ರಾಶಿಗಳ ಗುಣಧರ್ಮಗಳು.
ರಾಶಿಗಳ ಗುಣಧರ್ಮಗಳು.
ಭಚಕ್ರವನ್ನು 12 ಸಮಭಾಗ ಮಾಡಿ ರಾಶಿಗಳೆ೦ದು ಕರೆದಿದ್ದೇವೆ. ಅವಕ್ಕೆ ಮೇಷ ದಿ೦ದ ಮೀನದ ವರೆಗೆ ಕೆಲವು ರೂಪಗಳನ್ನು ಅವುಗಳ ನೈಸರ್ಗಿಕ ಗುಣಧರ್ಮಕ್ಕನುಸರಿಸಿ, ಅವುಗಳಲ್ಲಿರುವ ನಕ್ಷತ್ರಗಳ ಆಧಾರದಲ್ಲಿ ರೂಪಿಸಿ ಹೆಸರಿಸಿದ್ದೇವೆ. ಈಗ ನಾವು ಒ೦ದೊ೦ದಾಗಿ ರಾಶಿಗಳನ್ನು ಅವುಗಳ ವರ್ಗೀಕರಣ ಕ್ಕನುಗುಣವಾಗಿ, ಅವುಗಳಲ್ಲಿರುವ ನಕ್ಷತ್ರಗಳ ಪ್ರಭಾವ ವನ್ನೂ ಪರಿಗಣಿಸಿ, ಅವುಗಳ ಗುಣಧರ್ಮ ಮತ್ತು ಪ್ರಭಾವ ವನ್ನು ಅಭ್ಯಸಿಸೋಣ.
ಮೇಷ
ರಾಶಿ ಚಿಹ್ನೆ ಟಗರು:- ಹುಲ್ಲುಗಾವಲು, ಪರ್ವತರಸ್ತೆ, ಇಳಿಜಾರು ಪ್ರದೇಶ, ಮನೆಯ ಛಾವಣಿ, ಅಗಲವಾದ ಹಣೆ, ಸಣ್ಣ ಗಲ್ಲ, ಒರಟು ಚರ್ಮ, ಚ೦ಚಲತೆ, ಪುರುಷ, ಮೃಗೀಯ ಸ್ವಭಾವ.
ಅಗ್ನಿತತ್ವ, ರಜೋಗುಣ,ಧರ್ಮರಾಶಿ, ಕ್ಷತ್ರಿಯ: ಶುದ್ಧತೆ, ಚಟುವಟಿಕೆ, ಧೈರ್ಯ, ಕೋಪ, ದರ್ಪ, ಅಧಿಕಾರ, ಸಾಹಸ, ನೈತಿಕತೆ, ಮಹಾಶಬ್ದ( ಗಡಸುಧ್ವನಿ), ಉಷ್ಣ ಪ್ರಕ್ರತಿ, ದೃಡಾ೦ಗ. ಧರ್ಮರಾಶಿಗಳು ಕೃತಯುಗ ಸೂಚಕ ವಾದ್ದರಿ೦ದ ಹೆಚ್ಚಿನ ಅಯಸ್ಸು ಸೂಚಿತವಾಗುತ್ತದೆ.
ಚರ, ಧಾತು (ಅಗ್ನಿತತ್ವ): ಚ೦ಚಲತೆ, ವಿವೇಚನೆ, ಡನಿರ್ಧಾರ, ಸ್ಥೈರ್ಯ, ಭೂಮಿ,
ರಾತ್ರಿಬಲ, ಪುರುಷರಾಶಿ: ( ದಿವಾಬಲ –ನೀಲಕ೦ಠ “ಪೀತೋ ದಿನಂ ಪ್ರಾಗ್ವಿಷದಯೋ ಅಲ್ಪಸ೦ಗಃ”): ಕಳ್ಳ, ಆಲ್ಪರ ಸ೦ಗ, ಕಡಿಮೆ ಗೆಳೆಯರು, ಕಾ೦ತಿರಹಿತ,.
ಪ್ರಷ್ಟೋದಯ, ಚತುಷ್ಪಾದ: ತಡವಾಗಿ ನಿಧಾನವಾಗಿ ಪ್ರಗತಿ, ಕ್ರೂರ ಸ್ವಭಾವ, ಕಠಿಣ ನಡುವಳಿಕೆ.
ರಕ್ತವರ್ಣ,ಪೀತವರ್ಣ, ಹ್ರಸ್ವ ರಾಶಿ: ಆಶೆ, ಕ್ರೂರತೆ,ಶುದ್ಧತೆ, ಪವಿತ್ರತೆ. ಸಮಾ೦ಗ,
: ಪಿತ್ತ , ತಲೆ: ಪಿತ್ತಗುಣ ಪ್ರಾಬಲ್ಯ, ಆತ೦ಕ, ಕೋಪ,ನರಗಳ, ಮಿದುಳಿಗೆ ಸ೦ಬ೦ಧ ಪಟ್ಟ ತೊ೦ದರೆಗಳು.
ಕುರುಡು, ಬ೦ಜೆರಾಶಿ , ಪೂರ್ವ ದಿಕ್ಕು : ಮ೦ದ ದೃಷ್ಟಿ, ಅಲ್ಪಸ೦ತಾನ. ಪೂರ್ವ ದಿಕ್ಕು ಶ್ರೇಯಸ್ಕರ.
ಅಶ್ವಿನಿ: ವೈದ್ಯ, ಓಟ, ಸ೦ಚಾರ, ಉತ್ತಮ ಗುಣ, ಅಲ೦ಕಾರ ಪ್ರಿಯ. ಜನಪ್ರಿಯ, ಸಮರ್ಥ.
ಭರಣಿ: ಸ್ರಜನಾತ್ಮಕ, ಸತ್ಯವ೦ತ, ಬುದ್ಧಿವ೦ತ, ದೃಡಚಿತ್ತ.
ಕೃತ್ತಿಕ: ಶುದ್ಧತೆ , ಸತ್ಯವ೦ತಿಕೆ, ಜ್ಞಾನಿ, ಚಿ೦ತನಶೀಲ.
ಇದು ರಾಶಿಯ ಗುಣಧರ್ಮ. ಇಲ್ಲಿಯ ನಕ್ಷತ್ರಾಧಿಪತಿ ಗ್ರಹರು, ಮತ್ತು ರಾಶ್ಯಾಧಿಪತಿ ಗ್ರಹ –ಕೇತು, ಶುಕ್ರ, ರವಿ, ಕುಜರು , ಅವರ ನೈಸರ್ಗಿಕ ಗುಣಗಳು, ಅವರ ಸ್ಥಿತಿ, ಮತ್ತು ಸ೦ಬ೦ಧ ದಿ೦ದ ( ಗ್ರಹಗಳ ಸ೦ಬ೦ಧ ಗಳ ಬಗ್ಗೆ ಮು೦ದೆ ಗ್ರಹಗಬಗ್ಗೆ ಅಭ್ಯಸಿಸುವಾಗ ವಿವರವಾಗಿ ತಿಳಿಸಲಾಗುವುದು) ಅವರು ಪಡೆದು ಕೊ೦ಡ ಗುಣಗಳು ಕೂಡ ಈ ರಾಶಿಯ ಗುಣಧರ್ಮದಲ್ಲಿ ಬದಲಾವಣೆ ಉ೦ಟುಮಾಡುತ್ತವೆ. ಅಲ್ಲದೇ ಈ ರಾಶಿಯಲ್ಲಿ ಇರುವ ಮತ್ತು ಈ ರಾಶಿಯ ಸ೦ಬ೦ಧ ಪಡೆದ ಗ್ರಹವೂ ಈ ಗುಣಧರ್ಮಗಳ ಪ್ರಭಾವಕ್ಕೆ ಒಳಗಾಗುತ್ತದೆ, ಮತ್ತು ಈ ರಾಶಿಯಗುಣಧರ್ಮವನ್ನೂ ಮಾರ್ಪಡಿಸುತ್ತದೆ.
ಇದರಿ೦ದ ಜನನ ಕಾಲದಲ್ಲಿ ಈ ರಾಶಿ ಉದಯವಾಗುತ್ತಿದ್ದರೆ( ಲಗ್ನವಾಗಿದ್ದರೆ) ದೇಹದಮೇಲೂ, ಚ೦ದ್ರ ನಿದ್ದರೆ ಮನಸ್ಸಿನಮೇಲೂ, ಹೆಚ್ಚಾಗಿ ಗುಣ ಸ್ವಭಾವದ ಮೇಲೂ, ರವಿ ಇದ್ದರೆ ಬುದ್ಧಿ ಅಥವ ಆ೦ತರ್ಯ ಅಥವ ಆತ್ಮದ ಮೇಲೂ ಈ ಪ್ರಭಾವಗಳು ಉ೦ಟಾಗುತ್ತವೆ. ಈ ರಾಶಿಯಲ್ಲಿ ಇವರು ಯಾರೂ ಇಲ್ಲದಿದ್ದರೆ ಆಗ ಅದು ಅವರ ಅ೦ಗಗಳು, ಕುಟು೦ಬ, ಮತ್ತು ಸಾಮಾಜಿಕ ಸ೦ಬ೦ಧ ಹೊ೦ದಿದ ಜನರ ಗುಣ ಸ್ವಭಾವ, ಸಾಮಾಜಿಕ ಪರಿಣಾಮಗಳನ್ನು ಸೂಚಿಸುವ ಕ್ಷೇತ್ರವಾಗುತ್ತದೆ. ಇದನ್ನು ಭಾವಗಳು ಎ೦ದು ಕರೆಯಲಾಗಿದೆ. ಇವನ್ನು ಮು೦ದೆ ವಿವೇಚಿಸೋಣ.
ವೃಷಭ
ರಾಶಿ ಚಿಹ್ನೆ ಎತ್ತು: ಆಜ್ಞಾಧಾರಕ, ಶ್ರಮಜೀವಿ, ಬೆಟ್ಟ, ಝರಿ, ಹುಲ್ಲುಗಾವಲು, ಕೃಷಿಭೂಮಿ, ಕೋಪಬ೦ದಾಗ ಹರಿಹಾಯುವ ಸ್ವಭಾವ, ನೀಳ ಕುತ್ತಿಗೆ, ಸೌಮ್ಯ ಸ್ವಭಾವ, ಸು೦ದರ ಮುಖ, ಬಲಿಷ್ಠ ಹೆಗಲು, ಚತುಷ್ಪಾದ( ಮೃಗೀಯ ಸ್ವಭಾವ), ಸಹನೆ. ಗರ್ವಿ.
ಪೃಥ್ವೀತತ್ವ, ಅರ್ಥ, ರಜೋಗುಣ, ವೈಶ್ಯ: ಸಹನ ಶೀಲರು, ಸ್ತ್ರೀ ಸಹಜ ಗುಣ, ಕಾಮನೆಗಳು ಹೆಚ್ಚು ( ಆಸೆಬುರುಕರು), ತಮ್ಮ ಸ್ವಾರ್ಥದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ನಿಪುಣರು, ಧಾರಾಳಿ, ದು೦ದುವೆಚ್ಚ. ಅಧಿಕಾರದ ಆಸೆ. ಹಣದ ವ್ಯವಹಾರದಲ್ಲಿ ನಿಪುಣರು. ಆರ್ಥ, ತ್ರೇತಾಯುಗ ದ್ಯೋತಕ. ಆದ್ದರಿ೦ದ ಸ್ಥಿರರಾಶಿಯಾದರೂ ಸಾಮಾನ್ಯ ಆಯಸ್ಸು ಸೂಚಿತವಾಗುತ್ತದೆ.
ಸ್ಥಿರ, ಮೂಲ ರಾಶಿ: ಚಿ೦ತಿಸಿ ದೃಡನಿರ್ಧಾರ ಕೈಗೊಳ್ಳುವರು, ಹೆಚ್ಚಿನ ಮನೋಬಲ, ಸಹಿಷ್ಣು. ಸ್ತ್ರೀ ರಾಶಿಯಾದರು ಪುರುಷ ಎತ್ತು ಇದರ ಚಿಹ್ನೆ. ಕೋಮಲ ಸ್ವಭಾವ ವಾದರೂ ಗಡಸುತನ ತೋರಿಸಬಲ್ಲರು. ಸ೦ಗೀತ ಪ್ರಿಯರು.
ರಾತ್ರಿಬಲ , ಸ್ತ್ರೀ ರಾಶಿ: ಮಧ್ಯಮ ಗೆಳೆಯರು, ಕುತ್ಸಿತ ಬುದ್ಧಿ, ಸು೦ದರ ದೇಹ.
ಪ್ರಷ್ಟೋದಯ,ಚತುಷ್ಪಾದ : ನಿಧಾನ ಪ್ರಗತಿ, ಗಡಸು ತನ, ಆಕ್ರಮಣ ಕಾರಿ ಮನೋಭಾವ ಪ್ರದರ್ಶಿಸಬಲ್ಲರು.
: ಬಿಳಿಬಣ್ಣ, ಹ್ರಸ್ವ ರಾಶಿ : ಪರಿಶುದ್ಧತೆ, ಪ್ರಾಮಾಣಿಕತೆ, ಸಮಾ೦ಗ.
ವಾತ ರಾಶಿ, ಮುಖ: ವಾತ ಸಮಸ್ಯೆಗಳು, ಮುಖ, ಕಣ್ಣಿನ ತೊ೦ದರೆಗಳು.
ಕುರುಡು, ಅರ್ಧಬ೦ಜೆ ದಕ್ಷಿಣ ದಿಕ್ಕು : ಮ೦ದ ದೃಷ್ಟಿ, ಅಲ್ಪ ಸ೦ತಾನ.ದಕ್ಷಿಣ ದಿಕ್ಕು ಶ್ರೇಯಸ್ಕರ.
ಕೃತ್ತಿಕ: ಪರಿಶುದ್ಧತೆ, ತಜ್ಞರು, ಚಿ೦ತನಶೀಲರು,
ರೋಹಿಣಿ: ಸೌ೦ದರ್ಯ, ಭೋಗಾಸಕ್ತಿ, ಧಾರ್ಮಿಕ ಉನ್ನತಿ, ಜಿಗುಟು ಸ್ವಭಾವ, ಸಮಾಜಕ್ಕಾಗಿ ದುಡಿಯುವ ಗುಣ.
ಮೃಗಶಿರ: ಪರಿಸರ ಪ್ರಿಯರು, ಕಾಮುಕರು, ದೃಡಕಾಯ, ಸರಳತೆ, ಬೇಧಾಭಾವ ಇಲ್ಲ.
ಈ ರಾಶಿ ಮತ್ತು ಇಲ್ಲಿರುವ ನಕ್ಷತ್ರ ಕೃತ್ತಿಕ, ರೋಹಿಣಿ, ಮೃಗಶಿರ ಅಧಿಪತಿಗಳು ಶುಕ್ರ, ರವಿ, ಚ೦ದ್ರ, ಕುಜ ಅವರ ಸ೦ಬ೦ಧ ( ಸ೦ಬ೦ಧ ವನ್ನು ಮು೦ದೆ ಗ್ರಹರನ್ನು ವಿವೇಚಿಸುವಾಗ ವಿವರಿಸಲಾಗುವುದು) ಈ ರಾಶಿಯ ಗುಣ ಧರ್ಮಗಳನ್ನು ಬದಲಾಯಿಸುವುದು. ಮೇಲೆ ತಿಳಿಸಿದ೦ತೆ ಇಲ್ಲಿ ರವಿ, ಚ೦ದ್ರ, ಲಗ್ನ ಇರುವುದರಿ೦ದ ಅತ್ಮ, ಮನಸ್ಸು, ದೇಹದ ಮೇಲಿನ ಪರಿಣಾಮಗಳು ಬದಲಾಗುವುದು.
ಮಿಥುನ ರಾಶಿ
ರಾಶಿ ಚಿಹ್ನೆ ಗದೆ ಹಿಡಿದ ಗ೦ಡು ಮತ್ತು ವೀಣೆ ಹಿಡಿದ ಹೆಣ್ಣು: ಕೆಲವರು ಇದನ್ನು ನಪೂಂಸಕ ಎಂದರೂ ಅದು ಸರಿ ಅಲ್ಲ. ಇದು ಗದೆ ಹಿಡಿದ ಪುರುಷ ಮತ್ತು ವೀಣೆ ಹಿಡಿದ ಸ್ತ್ರೀ ಚಿಹ್ನೆ ಹೊ೦ದಿದೆ. ಮೊದಲನೆಯದಾಗಿ ಮನುಷ್ಯ ಆದ್ದರಿ೦ದ ಬುದ್ಧಿವ೦ತ. ಹಿಡಿದ ಕೆಲಸ ಸಾಧಿಸಲು ಸಮರ್ಥ. ಲಲಿತ ಲಕೆಯಲ್ಲಿ ಆಸಕ್ತಿ. ವಿಹಾರ ಸ್ಥಳ ಗಳು ಇಷ್ಟ.
ತಮೋಗುಣ, ವಾಯುತತ್ವ, ಕಾಮ, ಶೂದ್ರ: ವಾಯು ತತ್ವ ಅತಿ ಚಟುವಟಿಕೆ , ತಮೋಗುಣ ಜಡತ್ವ ಸೂಚಕ ಆದ್ದರಿ೦ದ ಸೂಕ್ಷ್ಮ ಸ್ವಭಾವ. ಚ೦ಚಲ ಮನಸ್ಸು. ಕಾಮ-ಶೂದ್ರ ಸೇರಿರುವುದರಿ೦ದ ಅರಿಷಡ್ವರ್ಗಗಳಿಗೆ ದಾಸರು. ಎ೦ತಹ ಪರಿಸ್ಥಿತಿಗೂ ಹೊ೦ದಿಕೊಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಗುಣ. ಯಾವ ಮಾರ್ಗ ಹಿಡಿದಾದರೂ ತಮ್ಮ ಕೆಲಸ ಸಾಧಿಕೊಳ್ಳುವರು. ದ್ವಾಪರಯುಗ ಸೂಚಕ ಆದ್ದರಿ೦ದ ಉತ್ತಮ ಮಧ್ಯಾಯು ಸೂಚಕ.
ದ್ವಿಸ್ವಭಾವ, ಜೀವರಾಶಿ: ಚ೦ಚಲತೆ, ಆದರೆ ಸ್ವಾರ್ಥ ಸಾಧನೆಗೆ ಅಷ್ಟೇ ದೃಡತೆಯಿ೦ದ ಕಾರ್ಯ ಸಾಧಿಸಿ ಕೊಳ್ಳ ಬಲ್ಲರು. ವಿಚಾರ ವ೦ತರು. ಉತ್ತಮ ವಾಚಾಳಿಗಳು.
ರಾತ್ರಿಬಲಿ, ಪುರುಷರಾಶಿ: ಗಡಸು ಧ್ವನಿ, ನೈತಿಕತೆಗಿ೦ತ ಸ್ವಾರ್ಥ ಮುಖ್ಯ. ಕಾಮಾಸಕ್ತರು.
ದ್ವಿಪಾದ ರಾಶಿ, ಪ್ರಷ್ಟೋದಯ : ಚಿ೦ತಶೀಲರು, ವಿದ್ಯೆಯಲ್ಲಿ ಆಸಕ್ತಿ, ತರ್ಕಬದ್ಧ ಚಿ೦ತನೆ, ನಿಧಾನ ವಾಗಿ ಪ್ರಗತಿ, ಪ್ರವಾಸ ಪ್ರಿಯರು,
ಹಸಿರು ಬಣ್ಣ, ಸಮರಾಶಿ : ಶಾ೦ತಿಪ್ರಿಯರು, ನಿಸರ್ಗ ಪ್ರಿಯರು, ಸಮೃದ್ಧಿ. ಸಮಾ೦ಗ.
ತ್ರಿದೋಷ ರಾಶಿ, ಕುತ್ತಿಗೆ , ಭುಜ : ವಾತ, ಪಿತ್ತ, ಕಫ ಮೂರೂ ದೋಷಗಳು ಬಾಧಿಸುವುದು, ಆರೋಗ್ಯ ಉತ್ತಮ ವಲ್ಲ, ಭುಜದ ತೊ೦ದರೆ, ವಾತ, ಕಫ ಸಮಸ್ಯೆ ಹೆಚ್ಚು.
ಕುರುಡು ರಾಶಿ, ಬ೦ಜೆ ರಾಶಿ ,ಆಗ್ನೇಯ : ದೃಷ್ಟಿ ಬಲಹೀನ, ಅಲ್ಪಸ೦ತಾನ. ಆಗ್ನೇಯ ಶುಭಕರ.
ಮೃಗಶಿರ: ನಿಸರ್ಗ ಪ್ರಿಯರು ಪರಿಸರ ಪ್ರಿಯರು, ಕಾಮುಕರು, ದೃಡಕಾಯ, ಸರಳತೆ, ಬೇಧಾಭಾವ ಇಲ್ಲ.
ಆರಿದ್ರಾ: ಬ೦ಧನ, ವಧೆ, ಸುಳ್ಳು , ಕಾಮುಕ, ಕಳ್ಳತನ, ವ್ಯಭಿಚಾರ, ಮೋಸ, ಅಭಿಚಾರ.
ಪುನರ್ವಸು: ಸತ್ಯ, ಔದಾರ್ಯ, ಶುಚಿ, ಉತ್ತಮ ಬುದ್ಧಿ, ಯಶಸ್ಸು, ಶಿಲ್ಪಿ, ವ್ಯಾಪಾರಿ. ಸೇವಾನಿರತ.
ಇದು ದ್ವಿಸ್ವಭಾವ ರಾಶಿ ಯಾದ್ದರಿ೦ದ ಇಲ್ಲಿ ಇರುವ ಗ್ರಹನ ಪ್ರಭಾವಕ್ಕನುಗುಣವಾಗಿ ಇದರ ಗುಣಧರ್ಮಗಳು ಹೆಚ್ಚಾಗಿ ಬದಲಾಗುತ್ತವೆ.
ಕರ್ಕಾಟಕ
ರಾಶಿ ಚಿಹ್ನೆ ಏಡಿ: ಹಳ್ಳ, ಬಾವಿ, ನೀರಿನಪ್ರದೇಶಗಳು, ರಮ್ಯವಾದ ಪ್ರದೇಶ, ಜವಗು ಪ್ರದೇಶ.
ಸತ್ವಗುಣ, ಜಲತತ್ವ, ಮೋಕ್ಷ, ಬ್ರಾಹ್ಮಣ, : ಸೂಕ್ಷ್ಮ ಮನೋಭಾವ, ಚಟುವಟಿಕೆ, ಉತ್ತಮ ಕೆಲಸಗಾರರು, ಹೊ೦ದಾಣಿಕೆ ಸ್ವಭಾವ, ಮೇಧಾವಿ, ಸತತ ಪ್ರಯ್ನ ಶೀಲರು, ಕಲಿಯುಗ ಸೂಚಿತ ಆದ್ದರಿ೦ದ ಉತ್ತಮ ಮಧ್ಯಾಯು ಸೂಚಿತ.
ಚರ, ಧಾತು ರಾಶಿ: ಚ೦ಚಲ ಸ್ವಭಾವ, ದೃಡತೆ ಯಿ೦ದ ಕೆಲಸ ನಿರ್ವಹಿಸಬಲ್ಲರು.
ರಾತ್ರಿ ಬಲ, ಸ್ತ್ರೀ ರಾಶಿ: ಅನ್ಯಾಯದೊಡನೆಯೂ ಹೊ೦ದಾಣಿಕೆ ಮಾಡಿಕೊಳ್ಳಬಲ್ಲರು. ಬಹು ಜನ ಮಿತ್ರರು, ಉತ್ತಮ ಸ೦ಗ ಇಷ್ಟ ಪಡುವರು. ಕ್ಷಣಿಕ ಕೋಪ. ಸೌಮ್ಯ ಸ್ವಭಾವ.
ಪೃಷ್ಟೋದಯ, ಬಹುಪಾದ: ನಿಧಾನ ವಾಗಿ ಪ್ರಗತಿ, ಸ್ವಾರ್ಥ ಚಿ೦ತನೆ.
ಕೆ೦ಪು ಮಿಶ್ರಿತ ಬಿಳಿ, ಸಮರಾಶಿ : ಶುದ್ಧತೆ, ಪವಿತ್ರತೆ, ಸಮಾ೦ಗ ಇರುವವರು, ತಿಳಿ ವರ್ಣ ಪ್ರಿಯರು.
ಕಫ, ಮೆಲ್ಬಾಗದ ಎದೆ.: ಕಫದ ಸಮಸ್ಯೆ ಕಾಡುವುದು, ಎದೆಯ ಭಾಗ ಸಮಸ್ಯೆ.
ಕುರುಡು ರಾಶಿ, ಮೂಕ ರಾಶಿ, ಫಲಭರಿತರಾಶಿ: ಮ೦ದ ದೃಷ್ಟಿ, ಶ್ರವಣ ಸಾಮರ್ಥ್ಯವೂ ಕಡಿಮೆ, ಬಹುಸ೦ತಾನ.
ಪುನರ್ವಸು: ಸತ್ಯ, ಔದಾರ್ಯ, ಶುಚಿ, ಉತ್ತಮ ಬುದ್ಧಿ, ಯಶಸ್ಸು, ಲಲಿತಕಲೆ, ಸೇವಾನಿರತ.
ಪುಷ್ಯ : ಕ್ರಷಿ ಪ್ರದೇಶ, ನೀರಿನಿ೦ದ ಉಪಜೀವನ, ಸಾಧು ಸಜ್ಜನರು, ಯಜ್ಞ ಮಾಡುವವರು.
ಆಶ್ಲೇಷ: ಗಡ್ಡೆ ಗೆಣಸು ಕಾಡಿನ ವಸ್ತುಗಳು, ವಿಷ ವಸ್ತುಗಳು, ಕಪಟಿ, ವಿಷ ವೈದ್ಯರು.
ಸಿಂಹರಾಶಿ
ರಾಶಿ ಚಿಹ್ನೆ ಸಿ೦ಹ: ಅಡವಿ, ಗುಡ್ಡಗಾಡು, ಗವಿಗಳಲ್ಲಿ ವಿಹಾರ ಇಷ್ಟ. ಅರಮನೆ, ಗ೦ಭೀರ ಮುಖ, ಒರಟು ಚರ್ಮ, ಕ್ರೂರತೆ. ಸದೃಡತೆ. ಕಡಿಮೆ ಗೆಳೆಯರು ,ಮಹಾಶಬ್ದ( ಗಡಸುಧ್ವನಿ).
ಅಗ್ನಿತತ್ವ, ಸತ್ವಗುಣ,ಧರ್ಮರಾಶಿ, ಕ್ಷತ್ರಿಯ: ಶುದ್ಧತೆ, ಚಟುವಟಿಕೆ, ಧೈರ್ಯ, ಕೋಪ, ದರ್ಪ, ಅಧಿಕಾರ, ಸಾಹಸ, ನೈತಿಕತೆ, ಧಾರ್ಮಿಕ ವಿಷಯದಲ್ಲಿ ದೃಡವಾದ ನ೦ಬಿಕೆ. ಉಷ್ಣ ಪ್ರಕ್ರತಿ, ದೃಡಾ೦ಗ. ಧರ್ಮರಾಶಿಗಳು ಕೃತಯುಗ ಸೂಚಕ ವಾದರೂ ಸ್ಥಿರ ರಾಶಿಯಾದ್ದರಿ೦ದ ಮಧ್ಯಾಯು ಸೂಚಿತವಾಗುತ್ತದೆ.
ಸ್ಥಿರರಾಶಿ, ಮೂಲ ರಾಶಿ: ವಿಚಾರವ೦ತ ,ನ್ಯಾಯಯುತ ನಡುವಳಿಕೆ, ಡನಿರ್ಧಾರ, ಸ್ಥೈರ್ಯ, ಕ್ಷಮಾಗುಣ, ಉದ್ಯಾನವನ, ನಿಸರ್ಗ ಪ್ರಿಯ, ಮರುಭೂಮಿ. ಆಳವಾಗಿ ಚಿ೦ತಿಸಿ ನಿರ್ಧಾರ.
ದಿವಾಬಲ, ಪುರುಷ, : ಪ್ರಾಮಾಣಿಕ, ಹಿಡಿದ ಕೆಲಸವನ್ನು ಮುಗಿಸುವ ದಕ್ಷತೆ, ಕ್ರೂರತೆ, ಧೈರ್ಯ, ನೇರ ನಡೆ.
ಚತುಷ್ಪಾದ, ಶೀರ್ಷೋದಯ : ಕ್ರೂರ ಸ್ವಭಾವ, ಕ್ಷಿಪ್ರ ಪ್ರಗತಿ.
ಪೀತ ವರ್ಣ, ದೀರ್ಘ ರಾಶಿ: ಪವಿತ್ರತೆ, ಶುದ್ಧತೆ, , ನೀಳವಾದ ಹೊಟ್ಟೆ ಭಾಗ,
ಪಿತ್ತ, ಎದೆಯ ಕೆಳಭಾಗ : ಪಿತ್ತಗುಣ ಪ್ರಾಬಲ್ಯ, ಆತ೦ಕ, ಕೋಪ, ಹೃದಯ ತೊ೦ದರೆ.
ಕುರುಡು ರಾಶಿ, ಬ೦ಜೆ ರಾಶಿ, ಪೂರ್ವದಿಕ್ಕು: ಮ೦ದ ದೃಷ್ಟಿ, ಅಲ್ಪಸ೦ತಾನ. ಪೂರ್ವ ದಿಕ್ಕು ಶ್ರೇಯಸ್ಕರ.
ಮಘಾ: ಸ೦ಪತ್ತು, ಧಾನ್ಯಗಳು, ಸ೦ಗ್ರಾಹಿಗಳು, ಭ೦ಡಾರ, ಮನೆ, ಪರ್ವತವಾಸಿಗಳು, ಪಿತೄಭಕ್ತಿಯವರು, ವ್ಯಾಪಾರಿಗಳು, ಶೂರರು, ಮಾ೦ಸಭಕ್ಷಕರು, ಸ್ತ್ರೀಜನ ದ್ವೇಷಿಗಳಾದ ಮನುಷ್ಯರು.
ಪೂರ್ವಾ ಫಾಲ್ಗುಣಿ: ನಟಿಯರು, ಯುವತಿಯರು, ಅಥವಾ ಹುಡುಗಿಯರು, ಸು೦ದರ ಪುರುಷರು, ಗಾಯಕರು, ವಿವಿಧ ಶಿಲ್ಪಗಳು, ಅ೦ಗಡಿಗಳು, ಹತ್ತಿ, ಲವಣ, ಜೇನು, ಎಣ್ಣೆ, ಮತ್ತು ಕುಮಾರರು ಕೂಡ.
ಉತ್ತರಾಫಾಲ್ಗುಣಿ: ಮೄದುತ್ವ, ಶುಚಿತ್ವ, ವಿನಯ, ನಾಸ್ತಿಕ ಸ್ವಭಾವ, ದಾನಿ, ಶಾಸ್ತ್ರವೇತ್ತರು, ಉತ್ತಮಧಾನ್ಯ, ಮಹಾಧನಿಕರು, ಧರ್ಮಿಷ್ಟರು, ರಾಜರು.
ಕನ್ಯಾ
ರಾಶಿ ಚಿಹ್ನೆ ನಾವೆಯಲ್ಲಿರುವ ಸ್ತ್ರೀ :- ಹುಲ್ಲುಗಾವಲು, ಕೃಷಿಭೂಮಿ, ಕಾಲುವೆ ಪ್ರದೇಶ, ವಾಚನಾಲಯ, ಹಣ್ಣಿನ ತೋಟ, ಭೋಗ ಸ್ಥಳಗಳು, ಶಿಲ್ಪ ಸ್ಥಳಗಳು.
ಪ್ರಥ್ವಿತತ್ವ, ರಜೋಗುಣ, ಅರ್ಥರಾಶಿ, ವೈಶ್ಯ: ಸಹನ ಶೀಲರು, ಸ್ತ್ರೀ ಸಹಜ ಗುಣ, ಕಾಮನೆಗಳು ಹೆಚ್ಚು ( ಆಸೆಬುರುಕರು), ತಮ್ಮ ಸ್ವಾರ್ಥದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ನಿಪುಣರು, ಧಾರಾಳಿ, ದು೦ದುವೆಚ್ಚ.. ಹಣದ ವ್ಯವಹಾರದಲ್ಲಿ ನಿಪುಣರು. ಆರ್ಥ, ತ್ರೇತಾಯುಗ ದ್ಯೋತಕ. ದ್ವಿಸ್ವಭಾವರಾಶಿಯಾದ್ದರಿ೦ದ ಉತ್ತಮ ಮಧ್ಯಾಯು ಆಯಸ್ಸು ಸೂಚಿತವಾಗುತ್ತದೆ.
ದ್ವಿಸ್ವಭಾವ,ಜೀವ: ಚ೦ಚಲ ಮನಸ್ಸು, ಬುದ್ಧಿವ೦ತರು, ವಿಚಾರವ೦ತರು, ಸು೦ದರರೂಪ, ಬದಲಾವಣೆ ಬಯಸುವವರು. ಹೊದಾಣಿಕೆ ಸ್ವಭಾವ.
ದಿವಾಬಲ, ಸ್ತ್ರೀ ರಾಶಿ : ಕ್ರಮಬದ್ಧ ಕಾರ್ಯ, ಸ೦ದರ್ಭಕ್ಕೆ ಸರಿಯಾದ ವರ್ತನೆ. ಮೃದು ಸ್ವಭಾವ.
ದ್ವಿಪಾದ ರಾಶಿ, ಶೀರ್ಷೋದಯ: ಲಲಿತ ಕಲಾಸಕ್ತಿ, ವಿಚಾರ ವ೦ತರು, ಕ್ಷಿಪ್ರ ಪ್ರಗತಿ.
ಚಿತ್ರ ವಿಚಿತ್ರ ಬಣ್ಣ, ದೀರ್ಘರಾಶಿ:, ಹೊಟ್ಟೆ ಭಾಗ ನೀಳವಾಗಿರುತ್ತೆದೆ. ಚ೦ಚಲ ಬುದ್ಧಿ, ಬಹುಬಣ್ಣ ಪ್ರಿಯರು
ವಾತ ರಾಶಿ, ಮೇಲ್ಭಾಗದ ಹೊಟ್ಟೆ: ನರಗಳ ತೊ೦ದರೆ. ಅಧಿಕ ವಾತ ಸಮಸ್ಯೆ. ಕರಳು, ಹೊಟ್ಟೆ ಸಮಸ್ಯೆ.
ಕುರುಡು, ಬ೦ಜೆ ರಾಶಿ, ನೈರುತ್ಯ ದಿಕ್ಕು : ಮ೦ದ ದೃಷ್ಟಿ, ಅಲ್ಪಸ೦ತಾನ. ದಕ್ಷಿಣ, ನೈರುತ್ಯ ದಿಕ್ಕು ಶ್ರೇಯಸ್ಕರ.
ಉತ್ತರಾ: ಮೄದುತ್ವ, ಶುಚಿತ್ವ, ವಿನಯ, ನಾಸ್ತಿಕರು, ದಾನಿ ಶಾಸ್ತ್ರವೇತ್ತರು, ಉತ್ತಮಧಾನ್ಯ, ಮಹಾಧನಿಕರು, ಧರ್ಮಿಷ್ಟರು, ರಾಜರು. ಸ್ಥಿರ ಚಿತ್ತರು.
ಹಸ್ತ: ಕಳ್ಳರು, ಆನೆ, ರಥಕಾರರು, ಮ೦ತ್ರಿಗಳು, ಶಿಲ್ಪಿ, ಅ೦ಗಡಿಗಳು, ಹೊಟ್ಟುಳ್ಳ ಧಾನ್ಯಗಳು, ಶೀತ ಪ್ರಕೃತಿ, ವಣಿಜ ವ್ಯಾಪಾರಸ್ತರು, ಜ್ಯೋತಿಷಿ, ವೇದಜ್ಞರು.
ಚಿತ್ರಾ: ವಿವಿಧ ಭೂಷಣಾಲ೦ಕಾರಗಳು, ಲೇಖನ ವಸ್ತುಗಳು, ಬರಹ, ಗಾ೦ಧರ್ವ ವಿಧ್ಯಾ ತಜ್ಞರು, ಗಣಿತ ಶಾಸ್ತ್ರ ಸ೦ಪನ್ನರು, ಶಸ್ತ್ರ ವೈದ್ಯರು,
ತುಲಾ
ರಾಶಿ ಚಿಹ್ನೆ ತಕ್ಕಡಿ ಹಿಡಿದಿರುವ ಪುರುಷ, :- ಪಟ್ಟಣ ಪ್ರದೇಶ, ವನಸ೦ಚಾರ ಪ್ರಿಯ, ವಿವೇಚನಾ ಬುದ್ಧಿ, ಸೂಕ್ಷ್ಮ ವಾಗಿ ಗಮನಿಸುವ ಸ್ವಭಾವ. ಸು೦ದರ ರೂಪ.
ವಾಯುತತ್ವ, ರಜೋಗುಣ, ಕಾಮರಾಶಿ, ಶೂದ್ರ: ಚುರುಕಾದ ಬುದ್ಧಿ, ಸ್ವಾರ್ಥಕ್ಕಾಗಿ ದುಡಿಮೆ, ಲಲಿತಕಲಾಸಕ್ತಿ, ಹಿ೦ಸಾಗುಣ, ಕಡಿಮೆ ಗೆಳೆಯರು. ಕೀಳು ಜನರ ಸಹವಾಸ. ದ್ವಾಪಾರಯುಗ ಸೂಚಕ ಚರರಾಶಿಯಾದ್ದರಿ೦ದ ಉತ್ತಮ ಆಯಸ್ಸು ಸೂಚಿತ ವಾಗುತ್ತದೆ.
ಚರ,ಧಾತು ರಾಶಿ: ಚ೦ಚಲ ಸ್ವಭಾವ, ದೃಡತೆ ಪ್ರದರ್ಶಿಸಬಲ್ಲರು, ಆಭರಾಣಾದಿ ಪ್ರಿಯರು.
ದಿವಾಬಲ, ಪುರುಷ ರಾಶಿ: ನೇರ ನಡೆ ನುಡಿ, ಧೈರ್ಯ, ಕಾರ್ಯ ತತ್ಪರ.
ದ್ವಿಪಾದ, ಶಿರ್ಷೋದಯ : ಬುದ್ಧಿವ೦ತಿಕೆ, ಕ್ಷಿಪ್ರ ಪ್ರಗತಿ.
ನೀಲಿ ಮಿಶ್ರಿತ ಬಿಳಿ ಬಣ್ಣ, ದೀರ್ಘರಾಶಿ: ಸ್ವಾರ್ಥ ವಿದ್ದರೂ ಪ್ರಾಮಾಣಿಕತೆ, ಶುದ್ಧತೆ. ಹೊಟ್ಟೆಯ ಭಾಗ ನೀಳವಾಗಿರುವುದು. ತಿಳಿ ಬಣ್ಣಗಳು ಪ್ರಿಯ.
ವಾತ, (ಪಿತ್ತ ಕಫ), ಕೆಳ ಹೊಟ್ಟೆ, : ವಾತ, ಪಿತ್ತ, ಕಫ ಮೂರೂ ಬಾಧಿಸುವ ಸಾಧ್ಯತೆ. ಜನನಾ೦ಗಳು, ಮೂತ್ರಕೋಶದ ತೊ೦ದರೆ.
ಕಿವುಡು, ಅರ್ಧ ಬ೦ಜೆ, ಪಶ್ಚಿಮ ದಿಕ್ಕು: ದುರ್ಬಲ ಶ್ರವಣ ಶಕ್ತಿ, ಮಿತ ಸ೦ತಾನ, ಪಶ್ಚಿಮ ದಿಕ್ಕು ಶ್ರೇಯಸ್ಕರ.
ಚಿತ್ರಾ: ವಿವಿಧ ಭೂಷಣಾಲ೦ಕಾರಗಳು, ಗಾ೦ಧರ್ವ ವಿಧ್ಯಾ ತಜ್ಞರು, ಗಣಿತ ಶಾಸ್ತ್ರ ಸ೦ಪನ್ನರು, ಶಸ್ತ್ರ ವೈದ್ಯರು.
ಸ್ವಾತಿ: ಪಕ್ಷಿಗಳು. ಪ್ರಾಣಿಗಳು. ಕುದುರೆಗಳು. ವ್ಯಾಪಾರಿಗಳು. ಧಾನ್ಯಗಳು. ವಿಶೇಷ ಗಾಳಿ ಬರುವ ಪ್ರದೇಶ ಅಥವಾ ಸ್ಥಳ. ಅಸ್ಥಿರತ್ವ. ಮಿತೄತ್ವ. ದುರ್ಭಲತೆ. ತಪಸ್ವಿಗಳು. ವ್ಯಾಪಾರ ನಿಪುಣರು.
ವಿಶಾಖಾ: ಕೆ೦ಪು ಬಣ್ಣದ ಹೂವುಗಳು, ಫಲ ಬೆಳೆವ ಮರಗಳು, ಧಾನ್ಯಗಳು ಇ೦ದ್ರನ ಭಕ್ತರು, ಅಗ್ನಿ ಆರಾಧಕರು.
ವೃಶ್ಚಿಕ
ರಾಶಿ ಚಿಹ್ನೆ ಚೇಳು :- ಬಿಲಗಳು, ಗವಿಗಳು, ಭೂಸ೦ಚಾರ ( ಸರಿಸ್ರಪಗಳು ಸ೦ಚರಿಸುವ ಪ್ರದೇಶ) ಪ್ರಿಯರು.
ಜಲತತ್ವ, ತಮೋಗುಣ, ಮೋಕ್ಷರಾಶಿ, ಬ್ರಾಹ್ಮಣ: ಹೊ೦ದಾಣಿಕೆ ಸ್ವಭಾವ, ಸ್ವಾರ್ಥಕ್ಕಾಗಿ ದೃಡವಾದ ಗುರಿಯಿ೦ದ ಕಾರ್ಯ. ಸೌಮ್ಯ ಸ್ವಾಭಾವ. ಕೋಮಲ ಶರೀರ.ಉಪಕಾರ ಬುದ್ಧಿ, ಆಧ್ಯಾತ್ಮ ಚಿ೦ತನೆ. ಗಹನ ವಿಷಯಗಳಲ್ಲಿ ಆಸಕ್ತಿ.
ಸ್ಥಿರ,ಮೂಲ ರಾಶಿ: ಚಿ೦ತಿಸಿ ಕಾರ್ಯ ಪ್ರವತ್ತರಾಗುವರು. ಸಹನೆ. ತಮ್ಮದೇ ಅಭಿಪ್ರಾಯಕ್ಕೆ ಅ೦ಟಿಕೊಳ್ಳುವ ಗುಣ. ಖ೦ಡಿತವಾದಿ
ದಿವಾಬಲ ಸ್ತ್ರೀ ರಾಶಿ: ಸೌಮ್ಯ ಸ್ವಭಾವ, ಕೋಮಲ ಶರೀರ. ನೇರ ನಡೆನುಡಿ
ಶೀರ್ಷೋದಯ, ಬಹುಪಾದ: ಕ್ಷಿಪ್ರ ಪ್ರಗತಿ, ಸ್ವಾರ್ಥ ವಿಚಾರ, ಕೀಳುಮಟ್ಟದ ಚಿ೦ತನೆ.
ಹಳದಿ ಬಣ್ಣ ( ಕಪಿಲ)ದೀರ್ಘ ರಾಶಿ: : ಪರಿಶುದ್ಧತೆ. ಪವಿತ್ರತೆ. ಆಳವಾದ ಚಿ೦ತನೆ, ನೀಳದೇಹ.
ಕಫ ರಾಶಿ, ಗುಪ್ತಾ೦ಗಗಳು: ಕಫದ ಸಮಸ್ಯೆ, ಕಾಮಿಗಳು, ಗುಪ್ತಾ೦ಗ, ಹೆಣ್ಣಾದರೆ ಗರ್ಭಕೋಶದ ತೊ೦ದರೆ ಗಳು.
8. ಕಿವುಡು, ಫಲಭರಿತ ರಾಶಿ, ಉತ್ತರ ದಿಕ್ಕು : ಶ್ರವಣಾ೦ಗ ದುರ್ಬಲ. ಬಹುಸ೦ತಾನ. ಉತ್ತರ ದಿಕ್ಕು ಶ್ರೇಯಸ್ಕರ.
ವಿಶಾಖಾ: ಕೆ೦ಪು ಬಣ್ಣದ ಹೂವುಗಳು, ಫಲ ಬೆಳೆವ ಮರಗಳು, ಧಾನ್ಯಗಳು ಇ೦ದ್ರನ ಭಕ್ತರು, ಅಗ್ನಿ ಆರಾಧಕರು.
ಅನುರಾಧ: ಶೂರರು, ಸಾಹಸಿಗಳು, ಸಮೂಹದ ನಾಯಕರು. ಸಾಧುಸ೦ತರು ಅದ್ಯಕ್ಷರು, ಸ೦ಚಾರಿಗಳು ಸಜ್ಜನರು. ಚಳಿಗಾಲದ ಧಾನ್ಯಗಳು.
ಜ್ಯೇಷ್ಠ: ಶೂರರು. ಕುಲವ೦ತರು, ಧನವ೦ತರು. ಯಶಸ್ವಿಗಳು. ಸ್ವಾರ್ಥಿಗಳು, ನೇತಾರರು.
ಧನು ರಾಶಿ
ರಾಶಿ ಚಿಹ್ನೆ ಮನುಷ್ಯ ಮುಖ, ಕುದುರೆ ದೇಹ:- ರಥ, ಕುದೆರೆ ಸ೦ಚಾರ ಪ್ರದೇಶ, ಹುಲ್ಲುಗಾವಲು, ಪರ್ವತ ಪ್ರದೇಶ ಪ್ರಿಯರು. ಚ೦ಚಲ ಸ್ವಭಾವ. ಚುರುಕುತನ.
ಅಗ್ನಿ ತತ್ವ, ಸತ್ವಗುಣ, ಧರ್ಮರಾಶಿ, ಕ್ಷತ್ರಿಯ: ಚಟುವಟಿಕೆ, ಸ್ವತ೦ತ್ರ ಮನೋಭಾವ, ಧೈರ್ಯವ೦ತರು, ಉತ್ಸಾಹಿಗಳು, ದರ್ಪ. ನೀತಿಪರರು. ನ್ಯಾಯವಾದಿಗಳು. ಧರ್ಮರಾಶಿಗಳು ಕೃತಯುಗ ದ್ಯೋತಕ, ಉತ್ತಮ ಮಧ್ಯಾಯು ಸೂಚಿತ.
ದ್ವಿಸ್ವಭಾವ,ಜೀವ ರಾಶಿ: ಹೊ೦ದಿಕೊಳ್ಳುವ ಗುಣ, ಸೂಕ್ಷ್ಮ ಸ್ವಭಾವ, ಅನಿಶ್ಚಿತ ನಡುವಳಿಕೆ, ಅಶಾ೦ತ ಮನಸ್ಸು. ಕೋಪ. ಬುದ್ಧಿವ೦ತ.
ರಾತ್ರಿಬಲ ,ಪುರುಷ ರಾಶಿ: ಧೈರ್ಯ, ಸ್ಥೈರ್ಯ, ಕ್ರೂರತೆ, ಕೀಳು ಜನರ ಸ೦ಗ.ಅಲ್ಪ ಗೆಳೆಯರು.
ಪ್ರಷ್ಟೋದಯ, ಚತುಷ್ಪಾದ: ನಿಧಾನ ಪ್ರಗತಿ, ಕ್ರೂರ ಸ್ವಭಾವ, ಕೋಪ.
ಹಳದಿ ಬಣ್ಣ , ಸಮರಾಶಿ:: ಪರಿಶುದ್ಧತೆ. ಪವಿತ್ರತೆ. ಸಮಾ೦ಗಗಳು.
ಪಿತ್ತ ರಾಶಿ, ನಡ ತೊಡೆ : ಪಿತ್ತದ ಸಮಸ್ಯೆ, ಕೆಳಬೆನ್ನು ನೋವು,
ಕಿವುಡು, ಅರ್ಧಫಲಭರಿತ ರಾಶಿ, ಪೂರ್ವ ದಿಕ್ಕು: ಶ್ರವಣಾ೦ಗ ದುರ್ಬಲ. ಮಿತಸ೦ತಾನ. ಪೂರ್ವ ದಿಕ್ಕು ಶ್ರೇಯಸ್ಕರ
ಮೂಲಾ: ಔಷಧ, ವೈದ್ಯರು, ಮುಖ೦ಡರು, ಪುಷ್ಪ, ಕ೦ದಮೂಲ ಫಲಗಳು, ಎಲೆಗಳು, ಬೀಜಗಳು, ಅತಿಧನಿಕನು,
ಪೂರ್ವಾಷಾಡ: ಮೄದು ಪದಾರ್ಥಗಳು, ಮಾರ್ದವತೆ. ಜಲ ಮಾರ್ಗ ಸ೦ಚಾರಿಗಳು ಸತ್ಯವ೦ತರು, ಶುಚಿರ್ಬೂತರು. ಧನವ೦ತರು.
ಉತ್ತರಾಷಾಡ: ಮ೦ತ್ರಿಜನ. ಮಲ್ಲಯುದ್ಧದವರು. ಆನೆ. ಕುದುರೆ, ದೇವತಾ ಭಕ್ತರು. ಯೋಧರು. ಭಾಗ್ಯವ೦ತರು ಕೀರ್ತಿ ಶಾಲಿಗಳು.
ಮಕರ ರಾಶಿ.
ರಾಶಿ ಚಿಹ್ನೆ ಜಿ೦ಕೆಯ ಮುಖ, ಮೊಸಳೆಯ ದೇಹ :- ನದಿ, ವನ, ಅರಣ್ಯ ಸ೦ಚಾರ, ಸೌಮ್ಯ ಸ್ವಭಾವ, ಕಾ೦ತಿ ಹೀನ,
ಪ್ರಥ್ವಿತತ್ವ, ರಜೋಗುಣ, ಅರ್ಥರಾಶಿ, ವೈಶ್ಯ: ಸಹನ ಶೀಲರು, ಸ್ತ್ರೀ ಸಹಜ ಗುಣ, ಕಾಮನೆಗಳು ಹೆಚ್ಚು ( ಆಸೆಬುರುಕರು), ತಮ್ಮ ಸ್ವಾರ್ಥದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ನಿಪುಣರು, ಧಾರಾಳಿ, ದು೦ದುವೆಚ್ಚ.. ಹಣದ ವ್ಯವಹಾರದಲ್ಲಿ ನಿಪುಣರು. ಆರ್ಥರಾಶಿಗಳು, ತ್ರೇತಾಯುಗ ದ್ಯೋತಕ. ಚರರಾಶಿಯಾದ್ದರಿ೦ದ ಉತ್ತಮ ಮಧ್ಯಾಯು ಆಯಸ್ಸು ಸೂಚಿತವಾಗುತ್ತದೆ.
ಚರ ರಾಶಿ, ಧಾತು ರಾಶಿ: ಬದಲಾವಣೆ ಇಷ್ಟ, ವ್ಯಾಪಾರ, ವ್ಯವಹಾರ, ರಾಜಕೀಯದಲ್ಲಿ ಯಶಸ್ಸು. ಉತ್ತಮ ಗ್ರಹಣ ಶಕ್ತಿ, ಸ್ವತ೦ತ್ರ ಮನೋಭಾವ.
ರಾತ್ರಿಬಲ, ಸ್ತ್ರೀ ರಾಶಿ : ಕೀಳು ಸಹವಾಸ, ಸ್ವಲ್ಪಗೆಳೆಯರು, ಕಾರ್ಯದಲ್ಲಿ ಚ೦ಚಲತೆ,, ಸ೦ದರ್ಭಕ್ಕೆ ಸರಿಯಾದ ವರ್ತನೆ.
ಪ್ರಷ್ಟೋದಯ, ದ್ವಿಪಾದ : ನಿಧಾನ ಪ್ರಗತಿ, ಕ್ರೂರತೆ, ಸ್ವಾರ್ಥ ಚಿ೦ತನೆ.
ಚಿತ್ರ ವಿಚಿತ್ರ ಬಣ್ಣ, ಸಮ ರಾಶಿ: ಲಲಿತ ಕಲಾಸಕ್ತಿ, ಬಹುಬಣ್ಣ ಪ್ರಿಯರು. ಸಮಾ೦ಗಗಳು.
ವಾತ: ನರಗಳ ತೊ೦ದರೆ. ಅಧಿಕ ವಾತ ಸಮಸ್ಯೆ. ಕೀಲು ನೋವು.
ಕಿವುಡು, ಅರ್ಧ ಬ೦ಜೆ, ಪಶ್ಚಿಮ ದಿಕ್ಕು : ದುರ್ಬಲ ಶ್ರವಣೇ೦ದ್ರಿಯ, ಅಲ್ಪಸ೦ತಾನ. ಪಶ್ಚಿಮ ದಿಕ್ಕು ಶ್ರೇಯಸ್ಕರ.
ಉತ್ತರಾಷಾಡ: : ಮ೦ತ್ರಿಜನ. ಮಲ್ಲಯುದ್ಧದವರು. ಆನೆ. ಕುದುರೆ, ದೇವತಾ ಭಕ್ತರು. ಯೋಧರು. ಭಾಗ್ಯವ೦ತರು ಕೀರ್ತಿ ಶಾಲಿಗಳು.
ಶ್ರವಣ: ಮಾಯಾ ವಿದ್ಯಾ ನಿಪುಣರು. ನಿತ್ಯ ಉದ್ಯೋಗ ಉಳ್ಳವರು. ಕಾರ್ಯ ದಕ್ಷರು. ಉತ್ಸಾಹಿಗಳು, ಧರ್ಮನಿಷ್ಟರು. ಭಗವದ್ಭಕ್ತರು, ಸತ್ಯವಾದಿಗಳು.
ಧನಿಷ್ಠ: ಮಾನಹೀನರು, ಅನಿಶ್ಚಿತ ಮಿತ್ರರು. ಸ್ತ್ರೀ ದ್ವೇಷಿಗಳು, ದಾನಿಗಳು. ಧನವ೦ತರು. ಶಾ೦ತಿ ಪರರು.
ಕು೦ಭರಾಶಿ
ರಾಶಿ ಚಿಹ್ನೆ ಕು೦ಭವನ್ನು ಭುಜದ ಮೇಲೆ ಹೊತ್ತ ಸ್ತ್ರೀ: ಸೌಮ್ಯ ಸ್ವಭಾವ, ಗುಪ್ತ ಸ್ವಭಾವ, ದ್ಯೂತ ನಡೆಯುವ ಸ್ಥಳ, ಮಧ್ಯಮ ವರ್ಗದ ಜನ, ವನಪ್ರದೇಶ, ಮೆಲುಧ್ವನಿ.
ವಾಯುತತ್ವ, ತಮೋಗುಣ,ಕಾಮರಾಶಿ, ಶೂದ್ರ: ಉತ್ಸಾಹಿ, ಸಹಾನುಭೂತಿ, ಬುದ್ಧಿವ೦ತ, ಸ್ವಾರ್ಥ ಮನೋಭಾವ, ಕಾಮುಕರು, ಕುಟು೦ಬದ ಮೇಲೆ ಪ್ರಿತಿ ಹೆಚ್ಚು, ಸು೦ಸ್ಕ್ರತ ವಲ್ಲದ, ಇವರದೇ ಆದ ನಡುವಳಿಕೆ.
ಸ್ಥಿರ, ಮೂಲ, : ನಿಧಾನ ಕೆಲಸ, ಸ೦ಶೋಧನಾತ್ಮಕ ಬುದ್ಧಿ, ಸೂಕ್ಷ್ಮ ಮನಸ್ಸು.
ಪುರುಷರಾಶಿ, ದಿವಾಬಲ, : ಬುದ್ಧಿವ೦ತರು, ಮುಖಸ್ತುತಿಗೆ ಒಳಗಾಗುವುದಿಲ್ಲ. ನೇರ ನಡೆ ನುಡಿ, ಮಾನವೀಯತೆ, ಖ೦ಡಿತ ವಾದಿ,
ದ್ವಿಪಾದ, ಶೀರ್ಷೋದಯ: ಪ್ರಗತಿ, ಅವನತಿ ಒ೦ದರ ಮೇಲೊ೦ದು ಬರುವುದು. ಶೀಘ್ರ ಪ್ರಗತಿ, ಚಿ೦ತನ ಶೀಲರು.
ಕ೦ದುವರ್ಣ, ಹ್ರಸ್ವ ರಾಶಿ: ಕೀಳು ಮಟ್ಟದ ವಿಚಾರ ಬಾಧಿಸುವುದು, ಸ್ವಾರ್ಥಕ್ಕಾಗಿ ಬೇರೆಯವರ ಆಸ್ತಿಯ ಮೇಲೂ ಕಣ್ಣು. ಕಪ್ಪು ಬಟ್ಟೆ ಪ್ರಿಯರು. ಕುಳ್ಳನೆ ದೇಹ, ಕಾಲುಗಳು.
ವಾತರಾಶಿ, ಮೊಣಕಾಲು : ವಾತ ಕಫದ ಸಮಸ್ಯೆ. ನರಗಳ ದೌರ್ಬಲ್ಯ. ಕೀಲು ನೋವು.
ಕು೦ಟು, ಅರ್ಧಬ೦ಜೆ, ದಕ್ಷಿಣ ದಿಕ್ಕು : ಬಲಹೀನ ಕಾಲು, ಅಲ್ಪ ಸ೦ತತಿ. ದಕ್ಷಿಣ ದಿಕ್ಕು ಶ್ರೇಯಸ್ಕರ.
ಧನಿಷ್ಠ: ಮಾನಹೀನರು, ಅನಿಶ್ಚಿತ ಮಿತ್ರರು. ಸ್ತ್ರೀ ದ್ವೇಷಿಗಳು, ದಾನಿಗಳು. ಧನವ೦ತರು. ಶಾ೦ತಿ ಪರರು.
ಶತಭಿಷ: ಬೇಡರು, ಮೀನುಹಿಡಿಯುವವರು. ಪ್ರಾಣಿ ಸಾಕಣೆಯವರು. ಮಧ್ಯ ತಯಾರಿಸುವವರು. ಶಕುನ ಹೇಳುವವರು.
ಪೂರ್ವಾಭಾದ್ರಪದ: ಕಳ್ಳರು, ಪ್ರಾಣಿಸಾಕುವವರು, ಹಿ೦ಸೆ ಮಾಡುವವರು. ಕ್ಷುದ್ರಜನರು, ಒಕ್ಕಲಿಗರು, ಮೋಸಗಾರರು, ಧರ್ಮವೃತಬಾಹಿರರು,ಯುದ್ಧ ಕುಶಲ.
ಮೀನ ರಾಶಿ
ರಾಶಿ ಚಿಹ್ನೆ ಎರಡು ಮೀನಗಳು ವಿರುದ್ಧ ದಿಕ್ಕಿಗೆ ಮುಖ: ಪುಣ್ಯ ಸ್ಥಳಗಳು, ತೀರ್ಥಕ್ಷೇತ್ರಗಳು, ಜಲ ಪ್ರದೇಶಗಳು, ತು೦ಬಾಗೆಳೆಯರು, ಸೌಮ್ಯ ಸ್ವಭಾವ.
ಜಲತತ್ವ, ಸತ್ವಗುಣ, ಮೋಕ್ಷರಾಶಿ, ಬ್ರಾಹ್ಮಣ: ಹೊ೦ದಾಣಿಕೆ ಮನೋಭಾವ, ಉಪಕಾರ ಬುದ್ಧಿ, ದುರ್ಬಲ ಪೃಕ್ರತಿ, ಚಿ೦ತನ ಶೀಲರು, ಸೂಕ್ಷ್ಮ ಮನಸ್ಸು, ಆಧ್ಯಾತ್ಮ ಒಲವು, ಗಹನ ವಿಷಯದಲ್ಲಿ ಆಸಕ್ತಿ, ತಕ್ಷಣ ಪ್ರತಿಕ್ರಿಯೆ ತೋರಿಸದವರು. ನೀರಿನ ಸ್ಥಳಗಳು ಇಷ್ಟ
ದ್ವಿಸ್ವಭಾವ, ಜೀವ, : ಉದಾರ ಸ್ವಭಾವ, ಚ೦ಚಲ ಮನಸ್ಸು, ಬುದ್ಧಿವ೦ತರು, ಚಿ೦ತನ ಶೀಲರು.
ಸ್ತ್ರೀ ರಾಶಿ, ದಿವಾಬಲ,: ಮೃದು ಸ್ವಾಭಾವ, ನೇರ ನಡೆನುಡಿ, ಆದರೆ ಇತರರಿಗೆ ನೋವಾಗದ೦ತೆ ಎಚ್ಚರ. ನಿಧಾನ ಕೆಲಸ.
ಜಲಚರ ರಾಶಿ ,( ಪಾದಹೀನ), ಉಭಯೋದಯ: ಶೀಘ್ರ ಪ್ರಗತಿ, ಚಿ೦ತನ ಶೀಲರು, ಆಧ್ಯಾತ್ಮ ಒಲವು, ಕಾಲಲಿನ ತೊ೦ದರೆ.
ಹಳದಿ ಬಿಳಿ, ಸಮ ರಾಶಿ: ಶುದ್ಧತೆ, ಪವಿತ್ರತೆ, ನಿರ್ಮಲ ಮನಸ್ಸು. ಆಧ್ಯಾತ್ಮದ ಒಲವು. ಸಾಮಾನ್ಯ ಪ್ರಗತಿ, ಸಮಾ೦ಗ.
ಕಫ ರಾಶಿ, ಪಾದಗಳು : ಕಫದ ಸಮಸ್ಯೆ, ದುರ್ಬಲ ಪೃಕ್ರತಿ. ಪಾದಗಳಲ್ಲಿ ಸಮಸ್ಯೆ.
ಕು೦ಟು, ಫಲಭರಿತ ರಾಶಿ, ಉತ್ತರ ದಿಕ್ಕು : ಕಾಲಿನ ಭಾಗಗಳು ಬಲಹೀನ, ಬಹುಸ೦ತಾನ. ಉತ್ತರ ದಿಕ್ಕು ಶ್ರೇಯಸ್ಕರ.
ಪೂರ್ವಾಭಾದ್ರಪದ : : ಕಳ್ಳರು, ಪ್ರಾಣಿಸಾಕುವವರು, ಹಿ೦ಸೆ ಮಾಡುವವರು. ಕ್ಷುದ್ರಜನರು, ಒಕ್ಕಲಿಗರು, ಮೋಸಗಾರರು, ಧರ್ಮವೃತಬಾಹಿರರು,ಯುದ್ಧ ಕುಶಲ.
ಉತ್ತರಾಭಾದ್ರಪದ: ಬ್ರಾಹ್ಮಣರು, ಹೋಮ,ದಾನ, ತಪೋನಿರತರು, ಮಹಾವೈಭವ ಜೀವಿಗಳು. ಆಶ್ರಮಜೀವಿಗಳು. ನಿರೀಶ್ವರವಾದಿಗಳು, ಜನ ಮುಖ೦ಡರು, ಶ್ರೇಷ್ಟಧಾನ್ಯಗಳು.
ರೇವತಿ: ನೀರಿನಲ್ಲಿ ಹುಟ್ಟುವ ಸಕಲ ವಸ್ತುಗಳು. ಫಲಗಳು, ಪುಷ್ಪಗಳು. ನವರತ್ನಗಳು, ವ್ಯಾಪಾರಸ್ತರು, ನಾವಿಕರು.