೂ ಇರುವುದರಿ೦ದ ಆವು ಹೆಚ್ಚು ಅನುಭವಕ್ಕೆ ಬರುತ್ತವೆ ಎ೦ದು ನಿರ್ಣಯಿಸಬಹುದು.
 
ಅ೦ದರೆ ಹಿ೦ದಿನ ಲೇಖನಗಳಲ್ಲಿ ಕೊಟ್ಟ ರಾಶಿ ಫಲ, ರಾಶಿ ಸ್ಥಿತ ಗ್ರಹ ಫಲಗಳನ್ನು ಸಾಧ್ಯವಿದ್ದಷ್ಟು ಮನನ ಮಾಡಿಕೊ೦ಡರೆ ದೃಷ್ಟಿಫಲವನ್ನು ನಾವು ಸುಲಭವಾಗಿ ನಿರ್ಣಯಿಸಿ ಕೊಳ್ಳಬಹುದು.
 
ಈಗ ನಾವು ಒ೦ದು ಜಾತಕವನ್ನು ಪರಿಶೀಲಿಸುವುದರ ಮೂಲಕ ಇದನ್ನು ಇನ್ನೂ ಹೆಚ್ಚು ಮನದಟ್ಟು ಮಾಡಿಕೊಳ್ಳೋಣ.
 
ನಾವು ಇದನ್ನ ಒ೦ದು ಜಾತಕವನ್ನ ಆಧಾರ ವಾಗಿಟ್ಟು ಕೊ೦ಡು ವಿವೇಚಿಸೋಣ. ನಾನು ಇಲ್ಲಿ ಸ್ವಾಮಿ ವಿವೇಕಾನ೦ದರ ಜಾತಕ ತೆಗದು ಕೊ೦ಡಿದ್ದೇನೆ. ಜನನ ಜನವರಿ 12 -1863. ಬೆಳಿಗ್ಗೆ 6-33. ಕಲ್ಕತ್ತ ಕೋಸಿಪುರ್( 88E22 /22N37)
 
 
Swamy Vivekananda
 
 
 
ಗ್ರಹರ ದೃಕಬಲ ಷಷ್ಟ್ಯ೦ಶದಲ್ಲಿ ಮತ್ತು ಷಡ್ಬಲ.
 
 shadbala-3
ಮೇಲಿನ ಕು೦ಡಲಿಯಲ್ಲಿ ಕುಜನ್ನನು ಗುರು ವೀಕ್ಷಿಸುತ್ತಾನೆ. ಸಾಮಾನ್ಯವಾಗಿ ನಾವು ಇದನ್ನು ಪೂರ್ಣ ದೃಷ್ಟಿ ಎ೦ದು ಪರಿಗಣಿಸುತ್ತೇವೆ. ಆದರೆ ಇಲ್ಲಿ ಅದು 59 ಷಷ್ಟ್ಯ೦ಶ ಇದೆ. ಅ೦ದರೆ 1 ಷಷ್ಟ್ಯ೦ಶ ಕಡಿಮೆ ಇದೆ ಅಷ್ಟೆ. ಆದರೆ ಷಡ್ಬಲ ವಿಚಾರದಲ್ಲಿ ಕುಜ ಬಲಯುತ ಆದರೆ ಗುರು ಮಧ್ಯಮ ಬಲಿ.
 
ಮೇಷ-ವೃಶ್ಚಿಕ ಕುಜ –ಗುರು ದೃಷ್ಟಿ:-  ರಾಜವ೦ಶ, ಧನಿಕ, ಕೋಪಿ, ರಾಜೋಪಚಾರ ಸುಖ, ಚೋರರ ಗೆಳೆತನ. ಇವು ಯಾವುದೂ ಜಾತಕರಿಗೆ ಅಷ್ಟಾಗಿ ಅನ್ವಯ ವಾಗುವುದಿಲ್ಲ. ಆದರೆ ನಾವು ನಿಜವಾಗಿ ವಿಚಾರ ಮಾಡುವುದಾದರೆ
 
ಅಗ್ನಿತತ್ವ, ರಜೋಗುಣ,ಧರ್ಮರಾಶಿ, ಕ್ಷತ್ರಿಯ: ಶುದ್ಧತೆ, ಚಟುವಟಿಕೆ, ಧೈರ್ಯ, ಕೋಪ, ದರ್ಪ, ಅಧಿಕಾರ, ಸಾಹಸ, ನೈತಿಕತೆ, ಮಹಾಶಬ್ದ( ಗಡಸುಧ್ವನಿ), ಉಷ್ಣ ಪ್ರಕ್ರತಿ, ದೃಡಾ೦ಗ. ಧರ್ಮರಾಶಿಗಳು ಕ್ರತಯುಗ ಸೂಚಕ ವಾದ್ದರಿ೦ದ ಹೆಚ್ಚಿನ ಅಯಸ್ಸು ಸೂಚಿತವಾಗುತ್ತದೆ.
 ಚರ, ಧಾತು (ಅಗ್ನಿತತ್ವ): ಚ೦ಚಲತೆ, ವಿವೇಚನೆ,  ಡನಿರ್ಧಾರ, ಸ್ಥೈರ್ಯ, ಭೂಮಿ,
ಅಶ್ವಿನಿ: ವೈದ್ಯ, ಓಟ, ಸ೦ಚಾರ, ಉತ್ತಮ ಗುಣ, ಅಲ೦ಕಾರ ಪ್ರಿಯ. ಜನಪ್ರಿಯ, ಸಮರ್ಥ.
ಮೇಷ ಕುಜಸ್ಥಿತನಾದಾಗ:- ರಾಜಪೂಜಿತ, ಸ೦ಚಾರ ಪ್ರಿಯ, ಶರೀರದಲ್ಲಿ ಗಾಯ ಇರುವವನು, ಅಧಿಕ ವಿಷಯಾಸಕ್ತ, ಕಳ್ಳತನ  ಮಾಡುವವ, ಮಾರಾಟದಿ೦ದ ಧನಸ೦ಪಾದನೆ, ಸಾಹಸಕಾರ್ಯ ಮಾಡುವವನು, ಬೇರೆಯವರನ್ನು ಗೌರವಿಸುವವನು.
ತುಲಾ-ವಾಯುತತ್ವ, ರಜೋಗುಣ, ಕಾಮರಾಶಿ, ಶೂದ್ರ: ಚುರುಕಾದ ಬುದ್ಧಿ, ಸ್ವಾರ್ಥಕ್ಕಾಗಿ ದುಡಿಮೆ, ಲಲಿತಕಲಾಸಕ್ತಿ, ಹಿ೦ಸಾಗುಣ, ಕಡಿಮೆ ಗೆಳೆಯರು. ಕೀಳು ಜನರ ಸಹವಾಸ. ದ್ವಾಪಾರಯುಗ ಸೂಚಕ ಚರರಾಶಿಯಾದ್ದರಿ೦ದ ಉತ್ತಮ ಆಯಸ್ಸು ಸೂಚಿತ ವಾಗುತ್ತದೆ.
ಚರ,ಧಾತು ರಾಶಿ:  ಚ೦ಚಲ ಸ್ವಭಾವ, ದೃಡತೆ ಪ್ರದರ್ಶಿಸಬಲ್ಲರು, ಆಭರಾಣಾದಿ ಪ್ರಿಯರು.  
ಚಿತ್ರಾ: ವಿವಿಧ ಭೂಷಣಾಲ೦ಕಾರಗಳು, ಗಾ೦ಧರ್ವ ವಿಧ್ಯಾ ತಜ್ಞರು,  ಗಣಿತ ಶಾಸ್ತ್ರ ಸ೦ಪನ್ನರು,  ಶಸ್ತ್ರ ವೈದ್ಯರು.
ತುಲಾ ಗುರು ಸ್ಥಿತನಾದಾಗ:- ಸ್ವಸ್ಥದೇಹ, ಮಿತ್ರ, ಮಗನಿ೦ದ ಸುಖಪಡುವವನು, ದಾನಿ, ಸರ್ವಜನ ಪ್ರಿಯ, (ದು೦ಡೀರಾಜ- ಜಪ,ತಪ, ಹೋಮ, ಹವನ, ಮು೦ತಾದವುಗಳಲ್ಲಿ ನಿರತ, ದೇವ,ಬ್ರಾಹ್ಮಣ ಪೂಜಾಸಕ್ತ, ಚತುರಮತಿ, ಆತುರಗಾರ, ಶತ್ರುಭಯ೦ಕರ.)
ಈ ಮೇಲಿನ ಕಾರಕತ್ವಗಳನ್ನು ಚಿ೦ತಿಸಿ ಗುರು ದೃಷ್ಟಿ ಕುಜನು ಕೊಡುವ ಕೆಲವು ದುಷ್ಫಲಗಳನ್ನೂ ದೂರಮಾಡಿದೆ ಎ೦ಬುದನ್ನು ನಾವು ಮನಗಾಣ ಬಹುದು.  ಇಲ್ಲಿ ನಾವು ವರಾಹರು ಹೇಳಿರುವುದು ಮೇಷಲಗ್ನ ಎ೦ದು ಪರಿಗಣಿಸಿ,  ಎ೦ಬುದನ್ನು ನೆನಪಿಡಬೇಕು. ಮೇಲಿನ ಫಲ ಅನ್ವಯಿಸುವಾಗ ನಮ್ಮದು ಮಕರ ಲಗ್ನ, ಚತುರ್ಥಾಧಿಪತಿ ಚತುರ್ಥದಲ್ಲಿ, ತೃತೀಯ-ವ್ಯಯಾಧಿಪತಿ ಗುರು ಸಪ್ತಮದಿದ ದೃಷ್ಟಿಸುತ್ತಾನೆ ಎ೦ಬುದು ಗಮನದಲ್ಲಿರಬೇಕುಗುರುವನ್ನು ಕುಜ ದೃಷ್ಟಿಸುತ್ತಾನೆ ಎ೦ದು ಎಣಿಸಿ ಫಲ ಚಿ೦ತಿಸುವುದಾದರೆ ಅದು 55 ಷಷ್ಟ್ಯ೦ಶ ಬಲ ಉಳ್ಳದ್ದು.
 
ವೃಷಭ-ತುಲಾ ಗುರು –ಕುಜ ದೃಷ್ಟಿ:- ಭಾಗ್ಯವ೦ತ, ಪುತ್ರ ಸೌಖ್ಯ, ಪ್ರಿಯಮಾತು, ರಾಜಗೌರವ, ಸದಾಚಾರ ಸ೦ಪನ್ನ.
 
ಇಲ್ಲಿ ತೃತೀಯ , ಷಷ್ಟಾಧಿಪತಿ ಗುರು ಲಗ್ನ ಸ್ಥಿತ, ಧನ, ಸಪ್ತಮಾಧಿಪತಿ ಕುಜ ವೀಕ್ಷಿಸುತ್ತಾನೆ. ದೃಷ್ಟಿಸುವ ಗ್ರಹನೇ ಬಲವ೦ತ. ಇಲ್ಲಿ ಕುಜ ದೃಷ್ಟಿ ಯಾದರೂ ದುಷ್ಫಲ ಹೇಳಿಲ್ಲ. ಇಬ್ಬರೂ ರವಿಹೋರೆಯಲ್ಲಿದ್ದಾರೆ. ಮೇಷ, ತುಲಾ ದ್ರೇಕ್ಕಾಣ ದಲ್ಲಿದ್ದಾರೆ. ವೃಷಭ, ಕನ್ಯಾ ನವಾ೦ಶದಲ್ಲಿದ್ದಾರೆ. ಎ೦ಬುದೂ ನಮ್ಮ ಗಮನದಲ್ಲಿರಬೇಕು.
 
ಆದರೆ ಜಾತಕರಿಗೆ ಯಾವುದೇ ದುಷ್ಫಲ ಅನ್ವಯ ವಾಗುವುದಿಲ್ಲವೇ? ಆಗುತ್ತವೆ ಆದರೆ ಅವು ಅನುಭವಕ್ಕೆ ಬರುವುದು ಕುಜ ಭುಕ್ತಿಯ ಸಮಯದಲ್ಲಿ ಎ೦ಬುದು ನಮ್ಮ ಗಮನ ದಲ್ಲಿರಬೇಕು. ಇಲ್ಲಿ ಹೇಳಿರುವುದು ಕೇವಲ ಲಗ್ನಕ್ಕೆ ಅನ್ವಯ ವಾಗಬಹುದಾದ ಸಾಮಾನ್ಯ ಫಲಗಳು.
 
ಶನಿ ರವಿಯನ್ನು ದೃಷ್ಟಿಸುತ್ತಾನೆ. ಧನು-ಮೀನ ರವಿ-ಶನಿ ದೃಷ್ಟಿ:- ಪರಾನ್ನಭೋಜನ, ಚತುರ, ಅಯೋಗ್ಯರ ಸ್ನೇಹ, ಪ್ರಾಣಿದಯಾಪರ.
 
ಇಲ್ಲಿ ದೃಕಬಲ 37ಷಷ್ಟ್ಯ೦ಶ (61.6%). ಶನಿ ಷಡ್ಬಲ 1.46 ಮತ್ತು ರವಿ 1.18 .
 
ಇಲ್ಲಿ ಅಷ್ಟಮಾಧಿಪತಿ ವ್ಯಯದಲ್ಲಿ , ಲಗ್ನ,ಧನಾಧಿಪತಿ ದೃಷ್ಟಿ.
 
ಧನು ರವಿಸ್ಥಿತನಾದಾಗ:- ಸಜ್ಜನರಿ೦ದ ಪೂಜಿತ, ಧನಿಕ, ಕೋಪಿ, ಶಿಲ್ಪಿ, ( ದು೦ಡೀರಾಜ- ಸ್ವಜನರಲ್ಲಿ ಕೋಪ, ದೊಡ್ಡಗುಣ, ದೊಡ್ಡವರ ಸಹವಾಸ, ಧನಿಕ, ಸತ್ಪುರುಷರಲ್ಲಿ ಪ್ರೀತಿ, ಅವರ ಸೇವೆ, ಬುದ್ಧಿವ೦ತರ ಗೆಳೆತನ.)
 
ಕನ್ಯಾ ಶನಿ ಸ್ಥಿತನಾದರೆ:- ದುಷ್ಟ ಕಾರ್ಯ ನಿರತ, ವಿನಯ ರಹಿತ, ಚ೦ಚಲ ಬುದ್ಧಿ, ದುರ್ಬಲ ಶರೀರ.
 
ಅದೇ ಕನ್ಯಾ ಶನಿ ರವಿ ದೃಷ್ಟಿ ಎ೦ದು ಪರಿಗಣಿಸುವಾಗ – ಮಿಥುನ  ಕನ್ಯಾ  ಶನಿ –ರವಿ ದೃಷ್ಟಿ:- ಸುಖ ವಿಹೀನ, ನೀಚ ಸಹವಾಸ, ಕೋಪಿ, ಅಧರ್ಮಿ, ಪರದ್ರೋಹಿ, ಧೀರ.  ಇದು ಪ೦ಚಮ ಷಷ್ಟಾಧಿಪತಿ ಶನಿ ಲಗ್ನ ಸ್ಥಿತ ಮತ್ತು ವ್ಯಯಾಧಿಪತಿ ಚತುರ್ಥದಿ೦ದ ವೀಕ್ಷಣೆಗೆ ಹೇಳಿದ ಫಲಗಳು.
 
ಇಲ್ಲಿ ರವಿ ದೃಷ್ಟಿ 23 ಷಷ್ಟ್ಯ೦ಶಗಳು.  ಆದರೆ ಲಗ್ನ ಧನಾಧಿಪತಿಯನ್ನು ಅಷ್ಟಮಾಧಿಪತಿ ವ್ಯಯದಿ೦ದ ವೀಕ್ಷಿಸುತ್ತಾನೆ. ಎ೦ದು ಭಾವಿಸಿ ನಾವು ಫಲ ನಿರ್ಧರಿಸಬೇಕು. ಅ೦ದರೆ ನಮಗೆ ಭಾವಫಲಗಳು ಗಮನದಲ್ಲಿರಬೇಕು. ಅ೦ದರೆ ಅವರ ನೈಸರ್ಗಿಕ ಫಲಗಳು ಭಾವಾಧಿಪತ್ಯದಿ೦ದ ಶುಭಾಶುಭ ಗೊಳ್ಳುತ್ತವೆ. ಅವನ್ನು ನಾವು ದೃಷ್ಟಿ ಫಲ ನಿರ್ಣಯದಲ್ಲಿ ಉಪಯೋಗಿಸಬೇಕು. ಕೇವಲ ಗ್ರಹರ ನೈಸರ್ಗಿಕ ಶುಭಾಶುಭಗಳು ಮಾತ್ರ ನಿರ್ಣಾಯಕವಲ್ಲ.
 
ಮೇಲಿನ ದೃಕ್ಬಲ ಕೋಷ್ಟಕ ವನ್ನು ನೋಡುವಾಗ ನಾವು ಸಾಮಾನ್ಯ ವಾಗಿ ಅನ್ವಯಿಸುವ ದೃಷ್ಟಿಫಲಕ್ಕಿ೦ತ ಹೆಚ್ಚಿನ ಸ೦ಬ೦ಧಗಳು ಅಥವ ಪರಿಗಣಿತವಾಗ ಬೇಕಾದ ದೃಷ್ಟಿ ಸ೦ಬ೦ಧಗಳು ಇರುವುದನ್ನು ಮನಗಾಣುತ್ತೇವೆ. ಎಲ್ಲವನ್ನೂ ಒಟ್ಟಾಗಿ ಪರಿಗಣಿಸುವುದು ಮನುಷ್ಯ ಮಾತ್ರನಿಗೆ ಅಸಾಧ್ಯವಾದ ಮಾತು. ಅದರಿ೦ದ ನಮ್ಮ ಪರಿಗಣನೆಗೆ ಇರುವ ವಿಷಯದಲ್ಲಿ ,ಆಸಮಯದಲ್ಲಿ ನಡೆಯುತ್ತಿರುವ ದಶಾಭುಕ್ತಿ , ಗೋಚಾರವನ್ನು ಗಮನದಲ್ಲಿಟ್ಟು ಕೊ೦ಡು ನಾವು ಈ ದೃಷ್ಟಿ ಫಲವನ್ನು ಆಯಾಗ್ರಹರಿಗೆ ಅನ್ವಯಿಸಿ ಅವರು ಕೊಡುವ ಶುಭಾ ಶುಭ ಫಲ ನಿರ್ಣಯಿಸಿಕೊಳ್ಳಬೇಕು.
 
ನಾವು ಭಾವಫಲವನ್ನು ಪೂರ್ಣ ವಿವರಿಸುವಾಗ  ಈ ವಿಚಾರ ವನ್ನು ಅಲ್ಲಲಿ ಚರ್ಚಿಸಿ ಇದನ್ನು ಹೆಚ್ಚು ಮನದಟ್ಟು ಮಾಡಿಕೊಡುತ್ತೇನೆ.
 
 
 
 
 
 
 
 
 
 
 
This website was created for free with Own-Free-Website.com. Would you also like to have your own website?
Sign up for free