ನಾವು ಬೀದಿಯಿಂದ ನಮ್ಮ ಮನೆಯನ್ನು ಪ್ರವೇಶಿಸುವ ಮೊದಲ ಬಾಗಿಲನ್ನು ಸಿಂಹದ್ವಾರ ಅಥವಾ ಮುಂಬಾಗಿಲು ಎನ್ನುತ್ತೇವೆ. ಮನೆಯಿಂದ ಹೊರಗೆ ನಡೆಯುವ ನಡತೆ ನಮ್ಮ ಜೀವನವನ್ನೇ ಮಾರ್ಪಡಿಸುತ್ತದೆ. ಉಚ್ಚ ಸ್ಥಾನದಲ್ಲಿರುವ ನಡತೆಯ ಬದುಕು ಉನ್ನತವಾಗಿದ್ದರೆ, ನೀಚ ಸ್ಥಾನದಲ್ಲಿರುವ ನಡತೆಯ ಬದುಕು ಕಷ್ಟಕರವಾಗಿರುತ್ತದೆ.
ಪೂರ್ವ ಈಶಾನ್ಯ, ದಕ್ಷಿಣ ಆಗ್ನೇಯ, ಪಶ್ಚಿಮ ವಾಯುವ್ಯಗಳನ್ನು ಉಚ್ಚ ಸ್ಥಾನವೆನ್ನುತ್ತೇವೆ. ಪೂರ್ವ ಆಗ್ನೇಯ, ದಕ್ಷಿಣ ನೈರುತ್ಯ, ಉತ್ತರ ನೈರುತ್ಯ, ಉತ್ತರ ವಾಯುವ್ಯಗಳನ್ನು ನೀಚ ಸ್ಥಾನಗಳೆನ್ನುತ್ತೇವೆ.
ಯಾವ ಮನೆಯನ್ನು ಬಗ್ಗಿ ಪ್ರವೇಶಿಸಬೇಕೋ, ಅಂದರೆ ಯಾವ ಮನೆಗೆ ಚಿಕ್ಕ ಬಾಗಿಲಿರುವುದೋ, ಆ ಮನೆಯ ಯಜಮಾನನಿಗೆ ದಾರಿದ್ರ್ಯ, ಸಂತಾನ ನಷ್ಟ ಇತ್ಯಾದಿ ಅಶುಭ ಫಲ ಉಂಟಾಗುತ್ತದೆ. ಯಾವ ಮನೆಯಲ್ಲಿ ಉಚ್ಚ ಸ್ಥಾನದಲ್ಲಿದ್ದ ಮುಂಬಾಗಿಲಿನಿಂದ ಗಾಳಿ, ಬೆಳಕು ಪ್ರವೇಶಿಸುವುದೋ, ಆ ಮನೆಯಲ್ಲಿ ಆರೋಗ್ಯ, ಸಂಪತ್ತು, ವಂಶವೃದ್ಧಿ, ಪುರುಷರಿಗೆ ಬಲ ಇರುತ್ತದೆ. ಯಾವ ಮನೆಯಲ್ಲಿ ಹಗಲು ಕತ್ತಲು ಇರುತ್ತದೋ ಆ ಮನೆಯಲ್ಲಿ ಹೆಣ್ಣು ಬಲಿಷ್ಠಳಾಗಿರುತ್ತಾಳೆ.
ಮುಂಬಾಗಿಲ ಎದುರುಗಡೆ ಕುಣಿ, ಶೌಚಾಲಯದ ಕುಣಿ, ತೆಂಗಿನ ಮರ, ಬೇರೆ ಎತ್ತರವಾದ ಮರಗಳು, ವಿದ್ಯುತ್, ಟೆಪಿಫೋನ್ ಕಂಬಗಳು, ಮೆಟ್ಟಿಲುಗಳು, ದೊಡ್ಡ ಅಳತೆಯಲ್ಲಿರುವ ತುಳಸಿಕಟ್ಟೆ ಇರಬಾರದು.
ಎಂಟೂ ದಿಕ್ಕುಗಳಲ್ಲಿ ಇಟ್ಟ ಮುಂಬಾಗಿಲುಗಳ ಫಲಗಳು ಹೀಗಿರುತ್ತವೆ:
ಪೂರ್ವ ಈಶಾನ್ಯ: ಕೀರ್ತಿ, ಪ್ರತಿಷ್ಠೆ, ವಂಶಾಭಿವೃದ್ಧಿ, ಗೌರವ, ಉತ್ತಮ ಆದಾಯ ಇರುತ್ತದೆ.
ಪೂರ್ವ ಆಗ್ನೇಯ: ಪುರುಷರ ಶಕ್ತಿ ಕುಗ್ಗುತ್ತದೆ. ಜೂಜಾಟ, ಕುಡಿತಕ್ಕೆ ಸಿಲುಕಿ ಹಾಳಾಗುತ್ತಾರೆ.
ದಕ್ಷಿಣ ಆಗ್ನೇಯ: ಧನ, ಧಾನ್ಯ ವೃದ್ಧಿ, ಅಧಿಕಾರ, ವಿದ್ಯೆ ಪ್ರಾಪ್ತಿ.
ದಕ್ಷಿಣ ನೈರುತ್ಯ: ಅಕ್ರಮ ಸಂಬಂಧಗಳು, ಸ್ತ್ರೀಯರಿಗೆ ಭಯಂಕರ ರೋಗ, ಸ್ತ್ರೀಯರ ಅಕಾಲ ಮರಣ, ದುರ್ಮರಣ ಸಂಭವ.
ಪಶ್ಚಿಮ ನೈರುತ್ಯ: ಪುರುಷರ ಅಕ್ರಮ ಸಂಬಂಧ, ಕೆಟ್ಟ ಪ್ರವರ್ತನೆ, ಜೈಲು ಶಿಕ್ಷೆ, ಪುರುಷರ ಅಕಾಲ ಮರಣ, ದುರ್ಮರಣ,
ಪುರುಷರಿಗೆ ಭೀಕರ ರೋಗ ಉಂಟಾಗುತ್ತದೆ.
ಪಶ್ಚಿಮ ವಾಯುವ್ಯ: ಕೀರ್ತಿ, ಪ್ರತಿಷ್ಠೆ, ರಾಜಕೀಯದಲ್ಲಿ ಅಭಿವೃದ್ಧಿ, ಮಕ್ಕಳು ವಿದ್ಯಾವಂತರೂ, ಪ್ರಯೋಜಕರೂ ಆಗುವರು.
ಉತ್ತರ ವಾಯುವ್ಯ: ಕೋರ್ಟ್-ಕಚೇರಿ ವ್ಯವಹಾರಗಳು, ಅಶಾಂತಿ, ಜಗಳಗಳು ಸಂಭವಿಸುತ್ತವೆ.
ಉತ್ತರ ಈಶಾನ್ಯ: ಧನ, ಧಾನ್ಯ ಅಭಿವೃದ್ಧಿ, ಯೋಗ್ಯ ಸಂತಾನ, ಸ್ತ್ರೀಯರಿಗೆ ಸುಖ, ಶಾಂತಿ ಇರುತ್ತದೆ.
ನೀವು ನನ್ನನ್ನು ಈ-ಮೇಲ್ ಮತ್ತು ಫೋನ್ ಮುಖಾಂತರ ಸಂಪರ್ಕಿಸಬಹುದು. ಪ್ರದೀಪ್ ಕೃಷ್ಣ ಈ-ಮೇಲ್: pradeepkrishna.mys@gmail.com ಮೊಬೈಲ್: 9916222097