ಮುಖಪುಟ
ನಮಸ್ಕಾರ ಎಲ್ಲರಿಗು. ನಾನು ಹಿಂದೂ ಧರ್ಮದ, ಸ್ಮಾರ್ತ ಸಂಪ್ರದಾಯ, ಪದ್ಧತಿ ಅನುಸರಿಸುವ ಕುಟುಂಬದಿಂದ ಬಂದಿದ್ದೀನಿ. ನಮ್ಮಮನೆಯಲ್ಲಿ ಎಲ್ಲ ಹಬ್ಬ-ಹರಿದಿನ, ವ್ರತ-ಕಥೆಗಳನ್ನು ಶ್ರಧ್ಧೆ, ಭಕ್ತಿ, ಸಂತೋಷ, ಸಡಗರದಿಂದ ಆಚರಿಸುತ್ತೀವಿ. ನಮ್ಮ ಮನೆತನದ ಸಂಪ್ರದಾಯ, ಪದ್ಧತಿಯನ್ನು ನನ್ನ ಅಜ್ಜಿ ಅಜ್ಜ, ನಂತರ ನನ್ನ ತಾಯಿ ತಂದೆ ನಡೆಸಿಕೊಂಡು ಬಂದಿದ್ದಾರೆ. ಈಗ ನಾನು ಅನುಸರಿಸಿ ಮುಂದುವರಿಸುತ್ತಿದ್ದೀನಿ.ನಮ್ಮ ಸಂಪ್ರದಾಯದ ಬಗ್ಗೆ ನನಗೆ ತಿಳಿದಿರುವಷ್ಟು ವಿಷಯವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಆಸೆ.ಈ ಆಚರಣೆಗಳ ಸಂಗ್ರಹ "ಪೂಜಾ ವಿಧಾನ ".ಈ ಸಂಪ್ರದಾಯಗಳನ್ನು ತಿಳಿದುಕೊಂಡು, ಆಚರಿಸುವ ಆಸಕ್ತಿ ಇರುವವರಿಗೆ ನನ್ನ website ಅಲ್ಲಿ ಇರುವ ಮಾಹಿತಿ, ವಿವರಗಳು ನೆರವಾಗಬಹುದು ಅಂತ ಆಶಿಸುತ್ತೀನಿ.ಕನ್ನಡ ಪ್ರೇಮಿಯಾದ ನನಗೆ, ಕನ್ನಡದಲ್ಲಿ ಬರೆಯಬೇಕು ಅಂತ ಆಸೆ. ಈ website ನನ್ನ ಎರಡೂ ಉದ್ದೇಶ ಪೂರೈಸುವಲ್ಲಿ ಒಂದು ಸಣ್ಣ ಪ್ರಯತ್ನ.
ಭಕ್ತಿ ಪ್ರಾಥನೆ ಮತ್ತು ಪೂಜೆ
ಭಕ್ತಿ: ಒಂದೇ ದೇವನಿರುವನು ಅವನಿಲ್ಲದ ಸ್ಥಳ ಇಲ್ಲ, ಯಾವುದೂ ಅಪವಿತ್ರ ಅಲ್ಲ ಏಕೆಂದರೆ ಅಲ್ಲೂ ಭಗವಂತನಿದ್ದಾನೆ. ಅವನು ನಮ್ಮಿಂದ ಏನೂ ಬಯಸುವದಿಲ್ಲ, ಅವನಿಗೆ ಕೊಡಲು ನಮ್ಮ ಹತ್ತಿರ "ನಮ್ಮದು" ಎಂದು ಏನೂ ಇಲ್ಲ, ಅವನದು ಅವನಿಗೆ ಕೊಡುವದು ಭಕ್ತಿ ಅಲ್ಲ. ಅವನು ನನ್ನನ್ನೂ ನಿಮ್ಮನ್ನೂ ಆ ತೆಂಗಿನ ಮರವನ್ನೂ ಈ ಪ್ರಪಂಚಲ್ಲಿ ನಮಗೆ ಕಾಣುವ, ಮತ್ತು ಕಾಣದೆ ಇರುವ ಎಲ್ಲ ಚರಾಚರ ಜೀವ ನಿರ್ಜೀವ ಗಳೆಲ್ಲವನ್ನೂ ಹುಟ್ಟಿಸಿದ ತಂದೆ. ಅವ್ನು ನಮ್ಮನ್ನು ಕಾಪಾಡುವನು, ನಾವು ಅವನ್ನನ್ನು ನಂಬಲಿ, ನಂಬದೇ ಇರಲಿ, ಪ್ರಾರ್ಥನೆ, ಪೂಜೆ ಮುಂತಾದವನ್ನು ಮಾಡದೆ ಇದ್ದರೂ ಅವನು ನಮಗೆ ಕೊಡುವದನ್ನು ಕೊಟ್ಟೆ ಕೊಡುತ್ತಾನೆ. ನಮಗೆ ಏನು, ಎಷ್ಟು, ಎಲ್ಲಿ, ಯಾವಾಗ ಕೊಡಬೇಕೋ ಅನ್ನುವದು ಅವನ ಇಚ್ಛೆ, ನಮಗೆ ಕೊಡಬೇಕಾದ್ದು ಇನ್ನೊಬ್ಬರಿಗೆ ಆಗಲಿ, ಇನ್ನೊಬ್ಬರರಿಗೆನಮಗೆ ಆಗಲಿ ಕೊಡುವದಿಲ್ಲ. ಭಕ್ತಿ ಇರಲಿ ಮೂಢಭಕ್ತಿ ಬೇಡ, ವಿಗ್ರಹವಿಲ್ಲದೆ,ಅವನನ್ನು ಕಾಣುವ ಶಕ್ತಿ ಪಡೆಯಲು ಪ್ರಯತ್ನಿಸಬೇಕು.
ಪ್ರಾರ್ಥನೆ: ಬೆಳಿಗ್ಗೆ ಎದ್ದು "ಹೇ ದೇವನೇ ನನಗೆ ಅದುಕೊಡು, ಇದುಕೊಡು ಅಂತ ಭಿಕ್ಷಗಾರನ ತರಹಾ ಬೇಡದೆ, "ಹೇ ದೇವನೇ ನಿನ್ನ ಕೃಪೆಯಿಂದ ನಾನು ಈ ದಿನ ಬದುಕಿ ಇದ್ದೇನೆ, ಇಷ್ಟು ವರ್ಣರಂಜಿತವಾದ ಪ್ರಪಂಚವನ್ನು ಸೃಷ್ಟಿಸಿ ಅದರಲ್ಲಿ ನಾನು ಬದುಕಲು ಏನೆಲ್ಲಾ ಸೌಕರ್ಯಗಳನ್ನು ಮಾಡಿ, ಅವುಗಳನ್ನು ಅನುಭವಿಸಲು ನನಗೆ ಈ ಆರೋಗ್ಯವಾದ ಶರೀರವನ್ನು ಕೊಟ್ಟು ಕಾಪಾಡುತಾ ಇದಿಯೇ, ಓ ದೇವನೇ ನಿನಗೆ ನನ್ನ ಕೃತಜ್ಞತೆಗಳು.
ಪೂಜೆ: ತಾರ್ಕಿಕವಾಗಿ ನೋಡಿದರೆ ಪೂಜಾ ಆನಾವಶ್ಯವೆನ್ನಿಸುತ್ತದೆ, ಇದು ನಿಜವಾಗಿ ದೇವನಿಗೆ ಬೇಕಿಲ್ಲ, ಪೂಜಮಾಡಿದರೆ ಅದು ದೇವನಿಗೆ ಸೇರೋಲ್ಲ, ಕೇವಲ ಮನುಷ್ಯನಿಗೆ ನೆಮ್ಮದಿ ಕೊಡುತ್ತೆ ಎಂದು ಹೇಳಿದರೆ, ಆದಷ್ಟು ಬೇಗೆ ಈ ಭ್ರಮೆಯಿಂದ ಪಾರಾಗಿದರೆ ಒಳ್ಳೆಯದು. ಅಂದರೆ ಪರಮಾತ್ಮನನ್ನು ಅರ್ಥಮಾಡಿ ಕೊಳ್ಳಲು ವಿಗ್ರಹಾರಾಧನೆ ಎನ್ನುವ ಮೊದಲನೆಯ ಹಂತವನ್ನು ದಾಟಿ ವಿಗ್ರಹವಿಲ್ಲದೆ, ಯಾವ ತರಹಾ ಪೂಜಗಳಿಲ್ಲದೆ, ಬೇಡಿಕೆಗಳಿಲ್ಲದೆ, ಕೇವಲ "ಭಕ್ತಿಪಥ"ವನ್ನು ಹೊಂದುವ ಎರಡನೆಯ ಹಂತದ ಪ್ರವೇಶ ಮಾಡಬೇಕು.