KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ಬಾಳಿನ ಜ್ಯೋತಿ ಜ್ಯೋತಿಷ್ಯ

 
 
 
 
ಕತ್ತಲ ಬಾಳಿನ ಜ್ಯೋತಿ ಜ್ಯೋತಿಷ್ಯ
 
 


'ವಿಧಾತ್ರಾ ಲಿಖಿತಾ ಯಾಸೌ ಲಲಾಟೇಕ್ಷರಾ ಮಾಲಿಕಾ1 ದೈವಜ್ಞಸ್ತಾಂ ಪಠೇದ್ ವ್ಯಕ್ತಂ ಹೋರಾ ನಿರ್ಮಲಚಕ್ಷುಷಾ' ಎಂದಿದೆ ಜ್ಯೋತಿಷ್ಯಶಾಸ್ತ್ರ. ಸಿದ್ಧಾಂತ, ಸಂಹಿತಾ ಮತ್ತು ಹೋರಾಶಾಸ್ತ್ರಗಳ ಸದ್ಗುರು ಮುಖೇನ ಕಲಿತು, ಅಧ್ಯಯನ, ದೇವತಾ ಉಪಾಸನಾರತನಾದ ದೈವಜ್ಞನ ನಿರ್ಮಲ ಮನಸ್ಸಿನ ಮೂಲಕ ಭವಿಷ್ಯತ್, ಭೂತ-ವರ್ತಮಾನಗಳನ್ನು ದೇಶ ಕಾಲ ಪರಿಸ್ಥಿತಿ ನಿಮಿತ್ತ ವ್ಯಕ್ತವಾಗುವುದು. ಇದೆಲ್ಲ ಏನೂ ಇಲ್ಲದೇ-ಇಂದಿನ ಸೋ ಕಾಲ್ಡ್ ಜ್ಯೋತಿಷಿಗಳೂ ಮತ್ತು ಜ್ಯೋತಿಷ್ಯವನ್ನು ನಿಂದಿಸುವರು ಇಬ್ಬರಿಗೂ ಇದೆಲ್ಲದರ ಪರಿಜ್ಞಾನವಿಲ್ಲದೇ ಒಂದು ಮಹೋನ್ನತ್ತ ಪ್ರಾಚೀನ ವಿಜ್ಞಾನವನ್ನು ಅಧೋಗತಿಗೆ ತಳ್ಳಲು ಹವಣಿಸುತ್ತಿಹರು.

ಜ್ಯೋತಿಷ್ಯಶಾಸ್ತ್ರದ ಭಾಗವಾದ 'ಫಲ ಜ್ಯೋತಿಷ್ಯ'ವೂ ಪೂರ್ಣವಾದ ವಿಜ್ಞಾನದ ಕಾರ್ಯ ಕಾರಣ ಸಿದ್ಧಾಂತವೇ ಆಗಿದೆ. ಅದರ ಬಳಕೆ ಅತಿಯಾಗಿ, ವೈಚಾರಿಕತೆ ದೂರವಾಗಿ ಹೋದ ಕಾರಣ ಈ ಎಲ್ಲ ಮೂಢತೆಯನ್ನು ಜ್ಯೋತಿಷ್ಯಕ್ಕೆ ಒಟ್ಟಾಗಿ ಹೇರಲಾಗುತ್ತಿದೆಯೇ ಹೊರತು-ಫಲ ಜ್ಯೋತಿಷ್ಯ ಸುಳ್ಳಲ್ಲ.

ವೈದ್ಯಕೀಯ ಔಷಧಗಳ ಹೋಮಿಯೋ, ಅಲೋಪಥಿ, ಆಯುರ್ವೇದಗಳ ವಸ್ತು ಮಾರಾಟ ವಿಜ್ಞಾಪನೆಗಳನ್ನೇ ಉದಾಹರಣೆಗೆ ನೋಡಿ. ಆಯಾ ವಿಭಾಗದ ಔಷಧಗಳು ಹೇಳಿದಂತಹ ಕೆಲಸವನ್ನು-ಫಲವನ್ನು ಶೇ.50ಕ್ಕಿಂತ ಹೆಚ್ಚು ನೀಡುವುದಿಲ್ಲ! ಹಾಗೆಂದು ವೈದ್ಯ ವಿಜ್ಞಾನವನ್ನೇ ಹೀಯಾಳಿಸಲಾಗುವುದೇ?! ಇನ್ನು ವಿಜ್ಞಾನ ವಿಷಯಗಳಾದ ಭೌತ, ರಸಾಯನ, ಜೀವಶಾಸ್ತ್ರಗಳೇ ಮೊದಲಾದ ಉಪನ್ಯಾಸಕರೇನಿದ್ದಾರೆ, ಅವರಲ್ಲಿ ಎಷ್ಟು ಮಾತ್ರ ಜನರು ಆಯಾ ವಿಷಯದ ಬಗ್ಗೆ ತಲಸ್ಪರ್ಶಿ ಜ್ಞಾನ ಮತ್ತು ಮನದಟ್ಟು ಮಾಡಿಕೊಡಬಲ್ಲವರಿದ್ದಾರೆ? ಹಾಗೆಂದು ವಿಜ್ಞಾನವನ್ನು ನಾವು ಹೀಯಾಳಿಸಲಾದೀತೇ? ಸಹಸ್ರೇಷು ಪಂಡಿತಃ ಎಂದಿವೆ ಶಾಸ್ತ್ರಗಳು. ಯಾವುದೇ ವಿಷಯವಿರಲಿ, ಅದರಲ್ಲಿ ಯಾರೋ ಒಂದಿಬ್ಬರು ನಿಪುಣರಿರುತ್ತಾರೆ ಮತ್ತು ಅದನ್ನು ರುಜುವಾತು ಮಾಡಬಲ್ಲವರಿರುತ್ತಾರೆ. ಅದೂ ಅವರ ಪೂರ್ವ ಕರ್ಮಫಲ ಮತ್ತು ಸಂಸ್ಕಾರ ಯೋಗ್ಯತೆಯನ್ನೇ ಅವಲಂಬಿಸಿದೆ. ಹಾಗೆಯೇ ಜ್ಯೋತಿರ್ವಿಜ್ಞಾನವೂ ಮರೆಯದಿರೋಣ.

ಇನ್ನು ಫಲಜ್ಯೋತಿಷ್ಯವು ಜನ್ಮಾಂತರ ಕರ್ಮ ಕಾರಣಗಳನ್ನು ವಿಂಗಡಿಸಿ, ಅದಕ್ಕೆ ದೇವತ್ವ, ಆಸುರಿಯ ಮತ್ತು ಮಾನುಷ ಫಲಗಳೇನು ಎಂಬುದನ್ನು ನಿಯತ್ತಾಗಿ ವಿಶ್ಲೇಷಿಸಿ ನೊಂದ ಜೀವಕ್ಕೆ ಸಾಂತ್ವನ ನೀಡುವಲ್ಲಿ ಸಮರ್ಥವಾಗಿದೆ. ಅನರಿವು, ಹುಂಬತನ ಮತ್ತು ಪ್ರೆಸೆಂಟೇಶನ್ ಕೊರತೆಯಿಂದ ಅದು ಬಾಲಿಷವಾದರೆ ಶಾಸ್ತ್ರದ್ದೇನು ತಪ್ಪು?! ಚಿಂತಿಸಬೇಕಾದ ವಿಷಯವಿದು.

ಜ್ಯೋತಿಷ್ಯವು ತತ್ತ್ವಶಾಸ್ತ್ರದ ಅಂಗವಾಗಿದೆ, ವೇದ ಪ್ರತಿಪಾದ್ಯವಾಗಿದೆ. ದೇವರು, ಸೃಷ್ಟಿ, ಕರ್ಮ, ಜ್ಞಾನ, ಕಾಲ, ಜನ್ಮಾಂತರಗಳೆಂಬ ಆದಿಭೂತ ತತ್ತ್ವಗಳನ್ನು ಬಲವಾಗಿ ಪ್ರತಿಪಾದಿಸುವ ಸ್ವಭಾವದ್ದಾಗಿದೆ. ಇದಾವುದರ ಬಗ್ಗೆಯೂ ನಂಬಿಕೆ, ಜಿಜ್ಞಾಸೆ-ತಡಪ್‌ಗಳೇ ಇಲ್ಲದ ಮಂದಿ ಅಂದೂ ಇದ್ದರು. ಇಂದಿಗೂ ಎಂದೂ ಇರುತ್ತಾರೆ. ಇದು ಜೀವ ಸೃಷ್ಟಿಯ ರಹಸ್ಯವೇ ಆಗಿದೆ. ಅದನ್ನು ಭೇದಿಸುವರು, ಛೇಡಿಸುವರು ಎರಡನ್ನೂ ಸೃಷ್ಟಿಯು ಲಾಲಿಸುತ್ತದೆ. ಇದೇ ಅದರ ಬ್ಯೂಟಿ ಸಹ!

ಇನ್ನು ಲೇಖಕರು ಹೇಳಿದಂತೆ, ಸಾಕ್ಷರತೆ-ವಿಜ್ಞಾನ ಬೆಳೆಯುತ್ತಿಹ ಕಾಲದಲ್ಲೂ ಜ್ಯೋತಿಷ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ! ಹೌದು ಇದು ಹೀಗಾಗಬೇಕಾದ್ದೇ. ಇದರಲ್ಲಿ ವಿಪರ್ಯಾಸವೇನಿದೇ?! ಏಕೆಂದರೆ ಅನಂತ ಕೋಟಿ ಕಾಲಘಟ್ಟ ಕಳೆದ ತರುವಾಯ ನಾವಿಂದು ಈ ವಿಜ್ಞಾನ-ಸಾಕ್ಷರತೆ-ತಂತ್ರಜ್ಞಾನಗಳನ್ನೆಲ್ಲ ಪಡೆದಿರುವುದು. ಸುಮ್ಮನೆ ಯಾರೋ ಬಿಳಿ ಮನುಷ್ಯ ಥಟ್ಟನೆ ಒಂದು ದಿನ ವಿಜ್ಞಾನಪಡೆದುದ್ದಲ್ಲ. ನೆನಪಿರಲಿ. ಹೇಗೆ ಬೆಳಗ್ಗೆ 6ರ ಸುಮಾರಿಗೆ ಸೂರ್ಯರಶ್ಮಿ ಭೂಮಿಯನ್ನು ದಿಢೀರನೆ ಸ್ಪರ್ಶಿಸದೆ-ಅನೇಕ ಸಾವಿರ ಮೈಲು ವೇಗ ಕಳೆದ ಪುನಃ ಬೆಳಗ್ಗೆ ಆ ಕಕ್ಷೆಗೆ ಬಂದು ಬೆಳಕಾಗುವುದೋ ಹಾಗೆಯೇ. ಈ ಎಲ್ಲ ವಿಷಯವೂ ಈ ಜಗತ್ತಿಗೆ ಮೊತ್ತ ಮೊದಲು ತಿಳಿಸೋಣ ಬಡಿಸಿದ್ದು ಭಾರತೀಯ ವೇದಶಾಸ್ತ್ರಗಳು. ಇದನ್ನು ಕೇವಲ ಹಲ ಕೆಲ ನೂರು ಮಂದಿ ತಲೆಕೆಟ್ಟ ಜ್ಯೋತಿಷಿಗಳು ಹಾಳು ಮಾಡುತ್ತಿರುವರು ಎಂದ ಮಾತ್ರಕ್ಕೆ ಕೇವಲ ಕೆಲ ಸಾವಿರ ವಿಚಾರವಾದಿಗಳು ವಿರೋಧಿಸುವರು ಎಂದ ಮಾತ್ರಕ್ಕೆ ಶಾಸ್ತ್ರವೇ ಸುಳ್ಳಾಗುವುದೇ? ಹೌದು. ಸುಳ್ಳಾಡಬಹುದು. ಆದರೆ ಸತ್ಯವನ್ನು ಸುಳ್ಳು ಮಾಡುವ ಬಗ್ಗೆ ವಿಧಿ ನಿರ್ಮಿಸಿಯೇ ಇಲ್ಲ.

ಇದೇ ವಿಮಾನ ಸಂಸ್ಥೆಯು ಎಂದಿಗೂ ಟೇಕ್ ಆಫ್ ಆಗೋಲ್ಲ ಎಂದು ಸರಾಸಗಟಾಗಿ ನಾನೇ ಮಾಧ್ಯಮದಲ್ಲಿ ಸಕಾರಣ ಕೊಟ್ಟು ಸಿದ್ಧಪಡಿಸಿರುವೆ. ಇಂಥ ಅನೇಕ ಪಂಥ-ಪ್ರಶ್ನೆಗಳನ್ನು ಸಹ ಬಿಡಿಸಿರುವೆ. ಎಲ್ಲಿ ನನ್ನ ಜ್ಞಾನ ಸೀಮಿತವೋ ಅಲ್ಲಿ ನನಗೆ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಕೈಚೆಲ್ಲಿರುವೆ. ಆದರೆ ಎಂದಿಗೂ ಶಾಸ್ತ್ರಗಳು ಸೀಮಿತ ಎಂದಿಲ್ಲ. ಆಗುವುದೂ ಇಲ್ಲ.

ಜ್ಯೋತಿಷ್ಯವು ಐಂದ್ರಿಕವೂ-ಅತೀಂದ್ರಿಯವೂ ಎರಡೂ ಹೌದು. ಹಾಗಾಗಿ ಇದನ್ನು ಅಳೆಮಾಪನ ವಿಜ್ಞಾನ ಕ್ರಮದಲ್ಲಿ ಜೋಡಿಸಿಡಲು ಆಗೋಲ್ಲ. ಆದರೆ ನಿಶ್ಚಯವಾಗಿ ಮಾರ್ಗದರ್ಶನ, ಮನೋವಿಕಾಸ ಮತ್ತು ಸಮಾಜ ಪರಿವರ್ತನೆಗಳನ್ನು ಸಮರ್ಥವಾಗಿ ಮಾಡಬಹುದು. ಉತ್ತಮ ಜ್ಯೋತಿಷಿ, ಮಂತ್ರವಿದ್ಯೆ, ಪುರೋಹಿತ, ಅರ್ಚಕ ಇದು ಒಂದು ದೈವದತ್ತವಾದ ವರದಾನ. ಅವರಿಗೆ ಅಂಥ ಉತ್ತಮ ದರ್ಜೆಯಲ್ಲಿರುವವರಿಗೆ ಇಂದು ಪ್ರೋತ್ಸಾಹವಾದರೂ ಏನು?! ಭದ್ರತೆ ಏನು? ಅವರು ಕಲಿತ ವಿದ್ಯೆ, ಜನರು ತೋರುವ ಪ್ರೀತಿ-ಸಹಾಯದಿಂದ ಅವರು ಜೀವಿಸಬೇಕೇ ಹೊರತು ಅನ್ಯ ಮಾರ್ಗವಿಲ್ಲ. ಅದರಲ್ಲಿ ಜೊಳ್ಳು ಬೆರೆತಂತೆ ಅನೇಕ ಹೋಕರು ಸೇರಿರುವರು, ದುರದೃಷ್ಟದಿಂದ. ಹಾಗೆಂದು ಶಾಸ್ತ್ರವನ್ನು, ಜ್ಯೋತಿಷಿಯನ್ನು ನಿಂದನೀಯವಾಗಿ ಕಾಣುವುದು ಅಪರಾಧವೇ ಸರಿ.

ಕೊನೆಯದಾಗಿ, ಎಲ್ಲ ವಿದ್ಯೆಯಲ್ಲೂ ಉತ್ತಮಾಧಮ ಜನರು ಇದ್ದೇ ಇರುತ್ತಾರೆ. ಅಧಿಮತೆಯನ್ನು-ಜೊಳ್ಳನ್ನು ಬೇರ್ಪಡಿಸಿ-ಕಾಳನ್ನು ಹಿಡಿಯುವ ಕಲೆ, ರೂಢಿಯಿಂದ-ಚಿಕಿತ್ಸೆಕತೆಯಿಂದ ಬರುವುದೇ ಹೊರತು ಶುಷ್ಕ ತರ್ಕ-ತೆಗಳುವಿಕೆಯಿಂದ ಅಲ್ಲ.
 
This website was created for free with Own-Free-Website.com. Would you also like to have your own website?
Sign up for free