ದೇವಹನ್ನು ನಿಯಂತ್ರಿಸುವ ಮಹತ್ವದ ಚಕ್ರಗಳು ಈ ಪಂಚಭೂತಗಳನ್ನು ಸೂಕ್ತ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಮೂಲಾಧಾರ ಚಕ್ರ ಭೂಮಿಗೆ, ಸ್ವಾಧಿನಸ್ಥಾನ ಚಕ್ರ ನೀರಿಗೆ ಮಣಿಪೂರಕ ಚಕ್ರ ಅಗ್ನಿಗೆ, ಅನಹದ ಚಕ್ರ ಗಾಳಿಗೆ ಹಾಗೂ ವಿಶುದ್ಧಿ ಚಕ್ರ ಆಕಾಶಕ್ಕೆ ಎಂದು ಚಕ್ರಗಳು ವಿಂಗಡಿಸಲ್ಪಿಟ್ಟಿವೆ. ದೇಹದ ವಿವಿಧ ಅಂಶಗಳ ನಿಯಂತ್ರಣಗಳು ನಮ್ಮ ಬೆರಳ ತುದಿಯಲ್ಲೇ ಇದೆ ಎಂಬುದು ಇದರಿಂದ ಅರ್ಥವಾಗುವ ವಿಷಯ.
ಕಿರುಬೆರಳು, ಉಂಗುರದ ಬೆರಳು, ನಡುಬೆರಳು ಮತ್ತು ತೋರು ಬೆರಳು ಕ್ರಮವಾಗಿ ಭೂಮಿ ನೀರು, ಆಕಾಶ ಮತ್ತು ಗಾಳಿಯನ್ನು ಪ್ರತಿನಿಧಿಸಿದರೆ ಹೆಬ್ಬೆರಳು ಅಗ್ನಿಯನ್ನು ಪ್ರತಿನಿಧಿಸುತ್ತದೆ. ವಸ್ತುಗಳು ಕಾಯಿಸುವುದರಿಂದ ಹಿಗ್ಗುತ್ತವೆ ಹಾಗೂ ತಂಪುಗೊಳಿಸುವುದರಿಂದ ಕುಗ್ಗುತ್ತವೆ ಎಂಬುದು ಗೊತ್ತಿರುವ ಸಂಗತಿ. ಹೆಬ್ಬರಳು ಅಗ್ನಿಯನ್ನು ಪ್ರತಿನಿಧಿಸುವುದರಿಂದ ನೀವು ಯಾವುದೇ ವಸ್ತುವನ್ನು ಹೆಬ್ಬೆರಳಿನ ತುದಿಯಿಂದ ಸ್ಪರ್ಶಿಸಿದರೆ, ಆ ವಸ್ತು ಕೊಂಚ ಹಿಗ್ಗುತ್ತದೆ. ಇದರಿಂದ ಅರ್ಥವಾಗುವುದೇನೆಂದರೆ, ನಾವು ದೇಹದ ಯಾವುದೇ ಅಂಶವನ್ನು ನಮ್ಮ ಹೆಬ್ಬೆರಳಿನ ತುದಿಯಿಂದ ಹಿಗ್ಗಿಸಬಹುದು ಮತ್ತು ಕುಗ್ಗಿಸಬಹುದು. ಆದರೆ ಯಾವ ಪ್ರಮಾಣದಲ್ಲಿ ನಾವು ಸ್ಪರ್ಶಿಸಬೇಕು ಎಂಬುದಕ್ಕೆ ಮುದ್ರೆಗಳನ್ನು ಬಳಸುವ ಸೂಕ್ತ ಜ್ಞಾನ ಅಗತ್ಯ. ತುಂಬ ಉದ್ವೇಗ ಅಥವಾ ಮಾನಸಿಕ ದಣಿವಿನ ಪರಿಸ್ಥಿಯಲ್ಲಿ, ಯಾವುದೋ ಇಂಟರ್‌ವ್ಯೂ ಎದುರಿಸಬೇಕಿರೋ ಹೊತ್ತಿನಲ್ಲಿ, ಪರೀಕ್ಷಾ ವೇಳೆಯಲ್ಲಿ ಅಥವಾ ತುಂಬಾ ಮಹತ್ವದ ಸಭೆಯಲ್ಲಿ ಭಾಗವಹಿಸಬೇಕಾದಗ ನಿಮ್ಮ ದೇಹದಲ್ಲಿನ ವಾಯುತತ್ವ ತೀವ್ರವಾಗಿ ಏರಿಕೆಯಾಗುತ್ತೆದೆ.
ಇದರಿಂದಾಗಿ ನಿಮ್ಮೆದೆಯ ಮೇಲೆ ಒತ್ತಡ ಉಂಟಾಗುತ್ತೆದೆ. ಅಂಥ ಸಮಯದಲ್ಲಿ ನಿಮ್ಮ ತೋರು ಬೆರಳ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ಒತ್ತಿ ಹಿಡಿದುಕೊಳ್ಳಿ. ನಿಧಾನವಾಗಿ ನಿಮ್ಮೊಳಗಿನ ಗಾಳಿಯ ಅಂಶ ತಹಬದಿಗೆ ಬರುತ್ತದೆ. ದೇಹ ಹಗುರವೆನಿಸಿ ಆರಾಮವೆಸಿತೊಡಗುತ್ತದೆ. ತೋರು ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಹಿಡಿಯುವುದನ್ನು ಜ್ಞಾನಮುದ್ರೆ ಅನ್ನುತ್ತೇವೆ. ಅದು ಮೇಲೆ ಹೇಳಿದ ಪರಿಣಾಮದ ವಿರುದ್ಧ ಪರಿಣಾಮ ಉಂಟು ಮಾಡುತ್ತದೆ.
ದೇಹದಲ್ಲಿ ವಾಯು ಚಲನೆ ತುಂಬ ಕಡಿಮೆಯಾದಾಗ ಈ ಮುದ್ರೆ ಅದನ್ನು ಸರಿಯಾದ ವೇಗಕ್ಕೆ ಹೆಚ್ಚಿಸಿ ಸಮತೋಲನ ನೀಡುತ್ತದೆ. ಜ್ಞಾನಮುದ್ರೆಯನ್ನು ಧ್ಯಾನವನ್ನು ಪ್ರಾರಂಭಿಸುವ ಸಮಯದಲ್ಲಿ ಹಿಡಿದುಕೊಳ್ಳುವುದು ಸೂಕ್ತವಲ್ಲ. ಮುದ್ರೆ ಎಂಬುದು ಒಂದು ವೈಜ್ಞಾನಿಕ ವಿಷಯ. ಅದು ಅಧ್ಯಯನಕರ ವಿಷಯ. ಆದರೆ ಅದನ್ನು ತರಗತಿಯಲ್ಲಿ ವಿದ್ಯಾರ್ಥಿ ವೃಂದಕ್ಕೆ ಕಲಿಸುವಂಥದ್ದಲ್ಲ. ಒಬ್ಬೊಬ್ಬರಿಗೆ ದೀಕ್ಷೆ ಕೊಡುವ ಮಾದರಿಯದು. ಗುರುವಿನಿಂದ ಶಿಷ್ಯನಿಗೆ ಕ್ರಮಬ್ಧವಾಗಿ ತಲುಪಬೇಕಿರೋ ವಿದ್ಯೆ. ಇದನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ ಎಷ್ಟು ಉಪಯೋಗವಿದೆಯೋ, ತಪ್ಪು ಬಳೆಕೆಯಿಂದ ಅದಕ್ಕಿಂತ ಹೆಚ್ಚಿನ ದೈಹಿಕ ಮತ್ತು ಮಾನಸಿಕ ಹಾನಿಯಿದೆ.