KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ಕಾಸಿಗೂ ಇದೆ ಗ್ರಹಚಾರದ ನಂಟು

 

 
ಪ್ರತಿಯೊಬ್ಬ ವ್ಯಕ್ತಿಗೆ ಯಾವ ಸಮಯದಲ್ಲಿ ದುಡಿಮೆ-ಆದಾಯ-ಲಾಭ ಇವೆಲ್ಲ ಬರುತ್ತದೆ? ಇದರಿಂದ ತನ್ನ ಅಗತ್ಯಗಳನ್ನು ಆತ ಹೇಗೆ ಪೂರೈಸಿಕೊಳ್ಳಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಇದಕ್ಕೆ ಜ್ಯೋತಿಷ್ಯದಲ್ಲಿ ಉತ್ತರವೂ ಇದೆ.
ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಹನ್ನೊಂದನೇ ಭಾವ ಲಾಭಸ್ಥಾನ. ಈ ಲಾಭಗಳಿಕೆ ಬಹುಮಟ್ಟಿಗೆ ವಿತ್ತಲಾಭವಾದರೂ ಅದರ ಜೊತೆಗೆ ಆಸ್ತಿ-ನಿರ್ವಹಣೆ ಗೌರವ ಸ್ಥಾನದ ಉದ್ಯೋಗದಿಂದ ಸಂಪಾದನೆ ಧರ್ಮದರ್ಶಿತ್ವ ಆಸ್ತಿಪಾಸ್ತಿಗಳ ವಾರಸು ಗಣ್ಯಸ್ಥಾನ
ಇವುಗಳಿಂದ ಬರುವ ವರಮಾನ ಸೇರಬಹುದು.

ಯಾವುದೇ ಜನ್ಮ ಕುಂಡಲಿಯಲ್ಲಿ ಹನ್ನೊಂದನೇ ಮನೆಯಲ್ಲಿರುವ ಗ್ರಹದ ಅಥವಾ ಗ್ರಹಗಳಸ ಹನ್ನೊಂದನೆ ಮನೆಯನ್ನು ಅಥವಾ ಹನ್ನೊಂದರ ಅಧಿಪತಿಯನ್ನು ವೀಕ್ಷಿಸುವ ಗ್ರಹ ಅಥವಾ ದಶಾಭುಕ್ತಿಗಳಲ್ಲಿ ಲಾಭಗಳಿಕೆಯಾಗುತ್ತಾನೆ. ಇದೇ ಫಲವನ್ನು ಎರಡನೇ ಮನೆಯಲ್ಲಿರುವ ಗ್ರಹದ ಅಥವಾ ಎರಡನೇ ಮನೆಯನ್ನು ವೀಕ್ಷಿಸುವ ಗ್ರಹದ ದಶಾಭುಕ್ತಿಗಳಲ್ಲಿ ನಿರೀಕ್ಷಿಸಬಹುದು.

ಧನಯೋಗದ ಲಕ್ಷಣಗಳು

ರವಿಯೂ ಸಿಂಹ ಲಗ್ನದಲ್ಲಿದ್ದು, ಕುಜ-ಗುರುಗಳಿಂದ ವೀಕ್ಷಿಸಿದರೆ ಅಥವಾ ಕೂಡಿದರೆ ಧನಯೋಗ ಉಂಟಾಗುತ್ತದೆ. ಚಂದ್ರನು ಕಟಕ ಲಗ್ನದಲ್ಲಿ ಗುರು-ಕುಜ ಸಹಿತನಾಗಿದ್ದು ಅಥವಾ ಅದನ್ನು ವೀಕ್ಷಿಸಿದರೆ ಧನಯೋಗ ಉಂಟಾಗುತ್ತದೆ. ಕುಜ ಮೇಷ ಲಗ್ನ ಅಥವಾ ವೃಶ್ಚಿಕ ಲಗ್ನದಲ್ಲಿ ಇದ್ದು, ಚಂದ್ರ-ಶುಕ್ರ ಶನಿ ಸಹಿತ ಅಥವಾ ಅದನ್ನು ವೀಕ್ಷಿಸುತ್ತಿದ್ದರೆ ಧನಯೋಗವುಂಟಾಗುತ್ತದೆ.

ಕುಜನು ವೃಶ್ಚಿಕದಲ್ಲಿದ್ದು, ದ್ವಿತೀಯಾಧಿಪತಿ ಧನಕಾರಕನಾದ ಗುರುವು ಲಗ್ನವನ್ನು, ಸಪ್ತಮದಲ್ಲಿರುವ ಶುಕ್ರವನ್ನು ಲಾಭಾಧಿಪತಿ ಬುಧನನ್ನು ವೀಕ್ಷಿಸಿದರೆ ಧನಯೋಗವುಂಟಾಗುತ್ತದೆ ಮತ್ತು ಚಂದ್ರನು ನವಮಾಧಿಪತಿಯಾಗಿ ಗುರುವನ್ನು ವೀಕ್ಷಿಸಿದರೂ ಧನಯೋಗವುಂಟಾಗುತ್ತದೆ. ಬುಧನು ಸ್ವಕ್ಷೇತ್ರವಾದ ಲಗ್ನದಲ್ಲಿದ್ದು, ಶನಿ-ಶುಕ್ರರಿಂದ ಕೂಡಿದ್ದರೆ ಅಥವಾ ವೀಕ್ಷಿತನಾದರೂ ಧನಲಾಭ ಉಂಟಾಗುತ್ತದೆ. ಗುರುವು ಸ್ವಕ್ಷೇತ್ರ ಲಗ್ನದಲ್ಲಿ ಬುಧಕುಜರೊಡಗೂಡಿಯೇ ಅವರಿಂದ ವೀಕ್ಷಿತನಾಗಿಯೋ ಇರಬೇಕು. ಶುಕ್ರನು ಸ್ವಕ್ಷೇತ್ರವಾದಲ್ಲಿ ಶನಿ ಬುಧನೊಡಗೂಡಿಯೋ ಅವರ ದೃಷ್ಟಿಗೊಳಗಾಗಿಯೋ ಇರಬೇಕು. ಈ ಎಲ್ಲ ಪ್ರಕರಣಗಳಲ್ಲಿ ಜಾತಕ ಅಪಾರವಾದ ಸಂಪತ್ತಿನ ಲಾಭ ಗಳಿಸುತ್ತಾನೆ.

ಲಗ್ನಾಧಿಪತಿ ಎರಡರಲ್ಲಿ, ಎರಡರ ಅಧಿಪತಿ ಹನ್ನೊಂದರಲ್ಲಿ, ಹನ್ನೊಂದರ ಅಧಿಪತಿ ಲಗ್ನದಲ್ಲಿದ್ದರೆ ಬಹುದ್ರವ್ಯಾರ್ಜನ ಯೋಗವುಂಟಾಗುತ್ತದೆ. ಜಾತಕ ಯಥೇಚ್ಛಾವಾಗಿ ಹಣ ಸಂಪಾದಿಸುತ್ತಾನೆ. ದೊಡ್ಡ ಆಸ್ತಿ ಮಾಡುತ್ತಾನೆ.

ಕಾಲ ಬಲವುಳ್ಳ ದ್ವಿತೀಯಾಧಿಪತಿ ಲಗ್ನಾಧಿಪತಿಯನ್ನು ಕೋಣಸ್ಥಾನಗಳಾದ 5-9ರಲ್ಲಿಯೂ ಅಥವಾ ಕೇಂದ್ರ ಸ್ಥಾನಗಳಾದ 1-4-7-10ರಲ್ಲಿ ಒಡಗೂಡಬೇಕು ಮತ್ತು ಶುಭ ವೀಕ್ಷಿತನಾಗಬೇಕು. ಆಗ ವ್ಯಕ್ತಿ ಮಧ್ಯಮ ವಯಸ್ಸಿನಲ್ಲಿ ಧನಾರ್ಜನೆ ಮಾಡುತ್ತಾನೆ. ವ್ಯಕ್ತಿ ಸ್ಥಿತಿವಂತನಾಗಲು ತನ್ನ ಜಾತಕದಲ್ಲಿ ಲಗ್ನ, ದ್ವಿತೀಯ ಏಕದಶ, ಪಂಚಮ, ನವಮಗಳ ಅಧಿಪತಿಗಳ ಸಂಬಂಧ ಪಡೆದಿರಬೇಕು.

ದ್ವಿತೀಯಾಧಿಪತಿಯೂ, ಪ್ರಥಮದ ಅಧಿಪತಿಯೂ, ನೈಸರ್ಗಿಕ ಶುಭಗ್ರಹವೊಂದರ ಜೊತೆಗೆ ಇರುವ ರಾಶಿಗಳ ಒಡೆಯರು ಲಗ್ನದಲ್ಲಿ ಬಲಯುತರಾಗಿರಬೇಕು. ವ್ಯಕ್ತಿಯು ನಾನಾ ವಿಧಾನಗಳಿಂದ ತನ್ನ ವಯಸ್ಸಿನ ಕಡೆಯ ಕಾಲದಲ್ಲಿ ಧನಾರ್ಜನೆ ಮಾಡುತ್ತಾನೆ.

ದ್ವಿತೀಯಾಧಿಪತಿ, ದಶಮಾಧಿಪತಿಗಳು ಕೇಂದ್ರದಲ್ಲಿ ಕೂಡಿ ಲಗ್ನಾಧಿಪತಿ ಇರುವ ನವಾಂಶಾಧಿಪತಿಯಿಂದ ವೀಕ್ಷಿತನಾಗಬೇಕು. ಈ ಜಾತಕ ಚಿಕ್ಕವಯಸ್ಸಿನಲ್ಲಿ ಅಪಾರ ಸಂಪತ್ತು ಗಳಿಸಿಕೊಳ್ಳುತ್ತಾನೆ. ಮಾಹಿತಿಗಾಗಿ 9916222097
 
This website was created for free with Own-Free-Website.com. Would you also like to have your own website?
Sign up for free